For Quick Alerts
ALLOW NOTIFICATIONS  
For Daily Alerts

ವೇತನ ಪಡೆಯುವವರಿಗೆ 7 ಅತ್ಯುತ್ತಮ ಹೂಡಿಕೆ ಆಯ್ಕೆಗಳು

ವೇತನ ಪಡೆಯುವ ಉದ್ಯೋಗಿಗಳು ತಾವು ಮಾಡುವ ಹೂಡಿಕೆ ಮೇಲೆ ಲಾಭದೊಂದಿಗೆ ಸುರಕ್ಷತೆಯನ್ನೂ, ತೆರಿಗೆ ವಿನಾಯಿತಿಯನ್ನೂ ಹಾಗೂ ಲಿಕ್ವಿಡಿಟಿಯನ್ನು ನಿರೀಕ್ಷಿಸುತ್ತಾರೆ.

By Siddu
|

ವೇತನ ಪಡೆಯುವ ಉದ್ಯೋಗಿಗಳು ತಾವು ಮಾಡುವ ಹೂಡಿಕೆ ಮೇಲೆ ಲಾಭದೊಂದಿಗೆ ಸುರಕ್ಷತೆಯನ್ನೂ, ತೆರಿಗೆ ವಿನಾಯಿತಿಯನ್ನೂ ಹಾಗೂ ಲಿಕ್ವಿಡಿಟಿಯನ್ನು ನಿರೀಕ್ಷಿಸುತ್ತಾರೆ. ಈ ಮೇಲೆ ತಿಳಿಸಿದ ಆಧಾರದ ಮೇಲೆ ಎಲ್ಲಾ ನಿರೀಕ್ಷಣೆಗಳನ್ನು ಕೂಡಿಕೊಂಡಿರುವ ಕೆಲವು ಹೂಡಿಕೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಆದರೆ ಸುರಕ್ಷತೆ, ತೆರಿಗೆ ವಿನಾಯಿತಿ ಹಾಗೂ ಲಿಕ್ವಿಡಿಟಿ ಕೂಡಿಕೆಯನ್ನು ಅಳೆಯುವ ಸಾಧನ ಮಾತ್ರ ಇರುವುದಿಲ್ಲ. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

 

KTDFC ಫಿಕ್ಸೆಡ್ ಡೆಪಾಸಿಟ್ ಗಳು

KTDFC ಫಿಕ್ಸೆಡ್ ಡೆಪಾಸಿಟ್ ಗಳು

ಒಂದು ವೇಳೆ ನೀವು ವೇತನದಾರರಾಗಿದ್ದು, ಗಳಿಕೆಯ ಸ್ವಲ್ಪ ಪ್ರಮಾಣದ ಹಣವನ್ನು ಉಳಿಸುತ್ತಿದ್ದರೆ, ನೀವು ಕೇರಳ ಟ್ರಾನ್ಸ್ ಪೋರ್ಟ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಷನ್ನಿನ ಠೇವಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು 1, 2 ಮತ್ತು 3 ವರ್ಷಗಳ ಅವಧಿಗೆ ಶೇ. 8.25 ಬಡ್ಡಿಯನ್ನು ನೀಡುತ್ತದೆ. ಕಡಿಮೆ ಅವಧಿಯಿಂದ ಮಧ್ಯಮ ಅವಧಿಯ ಹಿಡುವಳಿಯನ್ನು ನೀವು ಬಯಸುತ್ತಿದ್ದಲ್ಲಿ ಇದು ತಕ್ಕಮಟ್ಟಿಗೆ ಉತ್ತಮ ಆಯ್ಕೆಯಾಗಿರುತ್ತದೆ. ಠೇವಣಿಯ ಹಣಕ್ಕೆ ಕೇರಳ ಸರ್ಕಾರವು ಭರವಸೆಯನ್ನು ನೀಡುವುದರಿಂದ ಹೂಡಿಕೆಗಾಗಿ ಈ ಆಯ್ಕೆ ಉತ್ತಮವಾಗಿದೆ. ಈ ಹೂಡಿಕೆಯ ಆಯ್ಕೆಯಲ್ಲಿರುವ ಒಂದೇ ಒಂದು ತೊಂದರೆ ಎಂದರೆ, ಯಾವುದೇ ಮಧ್ಯವರ್ತಿಗಳಿರದ ಕಾರಣ ನೀವು ಫಾರಂ ಅನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡಬೇಕಾಗುತ್ತದೆ ಮತ್ತು ಗಳಿಸಿದ ಬಡ್ಡಿಯ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ.

ಪಿಪಿಎಫ್
 

ಪಿಪಿಎಫ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡಾ ವೇತನದಾರರಿಗೆ ಒಂದು ಒಳ್ಳೆಯ ಹೂಡಿಕೆಯ ಆಯ್ಕೆಯಾಗಿದೆ. ಏಕೆಂದರೆ ಗಳಿಸಿದ ಬಡ್ಡಿಯು ತೆರಿಗೆಯಿಂದ ವಿಮುಕ್ತವಾಗಿರುತ್ತದೆ ಮತ್ತು ಇದು ಸೆಕ್ಷನ್ 80ಸಿ ನಿಯಮದಡಿ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಈ ಸೆಕ್ಷನ್ ಪ್ರಕಾರ 1.5 ಲಕ್ಷ ರೂ. ನಷ್ಟು ಹೂಡಿಕೆಯ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಪ್ರಸ್ತುತ ಬಡ್ಡಿದರದ ಗಳಿಕೆ ಶೇ. 7.9 ಆಗಿದ್ದು, ಇದೂ ಒಳ್ಳೆಯ ದರವೇ ಆಗಿದೆ. ಇದರ ಮುಕ್ತಾಯದ ಅವಧಿ 15 ವರ್ಷ ಆಗಿರುವುದೊಂದೇ ಚಿಂತನೆಯ ವಿಷಯವಾಗಿದೆ. ಆದರೂ, ನೀವು ಮೂರನೇ ಹಣಕಾಸು ವರ್ಷದ ನಂತರ ಸಾಲವನ್ನು ಪಡೆದುಕೊಳ್ಳಬಹುದು. ಅತೀ ಹೆಚ್ಚು ದ್ರವ್ಯತೆಯಿಲ್ಲದೆ, ಸುರಕ್ಷಿತ ಹಾಗೂ ಹೆಚ್ಚಿನ ತೆರಿಗೆ ವಿನಾಯಿತಿಯ ಆದಾಯವನ್ನು ಬಯಸುವವರಿಗೆ ಈ ಸ್ಕೀಮ್ ಉತ್ತಮವಾಗಿದೆ. ನೀವು ವರ್ಷಕ್ಕೆ 500 ರೂಪಾಯಿಗಳಷ್ಟು ಕಡಿಮೆ ಹೂಡಿಕೆಯನ್ನು ಮಾಡಬಹುದು.

ಮ್ಯೂಚುವಲ್ ಫಂಡ್ ನ ಸಿಪ್ ಗಳು

ಮ್ಯೂಚುವಲ್ ಫಂಡ್ ನ ಸಿಪ್ ಗಳು

ಇದ್ದಕ್ಕಿದ್ದಂತೆ ಹೂಡಿಕೆದಾರರಿಗೆ ಇಷ್ಟವಾಗುತ್ತಿರುವ ವ್ಯವಹಾರದ ಪ್ರಸ್ತಾಪವೆಂದರೆ ಮ್ಯೂಚುವಲ್ ಫಂಡ್ ನ ಸಿಪ್ ಗಳು (SIP). ಇತ್ತೀಚೆಗೆ ಅನೇಕ ಹೂಡಿಕೆದಾರರು ಸಣ್ಣ ಪ್ರಮಾಣದ ಮೊತ್ತವನ್ನು ಇಕ್ವಿಟಿ ಮ್ಯೂಚುವಲ್ ಫಂಡ್ಸ್ ನ ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ ವ್ಯವಸ್ಥಿತವಾಗಿ ಹೂಡುತ್ತಿದ್ದಾರೆ. ಆದಾಗ್ಯೂ, ಈ ಯೋಜನೆಗಳು ಕಳೆದ ಒಂದು ವರ್ಷದಲ್ಲಿ ಷೇರುಗಳು ನೀಡಿದ ಅತ್ಯುತ್ತಮ ಆದಾಯದ ಆಧಾರದ ಮೇಲೆ ನಡೆಯುತ್ತಿವೆ. ಭವಿಷ್ಯದಲ್ಲಿ ಆದಾಯವು ಕಡಿಮೆಯಾಗುವುದರಿಂದ ಪ್ರತಿಯೊಬ್ಬರೂ ತಮ್ಮ ನಿರೀಕ್ಷೆಗಳನ್ನು ಕಡಿಮೆಗೊಳಿಸಬೇಕಿದೆ. ಉದಾಹರಣೆಗೆ, ಕೆಲವು ಇಕ್ವಿಟಿ ಸ್ಕೀಂಗಳು 3 ವರ್ಷಗಳಲ್ಲಿ ಆದಾಯವನ್ನು ಗಳಿಸಲು ವಿಫಲವಾದರೂ 5 ವರ್ಷಗಳಲ್ಲಿ ಯೋಗ್ಯ ಆದಾಯವನ್ನು ಗಳಿಸಿವೆ. ಸುರಕ್ಷತೆಯ ವಿಚಾರಕ್ಕೆ ಸಂಬಂಧಪಟ್ಟಂತೆ, ಇದು PPF ನಂತೆ ಖಾತರಿಯನ್ನು ನೀಡುವುದಿಲ್ಲ. ಆದ್ದರಿಂದ ರಕ್ಷಣಾಪೇಕ್ಷೆ ಇರುವ ಹೂಡಿಕೆದಾರರು ಈ ಆಯ್ಕೆಯನ್ನು ಆರಿಸಿಕೊಳ್ಳದಿರುವುದೇ ಒಳ್ಳೆಯದು.

ರಿಕರಿಂಗ್ ಠೇವಣಿ (ಆರ್ ಡಿ)

ರಿಕರಿಂಗ್ ಠೇವಣಿ (ಆರ್ ಡಿ)

ಅತೀ ಕಡಿಮೆ ಬಡ್ಡಿದರವೇ ಆವರ್ತಕ ಠೇವಣಿಯ ಒಂದು ತೊಡಕಾಗಿದೆ. ಅಲ್ಲದೇ ಇವು ತೆರಿಗೆಗೊಳಪಡುತ್ತವೆ. ಅಂದರೆ ಒಂದು ವೇಳೆ ನೀವು ಅತ್ಯಧಿಕ ತೆರಿಗೆಯ ವ್ಯಾಪ್ತಿಗೆ ಒಳಪಡುವವರಾಗಿದ್ದರೆ, ಇದು ಅತೀ ಕಡಿಮೆ ಗಳಿಕೆಯನ್ನು ನೀಡುತ್ತದೆ. ಇತರ ಬದಲಿ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಉತ್ತಮ ಪ್ರಸ್ತಾವನೆ ಆಗಿದೆ. ಆದಾಗ್ಯೂ, ಆವರ್ತಕ ಠೇವಣಿಗಳ ಅನುಕೂಲವೆಂದರೆ ಅವು ಹೂಡಿಕೆಯಲ್ಲಿ ಉತ್ತಮ ದ್ರವ್ಯತೆಯನ್ನು ನೀಡುತ್ತವೆ. ಪ್ರತಿಯೊಬ್ಬರೂ ಹೂಡಿಕೆ ಮಾಡುವ ಮೊದಲು ಬಡ್ಡಿದರವನ್ನು ಹೋಲಿಸಿ, ಆನ್ ಲೈನ್ ಹೂಡಿಕೆಯ ಇತರೆ ಅವಕಾಶಗಳನ್ನು ನೋಡಬಹುದು. ಈ ಆವರ್ತಕ ಠೇವಣಿಯ ಇನ್ನೊಂದು ಅನುಕೂಲವೆಂದರೆ, ಪ್ರಯಾಣ, ಮದುವೆಗಳಂತಹಾ ಯೋಜಿತ ಖರ್ಚುಗಳಿಗಾಗಿ ಬಳಸಬಹುದು.

ಬಜಾಜ್ ಫೈನಾನ್ಸ್ ಮತ್ತು ಮಹೀಂದ್ರ ಫೈನಾನ್ಸ್ ನ ಫಿಕ್ಸೆಡ್ ಡೆಪಾಸಿಟ್

ಬಜಾಜ್ ಫೈನಾನ್ಸ್ ಮತ್ತು ಮಹೀಂದ್ರ ಫೈನಾನ್ಸ್ ನ ಫಿಕ್ಸೆಡ್ ಡೆಪಾಸಿಟ್

ವೇತನದಾರರ ವರ್ಗವು ಮಹೀಂದ್ರ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್ ನ ಫಿಕ್ಸೆಡ್ ಡೆಪಾಸಿಟ್ ಗಳಲ್ಲಿ ಹೂಡಿಕೆಗಳ ಬಗ್ಗೆ ಯೋಚಿಸಬಹುದು. ಉದಾಹರಣೆಗೆ ಬಜಾಜ್ ಫೈನಾನ್ಸ್ ಶೇ. 7.85 ರಿಂದ ಶೇ. 8.20ಗಳವರೆಗೂ ಒಳ್ಳೆಯ ಬಡ್ಡಿದರವನ್ನು ನೀಡುತ್ತದೆ. ಮಹೀಂದ್ರ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಗಳು ಶೇ. 7.80 ವರೆಗೆ ಬಡ್ಡಿದರವನ್ನು ನೀಡುತ್ತದೆ. ಈ ಎರಡೂ ಕಂಪೆನಿಗಳ ಫಿಕ್ಸೆಡ್ ಡೆಪಾಸಿಟ್ ಗಳು AAA ಸ್ಥಾನವನ್ನು ಪಡೆದಿರುವುದರಿಂದ ಇವು ಹೆಚ್ಚು ಸುರಕ್ಷಿತ.

ಚಿನ್ನ

ಚಿನ್ನ

ಒಂದು ವೇಳೆ ನೀವು ವೇತನದಾರರಾಗಿದ್ದು, ಸಂಭವನೀಯ ಹಾನಿಯನ್ನು ವಿತರಿಸಬೇಕೆಂದರೆ ನೀವು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಉದಾಹರಣೆಗೆ, ನೀವು ನಿಮ್ಮ ಎಲ್ಲಾ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ್ದು ಅವು ಒಂದು ವೇಳೆ ಕುಸಿತ ಕಾಣಲು ಪ್ರಾರಂಭಿಸಿದ್ದಲ್ಲಿ, ಗಣನೀಯ ಪ್ರಮಾಣದಲ್ಲಿ ಹಣವನ್ನು ಕಳೆದುಕೊಳ್ಳಬಹುದು. ಒಂದು ವೈವಿದ್ಯೀಕರಣದ ಕ್ರಮವಾಗಿ ಚಿನ್ನದ ಮೇಲೆ ಹುಡಿಕೆ ಮಾಡುವುದು ಉತ್ತಮ ವಿಧಾನವಾಗಿದೆ. ಮದುವೆ, ವಾರ್ಷಿಕೋತ್ಸವಗಳಂತಹ ಸಮಾರಂಭಗಳಿಗೆ ಬೇಕಾಗುವ ಚಿನ್ನದ ಅವಶ್ಯಕತೆಯನ್ನು ಪೂರೈಸಲೂ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಬಹುದು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಚಿನ್ನದಿಂದಾದ ಲಾಭ ಅತೀ ಕಡಿಮೆಯಾಗಿದೆ. ಚಿನ್ನದಿಂದ ಅತೀ ಹೆಚ್ಚಿನ ನಿರೀಕ್ಷಣೆ ಬೇಡ.

English summary

Best Investment Options For A Salaried Person in India

A salaried investor is always looking for returns that offer him safety, along with tax benefits and liquidity.
Story first published: Friday, March 23, 2018, 17:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X