For Quick Alerts
ALLOW NOTIFICATIONS  
For Daily Alerts

ಮಾರ್ಚ್ 31ರೊಳಗೆ ಐಟಿಆರ್ ಸಲ್ಲಿಸುತ್ತಿದ್ದಿರಾ? ಈ 8 ವಿಷಯಗಳನ್ನು ಮರೆಯದಿರಿ..

ಹಣಕಾಸು ವರ್ಷ 2016-17 ಮತ್ತು 2017-18ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿರುವ ಹಾಗೂ ರಿಟರ್ನ್ಸ್ ಗಳನ್ನು ಪರಿಷ್ಕರಿಸಬೇಕಾದ ತೆರಿಗೆದಾರರು ಸಮಯ ಕಡಿಮೆ ಇರುವುದರಿಂದ ಆದಷ್ಟು ಬೇಗ ತಮ್ಮ ರಿಟರ್ನ್ಸ್ ಗಳನ್ನು ಸಲ್ಲಿಸಬೇಕಾಗಿದೆ.

|

ಭಾರತೀಯ ಆದಾಯ ತೆರಿಗೆ ಇಲಾಖೆ ಕೇಂದ್ರೀಯ ನೇರ ತೆರಿಗೆ ಸಮಿತಿಯ (CBDT) ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಅಲ್ಲದೆ ಇದು, ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ಇಲಾಖೆಯ ಅಧೀನದಲ್ಲಿ ಬರುತ್ತದೆ. ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಗಳಿಗೆ ತೆರಿಗೆ ಕರ ವಿಭಿನ್ನವಾಗಿರುತ್ತದೆ.

 

ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ (ITR Filing)
ಹಣಕಾಸು ವರ್ಷ 2016-17 ಮತ್ತು 2017-18ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿರುವ ಹಾಗೂ ರಿಟರ್ನ್ಸ್ ಗಳನ್ನು ಪರಿಷ್ಕರಿಸಬೇಕಾದ ತೆರಿಗೆದಾರರು ಸಮಯ ಕಡಿಮೆ ಇರುವುದರಿಂದ ಆದಷ್ಟು ಬೇಗ ತಮ್ಮ ರಿಟರ್ನ್ಸ್ ಗಳನ್ನು ಸಲ್ಲಿಸಬೇಕಾಗಿದೆ. ಆದಾಯ ತೆರಿಗೆ ಇಲಾಖೆಯ ಕಡೆಯಿಂದ ಈಗಾಗಲೇ 'Come Clean' ಎಂಬ ಎಚ್ಚರಿಕೆ ಮಾತಿನೊಂದಿಗೆ, ರಿಟರ್ನ್ಸ್ ಫೈಲ್ ಮಾಡದಿರುವ ಮತ್ತು ಪರಿಷ್ಕರಿಸಬೇಕಾದ ರಿಟರ್ನ್ಸ್ ಗಳ ತೆರಿಗೆದಾರರಿಗೆ 31 ರ ಮಾರ್ಚ್ 2018ರ ವರೆಗೆ ಕಾಲಾವಕಾಶ ನೀಡಲಾಗಿದೆ. ನಿಗದಿಪಡಿಸಿರುವ ಸಮಯದೊಳಗೆ ರಿಟರ್ನ್ಸ್ ಸಲ್ಲಿಸಲು ತಪ್ಪಿದ್ದಲ್ಲಿ ತಮ್ಮ ಬಾಕಿಯಿರುವ ಕೆಲಸದ ಆಧಾರದ ಮೇಲೆ ವಿಧಿಸುವ ದಂಡ ಮತ್ತು ಅದಕ್ಕೆ ಸಂಬಂಧ ಪಟ್ಟ ಕಾನೂನುಗಳನ್ನು ಎದುರಿಸಲು ಸಿದ್ದರಾಗಬೇಕಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ನಿಮ್ಮ ಆದಾಯದ ಮತ್ತು ಇನ್ನಿತರೆ ಮಾಹಿತಿಗಳ ಬಗ್ಗೆ ಬಹಳ ಎಚ್ಚರವಹಿಸಿರಬೇಕು. ಇಲ್ಲವಾದರೆ ಆದಾಯ ತೆರಿಗೆ ಇಲಾಖೆಯವರ ಕಣ್ಣಿಗೆ ಗುರಿಯಾಗಿ ಭಾರಿ ಮೊತ್ತದ ದಂಡವನ್ನು ತೆರಬೇಕಾಗುತ್ತದೆ. ನೀಡಿರುವ ಕಾಲಾವಕಾಶದಲ್ಲಿ ನಿಮ್ಮ ಪಾಲಿನ ತೆರಿಗೆಯನ್ನು ಪಾವತಿಸಿದರೆ ಇಂತಹ ದಂಡದಿಂದ ಹೊರಗುಳಿಯಬಹುದು. ಫೈಲಿಂಗ್ ಸಂದರ್ಭದಲ್ಲಿ ನಿಮ್ಮ ಆದಾಯದ ಬಗೆಗಿನ ಅಥವಾ ಇತರೆ ಕೆಲವು ವಿವರಗಳು ತಪ್ಪಿ ಹೋಗುವ ಸಾಧ್ಯತೆ ಇದೆ. ನೀವು ಸಾಲವನ್ನು ಮರುಪಾವತಿ ಮಾಡದಿದ್ದರೆ ಏನಾಗುತ್ತದೆ?
ಆದ್ದರಿಂದ, ಮಾರ್ಚ್ 31 ರೊಳಗೆ ನಿಮ್ಮ ಪರಿಷ್ಕೃತ ಅಥವಾ ವಿಳಂಬಿತ ಐಟಿಆರ್ ಅನ್ನು ಸಲ್ಲಿಸುವಾಗ ಕೆಳಗಿರುವ ವಿಷಯಗಳನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

1. ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ

1. ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ

ನೋಟು ಅಮಾನ್ಯೀಕರಣದ ಸಮಯದಲ್ಲಿ (ನವೆಂಬರ್ 8ರ 2016 ರಿಂದ 30ರ ಡಿಸಂಬರ್ 2016ರ ವರೆಗೆ) ನಿಮ್ಮ ಸಾಲದ ಖಾತೆಯನ್ನೂ ಸೇರಿಸಿ, 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿಯನ್ನು ತೆರಿಗೆ ರಿಟರ್ನ್ಸ್ ಸಮಯದಲ್ಲಿ ನೀಡಬೇಕಾಗುತ್ತದೆ.

2. ಬಾಕಿ ತೆರಿಗೆ ಪಾವತಿ

2. ಬಾಕಿ ತೆರಿಗೆ ಪಾವತಿ

ನೋಟು ಅಮಾನ್ಯೀಕರಣದ ಸಮಯದಲ್ಲಿ ಲೆಕ್ಕವಿಲ್ಲದ ಆದಾಯವನ್ನು ಠೇವಣಿ ಇರಿಸಿದ್ದರೆ ಈ ಮೊತ್ತವನ್ನು ನಿಮ್ಮ ತೆರಿಗೆಯ ಆದಾಯದಲ್ಲಿ ಯಾವ ಹಣಕಾಸು ವರ್ಷಕ್ಕೆ ಸಂಬಂಧಪಟ್ಟಿರುತ್ತದೋ ಆ ವರ್ಷದ ರಿಟರ್ನ್ಸ್ ನಲ್ಲಿ ಸೇರಿಸುವುದು ಬಹಳ ಮುಖ್ಯ. ಹಾಗೆಯೇ ಅದರ ಮೇಲೆ ಬಾಕಿಯಿರುವ ತೆರಿಗೆಯನ್ನು ಪಾವತಿಸಬೇಕಿದೆ. ನಿಮಗೆ ಬೇಕೆನಿಸಿದ್ದಲ್ಲಿ ಹಣಕಾಸು ವರ್ಷ 2015-16 ಮತ್ತು 2016-17 ರ ರಿಟರ್ನ್ಸ್ ಗಳನ್ನು ಈಗಾಗಲೇ ಫೈಲ್ ಮಾಡಿದ್ದರೆ ಅದನ್ನೂ ಸಹ ಪರಿಷ್ಕರಿಸಬಹುದು ಎಂದು ಎಚ್ ಮತ್ತು ಆರ್ ಬ್ಲಾಕ್ ಇಂಡಿಯಾ ತೆರಿಗೆ ಸಂಶೋಧಕರ ಇಲಾಖೆಯ ಮುಖ್ಯಸ್ಥರಾದ ಚೇತನ್ ಚಂದಕ್ ರವರು ಹೇಳಿದ್ದಾರೆ.

3. ಶೇ. 60 ರಷ್ಟು ತೆರಿಗೆ
 

3. ಶೇ. 60 ರಷ್ಟು ತೆರಿಗೆ

ಗಳಿಸಿದ ಆದಾಯ ಅಥವಾ ಆದಾಯದ ಮೂಲವನ್ನು ತೆರಿಗೆದಾರರಿಗೆ ರಿಟರ್ನ್ಸ್ ನಲ್ಲಿ ವಿವರಿಸಲು ಸಾಧ್ಯವಾಗದಿದ್ದಲ್ಲಿ, ಅಂತಹ ಆದಾಯದ ಮೇಲೆ ಶೇ. 60 ರಷ್ಟು ತೆರಿಗೆಯ ಜೊತೆಗೆ ಅದಕ್ಕೆ ಸಂಬಂಧಪಡುವ ಬಡ್ಡಿ ಮತ್ತು ದಂಡಗಳ ದರದ ಒಟ್ಟು ಮೊತ್ತವನ್ನು ಸೇರಿಸಿ ಪಾವತಿಸಬೇಕು.

4. ತೆರಿಗೆ ಮೊತ್ತ, ದಂಡ ಪಾವತಿಸಬೇಕು

4. ತೆರಿಗೆ ಮೊತ್ತ, ದಂಡ ಪಾವತಿಸಬೇಕು

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (PMGKY) ಆಯ್ಕೆ ಮಾಡದ ತೆರಿಗೆದಾರರು, ಹಾಗೆಯೇ ಕಪ್ಪು ಹಣವನ್ನು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ನಲ್ಲೇ ತೋರಿಸುವವರು ತೆರಿಗೆಯ ಒಟ್ಟು ಮೊತ್ತ ಮತ್ತು ದಂಡದ ರೂಪದಲ್ಲಿ ಶೇ. 77.25 ರಷ್ಟು ಪಾವತಿಸಬೇಕಾಗುತ್ತದೆ. ಆದಾಗ್ಯೂ, ತೆರಿಗೆ ರಿಟರ್ನ್ಸ್ ನಲ್ಲಿ ನಿಮ್ಮ ಆದಾಯವನ್ನು ತೋರಿಸದೆ ನಂತರದ ಪರಿಶೀಲನಾ ಸಮಯದಲ್ಲಿ ಸಿಕ್ಕಿಬಿದ್ದರೆ ರಿಟರ್ನ್ಸ್ ನಲ್ಲಿ ತೋರಿಸದೆ ಇರುವ ಒಟ್ಟು ಮೊತ್ತದ ಶೇ. 83.25 ರಷ್ಟು ತೆರಿಗೆ ಮತ್ತು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಮೇಲೆ ಐ.ಟಿ ದಾಳಿ ನಡೆಸಿ ಸಿಕ್ಕಿಬಿದ್ದಾಗ ನಿವಾಗಿಯೇ ಲೆಕ್ಕವಿಲ್ಲದ ಆದಾಯದ ಮಾಹಿತಿಯನ್ನು ನೀಡಿ ಸಹಕರಿಸಿರುವ ಮತ್ತು ಸಹಕರಿಸದೇ ಇರುವ ಆಧಾರದ ಮೇಲೆ ಶೇ. 107.25 ಅಥವಾ 137.25 ರಷ್ಟು ತೆರಿಗೆ ಮತ್ತು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂದು ಚಂದಕ್ ರವರು ತಿಳಿಸಿದ್ದಾರೆ.

5. ತೆರಿಗೆ ರಿಟರ್ನ್ಸ್ ಮತ್ತು Form 26AS

5. ತೆರಿಗೆ ರಿಟರ್ನ್ಸ್ ಮತ್ತು Form 26AS

ನಿಮ್ಮ ತೆರಿಗೆ ರಿಟರ್ನ್ಸ್ ಮತ್ತು Form 26AS ಎರಡನ್ನು ಒಮ್ಮೆ ತಾಳೆ ಹಾಕಿ ಸಮನ್ವಯಿಸಿಕೊಂಡರೆ ಈಗಿರುವ ಯಾವುದೇ ಅದಾಯಗಳು ರಿಟರ್ನ್ಸ್ ಫೈಲ್ ಮಾಡುವ ಸಮಯದಲ್ಲಿ ತಪ್ಪಿಹೋಗುವುದಿಲ್ಲ.

6. ಈ ಕಾಲಂಗಳನ್ನು ಕಡ್ಡಾಯವಾಗಿ ತುಂಬಬೇಕು

6. ಈ ಕಾಲಂಗಳನ್ನು ಕಡ್ಡಾಯವಾಗಿ ತುಂಬಬೇಕು

ಮುಖ್ಯವಾದ ವಿಷಯವೆಂದರೆ, ಕಡ್ಡಾಯವಾಗಿ ತುಂಬುವಂತಹ ಕಾಲಮ್ ಗಳನ್ನು ನಿಮ್ಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಿಯಾಗಿ ತುಂಬುವುದು ಅತ್ಯವಶ್ಯಕ.
ಉದಾಹರಣೆಗೆ: ನಿಮ್ಮ ಒಟ್ಟು ಆದಾಯ 50 ಲಕ್ಷಕ್ಕಿಂತ ಹೆಚ್ಚಿದ್ದರೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು (Assets and Liabilities) ಎಂಬ ಕಾಲಮ್ ಗಳನ್ನು ತುಂಬುವುದು ಕಡ್ಡಾಯವಾಗಿದೆ.
ಒಂದು ವೇಳೆ ನೀವು ತೆರಿಗೆಯ ನಿಯಮಗಳ ಪ್ರಕಾರ ಭಾರತದ ನಿವಾಸಿಯಾಗಿದ್ದರೆ, ನಿಮ್ಮ ಬಳಿ ವಿದೇಶಿ ಬ್ಯಾಂಕ್ ಖಾತೆ, ವಿದೇಶಿ ಕಂಪೆನಿಗಳಿಂದ ಬಡ್ಡಿ ರೂಪದ ಆದಾಯ, ಸ್ಥಿರಾಸ್ತಿ ಹೊಂದಿರುವುದು ಅಥವಾ ದೇಶದ ಹೊರಗೆ ಯಾವುದೇ ರೀತಿಯಾದಂತ ಅಸ್ತಿಗಳು ಹೊಂದಿರುವುದು, ದೇಶದ ಹೊರಗಿರುವ ಖಾತೆಗೆ ಹಕ್ಕುದಾರರಾಗಿರುವುದು, ದೇಶದ ಹೊರಗಿರುವ ಟ್ರಸ್ಟ್ ಗಳಿಗೆ ಟ್ರಸ್ಟಿ ಅಥವಾ ಫಲಾನುಭವಿಗಳಾಗಿರುವುದು. ಇದಿಷ್ಟರಲ್ಲಿ ಯಾವುದಾದರು ನಿಮಗೆ ಸಂಬಂಧ ಪಡುವಂತಿದ್ದರೆ ನಿಮ್ಮ ತೆರಿಗೆ ರಿಟರ್ನ್ಸ್ ನಲ್ಲಿ ವಿದೇಶಿ ಸ್ವತ್ತುಗಳು ಎಂಬ ಕಾಲಮ್ ಕಡ್ಡಾಯವಾಗಿ ಭರ್ತಿಮಾಡಬೇಕು. ಈ ನಿಯಮವನ್ನೂ ತಪ್ಪಿದ್ದಲ್ಲಿ ಭಾರಿ ದಂಡವನ್ನು ತೆರಬೇಕಾಗುತ್ತದೆ.

7. ತೆರಿಗೆ ರಿಟರ್ನ್ಸ್ ಪರಿಶೀಲನೆ

7. ತೆರಿಗೆ ರಿಟರ್ನ್ಸ್ ಪರಿಶೀಲನೆ

ತೆರಿಗೆದಾರರು ನಿಮ್ಮ ತೆರಿಗೆ ರಿಟರ್ನ್ಸ್ ಅನ್ನು ಪರಿಶೀಲನೆಗೆ ಒಳಪಡಿಸುವುದನ್ನು ಮರೆಯದಿರಿ. ಏಕೆಂದರೆ ತೆರಿಗೆಯ ನಿಯಮದ ಪ್ರಕಾರ ಪರಿಶೀಲನೆಯಾಗದ ರಿಟರ್ನ್ಸ್ ಗಳನ್ನು ಅಮಾನ್ಯಗೊಳಿಸಲಾಗುತ್ತದೆ. ಇದರಿಂದ ಮರುಪಾವತಿಯಾಗುವ ಮೊತ್ತವು ತಡವಾಗಬಹುದು. ಈ ಕಾರಣದಿಂದ ರಿಟರ್ನ್ಸ್ ಫೈಲ್ ಆಗದೆ ಸೂಕ್ತ ಬಡ್ಡಿ ಮತ್ತು ದಂಡವನ್ನು ಪಾವತಿಸಬೇಕಾಗಬಹುದು ಎಂದು ಚಂದಕ್ ರವರು ಎಚ್ಚರಿಸಿದ್ದಾರೆ.

8. Form 10E ಫೈಲಿಂಗ್

8. Form 10E ಫೈಲಿಂಗ್

ಬರದೆ ಬಾಕಿ ಉಳಿದ ಸಂಬಳ ಮತ್ತು ಪಿಂಚಣಿಗಳನ್ನು ಸ್ವೀಕರಿಸಿದಾಗ, Sec 89(1) ರ ಅಡಿಯಲ್ಲಿ ತೆರಿಗೆ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ Form 10E ಯನ್ನು ಕಡ್ಡಾಯವಾಗಿ ಫೈಲ್ ಮಾಡಬೇಕಾಗುತ್ತದೆ. Form 10E ಫೈಲ್ ಮಾಡಲು ತಪ್ಪಿದ್ದಲ್ಲಿ ನಿಮ್ಮ ತೆರಿಗೆ ಪರಿಹಾರವನ್ನು ಆದಾಯ ತೆರಿಗೆ ಇಲಾಖೆಯು ಅನುಮತಿಸುವುದಿಲ್ಲ.

ಈ ಮೇಲೆ ತಿಳಿಸಿರುವ ಎಲ್ಲಾ ಅಂಶಗಳು ಮತ್ತು ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಆದಾಯ ತೆರಿಗೆಯನ್ನು ಸರಿಯಾಗಿ ಪಾವತಿಸಬೇಕು.

 

Read more about: itr income tax banking money savings
English summary

Filing ITR before March 31? Don't forget to do these 8 things

If you are one of those who have still not filed their income tax return (ITR) for AY2016-17 and 2017-18 or want to revise it, then you need to do it as soon as possible. For, you have very limited time to do so.
Story first published: Friday, March 9, 2018, 13:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X