For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ

|

ವಾಣಿಜ್ಯ ವಹಿವಾಟಿನ ಮುಂದಾಳತ್ವ ವಹಿಸುವಲ್ಲಿ ಭಾರತೀಯ ಮಹಿಳೆಯರ ದಕ್ಷತೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿಯೇ ಸಾಬೀತುಗೊಳ್ಳುತ್ತಿದೆ ಹಾಗೂ ವಹಿವಾಟಿನ ಸೂಕ್ಷ್ಮತೆಗಳನ್ನು ಹಾಗೂ ಸಮಾಜದಲ್ಲಿ ಸರಿಸಮನಾಗಿ ನಿಲ್ಲುವ ಸಂಖ್ಯೆಯೂ ಹೆಚ್ಚುತ್ತಿದೆ. ಇತ್ತೀಚಿನ ಕೆಲವು ದಶಕಗಳಲ್ಲಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿಯೂ ಮಹಿಳೆಯರ ಮುಂದಾಳತ್ವ ಹೊಂದಿರುವ ಸಂಸ್ಥೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಒಂದು ಸಂಸ್ಥೆಯ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಲು ಈ ಮೂರು ಕಾರಣಗಳು ಪ್ರಮುಖವಾಗಿವೆ, ಅವೆಂದರೆ: ಪರಿಣಿತಿ, ವಿಷಯ ಗ್ರಹಣೆ ಹಾಗೂ ನಮ್ಯತೆ.

ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

ಮಹಿಳೆಯರಿಗಾಗಿ ಪ್ರತ್ಯೇಕವಾದ ಸ್ಕೀಮ್ ಮತ್ತು ವಿವಿಧ ಸಾಲ ಸೌಲಭ್ಯ ಯೋಜನೆ

 

ಉದ್ಯಮ ಪ್ರಾರಂಭಿಸಲು ಬಯಸುವ ಮಹಿಳೆಯರಿಗೆ ಕೆಲವು ಸಲಹೆಗಳು:

ಮಹಿಳೆಯರು ಮನೆಯಲ್ಲಿಯೇ ಕುಳಿತು ಚಿಕ್ಕದಾಗಿಯೇ ವಹಿವಾಟೊಂದನ್ನು ಪ್ರಾರಂಭಿಸಿ ಸ್ವಾವಲಂಬಿಗಳಾಗಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ನವವಿನ್ಯಾಸದ ವಸ್ತ್ರ ಮಳಿಗೆ (ಬುಟಿಕ್)

ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

ಸೌಂದರ್ಯ ಮಳಿಗೆ (ಬ್ಯೂಟಿ ಪಾರ್ಲರ್)

ಇದೊಂದು ಚಿಕ್ಕ ಬಂಡವಾಳದ ಮೂಲಕ ಪ್ರಾರಂಭಿಸಬಹುದಾದ ಉದ್ಯಮವಾಗಿದ್ದು, ತರಬೇತಿ, ಸೌಂದರ್ಯ ಪ್ರಸಾದನ ಹಾಗೂ ಉಪಕರಣಗಳಿಗೆ ಹೆಚ್ಚೇನೂ ಹಣ ಬೇಕಾಗಿಲ್ಲ. ಮನೆಯಲ್ಲಿರುವ ಒಂದು ಕೋಣೆಯನ್ನು ಸೌಂದರ್ಯ ಮಳಿಗೆಯಾಗಿಸುವ ಮೂಲಕ ದುಬಾರಿ ಅಂಗಡಿಯನ್ನೂ ಬಾಡಿಗೆಗೆ ಕೊಡಬೇಕಾಗಿಲ್ಲ. ಈ ಮೂಲಕ ಸೌಂದರ್ಯ ಮಳಿಗೆ ಯಾವುದೇ ವಯಸ್ಸಿನಲ್ಲಿ ಮಹಿಳೆಯೋರ್ವಳು ಸುಲಭವಾಗಿ ಪ್ರಾರಂಭಿಸಬಹುದಾದ ಉದ್ಯಮವಾಗಿದೆ.

ವ್ಯಾಯಾಮ ಕೇಂದ್ರ (ಜಿಮ್)
 

ವ್ಯಾಯಾಮ ಕೇಂದ್ರ (ಜಿಮ್)

ಈ ಉದ್ಯಮದಲ್ಲಿ ಪ್ರಾರಂಭಿಕ ಬಂಡವಾಳ ಕೊಂಚ ಹೆಚ್ಚೇ ಬೇಕಾಗುತ್ತದೆ. ಆದರೆ ಮಾಸಿಕ ಆದಾಯ ಮಾತ್ರ ಆಕರ್ಷಕವಾಗಿರುತ್ತದೆ. ವ್ಯಾಯಾಮ ತರಬೇತಿಯ ಉಪಕರಣಗಳು ಕೊಂಚ ದುಬಾರಿಯಾಗಿದ್ದರೂ ಒಮ್ಮೆ ಮಾತ್ರ ಹೂಡಬೇಕಾದ ಬಂಡವಾಳವಾಗಿರುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚಿನವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಕಾರಣ ಈ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ನೀವು ಈಗಾಗಲೇ ಯೋಗಪಟುವಾಗಿದ್ದರೆ ಅಥವಾ ತರಬೇತಿ ಪಡೆದ ಏರೋಬಿಕ್ ವ್ಯಾಯಾಮ ಪರಿಣಿತರಾಗಿದ್ದರೆ ಈ ಉದ್ಯಮದಲ್ಲಿ ನಿಮಗೆ ಹೆಚ್ಚಿನ ಆದಾಯ ದೊರಕಲಿದೆ.

ಸಲಹಾ ಕೇಂದ್ರ

ಒಂದು ವೇಳೆ ನಿಮಗೆ ನಿಮ್ಮ ಸುತ್ತಮುತ್ತಲ ಮಾರುಕಟ್ಟೆಯ ಬಗ್ಗೆ ಆಳವಾದ ಮಾಹಿತಿ ಇದ್ದು, ನಿಮ್ಮ ಸಂಪರ್ಕದಲ್ಲಿ ವಿವಿಧ ಕ್ಷೇತ್ರಗಳ ಆರ್ಥಿಕ ತಜ್ಞರು ನಿಮಗೆ ಸಲಹೆ ನೀಡುವವರಿದ್ದರೆ ನೀವೊಂದು ಸಲಹಾ ಕೇಂದ್ರವನ್ನು ಪ್ರಾರಂಭಿಸಬಹುದು. ಈ ಕೇಂದ್ರಕ್ಕೆ ಆಗಮಿಸುವ ಗ್ರಾಹಕರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚಿನ ಆದಾಯ ಪಡೆಯಬಹುದು. ಸೂಕ್ತ ಸ್ಥಳದಲ್ಲಿ ಚಿಕ್ಕದೊಂದು ಕೋಣೆಯಾದರೂ ಸಾಕು, ಈ ಉದ್ಯಮವನ್ನು ಸ್ಥಾಪಿಸಬಹುದು.

ಇಂಟರ್ನೆಟ್ ಉದ್ಯಮ

ಇಂಟರ್ನೆಟ್ ಬಂದ ಬಳಿಕ ಜೀವನ ಕ್ರಮವೇ ಬದಲಾಗಿ ಹೋಗಿದೆ. ಆನ್ಲೈನ್ ಮೂಲಕ ಹಣ ಸಂಪಾದಿಸಲು ಇಂದು ನೂರಾರು ದಾರಿಗಳಿವೆ. ನಿಮ್ಮಲ್ಲಿರುವ ನೈಪುಣ್ಯವನ್ನು ಬಳಸಿ ಅಂತರ್ಜಾಲದಲ್ಲಿ ಲೇಖನಗಳನ್ನು ಬರೆಯುವ ಮೂಲಕ ಹಣವನ್ನು ಸಂಪಾದಿಸಬಹುದು. ಅಲ್ಲದೇ ಆನ್ಲೈನ್ ಮಾರ್ಕೆಟಿಂಗ್ ಮೂಲಕ ವ್ಯಾಪಾರವನ್ನು ವೃದ್ದಿಸುವುದರಿಂದಲೂ ಉತ್ತಮ ಲಾಭ ಪಡೆಯಬಹುದು. ಸ್ಥಳಾವಕಾಶವಿದ್ದರೆ ಸೈಬರ್ ಕೆಫೆಯೊಂದನ್ನೂ ಪ್ರಾರಂಭಿಸಬಹುದು. ಇದಕ್ಕಾಗಿ ಕೆಲವು ಕಂಪ್ಯೂಟರುಗಳು ಮತ್ತು ಅತಿವೇಗದ ಅಂತರ್ಜಾಲ ಸಂಪರ್ಕವಿದ್ದರೆ ಸಾಕು.

ರೆಸ್ಟೋರೆಂಟ್

ಮಹಿಳೆಯರು ಜನ್ಮತಃ ಅಡುಗೆಯಲ್ಲಿ ಒಲವುಳ್ಳವರಾಗಿರುತ್ತಾರೆ. ಕೆಲವರಿಗೆ ಅಡುಗೆ ಕಲೆಯ ಒಂದು ರೂಪವಾಗಿದೆ. ಒಂದು ವೇಳೆ ವೈವಿಧ್ಯಮಯ ಅಡುಗೆ ತಯಾರಿಸುವುದು ನಿಮ್ಮ ಇಷ್ಟದ ಕೆಲಸವಾಗಿದ್ದರೆ ನಿಮ್ಮದೇ ಆದ ರೆಸ್ಟೋರೆಂಟ್ ಅಥವಾ ಕೆಫೆಯೊಂದನ್ನು ತೆರೆಯಬಹುದು ಅಥವಾ ಕೇವಲ ಅಡುಗೆ ಮಾಡಿ ಗ್ರಾಹಕರು ಸ್ಥಳದಿಂದಲೇ ಪಾರ್ಸೆಲ್ ಕೊಂಡೊಯ್ಯಬಹುದಾದ ಪುಟ್ಟ ಮಳಿಗೆಗಳನ್ನೂ ಪ್ರಾರಂಭಿಸಬಹುದು.

ಡೇ ಕೇರ್

ಮಕ್ಕಳ ಬಗ್ಗೆ ಪ್ರೀತಿ, ಕಾಳಜಿ ಮಹಿಳೆಯರಿಗೆ ಜನ್ಮತಃ ಲಭಿಸಿರುವ ಗುಣವಾಗಿದ್ದು. ಪುಟ್ಟ ಮಕ್ಕಳ ಕಾಳಜಿಯನ್ನು ವಹಿಸುವ ಕೇಂದ್ರವೊಂದನ್ನು ಪ್ರಾರಂಭಿಸುವ ಮೂಲಕ ತಮ್ಮ ಮನೆಯನ್ನೇ ಪುಟ್ಟ ಉದ್ಯಮ ಕೇಂದ್ರವಾಗಿಸಬಹುದು. ಉದ್ಯೋಗಸ್ಥ ಮಹಿಳೆಯರ ಮಕ್ಕಳ ಕಾಳಜಿಯನ್ನು ದಿನದ ಅವಧಿಯಲ್ಲಿ ವಹಿಸುವ ಮೂಲಕ ಮಕ್ಕಳೊಂದಿಗಿನ ಒಡನಾಟದ ಸಂತೋಷದೊಂದಿಗೆ ಹೆಚ್ಚುವರಿ ಹಣವನ್ನೂ ಗಳಿಸಿ ಜೀವನವನ್ನೂ ಸುಗಮಗೊಳಿಸಬಹುದು.

ಗಿಪ್ಟ್ ಶಾಪ್

ಉಡುಗೊರೆ ಅಂಗಡಿ ಪ್ರಾರಂಭಿಸಲು ಪೂರ್ವ ಅನುಭವ ಅಥವಾ ತರಬೇತಿಯೇ ಬೇಕಾಗಿಲ್ಲ. ಉಡುಗೊರೆ ಅಂಗಡಿಯಲ್ಲಿ ತಮಗೇನು ಬೇಕೆಂಬುದನ್ನು ಗ್ರಾಹಕರು ಅರಿತಿರುತ್ತಾರೆ. ಹಾಗಾಗಿ ಗ್ರಾಹಕರು ಬಯಸುವಂತಹ ಉತ್ಪನ್ನಗಳನ್ನೇ ಸಗಟುದಾರರಿಂದ ಖರೀದಿಸಿ. ಇತ್ತೀಚೆಗೆ ಯಾವ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುತ್ತಿವೆ ಎಂಬುದನ್ನು ಕಂಡುಕೊಳ್ಳಲು ಅಂತರ್ಜಾಲ ಜಾಲಾಡಿದರೆ ಅಪಾರ ಮಾಹಿತಿ ಲಭಿಸುತ್ತದೆ. ಇವುಗಳನ್ನು ಖರೀದಿಸಿ ಗ್ರಾಹಕರಿಗೆ ಒದಗಿಸುವ ಮೂಲಕ ವ್ಯಾಪಾರ ವೃದ್ದಿಸಬಹುದು.

ಒಳಾಂಗಣ ಅಲಂಕಾರಿಕ ವಸ್ತುಗಳ ಅಂಗಡಿ

ಮನೆಯ ಒಳಾಂಗಣವನ್ನು ಸುಂದರವಾಗಿರಿಸಲು ಮಹಿಳೆಯರು ಸ್ವಾಭಾವಿಕವಾಗಿಯೇ ಒಲವು ಹೊಂದಿರುತ್ತಾರೆ. ಅಂತೆಯೇ ಮನೆಯ ಒಳಾಂಗಣವನ್ನು ಸುಂದರಗೊಳಿಸುವ ವ್ಯಾಪಾರವೂ ಇವರಿಗೆ ಕಷ್ಟಕರವಾಗಲಾರದು. ಇದಕ್ಕಾಗಿ ಅಗತ್ಯವಿರುವ ಸ್ಥಳೀಯ ಹಾಗೂ ಇತರ ಕಡೆಯಿಂದ ತರಿಸಿಕೊಳ್ಳಬೇಕಾದ ವಸ್ತುಗಳನ್ನು ಸಂಗ್ರಹಿಸಿ ಅಂಗಡಿಯೊಂದನ್ನು ಪ್ರಾರಂಭಿಸಿದರೆ ಗ್ರಾಹಕರ ಮನಗೆಲ್ಲುವ ಮೂಲಕ ವ್ಯಾಪಾರವನ್ನೂ ವೃದ್ದಿಸಬಹುದು.

ಸಾಕು ಪ್ರಾಣಿಗಳ ಅಂಗಡಿ

ಮನೆಯಲ್ಲಿ ಸಾಕು ಪ್ರಾಣಿಯೊಂದನ್ನು ಹೊಂದಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಬಳಕೆಗೆ ಬರುತ್ತಿದೆ. ಸಾಕುಪ್ರಾಣಿಗಳು ಮಾತ್ರವಲ್ಲ, ಇವುಗಳಿಗೆ ಸಂಬಂಧಿಸಿದ ಅಲಂಕಾರಿಕಾ ಹಾಗೂ ಬಳಕೆಯ ವಸ್ತುಗಳೂ ಹೆಚ್ಚು ಮಾರಾಟವಾಗುತ್ತಿವೆ. ಈ ಅಗತ್ಯತೆ ನಿಮ್ಮ ಅಂಗಡಿಗೆ ಹೆಚ್ಚಿನ ವ್ಯಾಪಾರವನ್ನು ತಂದೊಡ್ಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ಸಾಕು ಪ್ರಾಣಿಗಳನ್ನು ಮಾರಾಟ ಮಾಡಲು ಕೊಂಚ ತರಬೇತಿ ಬೇಕಾಗುತ್ತದೆ. ಆದರೆ ಸಾಕುಪ್ರಾಣಿಗಳ ಆಹಾರ, ಕುತ್ತಿಗೆ ಪಟ್ಟಿ, ಪಂಜರ, ಆಹಾರ ತಿನ್ನುವ ತಟ್ಟೆ ಮೊದಲಾದ ವಸ್ತುಗಳಲ್ಲಿ ಉತ್ತಮ ಲಾಭವಿದೆ.

ಇತರ ವ್ಯಾಪಾರಗಳು

ಬಂಡವಾಳ ಅಥವಾ ಸ್ಥಳಾವಕಾಶವಿಲ್ಲದೇ ಇರುವ ಮಹಿಳೆಯರು ನಿರಾಶರಾಬೇಕಿಲ್ಲ. ಇವರು ಬ್ಯಾಂಕುಗಳು, ವಿಮಾ ಸಂಸ್ಥೆಗಳು ಪ್ರಾರಂಭಿಸಿರುವ ಯೋಜನೆಗಳನ್ನು ಜನರತ್ತ ಕೊಂಡೊಯ್ದು ವಿಮೆಗಳನ್ನು ಮಾರಾಟ ಮಾಡುವ ಏಜೆಂಟರಂತೆ ಕಾರ್ಯನಿರ್ವಹಿಸಬಹುದು. ಸೌಂದರ್ಯ ಪ್ರಸಾದನಗಳು, ಟಪ್ಪರ್ ವೇರ್ ಮೊದಲಾದ ಖ್ಯಾತ ಪ್ಲಾಸ್ಟಿಕ್ ವಸ್ತುಗಳ ಸಂಸ್ಥೆಗಳ ಉತ್ಪನ್ನಗಳ ಪ್ರಚಾರವನ್ನೂ ಮಾಡಬಹುದು. ಒಂದು ವೇಳೆ ಮಹಿಳೆ ಯಾವುದಾದರೊಂದು ವಿಷಯದಲ್ಲಿ ಹೆಚ್ಚಿನ ಪರಿಣಿತಿ ಅಥವಾ ಜ್ಞಾನ ಗಳಿಸಿದ್ದರೆ ಈ ವಿಷಯದಲ್ಲಿ ಮನೆಪಾಠವನ್ನು ಹೇಳಿ ಗಳಿಸಬಹುದು. ಗಣಿತ, ಹಾಡು, ನೃತ್ಯ, ಯೋಗ, ಚಿತ್ರಕಲೆ, ಒಟ್ಟಾರೆ ಯಾವುದೇ ವಿಷಯದ ಪರಿಣಿತಿಯನ್ನು ಕಲಿಸಿ ಗಳಿಸಬಹುದು.

English summary

Best Business Ideas for Women

The veiled entrepreneurial abilities of women in India have witnessed steady alterations with the increasing sensitivity to her role and economic standing in the society.
Story first published: Monday, April 30, 2018, 10:29 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more