For Quick Alerts
ALLOW NOTIFICATIONS  
For Daily Alerts

ಹೆಚ್ಚು ತೆರಿಗೆ ಉಳಿತಾಯ ಮಾಡಿ ಉತ್ತಮ ಆದಾಯ ಪಡೆಯೊದು ಹೇಗೆ?

ಪಿಪಿಎಫ್ ಮೇಲಿನ ಹೂಡಿಕೆಗೆ ಮತ್ತು ಅದಕ್ಕೆ ದೊರಕುವ ರಿಟರ್ನ್ಸ್ ಎರಡಕ್ಕೂ ತೆರಿಗೆಯಲ್ಲಿ ವಿನಾಯಿತಿ ದೊರಕುತ್ತದೆ ಎಂಬ ಕಾರಣದಿಂದ ಈ ಯೋಜನೆ ಹೆಚ್ಚು ಜನಪ್ರಿಯವಾಗಿದೆ.

|

2018-19 ಹಣಕಾಸು ವರ್ಷದಲ್ಲಿ ನಾವಿದ್ದೇವೆ. ಪ್ರತಿ ಹಣಕಾಸು ವರ್ಷದ ಕೊನೆಯ ಕೆಲವು ತಿಂಗಳನ್ನು ಜನರು ಅದರಲ್ಲೂ ಸಂಬಳದಾರರು ತೆರಿಗೆಯ ಹೊರೆಯನ್ನು ತಗ್ಗಿಸಿಕೊಳ್ಳುವ ಸಲುವಾಗಿ ಹಣವನ್ನು ವಿವಿಧ ಬಗೆಯ ಹೂಡಿಕೆಗಳ ಆಯ್ಕೆಯನ್ನು ಅನ್ವೇಷಿಸಲು ಬಳಸುವುದನ್ನು ಕಾಣಬಹುದು.

 

ಹಣಕಾಸು ಹೂಡಿಕೆ ಮಾಡಿ ಅದಕ್ಕೆ ಸಂಬಂಧಿಸಿದ ವಿವರ ಮತ್ತು ದಾಖಲೆಗಳನ್ನು ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ತೆರಿಗೆ ಇಲಾಖೆಗೆ ಸಲ್ಲಿಸಿ ಆ ಆರ್ಥಿಕ ವರ್ಷದಲ್ಲಿ ಈ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಲು ಪ್ರತಿ ವರ್ಷದ ಮಾರ್ಚ್ 31 ಕಡೆಯ ದಿನವಾಗಿರುತ್ತದೆ.

ಇತ್ತೀಚಿನ ದಿನಗಳವರೆಗಿನ ಜನರ ಹೂಡಿಕೆಯ ಮಾದರಿ ಮತ್ತು ಕ್ರಮವನ್ನು ಅಭ್ಯಸಿಸಿದಾಗ ಹೆಚ್ಚಿನ ಜನರು ತಮ್ಮ ದುಡಿಮೆಯ ಹಣವನ್ನು ಕೇಂದ್ರ ಸರಕಾರದ ವ್ಯಾಪ್ತಿಯ ಪಿಪಿಎಫ್, ಇಎಲ್ಎಸ್ಎಸ್ ಮತ್ತು ತೆರಿಗೆ ಉಳಿತಾಯಕ್ಕೆ ಪೂರಕವಾದ ನಿಶ್ಚಿತ ಠೇವಣಿ (ಎಫ್.ಡಿ) ಯಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಿರುವುದನ್ನು ಗಮನಿಸಬಹುದು.
ಕೇಂದ್ರ ಸರಕಾರ ತನ್ನ 2018 ರ ಆಯವ್ಯಯದಲ್ಲಿ ಮಂಡಿಸಿರುವ ಪ್ರಸ್ತಾಪವನ್ನು ಗಮನಿಸಿದಾಗ ಇದುವರೆಗೆ ತೆರಿಗೆ ಉಳಿತಾಯಕ್ಕೆ ಮತ್ತು ರಿಟರ್ನ್ಸ್ ಗಾಗಿ ಸಾಂಪ್ರದಾಯಿಕ ಬಗೆಯಲ್ಲಿ ಹಣಕಾಸು ಹೂಡಿಕೆ ಮಾಡುತ್ತಿರುವವರು ತಮ್ಮ ನಿರ್ಧಾರಗಳನ್ನು ಮರುಚಿಂತನೆ ನಡೆಸಬೇಕಾದ ಸಮಯ ಎದುರಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಯೋಜನೆಗಳಿಂದ ಸಂಪಾದಿಸುವ ದೀರ್ಘಾವಧಿ ಕ್ಯಾಪಿಟಲ್ ಗಳಿಕೆಯ ಮೇಲೆ ತೆರಿಗೆ ಪುನರ್-ಪರಿಚಯಿಸುವ ನಿರ್ಧಾರ ಘೋಷಿಸಲಾಗಿದೆ.
ಹೀಗಾಗಿ ಈ ವರ್ಗದ ಹೂಡಿಕೆದಾರರು ಇಎಲ್ಎಸ್ಎಸ್ ನಲ್ಲಿ ಯೋಜಿತ ಬಗೆಯಲ್ಲಿ ಹಣ ಹೂಡಿಕೆ ಮಾಡುವತ್ತ ಒತ್ತು ಕೊಡುವ ಅಗತ್ಯತೆ ಕಂಡು ಬರುತ್ತಿದೆ. 30 ವಯಸ್ಸಿನೊಳಗೆ ಕೋಟ್ಯಾಧಿಪತಿಗಳಾದ ಯಶಸ್ವಿ ವ್ಯಕ್ತಿಗಳ ಕಥೆ

ಪಿಪಿಎಫ್ ಮೇಲಿನ ಹೂಡಿಕೆಗೆ ಮತ್ತು ಅದಕ್ಕೆ ದೊರಕುವ ರಿಟರ್ನ್ಸ್ ಎರಡಕ್ಕೂ ತೆರಿಗೆಯಲ್ಲಿ ವಿನಾಯಿತಿ ದೊರಕುತ್ತದೆ ಎಂಬ ಕಾರಣದಿಂದ ಈ ಯೋಜನೆ ಹೆಚ್ಚು ಜನಪ್ರಿಯವಾಗಿದೆ. ಮುಖ್ಯವಾಗಿ ಷೇರು ಮಾರುಕಟ್ಟೆ ಸೇರಿದಂತೆ ಹೂಡಿಕೆ ಕ್ಷೇತ್ರದ ತಿಳುವಳಿಕೆ ಇಲ್ಲದ, ಈ ಕ್ಷೇತ್ರಕ್ಕೆ ಸಂಬಂಧಿಸದ ಇತರೆ ವೃತ್ತಿಗಳಲ್ಲಿನ ಬಹುತೇಕ ಮಂದಿಗೆ ಇದು ಅಚ್ಚುಮೆಚ್ಚಿನ ಅಯ್ಕೆಯಾಗಿದೆ.
ಪಿಪಿಎಫ್ ಮೇಲಿನ ಹೂಡಿಕೆ ಮತ್ತು ಅದರಿಂದ ದೊರಕುವ ರಿಟರ್ನ್ಸ್ ಎರಡೂ ತೆರಿಗೆಯಿಂದ ಮುಕ್ತವಾಗಿವೆ ಎಂಬುದು ನಿಜವೇ ಆದರೂ ನಾವು ಅರ್ಥ ಮಾಡಿಕೊಳ್ಳಬೇಕಾದ ಬಹುಮುಖ್ಯ ವಿಚಾರವೆಂದರೆ ಈ ಹೂಡಿಕೆಯಿಂದ ದೊರಕುವ ರಿಟರ್ನ್ಸ್ ನ ದರ ತುಂಬಾ ಸಾಮಾನ್ಯ ಮಟ್ಟದ್ದಾಗಿರುತ್ತದೆ.

ಹಾಗೆಯೇ ತೆರಿಗೆ ಉಳಿತಾಯಕ್ಕೆ ಪೂರಕವಾದ ನಿಶ್ಚಿತ ಠೇವಣಿಗಳಲ್ಲಿ ತೊಡಗಿಸುವ ಹಣ ಕೂಡ ಸೆಕ್ಷನ್ 80 ಸಿ ಅನ್ವಯ ತೆರಿಗೆ ಪಾವತಿಯಿಂದ ವಿನಾಯ್ತಿ ಹೊಂದಿದೆ ಎಂಬುದು ನಿಜವಾದರೂ, ಈ ಬಗೆಯ ಠೇವಣಿಯಿಂದ ದೊರಕುವ ಬಡ್ಡಿ ಅಥವಾ ರಿಟರ್ನ್ಸ್ ನ ಮೊತ್ತ ಒಂದು ಮಿತಿಯನ್ನು ದಾಟಿದಾಗ ಆ ಗಳಿಕೆಯ ಮೊತ್ತವು ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತದೆ.

ಜಾಣತನದಿಂದ ಉಳಿತಾಯ ಮಾಡಿರಿ

ಜಾಣತನದಿಂದ ಉಳಿತಾಯ ಮಾಡಿರಿ

ನಮ್ಮ ಬದುಕಿನ ಅಗತ್ಯಗಳನ್ನು ಮನಗೊಂಡು ಅದರ ಆಧಾರದ ಮೇಲೆ ಮತ್ತು ತೆರಿಗೆ ಉಳಿತಾಯದ ಮೇಲೆ ಕಣ್ಣಿರಿಸಿ ಈ ಕೆಳಕಂಡ ಹೂಡಿಕೆಗಳಲ್ಲಿ ಹಣ ತೊಡಗಿಸುವ ಮೂಲಕ ನಮ್ಮ ಆರ್ಥಿಕ ಉದ್ದೇಶಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ ತೆರಿಗೆ ವಿನಾಯ್ತಿಯ ಪ್ರಯೋಜನವನ್ನೂ ಸಹ ಪಡೆಯಬಹುದು.

ಟರ್ಮ್ ಪಾಲಿಸಿಯನ್ನು ಖರೀದಿಸುವುದು

ಟರ್ಮ್ ಪಾಲಿಸಿಯನ್ನು ಖರೀದಿಸುವುದು

ಟರ್ಮ್ ಪಾಲಿಸಿಯನ್ನು ಹೂಡಿಕೆ ಎಂದು ಭಾವಿಸುವ ಬದಲಿಗೆ ಅದು ನಮಗೆ ದಯಪಾಲಿಸುವ ಮಾನಸಿಕ ನಿರಾಳತೆಯನ್ನ ಮನನ ಮಾಡಿಕೊಳ್ಳಬೇಕು.
ಇದು ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬ ಮತ್ತು ಅವಲಂಬಿತರನ್ನು ಆರ್ಥಿಕ ಅಭದ್ರತೆಗೆ ಈಡಾಗದಂತೆ ರಕ್ಷಿಸುತ್ತದೆ. ಆ ಮೂಲಕ ನೀವು ನಿಶ್ಚಿಂತರಾಗಿ ನಿಮ್ಮ ಗುರಿಗಳತ್ತ ಗಮನಹರಿಸಲು ಅನುವು ಮಾಡಿಕೊಡುತ್ತದೆ. ವಿಮಾದಾರ ಒಂದು ವೇಳೆ ವಿಮಾ ಕವರೇಜ್ ಸಮಯದಲ್ಲಿ ಮರಣ ಹೊಂದಿದರೆ, ವಿಮಾ ಸಂಸ್ಥೆ ವಿಮೆಯ ಮೊತ್ತವನ್ನು ನಿಧನ ಹೊಂದಿದ ವ್ಯಕ್ತಿಯ ನಾಮನಿರ್ದೇಶಿತರಿಗೆ ತಲುಪಿಸುತ್ತದೆ. ಈ ಮೂಲಕ ಆ ಕುಟುಂಬದ ಆರ್ಥಿಕ ಸ್ಥಿರತೆ ದುರ್ಬಲವಾಗದಂತೆ ತಡೆಯುತ್ತದೆ.
ಈ ಸಂದರ್ಭದಲ್ಲಿ ಲಭ್ಯವಾಗುವ ವಿಮೆಯ ಮೊತ್ತಕ್ಕೆ ತೆರಿಗೆಯಿಂದ ವಿನಾಯ್ತಿ ದೊರೆಯುತ್ತದೆ. ಹಾಗೆಯೇ ಈ ಪಾಲಿಸಿಗೆ ಕಟ್ಟುವ ಪ್ರೀಮಿಯಮ್ ಕಂತುಗಳ ಮೊತ್ತವೂ ತೆರಿಗೆಯಿಂದ ವಿನಾಯ್ತಿ ಪಡೆದಿವೆ.

ಯುನಿಟ್ ಲಿಂಕ್ಡ್ ಇನ್ಶೂರನ್ಸ್ ಪ್ಲಾನ್ (ಯುಲಿಪ್ಸ್)
 

ಯುನಿಟ್ ಲಿಂಕ್ಡ್ ಇನ್ಶೂರನ್ಸ್ ಪ್ಲಾನ್ (ಯುಲಿಪ್ಸ್)

ಮೂರು ಬಗೆಯ ವಿನಾಯಿತಿಯ ಸವಲತ್ತನ್ನು ಒದಗಿಸುವುದರಿಂದ ಅತ್ಯಾಕರ್ಷಕ ಎನಿಸುವೆ. ಗ್ರಾಹಕರಿಗೆ ತಾವು ಹೂಡುವ ಹಣದ ಮೇಲೆ, ಅವುಗಳಿಗೆ ದೊರಕುವ ಗಳಿಕೆಯ ಮೇಲೆ ಹಾಗು ಮೊತ್ತವನ್ನು ಹಿಂಪಡೆಯುವ ವೇಳೆ- ಹೀಗೆ ಮೂರು ಸಂದರ್ಭಗಳಲ್ಲಿ ತೆರಿಗೆ ವಿನಾಯ್ತಿಯ ಲಾಭ ದೊರೆಯುತ್ತದೆ. ಹೀಗಾಗಿ ಈ ಯುಲಿಪ್ ಹೂಡಿಕೆಗಳು ತ್ರಿವಳಿ ವಿನಾಯ್ತಿಯ ಹೂಡಿಕೆಗಳೆಂದೇ ಪರಿಚಿತವಾಗಿವೆ.
ಹೂಡಿಕೆಯ ಮೊತ್ತ ಮತ್ತು ಅದರಿಂದ ದೊರಕುವ ಗಳಿಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿಯ ಸೌಲಭ್ಯ ಇದೆ. ಹೂಡಿಕೆಯ ಮೊತ್ತವನ್ನು ಹಿಂಪಡೆಯುವ ಸಂದರ್ಭದಲ್ಲಿ ಆ ಮೊತ್ತವು ಸೆಕ್ಷನ್ 10(10D) ಯ ಆದಿಯಲ್ಲಿ ಕರ ವಿನಾಯ್ತಿಗೆ ಅರ್ಹವಾಗುತ್ತದೆ.
ದೀರ್ಘ ಕಾಲಿಕ ಕ್ಯಾಪಿಟಲ್ ಗಳಿಕೆಗೆ ಪರಿಚಯಿಸಿರುವ ತೆರಿಗೆಯ ತರುವಾಯ ಈ ಬಗೆಯ ಹೂಡಿಕೆ ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆಗಿಂತ ಆಕರ್ಷಕ ಎನಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸತೊಡಗಿದೆ.
ನಿಶ್ಚಿತ ಠೇವಣಿಗಳ ಮೇಲಿನ ಆದಾಯವು ವಾರ್ಷಿಕ ರೂ. 50,000 ದಾಟಿದರೆ ಆ ಅಧಿಕ ಮೊತ್ತಕ್ಕೆ ಮೂಲದಲ್ಲಿ ತೆರಿಗೆ ಕಡಿತ (ಟಿ.ಡಿ.ಎಸ್) ಮಾಡಲಾಗುತ್ತದೆ. ಈ ಅನಾನುಕೂಲ ಯುಲಿಪ್ ಮೇಲಿನ ಹೂಡಿಕೆಗಿಲ್ಲ. ಇಷ್ಟು ಮಾತ್ರವಲ್ಲದೆ ಯುಲಿಪ್ ನಲ್ಲಿ ತೊಡಗಿಸಿದ ಹಣವು ದೀರ್ಘಾವಧಿಯಲ್ಲಿ ನಿಶ್ಚಿತ ಠೇವಣಿಗಿಂತ ಹೆಚ್ಚಿನ ರಿಟರ್ನ್ಸ್ ದೊರಕಿಸಿಕೊಡುತ್ತದೆ. ಈ ಕಾರಣಗಳಿಂದ ಯುಲಿಪ್ ಮೇಲೆ ಹಣ ತೊಡಗಿಸುವುದು ಹೆಚ್ಚು ಲಾಭಕರ.

ಆರೋಗ್ಯ ವಿಮೆ

ಆರೋಗ್ಯ ವಿಮೆ

ನಿಮ್ಮ ಮತ್ತು ನಿಮ್ಮ ಅವಲಂಬಿತರಿಗಾಗಿ ಆರೋಗ್ಯ ವಿಮೆ ಖರೀದಿಸುವುದು ಅತ್ಯಂತ ಮುಖ್ಯ. ಸಂಬಳದಾರರು ಮತ್ತು ಅವರ ಅವಲಂಬಿತರಿಗೆ ಉದ್ಯೋಗದಾತರು ಆರೋಗ್ಯ ವಿಮೆಯ ರಕ್ಷಣೆಯನ್ನು ಒದಗಿಸಿರುತ್ತಾರೆ. ಆದರೆ ಇದೊಂದನ್ನೇ ನೆಚ್ಚಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ.
ಉದ್ಯೋಗ ಭದ್ರತೆ ಎಂಬುದು ಮರೀಚಿಕೆಯಾಗಿರುವ ಇಂದಿನ ದಿನಗಳಲ್ಲಿ ಒಂದೊಮ್ಮೆ ನಿರುದ್ಯೋಗಿಯಾಗಿರುವ ಸಂದರ್ಭದಲ್ಲಿ ವೈದ್ಯಕೀಯ ತುರ್ತು ಖರ್ಚು ಎದುರಾದರೆ ಅದು ಆರ್ಥಿಕವಾಗಿ ಜರ್ಝರಿತರನ್ನಾಗಿಸುತ್ತದೆ. ಹಾಗಾಗಿ ಪ್ರತ್ಯೇಕವಾಗಿ ನಾವೂ ಸಹ ಆರೋಗ್ಯ ವಿಮೆ ಹೊಂದುವುದು ಅತ್ಯಗತ್ಯ.
ಆದಾಯ ತೆರಿಗೆಯ ಸೆಕ್ಷನ್ 80 ಡಿ ಅನ್ವಯ ರೂ. 25,000 ದವರೆಗೆ ವಿನಾಯ್ತಿಯನ್ನು ಆರೋಗ್ಯ ವಿಮೆಯ ಪ್ರೀಮಿಯಮ್ ಕಂತುಗಳ ಮೇಲೆ ಪಡೆಯಬಹುದು. ಒಂದೊಮ್ಮೆ ನಿಮ್ಮ ತಂದೆ ತಾಯಿ 60 ವರ್ಷಕ್ಕೂ ಮೇಲ್ಪಟ್ಟ ವಯೋಮಾನದವರಾಗಿದ್ದರೆ ಅವರಿಗಾಗಿ ಖರೀದಿಸುವ ಆರೋಗ್ಯ ವಿಮೆಗೆ ಹೆಚ್ಚಿನ ಸವಲತ್ತು ಲಭಿಸುತ್ತದೆ.
ಕೇಂದ್ರ ಆಯವ್ಯಯ 2018 ರ ಅನ್ವಯ ತೆರಿಗೆ ಮರುಪಾವತಿಯ ಮೊತ್ತವನ್ನು ಹಿರಿಯ ನಾಗರಿಕರಿಗೆ ಸೆಕ್ಷನ್ 80ಡಿ ಯ ಅಡಿಯಲ್ಲಿ ರೂ. 30,000 ದಿಂದ ರೂ. 50,000 ಕ್ಕೆ ಹೆಚ್ಚಿಸಲಾಗಿದೆ.

ತೆರಿಗೆ ನಿಯಮ ಅರಿಯುವುದು

ತೆರಿಗೆ ನಿಯಮ ಅರಿಯುವುದು

ವರಮಾನದೊಂದಿಗೆ ತೆರಿಗೆಯ ಪಾವತಿಯ ಜವಾಬ್ದಾರಿಯೂ ಜತೆಯಾಗುತ್ತದೆ. ಆದಾಯ ತೆರಿಗೆಯ ನಿಯಮಗಳನ್ನು ಸರಿಯಾಗಿ ಅರಿಯುವುದರಿಂದ ತೆರಿಗೆ ಉಳಿತಾಯಕ್ಕೆ ಸರಕಾರ ವಿವಿಧ ಬಾಬ್ತುಗಳಲ್ಲಿ ಒದಗಿಸಿರುವ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವುದರಿಂದ ಮತ್ತು ಆ ಕ್ಷೇತ್ರದ ಪರಿಣಿತರ ನೆರವು ಪಡೆಯುವ ಮೂಲಕ ನಾವು ಪಾವತಿಸಬೇಕಾದ ತೆರಿಗೆಯಲ್ಲಿ ಉಳಿತಾಯ ಮಾಡಬಹುದು ಮತ್ತು ಜಾಣತನದಿಂದ ಹೂಡಿಕೆ ಮಾಡುವುದರ ಮೂಲಕ ನಮ್ಮ ಹೂಡಿಕೆಗೆ ಉತ್ತಮ ರಿಟರ್ನ್ಸ್ ಪಡೆಯಬಹುದು. ಮೇಲೆ ವಿವರಿಸಿದಂತೆ ಈ ಎರಡೂ ಅನುಕೂಲಗಳನ್ನು ವಿಮಾ ಉತ್ಪನ್ನಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಯುಲಿಪ್ ಗಳಲ್ಲಿ ತೊಡಗಿಸುವುದರಿಂದ ಗಳಿಸಬಹುದು.

ಕೊನೆಮಾತು

ಕೊನೆಮಾತು

ಸಾಂಪ್ರದಾಯಿಕ ಬಗೆಯ ಹೂಡಿಕೆಗಳಿಂದ ಹೆಚ್ಚಿನ ಆರ್ಥಿಕ ಲಾಭ ಸಾಧ್ಯವಾಗದು ಎಂಬುದು ಆರ್ಥ ಕ್ಷೇತ್ರದ ಪರಿಣಿತರ ಖಚಿತ ಅಭಿಪ್ರಾಯ. ಹಾಗಾಗಿ ವಿಪರೀತದ ದುಬಾರಿ ಯುಗದಲ್ಲಿ ದಿನ ದೂಡುತ್ತಿರುವ ನಾವು ನಮ್ಮ ಗಳಿಕೆಯ ಹಣವನ್ನು ಕೌಶಲ್ಯದಿಂದ ಮತ್ತು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಸಾಂಪ್ರದಾಯಿಕ ರೂಪದ ಹೂಡಿಕೆಗಳಿಗಿಂತ ಹೆಚ್ಚಿನ ಲಾಭ ಪಡೆಯುವುದು ಸುಲಭ ಸಾಧ್ಯ. ಈ ಬಗೆಯ ಹೂಡಿಕೆಗಳ ಕುರಿತು ಹೆಚ್ಚಿನ ತಿಳುವಳಿಕೆ ಪಡೆದು ತನ್ಮೂಲಕ ಹಣಕಾಸು ಪರಿಸ್ಥಿತಿಯನ್ನು ಅತ್ಯುತ್ತಮ ಪಡಿಸಿಕೊಳ್ಳಬೇಕು ಅನ್ನುವುದು ನಮ್ಮ ಆಶಯ ಮತ್ತು ಆ ನಿಟ್ಟಿನ ತಿಳುವಳಿಕೆ ಮೂಡಿಸಲು ಇದು ನಮ್ಮ ಸಣ್ಣ ಪ್ರಯತ್ನ.

English summary

How you can save more tax and get good returns

How you can save more tax and get good returns
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X