For Quick Alerts
ALLOW NOTIFICATIONS  
For Daily Alerts

ತಿಂಗಳಿಗೊಮ್ಮೆ ಈ 7 ಕೆಲಸ ಮಾಡದಿದ್ದರೆ ಕೋಟ್ಯಾಧಿಶರಾಗಬಹುದು! ಆಶ್ಚರ್ಯವಾಯಿತಾ? ಮುಂದೆ ಓದಿ..

ಶೀರ್ಷಿಕೆ ನೋಡಿ ಆಶ್ಚರ್ಯವಾಯಿತಾ? ಅದು ಹೇಗೆ, ಏನು ಮಾಡದಿದ್ದರೆ ಕೋಟ್ಯಾಧಿಶರಾಗಬಹುದು ಎಂದು ಕನ್‌ಫ್ಯೂಸ್ ಆದಿರಾ? ತಿಂಗಳಲ್ಲಿ ಒಂದು ಬಾರಿ ಈ ಏಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ ಕೋಟಿ ರೂಪಾಯಿ ಹೇಗೆ ಗಳಿಸಬಹುದು ನೋಡೋಣ..

By Siddu
|

ಶೀರ್ಷಿಕೆ ನೋಡಿ ಆಶ್ಚರ್ಯವಾಯಿತಾ? ಅದು ಹೇಗೆ, ಏನು ಮಾಡದಿದ್ದರೆ ಕೋಟ್ಯಾಧಿಶರಾಗಬಹುದು ಎಂದು ಕನ್‌ಫ್ಯೂಸ್ ಆದಿರಾ?

ತಿಂಗಳಲ್ಲಿ ಒಂದು ಬಾರಿ ನೀವಾಗಲಿ, ನಿಮ್ಮ ಕುಟುಂಬದವರಾಗಲಿ ಈ ಏಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ 1.3 ಕೋಟಿ ರೂಪಾಯಿ ಹೇಗೆ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ..

ಚಿಂತೆ ಬಿಡಿ.. ಇಷ್ಟು ದುಡ್ಡು ಗಳಿಸಲು ನೀವು ನಿಮ್ಮ ಯಾವುದೇ ನೆಮ್ಮದಿ ಹಾಳು ಮಾಡಿಕೊಳ್ಳಬೇಕಿಲ್ಲ. ಕೆಲ ಚಿಕ್ಕ ಪುಟ್ಟ ವಿಷಯಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮಲ್ಲಿ ಒಂದು ಆರ್ಥಿಕ ಶಿಸ್ತು ಮೂಡುವುದರೊಂದಿಗೆ, ನಿಮ್ಮ ಮಕ್ಕಳಿಗೂ ದುಡ್ಡಿನ ನಿಜವಾದ ಬೆಲೆ ಅರ್ಥವಾಗುತ್ತದೆ. ಇದರಿಂದ ಅವರು ಭವಿಷ್ಯದಲ್ಲಿ ದೇಶದ ಓರ್ವ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಕೂಡ ಸಹಕಾರಿಯಾಗುತ್ತದೆ. ಇದರಿಂದ ಕುಟುಂಬಕ್ಕೂ ಒಳ್ಳೆಯದಾಗುತ್ತದೆ. ಈ ಕ್ರಮಗಳಿಂದ ನೀವು ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವುದರಲ್ಲಿ ಸಹ ಕೈಜೋಡಿಸಿದಂತಾಗುತ್ತದೆ. ಅಲ್ಲದೆ ಆಪತ್ತಿನ ಸಮಯದಲ್ಲಿ ಕುಟುಂಬಕ್ಕೆ ಸಾಕಷ್ಟು ನೆರವಾಗುತ್ತದೆ.

ಒಂದು ತಿಂಗಳ ಕಾಲಾವಧಿಯಲ್ಲಿ ನಾವು ಅನೇಕ ಬಾರಿ ಕುಟುಂಬದೊಂದಿಗೆ ಸಿನೆಮಾಕ್ಕೊ ಅಥವಾ ಊಟ ಮಾಡಲು ರೆಸ್ಟೋರೆಂಟ್‌ಗಳಿಗೆ ಹೋಗುತ್ತೇವೆ. ಪ್ರತಿ ವಾರದ ಕೊನೆಯಲ್ಲಿ ಈ ರೀತಿ ನಾವು ಹೊರಗೆ ಹೋಗಿ ಖರ್ಚು ಮಾಡುವುದನ್ನು ತಿಂಗಳ ಒಂದು ವಾರ ಮಾತ್ರ ಮಾಡದಿದ್ದರೆ ಸಾಕು. ಇದರಿಂದ ಉಳಿತಾಯವಾದ ಹಣ ಬರುವ 20 ವರ್ಷಗಳಲ್ಲಿ ಬೃಹತ್ತಾಗಿ ಬೆಳೆದು ದೊಡ್ಡ ಮೊತ್ತ ಸಂಗ್ರಹವಾಗುತ್ತದೆ.

ಇದನ್ನು ಸಾಧಿಸಬೇಕಾದರೆ ಪ್ರತಿ ತಿಂಗಳು ನಾವು ಉಳಿಸಿದ ಹಣವನ್ನು ಇಕ್ವಿಟಿ ಮ್ಯುಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಹಣದಿಂದ ಹಣ ಬೆಳೆಯುವ ವೈಶಿಷ್ಟ್ಯವನ್ನು ನಾವು ಇಲ್ಲಿ ಕಾಣುತ್ತೇವೆ. ದೀರ್ಘಾವಧಿಯವರೆಗೆ ನಿಯಮಿತವಾಗಿ ಇಕ್ವಿಟಿ ಮ್ಯುಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಹಣ ಬೆಳೆಯುತ್ತ ಹೋಗುತ್ತದೆ. ಉತ್ತಮ ಬದುಕಿಗಾಗಿ ದಂಪತಿಗಳು ಅನುಸರಿಸಬೇಕಾದ ಸೂತ್ರಗಳು

ಈ ಬಗ್ಗೆ ಒಂದು ಲೆಕ್ಕಾಚಾರ ಮಾಡಿದರೆ, 20 ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ನಮ್ಮ ಹೂಡಿಕೆಗೆ ಶೇ. 15ರಷ್ಟು ಬಡ್ಡಿ ದರದಲ್ಲಿ ಆದಾಯ ಸಿಗುತ್ತದೆ. ಮ್ಯುಚುವಲ್ ಫಂಡ್‌ಗಳಲ್ಲಿ ಮಾರ್ಕೆಟ್ ರಿಸ್ಕ್ ಅನ್ನು ಗಣನೆಗೆ ತೆಗೆದುಕೊಂಡರೂ, ದೀರ್ಘಾವಧಿಯಲ್ಲಿ ಸಿಪ್ ಮೂಲಕ ಹೂಡಿಕೆ ಮಾಡಿದರೆ ತುಂಬಾ ಒಳ್ಳೆಯ ಆದಾಯ ಸಿಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಹಾಗಾದರೆ ಯಾವ ಏಳು ಕೆಲಸಗಳ ಮೂಲಕ ದೊಡ್ಡ ಮೊತ್ತದ ಹಣ ಕೂಡಿಸಬಹುದು ಎಂಬುದನ್ನು ಒಂದೊಂದಾಗಿ ನೋಡೋಣ.

1. ಒಂದು ರವಿವಾರ ಕಾರು ಬಳಸಬೇಡಿ

1. ಒಂದು ರವಿವಾರ ಕಾರು ಬಳಸಬೇಡಿ

ತಿಂಗಳಲ್ಲಿ ಒಂದು ರವಿವಾರ ಮನೆಯಲ್ಲಿದ್ದರೆ ಬಾಕಿ ಉಳಿದ ಎಷ್ಟೋ ಕೆಲಸಗಳನ್ನು ಮಾಡಿಕೊಳ್ಳಬಹುದು. ಅಂದು ನಿಮ್ಮ ಹಣಕಾಸಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಜೋಡಿಸಿ ಇಟ್ಟುಕೊಳ್ಳಬಹುದು. ಜೊತೆಗೆ ದೇಹಕ್ಕೂ ವಿಶ್ರಾಂತಿ ಸಿಗುತ್ತದೆ. ಇಂಥ ಒಂದು ರವಿವಾರ 1 ಸಾವಿರ ರೂ. ಉಳಿಸಿ ಅದನ್ನು ಸಿಪ್ ಮೂಲಕ ಮ್ಯುಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದೇ ಆದಲ್ಲಿ, ಅದು 20 ವರ್ಷಗಳಲ್ಲಿ 15 ಲಕ್ಷ ರೂಪಾಯಿಗಳಾಗುತ್ತದೆ.

2. ತಿಂಗಳಲ್ಲಿ ಒಂದು ದಿನ ಕೆಲಸಕ್ಕೆ ಕಾರು ಬಳಸಬೇಡಿ

2. ತಿಂಗಳಲ್ಲಿ ಒಂದು ದಿನ ಕೆಲಸಕ್ಕೆ ಕಾರು ಬಳಸಬೇಡಿ

ತಿಂಗಳಲ್ಲಿ ಒಂದು ದಿನ ಕೆಲಸಕ್ಕೆ ತೆರಳಲು ಕಾರಿನ ಬದಲಾಗಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಬಳಸಬಹುದು. ಇದು ನಿಮಗೆ ಸಾರ್ವಜನಿಕ ಸಾರಿಗೆಯ ಬಗ್ಗೆ ಒಂದು ಹೊಸ ಅನುಭವವನ್ನು ನೀಡುತ್ತದೆ. ಜೊತೆಗೆ ಸಂದರ್ಭ ಬಂದಾಗ ಈ ಸಾರಿಗೆ ಬಳಸಲು ನಿಮ್ಮನ್ನು ಸಿದ್ಧಗೊಳಿಸುತ್ತದೆ. ಈ ರೀತಿ ಒಂದು ದಿನ ಕಾರು ಬಳಸದೆ 1 ಸಾವಿರ ರೂಪಾಯಿ ಉಳಿತಾಯ ಮಾಡಿದರೆ, ಮೊದಲಿನ ಉದಾಹರಣೆಯಲ್ಲಿ ತಿಳಿಸಿದಂತೆ ಅದನ್ನು ಇನ್ವೆಸ್ಟ್ ಮಾಡಿದಲ್ಲಿ ಅದು 15 ವರ್ಷಗಳಲ್ಲಿ 20 ಲಕ್ಷ ರೂಪಾಯಿಗಳಾಗಿ ಬೆಳೆಯುತ್ತದೆ.

3. ತಿಂಗಳಲ್ಲಿ ಒಮ್ಮೆ ಸಿನೆಮಾ ನೋಡದಿರಿ
 

3. ತಿಂಗಳಲ್ಲಿ ಒಮ್ಮೆ ಸಿನೆಮಾ ನೋಡದಿರಿ

ಸಿನೆಮಾ ನೋಡುವುದನ್ನೇ ಬಿಟ್ಟು ಬಿಡಬೇಕು ಎಂದೇನಿಲ್ಲ. ಆಗಾಗ ಹೋಗುವುದನ್ನು ತಪ್ಪಿಸಿ ತಿಂಗಳಿಗೆ ಒಮ್ಮೆ ನೋಡಿದರೆ ಸಾಕು. ದಂಪತಿ ಹಾಗೂ ಇಬ್ಬರು ಮಕ್ಕಳು ಒಮ್ಮೆ ಸಿನೆಮಾ ನೋಡಲು ಹೋದರೆ ಕಡಿಮೆ ಎಂದರೂ 1500 ರೂಪಾಯಿ ಖರ್ಚಾಗುತ್ತವೆ. ಇದನ್ನೇ ಉಳಿಸಿ ಇಕ್ವಿಟಿ ಫಂಡ್‌ನಲ್ಲಿ ಹಾಕಿದರೆ ಈ ಹಣ 20 ವರ್ಷಗಳಲ್ಲಿ 22 ಲಕ್ಷ ರೂಪಾಯಿಗಳಾಗುತ್ತವೆ.

4. ಒಂದು ಬಾರಿ ಕುಟುಂದೊಂದಿಗೆ ರೆಸ್ಟೋರೆಂಟ್‌ಗೆ ಹೋಗುವುದನ್ನು ತಪ್ಪಿಸಿ

4. ಒಂದು ಬಾರಿ ಕುಟುಂದೊಂದಿಗೆ ರೆಸ್ಟೋರೆಂಟ್‌ಗೆ ಹೋಗುವುದನ್ನು ತಪ್ಪಿಸಿ

ಸಾಮಾನ್ಯವಾಗಿ ಮಧ್ಯಮ ವರ್ಗದ ಒಂದು ಕುಟುಂಬ ರಿಲ್ಯಾಕ್ಸ್‌ಗಾಗಿ ಒಮ್ಮೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದರೆ ಕನಿಷ್ಠ 1500 ರೂಪಾಯಿ ಖರ್ಚಾಗುತ್ತದೆ. ಆಗಾಗ ಹೋಗುವ ಬದಲು ತಿಂಗಳಿಗೊಮ್ಮೆ ಮಾತ್ರ ಹೊರಗೆ ಊಟ ಮಾಡಿದರೆ ಸಾಕು. ಹೀಗೆ ಮಾಡಿ ಉಳಿಸಿದ ಹಣವನ್ನು ಹೂಡಿಕೆ ಮಾಡಿದರೆ ಮೇಲೆ ತಿಳಿಸಿದಂತೆ ಮತ್ತೆ 20 ವರ್ಷಗಳಲ್ಲಿ 22 ಲಕ್ಷ ರೂಪಾಯಿ ಗಳಿಸಬಹುದು.

5. ಡ್ರಿಂಕ್ಸ್ ಮೇಲಿನ ಅನಗತ್ಯ ಖರ್ಚು ತಗ್ಗಿಸಿ

5. ಡ್ರಿಂಕ್ಸ್ ಮೇಲಿನ ಅನಗತ್ಯ ಖರ್ಚು ತಗ್ಗಿಸಿ

ಮದ್ಯಪಾನ ಆರೋಗ್ಯಕ್ಕೆ ಹಾನಿಕರವಾಗಿದ್ದು, ಈ ಅಭ್ಯಾಸ ಬಿಟ್ಟು ಬಿಡುವುದೇ ಒಳಿತು. ಆದರೂ ಕುಡಿತ ಅಭ್ಯಾಸವಾಗಿದ್ದರೆ, ಆಗಾಗ ಕುಡಿಯುವುದನ್ನು ಬಿಟ್ಟು ಬಿಡಿ. ಜೊತೆಗೆ ಕುಡಿತದ ಪ್ರಮಾಣವನ್ನು ಕಡಿಮೆಗೊಳಿಸುತ್ತ ಬನ್ನಿ. ಇದರಿಂದ ನೀವು ತಿಂಗಳಿಗೆ 1 ಸಾವಿರ ರೂಪಾಯಿ ಉಳಿಸಿ, ಅದನ್ನು ಎಸ್‌ಐಪಿ ಮೂಲಕ ಇಕ್ವಿಟಿ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಅದು 20 ವರ್ಷಗಳಲ್ಲಿ 15 ಲಕ್ಷ ರೂಪಾಯಿ ಆಗುತ್ತದೆ.

6. ಆಸೆಗೆ ಬಿದ್ದು ಖರೀದಿಸುವ ಚಟ ಬೇಡ

6. ಆಸೆಗೆ ಬಿದ್ದು ಖರೀದಿಸುವ ಚಟ ಬೇಡ

ಆನ್‌ಲೈನ್ ಮೂಲಕ ಖರೀದಿ ಮಾಡುವ ಖಯಾಲಿ ಇತ್ತೀಚಿನ ದಿನಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇಲ್ಲಿ ವಸ್ತುಗಳು ಕಡಿಮೆ ದರದಲ್ಲಿ ಸಿಗುತ್ತವೆ ಎಂಬುದು ನಿಜವಾದರೂ, ಮೊಬೈಲ್‌ನಲ್ಲಿ ಒಂದು ಕ್ಲಿಕ್ ಮೂಲಕ ಖರೀದಿಸುವ ಸವಲತ್ತಿನಿಂದ ಯಾವ್ಯಾವುದೋ ವಸ್ತುಗಳನ್ನು ಆಸೆಗೆ ಬಿದ್ದು, ಹಠಾತ್ ಆಗಿ ಖರೀದಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅದರಲ್ಲೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಗೆ ವಿಶೇಷ ಆಫರ್ ಬೇರೆ ಸಿಗುವುದರಿಂದ ಕೆಲವೊಮ್ಮೆ ಆಮಿಷಕ್ಕೆ ಬಿದ್ದು, ಬೇಡವಾದ ವಸ್ತುಗಳನ್ನು ಸಹ ಖರೀದಿಸುವಂತಾಗುತ್ತದೆ.
ಈಗ ಹಣವಿಲ್ಲದಿದ್ದರೂ ವಸ್ತು ಖರೀದಿಸಿ ನಂತರ ಪಾವತಿ ಮಾಡುವ ಅವಕಾಶವನ್ನು ಕ್ರೆಡಿಟ್ ಕಾರ್ಡ್‌ಗಳು ನೀಡುತ್ತವೆ. ಆದರೆ ಕ್ರೆಡಿಟ್ ಕಾರ್ಡ್‌ಗಳು ವಾರ್ಷಿಕ ಶೇ. 36ಕ್ಕೂ ಹೆಚ್ಚಿನ ಬಡ್ಡಿದರವನ್ನು ನೀವು ಖರ್ಚು ಮಾಡಿದ ಹಣಕ್ಕೆ ವಿಧಿಸುತ್ತವೆ ಎಂಬುದನ್ನು ಗಮನಿಸಲೇಬೇಕು. ಆದ್ದರಿಂದ ಹೀಗೆ ಹಠಾತ್ ಆಗಿ ಏನೇನೋ ಖರೀದಿ ಮಾಡುವುದನ್ನು ತಪ್ಪಿಸಿದರೆ, ತಿಂಗಳಿಗೆ ಕನಿಷ್ಠ 2 ಸಾವಿರ ರೂಪಾಯಿ ಉಳಿಸಬಹುದು. ಹೀಗೆ ಉಳಿಸಿದ 2 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದಲ್ಲಿ 20 ವರ್ಷಗಳಲ್ಲಿ ಈ ಹಣ 30 ಲಕ್ಷ ರೂಪಾಯಿಗಳಾಗುತ್ತದೆ.

7. ಆಹಾರ ವ್ಯರ್ಥ ತಪ್ಪಿಸಿ, ವಿದ್ಯುಚ್ಛಕ್ತಿ ಬಳಕೆ ನಿಯಂತ್ರಿಸಿ

7. ಆಹಾರ ವ್ಯರ್ಥ ತಪ್ಪಿಸಿ, ವಿದ್ಯುಚ್ಛಕ್ತಿ ಬಳಕೆ ನಿಯಂತ್ರಿಸಿ

ಇಂದು ಬಹುತೇಕ ಮನೆಗಳಲ್ಲಿ ನಿತ್ಯ ಮಾಡಿದ ಅಡುಗೆಯನ್ನು ಕೆಡಿಸಿ, ಹೊರಗೆ ಚೆಲ್ಲಲಾಗುತ್ತಿದೆ. ಇದರ ಬಗ್ಗೆ ಸ್ವಲ್ಪ ಅವಲೋಕಿಸಿ ಹೆಚ್ಚುವರಿ ಅಡುಗೆ ಮಾಡಿ, ಅದನ್ನು ತಿನ್ನದೆ ಕೆಡಿಸುವುದನ್ನು ತಪ್ಪಿಸಲು ಮುಂದಾಗಬೇಕು. ಹೀಗೆ ಮಾಡಿ ತಿಂಗಳಿಗೆ 1 ಸಾವಿರ ರೂ. ಉಳಿಸಿ ಮ್ಯುಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಈ ಹಣ 20 ವರ್ಷಗಳಲ್ಲಿ 15 ಲಕ್ಷ ರೂಪಾಯಿಗಳಾಗಿ ಬೆಳೆಯುತ್ತದೆ.
ಆಹಾರದ ಮಿತವ್ಯಯಕ್ಕೆ, ಆಹಾರ ಕೆಡದಂತೆ ಇಡಲು ಫ್ರಿಜ್ ಬಳಸಬೇಕು. ಅದೇ ರಿತಿ ಮೈಕ್ರೊವೇವ್ ಓವನ್ ಬಳಕೆ ಹೆಚ್ಚಿಸಬೇಕು. ಜೊತೆಗೆ ಒಂದು ಹೊತ್ತಿಗೆ ಮನೆ ಮಂದಿಗೆ ಬೇಕಾಗುವ ಆಹಾರದ ಪ್ರಮಾಣ ಎಷ್ಟು ಎಂಬುದರ ಬಗ್ಗೆ ಒಂದು ಸರಿಯಾದ ಲೆಕ್ಕ ಮಾಡಿ ಇಟ್ಟುಕೊಳ್ಳಬೇಕು.

ನಿಮಗೆ ಸಿಗುವ ಫಲಿತಾಂಶಗಳು ಹೀಗಿವೆ:

ನಿಮಗೆ ಸಿಗುವ ಫಲಿತಾಂಶಗಳು ಹೀಗಿವೆ:

ಮೇಲೆ ತಿಳಿಸಲಾದ ಏಳು ಚಿಕ್ಕ ಕ್ರಮಗಳಿಂದ ನೀವು 20 ವರ್ಷಗಳಲ್ಲಿ 1.3 ಕೋಟಿ ರೂಪಾಯಿ ನಿಧಿ ಸಂಗ್ರಹಿಸಬಹುದು. ನಿತ್ಯ ಮಾಡುತ್ತಿರುವುದನ್ನು ತಿಂಗಳಲ್ಲಿ ಕೇವಲ ಒಂದು ಬಾರಿ ಮಾಡದೆ ಇಷ್ಟು ಹಣ ಸೇರಿಸಬಹುದು.
- ನಿಮಗೆ ಗೊತ್ತಾಗದೆ ಬೆಳೆಯುತ್ತಿರುವ ಈ ಹಣ ಮುಂದೆ ಯಾವುದೋ ಆಪತ್ಕಾಲದಲ್ಲಿ ಸಹಾಯಕ್ಕೆ ಬರಬಹುದು. ಕುಟುಂಬದೊಂದಿಗೆ ನೀವು ಸುಂದರವಾದ ಕ್ಷಣಗಳನ್ನು ಕಳೆಯಬಹುದು. ಅದರಲ್ಲೂ ಪತ್ನಿ, ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಡಬಹುದು.
- ತಿಂಗಳಲ್ಲಿ ಒಂದು ಬಾರಿ ಖರ್ಚು ಮಾಡುವುದನ್ನು ತಪ್ಪಿಸಿದಾಗ ಸಹಜವಾಗಿ ಮಕ್ಕಳು ಈ ಬಗ್ಗೆ ಪ್ರಶ್ನಿಸಲಾರಂಭಿಸುತ್ತಾರೆ. ಈ ಹಂತದಲ್ಲಿ ಮಕ್ಕಳಿಗೂ ಆರ್ಥಿಕ ಶಿಸ್ತಿನ ಬಗ್ಗೆ ತಿಳುವಳಿಕೆ ಮೂಡಿಸಿ, ಉಳಿಸಿದ ಹಣ ದೀರ್ಘಾವಧಿಯಲ್ಲಿ ಎಷ್ಟು ದೊಡ್ಡ ಮೊತ್ತವಾಗಿ ಬೆಳೆಯುತ್ತದೆ ಎಂಬ ಜ್ಞಾನ ನೀಡಬೇಕು.
ಇದು ಮಕ್ಕಳಲ್ಲಿ ಹಣದ ನಿಜವಾದ ಮೌಲ್ಯದ ಬಗ್ಗೆ ಅರಿವು ಮೂಡಿಸಿ, ಅವರು ಪ್ರಜ್ಞಾವಂತ ನಾಗರಿಕರಾಗಲು ಸಹಕಾರಿಯಾಗುತ್ತದೆ.

English summary

Avoiding These 7 things once a month can make you a Crorepati

Let me first tell you that Rs 1.3 crore can be easily built if you and your family members start avoiding seven things, and that too, only once a month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X