For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿನ 2018ರ ಬೆಸ್ಟ್ ಆರೋಗ್ಯ ವಿಮಾ ಯೋಜನೆಗಳು

ಪ್ರತಿಯೊಬ್ಬ ವ್ಯಕ್ತಿಗೆ ಮತ್ತು ಕುಟುಂಬಕ್ಕೆ ಅನುಕೂಲಕರವಾಗುವಂತಹ ಹಾಗೂ ಭಾರತದಲ್ಲಿ ಈ 2018ರಲ್ಲಿ ಅಗ್ರಮಾನ್ಯವೆನಿಸಿರುವ ಜೀವ ವಿಮಾ ಯೋಜನೆಗಳ ಪಟ್ಟಿ ಇಲ್ಲಿದೆ.

|

ಭಾರತದಲ್ಲಿ ಅತ್ಯಂತ ಹೆಚ್ಚಿನ ವೈದ್ಯಕೀಯ ಖರ್ಚುವೆಚ್ಚಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಒಂದು ಒಳ್ಳೆಯ ಜೀವ ವಿಮಾ ಯೋಜನೆ ಮಾಡಿಸುವುದು. ನವೀನ ರೀತಿಯ ಜೀವನ ಶೈಲಿ ಮತ್ತು ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ನಾವು ನಮ್ಮ ಜೀವನವನ್ನು ಅಯೋಮಯಗೊಳಿಸುತ್ತಿದ್ದೇವೆ.

ಇಂದು ಆರೋಗ್ಯವಾಗಿರುವ ವ್ಯಕ್ತಿಯು ನಾಳೆ ಆಸ್ಪತ್ರೆಗೆ ಸೇರಬಹುದಾದಂತಹ ಪರಿಸ್ಥಿತಿ ಬರಬಹುದು. ಹೆಚ್ಚೆಚ್ಚು ವೈದ್ಯಕೀಯ ಖರ್ಚು ವೆಚ್ಚಗಳು ನಮ್ಮನ್ನು ಹಣಕಾಸಿನ ವಿಷಯದಲ್ಲಿ ಕುಗ್ಗುವಂತೆ ಮಾಡಬಹುದು. ಇಂತಹ ವ್ಯಕ್ತಿಗಳಿಗಾಗಿ ಕೆಲವು ಆರೋಗ್ಯ ವಿಮಾ ಯೋಜನೆಗಳಿವೆ.

ಆಸ್ಪತ್ರೆಗೆ ಸೇರಿದ ಸಂದರ್ಭದಲ್ಲಿ ಅಲ್ಲಿಯ ಖರ್ಚು ವೆಚ್ಚಗಳನ್ನು ಭರಿಸಲು ಈ ಕೆಳಗಿನ ಜೀವ ವಿಮಾ ಯೋಜನೆಗಳು ಸಹಾಯವಾಗುತ್ತವೆ. ಜೀವ ವಿಮಾ ಯೋಜನೆಯನ್ನು ಒದಗಿಸುವಂತಹ ಅನೇಕ ಕಂಪನಿಗಳಿದ್ದು, ಅವು ನಾನಾ ರೀತಿಯ ಉತ್ತಮವಾದ ಮೆಡಿಕ್ಲೈಮ್ ಯೋಜನೆಗಳು ಅಥವಾ ಜೀವ ವಿಮಾ ಯೋಜನೆಗಳನ್ನು ಒದಗಿಸಿಕೊಡುತ್ತವೆ. ಪ್ರತಿ ತಿಂಗಳು ನಿರಂತರ ಆದಾಯ ಬೇಕೆ?

2018ರಲ್ಲಿ ಭಾರತದಲ್ಲಿ ಯಾವ ಜೀವ ವಿಮಾ ಯೋಜನೆಗಳು ಅತ್ಯಂತ ಉತ್ತಮವಾದವುಗಳು? ಇಂತಹ ಅಗ್ರಸ್ಥಾನದಲ್ಲಿರುವ ಜೀವ ವಿಮಾ ಯೋಜನೆಗಳ ಪ್ರಮುಖ ಅಂಶಗಳು ಯಾವುವು? ಪ್ರತಿಯೊಬ್ಬ ವ್ಯಕ್ತಿಗೆ ಮತ್ತು ಕುಟುಂಬಕ್ಕೆ ಅನುಕೂಲಕರವಾಗುವಂತಹ ಹಾಗೂ ಭಾರತದಲ್ಲಿ ಈ 2018ರಲ್ಲಿ ಅಗ್ರಮಾನ್ಯವೆನಿಸಿರುವ ಜೀವ ವಿಮಾ ಯೋಜನೆಗಳ ಪಟ್ಟಿ ಈ ರೀತಿಯಿದೆ..

ಭಾರತದಲ್ಲಿ ಉತ್ತಮ ಜೀವ ವಿಮಾ ಯೋಜನೆಯನ್ನು ಆಯ್ಕೆ ಮಾಡುವುದು ಹೇಗೆ?

ಭಾರತದಲ್ಲಿ ಉತ್ತಮ ಜೀವ ವಿಮಾ ಯೋಜನೆಯನ್ನು ಆಯ್ಕೆ ಮಾಡುವುದು ಹೇಗೆ?

ಭಾರತದಲ್ಲಿ ಉತ್ತಮ ಆರೋಗ್ಯ ವಿಮೆ ಯೋಜನೆ ಆಯ್ಕೆ ಮಾಡುವಾಗ ಪರಿಗಣಿಸಬಹುದಾದ ಕೆಲವು ಪ್ರಮುಖ ಅಂಕಿ ಅಂಶಗಳಿವೆ.
1. ಪ್ರೀಮಿಯಂಗಳು- ಪ್ರೀಮಿಯಂಗಳು ಕಡಿಮೆಯಾದಷ್ಟು ನಮಗೆ ಉತ್ತಮ.
2. ಸಹ ಪಾವತಿ- ವಿಮಾದಾರನು ಆಸ್ಪತ್ರೆ ಸೇರಿದಲ್ಲಿ ಆಸ್ಪತ್ರೆಯ ಒಟ್ಟು ಖರ್ಚು ವೆಚ್ಚದ ಶೇ. 10 ಅಥವಾ 20% ಹಣವನ್ನು ಈ ಸಹಪಾವತಿ ಯೋಜನೆಯಡಿಯಲ್ಲಿ ತನ್ನ ಜೇಬಿನಿಂದ ಪಾವತಿಸಬೇಕಾಗುತ್ತದೆ.
3. ಕ್ಲೈಂ ಬೋನಸ್ ಇಲ್ಲ- ಹೆಚ್ಚಿನ ಮಟ್ಟದಲ್ಲಿ ಕ್ಲೈಮ್ ಬೋನಸ್ ಇಲ್ಲದೇ ಇದ್ದಷ್ಟು ಉತ್ತಮ.
4. ಪೂರ್ವ ಅಸ್ತಿತ್ವದಲ್ಲಿರುವ ವೈದ್ಯಕೀಯ ಸ್ಥಿತಿಗಳಿಗಾಗಿ ಕಾಯುವಿಕೆ- ಕಡಿಮೆ ಕಾಯುವಿಕೆಯ ಅವಧಿ ಇದ್ದಷ್ಟು ಉತ್ತಮ.
5. ನಿರ್ದಿಷ್ಟ ರೋಗಗಳಿಗೆ ಕಾಲಾವಧಿಯ ನಿರೀಕ್ಷಣೆ- ಕಡಿಮೆ ನಿರೀಕ್ಷಣೆಯ ಅವಧಿ ಇದ್ದಷ್ಟು ಉತ್ತಮ.
6. ವಿಮಾದಾರನ ಪರಿಹಾರದ ಹಕ್ಕಿನ ಹಣದ ಅನುಪಾತ- ಪರಿಹಾರದ ಹಣದ ಅನುಪಾತ ಹೆಚ್ಚಿನ ಪ್ರಮಾಣದಲ್ಲಿದ್ದಷ್ಟು ಉತ್ತಮ. ವಿಮಾ ಕಂಪನಿಯವರು ನಿಮಗೆ ಭವಿಷ್ಯದಲ್ಲಿ ಅವಶ್ಯಕತೆ ಇದ್ದಾಗ ಹೆಚ್ಚಿನ ಹಣವನ್ನು ಪರಿಹಾರದ ರೂಪದಲ್ಲಿ ಕೊಡುತ್ತಾರೆ.
7. ಗರಿಷ್ಟ ವಯೋಮಿತಿ- 65 ವರ್ಷಗಳ ಅಥವಾ 70 ವರ್ಷಗಳು ಅಥವಾ 80 ವರ್ಷಗಳ ಗರಿಷ್ಠ ವಯಸ್ಸಿನ ಅವಧಿಗಳಲ್ಲಿಯೂ ಅನ್ವಯವಾಗುವಂತಹ ರಕ್ಷಕ ವಿಮಾ ಯೋಜನೆಗಳು ಉತ್ತಮ.
8. ಆಪತ್ತಿನ ಸಮಯದ ಚಾಲಕ- ಆಪತ್ತಿನ ಅಂದರೆ ಕೆಲವು ಸೂಕ್ಷ್ಮವಾದ ಕಾಯಿಲೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಮೆಯ ಹಣವು ಭರಿಸಲ್ಪಟ್ಟರೆ ಅದು ಉತ್ತಮವಾದ ವಿಮೆ ಎಂದರ್ಥ.
ಆದರೂ ಮೇಲೆ ಹೇಳಲಾದ ಎಲ್ಲಾ ವ್ಯವಸ್ಥೆಗಳು ಗುಣ ಲಕ್ಷಣಗಳು ಒಂದೇ ವಿಮಾ ಯೋಜನೆಯಡಿಯಲ್ಲಿ ಬರುವುದು ಅಸಾಧ್ಯ. ಆದುದರಿಂದ ಮೇಲೆ ಹೇಳಲಾದ ಅಂಶಗಳು ಯಾವ ವಿಮಾ ಯೋಜನೆಯಡಿಯಲ್ಲಿ ಬರುತ್ತವೋ ಅಂತಹ ಜೀವ ವಿಮಾ ಯೋಜನೆಗಳನ್ನು ಆಯ್ಕೆ ಮಾಡುವುದು ಸೂಕ್ತ.

2018 ರಲ್ಲಿ ಭಾರತದಲ್ಲಿ ಉತ್ತಮ ಆರೋಗ್ಯ ವಿಮಾ ಯೋಜನೆಗಳು- ವೈಯಕ್ತಿಕ ಯೋಜನೆ

2018 ರಲ್ಲಿ ಭಾರತದಲ್ಲಿ ಉತ್ತಮ ಆರೋಗ್ಯ ವಿಮಾ ಯೋಜನೆಗಳು- ವೈಯಕ್ತಿಕ ಯೋಜನೆ

1. ರೆಲೀಗರ್ ಆರೋಗ್ಯ ವಿಮೆ- ಕೇರ್ ಪ್ಲಾನ್

ರೆಲೀಗರ್ ನ ಆರೋಗ್ಯ ವಿಮಾ ಯೋಜನೆ
" ಕೇರ್" ಯಾವುದೇ ವಯಸ್ಸಿನ ಮಿತಿಯಿಲ್ಲದೆ 91 ದಿನಗಳ ನಂತರ ಮಾಡಿಸಬಹುದು. ಯಾವುದೇ ವ್ಯಕ್ತಿಯು ಇದನ್ನು ಯಾವುದೇ ಸಮಯದಲ್ಲಿ ಖರೀದಿಸಬಹುದು ಎಂದರ್ಥ.
ಕನಿಷ್ಟ ಭರವಸೆಯ ಮೊತ್ತ ರೂ. 2 ಲಕ್ಷಗಳಾಗಿದ್ದು, ಗರಿಷ್ಟ ಭರವಸೆಯ ಒಟ್ಟು ಮೊತ್ತವು 60 ಲಕ್ಷಗಳಷ್ಟು ಆಗಿರುತ್ತದೆ.

ಪೂರ್ವ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳಿಗಾಗಿ ನಿರೀಕ್ಷಿಸಲಾಗುವ ಅವಧಿಯು 4 ವರ್ಷಗಳಾಗಿರುತ್ತದೆ.ವಿಮೆ ಮಾಡಲಾದ ಒಟ್ಟು ಹಣವು ಆಯಾ ವರ್ಷಗಳ ಮಿತಿ ಮುಗಿದ ಮೇಲೆ ನವೀಕರಣ ಮಾಡಲಾಗುತ್ತದೆ. ಇದು ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಪ್ರತೀ ವರ್ಷ ಒದಗಿಸುತ್ತದೆ.
ಶೇ. 50 ರಿಂದ ಶೇ. 150 ರಷ್ಟು ಹಕ್ಕು ಬೋನಸ್ ಲಭ್ಯವಿರುವುದಿಲ್ಲ.
ಈ ಯೋಜನೆಯು ಆಂಬುಲೆನ್ಸ್ ವೆಚ್ಚಗಳನ್ನು ಒಳಗೊಳ್ಳುತ್ತದೆ.
ಈ ಯೋಜನೆಯು 2 ವರ್ಷದ ಪಾಲಿಸಿ ಅವಧಿಗೆ 7.5% ರಷ್ಟು ರಿಯಾಯತಿ ನೀಡುತ್ತವೆ. ಯಾವುದೇ ನಿರ್ಬಂಧವಿಲ್ಲದೆ ಜಗತ್ತಿನ ಯಾವುದೇ ಸ್ಥಳದಲ್ಲಿಯೂ ಚಿಕಿತ್ಸೆ ಪಡೆಯಬಹುದಾಗಿದೆ.
ಹಣ ಪಾವತಿ ಮಾಡದೇ ಚಿಕಿತ್ಸೆ ನೀಡುವಂತಹ ದೈನಂದಿನ ಭತ್ಯೆಗಳನ್ನು ಒದಗಿಸಲಾಗುತ್ತದೆ.
ಆಜೀವ ನವೀಕರಣ, ಅಂದರೆ ಇಲ್ಲಿ ಗರಿಷ್ಟ ವಯೋಮಿತಿ ಇರುವುದಿಲ್ಲ.
ಈ ವಿಮೆಯ ಸಾಮಾನ್ಯ ಲಕ್ಷಣಗಳೆಂದರೆ ಒಳರೋಗಿಯ ಆಸ್ಪತ್ರೆಗೆ ಸಂಬಂಧಿಸಿದ ವೆಚ್ಚಗಳು, ಪೂರ್ವ ಅಥವಾ ನಂತರ ಆಸ್ಪತ್ರೆಗೆ ಸೇರಿದ ಖರ್ಚುವೆಚ್ಚಗಳು, ದಿನದ ಆರೈಕೆಯ ವೆಚ್ಚಗಳು, ಬಳಸಲಾದ ಪ್ರತೀ ಸೇವೆಗೆ ಆ ವರ್ಷದ ಉಚಿತ ಮತ್ತು ಆದಾಯ ತೆರಿಗೆಯ ಪ್ರಯೋಜನವನ್ನು ಯು/ಎಸ್ 80 ಡಿ ಈ ಯೋಜನೆಯಡಿಯಲ್ಲಿ ಲಭ್ಯವಿರುವುದು.
ಇದರ ಪ್ರೀಮಿಯಂ ಹಣವು ತುಂಬಾ ಕಡಿಮೆಯಾಗಿದ್ದು, ಇದು ವರ್ಷಕ್ಕೆ ರೂ. 2,300 ಗಳು ಆಗಿರುತ್ತದೆ. ಅವರವರ ವಯೋಮಿತಿಗಳಿಗನುಗುಣವಾಗಿ ಈ ಯೋಜನೆಯಡಿಯಲ್ಲಿ ಅನ್ವಯವಾಗುವ ಪ್ರೀಮಿಯಂ ನ ಬಗ್ಗೆ ಪರಿಶೀಲಿಸಿಕೊಳ್ಳಬಹುದು.

ಯೋಜನೆ ಅನಾನುಕೂಲಗಳು
ಈ ಯೋಜನೆಯಲ್ಲಿ ಇರುವ ಅನಾನುಕೂಲಗಳು
ಮೊದಲೆ ಅಸ್ತಿತ್ವದಲ್ಲಿರುವ ಖಾಯಿಲೆಗಳ ವ್ಯಾಪ್ತಿಗೆ ಬರುವ ಹಣ ಪಡೆಯಲು 4 ವರ್ಷಗಳು ಕಾಯಬೇಕಾಗುವುದು.
ವಿಮಾದಾರನು 61 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಕ್ಲೈಮ್ ಮೊತ್ತದ 20% ರಷ್ಟು ಸಹ ಪಾವತಿ ಹಣದಲ್ಲಿ ಕಡಿತಗೊಳಿಸಲಾಗುವುದು. ಕೆಲವು ಸ್ವಯಂಕೃತವಾಗಿ ಮಾಡಿಕೊಂಡ ಗಾಯಗಳು, ಮಾದಕ ದ್ರವ್ಯ, ದಂತದ ಸಮಸ್ಯೆ, ಏಡ್ಸ್ ಮುಂತಾದ ಕೆಲವು ಸಂದರ್ಭಗಳಲ್ಲಿ ವಿಮೆಯ ಸೌಲಭ್ಯಗಳಿಗೆ ನಿರಾಕರಣೆ ಮಾಡಲಾಗುವುದು.

2. ಸ್ಟಾರ್ ಹೆಲ್ತ್- Senior Citizens Red Carpet

2. ಸ್ಟಾರ್ ಹೆಲ್ತ್- Senior Citizens Red Carpet

ಸ್ಟಾರ್ ಹೆಲ್ತ್ ಇದು ಹಿರಿಯ ನಾಗರಿಕರಿಗೆ ರೆಡ್ ಕಾರ್ಪೆಟ್ ನಂತೆ (ಕೆಂಪುಹಾಸು) ಇದ್ದು, ಈ ವಿಮಾ ಯೋಜನೆಯು ಹಿರಿಯ ನಾಗರಿಕರಿಗಾಗಿಯೇ ರೂಪುಗೊಂಡಿರುವುದಾಗಿದೆ. ಈ ಯೋಜನೆಯ ಒಂದು ವಿಭಿನ್ನವಾದ ಅಂಶವೇನೆಂದರೆ ಇದರ ಸೌಲಭ್ಯವನ್ನು ಪಡೆಯುವ ವಯಸ್ಸಿನ ಅವಧಿಯನ್ನು 75 ವರ್ಷಗಳ ವರೆಗೂ ವಿಸ್ತರಿಸಲಾಗಿದೆ.
ಈ ಯೋಜನೆಗೆ ಪಡೆಯಲು ವಯೋಮಿತಿಯು 60 ರಿಂದ 75 ವರ್ಷಗಳವರೆಗಿನದ್ದಾಗಿದೆ. ಈ ಯೋಜನೆಯಲ್ಲಿ ನಿಗದಿಗೊಳಿಸಲಾಗುವ ಕನಿಷ್ಟ ಮೊತ್ತವು 1 ಲಕ್ಷ ಹಾಗೂ ಗರಿಷ್ಟ ನಿಗದಿಗೊಳಿಸಲಾದ ಮೊತ್ತ 10 ಲಕ್ಷ.
ಮೊದಲ ವರ್ಷದಿಂದಲೇ ಮೊದಲೇ ಅಸ್ತಿತ್ವದಲ್ಲಿರುವ ಖಾಯಿಲೆಗಳ ವ್ಯಾಪ್ತಿಗೆ ಈ ವಿಮೆಯು ಒಳಪಡುತ್ತದೆ.
ಒತ್ತಡ ಸಂಬಂದಿ ಖಾಯಿಲೆಗಳು, ಬಿಪಿ, ಸಕ್ಕರೆ, ರಕ್ತದ ಯೂರಿಯಾ ಮತ್ತು ಕ್ರಿಯಾಟೈನ್ ಗಳ ಪರೀಕ್ಷಾ ವರದಿಗಳ ಮೇಲೆ ಈ ಯೋಜನೆಯಲ್ಲಿ 10% ರಿಯಾಯತಿ ನೀಡಲಾಗುತ್ತದೆ
ಈ ಯೋಜನೆಯಡಿಯಲ್ಲಿ ವೈದ್ಯಕೀಯ ತಪಾಸಣೆಯ ಅವಶ್ಯಕತೆ ಇರುವುದಿಲ್ಲ. ಈ ಯೋಜನೆಯು ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ವೆಚ್ಚವನ್ನು ನೀಡುತ್ತದೆ.
ಔಪಚಾರಿಕ ಚಿಕಿತ್ಸೆಗಳೂ ಈ ಯೋಜನಡಿಯಲ್ಲಿ ಬರುತ್ತವೆ.
ಕೆಲವು ಸಾಮಾನ್ಯವಾದ ವಿಷಯಗಳಾದ ಒಳ ರೋಗಿಯಾಗಿ ಆಸ್ಪತ್ರೆಗೆ ದಾಖಲಾತಿಯ ಖರ್ಚುವೆಚ್ಚಗಳು, ಪೂರ್ವ ಮತ್ತು ನಂತರದ ಆಸ್ಪತ್ರೆಯ ದಾಖಲಾತಿಯ ಖರ್ಚು ವೆಚ್ಚಗಳು, ದಿನದ ಆರೈಕೆಯ ಖರ್ಚು ವೆಚ್ಚಗಳು ಮತ್ತು ಆದಾಯ ತೆರಿಗೆಯ ಸೌಲಭ್ಯಗಳು ಯು/ಎಸ್ 80ಡಿ ಯು ಈ ಯೋಜನೆಯಡಿಯಲ್ಲಿ ಲಭ್ಯವಿದೆ.

ಇದರ ಪ್ರೀಮಿಯಂ ತುಂಬಾ ಕಡಿಮೆಯಾಗಿದ್ದು, ವರ್ಷಕ್ಕೆ ರೂ. 4,500. ತಮ್ಮ ವಯೋಮಿತಿಗಳಿಗನುಗುಣವಾಗಿ ಪ್ರೀಮಿಯಂ ಅವರವರ ವಯೋಮಿತಿಗಳಿಗನುಗುಣವಾಗಿ ಈ ಯೋಜನೆಯಡಿಯಲ್ಲಿ ಅನ್ವಯವಾಗುವ ಪ್ರೀಮಿಯಂನ ಬಗ್ಗೆ ಪರಿಶೀಲಿಸಿಕೊಳ್ಳಬಹುದು. Incurred claim settlement ratio (ICR) is 61%

ಯೋಜನೆಯಲ್ಲಿರುವ ನ್ಯೂನ್ಯತೆಗಳು
ಕೆಲವು ಕಾಯಿಲೆಗಳಾದ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮುಂತಾದ ಮೊದಲೇ ಅಸ್ತಿತ್ವದಲ್ಲಿರುವ ರೋಗಗಳಿಗೆ 2 ವರ್ಷಗಳ ಕಾಯುವಿಕೆ ಮತ್ತು ಹರ್ನಿಯಾ ಪೈಲ್ಸ್ ನಂತಹ ಇತ್ಯಾದಿ ರೋಗಗಳಿಗೆ ಕಾಯುವಿಕೆಯ ಅವಧಿ 1 ವರ್ಷಗಳು.
ಪೂರ್ವ ಅಸ್ತಿತ್ವದಲ್ಲಿದ್ದ ರೋಗಗಳಿಗೆ ಸಹ ಪಾವತಿ 50% ರಷ್ಟು ಮತ್ತು ಇನ್ನಿತರ ರೋಗಗಳಿಗೆ ಶೇ. 30.

3. ನ್ಯೂ ಇಂಡಿಯಾ ಅಶ್ಯೂರೆನ್ಸ್- ಜನತಾ ಮೆಡಿಕ್ಲೈಮ್ ಪಾಲಿಸಿ

3. ನ್ಯೂ ಇಂಡಿಯಾ ಅಶ್ಯೂರೆನ್ಸ್- ಜನತಾ ಮೆಡಿಕ್ಲೈಮ್ ಪಾಲಿಸಿ

ಇದು ಎಲ್ಲರಿಗೂ ಕೈಗೆಟಕುವಂತಹ ಕಡಿಮೆ ದರದ ಪ್ರೀಮಿಯಂ ಇರುವ ಜೀವ ವಿಮಾ ಯೋಜನೆಯಾಗಿದ್ದು, ಇದು ಉಪಯುಕ್ತವಾದ ಕಡಿಮೆ ಮೊತ್ತದ ಅಶ್ಯೂರ್ಡ್ ಮೊತ್ತದ್ದಾಗಿದೆ.
ಇದನ್ನು 18 ರಿಂದ 65 ವರ್ಷ ವಯೋಮಿತಿಯ ಒಳಗಿನ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರಲ್ಲಿ ಸಿಗುವ ಮೊತ್ತವು ರೂ. 50,000 ಗಳಿಂದ ರೂ. 75,000ವರೆಗೆ.
ಈ ಯೋಜನೆಯಡಿಯಲ್ಲಿ ಆಂಬುಲೆನ್ಸ್ ವೆಚ್ಚಗಳನ್ನೂ ಸಹ ಒದಗಿಸಿಕೊಡಲಾಗುತ್ತದೆ.
ಈ ಯೋಜನೆಯು ಆಯುರ್ವೇದ/ಹೋಮಿಯೋಪತಿ ಮತ್ತು ಯುನಾನಿ ವೈದ್ಯಕೀಯ ರೀತಿಗಳ ಚಿಕಿತ್ಸೆಗಳಿಗೂ ಅನ್ವಯವಾಗುತ್ತದೆ.
ಕುಟುಂಬದ ಮಟ್ಟದಲ್ಲಿ ಯೋಜನೆಯನ್ನು ಪ್ರಾರಂಭಿಸಿದಲ್ಲಿ ಪ್ರೀಮಿಯಂನಲ್ಲಿ ರಿಯಾಯತಿ ಸಿಗಲಾಗುವುದು.
ಇದರಲ್ಲಿ ಲಾಯಲ್ಟಿ ರಿಯಾಯತಿ ಕೊಡುಗೆಗಳನ್ನು ನೀಡಲಾಗುವುದು.
ಈ ಯೋಜನೆಯಡಿಯಲ್ಲಿ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದ ರಿಯಾಯತಿ ನೀಡಲಾಗುವುದು.
ಸಂಚಿತ ಬೋನಸ್ ನೀಡಲಾಗುವುದು. ಆರೋಗ್ಯ ತಪಾಸಣೆಯ ವೆಚ್ಚಗಳನ್ನೂ ನೀಡಲಾಗುವುದು.

ಕೆಲವು ಸಾಮಾನ್ಯವಾದ ವಿಷಯಗಳಾದ ಒಳ ರೋಗಿಯಾಗಿ ಆಸ್ಪತ್ರೆಗೆ ದಾಖಲಾತಿಯ ಖರ್ಚುವೆಚ್ಚಗಳು, ಪೂರ್ವ ಮತ್ತು ನಂತರದ ಆಸ್ಪತ್ರೆಯ ದಾಖಲಾತಿಯ ಖರ್ಚು ವೆಚ್ಚಗಳು, ದಿನದ ಆರೈಕೆಯ ಖರ್ಚು ವೆಚ್ಚಗಳು ಮತ್ತು ಆದಾಯ ತೆರಿಗೆಯ ಸೌಲಭ್ಯಗಳು ಯು/ಎಸ್ 80ಡಿ ಯು ಈ ಯೋಜನೆಯಡಿಯಲ್ಲಿ ಲಭ್ಯವಿದೆ.

ಇದರಲ್ಲಿ ವರ್ಷಕ್ಕೆ 700 ರೂಪಾಯಿಗಳ ಅತ್ಯಂತ ಕಡಿಮೆ ಪ್ರೀಮಿಯಂ ದರವಿರುತ್ತದೆ. ಅವರವರ ವಯೋಮಿತಿಗಳಿಗನುಗುಣವಾಗಿ ಈ ಯೋಜನೆಯಡಿಯಲ್ಲಿ ಅನ್ವಯವಾಗುವ ಪ್ರೀಮಿಯಂ ನ ಬಗ್ಗೆ ಪರಿಶೀಲಿಸಿಕೊಳ್ಳ ಬಹುದು.

ಯೋಜನೆಯ ನ್ಯೂನ್ಯತೆಗಳು
ಮೊದಲೇ ಅಸ್ತಿತ್ವದಲ್ಲಿರುವ ಖಾಯಿಲೆಗಳಾದ ಕ್ಯಾಟರಾಕ್ಟ್, ಮಂಡಿಯ ಬದಲಾವಣೆಯ ಶಸ್ತ್ರಚಿಕಿತ್ಸೆ ಇತ್ಯಾದಿಗಳಿಗೆ ನಿರೀಕ್ಷಣೆಯ ಅವಧಿ 4 ವರ್ಷಗಳಾಗಿದ್ದು, ಇನ್ನು ಕೆಲವು ಕಾಯಿಲೆಗಳಾದ ಹರ್ನಿಯಾ, ಪೈಲ್ಸ್ ಇತ್ಯಾದಿಗಳಿಗೆ ನಿರೀಕ್ಷಣೆಯ ಅವಧಿ 2 ವರ್ಷಗಳಾಗಿರುತ್ತದೆ.
ಇನ್ನು ಕೆಲವು ನ್ಯೂನ್ಯತೆಗಳಲ್ಲಿ ಸ್ವಯಂಕೃತ ಗಾಯಗಳು, ಮದ್ಯಪಾನ/ ಔಷಧಿಗಳ ದುರ್ಬಳಕೆ, ದಂತದ ಸಮಸ್ಯೆ, ಏಡ್ಸ್ ಇತ್ಯಾದಿಗಳಿಗೆ ಈ ಯೋಜನೆಯು ಅನ್ವಯವಾಗುವುದಿಲ್ಲ.
ಇದರಲ್ಲಿ ಸಿಗುವ ಮೊತ್ತವು ಕಡಿಮೆ ಆದುದರಿಂದ ಈ ಯೋಜನೆಯು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವುದಿಲ್ಲ. ಈ ಯೋಜನೆಯಡಿಯಲ್ಲಿ ಕೇವಲ ಎರಡು ಮೊತ್ತದ ಆಶ್ವಾಸಿತ ರೂ. 50,000 ಮತ್ತು ರೂ. 75,000 ಮೊತ್ತವು ಲಭ್ಯವಿದೆ.

4. ಅಪೊಲೊ ಮ್ಯೂನಿಚ್ ಆಪ್ಟಿಮಾ ರಿಸ್ಟೊರ್

4. ಅಪೊಲೊ ಮ್ಯೂನಿಚ್ ಆಪ್ಟಿಮಾ ರಿಸ್ಟೊರ್

ಅಪೊಲೊ ಮ್ಯೂನಿಚ್ ಆಪ್ಟಿಮಾ ರಿಸ್ಟೊರ್ ಒಂದು ವಿಭಿನ್ನ ರೀತಿಯ ಜೀವ ವಿಮಾ ಯೋಜನೆಯಾಗಿದ್ದು, ಇಲ್ಲಿ ಯೋಜನೆಯ ಅವಧಿಯೊಳಗೆ ನಿಮಗೆ ಕೊಡಬೇಕಾದ ಮೊತ್ತವು ಖಾಲಿಯಾದಲ್ಲಿ ಯಾವುದೇ ಹೆಚ್ಚುವರಿ ಪ್ರೀಮಿಯಂಗಳಿಲ್ಲದೆ ಹೊಸದಾಗಿ ಮರು ಸಂಗ್ರಹಿಸಲ್ಪಡುತ್ತದೆ. ಇದು ಈ ಯೋಜನೆಯ ಪ್ರಮುಖವಾದ ಲಕ್ಷಣವಾಗಿದೆ.

ಪ್ರವೇಶದ ಕನಿಷ್ಟ ವಯಸ್ಸು 91 ದಿನಗಳು (proposer should be 18 years) ಮತ್ತು ಗರಿಷ್ಠ ವಯಸ್ಸು 65 ವರ್ಷಗಳು.
ಇಲ್ಲಿ ಕೊಡಲಾಗುವ ಕನಿಷ್ಟ ಮೊತ್ತ ರೂ. 3 ಲಕ್ಷ ಮತ್ತು ಗರಿಷ್ಟ ಮೊತ್ತ ರೂ. 15 ಲಕ್ಷ. ಈ ವಿಮೆಯ ಯೋಜನೆಯಡಿಯಲ್ಲಿ ಕುಟುಂಬದ 6 ಸದಸ್ಯರು ಈ ಲಾಭವನ್ನು ಪಡೆಯಬಹುದಾಗಿದೆ. ಆಸ್ಪತ್ರೆಗೆ ದಾಖಲಾತಿಯ ನಂತರದ ಖರ್ಚು ವೆಚ್ಚಗಳು ಸುಮಾರು 180 ದಿನಗಳವರೆಗೆ ಒಳಗೊಂಡಿದೆ. ಪೂರ್ವ ಅಸ್ತಿತ್ವದಲ್ಲಿರುವ ಖಾಯಿಲೆಗಳ ವ್ಯಾಪ್ತಿಯ ನಿರೀಕ್ಷಣಾ ಅವಧಿ 4 ವರ್ಷಗಳು. ಇಲ್ಲಿ ಯಾವುದೇ ಸಹಪಾವತಿಗೆ (ಕೋ ಪೇಮೆಂಟ್) ಅವಕಾಶವಿರುವುದಿಲ್ಲ.

ಕೊಠಡಿ ಬಾಡಿಗೆಗಳಲ್ಲಿ ಯಾವುದೇ ಉಪ ಮಿತಿಗಳಿಲ್ಲ. ಆಸ್ಪತ್ರೆಗೆ ಭರ್ತಿಯಾದಾಗ ದೈನಂದಿನ ನಗದು ಸೌಲಭ್ಯಗಳಿವೆ. ವಿಮರ್ಶಾತ್ಮಕ ಅನಾರೋಗ್ಯದ ರೋಗ ನಿರ್ಣಯದ ಮೇರೆಗೆ ಹೆಚ್ಚುವರಿ ಪ್ರಯೋಜನವನ್ನು ನೀಡುವ ಈ ಯೋಜನೆಯನ್ನು ಈ ಯೋಜನೆಯಡಿಯಲ್ಲಿ ಸೌಲಭ್ಯವಿದೆ.
ಪ್ರತೀ ವರ್ಷಕ್ಕೆ ಉಚಿತವಾಗಿ ಕ್ಲೈಮ್ ಮಾಡಲಾಗಿರುವ ಅಶ್ಯೂರ್ ಮಾಡಲಾಗಿರುವ ಮೂಲ ಮೊತ್ತದ 50% ರಷ್ಟಕ್ಕೆ ಬೋನಸ್ ಲಭ್ಯವಿರುವುದಿಲ್ಲ.
ಯೋಜನೆಯ ಅವಧಿ 2 ವರ್ಷಗಳಾಗಿದ್ದಲ್ಲಿ, ಪ್ರೀಮಿಯಂ ನಲ್ಲಿ 7.5% ರಷ್ಟು ರಿಯಾಯತಿಯನ್ನು ಕೊಡುಗೆಯಾಗಿ ನೀಡಲಾಗುವುದು.

ಕೆಲವು ಸಾಮಾನ್ಯವಾದ ವಿಷಯಗಳಾದ ಒಳ ರೋಗಿಯಾಗಿ ಆಸ್ಪತ್ರೆಗೆ ದಾಖಲಾತಿಯ ಖರ್ಚುವೆಚ್ಚಗಳು, ಪೂರ್ವ ಮತ್ತು ನಂತರದ ಆಸ್ಪತ್ರೆಯ ದಾಖಲಾತಿಯ ಖರ್ಚು ವೆಚ್ಚಗಳು, ದಿನದ ಆರೈಕೆಯ ಖರ್ಚು ವೆಚ್ಚಗಳು ಮತ್ತು ಆದಾಯ ತೆರಿಗೆಯ ಸೌಲಭ್ಯಗಳು ಯು/ಎಸ್ 80ಡಿ ಯು ಈ ಯೋಜನೆಯಡಿಯಲ್ಲಿ ಲಭ್ಯವಿದೆ. ಇದರಲ್ಲಿ ಪ್ರೀಮಿಯಂ ದರ ಕಡಿಮೆಯಾಗಿದ್ದು, ಪ್ರತೀ ವರ್ಷಕ್ಕೆ ರೂ. 5,000 ಆಗಿರುತ್ತದೆ.
ಅವರವರ ವಯೋಮಿತಿಗಳಿಗನುಗುಣವಾಗಿ ಈ ಯೋಜನೆಯಡಿಯಲ್ಲಿ ಅನ್ವಯವಾಗುವ ಪ್ರೀಮಿಯಂ ನ ಬಗ್ಗೆ ಪರಿಶೀಲಿಸಿಕೊಳ್ಳಬಹುದು. ವಿಮೆ ಮಾಡಲ್ಪಟ್ಟ ಕ್ಲೈಮ್ ನ ಪರಿಹಾರದ ಅನುಪಾತವು 55% ಆಗಿರುತ್ತದೆ.

ಯೋಜನೆಯ ನ್ಯೂನ್ಯತೆಗಳು
ಪೂರ್ವ ಅಸ್ತಿತ್ವದಲ್ಲಿರುವ ಖಾಯಿಲೆಗಳ ವ್ಯಾಪ್ತಿಯ ನಿರೀಕ್ಷಣಾ ಅವಧಿ 4 ವರ್ಷಗಳು. ವಿಮಾದಾರನು ಹೊಸ ಖಾಯಿಲೆಗೆ ಆಸ್ಪತ್ರೆಗೆ ಸೇರಿದ ಸಂದರ್ಭಗಳಲ್ಲಿ ಮಾತ್ರ ನಿಗದಿಯಾದ ಮೊತ್ತವು ಮರು ಸಂಗ್ರಹಿಸಲ್ಪಡುತ್ತದೆ. ಅಂದರೆ ವಿಮಾದಾರನು ನಿಗದಿಯಾದ ಮೊತ್ತದ ಎಲ್ಲಾ ಹಣವನ್ನು ಬಳಸಿಕೊಂಡಿದ್ದು, ಮತೆ ಪುನ: ಅದೇ ಖಾಯಿಲೆಗೆ ಆಸ್ಪತ್ರೆಗೆ ಸೇರಿದ ಸಂದರ್ಭದಲ್ಲಿ ಈ ಯೋಜನೆಯ ಸೌಲಭ್ಯವು ವಿಮಾದರರಿಗೆ ದೊರೆಯುವುದಿಲ್ಲ.
ಇನ್ನು ಕೆಲವು ನ್ಯೂನ್ಯತೆಗಳಲ್ಲಿ ಸ್ವಯಂಕೃತ ಗಾಯಗಳು, ಮದ್ಯಪಾನ/ ಔಷಧಿಗಳ ದುರ್ಬಳಕೆ, ದಂತದ ಸಮಸ್ಯೆ, ಏಡ್ಸ್ ಇತ್ಯಾದಿಗಳಿಗೆ ಈ ಯೋಜನೆಯು ಅನ್ವಯವಾಗುವುದಿಲ್ಲ.

ಕೊನೆಮಾತು

ಕೊನೆಮಾತು

ಮೇಲೆ ಪಟ್ಟಿ ಮಾಡಲಾದ ಜೀವ ವಿಮಾ ಯೋಜನೆಗಳು ಒಬ್ಬ ವ್ಯಕ್ತಿಗೆ ಅಥವಾ ಕುಟುಂಬಕ್ಕೆ ಅತ್ಯುತ್ತಮವಾದ ಯೋಜನೆಗಳಾಗಿವೆ. ನಾವು ಇಲ್ಲಿ ಕೆಲವು ಈ ಯೋಜನೆಗಳಿಗೆ ಸಂಭಂಧಿಸಿದ ಕೆಲವು ಮುಖ್ಯ ಅಂಶಗಳನ್ನು ತಿಳಿಯಪಡಿಸಿದ್ದೇವೆ.

ಉದಾಹರಣೆಗೆ ನಿಗದಿಯಾದ ಮೊತ್ತ, ಪ್ರವೇಶಿಸಲು ಅರ್ಹವಾದ ವಯೋಮಿತಿ, ಪೂರ್ವ - ನಂತರ ಆಸ್ಪತ್ರೆಗೆ ಸೇರುವ ಖರ್ಚು ವೆಚ್ಚಗಳು ಇತ್ಯಾದಿಗಳ ಬಗ್ಗೆ. ಆದರೆ ನೀವು ಈ ಯೋಜನೆಗಳಿಗೆ ಪ್ರವೇಶಿಸುವ ಮೊದಲು ಯೋಜನೆಯ ಮಾಹಿತಿಯ ಬಗ್ಗೆ ಓದಿ ನಂತರ ಖರೀದಿಸಿ.

English summary

Best Health Insurance Plans in India in 2018

There are a few key parameters that can be considered while choosing a good health insurance plan in India.
Story first published: Thursday, May 3, 2018, 10:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X