For Quick Alerts
ALLOW NOTIFICATIONS  
For Daily Alerts

ಪ್ರತಿ ತಿಂಗಳು ನಿರಂತರ ಆದಾಯ ಬೇಕೆ? ತಪ್ಪದೇ ಇಲ್ಲಿ ನೋಡಿ..

ಪ್ರತಿ ತಿಂಗಳು ಸಿಗುವ ನಿರಂತರ ಆದಾಯ ಅಂದರೆ ಪ್ರತಿಯೊಬ್ಬರಿಗೂ ಇಷ್ಟ. ನೌಕರಸ್ಥರಿಂದ ಹಿಡಿದು ಕೂಲಿ ಕಾರ್ಮಿಕರವರೆಗೂ ಎಲ್ಲರೂ ನಿರಂತರ ಆದಾಯಕ್ಕಾಗಿ ಹಂಬಲಿಸುತ್ತಾರೆ. ನಿಯಮಿತವಾದ ಆದಾಯವು ಯಾರಿಗೆ ತಾನೇ ಬೇಡ ಹೇಳಿ?

By Siddu
|

ಪ್ರತಿ ತಿಂಗಳು ಸಿಗುವ ನಿರಂತರ ಆದಾಯ ಅಂದರೆ ಪ್ರತಿಯೊಬ್ಬರಿಗೂ ಇಷ್ಟ. ನೌಕರಸ್ಥರಿಂದ ಹಿಡಿದು ಕೂಲಿ ಕಾರ್ಮಿಕರವರೆಗೂ ಎಲ್ಲರೂ ನಿರಂತರ ಆದಾಯಕ್ಕಾಗಿ ಹಂಬಲಿಸುತ್ತಾರೆ. ನನ್ನ ಸ್ನೇಹಿತನು ಓರ್ವ ವಾಣಿಜ್ಯೋದ್ಯಮಿಯಾಗಿದ್ದು, ಆತನ ಆದಾಯ ಗಳಿಕೆ ನಿಯಮಿತವಾಗಿಲ್ಲ. ಹೀಗಾಗಿ ಆತನು ನಿಯಮಿತವಾದ ತಿಂಗಳ ಆದಾಯವನ್ನು ಗಳಿಸುವುದಕ್ಕಾಗಿ ಹಣವನ್ನು ಹೂಡ ಬಯಸಿದ್ದಾನೆ.

 

ನಿಯಮಿತವಾದ ಆದಾಯವು ಯಾರಿಗೆ ತಾನೇ ಬೇಡ ಹೇಳಿ? ನೀವು ಕೂಡಾ ನಿಯಮಿತವಾದ ಆದಾಯ ಗಳಿಸಲು ಬಯಸಿದ್ದೀರೆಂದು ನನಗೆ ಗೊತ್ತಿದೆ. ಈ ವಿಚಾರದಲ್ಲಿ ನಿಮಗೆ ನೆರವಾಗುವ ನಿಟ್ಟಿನಲ್ಲಿ ನಾವು ವಿವಿಧ ಆಯ್ಕೆಗಳನ್ನು ಮೌಲ್ಯಮಾಪನ ಮಾಡಿದ್ದೇವೆ. ಅದರ ಫಲಶ್ರುತಿಯಾಗಿ, ಭಾರತದಲ್ಲಿ ನಿಯಮಿತವಾದ ತಿಂಗಳ ಆದಾಯವನ್ನು ಗಳಿಸಲು ನೆರವಾಗಬಲ್ಲ ಹತ್ತು ಅತ್ಯುತ್ತಮವಾದ ಹೂಡಿಕೆಗಳ ಆಯ್ಕೆಗಳನ್ನು ನಾವೀಗ ನಿಮಗಾಗಿ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ತಿಂಗಳಿಗೆ 5000 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ?

1. ಅಂಚೆ ಕಚೇರಿಯ ತಿಂಗಳ ಆದಾಯ ಯೋಜನೆ ( Post office MIS)

1. ಅಂಚೆ ಕಚೇರಿಯ ತಿಂಗಳ ಆದಾಯ ಯೋಜನೆ ( Post office MIS)

ಈ ಯೋಜನೆಯ ಹೆಸರೇ ಸೂಚಿಸುವಂತೆ, ಈ ಯೋಜನೆಯಲ್ಲಿ ಹಣವನ್ನು ಹೂಡುವುದರ ಮೂಲಕ ಖಚಿತವಾದ ಮಾಸಿಕ ರಿಟರ್ನ್ (ಆದಾಯ) ಅನ್ನು ಯಾರು ಬೇಕಾದರೂ ಪಡೆಯಬಹುದು. ಈ ಯೋಜನೆಯಡಿ ಆದಾಯ ದರವು 8% ರಷ್ಟಕ್ಕೆ ನಿಗದಿತಗೊಂಡಿದೆ. ಈ ಯೋಜನೆಯಡಿಯಲ್ಲಿ ಹೂಡಿಕೆಯ ಅವಧಿಯು 5 ವರ್ಷಗಳದ್ದಾಗಿರುತ್ತದೆ. ಹೂಡಿಕೆಯ ಅವಧಿಯ ಅಂತ್ಯದಲ್ಲಿ ಹೂಡಿಕೆದಾರರು ತಾವು ಹೂಡಿದ ಅಸಲು ಹಣದೊಂದಿಗೆ ಶೇ. 5% ರಷ್ಟು ಬೋನಸ್ ಅನ್ನೂ ಪಡೆದುಕೊಳ್ಳುವರು. ಒಂಟಿ ಖಾತೆದಾರರು ತಮ್ಮ ಖಾತೆಯಲ್ಲಿ ರೂ. 4.5 ಲಕ್ಷದವರೆಗೆ ಮಾತ್ರವೇ ಹೂಡಿಕೆ ಮಾಡಬಹುದು ಹಾಗೂ ಜಂಟಿ ಖಾತೆದಾರರು 9 ಲಕ್ಷ ರೂಪಾಯಿಗಳವರೆಗೆ ಹಣ ಹೂಡಬಹುದು.

ಎಂಐಎಸ್ ಗೆ ಒಂದು ಉದಾಹರಣೆ - ಮಿ. ಎಕ್ಸ್ ಎಂಬಾತ ಎಂ.ಐ.ಎಸ್ ನಲ್ಲಿ 3 ಲಕ್ಷ ರೂಪಾಯಿಗಳನ್ನು ಹೂಡಿದರೆ, ಆತನಿಗೆ ದೊರೆಯುವ ಮಾಸಿಕ ಆದಾಯವು ರೂ. 2000 ಗಳಷ್ಟಾಗಿರುತ್ತದೆ ಹಾಗೂ ಜೊತೆಗೆ ಹೂಡಿಕೆ ಹಣವು ಆರು ವರ್ಷಗಳ ಅಂತ್ಯದ ವೇಳೆಗೆ ಪರಿಪಕ್ವವಾದಾಗ, ಮಿ. ಎಕ್ಸ್ ಎಂಬಾತ 15000 ರೂಪಾಯಿಗಳನ್ನು ಹೆಚ್ಚುವರಿ ಬೋನಸ್ ನ ರೂಪದಲ್ಲಿ ಪಡೆದುಕೊಳ್ಳುತ್ತಾರೆ.

ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳುಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು

2. ಸ್ಥಿರ ಠೇವಣಿ ಅಥವಾ ಎಫ್ ಡಿ
 

2. ಸ್ಥಿರ ಠೇವಣಿ ಅಥವಾ ಎಫ್ ಡಿ

ಸ್ಥಿರ ಠೇವಣಿ ಅಥವಾ ಎಫ್ ಡಿ, ಕಡಿಮೆ ಪ್ರಮಾಣದ ರಿಸ್ಕ್ ಒಳಗೊಂಡಿರುವ ವಿತ್ತೀಯ ಹೂಡಿಕೆಯ ಸಾಧನವಾಗಿದ್ದು, ನಿಶ್ಚಿತ ದರದಲ್ಲಿ ಆದಾಯವನ್ನು ಗಳಿಸುವುದಕ್ಕಾಗಿ ನಿಶ್ಚಿತ ಕಾಲಾವಧಿಯವರೆಗೆ ಎಫ್ಡಿ ಯಲ್ಲಿ ಹಣ ಹೂಡಬಹುದಾಗಿದೆ. ಕಡಿಮೆ ಪ್ರಮಾಣದ ರಿಸ್ಕ್ ಅನ್ನು ಸಹಿಸಿಕೊಳ್ಳಬಲ್ಲ ಹಾಗೂ ನಿಶ್ಚಿತ ಬಡ್ಡಿದರವನ್ನು ಗಳಿಸುವುದಕ್ಕಾಗಿ ನಿಶ್ಚಿತ ಮೊತ್ತವನ್ನು ಹೂಡ ಬಯಸುವವರಿಗೆ ಹೇಳಿ ಮಾಡಿಸಿದಂತಹ ಅತ್ಯುತ್ತಮ ಯೋಜನೆಯಾಗಿದೆ.

ಸ್ಥಿರ ಠೇವಣಿಯು ಒಂದು ಅತ್ಯಂತ ಜನಪ್ರಿಯವಾದ ಹಣ ಹೂಡಿಕೆಯ ಆಯ್ಕೆಯಾಗಿದ್ದು, ಈ ಯೋಜನೆಯು ಮಾಸಿಕವಾಗಿ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಆದಾಯವನ್ನು ಗಳಿಸಿಕೊಡಬಲ್ಲದು. ಬಡ್ಡಿದರವು ಸ್ಥಿರ ಠೇವಣಿಯ ಕಾಲಾವಧಿಯನ್ನು ಅವಲಂಬಿಸಿರುತ್ತದೆ. ಬ್ಯಾಂಕ್ ಗಳಲ್ಲಿ ತೆರೆಯಲಾದ ಸ್ಥಿರ ಠೇವಣಿಗಳು ವಾರ್ಷಿಕವಾಗಿ ಶೇ. 8 ರಿಂದ ಶೇ. 9ರ ದರದಲ್ಲಿ ಆದಾಯವನ್ನು ಗಳಿಸಿಕೊಡಬಲ್ಲವು.

ಸ್ಥಿರ ಠೇವಣಿ ಯೋಜನೆಗೊಂದು ಉದಾಹರಣೆ - ಒಂದು ವೇಳೆ ಮಿ. ಎಕ್ಸ್, ಶೇ. 9ರ ವಾರ್ಷಿಕ ಬಡ್ಡಿದರದಲ್ಲಿ 1 ಲಕ್ಷ ರೂಪಾಯಿಗಳನ್ನು ಒಂದು ವರ್ಷದ ಅವಧಿಯವರೆಗೆ ಸ್ಥಿರ ಠೇವಣಿಯಲ್ಲಿ ಹೂಡಿದರೆಂದುಕೊಳ್ಳೋಣ. ಇಲ್ಲಿ ಮಿ. ಎಕ್ಸ್ ಅವರು ಗಳಿಸುವ ವಾರ್ಷಿಕ ಬಡ್ಡಿ ಹಣವು 9000 ರೂಪಾಯಿಗಳಷ್ಟಾಗಿರುತ್ತದೆ ಹಾಗೂ ಅವರ ಮಾಸಿಕ ಬಡ್ಡಿ ಹಣವು 750 ರೂ.ಗಳಷ್ಟಾಗಿರುತ್ತದೆ.

ಸ್ಥಿರ ಠೇವಣಿಯಿಂದ ಪಡೆಯಲಾಗುವ ಬಡ್ಡಿ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ. ಒಂದು ವೇಳೆ ನಿಮ್ಮ ಆದಾಯವು ತೆರಿಗೆಯ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದಾದಲ್ಲಿ ನೀವು 15G/15H ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ಅತಿಹೆಚ್ಚು ಸಂಬಳ ನೀಡುವ ಉದ್ಯೋಗಗಳು ಯಾವುವು ಗೊತ್ತೆ? 

3. ಹಿರಿಯ ನಾಗರಿಕರ ಉಳಿತಾಯ ಯೋಜನೆ

3. ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರಿಗಾಗಿಯೆ ಮೀಸಲಾಗಿರುವ ವಿಶೇಷ ಯೋಜನೆ ಹಿರಿಯ ನಾಗರೀಕರ ಉಳಿತಾಯ ಯೋಜನೆಯಾಗಿದೆ. 60 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಷ್ಟೇ ಈ ಯೋಜನೆಯಲ್ಲಿ ಹಣವನ್ನು ಹೂಡಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆಯು 5 ವರ್ಷಗಳ ಅವಧಿಯಲ್ಲಿ ಪರಿಪಕ್ವ (ಮೆಚ್ಯುರಿಟಿ) ಆಗುತ್ತದೆ. ಈ ಕಾಲಾವಧಿಯನ್ನು ಮತ್ತೂ 3 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ಬಡ್ಡಿಯ ರೂಪದಲ್ಲಿ ಈ ಯೋಜನೆಯ ವಾರ್ಷಿಕ ಆದಾಯವು ಶೇ. 9ರ ದರದಲ್ಲಿರುತ್ತದೆ. ಬಡ್ಡಿಯ ಹಣವನ್ನು ಪ್ರತಿ 3 ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

4. ಮ್ಯೂಚುವಲ್ ಫಂಡ್ ಗಳ ತಿಂಗಳ ಆದಾಯ ಯೋಜನೆ

4. ಮ್ಯೂಚುವಲ್ ಫಂಡ್ ಗಳ ತಿಂಗಳ ಆದಾಯ ಯೋಜನೆ

ಎಂಐಪಿ (Monthly Income Plan) ಎಂದು ಕರೆಯಲ್ಪಡುವ, ನಿಯಮಿತವಾದ ಆದಾಯವನ್ನು ಕೊಡ ಮಾಡುವ ಆಂತರಿಕ ಯೋಜನೆಯನ್ನು ಕೆಲವು ಮ್ಯೂಚುವಲ್ ಫ಼ಂಡ್ ಗಳು ಒಳಗೊಂಡಿರುತ್ತವೆ. ಎಂಐಎಸ್, ಎಫ್ಡಿ, ಅಥವಾ ಎಸ್.ಸಿ.ಎಸ್.ಎಸ್ ಗಳಲ್ಲಿರುವಂತೆ ಮ್ಯೂಚುವಲ್ ಫ಼ಂಡ್ ಗಳಲ್ಲಿ ಮಾಸಿಕ ಆದಾಯ ಗಳಿಕೆಯು ನಿಶ್ಚಿತ ರೂಪದಲ್ಲಿರುವುದಿಲ್ಲ. ಶೇ. 8 ರಿಂದ 9ರ ಬಡ್ಡಿದರದಲ್ಲಿ ಈ ಆದಾಯವು ವ್ಯತ್ಯಯಗೊಳ್ಳುತ್ತದೆ.

ಸಿಪ್ ಬಗ್ಗೆ ನಿಮಗೆಷ್ಟು ಗೊತ್ತು?ಸಿಪ್ ಬಗ್ಗೆ ನಿಮಗೆಷ್ಟು ಗೊತ್ತು?

5. ಮ್ಯೂಚುವಲ್ ಫಂಡ್ ಗಳಿಂದ ಗಳಿಸಬಹುದಾದ ಎಸ್.ಡಬ್ಲ್ಯೂ.ಪಿ

5. ಮ್ಯೂಚುವಲ್ ಫಂಡ್ ಗಳಿಂದ ಗಳಿಸಬಹುದಾದ ಎಸ್.ಡಬ್ಲ್ಯೂ.ಪಿ

ಭಾರತದಲ್ಲಿ ಮ್ಯೂಚುವಲ್ ಫಂಡ್, ಹೂಡಿಕೆದಾರರ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಒಂದು ವೇಳೆ ನೀವು ಈಕ್ವಿಟಿ ಅಥವಾ ಡೆಬ್ಟ್ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿದ್ದೇ ಆದಲ್ಲಿ, ಸಿಸ್ಟೆಮಿಕ್ ವಿಥ್ ಡ್ರಾವಲ್ ಪ್ಲಾನ್ ನ ಮೂಲಕ ((systematic withdrawal plan)) ನೀವು ಮ್ಯೂಚುವಲ್ ಫಂಡ್ ನಿಂದಲೂ ನಿಯಮಿತವಾದ ಮಾಸಿಕ ಆದಾಯವನ್ನು ಕುದುರಿಸಿಕೊಳ್ಳಬಹುದು.

ಎಸ್. ಡಬ್ಲ್ಯೂ.ಪಿ ಯು ಸಿಪ್ (SIP) ಗೆ ವ್ಯತಿರಿಕ್ತವಾಗಿದೆ. ಮ್ಯೂಚುವಲ್ ಫ಼ಂಡ್ ಗಳಿಂದ ನಿರ್ಧಿಷ್ಟ ಸಂಖ್ಯೆಯ ಘಟಕಗಳನ್ನು ವಿಥ್ ಡ್ರಾವಲ್ ಮಾಡಿಕೊಂಡು ಬಳಿಕ ಅವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಕ್ರಿಯೆಯೇ ಎಸ್. ಡಬ್ಲ್ಯೂ.ಪಿ ಆಗಿದೆ. ಮಾಸಿಕ ಆದಾಯ ಗಳಿಕೆಯ ನಿಟ್ಟಿನಲ್ಲಿ ಇದೊಂದು ತುಸು ರಿಸ್ಕ್ ಒಳಗೊಂಡಿರುವ ವಿಧಾನವಾಗಿದ್ದು, ನಿಶ್ಚಿತ ಮೊತ್ತದ ರಿಟರ್ನ್ ಅನ್ನು ಎದುರು ನೋಡುವವರಿಗೆ ಈ ವಿಧಾನವು ಅಷ್ಟೊಂದು ಉತ್ತಮವಲ್ಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರಿಗೆ ಮುತ್ತಿನಂಥ 10 ಮಾತು

6. ಮ್ಯೂಚುವಲ್ ಫಂಡ್ ಗಳಿಂದ ಡಿವಿಡೆಂಡ್

6. ಮ್ಯೂಚುವಲ್ ಫಂಡ್ ಗಳಿಂದ ಡಿವಿಡೆಂಡ್

ಕೆಲವು ನಿರ್ಧಿಷ್ಟ ಮ್ಯೂಚುವಲ್ ಫಂಡ್ ಡಿವಿಡೆಂಡ್ ಉತ್ತಮ ಆದಾಯ ಆಯ್ಕೆಯನ್ನೂ ಒಳಗೊಂಡಿವೆ. ಒಂದು ವೇಳೆ ನಿಮಗೆ ಈಕ್ವಿಟಿಯಲ್ಲಿ ನೇರವಾಗಿ ಹಣ ಹೂಡಲು ಇಷ್ಟವಿಲ್ಲದಿದ್ದಲ್ಲಿ, ಡಿವಿಡೆಂಡ್ ಪಾವತಿಯ ಅವಕಾಶವನ್ನು ಕಲ್ಪಿಸುವ ಮ್ಯೂಚುವಲ್ ಫಂಡ್ ಗಳನ್ನು ನೀವು ಆಯ್ದುಕೊಳ್ಳಬಹುದು.

ನಿಮ್ಮ ಬಳಿ ರೂ. 1-5 ಲಕ್ಷ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು?ನಿಮ್ಮ ಬಳಿ ರೂ. 1-5 ಲಕ್ಷ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು?

7. ಈಕ್ವಿಟಿಯಿಂದ ಡಿವಿಡೆಂಡ್ (ಲಾಭಾಂಶ)

7. ಈಕ್ವಿಟಿಯಿಂದ ಡಿವಿಡೆಂಡ್ (ಲಾಭಾಂಶ)

ಸಾಮಾನ್ಯವಾಗಿ ಈಕ್ವಿಟಿ ಹೂಡಿಕೆಗಳು ರಿಸ್ಕ್ ಅನ್ನು ಒಳಗೊಂಡಿರುತ್ತವೆ. ಆದರೆ ಒಂದು ವೇಳೆ ನಿಮಗೆ ಜ್ಞಾನ ಮತ್ತು ಕೌಶಲ್ಯವಿದ್ದಲ್ಲಿ ನೀವು ಸ್ಟಾಕ್ ಮಾರುಕಟ್ಟೆಯಿಂದ ಅತ್ಯುತ್ತಮ ಆದಾಯವನ್ನು ಗಿಟ್ಟಿಸಿಕೊಳ್ಳಬಹುದು.

ಸ್ಟಾಕ್ ನ ಬೆಲೆಯಲ್ಲಾಗುವ ಮೌಲ್ಯವರ್ಧನೆಯನ್ನೂ ಹೊರತುಪಡಿಸಿ ಡಿವಿಡೆಂಡ್ ನಿಂದಲೂ ನೀವು ಲಾಭವನ್ನು ಗಳಿಸಿಕೊಳ್ಳಬಹುದು. ಈಕ್ವಿಟಿಯಿಂದ ವಾರ್ಷಿಕವಾಗಿ ಡಿವಿಡೆಂಡ್ ಪಾವತಿಸಲ್ಪಡುತ್ತದೆ. ಸ್ಟಾಕ್ ನಲ್ಲಿನ ನಿಮ್ಮ ಹೂಡಿಕೆಯನ್ನು 10 ರಿಂದ 12 ರವರೆಗಿನ ಉತ್ತಮ ಸ್ಟಾಕ್ ಗಳಲ್ಲಿ ತೊಡಗಿಸಿದಲ್ಲಿ, ನೀವು ಸುನಿಶ್ಚಿತವಾಗಿ ನಿಯಮಿತವಾದ ಆದಾಯ ಗಳಿಸಿಕೊಳ್ಳಬಹುದು.

8. ರಿಯಲ್ ಎಸ್ಟೇಟ್ ನಿಂದ ಲಭ್ಯವಾಗುವ ಬಾಡಿಗೆ

8. ರಿಯಲ್ ಎಸ್ಟೇಟ್ ನಿಂದ ಲಭ್ಯವಾಗುವ ಬಾಡಿಗೆ

ನಿಯಮಿತ ಆದಾಯವನ್ನು ಗಳಿಸುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ಮತ್ತೊಂದು ಉತ್ತಮ ಮಾರ್ಗೋಪಾಯವಾಗಿದೆ. ರಿಯಲ್ ಎಸ್ಟೇಟ್ ಎಂದರೆ ಅತ್ಯಧಿಕ ರಿಸ್ಕ್ ಅನ್ನು ಒಳಗೊಂಡಿರುವ ಹಾಗೂ ಹಾಗೆಯೇ ಅತ್ಯಧಿಕ ರಿಟರ್ನ್ ಅನ್ನು ಗಳಿಸಿಕೊಡುವ ಸಂಗತಿಯಾಗಿದೆ. ನೀವು ಖರೀದಿಸಿದ ಸೊತ್ತನ್ನು ಬಾಡಿಗೆಗೆ ಬಿಡುವುದರ ಮೂಲಕ ನೀವು ಆದಾಯವನ್ನು ಗಳಿಸಬಹುದು.

ಬಾಡಿಗೆದಾರರು ಸಕಾಲದಲ್ಲಿ ಲಭ್ಯವಾಗದೇ ಇರುವುದು ಅಥವಾ ಅರ್ಹ ಬಾಡಿಗೆದಾರರು ಲಭಿಸದೇ ಹೋಗುವುದು ಅಥವಾ ಸೊತ್ತಿನ ದರವು ಇಳಿಮುಖವಾಗುವುದು ಇವೇ ಮೊದಲಾದವು ರಿಯಲ್ ಎಸ್ಟೇಟ್ ಆಯ್ಕೆ ಒಳಗೊಂಡಿರುವ ರಿಸ್ಕ್ ಆಗಿದೆ.

9. ದೀರ್ಘಕಾಲೀನ ಸರ್ಕಾರಿ ಬಾಂಡ್

9. ದೀರ್ಘಕಾಲೀನ ಸರ್ಕಾರಿ ಬಾಂಡ್

ನಿಯಮಿತ ಆದಾಯ ಗಳಿಕೆಯ ನಿಟ್ಟಿನಲ್ಲಿ ದೀರ್ಘಕಾಲೀನ ಸರ್ಕಾರಿ ಬಾಂಡ್ ಗಳು ಅತ್ಯಂತ ಸುರಕ್ಷಿತವಾದ ಆಯ್ಕೆಗಳ ಪೈಕಿ ಒಂದೆನಿಸಿಕೊಂಡಿದೆ. ಸರ್ಕಾರಿ ಬಾಂಡ್ ಪ್ರತೀ ಆರು ತಿಂಗಳಿಗೊಮ್ಮೆ ಶೇ. 8ರ ದರದಲ್ಲಿ ರಿಟರ್ನ್ ಅನ್ನು ಕೊಡುತ್ತದೆ. ಈ ಬಾಂಡ್ ಗಳು ದೀರ್ಘಕಾಲೀನ ಬಾಂಡ್ ಗಳಾಗಿದ್ದು ಬಾಂಡ್ ಅವಧಿಯ ಅಂತ್ಯದ ವೇಳೆಗೆ ನೀವು ಹೂಡಿದ್ದ ನಿಮ್ಮ ಅಸಲೀ ಹಣವನ್ನು ಮರಳಿ ಪಡೆದುಕೊಳ್ಳಬಹುದು.
ಈ ಬಾಂಡ್ ಗಳು ಎರಡನೇ ಹಂತದ ಮಾರುಕಟ್ಟೆಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿಯೂ ಬಳಕೆಗೆ ಲಭ್ಯವಾಗುತ್ತದೆ. ಹೀಗಾಗಿ ನಿಮಗೆ ಈ ಬಾಂಡ್ ಗಳು ಬೇಡವೆನಿಸಿದಲ್ಲಿ, ನೀವು ಅವುಗಳನ್ನು ಸೆಕೆಂಡರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೂ ಅವಕಾಶವಿದೆ.

10. ವಿಮಾ ಸಂಸ್ಥೆಗಳ ವೇತನ ರೂಪದ ವಾರ್ಷಿಕ ಆದಾಯ

10. ವಿಮಾ ಸಂಸ್ಥೆಗಳ ವೇತನ ರೂಪದ ವಾರ್ಷಿಕ ಆದಾಯ

ನಿಯಮಿತವಾದ ಮಾಸಿಕ ಆದಾಯವನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ವಿಮಾ ಯೋಜನೆಯಿಂದ ಲಭ್ಯವಾಗುವ ವೇತನ ರೂಪದ ವಾರ್ಷಿಕ ಆದಾಯವೂ ಒಂದು ಆಯ್ಕೆಯಾಗಿದೆ. ಆದರೆ ಈ ಆಯ್ಕೆಯು ಆದಾಯವನ್ನು ಹುಟ್ಟು ಹಾಕಲು ತುಸು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ವಿಮಾ ಯೋಜನೆಯನ್ನು ಖರೀದಿಸುವಾಗ ನೀವು ಆಯ್ದುಕೊಂಡಿದ್ದ ಆಯ್ಕೆ ಮತ್ತು ಪೆನ್ಷನ್ ನ ಅವಧಿಯ ಮೇಲೆ ಈ ವಿಮಾ ಯೋಜನೆಗಳಿಂದ ಲಭ್ಯವಾಗುವ ರಿಟರ್ನ್ ಗಳು ಅವಲಂಬಿತವಾಗಿರುತ್ತವೆ.

English summary

Best Investment to get Regular Monthly Income

Who don’t like regular income? I know you also want to have regular income by investing money in financial product.
Story first published: Wednesday, May 2, 2018, 9:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X