For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆಯಡಿ 20 ಸಾವಿರ ಗಳಿಸಿ. ಅರ್ಜಿ ಸಲ್ಲಿಸುವುದು ಹೇಗೆ?

ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆಭಾರತ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಕೆಲವೇ ಕಾಲಾವಧಿಗೆ ರೂಪಿಸಿರುವ ಯೋಜನೆ. ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆಯಿಂದ ವಿದ್ಯಾರ್ಥಿಗಳು ರೂ. 20000 ವರೆಗೆ ಸಂಪಾದನೆ ಮಾಡಬಹುದು.

|

ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆ ಭಾರತ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಕೆಲವೇ ಕಾಲಾವಧಿಗೆ ರೂಪಿಸಿರುವ ಯೋಜನೆ. ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆಯಿಂದ ವಿದ್ಯಾರ್ಥಿಗಳು ರೂ. 20000 ವರೆಗೆ ಸಂಪಾದನೆ ಮಾಡಬಹುದು. ಈ ಯೋಜನೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಮೊದಲ ಹಂತದ ಪ್ರಾಯೋಗಿಕ ಕೆಲಸದ ಅನುಭವವನ್ನು ಮೇಲ್ವಿಚಾರಕರ ಸಹಾಯ ಮತ್ತು ಸಲಹೆಯ ಮೂಲಕ ಪಡೆಯಬಹುದಾಗಿದೆ. ಎರಡು ತಿಂಗಳ ಇಂಟರ್ನ್ಶಿಪ್ ಇದಾಗಿದ್ದು, ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಬೇಸಿಗೆಯ ಇಂಟರ್ನ್ಶಿಪ್ ಮೇ ಮತ್ತು ಜೂನ್ ನಲ್ಲಿ ನಡೆದರೆ, ಚಳಿಗಾಲದ ಇಂಟರ್ನ್ಶಿಪ್ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ನಡೆಯಲಿದೆ. ಇದು ಎರಡು ತಿಂಗಳ ಇಂಟರ್ನ್ಶಿಪ್ ಆಗಿದ್ದರೂ ಕೂಡ ಉತ್ತಮವಾಗಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಮೂರು ತಿಂಗಳು ವಿಸ್ತರಿಸಲು ಅವಕಾಶವಿದೆ. ಸಂಬಂಧಪಟ್ಟ ಸಚಿವಾಲಯದೊಂದಿಗೆ ಕಾರ್ಯನಿರ್ವಹಿಸಲು ವಿದ್ಯಾರ್ಥಿಯೂ ಕೂಡ ಉತ್ಸುಕರಾಗಿದ್ದಲ್ಲಿ ಇದನ್ನು ವಿಸ್ತರಿಸಿ ಅವಕಾಶ ಕಲ್ಪಿಸಲಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆಯ ಕುರಿತಾದ ಮಾಹಿತಿಗಳು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಬಗ್ಗೆ ನಿಮಗೆಷ್ಟು ಗೊತ್ತು?

ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆ- ಅರ್ಜಿ ಸಲ್ಲಿಸುವುದು ಹೇಗೆ?

ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆ- ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ವಿದ್ಯಾರ್ಥಿಗಳು ಮಾತ್ರ ಈ ಇಂಟರ್ನ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅವರು ಮಾಡಬೇಕಾಗಿರುವುದು ಇಷ್ಟೇ. NIC ಅಧಿಕೃತ ಪೋರ್ಟಲ್ meity.gov.in/schemes ಇಲ್ಲಿಗೆ ತೆರಳಬೇಕು. ಈ ಅರ್ಜಿಗಳನ್ನು ಅರ್ಜಿದಾರನಿಗೆ ಸಂಬಂಧಪಟ್ಟ ವಿದ್ಯಾಸಂಸ್ಥೆಗೆ ಕಳುಹಿಸಿಕೊಡಲಾಗುತ್ತದೆ.

ಇರಬೇಕಾದ ಅರ್ಹತೆಗಳೇನು?

ಇರಬೇಕಾದ ಅರ್ಹತೆಗಳೇನು?

ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆ-ಅರ್ಜಿ ಸಲ್ಲಿಸಲು ಯಾರಿಗೆ ಅರ್ಹತೆ ಇದೆ
ಯಾವ ವಿದ್ಯಾರ್ಥಿಗಳು ಈ ಯೋಜನೆಗೆ ಸೇರಿಕೊಳ್ಳಲು ಬಯಸುತ್ತೀರೋ ಅವರಿಗೆ ಈ ಕೆಳಗಿನ ಎಲ್ಲಾ ಅರ್ಹತೆಗಳು ಇರಬೇಕಾಗುತ್ತದೆ.
1. ಭಾರತೀಯ ವಿದ್ಯಾರ್ಥಿಗಳಾಗಿದ್ದು, ಇಲ್ಲಿನ ಗುರುತಿಸಲ್ಪಟ್ಟ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟವರಾಗಿರಬೇಕು ಮತ್ತು ಕಳೆದ ಬಾರಿಯ ಪರೀಕ್ಷೆಯಲ್ಲಿ 60 ಶೇ. ಅಂಕವನ್ನು ಕಡ್ಡಾಯವಾಗಿ ಪಡೆದಿರಬೇಕು
• ಬಿಟೆಕ್, ಬಿಇ, ಎರಡು ಅಥವಾ ಮೂರನೆ ವರ್ಷದ 10+2+4 ಮಾದರಿಯ ಶಿಕ್ಷಣಕ್ಕೆ ಸಂಬಂಧಿಸಿದವರು
• ಸಂಯೋಜಿತ ಡಿಗ್ರಿ ವಿದ್ಯಾರ್ಥಿಗಳು ಅಥವಾ ಉಭಯ ಡಿಗ್ರಿ (ಬಿಇ/ಬಿಟೆಕ್,ಎಂಇ/ಎಂಟೆಕ್) ಅಥವಾ 4 ಮತ್ತು 5 ನೇ ವರ್ಷದ 10+2+5 ಮಾದರಿ ಶಿಕ್ಷಣಕ್ಕೆ ಸಂಬಂಧಿಸಿದವರು.
2. ಕನಿಷ್ಟ ವಿದ್ಯಾರ್ಹತೆ ಹೊಂದಿರುವ ಎಲ್ಲರಿಗೂ ಈ ಸಚಿವಾಲಯವು ಖಾತ್ರಿಗೊಳಿಸುವುದಿಲ್ಲ. ಇದರಲ್ಲಿ ಕೆಲಸ ಮಾಡುವ ಮಾನ್ಯತೆ ಪಡೆಯಬೇಕಿದ್ದರೆ ಉತ್ತಮ ವಿದ್ಯಾರ್ಹತೆ ಹಿನ್ನೆಲೆ ಇರಬೇಕಾಗುತ್ತದೆ. ಹೆಚ್ಚಿನ ವಿದ್ಯಾಭ್ಯಾಸವಿರುವವರಿಗೆ ಹೆಚ್ಚು ಪ್ರಾದ್ಯಾನ್ಯೆತೆ ಸಿಗಲಿದೆ.

ಇಂಟರ್ನ್ಶಿಪ್ ಯೋಜನೆಯ ಕ್ಷೇತ್ರಗಳು

ಇಂಟರ್ನ್ಶಿಪ್ ಯೋಜನೆಯ ಕ್ಷೇತ್ರಗಳು

ಇಂಟರ್ನ್ಶಿಪ್ ಯೋಜನೆಯ ಕ್ಷೇತ್ರಗಳು ಈ ಕೆಳಗಿನಂತಿವೆ.

ತಿಂಗಳಿಗೆ ರೂ. 10 ಸಾವಿರ

ತಿಂಗಳಿಗೆ ರೂ. 10 ಸಾವಿರ

ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆ - ಸಂಭಾವನೆ:
ಟೋಕನ್ ಸಂಭಾವನೆ ಎಂದು ತಿಂಗಳ 10 ಸಾವಿರ ನೀಡಲಾಗುತ್ತದೆ. ಆದರೆ ಉತ್ತಮ ಪ್ರದರ್ಶನವಿದ್ದಲ್ಲಿ ಮಾತ್ರ ಇದು ದೊರಕಲಿದೆ. ಪ್ರದರ್ಶನದ ವಿವರವು ಅವರಿಗೆ ಸಂಬಂಧಿಸಿದ ಮೇಲ್ವಿಚಾರಕರು ನೀಡುತ್ತಾರೆ. ಸಚಿವಾಲಯವು ಮೇಲ್ವಿಚಾರಕರಿಂದ ಮಾಹಿತಿ ಪಡೆದು ಸರ್ಟಿಫಿಕೇಟ್ ನೀಡಿದ ನಂತರವೇ ಈ ಸಂಭಾವನೆ ದೊರಕಲಿದೆ.

5 ಕೋಟಿ ಉದ್ಯೋಗವಕಾಶ

5 ಕೋಟಿ ಉದ್ಯೋಗವಕಾಶ

ಡಿಜಿಟಲ್ ಇಂಡಿಯಾ ಇಂಟರ್ನ್ಶಿಪ್ ಯೋಜನೆ
2015 ರಲ್ಲಿ ಯೂನಿಯನ್ ಸಚಿವ ರವಿಶಂಕರ್ ಪ್ರಸಾದ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಈ ಯೋಜನೆಯ ಬಗ್ಗೆ ವಿವರಿಸುತ್ತಾ ಹೇಳಿರುವುದೇನೆಂದರೆ, ಯೋಜನೆ ಆರಂಭವಾದರೆ ಸುಮಾರು 5 ಕೋಟಿ ಉದ್ಯೋಗವಕಾಶವನ್ನು ಒದಗಿಸಲಿದೆ. ಶ್ರೀರಾಮ ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದ ರವಿಶಂಕರ್ ಪ್ರಸಾದ್ ಐಟಿ ಸಂಸ್ಥೆಗಳು 5 ಲಕ್ಷ ಜನರಿಗೆ ಉದ್ಯೋಗ ನೀಡಲಿದೆ. ಆದರೆ ನಮ್ಮ ಡಿಜಟಲ್ ಇಂಡಿಯಾ ಯೋಜನೆ ಆರಂಭವಾದರೆ ಸುಮಾರು 5 ಕೋಟಿ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಪ್ರಸ್ತಾಪಿಸಿದ್ದರು. ಪ್ರಧಾನಿಯವರು ಹಲವು ಯೋಜನೆಗಳಂತೆಯೇ ಇದೂ ಕೂಡ ಮತ್ತೊಂದು ಪ್ರಮುಖ ಉದ್ದೇಶಿತ ಯೋಜನೆಯಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಯು ನಮ್ಮ ದೇಶವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವ ಯೋಜನೆ ಎಂದು ಹೇಳಿದ್ದಾರೆ. ಈ ಯೋಜನೆಯಿಂದ ಖಂಡಿತವಾಗಿಯೂ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು ಎಂಬುದನ್ನು ಅವರು ಹೇಳಿದ್ದಾರೆ.

English summary

Digital India Internship scheme: Earn upto 20,000, How to Apply

Digital India Internship scheme: Students alert! Here is your chance to earn upto Rs 20,000; know how to apply
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X