For Quick Alerts
ALLOW NOTIFICATIONS  
For Daily Alerts

ಎನ್.ಪಿ.ಎಸ್ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಚಂದಾದಾರರು ತಮ್ಮ ಬಿಸಿನೆಸ್, ಅಧ್ಯಯನಕ್ಕಾಗಿ ಹಣ ವಿತ್ ಡ್ರಾ ಮಾಡಬಹುದು

ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕಾಗಿ ಅಥವಾ ಹೊಸತಾದ ಉದ್ದಿಮೆಯೊಂದನ್ನು ಆರಂಭಿಸುವುದಕ್ಕಾಗಿ, ತಮ್ಮ ಖಾತೆಗಳಿಂದ ಭಾಗಶ: ಹಣವನ್ನು ವಿಥ್ ಡ್ರಾ ಮಾಡಿಕೊಳ್ಳುವ ಆಯ್ಕೆಯನ್ನು ನ್ಯಾಷನಲ್ ಪೆನ್ಷನ್ ಸಿಸ್ಟಮ್ ನ ಚಂದಾದಾರರು ಹೊಂದಲಿದ್ದಾರೆ.

|

ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕಾಗಿ ಅಥವಾ ಹೊಸತಾದ ಉದ್ದಿಮೆಯೊಂದನ್ನು ಆರಂಭಿಸುವುದಕ್ಕಾಗಿ, ತಮ್ಮ ಖಾತೆಗಳಿಂದ ಭಾಗಶ: ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವ ಆಯ್ಕೆಯನ್ನು ನ್ಯಾಷನಲ್ ಪೆನ್ಷನ್ ಸಿಸ್ಟಮ್ ನ ಚಂದಾದಾರರು ಹೊಂದಲಿದ್ದಾರೆ ಎಂದು ಪೆನ್ಷನ್ ಫಂಡ್ ರೆಗ್ಯುಲೇಟರ್(ಪಿ.ಎಫ್.ಆರ್.ಡಿ.ಎ.) ಪ್ರಕಟಿಸಿದೆ. ಕಳೆದ ವಾರ ಪೆನ್ಷನ್ ಫಂಡ್ ಮತ್ತು ರೆಗ್ಯುಲೇಟರಿ ಡೆವೆಲಪ್ಮೆಂಟ್ ಅಥಾರಿಟಿ (ಪಿ.ಎಫ್.ಆರ್.ಡಿ.ಎ.) ಯ ಮಂಡಳಿಯ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.

 

ಉನ್ನತ ಶಿಕ್ಷಣ/ವೃತ್ತಿಪರ ಮತ್ತು ತಾಂತ್ರಿಕ ವಿದ್ಯಾರ್ಹತೆಗಳನ್ನು ಪಡೆದುಕೊಳ್ಳುವುದರ ಮೂಲಕ ತಮ್ಮ ಉದ್ಯೋಗಾರ್ಹತೆಯನ್ನು ಸುಧಾರಿಸಿಕೊಳ್ಳಬಯಸುವ ಅಥವಾ ವಿನೂತನ ಕೌಶಲ್ಯಗಳನ್ನು ಗಳಿಸಿಕೊಳ್ಳಬಯಸುವ ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್.ಪಿ.ಎಸ್.) ಚಂದಾದಾರರಿಗೆ ಭಾಗಶ: ಹಣವನ್ನು ಪಡೆದುಕೊಳ್ಳಲು ಇದೀಗ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಪ್ರಸ್ತುತ, ಪಿ.ಎಫ್.ಆರ್.ಡಿ.ಎ. ನಿಂದ ನಿಯಮಿತಗೊಳಿಸಲ್ಪಟ್ಟಿರುವ ಎನ್.ಪಿ.ಎಸ್. ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳೆರಡೂ (ಎ.ಪಿ.ವೈ.) ಕೂಡಾ, ರೂ. 2.13 ಕೋಟಿಗಳನ್ನೂ ಮೀರಿದ ಸಂಚಿತ ಚಂದಾದಾರರ ತಳಹದಿಯನ್ನು ಹೊಂದಿದೆ. ಜೊತೆಗೆ, 2.38 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಮೌಲ್ಯದ ಒಟ್ಟು ಸ್ವತ್ತು ಪಿ.ಎಫ್.ಆರ್.ಡಿ.ಎ.ಯ ನಿರ್ವಹಣೆಯಲ್ಲಿದೆ.

ಎನ್.ಪಿ.ಎಸ್ ವಿತ್ ಡ್ರಾವಲ್ ಮಾನದಂಡವು ಇದೀಗ ಶಿಕ್ಷಣವನ್ನೂ ಒಳಗೊಂಡಿದೆ. ಇದರ ಕುರಿತಾಗಿ ತಿಳಿದುಕೊಳ್ಳಬೇಕಾದ ಐದು ಸಂಗತಿಗಳು ಈ ಕೆಳಗಿನಂತಿವೆ:

1. ಭಾಗಶ: ಮೊತ್ತವನ್ನು ವಿತ್ ಡ್ರಾ

1. ಭಾಗಶ: ಮೊತ್ತವನ್ನು ವಿತ್ ಡ್ರಾ

ಚಂದಾದಾರರ ವಿದ್ಯಾಭ್ಯಾಸಕ್ಕಾಗಿ ಹಾಗೂ ವಿನೂತನ ಉದ್ದಿಮೆಯನ್ನು ಆರಂಭಿಸುವುದಕ್ಕಾಗಿ ಭಾಗಶ: ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಉದ್ದಿಮೆಯನ್ನು ಆರಂಭಿಸ ಬಯಸುವ ಅಥವಾ ಹೊಸದಾಗಿ ಉದ್ದಿಮೆಯನ್ನು ಬೇರೆ ಉದ್ಯಮಿಯಿಂದ ಪಡೆದುಕೊಳ್ಳ ಬಯಸುವ ಚಂದಾದಾರರು ತಮ್ಮ ದೇಣಿಗೆಗಳಿಂದ ಭಾಗಶ: ಮೊತ್ತವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು. ಸಾಮಾಜಿಕ ಭದ್ರತಾ ಕಾರ್ಯಕ್ರಮದ ರೂಪದಲ್ಲಿ ಎನ್.ಪಿ.ಎಸ್. ಮುಂಚೂಣಿಯಲ್ಲಿರುವ ಸರ್ಕಾರಿ ಕಾರ್ಯಕ್ರಮವಾಗಿದೆ.

2. ಆಕ್ಟಿವ್ ಚಾಯ್ಸ್

2. ಆಕ್ಟಿವ್ ಚಾಯ್ಸ್

ಎನ್.ಪಿ.ಎಸ್. ನ ಖಾಸಗೀ ವಲಯದ ಚಂದಾದಾರರಿಗಾಗಿ, "ಆಕ್ಟಿವ್ ಚಾಯ್ಸ್" ಪ್ರವರ್ಗದಲ್ಲಿ ಈಕ್ವಿಟಿ ಹೂಡಿಕೆಯ ಮೇಲಿನ ಕ್ಯಾಪ್ ಅನ್ನು ಈಗಿನ ಶೇ. 50 ರ ದರದಿಂದ ಶೇ. 75 ರ ದರಕ್ಕೆ ಏರಿಸಲು ಮಂಡಳಿಯು ನಿರ್ಧರಿಸಿದೆ. ಆದಾಗ್ಯೂ, ಈಕ್ವಿಟಿಯಲ್ಲಿ ಹೂಡಿಕೆಯನ್ನು ಏರಿಸುವ ಆಯ್ಕೆಯು ಚಂದಾದಾರರಿಗೆ 50 ವರ್ಷ ವಯೋಮಾನದವರೆಗೆ ಲಭ್ಯವಿರುತ್ತದೆ.

3. ಆಟೋ ಚಾಯ್ಸ್ ಮತ್ತು ಆಕ್ಟಿವ್ ಚಾಯ್ಸ್
 

3. ಆಟೋ ಚಾಯ್ಸ್ ಮತ್ತು ಆಕ್ಟಿವ್ ಚಾಯ್ಸ್

ಆಟೋ ಚಾಯ್ಸ್ ಮತ್ತು ಆಕ್ಟಿವ್ ಚಾಯ್ಸ್ ಗಳೆಂಬ ಹೂಡಿಕೆಯ ಎರಡು ವಿಧಗಳ ಆಧಾರದ ಮೇಲೆ ಎನ್.ಪಿ.ಎಸ್. ತನ್ನ ಚಂದಾದಾರರಿಗೆ ತಮ್ಮದೇ ಆದ ಪೋರ್ಟ್ ಪೋಲಿಯೋಗಳನ್ನು ವಿನ್ಯಾಸಗೊಳಿಸಿಕೊಳ್ಳಲು ಅವಕಾಶವನ್ನೀಯುತ್ತದೆ. ಆಕ್ಟಿವ್ ಚಾಯ್ಸ್ ಅನ್ನು ಆಯ್ದುಕೊಳ್ಳುವ ಚಂದಾದಾರರು ಮೂರು ನಿಯಮಿತ ಸಾಧನಗಳಾದ ಈಕ್ವಿಟಿ, ಜಿ-ಸೆಕ್ಟ್ಸ್ ಮತ್ತು ಕಾರ್ಪೊರೇಟ್ ಬಾಂಡ್ ಗಳನ್ನೂ ಹೊರತುಪಡಿಸಿ, ಶೇ. 5ರವರೆಗೆ ಆಲ್ಟರ್ನೇಟ್ ಇನ್ವೆಸ್ಟ್ಮೆಂಟ್ ಫಂಡ್ ನಲ್ಲೂ ಹಣ ಹೂಡಬಹುದು.

4. A ಶ್ರೇಯಾಂಕದ ಪ್ರಸ್ತಾವನೆ

4. A ಶ್ರೇಯಾಂಕದ ಪ್ರಸ್ತಾವನೆ

ಕಾರ್ಪೊರೇಟ್ ಬಾಂಡ್ ಗಳಿಗಾಗಿ ಹೂಡಿಕಾ ಶ್ರೇಯಾಂಕದ ದರವನ್ನು "AA" ನಿಂದ "A" ಗೆ ಬದಲಾಯಿಸುವ ಪ್ರಸ್ತಾವನೆಯೊಂದನ್ನೂ ಸಹ ಪಿ.ಎಫ್.ಆರ್.ಡಿ.ಎ. ಮಂಡಳಿಯು ಅನುಮೋದಿಸಿದೆ. ಈ ಬದಲಾವಣೆಯು ರೇಟೆಡ್ ಬಾಂಡ್ ಗಳಲ್ಲಿನ ಹೂಡಿಕೆಗಳ ಮೇಲಿನ ಕ್ಯಾಪ್ ಅನ್ನು ಅವಲಂಬಿಸಿರುತ್ತದೆ. ಪೆನ್ಷನ್ ಫಂಡ್ ಗಳ ಸಮಗ್ರ ಕಾರ್ಪೊರೇಟ್ ಬಾಂಡ್ ಪೋರ್ಟ್ಪೊಲಿಯೋದ ಶೇ. 10 ರ ದರವನ್ನು, ರೇಟೆಡ್ ಬಾಂಡ್ ಗಳಲ್ಲಿ ಹೂಡಲಾದ ಕ್ಯಾಪ್ ಮೀರಬಾರದು ಎಂದು ಅದು ಹೇಳುತ್ತದೆ. ಕ್ರೆಡಿಟ್ ನ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವುದರ ಜೊತೆಗೆ, ಫಂಡ್ ಮ್ಯಾನೇಜರ್ ಗಳಿಗಾಗಿ ಹೂಡಿಕೆಯ ಮೇಲಿನ ವ್ಯಾಪ್ತಿಯನ್ನೂ ಈ ಕ್ರಮವು ವಿಸ್ತರಿಸುತ್ತದೆ ಎಂದೂ ಪಿ.ಎಫ್.ಆರ್.ಡಿ.ಎ. ಹೇಳುತ್ತದೆ.

5. ಸುತ್ತೋಲೆ ಅನುಮೊದನೆ

5. ಸುತ್ತೋಲೆ ಅನುಮೊದನೆ

ಉತ್ತಮ ಕಾರ್ಪೊರೇಟ್ ಆಡಳಿತದ ಅಳತೆ ಗೋಲಾಗಿ ಕಾಮನ್ ಸ್ಟೆವಾರ್ಡ್ ಷಿಪ್ ಕೋಡ್ ಅನ್ನು ದತ್ತು ತೆಗೆದುಕೊಳ್ಳುವ ಪ್ರಸ್ತಾವನೆಯೂ ಸಹ ಅನುಮೋದನೆಗೊಂಡಿತು. ಜೊತೆಗೆ, ಅಂತಹ ಸಂಹಿತೆಯಲ್ಲಿ ಅಥವಾ ಕೋಡ್ ನಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿರುವ ನಿಯಮಗಳೆಲ್ಲವನ್ನೂ ಅನುಸರಿಸುವುದಕ್ಕಾಗಿ ಮತ್ತು ಅನುಷ್ಟಾನಗೊಳಿಸುವುದಕ್ಕಾಗಿ ಎಲ್ಲಾ ಪೆನ್ಷನ್ ಫಂಡ್ ಗಳಿಗೂ ಆ ನಿಯಮಗಳನ್ನೊಳಗೊಂಡ ಸುತ್ತೋಲೆಯನ್ನು ಕಳುಹಿಸುವ ವಿಚಾರವನ್ನೂ ಸಹ ಅನುಮೋದಿಸಲಾಯಿತು ಎಂದು ಪಿ.ಎಫ್.ಆರ್.ಡಿ.ಎ. ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಪೆನ್ಷನ್ ಫಂಡ್ ಗಳು ಈ ನಿಯಮಾವಳಿಗಳನ್ನು ಅನುಷ್ಟಾನಗೊಳಿಸಿದಲ್ಲಿ, ಹೂಡಿಕಾ ಕಂಪನಿಗಳೊಂದಿಗಿನ ಪೆನ್ಷನ್ ಫಂಡ್ ಗಳ ತೊಡಗಿಸಿಕೊಳ್ಳುವಿಕೆಯು ಸುಧಾರಿಸುತ್ತದೆ ಹಾಗೂ ಚಂದಾದಾರರಿಗೆ ಇದರಿಂದ ಅನುಕೂಲವಾಗುತ್ತದೆ ಎಂದೂ ಪಿ.ಎಫ್.ಆರ್.ಡಿ.ಎ. ಹೇಳಿದೆ.

English summary

NPS (National Pension System) Subscribers Can Now Withdraw For Their Studies, Business

Pension fund regulator PFRDA on Thursday announced that the NPS subscribers will now have the option to partially withdraw funds from their accounts for pursuing higher education or setting up new business.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X