For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಬಗ್ಗೆ ನಿಮಗೆಷ್ಟು ಗೊತ್ತು?

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ (ಪಿಓಎಮ್ಐಎಸ್) ನೀವೊಂದಿಷ್ಟು ಹಣವನ್ನು ತೊಡಗಿಸಿ, ಬಳಿಕ ಪ್ರತೀ ತಿಂಗಳೂ ನಿಶ್ಚಿತ ಆದಾಯವನ್ನು ಗಳಿಸಬಹುದು.

|

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ (ಪಿಓಎಮ್ಐಎಸ್) ನೀವೊಂದಿಷ್ಟು ಹಣವನ್ನು ತೊಡಗಿಸಿ, ಬಳಿಕ ಪ್ರತೀ ತಿಂಗಳೂ ನಿಶ್ಚಿತ ಆದಾಯವನ್ನು ಗಳಿಸಬಹುದು. ಹೆಸರೇ ಸೂಚಿಸುವಂತೆ, ನೀವು ಯಾವುದೇ ಅಂಚೆ ಕಛೇರಿಯಿಂದ ಈ ಯೋಜನೆಯಲ್ಲಿ ಹಣ ಹೂಡಬಹುದು. ಪ್ರಸ್ತುತ ಲೇಖನದಲ್ಲಿ ಪಿ.ಓ.ಎಮ್.ಐ.ಎಸ್. ನ ಕುರಿತು ಈ ಕೆಳಗಿನ ಕೆಲವು ಮುಖ್ಯ ಸಂಗತಿಗಳನ್ನು ನಾವಿಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಅಲ್ಪಾವಧಿ ಹಣ ಹೂಡಿಕೆಗಾಗಿ 10 ಉತ್ತಮ ವಿಧಾನಗಳು, ತಪ್ಪದೇ ತಿಳಿದುಕೊಳ್ಳಿ..

 

1. ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆ

1. ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆ

ಹತ್ತು ಹಲವು ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ನಡುವೆ ಪಿ.ಓ.ಎಮ್.ಐ.ಎಸ್. ಅನ್ನು ವಿತ್ತ ಸಚಿವಾಲಯದ ನಿಯಮಾವಳಿಗಳ ವ್ಯಾಪ್ತಿಯಲ್ಲಿ ಅಂಚೆ ಕಛೇರಿಯು ಜನತೆಗೆ ಕೊಡಮಾಡುತ್ತದೆ. ಹೀಗಾದ್ದರಿಂದ ಅದು ಅತ್ಯಂತ ವಿಶ್ವಾಸಾರ್ಹವಾಗಿದೆ. ಅದೊಂದು ಕಡಿಮೆ ರಿಸ್ಕ್ ಅನ್ನು ಒಳಗೊಂಡಿರುವ ಮಾಸಿಕ ಆದಾಯ ಯೋಜನೆಯಾಗಿದೆ ಮತ್ತು ನಿರಂತರ ಆದಾಯವನ್ನು ಹುಟ್ಟುಹಾಕುತ್ತದೆ. ನೀವು 4.5 ಲಕ್ಷಗಳವರೆಗೆ ವೈಯುಕ್ತಿಕವಾಗಿ ಹೂಡಬಹುದು. ಇಲ್ಲವೇ 9 ಲಕ್ಷಗಳಷ್ಟು ಮೊತ್ತವನ್ನು ಜಂಟಿಯಾಗಿ ಹೂಡಬಹುದು. ಹೂಡಿಕೆಯ ಅವಧಿಯು 5 ವರ್ಷಗಳದ್ದಾಗಿರುತ್ತದೆ. ಹೂಡಿದ ಬಂಡವಾಳದ ರಕ್ಷಣೆಯು ಈ ಯೋಜನೆಯ ಪ್ರಾಥಮಿಕ ಗುರಿಯಾಗಿದೆ.

ಉದಾಹರಣೆಗೆ, ಶರ್ಮಾ ಅವರು 5 ಲಕ್ಷ ರೂಪಾಯಿಗಳನ್ನು ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆಯಲ್ಲಿ 5 ವರ್ಷಗಳ ಅವಧಿಗೆ ಹೂಡುತ್ತಾರೆಂದುಕೊಳ್ಳೋಣ. ಮೇಲೆ ಸೂಚಿಸಿರುವಂತೆ, ಬಡ್ಡಿಯ ದರವು 7.3% ಆಗಿರುತ್ತದೆ. ಆ ಅವಧಿಯಲ್ಲಿ ಆತನ ಮಾಸಿಕ ಆದಾಯವು 3250 ರೂಪಾಯಿಗಳಾಗಿರುತ್ತದೆ. ಬಂಡವಾಳವು ಪಕ್ವವಾದ ಬಳಿಕ ಆತನು ತನ್ನ 5 ಲಕ್ಷ ರೂಪಾಯಿಗಳನ್ನು ವಿಥ್ ಡ್ರಾ ಮಾಡಿಕೊಳ್ಳಬಹುದು. ಈ ಮೊತ್ತವನ್ನು ಆತನು ಯಾವುದೇ ಅಂಚೆ ಕಛೇರಿಯಿಂದ ಪಡೆದುಕೊಳ್ಳಬಹುದು ಇಲ್ಲವೇ ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸರ್ವೀಸ್ ನ ಮೂಲಕ ತನ್ನ ಉಳಿತಾಯ ಖಾತೆಗೇ ಆ ಹಣವನ್ನು ವರ್ಗಾಯಿಸಿಕೊಳ್ಳಬಹುದು.

2. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು
 

2. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಅಸಲು ಹಣದ ಸಂರಕ್ಷಣೆ: ಇದೊಂದು ಸರಕಾರೀ ಬೆಂಬಲಿತ ಯೋಜನೆಯಾದ್ದರಿಂದ, ಪಕ್ವಗೊಳ್ಳುವವರೆಗೂ ನಿಮ್ಮ ಹಣವು ಸುರಕ್ಷಿತವಾಗಿರುತ್ತದೆ.

ಯೋಜನೆಯ ಅವಧಿ: ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆಯ ಲಾಕ್-ಇನ್ ಅವಧಿಯು 5 ವರ್ಷಗಳದ್ದಾಗಿರುತ್ತದೆ. ಯೋಜನೆಯು ಪಕ್ವಗೊಂಡಾಗ ನೀವು ಹೂಡಿದ ಹಣವನ್ನು ನೀವು ನೀವು ವಿತ್ ಡ್ರಾ ಮಾಡಿಕೊಳ್ಳಬಹುದು ಅಥವಾ ಮರು ಹೂಡಿಕೆ ಮಾಡಬಹುದು.

ಕಡಿಮೆ ರಿಸ್ಕ್ ಅನ್ನು ಒಳಗೊಂಡ ಹೂಡಿಕೆ: ಒಂದು ನಿಶ್ಚಿತ-ಆದಾಯ ಯೋಜನೆಯ ರೂಪದಲ್ಲಿ, ನೀವು ಹೂಡಿದ ಹಣವು ಮಾರುಕಟ್ಟೆಯ ರಿಸ್ಕ್ ಗಳನ್ನು ಅವಲಂಬಿಸಿರುವುದಿಲ್ಲ ಮತ್ತು ನಿಮ್ಮ ಹಣವು ಬಹಳ ಸುರಕ್ಷಿತವಾಗಿರುತ್ತದೆ.

ಚಿಕ್ಕದಾಗಿ ಪ್ರಾರಂಭಿಸಿರಿ: 1500 ರೂಪಾಯಿಗಳಷ್ಟು ಅಲ್ಪಪ್ರಮಾಣದ ಹೂಡಿಕೆಯೊಂದಿಗೆ ನೀವು ಈ ಯೋಜನೆಯನ್ನು ಆರಂಭಿಸಬಹುದು. ನಿಮ್ಮ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ, ನೀವು ಈ ಹಣವನ್ನು ಹೆಚ್ಚಳ ಮಾಡಿಕೊಳ್ಳಬಹುದು.

ನಿಶ್ಚಿತ ರಿಟರ್ನ್ ಗಳು: ಪ್ರತೀ ತಿಂಗಳೂ ಬಡ್ಡಿಯ ರೂಪದಲ್ಲಿ ನೀವು ಆದಾಯ ಗಳಿಸಬಹುದು. ರಿಟರ್ನ್ ಗಳು ಹಣದುಬ್ಬರ ದರವನ್ನು ಮೀರಿ ನಿಲ್ಲಲಾರದವಾದರೂ ಸಹ, ನಿರಖು ಠೇವಣಿಯಂತಹ ಇನ್ನಿತರ ನಿಶ್ಚಿತ ಆದಾಯ ಹೂಡಿಕೆಗಳಿಗೆ ಹೋಲಿಸಿದಲ್ಲಿ ಇದರ ಆದಾಯಗಳು ಹೆಚ್ಚಿರುತ್ತವೆ.

ಟ್ಯಾಕ್ಸ್ ಎಫೀಷಿಯನ್ಸಿ: ಅಂಚೆ ಕಛೇರಿಯಲ್ಲಿ ನೀವು ಹೂಡಿದ ಹಣವು ಸೆಕ್ಷನ್ 80C ವ್ಯಾಪ್ತಿಯಡಿ ಬರದಿರಬಹುದು ಹಾಗೂ ಆದಾಯವು ತೆರಿಗೆಯ ವ್ಯಾಪ್ತಿಗೆ ಒಳಪಡಬಹುದು. ಮತ್ತೊಂದೆಡೆ, ಈ ಹೂಡಿಕೆಯ ಹಣಕ್ಕೆ ಟಿ.ಡಿ.ಎಸ್. ಸಹ ಅನ್ವಯವಾಗುವುದಿಲ್ಲ.

ಅರ್ಹತೆ: ಭಾರತದಲ್ಲಿ ವಾಸವಾಗಿರುವ ನಾಗರೀಕರಷ್ಟೇ ಪಿ.ಓ.ಎಂ.ಐ.ಎಸ್. ಖಾತೆಯನ್ನು ತೆರೆಯಬಹುದು. ಅನಿವಾಸಿ ಭಾರತೀಯರು ಈ ಯೋಜನೆಯ ಪ್ರಯೋಜನಗಳನ್ನು ಅನುಭವಿಸುವಂತಿಲ್ಲ. ನಿಮ್ಮ ಮಗ/ಮಗಳು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಾಗಿದ್ದಲ್ಲಿ, ನೀವು ನಿಮ್ಮ ಮಗನ/ಮಗಳ ಹೆಸರಿನಲ್ಲಿಯೂ ಖಾತೆಯನ್ನು ತೆರೆಯಬಹುದು.

ಪಾವತಿ: ಪ್ರಥಮ ಹೂಡಿಕೆಯನ್ನು ಮಾಡಿದ ಬಳಿಕ, ಒಂದು ತಿಂಗಳ ನಂತರ ನಿಮಗೆ ಬಡ್ಡಿಯ ಪಾವತಿಯಾಗುತ್ತದೆ. ಪ್ರತೀ ತಿಂಗಳ ಆರಂಭದಲ್ಲಿ ಪಾವತಿಯಾಗುವುದಿಲ್ಲ.

ಒಂದಕ್ಕಿಂತ ಹೆಚ್ಚಿನ ಖಾತೆಗಳ ಸ್ವಾಮ್ಯತ್ವ: ನೀವು ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದು. ಆದರೆ ಆ ಎಲ್ಲಾ ಖಾತೆಗಳಲ್ಲಿ ತೊಡಗಿಸಿದ ಒಟ್ಟು ಮೊತ್ತವು 4.5 ಲಕ್ಷಗಳನ್ನು ಮೀರಬಾರದು.

ಜಂಟಿ ಖಾತೆ: ನೀವು ಇಬ್ಬರು ಅಥವಾ ಮೂವರೊಂದಿಗೆ ಜಂಟಿ ಖಾತೆಯನ್ನೂ ತೆರೆಯಬಹುದು. ಖಾತೆಗೆ ಹಣ ಹೂಡುವವರು ಯಾರೇ ಆಗಿರಲಿ, ಖಾತೆಯು ಎಲ್ಲಾ ಖಾತೆದಾರರಿಗೂ ಸಮಾನವಾಗಿ ಸೇರಿದ್ದಾಗಿರುತ್ತದೆ.

ಬಂಡವಾಳದ ವರ್ಗಾವಣೆ: ಹೂಡಿಕೆದಾರನು ಫ಼ಂಡ್ ಗಳನ್ನು ರಿಕರಿಂಗ್ ಡಿಪಾಸಿಟ್ (ಆರ್.ಡಿ) ಗೆ ವರ್ಗಾಯಿಸಬಹುದು. ಈ ಸೌಕರ್ಯವನ್ನು ಅಂಚೆ ಕಛೇರಿಯು ಇತ್ತೀಚೆಗಷ್ಟೇ ಸೇರ್ಪಡೆಗೊಳಿಸಿದೆ.

ವಯಸ್ಸು: ಮೇಲೆ ಸೂಚಿಸಿರುವಂತೆ, 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯೋಮಾನದ ಕಿರಿಯರ ಪರವಾಗಿಯೂ ಸಹ ಈ ಖಾತೆಯನ್ನು ನೀವು ಆರಂಭಿಸಬಹುದು. ಆ ಕಿರಿಯರು ತಮಗೆ 18 ವರ್ಷ ವರ್ಷ ವಯಸ್ಸಾದಾಗ ಅವರು ಖಾತೆಯಲ್ಲಿನ ಹಣವನ್ನು ಪಡೆದುಕೊಳ್ಳಬಹುದು. ಆದಾಗ್ಯೂ, ಕಿರಿಯರ ಹೆಸರಿನಲ್ಲಿ ಹೂಡಿಕೆಯು 3 ಲಕ್ಷ ರೂಪಾಯಿಗಳನ್ನು ಮೀರುವಂತಿಲ್ಲ.

ನಾಮಿನಿ: ಹೂಡಿಕೆದಾರನು ಫಲಾನುಭವಿಯಾಗಿ (ಕುಟುಂಬದ ಸದಸ್ಯ) ಓರ್ವರನ್ನು ನಾಮಾಂಕಿತಗೊಳಿಸಬಹುದು. ಹೀಗೆ ಮಾಡಿದಲ್ಲಿ, ಒಂದು ವೇಳೆ ಹೂಡಿಕೆದಾರನು ಮೃತಪಟ್ಟಲ್ಲಿ ನಾಮಾಂಕಿತನು ಕಾರ್ಪಸ್ ಅನ್ನು ಮತ್ತು ಖಾತೆಗೆ ಸಂಬಂಧಿಸಿದ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು.

ಹಣ/ಬಡ್ಡಿ ವ್ಯವಹಾರದ ಸರಳತೆ: ನೀವು ಮಾಸಿಕ ಬಡ್ಡಿ ಹಣವನ್ನು ನೇರವಾಗಿ ಅಂಚೆ ಕಛೇರಿಯಿಂದ ಪಡೆದುಕೊಳ್ಳಬಹುದು ಅಥವಾ ಅದನ್ನು ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಬಡ್ಡಿ ಹಣವನ್ನು ಎಸ್.ಐ.ಪಿ. ಯಲ್ಲಿ ಮರುಹೂಡುವುದೂ ಸಹ ಲಾಭದಾಯಕ ಆಯ್ಕೆಯೇ ಆಗಿರುತ್ತದೆ.

ವರ್ಗಾವಣೆ: ಒಂದು ನಗರದಿಂದ ಮತ್ತೊಂದೆಡೆಗೆ ನೀವು ಸ್ಥಳಾಂತರಗೊಳ್ಳುವುದಾದಲ್ಲಿ, ನೀವು ಸ್ಥಳಾಂತರಗೊಂಡಿರುವ ಈಗಿನ ನಗರದಲ್ಲಿನ ನಿಮ್ಮ ಅಂಚೆ ಕಛೇರಿಗೆ ಹೆಚ್ಚುವರಿ ಖರ್ಚಿಲ್ಲದೇ ಹಣವನ್ನು ಸುಲಭವಾಗಿ ವರ್ಗಾಯಿಸಿಕೊಳ್ಳಬಹುದು.

ಮರುಹೂಡಿಕೆ: ಎರಡು ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ಗಳಿಸಿಕೊಳ್ಳುವುದಕ್ಕಾಗಿ, ಕಾರ್ಪಸ್ ಪರಿಪಕ್ವವಾದ ಬಳಿಕ, ಅದನ್ನು ನೀವು ಮುಂದಿನ 5 ವರ್ಷಗಳ ಅವಧಿಗಾಗಿ ಅದೇ ಯೋಜನೆಯಲ್ಲಿ ಮರುಹೂಡಿಕೆ ಮಾಡಬಹುದು.

3. ಪಿ.ಓ.ಎಂ.ಐ.ಎಸ್. ಖಾತೆಯನ್ನು ತೆರೆಯುವುದು ಹೇಗೆ ?

3. ಪಿ.ಓ.ಎಂ.ಐ.ಎಸ್. ಖಾತೆಯನ್ನು ತೆರೆಯುವುದು ಹೇಗೆ ?

ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆಯನ್ನು ಆರಂಭಿಸುವುದು ನೀವು ಅಂದುಕೊಂಡಷ್ಟು ಕಷ್ಟವೇನಲ್ಲ. ಉದ್ದನೆಯ ಸರತಿ ಸಾಲುಗಳು ಮತ್ತು ಅದಕ್ಕಿಂತಲೂ ಸುದೀರ್ಘವಾದ ಕಾಗದದ ಕೆಲಸಗಳ ಬಗ್ಗೆ ಕಲ್ಪಿಸಿಕೊಳ್ಳುವುದಕ್ಕೆ ಮೊದಲು, ಹಂತ-ಹಂತವಾದ ವಿಧಾನಗಳ ಬಗ್ಗೆ ಒಮ್ಮೆ ಅವಲೋಕಿಸಿರಿ.
ಒಂದು ವೇಳೆ ನೀವೀಗಾಗಲೇ ಅಂಚೆ ಕಛೇರಿಯ ಉಳಿತಾಯ ಖಾತೆಯನ್ನು ತೆರೆದಿಲ್ಲವೆಂದಾದಲ್ಲಿ, ಅದನ್ನು ತೆರೆಯಿರಿ.
ನಿಮ್ಮ ಅಂಚೆ ಕಛೇರಿಯಿಂದ ಪಿ.ಓ.ಎಂ.ಐ.ಎಸ್. ಅರ್ಜಿ ನಮೂನೆಯನ್ನು ಪಡೆದುಕೊಳ್ಳಿರಿ.
ಕ್ರಮಬದ್ಧವಾಗಿ ಭರ್ತಿಮಾಡಿರುವ ಅರ್ಜಿಯನ್ನು ನಿಮ್ಮ ಅಂಚೆ ಕಛೇರಿಯಲ್ಲಿ, ನಿಮ್ಮ ಗುರುತು ಚೀಟೀಯ ಗ್ಸೆರಾಕ್ಸ್ ಪ್ರತಿ, ವಾಸಸ್ಥಳದ ಸಾಕ್ಷಿಗಳು, ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಪೋಟೊಗಳೊಂದಿಗೆ ಸಲ್ಲಿಸಿರಿ. ಪರಿಶೀಲನೆಗಾಗಿ ಅವುಗಳ ಮೂಲಪ್ರತಿಗಳನ್ನೂ ಜೊತೆಗೊಯ್ಯಲು ದಯವಿಟ್ಟು ಮರೆಯದಿರಿ.
ಅರ್ಜಿಯ ಮೇಲೆ ನೀವು ನಿಮ್ಮ ಸಾಕ್ಷಿದಾರರ ಅಥವಾ ನಾಮಾಂಕಿತ ವ್ಯಕ್ತಿ/ವ್ಯಕ್ತಿಗಳ ಸಹಿಗಳನ್ನು ಪಡೆದುಕೊಳ್ಳಬೇಕು.
ನಗದು ಅಥವಾ ಚೆಕ್ ನ ಮೂಲಕ ನಿಮ್ಮ ಆರಂಭಿಕ ಠೇವಣಿಯನ್ನು ಹೂಡಿರಿ. ಮುಂದಿನ ದಿನಾಂಕದ ಚೆಕ್ ಅನ್ನು ನೀವು ನೀಡಿದಲ್ಲಿ, ಆ ದಿನವನ್ನೇ ಖಾತೆ ತೆರೆಯುವಿಕೆಯ ದಿನವೆಂದು ಪರಿಗಣಿಸಲಾಗುವುದು.

4. ಯೋಜನೆಯು ಪರಿಪಕ್ವಗೊಳ್ಳುವುದಕ್ಕೆ ಮುಂಚಿತವಾಗಿಯೇ ವಿತ್ ಥ್ರಾ ಮಾಡುವುದರ ಪರಿಣಾಮಗಳು

4. ಯೋಜನೆಯು ಪರಿಪಕ್ವಗೊಳ್ಳುವುದಕ್ಕೆ ಮುಂಚಿತವಾಗಿಯೇ ವಿತ್ ಥ್ರಾ ಮಾಡುವುದರ ಪರಿಣಾಮಗಳು

ಪಿ.ಓ.ಎಂ.ಐ.ಎಸ್. ವಿತ್ ಡ್ರಾವಲ್ ನ ಸಮಯ - ಅವಧಿಪೂರ್ವ ವಿತ್ ಡ್ರಾವಲ್ ನ ಪರಿಣಾಮ.
ಒಂದು ವರ್ಷಕ್ಕೆ ಮುಂಚಿತವಾಗಿಯೇ ವಿತ್ ಡ್ರಾ ಮಾಡಿದಲ್ಲಿ - ಶೂನ್ಯ ಪ್ರಯೋಜನ.
ಮೊದಲನೆಯ ಮತ್ತು ಮೂರನೆಯ ವರ್ಷಗಳ ನಡುವೆ ಖಾತೆಯನ್ನು ಮುಚ್ಚಿದಲ್ಲಿ - ಶೇ. 2ರಷ್ಟರ ಜುಲ್ಮಾನೆಯ ಬಳಿಕ ಸಂಪೂರ್ಣ ಠೇವಣಿಯನ್ನು ಹಿಂದಿರುಗಿಸಲಾಗುವುದು.
ಯೋಜನೆಯನ್ನು ಮೂರನೆಯ ಹಾಗೂ ಐದನೆಯ ವರ್ಷಗಳ ನಡುವೆ ಸ್ಥಗಿತಗೊಳಿಸಿದಲ್ಲಿ - ಕೇವಲ ಶೇ. 1ರಷ್ಟರ ದಂಡದೊಂದಿಗೆ ಸಂಪೂರ್ಣ ಕಾರ್ಪಸ್ ಅನ್ನು ಮರಳಿಸಲಾಗುವುದು.

5. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಇತರ ಮಾಸಿಕ ಆದಾಯ ಯೋಜನೆಗಳೊಂದಿಗೆ ಹೋಲಿಕೆ:

5. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಇತರ ಮಾಸಿಕ ಆದಾಯ ಯೋಜನೆಗಳೊಂದಿಗೆ ಹೋಲಿಕೆ:

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಮಿತವಾದ ತೆರಿಗೆ ಸಂಬಂಧಿತ ಪ್ರಯೋಜನಗಳಿರುವುದಾದರೂ ಕೂಡಾ, ಪಿ.ಓ.ಎಂ.ಐ.ಎಸ್., ರಿಸ್ಕ್ ಅನ್ನು ತೆಗೆದುಕೊಳ್ಳಬಯಸದ ಹೂಡಿಕೆದಾರರಿಗೆ ಹೊಂದಿಕೆಯಾಗುವಂತಹ ಪ್ಲೆಕ್ಸಿಬಿಲಿಟಿ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿದೆ. ಒಂದು ವೇಳೆ, ನೀವು ಅದೇ ವರ್ಗಕ್ಕೆ ಸೇರಿದವರೆಂದಾದಲ್ಲಿ, ಯೋಜನೆಯನ್ನು ಆರಂಭಗೊಳಿಸಲು ನಿಮಗಿದು ಸಕಾಲ.

English summary

Post Office Monthly Income Scheme (POMIS)

Post Office Monthly Income Scheme is a scheme in which you invest a certain amount and earn a fixed interest every month.
Story first published: Tuesday, May 15, 2018, 9:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X