For Quick Alerts
ALLOW NOTIFICATIONS  
For Daily Alerts

ಅಲ್ಪಾವಧಿ ಹಣ ಹೂಡಿಕೆಗಾಗಿ 10 ಉತ್ತಮ ವಿಧಾನಗಳು, ತಪ್ಪದೇ ತಿಳಿದುಕೊಳ್ಳಿ..

ನಮ್ಮ ಜೀವನದಲ್ಲಿ ಕಡಿಮೆ ಕಾಲಾವಧಿಯಲ್ಲಿ ಉಂಟಾಗಬಹುದಾದ ಹಣಕಾಸು ಅಗತ್ಯತೆಗಳ ಪೂರೈಕೆಗಾಗಿ ಹಣಕಾಸು ಯೋಜನೆಗಳಲ್ಲಿ ಹಣ ತೊಡಗಿಸುವಿಕೆ ಅಲ್ಪಾವಧಿ ಹೂಡಿಕೆ ಎಂದು ಕರೆಸಿಕೊಳ್ಳುತ್ತದೆ.

By Siddu
|

ನಮ್ಮ ಜೀವನದಲ್ಲಿ ಕಡಿಮೆ ಕಾಲಾವಧಿಯಲ್ಲಿ ಉಂಟಾಗಬಹುದಾದ ಹಣಕಾಸು ಅಗತ್ಯತೆಗಳ ಪೂರೈಕೆಗಾಗಿ ಹಣಕಾಸು ಯೋಜನೆಗಳಲ್ಲಿ ಹಣ ತೊಡಗಿಸುವಿಕೆ ಅಲ್ಪಾವಧಿ ಹೂಡಿಕೆ ಎಂದು ಕರೆಸಿಕೊಳ್ಳುತ್ತದೆ.
ಉದಾಹರಣೆಗಾಗಿ ನೋಡುವುದಾದರೆ, ಮುಂದಿನ ವರ್ಷದಲ್ಲಿ ಒಂದು ಬೈಕ್ ಖರೀದಿಸಬೇಕೆನ್ನುವ ನಿರ್ಧಾರ ಮಾಡಿ, ಅದಕ್ಕಾಗಿ ಹಣ ಉಳಿತಾಯ ಮಾಡಲು ಆರಂಭಿಸುತ್ತೀರಿ. ಇದು ಅಲ್ಪಾವಧಿ ಹೂಡಿಕೆಯ ವಿಧಾನವಾಗಿದೆ. ಒಂದು ವರ್ಷದ ಅವಧಿಯಲ್ಲಿ ಬೈಕ್ ಖರೀದಿಸಬೇಕೆನ್ನುವುದು ಅಲ್ಪಾವಧಿ ಯೋಜನೆಯಾಗಿದೆ.
ಹತ್ತಿರದ ಭವಿಷ್ಯತ್ತಿನಲ್ಲಿ ಬೇಕಾಗಬಹುದಾದ ಹಣಕಾಸಿನ ಕ್ರೋಢೀಕರಣದ ಗುರಿಯೊಂದಿಗೆ ಉಳಿತಾಯ ಮಾಡುವ ಎಲ್ಲ ಯೋಜನೆಗಳು ಅಲ್ಪಾವಧಿ ಹೂಡಿಕೆ ಎನಿಸಿಕೊಳ್ಳುತ್ತವೆ.

 

ನೀವು ಅಲ್ಪಾವಧಿಗಾಗಿ ಹಣ ಹೂಡಿಕೆ ಮಾಡಲು ಬಯಸುವಿರಾದರೆ ನಿಮಗಾಗಿ ಇಲ್ಲಿವೆ ಅತ್ಯುತ್ತಮ ೧೦ ಹೂಡಿಕೆ ವಿಧಾನಗಳು. ಮಧ್ಯಮ ಪ್ರಮಾಣದ ಆದಾಯ ತರುವ ಜೊತೆಗೆ ಬೇಕಾದಾಗ ಸರಳವಾಗಿ ಹೂಡಿಕೆಯನ್ನು ಹಿಂಪಡೆಯಲು ಈ ಯೋಜನೆಗಳು ಸಮರ್ಪಕವಾಗಿವೆ. ಇಲ್ಲಿ ನೀಡಲಾಗಿರುವ ಎಲ್ಲ ಅಲ್ಪಾವಧಿ ಯೋಜನೆಗಳ ಬಗ್ಗೆ ತಿಳಿದುಕೊಂಡು, ನಿಮ್ಮ ಹಣಕಾಸು ಗುರಿ ಹಾಗೂ ಹೂಡಿಕೆ ವಿಧಾನದ ಆಧಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬಹುದು. ಭಾರತದಲ್ಲಿ ಅತೀ ಹೆಚ್ಚು ಸಂಬಳ ನೀಡುವ 11 ಸರ್ಕಾರಿ ಉದ್ಯೋಗಗಳು

ಅಲ್ಪಾವಧಿಗಾಗಿ ಹಣ ಹೂಡಿಕೆ ಮಾಡುವ ಕೆಲ ಕಾರಣ

ಅಲ್ಪಾವಧಿಗಾಗಿ ಹಣ ಹೂಡಿಕೆ ಮಾಡುವ ಕೆಲ ಕಾರಣ

ವರ್ಷದ ನಂತರ ಕುಟುಂಬದೊಂದಿಗೆ ಭಾರತ ದೇಶ ಪ್ರವಾಸ ಅಥವಾ ವಿದೇಶ ಸಂಚಾರ.

ಮೂರು ವರ್ಷಗಳ ನಂತರ ಮಗನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸುವುದು.
ಎರಡು ವರ್ಷಗಳ ನಂತರ ಹೊಸ ವಾಹನ ಖರೀದಿಸುವುದು.
ಕೆಲ ವರ್ಷಗಳಲ್ಲಿ ಮನೆಯ ನವೀಕರಣ.
ಕುಟುಂಬ ಸದಸ್ಯರಿಗಾಗಿ ಕಾಣಿಕೆ ಖರೀದಿಸುವುದು.
ಇನ್ನಿತರ ಯಾವುದೇ ಅಲ್ಪಾವಧಿಯ ಯೋಜನೆ.

ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

ಸುರಕ್ಷಿತ ಅಲ್ಪಾವಧಿ ಹೂಡಿಕೆ ಆಯ್ಕೆಗಳು

ಸುರಕ್ಷಿತ ಅಲ್ಪಾವಧಿ ಹೂಡಿಕೆ ಆಯ್ಕೆಗಳು

ಬ್ಯಾಂಕ್ ಉಳಿತಾಯ ಖಾತೆ

ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಹಣ ಇಡುವುದು ಸದ್ಯ ದೇಶದಲ್ಲಿ ಲಭ್ಯವಿರುವ ಅತ್ಯಂತ ಸುರಕ್ಷಿತ ಹಣ ಉಳಿತಾಯದ ವಿಧಾನವಾಗಿದೆ. ಅವಶ್ಯಕತೆಯ ಸಂದರ್ಭದಲ್ಲಿ ಯಾವುದೇ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಬಹುದು. ಸಾಮಾನ್ಯವಾಗಿ ಉಳಿತಾಯ ಖಾತೆಯಲ್ಲಿ ಇಟ್ಟ ಹಣಕ್ಕೆ ವಾರ್ಷಿಕ ಶೇ. 4 ರ ದರದಲ್ಲಿ ಬಡ್ಡಿ ಲಭ್ಯವಾಗುತ್ತದೆ. ಯೆಸ್ ಬ್ಯಾಂಕ್, ಕೋಟಕ್ ಬ್ಯಾಂಕ್ ಸೇರಿದಂತೆ ಇನ್ನೂ ಕೆಲ ಬ್ಯಾಂಕ್‌ಗಳು ಶೇ. 6 ರಷ್ಟು ಬಡ್ಡಿ ನೀಡುತ್ತವೆ ಎಂಬ ವಿಷಯ ನಿಮಗೆ ಗೊತ್ತಿರಲಿ.

ಆಟೋ ಸ್ವೀಪ್ ಅಕೌಂಟ್
 

ಆಟೋ ಸ್ವೀಪ್ ಅಕೌಂಟ್

ಸಾಮಾನ್ಯ ಉಳಿತಾಯ ಖಾತೆ ಬಿಟ್ಟರೆ ಹಣ ಹೂಡಿಕೆ ಮಾಡಲು ಆಟೋ ಸ್ವೀಪ್ ಉಳಿತಾಯ ಬ್ಯಾಂಕ್ ಖಾತೆ ಅತಿ ಸುರಕ್ಷಿತವಾಗಿದೆ. ನಿಮ್ಮ ಅಕೌಂಟಿನಲ್ಲಿರುವ ಹೆಚ್ಚುವರಿ ಹಣಕ್ಕೆ ಹೆಚ್ಚಿನ ದರದ ಬಡ್ಡಿಯನ್ನು ಈ ಅಕೌಂಟಿನಿಂದ ಪಡೆಯಬಹುದು. ಸುಮಾರು ಶೇ.9 ರವರೆಗೂ ಬಡ್ಡಿಯನ್ನು ಸ್ವೀಪ್ ಅಕೌಂಟ್‌ನಿಂದ ಪಡೆಯುವ ಸಾಧ್ಯತೆ ಇದೆ.

ಕಡಿಮೆ ಅವಧಿಯ ನಿಶ್ಚಿತ ಠೇವಣಿ

ಕಡಿಮೆ ಅವಧಿಯ ನಿಶ್ಚಿತ ಠೇವಣಿ

ಎಫ್‌ಡಿ ಎಂದು ಕರೆಯಲಾಗುವ ನಿಶ್ಚಿತ ಅವಧಿಯ ಠೇವಣಿ ಯೋಜನೆಗಳು ಭಾರತೀಯರಿಗೆ ಅಚ್ಚು ಮೆಚ್ಚಿನದಾಗಿವೆ. ಈ ನಿಶ್ಚಿತ ಠೇವಣಿ ಯೋಜನೆಗಳಲ್ಲಿ ಹಣ ಹೂಡಿಕೆಯ ಕಾಲಾವಧಿಯ ಅನುಸಾರ ಶೇ. 6 ರಿಂದ 9 ರವರೆಗೆ ಬಡ್ಡಿ ಗಳಿಸಬಹುದು. ದೇಶದ ಯಾವುದೇ ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್ ಶಾಖೆಗಳಲ್ಲಿ ಎಫ್‌ಡಿ ಖಾತೆ ತೆರೆಯಬಹುದು. ಈ ನಿಶ್ಚಿತ ಠೇವಣಿಗೆ ಸಿಗುವ ಬಡ್ಡಿಯ ಮೇಲೆ ಸರಕಾರಕ್ಕೆ ತೆರಿಗೆ ನೀಡಬೇಕಾಗುತ್ತದೆ.

ಮರುಕಳಿಸುವ ಠೇವಣಿ (RD) ಯೋಜನೆ

ಮರುಕಳಿಸುವ ಠೇವಣಿ (RD) ಯೋಜನೆ

ಸುರಕ್ಷಿತ ಹಾಗೂ ವಿಶ್ವಾಸಾರ್ಹ ಹೂಡಿಕೆ ಯೋಜನೆಯ ಹುಡುಕಾಟದಲ್ಲಿ ನೀವಿದ್ದರೆ, ಮರುಕಳಿಸುವ ಠೇವಣಿ ಯೋಜನೆ ನಿಮಗೆ ಬೆಸ್ಟ್. ರಿಕರಿಂಗ್ ಡಿಪಾಸಿಟ್ ಅಥವಾ ಆರ್‌ಡಿ ಎಂದು ಜನಪ್ರಿಯವಾಗಿರುವ ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಹಣ ಉಳಿತಾಯ ಮಾಡುತ್ತ ಹೋಗುವಿರಿ. 6 ತಿಂಗಳಿಂದ 10 ವರ್ಷದ ಅವಧಿಯವರೆಗೆ ಹಣ ಹೂಡಿಕೆ ಮಾಡುತ್ತ ಹೋಗಬಹುದು.
ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಆರ್‌ಡಿ ಖಾತೆ ಆರಂಭಿಸಬಹುದು. ಆರ್‌ಡಿ ಮೇಲೆ ಸಿಗುವ ಬಡ್ಡಿಗೆ ತೆರಿಗೆ ಕಟ್ಟಬೇಕು.

ನಿಶ್ಚಿತ ಅವಧಿಯ ಮುಕ್ತಾಯ ಯೋಜನೆ

ನಿಶ್ಚಿತ ಅವಧಿಯ ಮುಕ್ತಾಯ ಯೋಜನೆ

ಇಂಗ್ಲಿಷ್‌ನಲ್ಲಿ ಫಿಕ್ಸಡ್ ಮ್ಯಾಚುರಿಟಿ ಪ್ಲ್ಯಾನ್ ಎಂದು ಕರೆಯಲಾಗುವ ನಿಶ್ಚಿತ ಅವಧಿಯ ಮುಕ್ತಾಯ ಯೋಜನೆ ಅಲ್ಪಾವಧಿ ಹೂಡಿಕೆಗಾಗಿ ಸೂಕ್ತವಾಗಿದೆ. ಇದೊಂದು ಮ್ಯೂಚುವಲ್ ಫಂಡ್‌ಗೆ ಸಂಬಂಧಿಸಿದ ಹೂಡಿಕೆ ವಿಧಾನವಾಗಿದ್ದು, 15 ದಿಗಳಿಂದ 5 ವರ್ಷದವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಕೆಲ ಯೋಜನೆಗಳು 3 ವರ್ಷದ ಲಾಕ್ ಇನ್ ಅವಧಿ ಹೊಂದಿವೆ. ಇದು ಎಫ್‌ಡಿ ರೀತಿಯಲ್ಲೇ ಕಾರ್ಯನಿರ್ವಹಿಸುತ್ತದೆ.

ಅಪಾಯಕಾರಿ ಅಲ್ಪಾವಧಿ ಹೂಡಿಕೆ ವಿಧಾನಗಳು

ಅಪಾಯಕಾರಿ ಅಲ್ಪಾವಧಿ ಹೂಡಿಕೆ ವಿಧಾನಗಳು

ಕಂಪನಿಯಲ್ಲಿ ಫಿಕ್ಸೆಡ್ ಡಿಪಾಸಿಟ್

ಕಂಪನಿಗಳ ನಿಶ್ಚಿತ ಅವಧಿಯ ಯೋಜನೆಗಳಲ್ಲಿ ಹಣ ಹೂಡಿಕೆ ಅಲ್ಪಾವಧಿ ಹೂಡಿಕೆ ವಿಧಾನಗಳಲ್ಲೊಂದಾಗಿದೆ. ದೊಡ್ಡ ಕಾರ್ಪೊರೇಟ್ ಕಂಪನಿಗಳು ತಮ್ಮ ಕಂಪನಿ ವಿಸ್ತರಣೆಗೆ ಎಫ್‌ಡಿ ಯೋಜನೆಗಳ ಮೂಲಕ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತವೆ. ಸಾಮಾನ್ಯ ಎಫ್‌ಡಿಗಿಂತ ಈ ಕಂಪನಿ ಯೋಜನೆಗಳಲ್ಲಿ ಹೆಚ್ಚು ಬಡ್ಡಿ ದೊರಕುವುದಾದರೂ, ಇವುಗಳಲ್ಲಿ ಹಣ ಹೂಡಿಕೆ ಮಾಡುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಸಾಲ ನಿಧಿ/ಡೆಬ್ಟ್ ಫಂಡ್ಸ್

ಸಾಲ ನಿಧಿ/ಡೆಬ್ಟ್ ಫಂಡ್ಸ್

ಡೆಬ್ಟ್ ಫಂಡ್ ಎಂದು ಕರೆಯಲಾಗುವ ಸಾಲ ನಿಧಿ ಯೋಜನೆ ಮ್ಯೂಚುವಲ್ ಫಂಡ್‌ನ ಇನ್ನೊಂದು ವಿಧಾನವಾಗಿದೆ. ಮ್ಯೂಚುವಲ್ ಫಂಡ್‌ನ ನಿಶ್ಚಿತ ಆದಾಯ ಯೋಜನೆಗಳಾದ ಬಾಂಡ್ ಮುಂತಾದ ವಿಧಾನಗಳಲ್ಲಿ ಹಣ ಹೂಡಲಾಗುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಾಲ ನಿಧಿ ಯೋಜನೆಗಳು ಲಭ್ಯವಿವೆ. ಈ ಯೋಜನೆಗಳಿಂದ ಹೂಡಿಕೆದಾರರಿಗೆ ನಿಯಮಿತ ಹಾಗೂ ಸ್ಥಿರ ಆದಾಯ ದೊರಕುತ್ತದೆ.

ಇಕ್ವಿಟಿ ಆಧಾರಿತ ಉಳಿತಾಯ ಯೋಜನೆಗಳು

ಇಕ್ವಿಟಿ ಆಧಾರಿತ ಉಳಿತಾಯ ಯೋಜನೆಗಳು

ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ (ಇಎಲ್‌ಎಸ್‌ಎಸ್) ಎಂದು ಕರೆಯಲಾಗುವ ಇಕ್ವಿಟಿ ಆಧಾರಿತ ಉಳಿತಾಯ ಯೋಜನೆಗಳು ತೆರಿಗೆ ಉಳಿಸುವ ಹಾಗೂ ಸುನಿಶ್ಚಿತ ಆದಾಯಕ್ಕಾಗಿ ಸೂಕ್ತ ಅಲ್ಪಾವಧಿ ಹೂಡಿಕೆ ಆಯ್ಕೆಯಾಗಿವೆ. ಇವುಗಳಲ್ಲಿ ಶೇ. 12 ರಿಂದ 14 ರವರೆಗೆ ಕರ ಮುಕ್ತ ಆದಾಯ ಗಳಿಸಬಹುದು. ಆದರೆ ಇವು 3 ವರ್ಷ ಲಾಕ್ ಇನ್ ಅವಧಿಯದ್ದಾಗಿರುತ್ತವೆ.

ಸಮತೋಲಿತ ಮ್ಯೂಚುವಲ್ ಫಂಡ್

ಸಮತೋಲಿತ ಮ್ಯೂಚುವಲ್ ಫಂಡ್

ಮಧ್ಯಮ ಪ್ರಮಾಣದ ರಿಸ್ಕ್‌ನೊಂದಿಗೆ ಹಣ ಹೂಡಲು ಬಯಸುವವರಿಗೆ ಸಮತೋಲಿತ ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆಯಾಗಿದೆ. ಶೇ. 10 ರಿಂದ 12ರಷ್ಟು ಆದಾಯವನ್ನು ಈ ಫಂಡನಿಂದ ನಿರೀಕ್ಷಿಸಬಹುದು.

ಚಿನ್ನದ ಮೇಲೆ ಹೂಡಿಕೆ

ಚಿನ್ನದ ಮೇಲೆ ಹೂಡಿಕೆ

ಚಿನ್ನದ ಮೇಲೆ ಹಣ ಹೂಡುವುದು ಕೊನೆಯ ಆಯ್ಕೆಯಾಗಿದೆ. ಹಣದುಬ್ಬರದಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮ ತಡೆಗೆ ಚಿನ್ನದ ಮೇಲೆ ಹಣ ಹೂಡುವುದು ಸುರಕ್ಷಿತ. ಆದರೂ ಅಲ್ಪಾವಧಿಗಾಗಿ ಚಿನ್ನದ ಮೇಲೆ ಹಣ ವಿನಿಯೋಗಿಸುವಿಕೆ ಅಪಾಯಕಾರಿಯಾಗಬಹುದು. ಎರಡು ವರ್ಷ ಅಥವಾ ಅದಕ್ಕೂ ಹೆಚ್ಚು ಅವಧಿಗೆ ಉಳಿತಾಯ ಮಾಡುವುದಾದರೆ ಮಾತ್ರ ಚಿನ್ನದ ಮೊರೆ ಹೋಗುವುದು ಸೂಕ್ತ. ಗೋಲ್ಡ್ ಇಟಿಎಫ್ ಮುಖಾಂತರ ಚಿನ್ನದ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ವಿಧಾನವಾಗಿದೆ.

ಹೀಗೆ ನಮ್ಮ ದೇಶದಲ್ಲಿ ಅಲ್ಪಾವಧಿ ಹಣ ಹೂಡಿಕೆ ಮಾಡಲು ಹಲವಾರು ವಿಧಾನಗಳಿವೆ. ಇಲ್ಲಿ ತಿಳಿಸಲಾದ ಎಲ್ಲ ಆಯ್ಕೆಗಳಲ್ಲಿ ಅತಿ ಹೆಚ್ಚಿನ ಆದಾಯ ಸಿಗದಿದ್ದರೂ ಒಂದು ಮಧ್ಯಮ ಗಾತ್ರದ ಆದಾಯವನ್ನು ಈ ಯೋಜನೆಗಳ ಮುಖಾಂತರ ನೀವು ಗಳಿಸಬಹುದಾಗಿದೆ.

English summary

Short term Investment options in India

A short term investment is one where investment is made for the shorter duration in order to meet short term goals.
Story first published: Saturday, May 12, 2018, 8:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X