For Quick Alerts
ALLOW NOTIFICATIONS  
For Daily Alerts

ನೀವು ಸೃಜನಶೀಲರೆ.. ನಿಮಗಾಗಿ ಟಾಪ್ ಬಿಸಿನೆಸ್ ಐಡಿಯಾಸ್

ಸೃಜನಾತ್ಮಕ ವ್ಯಕ್ತಿಗಳಲ್ಲಿ ಸ್ವಂತ ಉದ್ಯೋಗದ ಕಲ್ಪನೆ ವಿಪುಲವಾಗಿರುತ್ತದೆ. ಏಕೆಂದರೆ ಅವರು ಜನ್ಮತಃ ಒಂದು ರೀತಿಯ ಸೃಜನಾತ್ಮಕ ಪ್ರತಿಭೆ ಹೊಂದಿರುತ್ತಾರೆ. ಕೇವಲ ಅವರು ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು ಮತ್ತು ಅದನ್ನು ಪೋಷಿಸಬೇಕು.

By Siddu
|

ಸೃಜನಾತ್ಮಕ ವ್ಯಕ್ತಿಗಳಲ್ಲಿ ಸ್ವಂತ ಉದ್ಯೋಗದ ಕಲ್ಪನೆ ವಿಪುಲವಾಗಿರುತ್ತದೆ. ಏಕೆಂದರೆ ಅವರು ಜನ್ಮತಃ ಒಂದು ರೀತಿಯ ಸೃಜನಾತ್ಮಕ ಪ್ರತಿಭೆ ಹೊಂದಿರುತ್ತಾರೆ. ಕೇವಲ ಅವರು ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು ಮತ್ತು ಅದನ್ನು ಪೋಷಿಸಬೇಕು. ಅವರು ತಮ್ಮ ಪ್ರತಿಭೆಯನ್ನು ಬಳಸಿಕೊಂಡು ವಿವಿಧ ರೀತಿಯ ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು. ಅವರು ಹೆಚ್ಚಿನದೇನನ್ನೂ ಮಾಡಬೇಕಿಲ್ಲ. ತಾವು ಈಗಾಗಲೇ ಮಾಡಲು ಇಷ್ಟ ಪಡುವಂತಹ ಕೆಲಸವನ್ನು ಕಾರ್ಯರೂಪಕ್ಕೆ ತರಬೇಕಷ್ಟೆ. ಇದು ಅವರಿಗೆ ಮನಸ್ಸಂತೋಷ ನೀಡುವುದಲ್ಲದೇ ಹಣ ಸಂಪಾದಿಸಲೂ ಸಹಾಯ ಮಾಡುತ್ತದೆ.

ಸೃಜನಾತ್ಮಕ ವ್ಯಕ್ತಿಗಳು ಮನೆಯಿಂದಲೇ ನಡೆಸಬಹುದಾದ ಕೆಲ ಉದ್ಯೋಗಗಳು ಇಲ್ಲಿ ನೀಡಲಾಗಿದೆ.

ಸಂಗೀತ ಪಾಠ

ಸಂಗೀತ ಪಾಠ

ಸಂಗೀತಕ್ಕೆ ಯಾವುದೇ ರೀತಿಯ ವಯಸ್ಸಿನ ಬೇಧವಿಲ್ಲ. ಅಬಾಲವೃದ್ಧರಾಗಿ ಎಲ್ಲರೂ ಸಂಗೀತವನ್ನು ಆಸ್ವಾದಿಸುತ್ತಾರೆ. ನಿಮ್ಮಲ್ಲಿ ಉತ್ತಮ ಶಾರೀರ ಹಾಗೂ ಲಯವಿದ್ದಲ್ಲಿ ನೀವು ಕೆಲ ಸಂಗೀತ ವಾದ್ಯಗಳನ್ನಿಟ್ಟುಕೊಂಡು ಸ್ಟುಡಿಯೋವೊಂದನ್ನು ಸ್ಥಾಪಿಸಿ, ಸಂಗೀತವನ್ನು ಹೇಳಿ ಕೊಡಬಹುದು. ಇತ್ತಿಚಿನ ದಿನಗಳಲ್ಲಿ ಸಂಗೀತವನ್ನು ತಮ್ಮ ಭವಿಷ್ಯವನ್ನಾಗಿ ರೂಪಿಸಿಕೊಳ್ಳಬಯಸುವವರ ಸಂಖ್ಯೆ ಅಧಿಕವಾಗುತ್ತಿರುವುದರಿಂದ ಇದೊಂದು ಉತ್ತಮ ಹಣ ತಂದುಕೊಡಬಲ್ಲ ಉದ್ಯೋಗವಾಗಬಲ್ಲದು.

ಆಭರಣಗಳ ಉದ್ಯಮ

ಆಭರಣಗಳ ಉದ್ಯಮ

ಮಣಿಗಳ ಆಭರಣ ತೊಡುವುದು ಇತ್ತಿಚಿನ ದಿನಗಳಲ್ಲಿ ಕಾಲೇಜ್ ವಿದ್ಯಾರ್ಥಿಗಳ ಫ್ಯಾಶನ್ ಆಗಿದೆ. ನಿಮ್ಮ ವಿನೂತನ ಕಲ್ಪನೆಯ, ವಿವಿಧ ರೀತಿಯ ಮಣಿಗಳ ಆಭರಣವನ್ನು ಮನೆಯಲ್ಲಿಯೇ ತಯಾರಿಸುವುದು ಕ್ರಿಯಾತ್ಮಕ ವ್ಯಕ್ತಿಗಳಿಗೆ ಒಂದು ಉತ್ತಮ ಉದ್ಯೋಗವಾಗಬಲ್ಲದು.

ಹೊಲಿಗೆ ಹಾಗೂ ಹೆಣಿಗೆ ಕೆಲಸ
 

ಹೊಲಿಗೆ ಹಾಗೂ ಹೆಣಿಗೆ ಕೆಲಸ

ಹೊಲಿಗೆ ಹಾಗೂ ಹೆಣಿಗೆ ಕೆಲಸದಲ್ಲಿ ನೀವು ಉತ್ತಮ ಪರಿಣಿತಿಯನ್ನು ಹೊಂದಿದ್ದರೆ, ಇದೊಂದು ಉತ್ತಮ ಲಾಭದಾಯಕ ಉದ್ಯಮವಾಗಬಲ್ಲದು. ಜನರು ಕೈನಲ್ಲಿ ಹೆಣೆದ ಉಣ್ಣೆಯ ಬಟ್ಟೆಗಳನ್ನು ತೊಡಲು ಇಷ್ಟಪಡುತ್ತಾರೆ ಮತ್ತು ಅದಕ್ಕಾಗಿ ಹೆಚ್ಚಿನ ಹಣವನ್ನು ವ್ಯಯಿಸಲು ತಯಾರಿರುತ್ತಾರೆ. ಏಕೆಂದರೆ ಕೈಯಿಂದ ತಯಾರಿಸಿದ ಬಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹೊಲಿಗೆ ಕೆಲಸದಲ್ಲಿ ಪರಿಣಿತಿ ಹೊಂದಿರುವವರು ತಮ್ಮ ನೆರೆಹೊರೆಯಲ್ಲಿರುವವರ ಬಟ್ಟೆ, ಪರದೆ ಅಥವಾ ಮೆತ್ತೆಗಳನ್ನು ಹೊಲಿದು ಹಣ ಸಂಪಾದಿಸಬಹುದು.

ಚಿತ್ರಕಲಾ ಶಾಲೆ

ಚಿತ್ರಕಲಾ ಶಾಲೆ

ಚಿತ್ರಕಲೆ ಅಥವಾ ರೇಖಾಚಿತ್ರ ರಚಿಸುವುದು ನಿಮಗಿಷ್ಟವಾದಲ್ಲಿ, ನೀವೊಂದು ಚಿತ್ರಕಲಾ ಶಾಲೆಯನ್ನು ತೆರೆಯಬಹುದು. ಇತ್ತಿಚಿನ ದಿನಗಳಲ್ಲಿ ಮಕ್ಕಳು ತಮ್ಮ ದಿನವಹಿ ಏಕತಾನತೆಯ ಶಾಲಾ ಅಭ್ಯಾಸಕ್ರಮದಿಂದ ಸ್ವಲ್ಪ ವಿರಾಮ ಪಡೆಯಲು ಬಹಳಷ್ಟು ಪಠ್ಯೇತರ ಚಟುವಟಿಕೆಗಳಲ್ಲಿ ವ್ಯಾಪಕವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಚಿತ್ರಕಲೆ ಅಥವಾ ರೇಖಾಚಿತ್ರ ರಚಿಸುವುದನ್ನು ಹೇಳಿಕೊಡುವುದು ಸಹಾ ಕಲಾಕಾರರಿಗೆ ಒಂದು ಉತ್ತಮ ಹಣ ಸಂಪಾದನೆಯ ಮಾರ್ಗ.

ಮೃದು ಆಟಿಕೆ ತಯಾರಿಕೆ

ಮೃದು ಆಟಿಕೆ ತಯಾರಿಕೆ

ಈ ಉದ್ಯಮಕ್ಕೆ ಕರಕೌಶಲ್ಯದಲ್ಲಿ ಸಮರ್ಪಕವಾದ ಪರಿಣಿತಿ ಅವಶ್ಯಕ. ಮೃದು ಆಟಿಕೆ ತಯಾರಿಸುವುದು ಭಾರತದಲ್ಲಿ ಒಂದು ಬಹುಲಾಭ ತಂದುಕೊಡಬಲ್ಲ, ಆದರೆ ತಕ್ಕಮಟ್ಟಿಗೆ ಧೈರ್ಯದಿಂದ ಮುನ್ನುಗ್ಗಬೇಕಾದ ಒಂದು ಉದ್ಯಮವಾಗಿದೆ. ಇಂತಹ ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ವಿವಿಧ ರೀತಿಯ ಮೃದು ಆಟಿಕೆ ತಯಾರಿಸಿ ಮಾರುವುದರಿಂದ ಪ್ರಸರಿಸಿಕೊಳ್ಳಬಹುದು.

ಕರಕುಶಲ ವಸ್ತುಗಳ ತಯಾರಿಕೆ

ಕರಕುಶಲ ವಸ್ತುಗಳ ತಯಾರಿಕೆ

ಕರಕುಶಲ ವಸ್ತುಗಳಿಗೆ ಭಾರತದಲ್ಲಿ ಬಹುದೊಡ್ಡ ಬೇಡಿಕೆಯಿದೆ. ಈಗಲೂ ಜನರು ಸಾಂಪ್ರದಾಯಿಕವಾಗಿ ಚಿತ್ರಿಸಿದ ಮಣ್ಣಿನ ಮಡಿಕೆಗಳು, ಗೋಡೆಗೆ ತೂಗು ಹಾಕುವಂತಹ ಅಲಂಕಾರಿಕ ವಸ್ತುಗಳು ಹಾಗೂ ಭಾವಚಿತ್ರ ಚೌಕಟ್ಟುಗಳನ್ನು ಕೊಳ್ಳಲು ಇಷ್ಟ ಪಡುತ್ತಾರ. ನಿಮಗೆ ಮಡಿಕೆ ಬಣ್ಣಗಾರಿಕೆ, ಗಾಜಿನ ಮೇಲೆ ಚಿತ್ರಿಸುವುದು ಮತ್ತು ತುಂತುರು ಚಿತ್ರಕಲೆಯಂತಹಾ ವಿಷಯಗಳಲ್ಲಿ ಪರಿಣಿತಿ ಇದ್ದರೆ, ನೀವು ಇದನ್ನು ಪೂರ್ಣ ಪ್ರಮಾಣದ ಉದ್ಯೋಗವನ್ನಾಗಿ ಮುಂದುವರಿಸಿಕೊಂಡು ಹೋಗಬಹುದು.

ಅಡುಗೆ

ಅಡುಗೆ

ನೀವು ಉತ್ತಮ ಅಡುಗೆಗಾರರಾಗಿದ್ದು, ವಿವಿಧ ರೀತಿಯ ಸಾಂಸ್ಕೃತಿಕ ಪಾಕ ಪದ್ಧತಿಯಲ್ಲಿ ಅಡುಗೆ ತಯಾರಿಸುವ ಪರಿಚಯ ಹೊಂದಿದ್ದರೆ, ನೀವು ಖಂಡಿತವಾಗಿ ಇದನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಹುದು. ಹಲವಾರು ಪಾಕ ವಿಧಾನಗಳನ್ನು ಮಂಥಿಸಿ, ಒಂದು ಅಡುಗೆ ಪುಸ್ತಕ ಕೂಡಾ ಹೊರ ತರಬಹುದು. ಸೃಜನಾತ್ಮಕ ಗೃಹಿಣಿಯರಿಗೆ ಇದು ಕೂಡ ಒಂದು ಉತ್ತಮ ಉದ್ಯೋಗ ಪರಿಕಲ್ಪನೆ. ನೀವು ಒಂದು ಆಹಾರ ಬ್ಲಾಗ್ ಪ್ರಾರಂಭಿಸಿ ಅದರಲ್ಲಿಯೂ ನಿಮ್ಮ ಪಾಕ ವಿಧಾನವನ್ನು (ರೆಸಿಪಿ) ಪ್ರಕಾಶಿಸಬಹುದು. ಇದು ಮುಂದೊಮ್ಮೆ ನಿಮಗೆ ಆಹಾರ ಒದಗಿಸುವ ಸೇವೆ (ಕೇಟರಿಂಗ್) ಪ್ರಾರಂಭಿಸಲೂ ಅನುಕೂಲವಾಗಬಹುದು.

ನೃತ್ಯಕಲೆ ಶಿಕ್ಷಣ

ನೃತ್ಯಕಲೆ ಶಿಕ್ಷಣ

ನೀವು ಯಾವುದೇ ಪ್ರಕಾರದ ನೃತ್ಯ ವಿಧಾನದಲ್ಲಿ ವೃತ್ತಿಪರ ತರಬೇತಿ ಹೊಂದಿದ್ದರೆ, ನೀವು ನಿಮ್ಮದೆ ನೃತ್ಯಶಾಲೆ ಪ್ರಾರಂಭಿಸಿ ಆಸಕ್ತರಿಗೆ ನೃತ್ಯಪಾಠ ಮಾಡಬಹುದು.

English summary

Top Business Ideas for Creative People

Business ideas for creative people are ample simply because creative people are blessed with some sort of creative talent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X