For Quick Alerts
ALLOW NOTIFICATIONS  
For Daily Alerts

ಉದ್ಯಮ ಪ್ರಾರಂಭಿಸುವ ಮುನ್ನ ಮಹಿಳೆಯರಲ್ಲಿರಬೇಕಾದ ಅರ್ಹತೆಗಳೇನು?

ಸ್ವತಂತ್ರ ಉದ್ಯಮ ಸ್ಥಾಪನೆ ಅನೇಕರ ಬಯಕೆಯಾಗಿರುತ್ತದೆ. ಅದರಲ್ಲಿ ಕೆಲವರು ಯಶಸ್ವಿಯಾದರೆ, ಹೆಚ್ಚಿನವರೂ ನಷ್ಟ ಅನುಭವಿಸುತ್ತಾರೆ. ಅದಕ್ಕೆ ಅವರಲ್ಲಿರುವ ಅರ್ಹತೆಗಳು ಕಾರಣವಾಗಿರುತ್ತವೆ.

By Siddu
|

ಸ್ವತಂತ್ರ ಉದ್ಯಮ ಸ್ಥಾಪನೆ ಅನೇಕರ ಬಯಕೆಯಾಗಿರುತ್ತದೆ. ಅದರಲ್ಲಿ ಕೆಲವರು ಯಶಸ್ವಿಯಾದರೆ, ಹೆಚ್ಚಿನವರೂ ನಷ್ಟ ಅನುಭವಿಸುತ್ತಾರೆ. ಅದಕ್ಕೆ ಅವರಲ್ಲಿರುವ ಅರ್ಹತೆಗಳು ಕಾರಣವಾಗಿರುತ್ತವೆ.

 

ನಿಮ್ಮಲ್ಲಿ ಸ್ವಂತ ಉದ್ಯಮ ಪ್ರಾರಂಭಿಸುವ ಆಲೋಚನೆ ಇದ್ದರೆ, ಅಥವಾ ಈಗಾಗಲೇ ಆರಂಭಿಸಿದ್ದರೆ ನಿಮ್ಮಲ್ಲಿ ಅನೇಕ ಅರ್ಹತೆಗಳು ಇರಬೇಕಾಗುತ್ತದೆ. ಮಹಿಳಾ ಉದ್ಯಮಿಗಳು ಇರಬಹುದು ಇಲ್ಲವೇ ಪುರುಷ ಉದ್ಯಮಿಗಳಿರಬಹುದು. ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ

ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ

ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ

ಸಾಮಾನ್ಯವಾಗಿ ಆತ್ಮವಿಶ್ವಾಸದ ಕೊರತೆಯೇ ಉದ್ಯಮದಲ್ಲಿನ ಹಿನ್ನಡೆಗೆ ಕಾರಣವಾಗಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ ಹಾಗೂ ಸಂಭಾವ್ಯ ಉದ್ಯಮಿಗಳಾಗಿ ಹೊರಹೊಮ್ಮುತ್ತಿದ್ದು, ಶೀಘ್ರವೇ ಹೆಚ್ಚಿನ ಯಶಸ್ಸು ಗಳಿಸುವ ಭರವಸೆಯನ್ನು ನೀಡುತ್ತಿದ್ದಾರೆ.

ಮನೆ ಮತ್ತು ಉದ್ಯಮವನ್ನು ಸರಿದೂಗಿಸಿಕೊಂಡು ಹೋಗಬೇಕಾದ ಚಾಕಚಕ್ಯತೆ

ಮನೆ ಮತ್ತು ಉದ್ಯಮವನ್ನು ಸರಿದೂಗಿಸಿಕೊಂಡು ಹೋಗಬೇಕಾದ ಚಾಕಚಕ್ಯತೆ

ಸಾಮಾನ್ಯವಾಗಿ ಮಹಿಳೆಯರ ವೈಯಕ್ತಿಯ ಜೀವನ ಆಕೆಯ ಔದ್ಯೋಗಿಕ ಜೀವನದ ಮೇಲೆ ಪ್ರಮುಖವಾದ ತಡೆಗೋಡೆಯಾಗಿರುತ್ತದೆ. ಹಾಗಾಗಿ ತಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನವನ್ನು ತೂಗಿಸಿಕೊಂಡು ಹೋಗುವುದನ್ನು ಕಲಿಯಲೇಬೇಕಾಗುತ್ತದೆ. ಎರಡೂ ಕಡೆಗಳಿಗೆ ಸಮನಾಗಿ ತಮ್ಮ ಸಮಯವನ್ನು ವ್ಯಯಿಸಬೇಕಾಗುತ್ತದೆ.

ಸ್ವಪ್ರೇರಣೆಯೇ ಮೂಲಮಂತ್ರ
 

ಸ್ವಪ್ರೇರಣೆಯೇ ಮೂಲಮಂತ್ರ

ಯಶಸ್ವೀ ಉದ್ಯಮವೊಂದನ್ನು ಪ್ರಾರಂಭಿಸಲು ಕೆಲವು ಅಪಾಯಗಳನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ. ವ್ಯಾಪಾರ ಮತ್ತು ಸಮಾಜದ ಪ್ರತಿ ತಮ್ಮ ಭಾವನೆಯನ್ನು ಬದಲಿಸಿಕೊಳ್ಳಬೇಕಾಗಿ ಬರುತ್ತದೆ. ಇದಕ್ಕಾಗಿ ಕೆಲವು ಸಾಮಾಜಿಕ ಜವಾಬ್ದಾರಿಗಳನ್ನೂ ಹೊರಬೇಕಾಗಿ ಬರಬಹುದು. ಈ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಸರ್ಕಾರಿ ಕಟ್ಟಳೆ ಮತ್ತು ಆರ್ಥಿಕ ನೆರವುಗಳ ಬಗ್ಗೆ ಮಾಹಿತಿ ಪಡೆಯಬೇಕು. ಸರ್ಕಾರಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಂದಲೂ ಅಗತ್ಯವಾದ ನೆರವನ್ನು ಪಡೆಯಬಹುದು.

ಮಾರುಕಟ್ಟೆಯನ್ನು ಸೂಕ್ಷ್ಮಗಳನ್ನು ಅರಿಯಿರಿ

ಮಾರುಕಟ್ಟೆಯನ್ನು ಸೂಕ್ಷ್ಮಗಳನ್ನು ಅರಿಯಿರಿ

ನೀವು ಪ್ರಾರಂಭಿಸಬೇಕೆಂದಿರುವ ಉದ್ಯಮದಲ್ಲಿ ಈಗ ನಿಮಗಿರುವ ಎದುರಾಳಿಗಳ ಬಗ್ಗೆ ಅರಿತುಕೊಳ್ಳಬೇಕು ಹಾಗೂ ಮಾರುಕಟ್ಟೆಯಲ್ಲಿ ಯಾವ ಸರಕು ಮಾರಾಟವಾಗುತ್ತಿದೆ ಎಂಬುದನ್ನು ಅರಿತುಕೊಳ್ಳುವುದು ಉದ್ಯಮದ ಯಶಸ್ಸಿನ ಮೂಲವಾಗಿದೆ. ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ವಿದ್ಯಮಾನಗಳ ಬಗ್ಗೆ ಸಾಧ್ಯವಿರುವ ಎಲ್ಲಾ ಮಾಹಿತಿಗಳನ್ನು ಅರಿಕೊಳ್ಳಬೇಕು ಹಾಗೂ ಇದಕ್ಕಾಗಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿರಬೇಕು.

ಉದ್ಯಮದ ನಿರ್ವಹಣೆಯನ್ನು ಅರಿತುಕೊಳ್ಳುವುದು

ಉದ್ಯಮದ ನಿರ್ವಹಣೆಯನ್ನು ಅರಿತುಕೊಳ್ಳುವುದು

ಉದ್ಯಮದ ನಿರ್ವಹಣೆಯ ಬಗ್ಗೆ ಅಗತ್ಯವಿರುವ ತರಬೇತಿ ಹಾಗೂ ಶಿಕ್ಷಣವನ್ನು ಪಡೆದು ಮಹಿಳೆಯರು ತಮ್ಮ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು ಹಾಗೂ ಉದ್ಯಮದ ಆಡಳಿತ ವ್ಯವಹಾರವನ್ನು ನಿರ್ವಹಿಸುವುದನ್ನು ಕಲಿತುಕೊಳ್ಳಬೇಕು. ಈ ಮೂಲಕ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಹಾಗೂ ವ್ಯವಹಾರವನ್ನು ವೃದ್ದಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹಣಕಾಸು ನಿರ್ವಹಣೆ

ಹಣಕಾಸು ನಿರ್ವಹಣೆ

ಯಾವುದೇ ಉದ್ಯಮಕ್ಕೆ ಹಣಕಾಸಿನ ಅಗತ್ಯವಿದ್ದೇ ಇರುತ್ತದೆ. ಮಾರುಕಟ್ಟೆಯಲ್ಲಿ ಈ ಅಗತ್ಯತೆಯನ್ನು ಪೂರೈಸುವ ಹಲವು ಸಂಸ್ಥೆಗಳಿವೆ. ಅಗತ್ಯವಾದ ಸಾಲವನ್ನು ಆದಷ್ಟೂ ಕಡಿಮೆ ಬಡ್ಡಿದರದಲ್ಲಿ ಪಡೆಯುವುದು ಹಾಗೂ ಮರುಪಾವತಿಗೆ ಸುಲಭವಾದ ಆಯ್ಕೆಗಳಿರುವುದನ್ನು ಅರಿತುಕೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ಉದ್ಯಮಕ್ಕೆ ಅಗತ್ಯವಿರುವ ಬಂಡವಾಳ ಹಾಗೂ ಇತರ ನೆರವುಗಳು ಲಭಿಸಿ ವ್ಯಾಪಾರ ಸುಗಮವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ.

ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ

ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ

ಯಾವುದೇ ಉದ್ಯಮಿಗೆ ಸತತವಾಗಿ ತಮ್ಮ ಉದ್ಯಮಕ್ಕೆ ಸಂಬಂಧಿಸಿದ ತರಬೇತಿಯನ್ನು ಪಡೆದು ತಮ್ಮನ್ನು ತಾವು ಇಂದಿನ ದಿನಕ್ಕೆ ಸೂಕ್ತವಾಗಿರಿಸಿಕೊಳ್ಳಬೇಕಾಗುತ್ತದೆ. ಈ ತರಬೇತಿಯನ್ನು ಕಾಲಕಾಲಕ್ಕೆ ಕೆಲವು ಸಾಮಾಜಿಕ ಸಂಸ್ಥೆಗಳು ನೀಡುತ್ತಾ ಬರುತ್ತವೆ. ಉದಯೋನ್ಮುಖ ಚಿಕ್ಕ ಮತ್ತು ಮಧ್ಯಮಗಾತ್ರದ ಉದ್ಯಮಿಗಳಿಗೆ ಈ ತರಬೇತಿ ಕೇಂದ್ರಗಳು ಅಪಾರವಾದ ನೆರವು ಹಾಗೂ ಅಗತ್ಯವಾದ ಮಾಹಿತಿಗಳನ್ನು ನೀಡುತ್ತವೆ.

English summary

What are the qualifications for women before starting a Business?

What are the qualifications for women before starting a Business?
Story first published: Thursday, May 3, 2018, 11:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X