For Quick Alerts
ALLOW NOTIFICATIONS  
For Daily Alerts

2018 ರ ಬೆಸ್ಟ್ ಇಎಲ್ಎಸ್ಎಸ್ (ELSS) ಹಾಗು ಡೆಬ್ಟ್ (debt) ಮ್ಯೂಚುವಲ್ ಫಂಡ್

By Siddu
|

ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡುವ ಮುನ್ನ ಇಲ್ಲೊಮ್ಮೆ ನೋಡಿ..

1. ಡಿಎಸ್ಪಿ ಬ್ಲಾಕ್ ರಾಕ್ ತೆರಿಗೆ ಉಳಿಸುವ ಫಂಡ್
 

1. ಡಿಎಸ್ಪಿ ಬ್ಲಾಕ್ ರಾಕ್ ತೆರಿಗೆ ಉಳಿಸುವ ಫಂಡ್

ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ ಫಂಡ್ ವಿಭಾಗದಲ್ಲಿ ಇದು ಒಂದು ಉತ್ತಮ ಆಯ್ಕೆ. ರಿಟರ್ನ್ಸ್ ಮತ್ತು ಖರ್ಚಿನ ಅನುಪಾತದ ವಿಷಯದಲ್ಲಿ ಇದು ಬಹಳ ಸಮರ್ಪಕವಾಗಿದೆ. ಹೂಡಿಕೆದಾರರಿಗೆ ಕಳೆದ ವರ್ಷ 26.7% ರಿಟರ್ನ್ಸ್ ನೀಡಿದೆ. 10 ಉತ್ತಮ ಫಂಡ್ ಗಳನ್ನು ಹೋಲ್ಡಿಂಗ್ ನಲ್ಲಿ ಇಟ್ಟುಕೊಂಡಿರುವ ಗುಣಮಟ್ಟ ಹೊಂದಿರುವುದರಿಂದ ಈ ಫಂಡ್ ಬಹು ಉತ್ತಮ ಆಯ್ಕೆಯಾಗಿದೆ. ರಿಟರ್ನ್ಸ್ ಹಾಗೂ ಒಳ್ಳೆಯ ರೇಟಿಂಗ್ ಹೊಂದಿರುವ ಕಾರಣದಿಂದಲೂ, ಏರುಪೇರುಗಳಿಲ್ಲದೆ ಸರಿದೂಗಿಸಿಕೊಂಡು ಬಂದಿರುವ ಕಾರಣದಿಂದಲೂ ಹೂಡಿಕೆದಾರರಿಗೆ ಇದು ಉತ್ತಮವಾಗಿದೆ.

2. ಫ್ರಾಂಕ್ಲಿನ್ ಇಂಡಿಯಾ ಟ್ಯಾಕ್ಸ್ ಶೀಲ್ಡ್ ಫಂಡ್

2. ಫ್ರಾಂಕ್ಲಿನ್ ಇಂಡಿಯಾ ಟ್ಯಾಕ್ಸ್ ಶೀಲ್ಡ್ ಫಂಡ್

ತೆರಿಗೆ ಉಳಿಸಲು ಹೂಡಿಕೆ ಮಾಡುವ ವಿಭಾಗದಲ್ಲಿ ಇದು ಉತ್ತಮವಾಗಿದೆ. ಈ ಫಂಡ್ ನ ರಿಟರ್ನ್ಸ್ ಮತ್ತು ಖರ್ಚಿನ ಅನುಪಾತ ತುಂಬಾ ಚೆನ್ನಾಗಿದೆ. ಕಳೆದ ವರ್ಷ ಹೂಡಿಕೆದಾರರಿಗೆ 21.3% ಗಳಿಸಿಕೊಟ್ಟಿದೆ. ಒಳ್ಳೆಯ ಬಂಡವಾಳ ಖಾತೆ ಸೇರಿಕೊಂಡಿರುವುದರಿಂದ ಮತ್ತು ತುಂಬಾ ಒಳ್ಳೆಯ ರೇಟಿಂಗ್ CRISIL ಕೊಟ್ಟಿರುವ ಕಾರಣದಿಂದ ಹೂಡಿಕೆದಾರರಿಗೆ ಸಕಾರಾತ್ಮಕವಾಗಿ ಲಾಭದಾಯಕವಾಗಿದೆ.

3. ಆಕ್ಸಿಸ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್

3. ಆಕ್ಸಿಸ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್

ಮೇಲೆ ಕೊಟ್ಟಿರುವ ಫಂಡ್ ನಂತರದ ಉತ್ತಮವಾದ ಫಂಡ್ ಎಂದರೆ ಆಕ್ಸಿಸ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್. ಇದು ಕೂಡ ತೆರಿಗೆ ಉಳಿಸಲು ಬಹಳ ಅನುಕೂಲಕರ ವಿಭಾಗಕ್ಕೆ ಸೇರುತ್ತದೆ. VRO ಈ ಫಂಡ್ ಗೆ 4 ರೇಟಿಂಗ್ ಕೊಟ್ಟಿದೆ. ಈ ಫಂಡ್ ನ ಖರ್ಚಿನ ಅನುಪಾತ ಕಡಿಮೆ ಇದೆ. ಈ ಫಂಡ್ YTD ರಿಟರ್ನ್ಸ್ ಹೆಚ್ಚಾಗಿದೆ ಕೊಟ್ಟಿದೆ. ಬಂಡವಾಳದ ಮಾದರಿ ಯೋಜನೆಗಳು ಮತ್ತು ಫಂಡ್ ವ್ಯವಸ್ಥಾಪಕರ ರುಜುವಾತುಗಳನ್ನು ಗಮನಿಸಿದರೆ ಈ ಫಂಡ್ ಗೆ ಹೂಡಿಕೆ ಮಾಡುವುದು ಸಮರ್ಪಕವಾಗಿದೆ.

4. ಐ ಡಿ ಎಫ್ ಸಿ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್
 

4. ಐ ಡಿ ಎಫ್ ಸಿ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್

2018ರ ELSS ದರ್ಜೆಗೆ ಬರುವ ಅತ್ಯುತ್ತಮ ಫಂಡ್ ಎಂದರೆ ಐ ಡಿ ಎಫ್ ಸಿ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್. CRISIL 5 ಹಾಗೂ ವ್ಯಾಲ್ಯೂ ರಿಸರ್ಚ್ ಆನ್ ಲೈನ್ ಈ ಫಂಡ್ ಗೆ 4 ರೇಟಿಂಗ್ ಕೊಟ್ಟಿದೆ. ಕಳೆದ ವರ್ಷ ಈ ಫಂಡ್ ಅತ್ಯುತ್ಕೃಷ್ಟವಾದ ರಿಟರ್ನ್ಸ್ ಕೊಟ್ಟಿದೆ. ಈ ಫಂಡ್ ನ YTD ರಿಟರ್ನ್ಸ್ 43.4% ಆಗಿದೆ. ಇದರ ವೆಚ್ಚ ಕೂಡ ಸಮರ್ಥನೀಯವಾಗಿದೆ. ಮಾನದಂಡದ ರಿಟರ್ನ್ಸ್ ಕೂಡ ಮೀರಿ ಸ್ಥಿರವಾಗಿ ಆಡಳಿತವನ್ನು ಸರಿದೂಗಿಸುತ್ತದೆ. ದೀರ್ಘಾವಧಿಯ ದೃಷ್ಟಿಕೋನದ ಲಾಭ ಪಡೆಯಲು ಇದರಲ್ಲಿ ಹಣ ಕೊಡುವವರಿಗೆ ಇದು ಸಮಂಜಸವಾಗಿದೆ.

2018 ರ ಟಾಪ್ 2 ಉತ್ತಮ ಡೆಬ್ಟ್ ಮ್ಯೂಚುವಲ್ ಫಂಡ್

2018 ರ ಟಾಪ್ 2 ಉತ್ತಮ ಡೆಬ್ಟ್ ಮ್ಯೂಚುವಲ್ ಫಂಡ್

1. ಕೋಟಕ್ ತಿಂಗಳ ಆದಾಯ ಯೋಜನೆ

ಯಾವ ಮಾರ್ಪಾಡಿಗೂ ಒಪ್ಪದ, ಹಿಡಿತದ ಮನೋಭಾವದವರಿಗೆ ಈ ಯೋಜನೆ ಸರಿಯಾಗಿರುತ್ತದೆ. ಈ ಫಂಡ್ 8% ಮೇಲ್ಪಟ್ಟ ರಿಟರ್ನ್ಸ್ ಸತತವಾಗಿ ಕೊಟ್ಟಿದೆ. ಇದಕ್ಕೆ VRO 3 ರೇಟಿಂಗ್ ಕೊಟ್ಟಿದೆ. ಈ ಫಂಡ್ ನ ಬಹುತೇಕ ಪಾಲು GOI(Gross Operating Income)ಒಟ್ಟಾರೆ ನಿರ್ವಹಿಸುವ ಆದಾಯ, ಭದ್ರತಾ ಪತ್ರಗಳು ಮತ್ತು ಬಾಂಡ್ ಗಳಲ್ಲಿವೆ.

2. ಡಿ ಎಸ್ ಪಿ ಬ್ಲಾಕ್ ರಾಕ್ MIP( Monthly Income Plan) ತಿಂಗಳ ಆದಾಯ ಯೋಜನೆ

2. ಡಿ ಎಸ್ ಪಿ ಬ್ಲಾಕ್ ರಾಕ್ MIP( Monthly Income Plan) ತಿಂಗಳ ಆದಾಯ ಯೋಜನೆ

ಇದು ಒಂದು ಉತ್ತಮ ಯೋಜನೆಯಾಗಿದೆ. ಹೂಡಿಕೆದಾರರಿಗೆ ಇದು ಒಳ್ಳೆಯ ಕಾರ್ಯ ನಿರ್ವಹಿಸಿ ತನ್ನ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಈ ಫಂಡ್ ನ ಪ್ರಮುಖ ಹೋಲ್ಡಿಂಗ್ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮತ್ತು ಸರಕಾರಿ ಭದ್ರತಾ ಗಳೊಂದಿಗೆ .CRISIL ನಿಂದ ಈ ಫಂಡ್ ಗೆ 3 ರೇಟಿಂಗ್ ದಕ್ಕಿದೆ.

English summary

Which Are the Best ELSS and Debt Mutual Funds for 2018

Which Are the Best ELSS and Debt Mutual Funds for 2018
Story first published: Saturday, May 19, 2018, 10:43 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more