For Quick Alerts
ALLOW NOTIFICATIONS  
For Daily Alerts

ಸುರಕ್ಷಿತ ಆನ್ಲೈನ್ ಬ್ಯಾಂಕಿಂಗ್ ಗಾಗಿ 7 ಸೂತ್ರ

ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಬಹುತೇಕ ಬ್ಯಾಂಕ್ ಗಳು ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ.

By Siddu
|

ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಬಹುತೇಕ ಬ್ಯಾಂಕ್ ಗಳು ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಅದರೆ, ಆನ್ಲೈನ್ ಮೂಲಕ ವ್ಯವಹರಿಸುವಾಗ ಕನಿಷ್ಠ ಸುರಕ್ಷಿತ ನಿಯಮಗಳನ್ನು ಪಾಲಿಸದಿದ್ದರೆ ಬ್ಯಾಂಕ್ ಗಳ ವೆಬ್ಸೈಟ್ ಎಷ್ಟೇ ಭದ್ರವಾಗಿದ್ದರೂ ಕನ್ನ ಹಾಕುವವರಿಗೆ ಕೀಲಿ ಕೈ ಕೊಟ್ಟಂತೆ ಆಗುತ್ತದೆ. ಈಗಂತೂ ಆನ್ಲೈನ್ ಬ್ಯಾಂಕಿಂಗ್ ಮೂಲಕ ಎಲ್ಲಾ ರೀತಿ ಬ್ಯಾಂಕ್ ವ್ಯವಹಾರ ಸಾಧ್ಯವಿದೆ.

ಖಾತೆ ವಿವರ, ನಿಶ್ಚಿತ ಠೇವಣಿ, ಆರ್ ಡಿ ಆರಂಭಿಸುವುದು, ಯೋಜನೆ ವಿವರಗಳು, ಹಣ ವರ್ಗಾವಣೆ, ವಿವಧ ರೀತಿಯ ಬಿಲ್ ಪಾವತಿ ಹೀಗೆ ವಿವಿಧ ಸೌಲಭ್ಯಗಳನ್ನು ಒಂದೇ ಕ್ಲಿಕ್ ನಲ್ಲಿ ಸಾಧ್ಯ. ಆದರೆ, ಆನ್ಲೈನ್ ಬ್ಯಾಂಕಿಂಗ್ ಸುರಕ್ಷತೆಯಿಂದ ಕೂಡಿದ್ದರೂ ಪಾಸ್ ವರ್ಡ್ ಫಿಶಿಂಗ್, ಹ್ಯಾಕಿಂಗ್ ಸಮಸ್ಯೆ ಇದ್ದೇ ಇರುತ್ತದೆ. ಅದರೆ, ಕನಿಷ್ಠ ಪ್ರಮಾಣದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಆನ್ ಲೈನ್ ಬ್ಯಾಂಕಿಂಗ್ ಸರಳ, ಸುಲಭ ವಿಧಾನವಾಗಿದೆ. ನವ ದಂಪತಿಗಳು ಈ 9 ಸಲಹೆಗಳನ್ನು ಪಾಲಿಸಿದರೆ ಬಾಳು ಬಂಗಾರ!

ಸುರಕ್ಷಿತ ಆನ್ ಲೈನ್ ಬ್ಯಾಂಕಿಂಗ್ ಗೆ ಸರಳ ವಿಧಾನಗಳು ಇಲ್ಲಿ ನೀಡಲಾಗಿದೆ.

1. ವೈರಸ್ ಅಪ್ಡೇಟ್

1. ವೈರಸ್ ಅಪ್ಡೇಟ್

ನೀವು ಬಳಸುವ ಕಂಪ್ಯೂಟರ್ ನ ವಿಂಡೋಸ್/ಲಿನಾಕ್ಸ್ ಬ್ರೌಸರ್ ಅಪ್ಡೇಟ್ ಆಗಿರಲಿ. ವಿಂಡೋಸ್ ಸಿಸ್ಟಮ್ ಬಳಸುತ್ತಿದ್ದರೆ, ನಿಮ್ಮ Anti ವೈರಸ್ ಹಾಗೂ ಸ್ಪೈ ವೇರ್ ಬ್ಲಾಕ್ ಟೂಲ್ ಗಳನ್ನು ಹೊಂದಿರಬೇಕಾಗುತ್ತದೆ.

2. ಪಾಸ್ವರ್ಡ್

2. ಪಾಸ್ವರ್ಡ್

ಆನ್ಲೈನ್ ಬ್ಯಾಂಕಿಂಗ್ ಗೆ ಲಾಗ್ ಇನ್ ಆಗುವ ಮುನ್ನ ಬ್ಯಾಂಕ್ ಕಳಿಸಿದ ಪಾಸ್ ವರ್ಡ್ ಅನ್ನು ಬದಲಾಯಿಸಿಕೊಳ್ಳಿ. ಪಾಸ್ ವರ್ಡ್ ಯಾವಾಗಲೂ ಸಂಖ್ಯೆ ಹಾಗೂ ಅಕ್ಷರಗಳ ಕಾಂಬಿನೇಷನ್ ಹೊಂದಿರಲಿ, ಲಾಗ್ ಇನ್ ವೇಳೆ ವರ್ಚ್ಯುವಲ್ ಕೀ ಬೋರ್ಡ್ ಬಳಸಿ.

3. ಮಾಹಿತಿ ಸೋರಿಕೆ

3. ಮಾಹಿತಿ ಸೋರಿಕೆ

ಲೈಬ್ರರಿ, ಸೈಬರ್ ಕೆಫೆ, ವಿಮಾನ ನಿಲ್ದಾಣ, ಉಚಿತ ವೈ ಫೈ ಸೌಲಭ್ಯವಿರುವ ಕಡೆಗಳಲ್ಲಿ ಲಾಗಿನ್ ಆಗಬೇಡಿ. ಸೈಬರ್‌ಕೆಫೆ, ಪ್ರೈವೇಟ್ ಬ್ರೌಸಿಂಗ್ ಸುರಕ್ಷತೆ ಅನುಸರಿಸಿದರೂ ನಿಮ್ಮ ಪಾಸ್‌ವರ್ಡ್ ಮತ್ತು ಇತರೆ ವೈಯಕ್ತಿಕ ಮಾಹಿತಿಗಳು ಸೋರಿಕೆ ಯಾಗುವ ಅಥವಾ ಮಾಹಿತಿ ಕಂಪ್ಯೂಟರ್ ನಲ್ಲಿ ಉಳಿಯುವ ಸಂಭವ ಹೆಚ್ಚಾಗಿರುತ್ತದೆ.

4. ಕಾಲಕಾಲಕ್ಕೆ ಖಾತೆ ಪರೀಕ್ಷಿಸಿ

4. ಕಾಲಕಾಲಕ್ಕೆ ಖಾತೆ ಪರೀಕ್ಷಿಸಿ

ನಿಮ್ಮ ಆನ್ಲೈನ್ ಖಾತೆಯನ್ನು ಕಾಲಕಾಲಕ್ಕೆ ಪರೀಕ್ಷಿಸುತ್ತೀರಿ, ನೆಟ್ ಬ್ಯಾಂಕಿಂಗ್ ಗೆ ಲಾಗ್ ಇನ್ ಆದ ಕೂಡಲೇ last logged in ಪ್ಯಾನೆಲ್ ಚೆಕ್ ಮಾಡಿ. ಬ್ರೌಸರ್ ನ Auto Complete ಸೌಲಭ್ಯ ತೆಗೆದು ಹಾಕಿ, ಲಾಗ್ ಇನ್ ಮಾಹಿತಿ ಸೇವ್ ಆಗುವುದನ್ನು ತಪ್ಪಿಸಬಹುದು.

5. ಕೂಡಲೆ ಬದಲಾಯಿಸಿ

5. ಕೂಡಲೆ ಬದಲಾಯಿಸಿ

ನೀವು ಒಂದಕ್ಕಿಂತ ಹೆಚ್ಚು ಆನ್ಲೈನ್ ಬ್ಯಾಂಕಿಂಗ್ ಖಾತೆ ಹೊಂದಿದ್ದು, ಎಲ್ಲದ್ದಕೂ ಒಂದೇ ಪಾಸ್ ವರ್ಡ್ ಬಳಸುತ್ತಿದ್ದರೆ, ಕೂಡಲೇ ಬದಲಾಯಿಸಿಬಿಡಿ. ಪಾಸ್ವರ್ಡ್ ನಲ್ಲಿ ನಿಮ್ಮ ಹೆಸರು, ಆಪ್ತರ ಹೆಸರು, ಹುಟ್ಟಿಂದ ದಿನಾಂಕ, ಮೊಬೈಲ್ ಸಂಖ್ಯೆ, ಸರಣಿ ಸಂಖ್ಯೆ 12, 33,44 ಈ ರೀತಿ ಮಾಹಿತಿ ಬಳಸಬೇಡಿ.

6. ಲಿಂಕ್ ಮಾಡಿ

6. ಲಿಂಕ್ ಮಾಡಿ

ನಿಮ್ಮ ಮೊಬೈಲ್ ಸಂಖ್ಯೆಯನ್ನು ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಲಿಂಕ್ ಮಾಡಿ, ನಿಮ್ಮ ಮನೆ ವಿಳಾಸವೂ ಅಪ್ದೇಡ್ ಆಗಿರಲಿ. ಪ್ರತಿ ವ್ಯವಹಾರದ ಮಾಹಿತಿ ಮೊಬೈಲ್ ಗೆ ಸಂದೇಶದ ಮೂಲಕ ಬರುತ್ತಿದ್ದರೆ, ನಿಮ್ಮ ಖಾತೆ ಟ್ರ್ಯಾಕ್ ಮಾಡುವುದು ಸುಲಭವಾಗುತ್ತದೆ.

7. ಮಾಹಿತಿ ಹಂಚಿಕೊಳ್ಳಬೇಡಿ

7. ಮಾಹಿತಿ ಹಂಚಿಕೊಳ್ಳಬೇಡಿ

ನಿಮ್ಮ ಅಕೌಂಟ್ ಕುರಿತಂತೆ ಯಾವುದೇ ಮಾಹಿತಿಯನ್ನು ಇಮೇಲ್ ಮೂಲಕ ಹಂಚಿಕೊಳ್ಳಬೇಡಿ. ಬ್ಯಾಂಕ್ ನಿಂದ ಇ ಮೇಲ್ ಬಂದರೂ ಫೋನ್ ಮಾಡಿ ಖಚಿತಪಡಿಸಿಕೊಂಡು ಮುಂದುವರೆಯಿರಿ. ಬ್ಯಾಂಕ್ ಸಿಬ್ಬಂದಿಯೊಂದಿಗೆ ಕೂಡಾ ಪಾಸ್ವರ್ಡ್ ಹಂಚಿಕೊಳ್ಳಬೇಡಿ. ಹೊಸ ಪಾಸ್ ವರ್ಡ್, ಪಾಸ್ ವರ್ಡ್ ಬದಲಿ ಮಾಡಲು ಸಿಬ್ಬಂದಿ ನೆರವು ಪಡೆಯಬಹುದು.

Read more about: online banking finance news money
English summary

7 Tips for safe Online Banking

We are in an online era where most of the banking can be done online such as bill payments, funds transfer or creation of a fixed deposit.
Story first published: Monday, June 25, 2018, 13:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X