For Quick Alerts
ALLOW NOTIFICATIONS  
For Daily Alerts

'ಬ್ಲಾಕ್‌ಚೈನ್ ವೋಟಿಂಗ್ ಸಿಸ್ಟಂ' ರಾಜಕೀಯ ವ್ಯವಸ್ಥೆಯನ್ನು ನಾಶಪಡಿಸಲಿದೆ! ಯಾಕೆ ಗೊತ್ತೆ?

ಜಾಗತಿಕವಾಗಿ ಬಹುದೊಡ್ಡ ಬದಲಾವಣೆಯ ಕ್ರಾಂತಿಗೆ ಬ್ಲಾಕ್‌ಚೈನ್ (Blockchain) ಮತದಾನ ವ್ಯವಸ್ಥೆ ನಾಂದಿ ಹಾಡಲಿದೆ. ಜಗತ್ತಿನ ರಾಜಕೀಯ ವ್ಯವಸ್ಥೆಯು ಒಂದು ವಿಶಿಷ್ಟ ಬದಲಾವಣೆಯ ಕಾಲಘಟ್ಟದಲ್ಲಿದೆ.

|

ಜಾಗತಿಕವಾಗಿ ಬಹುದೊಡ್ಡ ಬದಲಾವಣೆಯ ಕ್ರಾಂತಿಗೆ ಬ್ಲಾಕ್‌ಚೈನ್ (Blockchain) ಮತದಾನ ವ್ಯವಸ್ಥೆ ನಾಂದಿ ಹಾಡಲಿದೆ. ಜಗತ್ತಿನ ರಾಜಕೀಯ ವ್ಯವಸ್ಥೆಯು ಒಂದು ವಿಶಿಷ್ಟ ಬದಲಾವಣೆಯ ಕಾಲಘಟ್ಟದಲ್ಲಿದೆ. ಪ್ರಸ್ತುತ ರಾಜಕೀಯ ಕ್ರಾಂತಿಗಳು ಪಾಶ್ಚಿಮಾತ್ಯ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ನಿರಾಸೆ, ದುಃಖ, ಹಳೆಯ ಸಿದ್ಧಾಂತಗಳ ಕ್ಷೀಣಿಸುತ್ತಿರುವ ಸಾಮರ್ಥ್ಯ ಮುಂತಾದ ವಿಷಯಗಳ ಸುತ್ತ ಜಗತ್ತಿನ ರಾಜಕೀಯ ವ್ಯವಸ್ಥೆ ಸುತ್ತುತ್ತಿದೆ.

ಹೀಗಾಗಿಯೇ ಪ್ರಬಲ ಸರ್ವಾಧಿಕಾರ ಅಥವಾ ಜನಪ್ರಿಯ ಸರ್ಕಾರಗಳ ಸತತ ಆಡಳಿತದ ಪರಿಣಾಮಗಳನ್ನು ಜನತೆ ನೋಡುವಂತಾಗಿದೆ. ವಿಷಯಗಳ ಮರೆಮಾಚುವಿಕೆ (ರಷ್ಯಾ, ಟರ್ಕಿ), ಧಾರ್ಮಿಕ ಮೂಲನಿವಾಸಿಗಳ ವ್ಯವಸ್ಥಿತ ನಿರ್ಮೂಲನೆ (ಹಂಗೆರಿ, ಮಯನ್ಮಾರ್), ರಾಷ್ಟ್ರಾಧ್ಯಕ್ಷರ ನಿರಂಕುಶ ಅಧಿಕಾರಗಳಲ್ಲಿ ಮತ್ತಷ್ಟು ಹೆಚ್ಚಳ (ಚೀನಾ, ರುವಾಂಡಾ, ವೆನೆಜುವೆಲಾ, ಥೈಲ್ಯಾಂಡ್, ಫಿಲಿಪ್ಪೀನ್ಸ್) ಹೀಗೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು.

ಪ್ರಸ್ತುತ ಕಾಲದಲ್ಲಿ ಜಗತ್ತಿನ ಬಹುತೇಕ ದೇಶಗಳಲ್ಲಿ ಏಕರೂಪದ ಜನಪ್ರಿಯತೆಯ ನಾಯಕತ್ವ ಹೊರಹೊಮ್ಮುತ್ತಿರುವುದನ್ನು ನಾವು ಕಾಣಬಹುದು. ಸಮಕಾಲೀನ ನಾಯಕರಾದ ಡೊನಾಲ್ಡ್ ಟ್ರಂಪ್, ವ್ಲಾಡಿಮಿರ್ ಪುಟಿನ್, ನರೇಂದ್ರ ಮೋದಿ, ಹಂಗೆರಿಯ ವಿಕ್ಟೊರ್ ಒರ್ಬಾನ್, ಟರ್ಕಿಯ ರಿಸೆಪ್ ತಾಯಿಪ್ ಎರ್ಡೊಗ್ಯಾನ್ ಇವರೆಲ್ಲರ ಮಧ್ಯೆ ಒಂದು ರೀತಿಯ ಸಾಮ್ಯತೆ ನೋಡಬಹುದು. ಬಿಟ್ ಕಾಯಿನ್ ಬಗ್ಗೆ ನಿಮಗೆ ಗೊತ್ತಿರಬೇಕಾದ 14 ಸಂಗತಿಗಳು

ಇಡೀ ಜಗತ್ತಿನ ಗಮನ ಈಗ ಯಾವುದೋ ಒಂದು ಸಾಮಾನ್ಯ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ದೇಶಗಳು ಸಾವಿರಾರು ಮೈಲಿ ದೂರವಿದ್ದರೂ ಅವುಗಳ ಕಾರ್ಯವೈಖರಿ ಒಂದೇ ರೀತಿಯಾಗಿದೆ. ಯಾವುದೇ ಅನಿರೀಕ್ಷಿತ ಸಂದರ್ಭಗಳು ಸಹ ಉದ್ಭವಿಸುವ ಸಾಧ್ಯತೆ ಇಲ್ಲದ ಈ ಕಾಲಘಟ್ಟದಲ್ಲಿ ಎಲ್ಲ ದೇಶಗಳು ಒಂದೇ ರೀತಿಯ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಹೀಗಾಗಿ ಎಲ್ಲರ ಮೇಲೂ ಒಂದೇ ರೀತಿಯ ಒತ್ತಡ ಹಾಗೂ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ.

ಹಾಳಾಗಿ ಹೋದ ವ್ಯವಸ್ಥೆ

ಹಾಳಾಗಿ ಹೋದ ವ್ಯವಸ್ಥೆ

ತಮ್ಮ ಆರ್ಥಿಕ ವ್ಯವಸ್ಥೆಯನ್ನು ಜಗತ್ತಿಗೆ ತೆರೆದಿಟ್ಟ ಹಲವಾರು ವರ್ಷಗಳ ನಂತರ ನೋಡಿದರೆ, ಹಣಕಾಸು ಹಾಗೂ ದತ್ತಾಂಶಗಳ ವ್ಯವಹಾರ ಆಯಾ ಸರಕಾರಗಳ ನಿಯಂತ್ರಣ ಮೀರಿ ಬೆಳೆದುಕೊಂಡಿವೆ. ದೇಶಗಳ ಸಂಪತ್ತನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಲಾಗುತ್ತಿದ್ದರೂ ಯಾವುದೇ ದೇಶಗಳ ರಾಜಕೀಯ ಪಕ್ಷಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಭಾರತದ ಬಗ್ಗೆ ನೋಡಿದರೆ, ನಮ್ಮ ರಾಜಕೀಯ ನಾಯಕರು ಮೂಲದಿಂದಲೇ ಭ್ರಷ್ಟರಾಗಿರುವುದಿಲ್ಲ. ಆದರೆ ಈ ರಾಜಕೀಯ ವ್ಯವಸ್ಥೆಯೊಳಗೆ ಒಮ್ಮೆ ದಾಖಲಾದರೆ ಸಾಕು, ವ್ಯವಸ್ಥೆ ಎಂಬುದು ರಾಜಕಾರಣಿಗಳನ್ನು ಸಂಪೂರ್ಣ ಬದಲಾಯಿಸಿ ಭ್ರಷ್ಟರನ್ನಾಗಿ ಮಾಡಿಬಿಡುತ್ತದೆ.
ಈಗ ನಾವು ಅನುಸರಿಸುತ್ತಿರುವ ಹಳೆಯ ಮಾದರಿಯ ರಾಜಕೀಯದಿಂದ ಏನೂ ಬದಲಾವಣೆ ಸಾಧ್ಯವಿಲ್ಲ. ನಾಲ್ಕೈದು ವರ್ಷಗಳ ಅಧಿಕಾರಾವಧಿಯ ನಂತರ ಪ್ರಜೆಗಳು ಕೇವಲ ಒಂದು ಬಾರಿ ಒಂದು ಮತ ಚಲಾವಣೆ ಮಾಡುವ ಮೂಲಕ ಯಾವುದೇ ದೊಡ್ಡ ಬದಲಾವಣೆ ಆಗಲು ಸಾಧ್ಯವಿಲ್ಲ. ಗುಂಪುಗಳ ಧೃವೀಕರಣ, ನಿಷ್ಕಾಳಜಿ, ಅಜ್ಞಾನ ಮುಂತಾದುವುಗಳಿಂದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಧಿಕಾರ ಕೇವಲ ಒಂದು ಇವಿಎಂ ವೋಟು ಅಥವಾ ಪೇಪರ್ ಮೇಲೆ ಸೀಲ್ ಒತ್ತುವುದಕ್ಕೆ ಸೀಮಿತವಾಗಿದೆ.

ಕುಸಿಯುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶ್ವಾಸಾರ್ಹತೆ ವೃದ್ಧಿಗೆ 'ಬ್ಲಾಕ್‌ಚೈನ್ ಪಾಲಿಟಿಕ್ಸ್'
 

ಕುಸಿಯುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶ್ವಾಸಾರ್ಹತೆ ವೃದ್ಧಿಗೆ 'ಬ್ಲಾಕ್‌ಚೈನ್ ಪಾಲಿಟಿಕ್ಸ್'

ನಾವು ನಮ್ಮ ಮತ ಚಲಾಯಿಸಲು ಮತಗಟ್ಟೆಗೆ ಹೋಗುವುದರ ಹಿಂದೆ ಗೌಪ್ಯ ಮತದಾನದ ಪ್ರೇರಣೆ ಇದೆ. ನಮ್ಮ ಗುರುತನ್ನು ಬಿಟ್ಟು ಕೊಡದೆ ನಾವು ಗೌಪ್ಯವಾಗಿ ಚಲಾಯಿಸುವ ಮತ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮತಯಂತ್ರಗಳ ಮೂಲಕ ನಕಲಿ ಮತದಾನ ಹೆಚ್ಚಾಗುತ್ತಿದ್ದು ಅನೇಕ ಕಡೆ ಇಡೀ ಮತದಾನ ಪ್ರಕ್ರಿಯೆಯನ್ನೇ ಬುಡಮೇಲು ಮಾಡಲಾಗುತ್ತಿದೆ.

ಡಿಜಿಟಲ್ ವಿಧಾನದಲ್ಲಿ ಚಲಾಯಿಸಿದ ಮತದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಗೌಪ್ಯತೆ ಕಾಪಾಡುವ ಸವಾಲಿನ ಮಧ್ಯೆ ಮತ ಚಲಾವಣೆಯ ನಿಖರತೆಯನ್ನು ಸಾಬೀತುಪಡಿಸುವುದು ಕಷ್ಟಸಾಧ್ಯ. ಹೀಗಾಗಿಯೇ ಈಗ ಬಂದಿರುವ ತನ್ನದೇ ಆದ ಸಂಕೇತ ಭಾಷೆಯಲ್ಲಿ ಕಾರ್ಯನಿರ್ವಹಿಸುವ ನೂತನ 'ಬ್ಲಾಕ್‌ಚೈನ್' ವ್ಯವಸ್ಥೆ ಮತದಾನ ಸಮಸ್ಯೆಗಳಿಗೆ ಉತ್ತರವಾಗಬಹುದಾಗಿದೆ.

ಈಗಾಗಲೇ ಅನೇಕ ಕಡೆ ಬ್ಲಾಕ್‌ಚೈನ್ ಮತದಾನ ವ್ಯವಸ್ಥೆ ಜಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಿಂದ ಹೊರಗೆ ಕಾರ್ಯನಿರ್ವಹಿಸುತ್ತಿರುವ ಅಮೆರಿಕೆಯ ಪಶ್ಚಿಮ ವರ್ಜಿನಿಯಾ ನಿವಾಸಿ ಯೋಧರಿಗೆ ತಮ್ಮ ಮೊಬೈಲ್ ಬಳಸುವ ಮೂಲಕ ಮಾತೃದೇಶದಲ್ಲಿ ನಡೆದ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗಿತ್ತು.
ಗುಪ್ತ ಸಂಕೇತ ಭಾಷೆ ಹಾಗೂ ಬ್ಲಾಕ್‌ಚೈನ್ ರಜಿಸ್ಟ್ರಿಯ ಪ್ರಕ್ರಿಯೆಯು ಈ ಮತಗಳನ್ನು ಎಣಿಸುವ ಹಾಗೂ ಪರಿಶೀಲಿಸುವ ಕೆಲಸ ಮಾಡುತ್ತದೆ.
ಬ್ರೆಜಿಲ್, ಡೆನ್ಮಾರ್ಕ್, ದಕ್ಷಿಣ ಕೋರಿಯಾ ಹಾಗೂ ಸ್ವಿಟ್ಜರ್‌ಲೆಂಡ್ ಮುಂತಾದ ದೇಶಗಳಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಿವೆ. ಆದರೆ ಎಸ್ಟೋನಿಯಾ ದೇಶ ಈ ತಂತ್ರಜ್ಞಾನದಲ್ಲಿ ಎಲ್ಲ ದೇಶಗಳನ್ನು ಮೀರಿಸಿದೆ. ಎಸ್ಟೋನಿಯಾದಲ್ಲಿ ಮತದಾರರಿಗೆ ವಿಶಷ್ಟ ಗುರುತಿನ ಚೀಟಿಗಳನ್ನು ನೀಡಲಾಗಿದ್ದು, ಬ್ಲಾಕ್‌ಚೈನ್ ಮತದಾನಕ್ಕೆ ಇವು ಸಹಕಾರಿಯಾಗುವಂತೆ ರೂಪಿಸಲಾಗಿದೆ.

ಬ್ಲಾಕ್‌ಚೈನ್ ಮೂಲಕ ಜನತೆ ಕ್ಷಿಪ್ರವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಯಾವುದೇ ವಿಷಯದ ಬಗ್ಗೆ ಶೀಘ್ರವಾಗಿ ಸಾರ್ವಜನಿಕ ಸಹಮತ ಮೂಡಿಸಬಹುದು.

ಜನಸಾಮಾನ್ಯರಿಗಾಗಿ ಬ್ಲಾಕ್‌ಚೈನ್ ಹೇಗೆ ಕೆಲಸ ಮಾಡುತ್ತದೆ?

ಜನಸಾಮಾನ್ಯರಿಗಾಗಿ ಬ್ಲಾಕ್‌ಚೈನ್ ಹೇಗೆ ಕೆಲಸ ಮಾಡುತ್ತದೆ?

ಮತದಾರ ಯಾವುದೇ ನಿರ್ದಿಷ್ಟ ವಿಷಯದ ಆಧಾರದಲ್ಲಿ ಯಾವುದೇ ವ್ಯಕ್ತಿಗೆ ಮತ ನೀಡಬಹುದು. ಜನ ತಾವು ಬಯಸಿದ ಒಬ್ಬ ಉತ್ತಮ ವ್ಯಕ್ತಿಗೆ ಮತ ಹಾಕಬಹುದು. ಅದೇ ರೀತಿ ಆ ವ್ಯಕ್ತಿ ಸಹ ತನಗೆ ಬೇಕಾದವರಿಗೆ ಮತ ಚಲಾಯಿಸಬಹುದು.
ಆದರೆ ಯಾವುದೇ ಸಂದರ್ಭದಲ್ಲಿ ತಾನು ಮತ ನೀಡಿದ ವ್ಯಕ್ತಿ ಹಿಂದೆ ವಾಗ್ದಾನ ಮಾಡಿದಂತೆ ಕೆಲಸ ಮಾಡುತ್ತಿಲ್ಲ ಎನಿಸಿದರೆ ತಕ್ಷಣ ಮತವನ್ನು ಹಿಂದೆ ಪಡೆಯಬಹುದು. ಅಂದರೆ ಯಾವುದೇ ಅಮಿಷಗಳಿಗೆ ಮತದಾರ ಬಲಿಯಾಗುವ ಸಾಧ್ಯತೆಗಳಿರುವುದಿಲ್ಲ.
ಈ ವ್ಯವಸ್ಥೆಯಿಂದ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ. ಅಲ್ಲದೆ ಪ್ರತಿ ಜನಪ್ರತಿನಿಧಿಗೆ ಜನತೆ ವಿಷಯಾಧಾರಿತವಾಗಿ ತಮ್ಮ ಒಲವು ತೋರ್ಪಡಿಸಬಹುದು. ಉದಾಹರಣೆಗೆ, ಪರಿಸರ ಸಂರಕ್ಷಣೆಯ ಬಗ್ಗೆ ಮತದಾರ ಒಲವು ಹೊಂದಿದಲ್ಲಿ, ತಾನು ಬಯಸುವ ಪರಿಸರ ವಿಜ್ಞಾನಿ ಅಥವಾ ಪರಿಸರವಾದಿಗೆ ಮತ ನೀಡುವ ಮೂಲಕ ಅವರನ್ನು ಆ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಬಹುದು.
ಓರ್ವ ನುರಿತ ಬ್ಯಾಂಕರ್ ಆಗಿರುವ ನಿಮ್ಮ ಗೆಳತಿಯೊಬ್ಬಳನ್ನು ಹಣಕಾಸು ವ್ಯವಸ್ಥೆ ನಿರ್ವಹಣೆಗೆ ಆಯ್ಕೆ ಮಾಡಬಹುದು. ಸಾಮಾಜಿಕ ವಿಷಗಳ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇದ್ದಲ್ಲಿ ನೀವು ನಿಮಗೇ ಮತ ಹಾಕಿ ಆ ಕೆಲಸಗಳ ಜವಾಬ್ದಾರಿ ಹೊತ್ತುಕೊಳ್ಳಬಹುದು.

ಬರುವ ದಿನಗಳಲ್ಲಿ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೆ ಬ್ಲಾಕ್‌ಚೈನ್ ಹೇಗೆ ಸಹಕಾರಿಯಾಗಲಿದೆ ಎಂಬ ಪ್ರಮುಖ ಹತ್ತು ಅಂಶಗಳನ್ನು ನೋಡೋಣ ಬನ್ನಿ.

1. ಪಾರದರ್ಶಕ ಮತದಾನ

1. ಪಾರದರ್ಶಕ ಮತದಾನ

ಪಾರದರ್ಶಕತೆಯು ಬ್ಲಾಕ್‌ಚೈನ್ ವೋಟಿಂಗ್‌ನ ಪ್ರಮುಖ ಅಂಶವಾಗಿದೆ. ಈಗ ನಾವು ನೀಡುವ ಮತ ಏನಾಯಿತು ಎಂಬ ಬಗ್ಗೆ ಗೊತ್ತಾಗುವುದೇ ಇಲ್ಲ. ಚುನಾವಣಾ ಆಯೋಗ ನನ್ನ ಮತವನ್ನು ಎಣಿಸಿತಾ ಅಥವಾ ಇಲ್ಲ ಎಂಬ ಬಗ್ಗೆ ಖಚಿತ ಮಾಹಿತಿ ಸಿಗಲಾರದು.
ಆದರೆ ಬ್ಲಾಕ್‌ಚೈನ್ ವ್ಯವಸ್ಥೆಯಲ್ಲಿ ನಮ್ಮ ಮತ್ತ ಎಲ್ಲಿ ಹೋಗಿದೆ ಎಂಬ ಬಗ್ಗೆ ತಿಳಿದುಕೊಳ್ಳಬಹುದು. ಆದರೆ ಹಾಗಂತ ನಿಮ್ಮ ವೈಯಕ್ತಿಕ ವಿವರಗಳು ಮತದೊಂದಿಗೆ ಜೋಡಣೆ ಆಗಿರುವುದಿಲ್ಲ. ಆದರೂ ಅದು ಬ್ಲಾಕ್‌ಚೈನ್ ಸರಣಿಯಲ್ಲಿ ದಾಖಲಾಗಿರುತ್ತದೆ.

2. ಚುನಾವಣಾ ವಂಚನೆಗಳಿಗೆ ತಡೆ

2. ಚುನಾವಣಾ ವಂಚನೆಗಳಿಗೆ ತಡೆ

ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಾದಾಗ ಸಹಜವಾಗಿಯೇ ವಂಚನೆ, ಮೋಸ ಕಡಿಮೆಯಾಗುತ್ತವೆ. ಬ್ಲಾಕ್‌ಚೈನ್ ವ್ಯವಸ್ಥೆಯಲ್ಲಿ ನಕಲಿ ಮತದಾನ ಸಾಧ್ಯವಿಲ್ಲ. ಹೀಗಾಗಿ ಸರ್ವಾಧಿಕಾರಿಗಳ ದೇಶಗಳಲ್ಲಿ ಅವರಿಂದ ಮತದಾನ ಪ್ರಕ್ರಿಯೆ ವಶ ಪಡಿಸಿಕೊಳ್ಳುವುದನ್ನು ತಪ್ಪಿಸಲು ಬ್ಲಾಕ್‌ಚೈನ್ ಸಹಕಾರಿಯಾಗಿದೆ.
ಆರಂಭದಲ್ಲಿ ಬ್ಲಾಕ್‌ಚೇನ್ ಅಳವಡಿಸಿಕೊಳ್ಳಲು ಸರಕಾರಗಳು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಕಾಲಾನುಕ್ರಮದಲ್ಲಿ ಬ್ಲಾಕ್‌ಚೈನ್ ಮಾದರಿ ಜಾಗತಿಕ ಮತದಾನ ವ್ಯವಸ್ಥೆಯಾಗಿ ರೂಪುಗೊಳ್ಳುವ ಸಾಧ್ಯತೆಗಳಿವೆ.

3. ವರ್ತಮಾನದಲ್ಲಿ ಮತದಾನ ಹಾಗೂ ಜನಾಭಿಪ್ರಾಯ ಸಂಗ್ರಹ

3. ವರ್ತಮಾನದಲ್ಲಿ ಮತದಾನ ಹಾಗೂ ಜನಾಭಿಪ್ರಾಯ ಸಂಗ್ರಹ

ನಾವು ಚಲಾಯಿಸಿದ ಮತಗಳನ್ನು ಆಗಿಂದಾಗಲೇ ಅಂದರೆ ವರ್ತಮಾನ ಅವಧಿಯಲ್ಲೇ ಎಣಿಸಬಹುದು. ಈಗ ಮತ ಹಾಕಿ, ಎಣಿಕೆಗೆ ಕಾಯುವ ಅವಶ್ಯಕತೆ ಇಲ್ಲ. ಇದು ಬ್ಲಾಕ್‌ಚೈನ್‌ನ ವೈಶಿಷ್ಟ್ಯವಾಗಿದೆ. ಈ ರೀತಿಯ ಡಿಜಿಟಲ್ ಚುನಾವಣೆಯಿಂದ ಆಡಳಿತದ ಮೇಲೆ ಉಂಟಾಗುವ ಖರ್ಚುಗಳು ಸಹ ಗಣನೀಯವಾಗಿ ತಗ್ಗುತ್ತವೆ.
ಪ್ರತಿ ಐದು ವರ್ಷಕ್ಕೊಮ್ಮೆ ಜನಾಭಿಪ್ರಾಯದ ಬದಲಿಗೆ ಆಗಾಗ ನಮ್ಮ ಧ್ವನಿ ಎತ್ತಬಹುದು. ಉದಾಹರಣೆಗೆ ಈಗ ನಮ್ಮ ಪ್ರದೇಶದಲ್ಲಿ ಆರಂಭವಾಗಲಿರುವ ಜಿಮ್ ಒಂದಕ್ಕೆ ನಮ್ಮ ಪುರಸಭೆ ಕರ ವಸೂಲು ಮಾಡಬೇಕಾ ಅಥವಾ ಬೇಡ ಎಂಬ ಬಗ್ಗೆ ನಾವು ಈಗಲೇ ನಮ್ಮ ಸ್ಮಾರ್ಟ್ ಫೋನ್ ಮೂಲಕ ಮತ ಚಲಾಯಿಸಬಹುದು. ಹೀಗಾಗಿಯೇ ಬ್ಲಾಕ್‌ಚೈನ್ ವಿಧಾನ ಆಕರ್ಷಕವಾಗಿದೆ ಎಂದು ಅನಿಸುತ್ತದೆ.

4. ಖಾಸಗಿ ಸಂಸ್ಥೆಗಳು ಹಾಗೂ ಕಂಪನಿಗಳಿಗೂ ಉಪಯೋಗ

4. ಖಾಸಗಿ ಸಂಸ್ಥೆಗಳು ಹಾಗೂ ಕಂಪನಿಗಳಿಗೂ ಉಪಯೋಗ

ಸರ್ಕಾರಿ ಸಂಸ್ಥೆಗಳಲ್ಲದೆ ಸಮಾಜದಲ್ಲಿನ ಖಾಸಗಿ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಹಾಗೂ ಇನ್ನಿತರ ಕಂಪನಿಗಳು ಸಹ ತಮ್ಮ ಆಂತರಿಕ ಆಡಳಿತ ವ್ಯವಸ್ಥೆ ಸುಧಾರಣೆಗೆ ಬ್ಲಾಕ್‌ಚೈನ್ ವೋಟಿಂಗ್ ವಿಧಾನ ಅಳವಡಿಸಿಕೊಳ್ಳಹುದಾಗಿದೆ.

5. ಹೆಚ್ಚಿದ ಮತದಾರರ ಪಾಲುದಾರಿಕೆ

5. ಹೆಚ್ಚಿದ ಮತದಾರರ ಪಾಲುದಾರಿಕೆ

ಬ್ಲಾಕ್‌ಚೈನ್ ಮತದಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಬ್ಲಾಕ್‌ಚೈನ್ ಮೂಲಕ ಇ-ವೋಟಿಂಗ್‌ನಿಂದ ಕೈಯಲ್ಲಿರುವ ಸ್ಮಾರ್ಟ್‌ಫೋನ್, ಮನೆಯಲ್ಲಿನ ಪಿಸಿ ಹೀಗೆ ಎಲ್ಲಿಂದಾದರೂ ಸುಸೂತ್ರವಾಗಿ ಮತ ಹಾಕಬಹುದು. ಇದರಿಂದ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಿ ಪ್ರಜಾಪ್ರಭುತ್ವಕ್ಕೆ ಬಲ ತುಂಬಲಿದೆ.

6. ಚುನಾವಣಾ ವ್ಯವಸ್ಥೆ ಸುಧಾರಣೆ

6. ಚುನಾವಣಾ ವ್ಯವಸ್ಥೆ ಸುಧಾರಣೆ

ದುಂದು ವೆಚ್ಚದ ಪ್ರಚಾರ, ಹಣಬಲ, ತೋಳ್ಬಲ ಮುಂತಾದುವುವುಗಳ ಅಟ್ಟಹಾಸ ನಿಂತು ಹೋಗುತ್ತದೆ. ತಾನು ಆರಿಸಬೇಕೆಂದಿರುವ ವ್ಯಕ್ತಿಯ ಜ್ಞಾನದ ಮಟ್ಟ ಹಾಗೂ ಆತ ಮಾಡಿರುವ ಕೆಲಸಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ.

7. ಹೊಣೆಗಾರಿಕೆ

7. ಹೊಣೆಗಾರಿಕೆ

ಒಬ್ಬನೇ ವ್ಯಕ್ತಿ ಎಲ್ಲ ನಿರ್ಣಾಯಕ ಹಂತಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಳ್ಳಬಹುದು. ಕೆಳ ಹಂತದ ನಾಯಕತ್ವದಿಂದ ಮೇಲಿನ ಆಯ್ಕೆ ಪ್ರಕ್ರಿಯೆವರೆಗೆ ಎಲ್ಲವನ್ನೂ ತಿಳಿಯಬಹುದು.

8. ಹಣ ಹಾಗೂ ಸಮಯದ ಉಳಿತಾಯ

8. ಹಣ ಹಾಗೂ ಸಮಯದ ಉಳಿತಾಯ

ಬ್ಲಾಕ್‌ಚೈನ್ ವ್ಯವಸ್ಥೆಯಲ್ಲಿ ಒಬ್ಬ ಜನಪ್ರತಿನಿಧಿಗಿಂತ ಯಾರ ಬಳಿ ಸಂಖ್ಯಾಬಲ ಇರುತ್ತದೆಯೋ ಅವರ ಬಳಿಯೇ ಅಧಿಕಾರ ಇರುತ್ತದೆ. ಹೀಗಾಗಿ ವಿರೋಧ ಪಕ್ಷದ ರೂಪದಲ್ಲಿ ಅಧಿಕಾರಕ್ಕಾಗಿ ಕಿತ್ತಾಡುವ ಸಂದರ್ಭ ಇರುವುದಿಲ್ಲ. ಇದರಿಂದ ಆಡಳಿತದಲ್ಲಿ ಸಮಯ ಹಾಗೂ ಹಣದ ಉಳಿತಾಯ ಸಾಧ್ಯವಾಗುತ್ತದೆ.

9. ಪಕ್ಷಗಳ ಆಂತರಿಕ ಆಡಳಿತ

9. ಪಕ್ಷಗಳ ಆಂತರಿಕ ಆಡಳಿತ

ಯಾವುದೇ ಪಕ್ಷದಲ್ಲಿ ಅಧಿಕಾರಕ್ಕಾಗಿ ಪೈಪೋಟಿ ಇರುವುದಿಲ್ಲ. ಏಕೆಂದರೆ ಪಕ್ಷದ ಎಲ್ಲ ಅಧಿಕಾರ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಬಳಿ ಇರುತ್ತದೆ.

10. ಜ್ಞಾನ ಹಾಗೂ ಕೌಶಲ್ಯಕ್ಕೆ ಒತ್ತು

10. ಜ್ಞಾನ ಹಾಗೂ ಕೌಶಲ್ಯಕ್ಕೆ ಒತ್ತು

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಕೆಳ ಹಂತದ ಸಮಸ್ಯೆಗಳ ಬಗ್ಗೆ ತಿಳಿದವರು ಬ್ಲಾಕ್‌ಚೈನ್ ವ್ಯವಸ್ಥೆಯಲ್ಲಿ ನಿಜವಾದ ನಾಯಕರಾಗಿ ಹೊರಹೊಮ್ಮುತ್ತಾರೆ. ಅಕ್ಷರ ಬಾರದೆ, ಹಣ, ತೋಳ್ಬಲಗಳ ಮೂಲಕ ನಾಯಕರಾಗಲು ಸಾಧ್ಯವಿಲ್ಲ.

11. ಎಲ್ಲರನ್ನೂ ಒಳಗೊಂಡ ವ್ಯವಸ್ಥೆ

11. ಎಲ್ಲರನ್ನೂ ಒಳಗೊಂಡ ವ್ಯವಸ್ಥೆ

ಬ್ಲಾಕ್‌ಚೈನ್ ಸಿಸ್ಟಂ ಅನ್ನು ಯಾವುದೋ ಒಂದು ನಿರ್ದಿಷ್ಟ ಪ್ರದೇಶ ಅಥವಾ ಜನರಿಗೆ ಸೇರಿದ ವ್ಯವಸ್ಥೆ ಎನ್ನುವಂತಿಲ್ಲ. ಇದನ್ನು ಈಗಾಗಲೇ ಜಗತ್ತಿನ ಹಲವಾರು ರಾಷ್ಟ್ರಗಳು ಅಳವಡಿಸಿಕೊಳ್ಳುತ್ತಿವೆ. ಈಗ ಇದರಲ್ಲಿ ಆರಂಭಿಕ ಅಡಚಣೆಗಳಿದ್ದರೂ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ನಾಯಕರ ಕೈಯಿಂದ ಅಧಿಕಾರವನ್ನು ಸಾಮಾನ್ಯ ಜನರಿಗೆ ಹಸ್ತಾಂತರಿಸಲಿದೆ.
ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥೆ ಹಾಗೂ ಡಿಜಿಟಲ್ ಜ್ಞಾನದ ಕೊರತೆಯನ್ನು ನೋಡಿದರೆ ಬ್ಲಾಕ್‌ಚೈನ್ ವ್ಯವಸ್ಥೆ ನಮ್ಮಲ್ಲಿ ಬರಲು ಇನ್ನೂ 10 ರಿಂದ 15 ವರ್ಷ ಬೇಕಾಗಬಹುದು. ಒಟ್ಟಾರೆಯಾಗಿ ಇದೊಂದು ತಂತ್ರಜ್ಞಾನ ಆಧಾರಿತವಾದ ಜನರ ಕೈಗೆ ಅಧಿಕಾರ ನೀಡಿ ಪ್ರಜಾಪ್ರಭುತ್ವ ಬಲಪಡಿಸುವ ವ್ಯವಸ್ಥೆಯಾಗಿರಲಿದೆ.

English summary

'Blockchain Voting System' will destroys political system! Why do you know?

'Blockchain Voting System' will destroys political system in the world. Blockchain voting as of now is changing the electoral process.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X