For Quick Alerts
ALLOW NOTIFICATIONS  
For Daily Alerts

ಮನಿ ಮಂತ್ರ– ಅನಗತ್ಯ ವಸ್ತುಗಳ ಖರೀದಿ ನಿಲ್ಲಿಸಲು ಇರುವ 5 ಸರಳ ಸೂತ್ರಗಳು

ನಿಮಗೆ ಯಾವತ್ತಾದರೂ ಸಮಯ ಸಿಕ್ಕರೆ, ಸ್ವಲ್ಪ ಕೂಲಂಕುಷವಾಗಿ ನೋಡಿ. ನೀವು ಯಾವತ್ತೂ ಬಳಸದ ಎಷ್ಟು ವಸ್ತುಗಳನ್ನು ಖರೀದಿಸಿ ವೆಚ್ಚ ಮಾಡಿದ್ದೀರಿ ಎಂಬುದನ್ನು... ಕೆಲವರು ಪುಸ್ತಕಗಳನ್ನು ಖರೀದಿಸಿದ್ದರೆ, ಕೆಲವರು ಬಟ್ಟೆ, ಫರ್ಫ್ಯೂಮ್, ವಾಚ್ ಇತ್ಯಾದಿ

|

ನಿಮಗೆ ಯಾವತ್ತಾದರೂ ಸಮಯ ಸಿಕ್ಕರೆ, ಸ್ವಲ್ಪ ಕೂಲಂಕುಷವಾಗಿ ನೋಡಿ. ನೀವು ಯಾವತ್ತೂ ಬಳಸದ ಎಷ್ಟು ವಸ್ತುಗಳನ್ನು ಖರೀದಿಸಿ ವೆಚ್ಚ ಮಾಡಿದ್ದೀರಿ ಎಂಬುದನ್ನು... ಕೆಲವರು ಪುಸ್ತಕಗಳನ್ನು ಖರೀದಿಸಿದ್ದರೆ, ಕೆಲವರು ಬಟ್ಟೆ, ಫರ್ಫ್ಯೂಮ್, ವಾಚ್ ಇತ್ಯಾದಿಗಳಿಗಾಗಿ ಖರ್ಚು ಮಾಡಿರುತ್ತಾರೆ. ಹೆಚ್ಚಿನವರು ಬೋರ್ ಆಯಿತು ಎಂದು ಏನನ್ನಾದರೂ ಖರೀದಿಸುವ ಅಭ್ಯಾಸ ಹೊಂದಿರುತ್ತೇವೆ. ಅಗತ್ಯವಿಲ್ಲದಿದ್ದರೂ ಶಾಪಿಂಗ್ ಮಾಡುತ್ತೇವೆ. ಹೀಗೆ ಅತಿಯಾಗಿ ಬೇಡದ ವಸ್ತುಗಳ ಮೇಲೆ ಹಣ ಸುರಿಯುವುದು ನಿಮ್ಮ ಆರ್ಥಿಕತೆಯ ಮೇಲೆ ನೀವು ತಂದುಕೊಳ್ಳುವ ಪೆಟ್ಟು. ಹಾಗಾಗಿ ಇಲ್ಲಿ ಕೆಲವು ಸರಳ ಸಲಹೆಗಳನ್ನು ನೀಡಲಾಗಿದೆ. ಇವುಗಳು ನಿಮ್ಮ ಈ ಅಭ್ಯಾಸವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಮುಂದೆ ಓದಿ..

 

1. ಯಾವುದು ಬಹಳ ಮುಖ್ಯ ಎಂಬುದನ್ನು ಗಮನಿಸಿಕೊಳ್ಳಿ

1. ಯಾವುದು ಬಹಳ ಮುಖ್ಯ ಎಂಬುದನ್ನು ಗಮನಿಸಿಕೊಳ್ಳಿ

ಬೇಡದ ವಸ್ತುಗಳ ಖರೀದಿಯನ್ನು ತಪ್ಪಿಸಲು ಇರುವ ಮೊದಲ ಹೆಜ್ಜೆ ಏನೆಂದರೆ, ಯಾವುದು ನಿಮ್ಮ ಅಗತ್ಯತೆ ಅನ್ನುವುದನ್ನು ಗಮನಿಸಿಕೊಳ್ಳುವುದು. ಒಮ್ಮೆ ನೀವು ನಿಮ್ಮ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಆದ್ಯತೆಯ ಮೇರೆಗೆ ಜೋಡಿಸಿಕೊಳ್ಳಿ. ನೀವು ಪಟ್ಟಿ ಮಾಡಿರುವುದೆಲ್ಲವೂ ಅಗತ್ಯವೇ ಇರಬಹುದು ಆದರೆ ನಿಜವಾಗಲೂ ಅಗತ್ಯವಿದ್ದು ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬುದನ್ನು ಈ ಪಟ್ಟಿಯು ನಿಮಗೆ ತಿಳಿಸಲಿದೆ. ಪ್ರವಾಸ ಮತ್ತು ಹಾಡು ಕೇಳುವುದು ಎರಡೂ ನಿಮಗೆ ಬಹಳ ಮುಖ್ಯ ಎಂದೆನ್ನಿಸಿದರೂ ಪ್ರವಾಸಕ್ಕಿಂತಲೂ ಹಾಡು ಕೇಳುವುದು ಪ್ರಾಮುಖ್ಯವಾಗಿದೆ ಎಂಬುದು ಆಲೋಚಿಸಿದಾಗ ತಿಳಿಯುತ್ತದೆ. ಈ ಖರ್ಚುವೆಚ್ಚವೂ ಹಾಗೆ.. ಆದ್ಯತೆಯನ್ನು ಗಮನಿಸಬೇಕಾಗುತ್ತದೆ. ಒಮ್ಮೆ ನೀವು ಅರ್ಥ ಮಾಡಿಕೊಂಡರೆ ಅಗತ್ಯವಿಲ್ಲದ ವಸ್ತು ಶೇಖರಣೆಗೊಳ್ಳುವುದು ದಿನದಿಂದ ದಿನಕ್ಕೆ ಕಡಿಮೆಯಾಗುತ್ತೆ. ತಪ್ಪುಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಹೆಚ್ಚು ತಪ್ಪುಗಳಾಗುವುದಿಲ್ಲ ಎಂಬುದು ನೆನಪಿರಲಿ.

2. ಬಜೆಟ್ ತಯಾರಿಸಿಕೊಳ್ಳಿ ಮತ್ತು ಅದಕ್ಕೆ ಬದ್ಧರಾಗಿರಿ
 

2. ಬಜೆಟ್ ತಯಾರಿಸಿಕೊಳ್ಳಿ ಮತ್ತು ಅದಕ್ಕೆ ಬದ್ಧರಾಗಿರಿ

ಅಗತ್ಯವಿಲ್ಲದ್ದು ನಮ್ಮ ಜೊತೆ ಸೇರಿಕೊಳ್ಳುವುದು ಯಾವಾಗವೆಂದರೆ ನಾವು ಬಜೆಟ್ ತಯಾರಿಸಿಕೊಳ್ಳದೆ ಇರುವುದೆಲ್ಲವನ್ನೂ ಖರ್ಚು ಮಾಡಲು ಪ್ರಾರಂಭಿಸಿದಾಗ. ಪ್ರತಿ ಮನುಷ್ಯನೂ ಬಜೆಟ್ ಗೆ ಬದ್ಧರಾಗಿರುವುದು ಒಳಿತು. ತಿಂಗಳಲ್ಲಿ ಮಾಡಬೇಕಾಗಿರುವ ದೊಡ್ಡ ಕೆಲಸವೆಂದು ಭಾವಿಸಬೇಡಿ. ನೀವು ಗಳಿಸಿದ್ದನ್ನು ಎಲ್ಲಿ ಹಾಕಿದಿರಿ ಮತ್ತು ಹಾಕಬೇಕು ಎಂಬ ಬಗೆಗಿನ ಒಂದು ಸಣ್ಣ ಪಟ್ಟಿ ಅಷ್ಟೇ. ಯಾವುದು ಅಗತ್ಯವಿದೆ ಅದಕ್ಕೆ ಇಂತಿಷ್ಟು ಹಣವನ್ನು ಈ ತಿಂಗಳು ವ್ಯಯಿಸುತ್ತೇನೆ ಅಂದುಕೊಳ್ಳುವುದು ಒಂದು ರೀತಿಯ ಯೋಜನೆ ಅಷ್ಟೇ. ಆ ಮೂಲಕ ನೀವು ಅನಗತ್ಯವಾಗಿರುವುದಕ್ಕೆ ಹೆಚ್ಚು ಮಹತ್ವ ನೀಡದೆ ಖರೀದಿಸುವಾಗ ಯೋಚಿಸುತ್ತೀರಿ. ಅಥವಾ ಖರೀದಿಸುವುದೇ ಇಲ್ಲ. ಆ ಮೂಲಕ ನಿಮ್ಮ ಹಣವೂ ಉಳಿತಾಯವಾಗುತ್ತದೆ. ಬಜೆಟ್ ಮೀರಿದ ಯೋಜನೆ ಯಾವತ್ತೂ ಇರಕೂಡದು. ಸಾಲ ಮಾಡಿ ತುಪ್ಪ ತಿನ್ನುವ ಆಲೋಚನೆ ಬೇಡ. ಬಜೆಟ್ ಅನ್ನುವುದು ಒಂದು ಕಾಗದದ ತುಂಡೇ ಆಗಿರಬಹುದು ಆದರೆ ಅದಕ್ಕೆ ನೀವು ಬದ್ಧರಾಗಿರಬೇಕು.

3. ಆದಷ್ಟು ಹಣ ಪಾವತಿಸಿ ಖರೀದಿಸಿ

3. ಆದಷ್ಟು ಹಣ ಪಾವತಿಸಿ ಖರೀದಿಸಿ

ಒಂದು ವೇಳೆ ನೀವು ಅಗತ್ಯವಿರುವುದು, ಅಗತ್ಯವಿಲ್ಲದೆ ಇರುವುದು ಎಲ್ಲದಕ್ಕೂ ನಿಮ್ಮ ಕಾರ್ಡ್ ಗಳನ್ನು ಬಳಸಿ ಶಾಪಿಂಗ್ ಮಾಡುವ ಅಭ್ಯಾಸ ಹೊಂದಿದ್ದರೆ ದಯವಿಟ್ಟು ಬಿಟ್ಟುಬಿಡಿ. ಪ್ಲಾಸ್ಟಿಕ್ ಹಣ ಅರ್ಥಾತ್ ಕಾರ್ಡ್ ಗಳು ಯಾವುದೇ ಸಮಸ್ಯೆ ಇಲ್ಲದೆ, ಪ್ರತಿಫಲಾಪೇಕ್ಷೆ ಇಲ್ಲದೆ, ಬಹುಷ್ಯ ನಿಮ್ಮ ಶಾಪಿಂಗ್ ನ್ನು ಸುಗಮಗೊಳಿಸಬಹುದು ಆದರೆ ಹಣ ಖರ್ಚಾಗಿದ್ದೇ ಗೊತ್ತಾಗದಂತೆ ಆಗಬಹುದು. ಬದಲಾಗಿ ಹಣ ಪಾವತಿಸಿ ಖರೀದಿಸಿ. ಹೀಗೆ ಮಾಡುವುದರಿಂದಾಗಿ ಕೆಲವು ಲಾಭಗಳೂ ಇವೆ. ನೀವು ಪ್ರತಿಸಲ ಖರ್ಚು ಮಾಡಿದಾಗಲೂ ಹಣವನ್ನು ವಿತ್ ಡ್ರಾ ಮಾಡಬೇಕಾಗುತ್ತದೆ. ಆಗ ಸ್ವಲ್ಪ ವಾಕಿಂಗ್ ಕೂಡ ಮಾಡಬೇಕಾಗುತ್ತದೆ. ಆಗ ಸ್ವಲ್ಪ ಸಮಯ ವ್ಯರ್ಥವಾಗಿ ಅನಗತ್ಯ ಶಾಪಿಂಗ್ ತಪ್ಪುತ್ತದೆ. ಕೈಯಲ್ಲಿ ಕಡಿಮೆ ಹಣವಿದ್ದಾಗ ವಸ್ತುಗಳು ನಿಮ್ಮನ್ನು ಅಟ್ರ್ಯಾಕ್ಟ್ ಮಾಡಿ ಖರೀದಿಸಲು ಪ್ರಚೋದಿಸುವುದು ಕಡಿಮೆಯಾಗುತ್ತೆ. ಕಾರ್ಡ್ ಆದರೆ ಕೇವಲ ಪಿನ್ ಹೊಡೆದರೆ ಸಾಕು, ಆದರೆ ಕ್ಯಾಷ್ ಆದರೆ ಚಿಲ್ಲರೆ ಪಡೆಯಬೇಕು, ಚಿಲ್ಲರೆ ನೀಡಬೇಕು, ಇವೆಲ್ಲವೂ ಸಮಯ ಪಡೆಯುತ್ತದೆ. ಆ ಸಮಯದಲ್ಲಿ ನಿಮ್ಮ ಅನಗತ್ಯ ಶಾಪಿಂಗ್ ತಪ್ಪುತ್ತದೆ.

4. ಖರೀದಿಸುವುದನ್ನು ನಿಧಾನಗೊಳಿಸಿ

4. ಖರೀದಿಸುವುದನ್ನು ನಿಧಾನಗೊಳಿಸಿ

ಹೆಚ್ಚಿನವರು ಅನಗತ್ಯವಾಗಿ ಯಾಕೆ ಖರೀದಿಸುತ್ತಾರೆ ಎಂದರೆ ಅವರಿಗೆ ಕಾಯುವ ತಾಳ್ಮೆ ಇರುವುದಿಲ್ಲ. ಒಂದು ವೇಳೆ ಅವರು ಒಳ್ಳೆಯ ಡ್ರೆಸ್ ಅಥವಾ ಫೋನ್ ಯಾವುದನ್ನೇ ನೋಡಲಿ, ಅವರು ಬೇಕು ಎಂಬ ಭಾವನೆಗೆ ಒಳಗಾಗುತ್ತಾರೆ ಮತ್ತು ಅದನ್ನು ಖರೀದಿಸುವುದರಿಂದಲೇ ಅವರಿಗೆ ಸಂತೋಷವಿದೆ ಎಂದು ಭಾವಿಸುತ್ತಾರೆ. ಇದೇ ಕಾರಣಕ್ಕೆ ನಿಮ್ಮ ಖರೀದಿಯನ್ನು ನಿಧಾನಗೊಳಿಸಿ ಎಂದು ಹೇಳುವುದು. ಕೊನ ಪಕ್ಷ ನೀವು ಖರೀದಿಸಬೇಕು ಎಂದುಕೊಳ್ಳುವ ವಸ್ತುವನ್ನು ಖರೀದಿಸುವುದನ್ನು ಒಂದು ವಾರ ಮುಂದಕ್ಕೆ ತಳ್ಳಿ. ಆಗ ನಿಮಗೆ ಗೊತ್ತಿಲ್ಲದೆ ಅನಗತ್ಯ ವಸ್ತುಗಳು ನಿಮ್ಮಲ್ಲಿ ಶೇಖರಣೆಗೊಳ್ಳುವುದು ತಪ್ಪುತ್ತದೆ. ಹಣವೂ ಉಳಿಯುತ್ತೆ. ಏಳು ದಿನದ ಚಾಲೆಂಜ್ ನ್ನು ಮನಸ್ಸಿನಲ್ಲೇ ಸ್ವೀಕರಿಸಿಕೊಳ್ಳಿ. ಕೊನೆಗೆ ವಾರದ ನಂತರವೂ ನೀವು ಆ ವಸ್ತುವನ್ನು ಖರೀದಿಸಬೇಕು ಎಂದು ಅನ್ನಿಸುತ್ತಿದ್ದರೆ, ಆಗ ಆ ವಸ್ತುವನ್ನು ಖರೀದಿಸಿ. ಒಂದು ವಾರ ಹೀಗೆ ಸಮಯ ನೀಡುವುದರಿಂದ ನಿಮ್ಮ ಮೆದುಳು ಆ ವಸ್ತುವಿನ ಅಗತ್ಯತೆ ಮತ್ತು ಅದು ಎಷ್ಟು ಬೆಲೆಯುಳ್ಳದ್ದು ಎಂಬುದನ್ನು ಆಲೋಚಿಸಲು ಸಹಾಯವಾಗುತ್ತದೆ. ನಿಮ್ಮೆಲ್ಲ ಆಲೋಚನೆಗಳನ್ನು ಹಾಕಿ, ಬೇಕು ಬೇಡವನ್ನು ಅಳೆದು ತೂಗಿ ನಿರ್ಧಾರ ಕೈಗೊಳ್ಳಲು ಈ ಸಮಯ ಮಹತ್ವದ ಪಾತ್ರ ವಹಿಸುತ್ತದೆ.

5. ಅನಗತ್ಯ ವಸ್ತುಗಳನ್ನು ಬೇಕು ಅಂದುಕೊಳ್ಳುವ ತಪ್ಪು ತಿಳುವಳಿಕೆಯನ್ನು ಬಿಟ್ಟುಬಿಡಿ

5. ಅನಗತ್ಯ ವಸ್ತುಗಳನ್ನು ಬೇಕು ಅಂದುಕೊಳ್ಳುವ ತಪ್ಪು ತಿಳುವಳಿಕೆಯನ್ನು ಬಿಟ್ಟುಬಿಡಿ

ನಮಲ್ಲಿ ಹೆಚ್ಚಿನವರು ಹೊರಗಿನ ಕೆಲವು ಆಕರ್ಷಣೆಗಳಿಗೆ ಇಲ್ಲವೇ ಸೆಳೆತಕ್ಕೆ ಒಳಗಾಗಿ ಅನಗತ್ಯವಾಗಿರುವ ವಸ್ತುಗಳನ್ನು ಖರೀದಿಸುತ್ತೆವೆ. ಯಾವುದನ್ನೋ ನೀವು ಖರೀದಿಸಲು ಇಷ್ಟಪಟ್ಟಿರಿ ಎಂದರೆ ಅದಕ್ಕೆ ಕಾರಣ ನಿಮ್ಮ ಸ್ನೇಹಿತರ ಬಳಿಯೂ ಇಂತಹದ್ದೆ ಇದೆ. ಅದಕ್ಕೇ ನಾನೂ ಖರೀದಿಸಬೇಕು ಎಂಬುದಾಗಿರಬಹುದು, ಅಥವಾ ನಿಮ್ಮ ಸಹದ್ಯೋಗಿಗಳ ಬಳಿ ಇದೆ ಎಂದಾಗಿರಬಹುದು. ಇಂತಹ ಆಲೋಚನೆಗಳು ಯುವಕ-ಯುವತಿಯರಲ್ಲಿ ಮತ್ತು ಮಕ್ಕಳಲ್ಲಿ ಹೆಚ್ಚಾಗಿರುತ್ತದೆ.
ನಿಜ ಹೇಳಬೇಕು ಎಂದರೆ ಇಂತಹ ಆಕರ್ಷಣೆಯ ಖರೀದಿ ನಿಜಕ್ಕೂ ನಿಜವಾದ ಅಗತ್ಯದ ಖರೀದಿಯಾಗಿರುವುದಿಲ್ಲ. ನಿಮ್ಮಲ್ಲಿ ಹಣವಿಲ್ಲದೆ ಇದ್ದಾಗ ನಿಮಗೆ ಈ ಬಗ್ಗೆ ಜಾಗೃತಿ ಮೂಡುವುದು. ಯಾವಾಗ ನಿಮ್ಮ ದುಡ್ಡು ಖಾಲಿಯಾಗುತ್ತೋ ಆಗ ಅಂದುಕೊಳ್ಳುತ್ತೀರಿ ಅವರ ಬಳಿ ಇದೆಯೆಂದು ನಾನು ಖರೀದಿಸುವ ಅಗತ್ಯವಿರಲಿಲ್ಲವೆಂದು. ಆದರೆ ಆಗ ಸಮಯ ಮೀರಿ ಹೋಗಿರುತ್ತದೆ. ಹೀಗೆ ಯಾವುದೋ ಆಕರ್ಷಣೆಗೆ ಒಳಗಾದ ಖರೀದಿಯನ್ನು ಮಾಡಬೇಡಿ. ಇದು ನಿಮಗೆ ಕ್ಷಣಿಕ ಸುಖ ನೀಡಿದರೂ ಅನಗತ್ಯವಾದ ಖರೀದಿಯಾಗಿರುವುದರಿಂದ ಮುಂದೊಂದು ದಿನ ಬೇಸರ ತರಿಸುತ್ತದೆ. ನೀವು ಮತ್ತು ನಿಮ್ಮ ಕುಟುಂಬವನ್ನು ಹೊರತು ಪಡಿಸಿದರೆ ಮೂರನೇಯವರ್ಯಾರೂ ಕೂಡ ನಿಮ್ಮ ಆರ್ಥಿಕ ಮತ್ತು ಹಣಕಾಸಿನ ಬಗ್ಗೆ ಜಾಗೃತಿ ತೆಗೆದುಕೊಳ್ಳುವುದಿಲ್ಲ. ನಿಮ್ಮ ಜೊತೆಗಿರುವವರು ಖರೀದಿಸಿದರೆ ಖಂಡಿತ ನೀವು ಖರೀದಿಸಬೇಕು ಎಂದಿಲ್ಲ. ನಿಮ್ಮ ಹಣಕಾಸಿನ ಚಿಂತೆ ನಿಮಗಿದ್ದರೆ ಒಳಿತು.

English summary

Money Mantra: 5 simple ways to stop buying things you never use

Money Mantra: 5 simple ways to stop buying things you never use.
Story first published: Friday, June 1, 2018, 17:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X