For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಅವಾಸ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು?

By Siddu
|

ದೇಶದ ಪ್ರತಿಯೊಂದು ಕುಟುಂಬಕ್ಕೂ 2022ರ ವೇಳೆಗೆ ಮನೆ ಸಿಗಬೇಕು ಎನ್ನುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಉದ್ದೇಶ. ವಸತಿ ಎನ್ನುವುದು ಮಾನವನ ಮೂಲಭೂತ ಅಗತ್ಯವಾಗಿದೆ. ಮಖಾನ್, ಘರ್, ರೋಟಿ ಇವು ಮಾನವನ ಜೀವನದಲ್ಲಿ ಅತಿಮುಖ್ಯವಾದವುಗಳು.

ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದ್ದು, ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಗ್ರಾಮೀಣ, ನಗರ, ಅರೆನಗರ ಹೀಗೆ ಎಲ್ಲಾ ಕ್ಷೇತ್ರಗಳು ಒಳಪಟ್ಟಿವೆ.

ಕೊಳಗೇರಿ ವಾಸಿಗಳು, ನಗರ, ಅರೆನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವಸತಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ (ಪಿಎಂಎವೈ) ಮನೆ ನಿರ್ಮಾಣಕ್ಕೆ ಹಣಕಾಸಿನ ಸಹಾಯ ಮಾಡಲಾಗುತ್ತದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

 

ನಿಮಗೂ ಸ್ವಂತ ಮನೆ ಕಟ್ಟಿಸಿಕೊಳ್ಳುವ ಕನಸು ಇದ್ದರೆ ಅರ್ಜಿ ಸಲ್ಲಿಸುವ ವಿವಿಧ ಹಂತಗಳನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ..

ಪ್ರಮುಖ ಅಂಶ ಗಮನಿಸಿ

ಪ್ರಮುಖ ಅಂಶ ಗಮನಿಸಿ

ಅರ್ಜಿ ಸಲ್ಲಿಸುವ ಮುನ್ನ ನೀವು ಹಲವು ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ಗ್ರಾಮೀಣ, ನಗರ, ಅರೆನಗರಕ್ಕೆ ಅನುಗುಣವಾಗಿ ನಿಮ್ಮ ಅರ್ಹತೆ ಖಾತರಿಪಡಿಸಿ. ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ. ನಿಮ್ಮ ವಾರ್ಷಿಕ ವರಮಾನದ ಪತ್ರ ಹೊಂದಿರಬೇಕು. ಪಿಎಂ ಅವಾಸ ಯೋಜನೆಯ ಮಾನದಂಡದ ಪರಿಧಿಯೋಳಗೆ ಬಂದರೆ ಫಲಾನುಭವಿಗಳಾಗುತ್ತಿರಿ.

ಬೇಕಾಗುವ ದಾಖಲಾತಿಗಳು

ಬೇಕಾಗುವ ದಾಖಲಾತಿಗಳು

1. ಆಧಾರ್ ಕಾರ್ಡ್ ಪ್ರತಿ

2. ಬ್ಯಾಂಕ್ ಖಾತೆ ಜೆರಾಕ್ಸ್ ಪ್ರತಿ

3. ಪಡಿತರ ಚೀಟಿ (ರೇಷನ್ ಕಾರ್ಡ್ ಜೆರಾಕ್ಸ್)

4. ಚುನಾವಣಾ ಚೀಟಿ

5. ಪಾಸ್ ಪೋರ್ಟ್ ಸೈಜ್ ಪೋಟೊ

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ
 

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ

ಪ್ರಧಾನ ಮಂತ್ರಿ ಅವಾಸ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-06-2018 ಆಗಿದ್ದು, ಇನ್ನು ಕೆಲವೆ ಕೆಲ ದಿನಗಳು ಬಾಕಿ ಇವೆ. ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳಿಗೆ ಈ ವಿಷಯ ತಲುಪಿಸಿ. ಅರ್ಹ ಫಲಾನುಭವಿಗಳು ಇದರಿಂದ ವಂಚಿತರಾಗಬಾರದು. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂಎವೈ ವೆಬ್ಸೈಟ್ ಗೆ ಭೇಟಿ ನೀಡಿ

ಪಿಎಂಎವೈ ವೆಬ್ಸೈಟ್ ಗೆ ಭೇಟಿ ನೀಡಿ

ಪ್ರಧಾನಮಂತ್ರಿ ಅವಾಸ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ. 'ಸಿಟಿಜನ್ ಅಸೆಸ್ಮೆಂಟ್' ಮೆನು ಮೂಲಕ ಪ್ರಧಾನ ಮಂತ್ರಿ ಅವಾಸ ಯೋಜನೆ ಅರ್ಜಿ ಆಪ್ಸನ್ ಆಯ್ಕೆ ಮಾಡಿ. ನಿಮಗೆ ಎರಡು ಆಯ್ಕೆಗಳನ್ನು ನೋಡಬಹುದು: 1. ಸ್ಲಂ ನಿವಾಸಿಗಳು (Slum Dwellers) 2. ಇತರ ಮೂರು ಘಟಕಗಳ ಪ್ರಯೋಜನಗಳು ( rural, urban or semi-urban)

ನೀವು ಕೊಳಗೇರಿ ನಿವಾಸಿಗಳಾಗಿದ್ದರೆ Slum Dwellers ಆಯ್ಕೆ ಮಾಡಿ. ಗ್ರಾಮೀಣ ಭಾಗದವರಾದರೆ Rural ಆಪ್ಷನ್ ಆಯ್ಕೆ ಮಾಡಿ. ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.

ಅರ್ಜಿ ಭರ್ತಿ ಮಾಡಿ

ಅರ್ಜಿ ಭರ್ತಿ ಮಾಡಿ

ಹೊಸ ಪುಟದಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ತುಂಬಬೇಕು. ಇದು ವೈಯಕ್ತಿಕ ವಿವರ, ಸಂಪರ್ಕ ವಿವರ, ಪ್ರಸ್ತುತ ವಸತಿ ವಿಳಾಸ, ಆಧಾರ್ ನಂಬರ್, ಬ್ಯಾಂಕ್ ಖಾತೆ ವಿವರ, ಮನೆ ವಿವರ, ಮೊಬೈಲ್ ನಂಬರ್ ಮತ್ತು ಆದಾಯ ವಿವರಗಳನ್ನು ಒಳಗೊಂಡಿದ್ದು, ಯಾವುದೇ ತಪ್ಪುಗಳಾಗದಂತೆ ಅರ್ಜಿಯಲ್ಲಿ ತುಂಬಬೇಕು.

ಅರ್ಜಿ ತುಂಬಿದ ನಂತರ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ಕೊನೆಯಲ್ಲಿ ನೀಡಲಾಗಿರುವ ಕ್ಯಾಪ್ಚಾ ಕೋಡ್ ಭರ್ತಿ ಮಾಡಿ.

ಪ್ರಿಂಟ್ ಔಟ್ ಪಡೆಯಿರಿ

ಪ್ರಿಂಟ್ ಔಟ್ ಪಡೆಯಿರಿ

ಅರ್ಜಿಯನ್ನು ತುಂಬಿದ ನಂತರ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರೆ, ಇದು "I am aware that any claims regarding my inclusions/exclusions shall remain with State govt/urban local body and MoHUPA is just facilitating the process" ಎಂಬುದನ್ನು ತೋರಿಸುತ್ತದೆ. ಅರ್ಜಿಯ ಕೊನೆಯಲ್ಲಿ ಕ್ಯಾಪ್ಚಾ ಕೋಡ್ ತುಂಬಿದ ನಂತರ ಸೇವ್ (Save) ಬಟನ್ ಕ್ಲಿಕ್ ಮೇಲೆ ಮಾಡಿ. ಅಂತಿಮವಾಗಿ ನೀವು ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ ಪ್ರಿಂಟ್ ಔಟ್ ಪಡೆಯಬಹುದು.

ನೋಂದಣಿ (ಅರ್ಜಿ) ಸಂಖ್ಯೆ

ನೋಂದಣಿ (ಅರ್ಜಿ) ಸಂಖ್ಯೆ

ಅರ್ಜಿಯ ಕೊನೆಯಲ್ಲಿ ಕ್ಯಾಪ್ಚಾ ಕೋಡ್ ತುಂಬಿದ ನಂತರ ಸೇವ್ (Save) ಬಟನ್ ಕ್ಲಿಕ್ ಮೇಲೆ ಮಾಡಿದ ನಂತರ ಸ್ಕ್ರೀನ್ ಮೇಲೆ ಒಂದು ನೋದಣೆ ಸಂಖ್ಯೆ ಕಾಣಿಸುತ್ತದೆ. ಇದು ಅಪ್ಲಿಕೇಶನ್ ಸಂಖ್ಯೆಯಾಗಿರುತ್ತದೆ. ಇದನ್ನು ಎಚ್ಚರಿಕೆಯಿಂದ ಬರೆದಿಟ್ಟುಕೊಳ್ಳಬೇಕು. ಮುಂದಿನ ಪ್ರಕ್ರಿಯೆಗಳಿಗೆ ಅಥವಾ ಅರ್ಜಿ ಎಡಿಟ್ ಮಾಡಲು, ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ ನಂಬರ್ ಬೇಕಾಗುತ್ತದೆ.

ಅಪ್ಲಿಕೇಶನ್ ಸ್ಟೇಟಸ್ ಪರಿಶೀಲನೆ

ಅಪ್ಲಿಕೇಶನ್ ಸ್ಟೇಟಸ್ ಪರಿಶೀಲನೆ

ಪಿಎಂಎವೈ ಅರ್ಜಿಯ ಪ್ರಸ್ತುತ ಸ್ಟೇಟಸ್ ನ್ನು pmaymis.gov.in ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ನಿಮ್ಮಿಂದ ತುಂಬಲ್ಪಟ್ಟಿರುವ ನಿಮ್ಮ ಬಗೆಗಿನ ಸಂಪೂರ್ಣ ಮಾಹಿತಿ ಒಳಗೊಂಡಿರುವ ಆನ್ಲೈನ್ ಅರ್ಜಿಯ ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ನಿಮ್ಮ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. (http://pmaymis.gov.in/Track_Application_Status.aspx)

ಕೊನೆ ಮಾತು

ಕೊನೆ ಮಾತು

2022ರಲ್ಲಿ ಎಲ್ಲರಿಗೂ ಮನೆ ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು. ಭಾರತ ಗುಡಿಸಲು ಮುಕ್ತ, ಟೆಂಟ್ ಮುಕ್ತ ದೇಶವಾಗಬೇಕು ಎಂಬ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ತೀವ್ರವಾದ ವೇಗವನ್ನು ಕೊಟ್ಟು ಆದಾಯದ ಮಿತಿ ಮತ್ತು ಅವಧಿಯಲ್ಲಿ ಸಡಿಲಿಕೆ ಘೋಷಿಸಿದ್ದಾರೆ. ವಾರ್ಷಿಕವಾಗಿ ಆದಾಯ ರೂ. 6 ಲಕ್ಷ ಇರುವವರು ಪ್ರಸ್ತುತ ಈ ಸಬ್ಸಿಡಿಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈಗ ಇದರ ಮಿತಿಯನ್ನು 6 ಲಕ್ಷದಿಂದ 18 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಸಬ್ಸಿಡಿ ಪರಿಮಿತಿಯಲ್ಲಿ ಇದೀಗ ರೂ. 18 ಲಕ್ಷದವರೆಗೆ ಆದಾಯ ಗಳಿಸುವವರು ಫಲಾನುಭವಿಗಳು ಆಗಲಿದ್ದಾರೆ. ನಿಮ್ಮ ವಾರ್ಷಿಕ ಆದಾಯ ರೂ. 18 ಲಕ್ಷ ಇದ್ದು, ಮೊದಲ ಬಾರಿ ಮನೆ ಖರೀದಿಸುತ್ತಿದ್ದರೆ ಮನೆ ಸಾಲದ ಬಡ್ಡಿಯ ಭಾಗವಾಗಿ ಸರ್ಕಾರದಿಂದ ರೂ. 2.4 ಲಕ್ಷ ಸಬ್ಸಿಡಿ ಪಡೆಯಬಹುದು.

English summary

Pradhan Mantri Awas Yojana: How to Apply for PMAY? What are the required Documents?

A shelter is regarded to be a man's most basic need. PMAY is a bold vision of providing affordable housing solutions for all Indian citizens.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more