For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಜೀವ ವಿಮಾ ಪೂರ್ಣ ಸುರಕ್ಷಾ ಯೋಜನೆ: ಅರ್ಹತೆ - ಪ್ರಯೋಜನಗಳೇನು?

ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ವಿವಿಧ ಯೋಜನೆಗಳಾದ ಪ್ರೊಟೆಕ್ಷನ್ ಪ್ಲಾನ್, ನಿವೃತ್ತಿ ಯೋಜನೆಗಳು, ಮಕ್ಕಳ ವಿಮೆ ಯೋಜನೆಗಳು, ಮತ್ತು ಇನ್ನಿತರೆ ಹಲವು ಯೋಜನೆಗಳನ್ನು ಒದಗಿಸುತ್ತದೆ.

By Siddu
|

ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ತನ್ನ ವಿಮಾದಾರರಿಗೆ ಪ್ರೊಟೆಕ್ಷನ್ ಪ್ಲಾನ್, ನಿವೃತ್ತಿ ಯೋಜನೆಗಳು, ಮಕ್ಕಳ ವಿಮೆ ಯೋಜನೆಗಳು ಮತ್ತು ಇನ್ನಿತರೆ ಹಲವು ಯೋಜನೆಗಳನ್ನು ಒದಗಿಸುತ್ತದೆ. ಇವುಗಳಲ್ಲಿ ಎಸ್ಬಿಐ ಜೀವ ವಿಮಾ ಪೂರ್ಣ ಸುರಕ್ಷಾ ಯೋಜನೆ ಕೂಡ ಒಂದಾಗಿದೆ. ಇದು ಮರಣ ಮತ್ತು ನಿರ್ಣಾಯಕ ಅನಾರೋಗ್ಯದ ಸಂದರ್ಭದಲ್ಲಿ ಸಮಗ್ರ ರಕ್ಷಣೆ ನೀಡುತ್ತಿದ್ದು, ಎಸ್ಬಿಐ ಲೈಫ್ ಇನ್ಶುರೆನ್ಸ್ ಅದರ ಅಧಿಕೃತ ವೆಬ್ಸೈಟ್ sbilife.co.in.

ಈ ಯೋಜನೆ 36 ಪ್ರಕಾರದ ರೋಗಗಳಿಗೆ ಉತ್ತಮ ಸೌಲಭ್ಯ ಒದಗಿಸುತ್ತದೆ. ವಿಮಾದಾರರಿಗೆ ಆದಾಯದ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ದಂಪತಿಗಳಿಗೆ ಹಾಗು ಮದುವೆ ಆಗುವವರಿಗಾಗಿ ಈ ಲೇಖನ. ತಪ್ಪದೇ ಓದಿ..

ವಯಸ್ಸು

ವಯಸ್ಸು

ಎಸ್ಬಿಐ ಲೈಫ್ ಇನ್ಶುರೆನ್ಸ್ ಪೂರ್ಣ ಸುರಕ್ಷಾ ಯೋಜನೆಯ ಸೌಲಭ್ಯ ಪಡೆಯಲು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು ಹಾಗು ಗರಿಷ್ಠ 65 ವಯಸ್ಸಾಗಿರಬೇಕು. ಮೆಚುರಿಟಿ ಕನಿಷ್ಠ ವಯಸ್ಸು 28 ವರ್ಷ ಮತ್ತು ಗರಿಷ್ಠ 75 ವರ್ಷಗಳು. Health-insurance

ವಿಮಾ ಅವಧಿ

ವಿಮಾ ಅವಧಿ

ಗ್ರಾಹಕರು 10 ರಿಂದ 30 ವರ್ಷಗಳವರೆಗಿನ ಐದು ವಿಭಿನ್ನ ಪಾಲಿಸಿ ಆಯ್ಕೆಗಳನ್ನು ಹೊಂದಿರುತ್ತಾರೆ.
ವಿಮೆಯ ಅವಧಿ 10 ವರ್ಷ, 15, 20, 25, 30 ವರ್ಷಗಳಾದ್ದಾಗಿರುತ್ತದೆ.

ಪ್ರೀಮಿಯಂ ವಿಧಾನ

ಪ್ರೀಮಿಯಂ ವಿಧಾನ

ಎಸ್ಬಿಐಯ ಲೈಫ್ ಇನ್ಶುರೆನ್ಸ್ ಪೂರ್ಣ ಸುರಕ್ಷಾ ಯೋಜನೆಗೆ ನಿಯಮಿತವಾಗಿ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಗ್ರಾಹಕರಿಗೆ ಮೂರು ಪ್ರೀಮಿಯಂ ವಿಧಾನಗಳು ಲಭ್ಯವಿದ್ದು, ವಾರ್ಷಿಕ, ಅರ್ಧ-ವಾರ್ಷಿಕ ಮತ್ತು ಮಾಸಿಕ ವಿಧಾನಗಳಾಗಿವೆ.

ಶೇ. ಪ್ರೀಮಿಯಂ

ಶೇ. ಪ್ರೀಮಿಯಂ

ಅರ್ಧ ವರ್ಷದ ಅವಧಿಗೆ, ಪ್ರೀಮಿಯಂ ಮೊತ್ತ ವಾರ್ಷಿಕ ಪ್ರೀಮಿಯಂನ ಶೇ. 51 ಆಗಿದೆ. ಆದರೆ ಮಾಸಿಕ ಅವಧಿಗೆ ಇದು ವಾರ್ಷಿಕ ಪ್ರೀಮಿಯಂನ ಶೇ. 8.50 ಆಗಿರುತ್ತದೆ.

ಪ್ರೀಮಿಯಂ ಮೊತ್ತ

ಪ್ರೀಮಿಯಂ ಮೊತ್ತ

ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಿರುವಂತೆ, ಮಾಸಿಕ ಆಧಾರದ ಮೇಲೆ ಕನಿಷ್ಠ ಪ್ರೀಮಿಯಂ ಮೊತ್ತ ರೂ. 250, ಅರ್ಧ-ವಾರ್ಷಿಕ ರೂ. 1500 ಮತ್ತು ವಾರ್ಷಿಕ ಆಧಾರದ ಮೇಲೆ ರೂ. 3,000 ಪಾವತಿಸಬೇಕಾಗುತ್ತದೆ. ವಿಮಾದಾರರು ಮಾಸಿಕ ಆಧಾರದ ಮೇಲೆ ಪಾವತಿಸಬೇಕಾದ ಗರಿಷ್ಠ ಮೊತ್ತ ರೂ. 80,000, ಅರ್ಧ ವರ್ಷಕ್ಕೆ ರೂ. 4,75,000 ಹಾಗು ವಾರ್ಷಿಕ ಆಧಾರದ ಮೇಲೆ ರೂ. 9,32,000 ಪಾವತಿಸಬೇಕಾಗುತ್ತದೆ.

English summary

SBI's Life Insurance Poorna Suraksha Plan: Eligibility and Benefits

SBI's Life Insurance Poorna Suraksha Plan for individuals offers comprehensive protection in case of death and critical illness.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X