For Quick Alerts
ALLOW NOTIFICATIONS  
For Daily Alerts

ಏನಿದು ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್? ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನಗಳೇನು ಗೊತ್ತೆ..

ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಹಣಕಾಸು ನಿರ್ವಹಣೆಯನ್ನು ಸರಳಗೊಳಿಸುತ್ತದೆ. ಸದ್ಯ ದೇಶದ ಕೆಲ ಬ್ಯಾಂಕ್‌ಗಳು ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತಿವೆ.

By Siddu
|

ವಿದ್ಯಾರ್ಥಿಗಳು ಮನೆಯಿಂದ ದೂರವಿದ್ದು, ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ತಿಂಗಳ ಖರ್ಚಿಗೆ ಇಟ್ಟುಕೊಂಡಿರುವ ಹಣದ ನಿರ್ವಹಣೆ ಹಾಗೂ ಖರ್ಚು ವೆಚ್ಚಗಳನ್ನು ಸರಿಯಾಗಿ ನಿಭಾಯಿಸುವುದು ತುಸು ಕಷ್ಟದ ಕೆಲಸ. ಆಗಾಗ ಎಟಿಎಂಗಳಿಗೆ ತೆರಳಿ ಹಣ ಡ್ರಾ ಮಾಡುವುದು, ಹಣ ಖಾಲಿ ಆದಂತೆ ಅಕೌಂಟಿಗೆ ಹಣ ಹಾಕುವಂತೆ ಪಾಲಕರಿಗೆ ಹೇಳುವುದು ಇವೆಲ್ಲ ಸಾಕಷ್ಟು ಸಮಯ ವ್ಯಯ ಮಾಡುತ್ತವೆ. ಇತ್ತೀಚೆಗೆ ಬಹುತೇಕರು ಆನ್‌ಲೈನ್ ಮೂಲಕವೇ ಹಣ ವರ್ಗಾವಣೆ ಮಾಡುತ್ತಿದ್ದರೂ, ಆನ್‌ಲೈನ್ ವ್ಯಾಲೆಟ್ ಗಳಿಗೆ ಆಗಾಗ ಹಣ ತುಂಬಿಸುವುದು ಒಂದು ರೀತಿಯ ಕಿರಿಕಿರಿ ಉಂಟು ಮಾಡುತ್ತದೆ.

ಈ ಎಲ್ಲ ಸಮಸ್ಯೆಗಳ ನಿವಾರಣೆಗೆ ಒಂದು ಸುಲಭ ಉಪಾಯವಿದೆ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಸಂದರ್ಭದಲ್ಲಿ ಅರಿತುಕೊಳ್ಳುವುದು ಅಗತ್ಯ. ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಹಣಕಾಸು ನಿರ್ವಹಣೆಯನ್ನು ಸರಳಗೊಳಿಸುತ್ತದೆ. ಸದ್ಯ ದೇಶದ ಕೆಲ ಬ್ಯಾಂಕ್‌ಗಳು ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತಿವೆ. ಈ ಕಾರ್ಡ್ ಪಡೆಯಬೇಕಾದರೆ, ಬ್ಯಾಂಕ್ ನಿಗದಿಪಡಿಸಿದ ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವುದು ಅಗತ್ಯವಾಗಿದೆ.

ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್ ಯಾಕೆ

ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್ ಯಾಕೆ

ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್ ಯಾಕೆ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುವುದು ಸಹಜ. ಕಾರ್ಡ್ ಇರುವುದರಿಂದ ನಗದು ಇಟ್ಟುಕೊಳ್ಳುವುದನ್ನು ತಪ್ಪಿಸಬಹುದು. ಇದರಿಂದ ಹಣ ಕಳುವಾಗುವ ಸಂದರ್ಭ ಉದ್ಭವಿಸುವುದಿಲ್ಲ. ಅಲ್ಲದೆ ಕಾರ್ಡ್ ಏನಾದರೂ ಕಳೆದು ಹೋದರೆ ತಕ್ಷಣ ಕಾರ್ಡ್ ಅನ್ನು ಬ್ಲಾಕ್ ಮಾಡಿಸಬಹುದು. ಬ್ಲಾಕ್ ಆದ ಕಾರ್ಡ್ ಬದಲಿಗೆ ಮತ್ತೊಂದು ಕಾರ್ಡ್ ಪಡೆದು ಎಂದಿನಂತೆ ಬಳಸಬಹುದು. ಹೀಗೆ ಕ್ರೆಡಿಟ್ ಕಾರ್ಡ್‌ನಿಂದ ಹಲವಾರು ಪ್ರಯೋಜನಗಳಿವೆ. ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಇಂಥ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡಲಾಗುತ್ತದೆ ಎಂಬುದು ಗಮನದಲ್ಲಿರಲಿ.

ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ವೈಶಿಷ್ಟ್ಯಗಳು

ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ವೈಶಿಷ್ಟ್ಯಗಳು

ಸಾಮಾನ್ಯ ಕ್ರೆಡಿಟ್ ಕಾರ್ಡ್‌ಗಿಂತ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಬಹಳಷ್ಟು ಭಿನ್ನವಾಗಿದೆ. ಇದರಲ್ಲಿ ಕ್ರೆಡಿಟ್ ಲಿಮಿಟ್ ತುಂಬಾ ಕಡಿಮೆ ಇರುತ್ತದೆ. ಜೊತೆಗೆ ಇದಕ್ಕಾಗಿ ಅರ್ಜಿ ಶುಲ್ಕವೂ ಕಡಿಮೆಯಾಗಿರುತ್ತದೆ. ಇನ್ನು ಕಾರ್ಡ್ ಕಳೆದು ಹೋದಾಗ ಹೊಸ ಕಾರ್ಡ್ ಪಡೆಯುವ ಶುಲ್ಕ ಸಹ ಅಲ್ಪ ಮೊತ್ತದ್ದಾಗಿದೆ.

ಕ್ರೆಡಿಟ್ ಲಿಮಿಟ್

ಕ್ರೆಡಿಟ್ ಲಿಮಿಟ್

ಇದು ವಿದ್ಯಾರ್ಥಿಗಳಿಗಾಗಿ ಮೀಸಲಾದ ಕಾರ್ಡ್ ಆಗಿರುವುದರಿಂದ ಇದರಲ್ಲಿ ಗರಿಷ್ಠ 15 ಸಾವಿರ ರೂಪಾಯಿ ಕ್ರೆಡಿಟ್ ಲಿಮಿಟ್ ನೀಡಲಾಗುತ್ತದೆ. ಯಾವುದೋ ಆಸೆಗೆ ಬಿದ್ದು ವಿದ್ಯಾರ್ಥಿಗಳು ದುಂದು ವೆಚ್ಚಕ್ಕೆ ಮುಂದಾಗಬಾರದೆಂಬ ಸದುದ್ದೇಶದಿಂದ ಲಿಮಿಟ್ ಕಡಿಮೆ ಇಡಲಾಗಿದೆ.

ವ್ಯಾಲಿಡಿಟಿ

ವ್ಯಾಲಿಡಿಟಿ

ಸಾಮಾನ್ಯ ಕ್ರೆಡಿಟ್ ಕಾರ್ಡ್‌ಗಳ ವ್ಯಾಲಿಡಿಟಿ ೩ ವರ್ಷಗಳಾಗಿದ್ದರೆ, ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಗೆ ೫ ವರ್ಷದ ವ್ಯಾಲಿಡಿಟಿ ನೀಡಲಾಗುತ್ತದೆ. ಸಾಮಾನ್ಯವಾಗಿ ಈ ಕಾರ್ಡ್‌ಗಳಿಗೆ ಯಾವುದೇ ಆರಂಭಿಕ ಶುಲ್ಕವನ್ನು ಬ್ಯಾಂಕ್‌ಗಳು ವಿಧಿಸುವುದಿಲ್ಲ. ಹಾಗೆಯೇ ವಾರ್ಷಿಕ ಶುಲ್ಕ ಸಹ ಅತಿ ಕಡಿಮೆಯಾಗಿರುವುದರಿಂದ, ಕಾರ್ಡ್ ನಿರ್ವಹಣೆ ವಿದ್ಯಾರ್ಥಿಗಳಿಗೆ ಹೊರೆಯಾಗುವುದಿಲ್ಲ.
ಕಾರ್ಡ್ ಕಳೆದಾಗ ಮತ್ತೊಂದು ಕಾರ್ಡ್‌ಗೆ ಅತ್ಯಲ್ಪ ಶುಲ್ಕ ಪಡೆಯಲಾಗುತ್ತದೆ. ಇದು ಸ್ಟೂಡೆಂಟ್ ಕಾರ್ಡ್‌ನ ಪ್ರಮುಖ ವೈಶಿಷ್ಟ್ಯತೆಯಾಗಿದೆ.

ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಪ್ರಯೋಜನಗಳು

ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಪ್ರಯೋಜನಗಳು

ಈಗ ಆನ್‌ಲೈನ್ ಹಾಗೂ ಡಿಜಿಟಲ್ ಸೌಲಭ್ಯಗಳು ಇರುವಾಗ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಯಾಕೆ ಎಂಬ ಪ್ರಶ್ನೆ ಮೂಡುತ್ತದೆ. ಆದರೂ ಇದರಿಂದ ಹಲವಾರು ವಿಶಿಷ್ಟ ಪ್ರಯೋಜನಗಳಿವೆ.
1. ಕಾರ್ಡ್ ಪಡೆಯಲು ಯಾವುದೇ ಆದಾಯ ಪ್ರಮಾಣ ಪತ್ರದ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಕೆಲವೇ ದಾಖಲೆಗಳನ್ನು ನೀಡುವ ಮೂಲಕ ಕಾರ್ಡ್ ಪಡೆಯಬಹುದು.
2. ಬಹುತೇಕ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್‌ಗಳಿಗೆ ವಿವಿಧ ರೀತಿಯ ಕ್ಯಾಶಬ್ಯಾಕ್, ಡಿಸ್ಕೌಂಟ್ ಹಾಗೂ ಇನ್ನಿತರ ಆಫರ್‌ಗಳನ್ನು ನೀಡಲಾಗಿರುತ್ತದೆ. ಇದರಿಂದ ಕೊಂಚವಾದರೂ ಖರ್ಚು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಕೆಲ ಮಟ್ಟಿನ ಖರ್ಚಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ. ನಿರ್ದಿಷ್ಟ ಸಮಯ ಅಥವಾ ಲಿಮಿಟ್ ನಂತರ ಈ ಪಾಯಿಂಟ್‌ಗಳನ್ನು ನಗದೀಕರಿಸಿಕೊಳ್ಳಬಹುದಾಗಿದೆ.
3. ವಿದ್ಯಾರ್ಥಿ ಜೀವನದಲ್ಲಿಯೇ ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ಸದುಯೋಗಪಡಿಸಿಕೊಳ್ಳುವ ರೀತಿ ತಿಳಿದುಕೊಳ್ಳಲು ಇದೊಂದು ಸದವಕಾಶ ಒದಗಿಸುತ್ತದೆ. ಭವಿಷ್ಯದ ಜೀವನದಲ್ಲಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಒಳ್ಳೆಯ ಕ್ರೆಡಿಟ್ ಸ್ಕೋರ್ ನಿರ್ವಹಿಸುವ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ.
4. ಕಾಲೇಜು ಅಥವಾ ಟ್ಯೂಶನ್‌ಗಳಿಗೆ ತೆರಳಲು ಬಹುತೇಕ ಎಲ್ಲ ವಿದ್ಯಾರ್ಥಿಗಳು ಬೈಕ್ ಬಳಸುತ್ತಾರೆ. ತಮ್ಮ ಬೈಕ್‌ಗಳಿಗೆ ಈ ಕೆಡಿಟ್ ಕಾರ್ಡ್ ಮೂಲಕ ಪೆಟ್ರೋಲ್ ಹಾಕಿಸಬಹುದು. ಸಾಮಾನ್ಯ ಕಾರ್ಡ್‌ಗಳಿಗೆ ವಿಧಿಸಲಾಗುವ ಇಂಧನ ಸರ್ಚಾರ್ಜ್ ಅನ್ನು ಈ ಕಾರ್ಡ್‌ಗಳಿಗೆ ವಿಧಿಸಲಾಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
5. ತನ್ನ ಕಾಲೇಜಿನ ಫೀ ಕಟ್ಟಲು ಅಥವಾ ಪುಸ್ತಕ ಖರೀದಿಸಲು ಸಹ ಈ ಕಾರ್ಡ್ ಬಳಸಬಹುದು. ಇನ್ನು ಆನ್‌ಲೈನ್ ಕೋರ್ಸ್‌ಗಳ ಫೀ ಕಟ್ಟಲು ಸಹ ಕಾರ್ಡ್ ಬಳಸಬಹುದು.

ಕಾರ್ಡ್ ಪಡೆಯಲು ಬೇಕಾದ ಅರ್ಹತೆಗಳು

ಕಾರ್ಡ್ ಪಡೆಯಲು ಬೇಕಾದ ಅರ್ಹತೆಗಳು

ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಈ ಕೆಳಗೆ ನೀಡಲಾದ ಅರ್ಹತೆಯ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ.
1. ವಯೋಮಿತಿ - ಕಾರ್ಡ್‌ಗೆ ಅರ್ಜಿ ಸಲ್ಲಿಸಲು ೧೮ ವರ್ಷ ಅಥವಾ ಅದಕ್ಕೂ ಹೆಚ್ಚು ವಯಸ್ಸಾಗಿರಬೇಕು.
2. ಕಾಲೇಜು ವಿದ್ಯಾರ್ಥಿ ಆಗಿರಬೇಕು - ಈ ಕಾರ್ಡ್ ಅನ್ನು ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವುದಿಲ್ಲ. ಕೇವಲ ಕಾಲೇಜು ಮಟ್ಟದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಜೊತೆಗೆ ಕಾಲೇಜಿನ ಐಡೆಂಟಿಟಿ ಕಾರ್ಡ್ ಪ್ರತಿ ಲಗತ್ತಿಸಬೇಕಾಗುತ್ತದೆ.
3. ಶೈಕ್ಷಣಿಕ ಸಾಲ - ಕೆಲ ಬ್ಯಾಂಕ್‌ಗಳು, ತಮ್ಮ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಕ್ರೆಡಿಟ್ ಕಾರ್ಡ್ ನೀಡುತ್ತವೆ. ವಿದ್ಯಾರ್ಥಿಯ ಕ್ರೆಡಿಟ್ ಹಿಸ್ಟರಿ ತಿಳಿಯಲು ಇಂಥ ಒಂದು ಮಾನದಂಡ ಹಾಕಲಾಗಿದೆ. ಆದರೆ ಎಲ್ಲ ಬ್ಯಾಂಕ್‌ಗಳಲ್ಲಿ ಈ ನಿಯಮ ಕಡ್ಡಾಯವೇನಿಲ್ಲ.
4. ಫಿಕ್ಸೆಡ್ ಡಿಪಾಸಿಟ್ - ಯಾವುದೇ ವಿದ್ಯಾರ್ಥಿ ಬ್ಯಾಂಕಿನಲ್ಲಿ ತನ್ನ ಹೆಸರಿನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದರೆ ಅದರ ಆಧಾರದ ಮೇಲೆ ಸ್ಟುಡೆಂಟ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಕನಿಷ್ಠ ಎಷ್ಟು ಮೊತ್ತದ ಫಿಕ್ಸೆಡ್ ಡಿಪಾಸಿಟ್ ಇರಬೇಕು ಎಂಬ ಬಗ್ಗೆ ಆಯಾ ಬ್ಯಾಂಕಿಗೆ ಸಂಪರ್ಕಿಸಿ ತಿಳಿದುಕೊಳ್ಳಬಹುದು.
5. ಆಡ್ ಆನ್ ಕ್ರೆಡಿಟ್ ಕಾರ್ಡ್ - ವಿದ್ಯಾರ್ಥಿಯು ತನ್ನ ಕುಟುಂಬದವರು ಹೊಂದಿದ ಕ್ರೆಡಿಟ್ ಕಾರ್ಡ್ ಮೇಲೆ ಆಡ್ ಆನ್ ಕಾರ್ಡ್ ಪಡೆಯಬಹುದು. ಆದರೆ ಈ ಆಡ್ ಆನ್ ಕಾರ್ಡ್ ಕ್ರೆಡಿಟ್ ಲಿಮಿಟ್ ಪ್ರೈಮರಿ ಕಾರ್ಡ್‌ನ ಲಿಮಿಟ್‌ನ ಭಾಗವಾಗಿರುತ್ತದೆ.
6. ಉಳಿತಾಯ ಖಾತೆ - ಪ್ರತಿ ತಿಂಗಳು ಒಳ್ಳೆಯ ವ್ಯವಹಾರ ಇಟ್ಟುಕೊಂಡಿರುವ ಉಳಿತಾಯ ಖಾತೆದಾರ ವಿದ್ಯಾರ್ಥಿಗಳಿಗೆ ಕೆಲ ಬ್ಯಾಂಕ್‌ಗಳು ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಅನ್ನು ಸುಲಭವಾಗಿ ನೀಡುತ್ತವೆ.

ಕಾರ್ಡ್ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು

ಕಾರ್ಡ್ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು

ಸ್ಟೂಡೆಂಟ್ ಕಾರ್ಡ್‌ಗೆ ಅತಿ ಕನಿಷ್ಠ ಪ್ರಮಾಣದ ದಾಖಲೆಗಳನ್ನು ನೀಡಿದರೆ ಸಾಕು.
1. ಜನನ ಪ್ರಮಾಣ ಪತ್ರ
2. ಕಾಲೇಜು ಅಥವಾ ವಿಶ್ವವಿದ್ಯಾಲಯದ ಐಡೆಂಟಿಟಿ ಕಾರ್ಡ್
3. ವಿಳಾಸ ಪುರಾವೆ
4. ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ
5. ಪ್ಯಾನ್ ಕಾರ್ಡ್

English summary

Student credit card: What are the Features, Benefits of the students...

Student credit card: Features, benefits, credit limit and other details you need to know
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X