For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ 10 ಫೈನಾನ್ಸ್ ಕಂಪನಿಗಳು

ಭಾರತ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಹಣಕಾಸು ಕಂಪನಿಗಳ ಕೊಡುಗೆ ಅತ್ಯಮೂಲ್ಯವಾಗಿದೆ. ಪ್ರಸ್ತುತ ಅವಧಿಯಲ್ಲಿ ಭಾರತದ ಹಣಕಾಸು ವಲಯ ಅತಿ ವೇಗವಾಗಿ ಬದಲಾವಣೆ ಹೊಂದುತ್ತಿದ್ದು, ಅಷ್ಟೇ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ.

By Siddu Thoravat
|

ಭಾರತ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಹಣಕಾಸು ಕಂಪನಿಗಳ ಕೊಡುಗೆ ಅತ್ಯಮೂಲ್ಯವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಯಾವುದೇ ರೀತಿಯಲ್ಲಿದ್ದರೂ ಈ ಪ್ರಮುಖ ಹಣಕಾಸು ಕಂಪನಿಗಳು ತಮ್ಮಲ್ಲಿನ ಸಾಮರ್ಥ್ಯ, ತಂತ್ರ ಹಾಗೂ ದೃಢ ನಿರ್ಧಾರದಿಂದ ದೇಶವನ್ನು ಆರ್ಥಿಕವಾಗಿ ಮುನ್ನಡೆಸಬಲ್ಲ ಶಕ್ತಿಯನ್ನು ಹೊಂದಿವೆ. ಪ್ರಸ್ತುತ ಅವಧಿಯಲ್ಲಿ ಭಾರತದ ಹಣಕಾಸು ವಲಯ ಅತಿ ವೇಗವಾಗಿ ಬದಲಾವಣೆ ಹೊಂದುತ್ತಿದ್ದು, ಅಷ್ಟೇ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಭಾರತದ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಪ್ರಮುಖ ಹಣಕಾಸು ಕಂಪನಿಗಳು ವಿನೂತನ ಯೋಜನೆಗಳು ಹಾಗೂ ಗುರಿಯೊಂದಿಗೆ ಮುನ್ನುಗ್ಗುತ್ತಿವೆ. ಸದ್ಯ ಆಶಾದಾಯಕ ಬೆಳವಣಿಗೆ ಕಾಣುತ್ತಿರುವ ದೇಶದ ಆರ್ಥಿಕ ವಲಯಕ್ಕೆ ಈ ಕಂಪನಿಗಳು ಬೆನ್ನೆಲುಬಾಗಿ ನಿಂತಿವೆ. ಭಾರತದ ಟಾಪ್ 8 ರಿಯಲ್ ಎಸ್ಟೇಟ್ ಕಂಪನಿಗಳು

 

ಈಗ ದೇಶದಲ್ಲಿ ವಿವಿಧ ರೀತಿಯಲ್ಲಿ ಸಾರ್ವಜನಿಕರಿಗೆ ಅಥವಾ ಉದ್ಯಮ ವಲಯಕ್ಕೆ ಹಣಕಾಸು ಒದಗಿಸುತ್ತಿರುವ ಟಾಪ್ ಟೆನ್ ಕಂಪನಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..

1. ಬಜಾಜ್ ಕ್ಯಾಪಿಟಲ್ ಲಿಮಿಟೆಡ್

1. ಬಜಾಜ್ ಕ್ಯಾಪಿಟಲ್ ಲಿಮಿಟೆಡ್

ಬಜಾಜ್ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ ಕಂಪನಿ ದೇಶದ ಅತಿ ಪ್ರಮುಖ ಹಣಕಾಸು ಯೋಜನೆ, ಹೂಡಿಕೆ ಹಾಗೂ ಸಲಹಾಗಾರ ಸಂಸ್ಥೆಯಾಗಿ ಹೊರಹೊಮ್ಮಿದೆ. ಬಾಂಡ್‌ಗಳು, ಮ್ಯುಚುವಲ್ ಫಂಡ್, ಇನ್ಶೂರೆನ್ಸ್, ಸೆಕ್ಯುರಿಟಿಗಳು ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಹೂಡಿಕೆ ಸಂಸ್ಥೆಯಾಗಿ ಬಜಾಜ್ ಕ್ಯಾಪಿಟಲ್ ಲಿಮಿಟೆಡ್ ಹೆಸರುವಾಸಿಯಾಗಿದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಹಣಕಾಸು ಬೆಂಬಲ, ದೊಡ್ಡ ಹೂಡಿಕೆದಾರರಿಗೆ ಹಣಕಾಸು ನೆರವು ಹಾಗೂ ಎನ್ಆರ್ ಐ ಗಳಿಗೆ ಹಣಕಾಸು ಹೂಡಿಕೆ ಮಾಡುವ ಗುರಿಯೊಂದಿಗೆ ಬಜಾಜ್ ಕ್ಯಾಪಿಟಲ್ ತನ್ನ ಸೇವಾಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತ ಸಾಗಿದೆ.

2. ಐಸಿಐಸಿಐ ಗ್ರೂಪ್

2. ಐಸಿಐಸಿಐ ಗ್ರೂಪ್

ರಿಟೇಲ್ ಗ್ರಾಹಕರು ಹಾಗೂ ದೊಡ್ಡ ಹೂಡಿಕೆದಾರರಿಗೆ ತನ್ನ ವಿವಿಧ ಅಂಗ ಸಂಸ್ಥೆಗಳ ಮೂಲಕ ಹಣಕಾಸು ಸೌಲಭ್ಯ ನೀಡುತ್ತಿರುವ ಐಸಿಐಸಿಐ ಗ್ರೂಪ್ ಲಿಮಿಟೆಡ್ ಅತ್ಯಂತ ವಿಶ್ವಾಸಾರ್ಹ ಫೈನಾನ್ಸಿಯಲ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಐಸಿಐಸಿಐ ಪ್ರುಡೆನ್ಸಿಯಲ್ ಲೈಫ್ ಇನ್ಸೂರೆನ್ಸ್ ಕಂಪನಿ ಮೂಲಕ ಗ್ರಾಹಕರಿಗೆ ಲೈಫ್ ಇನ್ಸೂರೆನ್ಸ್ ಸೇವೆಗಳನ್ನು ಸಂಸ್ಥೆ ನೀಡುತ್ತಿದೆ. ರಿಟೈರ್‌ಮೆಂಟ್ ಬೆನಿಫಿಟ್ ಯೋಜನೆಗಳಿಂದ ಹಿಡಿದು ಟರ್ಮ ಪಾಲಿಸಿಗಳವರೆಗೆ ಕಂಪನಿಯ ಸೇವೆಗಳು ವಿಸ್ತರಿಸಿವೆ. ಶೇರು ಮಾರುಕಟ್ಟೆ ಆಧರಿಸಿದ ಮ್ಯುಚುವಲ್ ಫಂಡ್ ಕ್ಷೇತ್ರದಲ್ಲಿ ಸಹ ಐಸಿಐಸಿಐ ಪ್ರುಡೆನ್ಸಿಯಲ್ ತನ್ನದೇ ಛಾಪು ಮೂಡಿಸಿದೆ. ಇನ್ನೊಂದು ಅಂಗಸಂಸ್ಥೆ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ವಲಯದ ಮೆಡಿಕಲ್ ಇನ್ಸೂರೆನ್ಸ್ ಭದ್ರತೆ ಹಾಗೂ ಇನ್ನಿತರ ಇನ್ಸೂರೆನ್ಸ್ ಸೇವೆಗಳನ್ನು ನೀಡುತ್ತಿದೆ. ತನ್ನ ವಿಶಿಷ್ಟ ಸೇವೆ ಹಾಗೂ ಕಾರ್ಯವೈಖರಿಯ ಮೂಲಕ ಐಸಿಐಸಿಐ ಗ್ರೂಪ್, ದೇಶ ಹಾಗೂ ವಿದೇಶಗಳಲ್ಲಿ ಅತಿ ಪ್ರಮುಖ ಬ್ಯಾಂಕ್ ಎಂದು ಹೆಸರು ಮಾಡಿದೆ.

3. ಡಿಎಸ್‌ಪಿ ಮೆರಿಲ್ ಲಿಂಚ್ ಲಿಮಿಟೆಡ್
 

3. ಡಿಎಸ್‌ಪಿ ಮೆರಿಲ್ ಲಿಂಚ್ ಲಿಮಿಟೆಡ್

ದೇಶದ ಬಂಡವಾಳ ಮಾರುಕಟ್ಟೆ, ಸಲಹೆ ಹಾಗೂ ಸಂಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಡಿಎಸ್‌ಪಿ ಮೆರಿಲ್ ಲಿಂಚ್ ಲಿಮಿಟೆಡ್ ಅತಿ ಪ್ರಮುಖ ಕಂಪನಿಯಾಗಿ ಗುರುತಿಸಿಕೊಂಡಿದೆ. ಆರ್‌ಬಿಐನಿಂದ ಎನ್‌ಬಿಎಫ್‌ಸಿ ಲೈಸೆನ್ಸ್ ಪಡೆದಿರುವ ಇದು ಪ್ರಮುಖವಾಗಿ ಡೆಬ್ಟ್ ಸೆಕ್ಯುರಿಟೀಸ್ ಹಾಗೂ ಈಕ್ವಿಟಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಸರಕಾರಿ ಸ್ವಾಮ್ಯದ ಭದ್ರತಾ ಠೇವಣಿ ಕ್ಷೇತ್ರದಲ್ಲಿ ಸಹ ಕೆಲಸ ಮಾಡುತ್ತಿದೆ. ವಿವಿಧ ಕಂಪನಿಗಳಿಗೆ ಕಸ್ಟಮೈಸ್ಡ್ ಹಣಕಾಸು ಸಲಹಾ ಸೇವೆಯನ್ನು ಕಂಪನಿ ನೀಡುತ್ತಿದೆ. ಯಾವುದೇ ಹಣಕಾಸು ಯೋಜನೆಗಳು, ಸೇವೆಗಳು ಹಾಗೂ ಆರ್ಥಿಕ ಕ್ಷೇತ್ರದಲ್ಲಿನ ಬದಲಾವಣೆ, ಅಭಿವೃದ್ಧಿಗಳ ಬಗ್ಗೆ ತನ್ನದೇ ಆದ ಅಧ್ಯಯನ ಮಂಡಿಸುವಲ್ಲಿ ಡಿಎಸ್‌ಪಿ ಮೆರಿಲ್ ಲಿಂಚ್ ಲಿಮಿಟೆಡ್ ಮುಂಚೂಣಿಯಲ್ಲಿದೆ.

4. ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್

4. ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್

ಭಾರತದ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್ ಸಮೂಹ ಎಸ್‌ಬಿಐನ ಅಂಗ ಸಂಸ್ಥೆಯಾಗಿರುವ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಹಣಕಾಸು ಕ್ಷೇತ್ರದ ದೈತ್ಯ ಕಂಪನಿಯಾಗಿ ಗುರುತಿಸಿಕೊಂಡಿದೆ. ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್, ಹಣಕಾಸು ಕ್ರೋಢೀಕರಣ ಮತ್ತು ಯೋಜನೆಗಳ ಸಲಹಾ ಕ್ಷೇತ್ರದಲ್ಲಿ ಸಂಸ್ಥೆ ತನ್ನ ಸೇವೆ ಸಲ್ಲಿಸುತ್ತಿದೆ. ದೇಶದ ಕ್ಯಾಪಿಟಲ್ ಮಾರ್ಕೆಟ್ ನಲ್ಲಿ ಅತಿ ಹಳೆಯ ಕಂಪನಿಯಾಗಿರುವ ಎಸ್‌ಬಿಐ ಕ್ಯಾಪ್ (SBICAP) ಖಾಸಗೀಕರಣ ಹಾಗೂ ಸೆಕ್ಯುರಿಟೈಸೇಶನ್ ವಲಯಗಳಲ್ಲಿ ಪರಿಣತಿ ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಸ್‌ಬಿಐ ಕ್ಯಾಪ್ 2004ರ ಬೆಸ್ಟ್ ಮರ್ಚಂಟ್ ಬ್ಯಾಂಕರ್ ಅವಾರ್ಡ್ ಪಡೆದುಕೊಂಡಿದೆ.

5. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

5. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಗೃಹ ಸಾಲ ಕ್ಷೇತ್ರದಲ್ಲಿ ಮುಂಚೂಣಿ ಕಂಪನಿಯಾಗಿ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹೆಸರು ಗಳಿಸಿದೆ. ಮಾತೃ ಸಂಸ್ಥೆ ಎಲ್‌ಐಸಿ ಯಿಂದ 1989ರಲ್ಲಿ ಈ ಕಂಪನಿಯನ್ನು ಆರಂಭಿಸಲಾಯಿತು. ನ್ಯಾಶನಲ್ ಹೌಸಿಂಗ್ ಬ್ಯಾಂಕ್ ನಿಂದ ಮಾನ್ಯತೆ ಪಡೆದಿರುವ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಲಿಸ್ಟೆಡ್ ಕಂಪನಿಯಾಗಿದೆ. ಹೊಸ ಮನೆ ಖರೀದಿಗೆ, ಮನೆ ನವೀಕರಣಕ್ಕೆ ಹಾಗೂ ಹೊಸ ಮನೆ ನಿರ್ಮಾಣಕ್ಕಾಗಿ ಸಾರ್ವಜನಿಕರಿಗೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ನೀಡುತ್ತದೆ. ವಾಣಿಜ್ಯ ಸಂಸ್ಥೆಗಳಿಗೆ ಕಚೇರಿ ಸ್ಥಳ ಖರೀದಿಸಲು, ವೈದ್ಯಕೀಯ ಸಂಸ್ಥೆಗಳಿಗೆ ನರ್ಸಿಂಗ್ ಹೋಂ ಖರೀದಿ ಸೇರಿದಂತೆ ಇನ್ನಿತರ ಸಂಸ್ಥೆಗಳಿಗೆ ವಿವಿಧ ರೀತಿಯ ಕಟ್ಟಡ ಖರೀದಿಗೆ ಹಣಕಾಸು ನೆರವನ್ನು ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೀಡುತ್ತಿದೆ.

6. ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಫೈನಾನ್ಸ್ ಕಾರ್ಪೊರೇಶನ್ (ಎಚ್‌ಡಿಎಫ್‌ಸಿ)

6. ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಫೈನಾನ್ಸ್ ಕಾರ್ಪೊರೇಶನ್ (ಎಚ್‌ಡಿಎಫ್‌ಸಿ)

ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಫೈನಾನ್ಸ್ ಕಾರ್ಪೊರೇಶನ್ ದೇಶದ ಪ್ರಮುಖ ಹಣಕಾಸು ಕಂಪನಿಗಳಲ್ಲೊಂದಾಗಿದೆ. ಎಚ್‌ಡಿಎಫ್‌ಸಿ ಅನೇಕ ವಿಧಗಳಲ್ಲಿ ಹಣಕಾಸು ಸೇವೆಗಳನ್ನು ನೀಡುತ್ತಿರುವುದು ವಿಶೇಷವಾಗಿದೆ. ವೈಯಕ್ತಿಕ ಬ್ಯಾಂಕಿಂಗ್ ಸೇವೆ, ಸಾಲ ಸೌಲಭ್ಯ, ಠೇವಣಿಗಳು, ಜೀವ ವಿಮೆ, ಮ್ಯುಚುವಲ್ ಫಂಡ್ ಗಳು ಹಾಗೂ ಸೆಕ್ಯುರಿಟಿ ಟ್ರೇಡಿಂಗ್ ನಲ್ಲಿ ಎಚ್‌ಡಿಎಫ್‌ಸಿ ವಿಶ್ವಾಸಪಾತ್ರ ಬ್ಯಾಂಕ್ ಆಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೂರು ಹಂತಗಳಲ್ಲಿ ಎಚ್‌ಡಿಎಫ್‌ಸಿ ಸೇವೆ ಸಲ್ಲಿಸುತ್ತಿದೆ. ವೈಯಕ್ತಿಕ ಬ್ಯಾಂಕಿಂಗ್, ಹೋಲ್ ಸೇಲ್ ಬ್ಯಾಂಕಿಂಗ್ ಹಾಗೂ ಎನ್‌ಆರ್‌ಐ ಬ್ಯಾಂಕಿಂಗ್ ಸೌಲಭ್ಯಗಳನ್ನು ಎಚ್‌ಡಿಎಫ್‌ಸಿ ನೀಡುತ್ತಿದೆ. ಇವಲ್ಲದೆ ಎಚ್‌ಡಿಎಫ್‌ಸಿ ಗ್ರುಪ್, ಎಚ್‌ಡಿಎಫ್‌ಸಿ ರಿಯಾಲ್ಟಿ, ಎರ್ಗೊ (ERGO), ಎಚ್‌ಡಿಬಿ ಫೈನಾನ್ಸಿಯಲ್ ಸರ್ವಿಸಸ್, ಸೆಕ್ಯುರಿಟೀಸ್ ಹಾಗೂ ಮ್ಯುಚುವಲ್ ಫಂಡ್‌ಗಳ ಮೂಲಕ ಗುರುತಿಸಿಕೊಂಡಿದೆ.

7. ಬಿರ್ಲಾ ಗ್ಲೋಬಲ್ ಫೈನಾನ್ಸ್ ಲಿಮಿಟೆಡ್

7. ಬಿರ್ಲಾ ಗ್ಲೋಬಲ್ ಫೈನಾನ್ಸ್ ಲಿಮಿಟೆಡ್

ಬಿರ್ಲಾ ಗ್ಲೋಬಲ್ ಫೈನಾನ್ಸ್ ಲಿಮಿಟೆಡ್ ಪ್ರಮುಖವಾಗಿ ಕಾರ್ಪೊರೇಟ್ ಫೈನಾನ್ಸ್ ಹಾಗೂ ಕ್ಯಾಪಿಟಲ್ ಮಾರ್ಕೆಟ್ ವಲಯದಲ್ಲಿ ಮುಂಚೂಣಿ ಕಂಪನಿಯಾಗಿ ಗುರುತಿಸಿಕೊಂಡಿದೆ. ಆದಿತ್ಯ ಬಿರ್ಲಾ ಫೈನಾನ್ಸಿಯಲ್ ಗ್ರುಪ್ ನ ಎನ್‌ಬಿಎಫ್‌ಸಿ ಅಂಗಸಂಸ್ಥೆಯಾಗಿರುವ ಇದು ಈಗ ಆದಿತ್ಯಾ ಬಿರ್ಲಾ ಫೈನಾನ್ಸ್ ಎಂದು ಮರುನಾಮಕರಣಗೊಂಡಿದೆ. ತನ್ನ ಹಲವಾರು ಬಿಸಿನೆಸ್ ಚಾನೆಲ್‌ಗಳ ಮೂಲಕ ದೇಶದ ವಿವಿಧ ಸ್ತರದ ಜನತೆಯ ಹಣಕಾಸು ಅಗತ್ಯತೆಗಳನ್ನು ಕಂಪನಿ ಪೂರೈಸುತ್ತಿದೆ. ಹೂಡಿಕೆಗಾಗಿ ಹಣಕಾಸು, ಭದ್ರತಾ ಠೇವಣಿಗಳ ಮೇಲೆ ಸಾಲ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಹಣಕಾಸು ಸೌಲಭ್ಯಗಳನ್ನು ಕಂಪನಿ ನೀಡುತ್ತದೆ. ಆದಿತ್ಯಾ ಬಿರ್ಲಾ ಫೈನಾನ್ಸ್ ಪ್ರಸ್ತುತ ಹಣಕಾಸು ಮಾರುಕಟ್ಟೆಯಲ್ಲಿ ಗಣನೀಯ ಪಾಲು ಹೊಂದಿದೆ. ಇನ್ಸೂರೆನ್ಸ್ ಬ್ರೋಕಿಂಗ್, ಜೀವ ವಿಮೆ, ಖಾಸಗಿ ಇಕ್ವಿಟಿ, ವಿಮಾ ಯೋಜನೆ ಸೇವೆಗಳು, ಥರ್ಡ್ ಪಾರ್ಟಿ ಡಿಸ್ಟ್ರಿಬ್ಯೂಶನ್ ಹಾಗೂ ಲೆಂಡಿಂಗ್ ಬೇಸ್ಡ್ ಸೆಕ್ಯುರಿಟಿ ವಲಯದಲ್ಲಿ ಕಂಪನಿ ಪ್ರಮುಖ ಪಾತ್ರ ವಹಿಸುತ್ತಿದೆ.

8. ಎಲ್ ಆಂಡ್ ಟಿ ಫೈನಾನ್ಸ್ ಲಿಮಿಟೆಡ್

8. ಎಲ್ ಆಂಡ್ ಟಿ ಫೈನಾನ್ಸ್ ಲಿಮಿಟೆಡ್

ಎಲ್ ಆಂಡ್ ಟಿ ಫೈನಾನ್ಸ್ ಲಿಮಿಟೆಡ್ ಲಾರ್ಸನ್ ಆಂಡ್ ಟೋಬ್ರೊ ಕಂಪನಿಯ ಅಂಗಸಂಸ್ಥೆಯಾಗಿದೆ. 1994ರಲ್ಲಿ ಎನ್‌ಬಿಎಫ್‌ಸಿ ಸಂಸ್ಥೆಯಾಗಿ ಎಲ್ ಆಂಡ್ ಟಿ ಫೈನಾನ್ಸ್ ಲಿಮಿಟೆಡ್ ಪ್ರಾರಂಭವಾಯಿತು. ಕೃಷಿ, ವ್ಯಾಪಾರ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಹಣಕಾಸು ಸೌಲಭ್ಯಗಳನ್ನು ನೀಡುತ್ತಿದೆ. ಪ್ರಮುಖವಾಗಿ ಗ್ರಾಮೀಣ ಹಣಕಾಸು, ಕಾರ್ಪೊರೇಟ್ ಫೈನಾನ್ಸ್, ಮೈಕ್ರೊ ಫೈನಾನ್ಸ್, ವಾಣಿಜ್ಯ ಬಳಕೆ ವಾಹನಗಳಿಗೆ ಸಾಲ ಹಾಗೂ ಕಟ್ಟಡ ನಿರ್ಮಾಣ ಯಂತ್ರಗಳಿಗೆ ಸಾಲ ಒದಗಿಸುವ ಕಂಪನಿಯಾಗಿ ಕಾರ್ಯನಿರ್ವಹಿಸುತ್ತಿದೆ.

9. ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

9. ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲೊಂದಾಗಿರುವ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಇದು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಂಗಸಂಸ್ಥೆಯಾಗಿದೆ. ಟಾಟಾ ಎಐಜಿ ಸಹಯೋಗದಲ್ಲಿ, ಅತಿ ಕಡಿಮೆ ಪ್ರಿಮಿಯಂ ದರಗಳಲ್ಲಿ ಹೋಂ ಲೋನ್ ಇನ್ಸೂರೆನ್ಸ್ ಯೋಜನೆಯನ್ನು ಕಂಪನಿ ನೀಡುತ್ತಿದೆ. ಫ್ಲ್ಯಾಟ್, ಮನೆ, ಆಸ್ತಿ ಹಾಗೂ ಅಪಾರ್ಟ್‌ಮೆಂಟ್ ಖರೀದಿಸಲು ದೇಶದ ನಾಗರಿಕರು ಸೇರಿದಂತೆ ಎನ್‌ಆರ್‌ಐಗಳಿಗೂ ಹಣಕಾಸು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜೊತೆಗೆ ನರ್ಸಿಂಗ್ ಹೋಂ ಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಿಗೆ ಸಹ ಅವಶ್ಯಕ ಸಾಲ ಸೌಲಭ್ಯಗಳ ಯೋಜನೆಗಳನ್ನು ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಪರಿಚಯಿಸಿದೆ.

10. ಕಾರ್ವಿ ಗ್ರುಪ್

10. ಕಾರ್ವಿ ಗ್ರುಪ್

ಆನ್ಲೈನ್ ಟ್ರೇಡಿಂಗ್, ಇಕ್ವಿಟಿ ಹಾಗೂ ಡೆರಿವೇಟಿವ್ಸ್, ಮ್ಯುಚುವಲ್ ಫಂಡ್, ಕಾರ್ಪೊರೇಟ್ ಫೈನಾನ್ಸ್ ಹಾಗೂ ಇನ್ನಿತರ ಹಣಕಾಸು ಯೋಜನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ವಿ ಗ್ರುಪ್ ತನ್ನ ವಿಶಿಷ್ಟ ಕೆಲಸದಿಂದ ದೇಶದಲ್ಲಿ ಹೆಸರು ಮಾಡಿದೆ. ಸಾಂಸ್ಥಿಕ ಸೇವೆಗಳು, ಚಿಲ್ಲರೆ ಸೇವೆಗಳು (Retail Services) ಹಾಗೂ ವೆಲ್ತ್ ಮ್ಯಾನೇಜ್ಮೆಂಟ್ ನಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಕಾರ್ವಿ ಗ್ರೂಪ್ ದೇಶದ ಆರ್ಥಿಕಾಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸುತ್ತಿದೆ.

Read more about: money savings finance news business
English summary

Top 10 Finance Companies in India

Financial development in India is brought about by some of the major financial companies in India.
Story first published: Friday, June 22, 2018, 9:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X