For Quick Alerts
ALLOW NOTIFICATIONS  
For Daily Alerts

ಭಾರತದ 10 ಬೆಸ್ಟ್ ಕ್ರೆಡಿಟ್ ಕಾರ್ಡ್ ಗಳ ಪಟ್ಟಿ ಇಲ್ಲಿದೆ ನೋಡಿ..

ಕ್ರೆಡಿಟ್ ಕಾರ್ಡ್ ಗಳು ಇತ್ತೀಚೆಗೆ ಏನನ್ನಾದರೂ ಕೊಳ್ಳಲು ಮತ್ತು ಇತರೆ ಕೆಲಸಗಳಿಗಾಗಿ ಇರುವ ಸುಲಭದ ಮಾರ್ಗವಾಗಿದೆ. ಇದು ಕೈಯಲ್ಲೇ ಇರುತ್ತೆ ಮತ್ತು ದುಡ್ಡು ಕಳೆದು ಹೋಗುವ ಭಯವಿರುವುದಿಲ್ಲ.

By Siddu Thoravat
|

ಕ್ರೆಡಿಟ್ ಕಾರ್ಡ್ ಗಳು ಇತ್ತೀಚೆಗೆ ಏನನ್ನಾದರೂ ಕೊಳ್ಳಲು ಮತ್ತು ಇತರೆ ಕೆಲಸಗಳಿಗಾಗಿ ಇರುವ ಸುಲಭದ ಮಾರ್ಗವಾಗಿದೆ. ಇದು ಕೈಯಲ್ಲೇ ಇರುತ್ತೆ ಮತ್ತು ದುಡ್ಡು ಕಳೆದು ಹೋಗುವ ಭಯವಿರುವುದಿಲ್ಲ. ಭಾರತದಲ್ಲಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಕ್ರೆಡಿಟ್ ಕಾರ್ಡ್ ಗಳು ನಿಜವಾಗಲೂ ನಿಮಗೆ ಏನನ್ನು ನೀಡುತ್ತೆ ಎಂಬುದನ್ನು ಅರಿತು ನಂತರ ಪಡೆದುಕೊಳ್ಳುವುದು ಸೂಕ್ತವಾದದ್ದು..

ಹಲವಾರು ಮಂದಿ ಇದ್ದಾರೆ ಅವರಿಗೆ ಕ್ರೆಡಿಟ್ ಕಾರ್ಡ್ ಗಳಿಂದ ಕೆಟ್ಟ ಅನುಭವಗಳಾಗಿದೆ ಮತ್ತು ಯಾವುದೇ ಸಮಸ್ಯೆಗಳಿಗೆ ಒಳಗಾಗದಂತೆ ನಿಮ್ಮನ್ನು ನೀವು ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯೇ ಆಗಿರುತ್ತದೆ. ಗ್ರಾಹಕರಿಗೆ ಹಲವಾರು ರೀತಿಯ ಕಾರ್ಡ್ ಗಳು ಲಭ್ಯವಿದ್ದು, ಸೂಕ್ತವಾಗಿ ತಿಳಿದು ಪಡೆದರೆ ಹೆಚ್ಚು ಲಾಭ ಗಳಿಸಬಹುದು. ಬ್ಯಾಂಕ್ ಗಳು ಯಾವಾಗಲೂ ಕೆಲವು ಬಡ್ಡಿಯನ್ನು ಕ್ರೆಡಿಟ್ ಕಾರ್ಡ್ ಗಳಿಗೆ ಹಾಕುತ್ತವೆ. ನೀವು ಬದಲಾಯಿಸಲು ಅಥವಾ ಕ್ರೆಡಿಟ್ ಕಾರ್ಡ್ ನ್ನು ನವೀಕರಿಸಲು ಮಾಡಲು ಇಚ್ಛಿಸುತ್ತಿದ್ದರೆ, ನೀವು ಸ್ವಲ್ಪ ಹೆಚ್ಚಿನ ಹಣವನ್ನು ಬ್ಯಾಂಕಿಗೆ ಅವರ ಸರ್ವೀಸ್ ಗಳಿಗಾಗಿ ನೀಡಬೇಕಾಗುತ್ತದೆ. ಇಲ್ಲಿ ಭಾರತದಲ್ಲಿ ಲಭ್ಯವಿರುವ ಬೆಸ್ಟ್ ಕ್ರೆಡಿಟ್ ಕಾರ್ಡ್ ಗಳ ಪಟ್ಟಿಯನ್ನು ನೀಡಲಾಗಿದೆ..

10. IRCTC ಎಸ್.ಬಿ.ಐ ಕ್ರೆಡಿಟ್ ಕಾರ್ಡ್

10. IRCTC ಎಸ್.ಬಿ.ಐ ಕ್ರೆಡಿಟ್ ಕಾರ್ಡ್

ಈ ಕಾರ್ಡನ್ನು ಪ್ರಮುಖವಾಗಿ ಮಾಡಿರುವುದು ಯಾರು ಯಾವಾಗಲೂ ರೈಲಿನಲ್ಲಿ ಹೆಚ್ಚು ಪ್ರಯಾಣಿಸುತ್ತಾರೋ ಅಂತವರಿಗೆ. ಈ ಕಾರ್ಡ್ ನಿಮಗೆ 500 ರೂಪಾಯಿ ಪಾವತಿಸಿದರೆ ಸಿಗುತ್ತದೆ ಮತ್ತು ವರ್ಷಕ್ಕೆ ರೂ. 300 ಪಾವತಿಸಬೇಕಾಗುತ್ತದೆ. ಇದನ್ನು ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಸ್ವೀಕರಿಸಲಾಗುತ್ತೆ ಮತ್ತು ನೀವು ನಿಮ್ಮ ಎಲ್ಲಾ ಬಿಲ್ ಗಳನ್ನು ಈ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಬಹುದು. ನೀವು ರೂ.125 ಖಾಲಿ ಮಾಡಿದರೆ ನಿಮಗೆ ಒಂದು ಪಾಯಿಂಟ್ ಸಿಗಲಿದೆ. ನೀವೂ 500 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದರೆ ಅದನ್ನು 45 ದಿನಗಳ ಒಳಗೆ ಮರು ಪಾವತಿ ಮಾಡಬೇಕು. ಆಗ ನಿಮಗೆ 350 ಪಾಯಿಂಟ್ ಸಿಗಲಿದ್ದು, ಇದು ನಿಮಗೆ ನಿಜಕ್ಕೂ ಲಾಭದಾಯಕವಾಗಿರುತ್ತದೆ. IRCTC SBI ಪ್ಲಾಟಿನಮ್ ಕಾರ್ಡ್: ಇದರ ಪ್ರಯೋಜನಗಳೇನು ಗೊತ್ತೆ?

9. HDFC ಸಾಲಿಟೇರ್ ಕ್ರೆಡಿಟ್ ಕಾರ್ಡ್

9. HDFC ಸಾಲಿಟೇರ್ ಕ್ರೆಡಿಟ್ ಕಾರ್ಡ್

ಯಾರು ಹೆಚ್ಚು ಶಾಪಿಂಗ್ ಮಾಡುತ್ತಾರೋ ಅಂತವರಿಗಾಗಿ ಈ ಕಾರ್ಡ್ ನ್ನು ಡಿಸೈನ್ ಮಾಡಲಾಗಿದೆ. ಇದರ ವಾರ್ಷಿಕ ದರ 999 ರೂಪಾಯಿಗಳು ಮತ್ತು ಯಾವುದೇ ಸೇರಿಕೊಳ್ಳುವ ಚಾರ್ಜಸ್ ಇರುವುದಿಲ್ಲ. ನಿಮಗೆ 1000 ರೂಪಾಯಿಯ ಗಿಫ್ಟ್ ವೋಚರ್ ಕೂಡ ಪ್ರತಿ 6 ತಿಂಗಳಿಗೊಮ್ಮೆ ಇದರಲ್ಲಿ ಸಿಗಲಿದ್ದು, ನೀವು 50,000 ರೂಪಾಯಿಯನ್ನು ಇದರಲ್ಲಿ ಖರ್ಚು ಮಾಡಿದರೆ, ನಿಮಗೆ 4000 ರೂಪಾಯಿಯ ಕ್ಯಾಷ್ ಬ್ಯಾಕ್ ಕೂಡ ಇದರಲ್ಲಿ ಲಭ್ಯವಾಗುತ್ತದೆ.

8. HDFC ಪ್ರೀಮಿಯಮ್ ಪ್ಲಸ್ ಕ್ರೆಡಿಟ್ ಕಾರ್ಡ್

8. HDFC ಪ್ರೀಮಿಯಮ್ ಪ್ಲಸ್ ಕ್ರೆಡಿಟ್ ಕಾರ್ಡ್

ಯಾವುದೇ ಹೊಣೆಗಾರಿಕೆ ಹೊತ್ತು ಈ ಕಾರ್ಡ್ ನಿಮಗೆ ಲಭ್ಯವಾಗುವುದಿಲ್ಲ. ನೀವು 150 ರೂಪಾಯಿ ಬಳಸಿದರೆ 2 ರಿವಾರ್ಡ್ ಪಾಯಿಂಟ್ ಪಡೆಯುತ್ತೀರಿ. ನೀವು ಖರೀದಿಸಿದ ತಾರೀಕಿನಿಂದ 50 ದಿನಗಳವರೆಗೆ ಬಡ್ಡಿ ರಹಿತ ಸೇವೆಯನ್ನು ಈ ಕಾರ್ಡ್ ನಿಮಗೆ ನೀಡಲಿದೆ.

7. ಯಾತ್ರಾ SBI ಕ್ರೆಡಿಟ್ ಕಾರ್ಡ್

7. ಯಾತ್ರಾ SBI ಕ್ರೆಡಿಟ್ ಕಾರ್ಡ್

ಈ ಕಾರ್ಡ್ ಬಿಲ್ ಪಾವತಿ ಮಾಡಲು ಬಹಳ ಉಪಕಾರಿಯಾಗಿದೆ ಮತ್ತು ಪ್ರವಾಸ ಹೋಗುವುದಾದರೆ ಟಿಕೆಟ್ ಗಳನ್ನು ಖರೀದಿಸಲು ಅನುಕೂಲಕರವಾಗಿರುತ್ತದೆ. ಈ ಕಾರ್ಡ್ ನ್ನು ಪಡೆದರೆ yatra.com ನಿಂದ ನಿಮಗೆ 8250 ರೂಪಾಯಿಯ ವೋಚರ್ ಸಿಗಲಿದೆ. ಬಿಲ್ ಪಾವತಿ ಮಾಡುವುದು ಈ ಕಾರ್ಡ್ ನಲ್ಲಿ ಭಾರೀ ಸುಲಭ ಮತ್ತು ನೀವು ಪಡೆದ ಪಾಯಿಂಟ್ ಗಳನ್ನು ಯಾವಾಗ ಬೇಕಾದರೂ ವಿಮೋಚನೆ ಮಾಡಿಕೊಳ್ಳಬಹುದು. ನೀವು ಸೇರಿಕೊಳ್ಳಲು ಮತ್ತು ವಾರ್ಷಿಕ ಶುಲ್ಕ 499 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.

6. SBI ಗೋಲ್ಡ್ ಕ್ರೆಡಿಟ್ ಕಾರ್ಡ್

6. SBI ಗೋಲ್ಡ್ ಕ್ರೆಡಿಟ್ ಕಾರ್ಡ್

ಇದು ಬಿಲ್ ಗಳನ್ನು ಪಾವತಿ ಮಾಡಲು ಬಹಳ ಉಪಕಾರಿ ಅದರಲ್ಲೂ ಕಂತಿನಲ್ಲಿ ಶುಲ್ಕಗಳನ್ನು ಪಾವತಿ ಮಾಡುವ ನಿಟ್ಟಿನಲ್ಲಿ ಈ ಕ್ರೆಡಿಟ್ ಕಾರ್ಡ್ ನಿಮಗೆ ಬಹಳ ಸಹಕಾರಿಯಾಗಿರುತ್ತದೆ. ಇದನ್ನು ವಿಶ್ವದ ಎಲ್ಲಾ ಭಾಗದಲ್ಲೂ ಸ್ವೀಕರಿಸುತ್ತಾರೆ. ಕಾರ್ಡ್ ಪಡೆಯಲು ನೀವು 299 ರೂಪಾಯಿ ಶುಲ್ಕ ಪಾವತಿಸಬೇಕು ಮತ್ತು ವಾರ್ಷಿಕ ಶುಲ್ಕವೂ 299 ರೂಪಾಯಿ ಆಗಿರುತ್ತದೆ. ಜೊತೆಗೆ 3.35 ತಿಂಗಳ ಬಡ್ಡಿದರವನ್ನು ಪಾವತಿಸಬೇಕು.

5. ಇಂಡಿಯನ್ ಆಯಿಲ್ ಟೈಟಾನಿಯಂ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್

5. ಇಂಡಿಯನ್ ಆಯಿಲ್ ಟೈಟಾನಿಯಂ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್

ಚಂದಾದಾರರು ವಾರ್ಷಿಕ 30,000 ರೂಪಾಯಿಯನ್ನು ಖರ್ಚು ಮಾಡಲು ಒಂದು ವೇಳೆ ಆಗದೇ ಇದ್ದಲ್ಲಿ ವಾರ್ಷಿಕ ಶುಲ್ಕ 1000 ರೂಪಾಯಿಯನ್ನು ಈ ಕಾರ್ಡಿನಲ್ಲಿ ಚಾರ್ಜ್ ಮಾಡಲಾಗುತ್ತೆ. ಪ್ರತಿ ಬಾರಿ ಇಂಡಿಯನ್ ಆಯಿಲ್ ನಲ್ಲಿ ಇಂಧನ ಹಾಕಿಸಿಕೊಂಡು 150 ರೂಪಾಯಿ ಖರ್ಚು ಮಾಡಿದಾಗ ನಿಮಗೆ 4 ಪಾಯಿಂಟ್ ಗಳು ಸಿಗುತ್ತೆ. ಈ ಪಾಯಿಂಟ್ ಗಳನ್ನು ನೀವು ಯಾವಾಗ ಬೇಕಾದರೂ ವಿಮೋಚನೆ ಮಾಡಿಸಿಕೊಳ್ಳಬಹುದು.

4. ಸಿಟಿಬ್ಯಾಂಕ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್

4. ಸಿಟಿಬ್ಯಾಂಕ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್

ಯಾವುದೇ ಸೇರಿಕೊಳ್ಳುವ ಶುಲ್ಕ ಅಥವಾ ವಾರ್ಷಿಕ ಶುಲ್ಕ ಈ ಕಾರ್ಡಿಗೆ ಇರುವುದಿಲ್ಲ. ಆದರೆ 3.25 ಶೇಕಡಾದಷ್ಟು ಬಡ್ಡಿಯನ್ನು ಪ್ರತಿ ತಿಂಗಳು ಪಾವತಿಸಬೇಕು. 125 ರೂಪಾಯಿ ಖರ್ಚು ಮಾಡಿದಾಗ ನಿಮಗೆ 1 ರಿವಾರ್ಡ್ ಪಾಯಿಂಟ್ ಸಿಗಲಿದೆ. ಪ್ರವಾಸದ ವಿಷಯದಲ್ಲಿ ಈ ಕಾರ್ಡ್ ನಿಂದ ಹಲವು ಡಿಸ್ಕೌಂಟ್ ಗಳು ಸಿಗಲಿದೆ. ಮನರಂಜನೆ ಮತ್ತು ಹೋಟೆಲ್ ನಲ್ಲೂ ಹಲವು ರಿಯಾಯಿತಿಗಳು ಈ ಕಾರ್ಡ್ ನಿಂದ ಲಭ್ಯವಾಗಲಿದೆ.

3. ಸ್ಟ್ಯಾಂಡರ್ಡ್ ಚಾರ್ಟೆಡ್ ಇನ್ನರ್ ಸರ್ಕಲ್ ಟೈಟಾನಿಯಂ ಕ್ರೆಡಿಟ್ ಕಾರ್ಡ್

3. ಸ್ಟ್ಯಾಂಡರ್ಡ್ ಚಾರ್ಟೆಡ್ ಇನ್ನರ್ ಸರ್ಕಲ್ ಟೈಟಾನಿಯಂ ಕ್ರೆಡಿಟ್ ಕಾರ್ಡ್

ಈ ಕಾರ್ಡಿಗೆ ನೀವು ಚಂದಾದಾರರಾದರೆ, ನಿಮಗೆ 2500 ರೂಪಾಯಿಯ ವೋಚರ್ ಸಿಗಲಿದೆ. ಇದರಲ್ಲಿ ಯಾವುದೇ ಆರಂಭಿಕ ಶುಲ್ಕ ಅಥವಾ ನವೀಕರಣ ಶುಲ್ಕವಿರುವುದಿಲ್ಲ. ಆದರೆ 3.1 ಶೇಕಡ ತಿಂಗಳ ಬಡ್ಡಿದರ ಮತ್ತು 37.2 ಶೇಕಡ ವಾರ್ಷಿಕ ಬಡ್ಡಿದರವಿರುತ್ತದೆ. ದೇಶದ ಯಾವುದೇ ಲೈಫ್ ಸ್ಟೈಲ್ ಸ್ಟೋರ್ ಗಳಲ್ಲಿ ನೀವು ಈ ಕಾರ್ಡ್ ನಿಂದ ಗಳಿಸಿದ ರಿವಾರ್ಡ್ ಪಾಯಿಂಟ್ ಗಳನ್ನು ವಿಮೋಚನೆಗೊಳಿಸಿಕೊಳ್ಳಬಹುದು.

2. ಸ್ಟ್ಯಾಂಡರ್ಡ್ ಚಾರ್ಟೆಡ್ ಪ್ಲಾಟಿನಂ ರಿವಾರ್ಡ್ ಕ್ರೆಡಿಟ್ ಕಾರ್ಡ್

2. ಸ್ಟ್ಯಾಂಡರ್ಡ್ ಚಾರ್ಟೆಡ್ ಪ್ಲಾಟಿನಂ ರಿವಾರ್ಡ್ ಕ್ರೆಡಿಟ್ ಕಾರ್ಡ್

399 ರೂ. ಪ್ರವೇಶ ಶುಲ್ಕ ಇರುತ್ತದೆ. ಯಾವುದೇ ವಾರ್ಷಿಕ ಶುಲ್ಕವೂ ಮೊದಲ ಒಂದು ವರ್ಷ ಇದರಲ್ಲಿ ಇರುವುದಿಲ್ಲ. ಆದರೆ ಎರಡನೇ ವರ್ಷ ನೀವು ನವೀಕರಣ ಶುಲ್ಕ 750 ರೂ. ಪಾವತಿಸಬೇಕು. ಪ್ರತಿ 150 ರೂಪಾಯಿ ಖರ್ಚು ಮಾಡಿದಾಗಲೂ ನಿಮಗೆ 5 ಇಂಧನ ಪಾಯಿಂಟ್ ಗಳು ಲಭ್ಯವಾಗುತ್ತೆ.

1. ICICI ಇನ್ಸ್ಟಾಂಟ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್

1. ICICI ಇನ್ಸ್ಟಾಂಟ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್

ನೀವು ಸುಲಭದಲ್ಲೇ ಈ ಕಾರ್ಡಿನ ಚಂದಾದಾರರಾಗಬಹುದು. ರೂ. 20000 ಮಿನಿಮನ್ ಫಿಕ್ಸಡ್ ಡೆಪಾಸಿಟ್ ಇಟ್ಟರೆ ಆಯ್ತು. ಇದನ್ನು ನೀವು ಕನಿಷ್ಟ 3 ತಿಂಗಳಿಗೆ ಕಾಪಾಡಿಕೊಂಡಿರಬೇಕು. ಇದು ಶಾಪಿಂಗ್ ಮಾಡಲು ಬಹಳ ಅನುಕೂಲಕರವಾಗಿರುವ ಕಾರ್ಡ್. ಪ್ರತಿ ತಿಂಗಳು ರೂ. 200 ಮೂವಿ ಟಿಕೆಟ್ ಆಫರ್ ನಿಮಗೆ ಈ ಕಾರ್ಡ್ ನಲ್ಲಿ ಲಭ್ಯವಾಗುತ್ತದೆ.

English summary

Top Ten Best Credit Cards in India

Here is a list of top ten best Credit Cards available in India
Story first published: Monday, June 18, 2018, 10:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X