For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿನ 15 ಬಗೆಯ ಕ್ರೆಡಿಟ್ ಕಾರ್ಡ್‌ಗಳು ಹಾಗೂ ಅವುಗಳ ಉಪಯೋಗ

ಭಾರತದಲ್ಲಿ ಹಲವಾರು ಬಗೆಯ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಲ್ಲಿವೆ. ನಿರ್ದಿಷ್ಟ ಉದ್ದೇಶಕ್ಕೆ ಬಳಸುವ, ಖರ್ಚು ಮಾಡಿದಾಗ ಸಿಗುವ ಪ್ರಯೋಜನ ಹಾಗೂ ರಿವಾರ್ಡ್ ಪಾಯಿಂಟ್ ಗಳ ಆಧಾರದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವರ್ಗೀಕರಿಸಲಾಗುತ್ತದೆ.

By Siddu Thoravat
|

ಭಾರತದಲ್ಲಿ ಹಲವಾರು ಬಗೆಯ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಲ್ಲಿವೆ. ನಿರ್ದಿಷ್ಟ ಉದ್ದೇಶಕ್ಕೆ ಬಳಸುವ, ಖರ್ಚು ಮಾಡಿದಾಗ ಸಿಗುವ ಪ್ರಯೋಜನ ಹಾಗೂ ರಿವಾರ್ಡ್ ಪಾಯಿಂಟ್ ಗಳ ಆಧಾರದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವರ್ಗೀಕರಿಸಲಾಗುತ್ತದೆ.

ಉದಾಹರಣೆಗೆ ನೋಡುವುದಾದರೆ- ಆನ್‌ಲೈನ್ ಮೂಲಕ ಖರೀದಿಗೆ ಹೆಚ್ಚು ಖರ್ಚು ಮಾಡುವವರಿಗೆ ಶಾಪಿಂಗ್ ಕ್ರೆಡಿಟ್ ಕಾರ್ಡ್ ಸೂಕ್ತವಾಗಿದೆ. ವಸ್ತುವನ್ನು ಕೊಂಡಾಗ ವಿವಿಧ ರೀತಿಯ ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಹಾಗೂ ರಿವಾರ್ಡ್ ಪಾಯಿಂಟ್‌ಗಳನ್ನು ಈ ಕ್ರೆಡಿಟ್ ಕಾರ್ಡ್‌ಗಳು ನೀಡುತ್ತವೆ. ಒಂದು ವೇಳೆ ನೀವು ಆಗಾಗ ಪ್ರವಾಸ ಕೈಗೊಳ್ಳುತ್ತಿದ್ದರೆ ಟ್ರಾವೆಲ್ ಕ್ರೆಡಿಟ್ ಕಾರ್ಡ್ ನಿಮಗೆ ಸರಿ ಹೊಂದುತ್ತದೆ. ಪ್ರವಾಸ ಸಂದರ್ಭದಲ್ಲಿ ಇವುಗಳನ್ನು ಬಳಸಿದಾಗ ಏರ್ ಮೈಲ್, ಏರ್‌ಪೋರ್ಟ್ ಲಾಂಜ್‌ಗೆ ಉಚಿತ ಪ್ರವೇಶ ಹೀಗೆ ಹಲವಾರು ಸೌಲಭ್ಯಗಳು ಸಿಗುತ್ತವೆ.
ಅಂದರೆ ಪ್ರತ್ಯೇಕ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರೆಡಿಟ್ ಕಾರ್ಡ್ ಕಂಪನಿಗಳು ವಿವಿಧ ಆಫರ್ ಒದಗಿಸುತ್ತವೆ. ಆದರೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ರೀತಿಯ ಕ್ರೆಡಿಟ್ ಕಾರ್ಡ್‌ಗಳಲ್ಲಿ ನಿಮಗೆ ಸರಿ ಹೊಂದುವ ಕಾರ್ಡ್ ಯಾವುದು ಎಂಬುದನ್ನು ನಿರ್ಧರಿಸಲು ಕೆಲವೊಮ್ಮೆ ಗೊಂದಲ ಮೂಡುವುದು ಸಹಜ.

ಹೀಗಾಗಿ ನಿಮಗೆ ಯಾವ ರೀತಿಯ ಕ್ರೆಡಿಟ್ ಕಾರ್ಡ್ ಸರಿ ಹೊಂದುತ್ತದೆ ಹಾಗೂ ಅದರ ವಿಶೇಷತೆಗಳೇನು ಎಂಬ ಕುರಿತು ಮಾಹಿತಿ ನೀಡಲಾಗಿದ್ದು, ನಿಮಗೆ ಸೂಕ್ತವಾದ ಕಾರ್ಡ್ ಯಾವುದು ಎಂಬುದನ್ನು ನಿರ್ಧರಿಸಿಕೊಳ್ಳಿ.

ಹಣವನ್ನು ಹಲವಾರು ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಕ್ರೆಡಿಟ್ ಕಾರ್ಡ್ ಸಹ ಒಂದು. ಕ್ರೆಡಿಟ್ ಕಾರ್ಡ್ ಇದು ಪ್ಲಾಸ್ಟಿಕ್ ರೂಪದ ಹಣವಾಗಿದ್ದು, ಎಲ್ಲೆಂದರಲ್ಲಿ ಒಯ್ಯಲು ಸೂಕ್ತ ಹಾಗೂ ಸುರಕ್ಷಿತವಾಗಿದೆ. ವಸ್ತುಗಳನ್ನು ಖರೀದಿಸಲು ಹಾಗೂ ಸಾಲ ಸೌಲಭ್ಯಕ್ಕಾಗಿ ಈ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು.

ಕಾರ್ಡ್‌ಗಳಿಂದ ಖರ್ಚು ಮಾಡಿದ ಹಣವನ್ನು ಪ್ರತಿ ತಿಂಗಳು ಅಥವಾ ಕಾರ್ಡ್ ಕಂಪನಿ ನಿಗದಿ ಪಡಿಸಿದ ಬಡ್ಡಿ ರಹಿತ ದಿನಾಂಕದೊಳಗೆ ಪಾವತಿ ಮಾಡುವುದು ಅಗತ್ಯ. ಒಂದು ವೇಳೆ ನಿಗದಿತ ದಿನಾಂಕದೊಳಗೆ ಹಣ ಪಾವತಿ ಮಾಡದಿದ್ದಲ್ಲಿ ಕಾರ್ಡ್ ಖಾತೆಯಲ್ಲಿನ ಸಾಲದ ಮೊತ್ತಕ್ಕೆ ಬಡ್ಡಿ ಪಾವತಿಸಬೇಕಾಗುತ್ತದೆ ಎಂಬುದನ್ನು ಮರೆಯದಿರಿ. ಭಾರತದಲ್ಲಿ ಚಲಾವಣೆಯಲ್ಲಿರುವ ವಿವಿಧ ರೀತಿಯ ಕ್ರೆಡಿಟ್ ಕಾರ್ಡ್‌ಗಳ ಉಪಯೋಗ ಹಾಗೂ ಅವುಗಳ ವಿಶೇಷತೆಗಳು ಹೀಗಿವೆ.. ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ

1. ಬಿಸಿನೆಸ್ ಕ್ರೆಡಿಟ್ ಕಾರ್ಡ್

1. ಬಿಸಿನೆಸ್ ಕ್ರೆಡಿಟ್ ಕಾರ್ಡ್

ವ್ಯವಹಾರಸ್ಥರು ಹಾಗೂ ಕಾರ್ಪೊರೇಟ್ ವಲಯದ ಜನರಿಗೆ ಅನುಕೂಲವಾಗುವಂತೆ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ಗಳನ್ನು ರೂಪಿಸಲಾಗಿದೆ. ನಿಮ್ಮ ವ್ಯವಹಾರಕ್ಕೆ ಅಗತ್ಯವಿರುವ ಹಣಕಾಸು ಪಡೆಯಲು ಈ ಕಾರ್ಡ್‌ಗಳು ಅತಿ ಶೀಘ್ರ ಹಾಗೂ ಸುಲಭ ಮಾರ್ಗವಾಗಿವೆ. ಇವುಗಳನ್ನು ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ಎಂದೂ ಕರೆಯಲಾಗುತ್ತದೆ.
ಖರ್ಚುಗಳ ಮೇಲೆ ನಿಗಾ ಹಾಗೂ ನಿಯಂತ್ರಣ, ವಿಮೆ, ವ್ಯಾಪಾರದಲ್ಲಿ ಉಳಿತಾಯ ಯೋಜನೆ, ಪ್ರವಾಸ ಸಂದರ್ಭದಲ್ಲಿ ಉಳಿತಾಯ ಆಫರ್‌ಗಳನ್ನು ನೀಡುವ ಈ ಕಾರ್ಡ್‌ಗಳಲ್ಲಿ ಕ್ರೆಡಿಟ್ ಲಿಮಿಟ್ ಹೆಚ್ಚಾಗಿದ್ದು, ಅಡ್ವಾನ್ಸ್ ಸೌಲಭ್ಯ ಸಹ ಇರುತ್ತದೆ. ಎಸ್‌ಬಿಐ ಕಾರ್ಪೊರೇಟ್ ಪ್ಲಾಟಿನಂ ಕಾರ್ಡ್, ಬಿಸಿನೆಸ್ ಮನಿಬ್ಯಾಕ್ ಎಚ್‌ಡಿಎಫ್‌ಸಿ ಕಾರ್ಡ್ ಮತ್ತು ಆಕ್ಸಿಸ್ ಬ್ಯಾಂಕ್‌ನ ಮೈ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಇವು ಪ್ರಮುಖ ಬಿಸಿನೆಸ್ ಕ್ರೆಡಿಟ್ ಕಾರ್ಡ್‌ಗಳಾಗಿವೆ.

2. ಬ್ಯಾಲೆನ್ಸ್ ಟ್ರಾನ್ಸಫರ್ ಕ್ರೆಡಿಟ್ ಕಾರ್ಡ್ಸ್

2. ಬ್ಯಾಲೆನ್ಸ್ ಟ್ರಾನ್ಸಫರ್ ಕ್ರೆಡಿಟ್ ಕಾರ್ಡ್ಸ್

ಒಂದು ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್ ಅನ್ನು ಮತ್ತೊಂದು ಕಾರ್ಡ್‌ಗೆ ವರ್ಗಾವಣೆ ಮಾಡುವ ಅವಕಾಶವಿರುವ ಕಾರ್ಡ್‌ಗಳನ್ನು ಬ್ಯಾಲೆನ್ಸ್ ಟ್ರಾನ್ಸಫರ್ ಕ್ರೆಡಿಟ್ ಕಾರ್ಡ್‌ಗಳೆಂದು ಕರೆಯಲಾಗುತ್ತದೆ. ಯಾವುದೇ ಕಾರ್ಡ್‌ನಲ್ಲಿ ಅತಿ ಹೆಚ್ಚು ಮೊತ್ತದ ಬಾಕಿ ಪಾವತಿ ಉಳಿದಿರುವ ಸಂದರ್ಭದಲ್ಲಿ ಇಂಥ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಸಾಮಾನ್ಯವಾಗಿ ಬ್ಯಾಂಕ್‌ಗಳು ಈ ಸೌಲಭ್ಯಕ್ಕೆ ಹಣಕಾಸು ವಲಯದಲ್ಲಿ ಚಾಲ್ತಿಯಲ್ಲಿರುವ ಶುಲ್ಕ ವಿಧಿಸುತ್ತವೆ. ಬಹುತೇಕ ಬ್ಯಾಂಕ್‌ಗಳು ಬ್ಯಾಲೆನ್ಸ್ ಟ್ರಾನ್ಸಫರ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಪ್ರಥಮ ಮೂರು ತಿಂಗಳ ಅವಧಿಯಲ್ಲಿ ಯಾವುದೇ ಬಡ್ಡಿಯನ್ನು ವಿಧಿಸುವುದಿಲ್ಲ ಎಂಬುದೇ ಈ ಕಾರ್ಡ್‌ಗಳ ವಿಶೇಷತೆಯಾಗಿದೆ. ಐಸಿಐಸಿಐ, ಎಸ್‌ಬಿಐ ಹಾಗೂ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗಳು ಬ್ಯಾಲೆನ್ಸ್ ಟ್ರಾನ್ಸಫರ್ ಕ್ರೆಡಿಟ್ ಕಾರ್ಡ್ ನೀಡುತ್ತವೆ.

3. ಕ್ಯಾಶಬ್ಯಾಕ್ ಕ್ರೆಡಿಟ್ ಕಾರ್ಡ್ಸ್

3. ಕ್ಯಾಶಬ್ಯಾಕ್ ಕ್ರೆಡಿಟ್ ಕಾರ್ಡ್ಸ್

ಪ್ರತಿ ಬಾರಿ ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಿದಾಗ ಕೆಲ ಮೊತ್ತವನ್ನು ವಾಪಸ್ ಪಡೆಯುವ ಸೌಲಭ್ಯವನ್ನು ಕ್ಯಾಶಬ್ಯಾಕ್ ಕ್ರೆಡಿಟ್ ಕಾರ್ಡ್‌ಗಳು ನೀಡುತ್ತವೆ. ವಿವಿಧ ರೀತಿಯ ಖರೀದಿಗೆ ಬೇರೆ ಬೇರೆ ಮೊತ್ತದ ಕ್ಯಾಶಬ್ಯಾಕ್ ಅನ್ನು ಬ್ಯಾಂಕ್‌ಗಳು ನೀಡುತ್ತವೆ. ಕ್ಯಾಶಬ್ಯಾಕ್ ಪ್ರಮಾಣ ಬ್ಯಾಂಕ್‌ನಿಂದ ಬ್ಯಾಂಕಿಗೆ ಭಿನ್ನವಾಗಿವೆ. ಸಿಟಿ ಬ್ಯಾಂಕ್ ಕ್ಯಾಶಬ್ಯಾಕ್ ಕ್ರೆಡಿಟ್ ಕಾರ್ಡ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮ್ಯಾನಹಾಟನ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್‌ಗಳು ಉತ್ತಮ ಸೇವೆ ನೀಡುವ ಕ್ಯಾಶಬ್ಯಾಕ್ ಕ್ರೆಡಿಟ್ ಕಾರ್ಡ್‌ಗಳಾಗಿವೆ.

4. ಕೊ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ಸ್

4. ಕೊ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ಸ್

ಯಾವುದೇ ರಿಟೇಲ್ ಮಾರಾಟ ಕಂಪನಿ, ಆನ್‌ಲೈನ್ ಇ ಕಾಮರ್ಸ್ ಪೋರ್ಟಲ್ ಅಥವಾ ಟ್ರಾವೆಲ್ ಕಂಪನಿ ಹೀಗೆ ಬೇರೆ ಕಂಪನಿಗಳ ಸಹಯೋಗದಲ್ಲಿ ಬ್ಯಾಂಕ್‌ಗಳು ನೀಡುವ ಕಾರ್ಡ್‌ಗಳನ್ನು ಕೊ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡಗಳೆಂದು ಕರೆಯಲಾಗುತ್ತದೆ. ಅಂದರೆ ಕಾರ್ಡ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳು ಆ ಕಾರ್ಡ್ ಬಳಸಿ ಕಂಪನಿಯ ವಸ್ತುಗಳನ್ನು ಖರೀದಿಸಿದಾಗ ಅಥವಾ ಸೇವೆ ಪಡೆದಾಗ ಹೆಚ್ಚುವರಿ ಡಿಸ್ಕೌಂಟ್ ಹಾಗೂ ಇನ್ನಿತರ ಆಫರ್‌ಗಳನ್ನು ನೀಡುತ್ತವೆ. ಯಾವುದೇ ನಿರ್ದಿಷ್ಟ ವಸ್ತು ಅಥವಾ ಸೇವೆಗಳನ್ನು ನೀವು ಪದೆ ಪದೆ ಬಳಸುತ್ತಿದ್ದಲ್ಲಿ ಇಂಥ ಕ್ರೆಡಿಟ್ ಕಾರ್ಡ್‌ಗಳ ಸೌಲಭ್ಯ ಪಡೆಯಬಹುದು. ಯಾತ್ರಾ ಎಸ್‌ಬಿಐ ಕ್ರೆಡಿಟ್ ಕಾರ್ಡ್, ಐಆರ್‌ಸಿಟಿಸಿ ಎಸ್‌ಬಿಐ ಪ್ಲಾಟಿನಂ ಕಾರ್ಡ್ ಮತ್ತು ಎಚ್‌ಡಿಎಫ್‌ಸಿ ಸ್ನ್ಯಾಪಡೀಲ್ ಕ್ರೆಡಿಟ್ ಕಾರ್ಡ್‌ಗಳು ಚಲಾವಣೆಯಲ್ಲಿವೆ.

5. ಮಹಿಳೆಯರಿಗಾಗಿ ವಿಶೇಷ ಕ್ರೆಡಿಟ್ ಕಾರ್ಡ್‌ಗಳು

5. ಮಹಿಳೆಯರಿಗಾಗಿ ವಿಶೇಷ ಕ್ರೆಡಿಟ್ ಕಾರ್ಡ್‌ಗಳು

ಕೆಲ ಬ್ಯಾಂಕ್‌ಗಳು ಮಹಿಳೆಯರಿಗಾಗಿಯೇ ವಿಶಿಷ್ಟ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಿವೆ. ಹೆಚ್ಚಾಗಿ ಶಾಪಿಂಗ್ ಮಾಡುವುದು ಮಹಿಳೆಯರಿಗೆ ಇಷ್ಟದ ಕೆಲಸ. ಹೀಗಾಗಿ ಶಾಪಿಂಗ್ ಮಾಡಿದಾಗಲೆಲ್ಲ ಕ್ಯಾಶಬ್ಯಾಕ್, ವೋಚರ್‍ಸ್ ಮುಂತಾದುವುಗಳನ್ನು ನೀಡಲಾಗುತ್ತದೆ. ಜೊತೆಗೆ ಸೇವಾ ತೆರಿಗೆಗಳಲ್ಲಿ ವಿನಾಯಿತಿ, ವಿಮೆ ಇತ್ಯಾದಿ ಸೌಲಭ್ಯಗಳನ್ನು ಸಹ ಈ ಕ್ರೆಡಿಟ್ ಕಾರ್ಡ್‌ಗಳು ಒದಗಿಸುತ್ತವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲಿಟೇರ್ ಪ್ರೀಮಿಯಂ ವುಮೆನ್ಸ್ ಕ್ರೆಡಿಟ್ ಕಾರ್ಡ್, ಸಿಟಿಬ್ಯಾಂಕ್ ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್, ಐಸಿಐಸಿಐ ಬ್ಯಾಂಕ್ ಕೋರಲ್ ಕಾರ್ಡ್ ಮುಂತಾದುವು ಪ್ರಸ್ತುತ ಜನಪ್ರಿಯ ಮಹಿಳಾ ವಿಶೇಷ ಕ್ರೆಡಿಟ್ ಕಾರ್ಡ್‌ಗಳಾಗಿವೆ.

6. ಆನ್‌ಲೈನ್ ಶಾಪಿಂಗ್ ಕ್ರೆಡಿಟ್ ಕಾರ್ಡ್

6. ಆನ್‌ಲೈನ್ ಶಾಪಿಂಗ್ ಕ್ರೆಡಿಟ್ ಕಾರ್ಡ್

ನೀವು ಆಗಾಗ ಆನ್‌ಲೈನ್ ಮೂಲಕ ಶಾಪಿಂಗ್ ಮಾಡುವವರಾಗಿದ್ದರೆ ಈ ಕ್ರೆಡಿಟ್ ಕಾರ್ಡ್ ನಿಮಗೆ ಹೇಳಿ ಮಾಡಿಸಿದಂತಿದೆ. ಆನ್‌ಲೈನ್‌ನಲ್ಲಿ ಖರೀದಿ ಮಾಡಿದಾಗ ಡಿಸ್ಕೌಂಟ್, ಇ ವೋಚರ್ಸ್ ಹಾಗೂ ಇಎಂಐ ಸೌಲಭ್ಯಗಳು ಆನ್‌ಲೈನ್ ಶಾಪಿಂಗ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಡೆಯಬಹುದು. ಎಸ್‌ಬಿಐ ಸಿಂಪ್ಲಿ ಕ್ಲಿಕ್ ಹಾಗೂ ಆಕ್ಸಿಸ್ ಬ್ಯಾಂಕ್ ಬಜ್ ಕ್ರೆಡಿಟ್ ಕಾರ್ಡ್‌ಗಳು ಪ್ರಮುಖ ಆನ್‌ಲೈನ್ ಶಾಪಿಂಗ್ ಕ್ರೆಡಿಟ್ ಕಾರ್ಡ್‌ಗಳಾಗಿವೆ.

7. ಕ್ಲಾಸಿಕ್ ಕ್ರೆಡಿಟ್ ಕಾರ್ಡ್ಸ್

7. ಕ್ಲಾಸಿಕ್ ಕ್ರೆಡಿಟ್ ಕಾರ್ಡ್ಸ್

ಜಗತ್ತಿನ ಯಾವುದೇ ದೇಶದಲ್ಲಾದರೂ ಬಳಸಬಹುದಾದ ಸೌಲಭ್ಯ, ಕ್ಯಾಶ ಅಡ್ವಾನ್ಸ್, ಬಡ್ಡಿ ರಹಿತ ಕ್ರೆಡಿಟ್ ಅವಧಿ, ಸಪ್ಲಿಮೆಂಟರಿ ಕಾರ್ಡ್, ಕಳೆದು ಹೋದ ಕಾರ್ಡ್‌ಗೆ ವಿಮೆ ಹಾಗೂ ಪ್ರತ್ಯೇಕ ಗ್ರಾಹಕ ಸಹಾಯವಾಣಿ ಮುಂತಾದುವು ಕ್ಲಾಸಿಕ್ ಕ್ರೆಡಿಟ್ ಕಾರ್ಡ್ಸ್‌ನ ವೈಶಿಷ್ಟ್ಯಗಳಾಗಿವೆ. ಐಓಬಿ ಕ್ಲಾಸಿಕ್ ಕ್ರೆಡಿಟ್ ಕಾರ್ಡ್, ಇಂಡಿಯನ್ ಬ್ಯಾಂಕ್ ಗ್ಲೋಬಲ್ ಕ್ಲಾಸಿಕ್ ಕ್ರೆಡಿಟ್ ಕಾರ್ಡ್ ಮತ್ತು ಬ್ರಿಟಿಷ್ ಏರ್‌ವೇಸ್ ಕ್ಲಾಸಿಕ್ ಕ್ರೆಡಿಟ್ ಕಾರ್ಡ್‌ಗಳು ಭಾರತದಲ್ಲಿ ಚಲಾವಣೆಯಲ್ಲಿವೆ.

8. ಎಂಟರ್‌ಟೇನ್‌ಮೆಂಟ್ ಕ್ರೆಡಿಟ್ ಕಾರ್ಡ್ಸ್

8. ಎಂಟರ್‌ಟೇನ್‌ಮೆಂಟ್ ಕ್ರೆಡಿಟ್ ಕಾರ್ಡ್ಸ್

ನೀವು ಮನರಂಜನಾ ಪ್ರಿಯರಾಗಿದ್ದು ಸಿನಿಮಾ, ನಾಟಕ, ವಿವಿಧ ಶೋಗಳ ಮೇಲೆ ಹೆಚ್ಚು ಹಣ ಖರ್ಚು ಮಾಡುವಂಥವರಾಗಿದ್ದರೆ ಎಂಟರ್‌ಟೇನ್‌ಮೆಂಟ್ ಕ್ರೆಡಿಟ್ ಕಾರ್ಡ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಮನರಂಜನಾ ಕಾರ್ಯಕ್ರಮಗಳಿಗೆ ವಿವಿಧ ರೀತಿಯ ಡಿಸ್ಕೌಂಟ್ ಹಾಗೂ ಆಫರ್‌ಗಳನ್ನು ನೀಡುವ ಈ ಕಾರ್ಡ್‌ನಿಂದ ಸಿನಿಮಾ ಪ್ರಿಯರಿಗೆ ಹಲವಾರು ಪ್ರಯೋಜನಗಳಿವೆ. ಎಚ್‌ಡಿಎಫ್‌ಸಿ ಟೈಟೇನಿಯಂ ಟೈಮ್ಸ್ ಕಾರ್ಡ್ ಮತ್ತು ಕೋಟಕ್ ಪಿವಿಆರ್ ಗೋಲ್ಡ್ ಕ್ರೆಡಿಟ್ ಕಾರ್ಡ್ ಅತ್ಯುತ್ತಮ ಎಂಟರ್‌ಟೇನ್‌ಮೆಂಟ್ ಕ್ರೆಡಿಟ್ ಕಾರ್ಡ್‌ಗಳಾಗಿವೆ.

9. ಇಂಧನ ಕ್ರೆಡಿಟ್ ಕಾರ್ಡ್

9. ಇಂಧನ ಕ್ರೆಡಿಟ್ ಕಾರ್ಡ್

ನಿಮ್ಮ ವಾಹನಕ್ಕೆ ಪ್ರತಿಬಾರಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿದಾಗ ಕ್ಯಾಶಬ್ಯಾಕ್, ಡಿಸ್ಕೌಂಟ್ ಅಥವಾ ಸರ್ಚಾರ್ಜ್ ವಿನಾಯಿತಿ ನೀಡುವಂತೆ ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ರೂಪಿಸಲಾಗಿದೆ. ಈ ಕಾರ್ಡ್‌ಗಳ ಉಪಯೋಗದಿಂದ ಪ್ರತಿ ತಿಂಗಳು ನೀವು ಇಂಧನದ ಮೇಲೆ ಮಾಡುವ ಖರ್ಚನ್ನು ಕೆಲ ಮಟ್ಟಿಗೆ ಉಳಿತಾಯ ಮಾಡಬಹುದು. ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಗೆ ದೊಡ್ಡ ಮೊತ್ತವನ್ನು ಖರ್ಚು ಮಾಡುವವರಿಗೆ ಇಂಧನ ಕ್ರೆಡಿಟ್ ಕಾರ್ಡ್‌ಗಳು ಸೂಕ್ತವಾಗಿವೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ಸುಪರ್ ವ್ಯಾಲ್ಯು ಟೈಟೇನಿಯಂ ಕಾರ್ಡ್, ಐಸಿಐಸಿಐ ಬ್ಯಾಂಕ್ ಎಚ್‌ಪಿಸಿಎಲ್ ಕೋರಲ್, ಅಮೆರಿಕನ್ ಎಕ್ಸಪ್ರೆಸ್ ಕ್ರೆಡಿಟ್ ಕಾರ್ಡ್ ಮತ್ತು ಇಂಡಿಯನ್ ಆಯಿಲ್ ಸಿಟಿ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಮೊದಲಾದುವು ಪ್ರಮುಖ ಇಂಧನ ಕ್ರೆಡಿಟ್ ಕಾರ್ಡ್‌ಗಳಾಗಿವೆ.

10. ಲೈಫ್ ಸ್ಟೈಲ್ ಕ್ರೆಡಿಟ್ ಕಾರ್ಡ್ಸ್

10. ಲೈಫ್ ಸ್ಟೈಲ್ ಕ್ರೆಡಿಟ್ ಕಾರ್ಡ್ಸ್

ಹೆಸರೇ ಹೇಳುವಂತೆ ಕಾರ್ಡ್ ಹೊಂದಿರುವ ವ್ಯಕ್ತಿಯ ಜೀವನ ಶೈಲಿ ಹಾಗೂ ಆದಾಯಕ್ಕುನುಗುಣವಾಗಿ ವಿವಿಧ ಸೌಲಭ್ಯಗಳನ್ನು ನೀಡಲು ಲೈಫ್ ಸ್ಟೈಲ್ ಕ್ರೆಡಿಟ್ ಕಾರ್ಡ್‌ಗಳು ರೂಪಿಸಲ್ಪಟ್ಟಿವೆ. ಶಾಪಿಂಗ್, ಆಹಾರ, ಪ್ರವಾಸ ಸೇರಿದಂತೆ ಇನ್ನೂ ಅನೇಕ ಸೇವೆಗಳ ಮೇಲೆ ಡಿಸ್ಕೌಂಟ್ ಹಾಗೂ ಆಫರ್‌ಗಳನ್ನು ಈ ಕಾರ್ಡ್‌ಗಳು ನೀಡುತ್ತವೆ. ಆಕ್ಸಿಸ್ ಬ್ಯಾಂಕ್ ಸಿಗ್ನೇಚರ್ ಕ್ರೆಡಿಟ್ ಕಾರ್ಡ್ ಇದು ಜನಪ್ರಿಯ ಲೈಫ್ ಸ್ಟೈಲ್ ಕ್ರೆಡಿಟ್ ಕಾರ್ಡ್ ಆಗಿದೆ.

11. ಪ್ರಿಪೇಡ್ ಕ್ರೆಡಿಟ್ ಕಾರ್ಡ್

11. ಪ್ರಿಪೇಡ್ ಕ್ರೆಡಿಟ್ ಕಾರ್ಡ್

ನಿರ್ದಿಷ್ಟ ಮೊತ್ತದ ಪ್ರಿಪೇಡ್ ಕ್ಯಾಶ್ ಬ್ಯಾಲೆನ್ಸ್ ಇರುವ ಪ್ರಿಪೇಡ್ ಕ್ರೆಡಿಟ್ ಕಾರ್ಡ್‌ಗಳು ಕ್ಯಾಶ್ ರೂಪದಲ್ಲಿ ಹಣ ಪಡೆಯಲು ಸಹಕಾರಿಯಾಗಿವೆ. ಸ್ಥಳೀಯ ಕರೆನ್ಸಿ ಹಾಗೂ ವಿದೇಶಿ ಕರೆನ್ಸಿ ಹೀಗೆ ಎರಡು ವಿಧದಲ್ಲಿ ಈ ಕಾರ್ಡ್‌ಗಳು ಲಭ್ಯವಿವೆ. ನೀವು ಡಿಪಾಸಿಟ್ ಮಾಡಿದ ಹಣವನ್ನೇ ನೀವು ಇದರಿಂದ ಪಡೆಯುವಿರಾದ್ದರಿಂದ ಬಡ್ಡಿ ಕಟ್ಟುವ ಅಥವಾ ಬಾಕಿ ಪಾವತಿ ಮಾಡುವ ರಗಳೆ ಇರುವುದಿಲ್ಲ.

12. ಪ್ರೀಮಿಯಂ ಕ್ರೆಡಿಟ್ ಕಾರ್ಡ್

12. ಪ್ರೀಮಿಯಂ ಕ್ರೆಡಿಟ್ ಕಾರ್ಡ್

ವಿಶೇಷ ಜನರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡುವಂತೆ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳನ್ನು ರೂಪಿಸಲಾಗಿದೆ. ಪ್ರತಿಷ್ಠಿತ ಕ್ಲಬ್‌ಗಳ ಮೆಂಬರ್‌ಶಿಪ್, ವಿಶೇಷ ಸಹಾಯ ಸೇವೆಗಳು, ಡೈನಿಂಗ್ ಸರ್ವಿಸ್ ಮುಂತಾದ ಪ್ರೀಮಿಯಂ ಸರ್ವಿಸ್‌ಗಳನ್ನು ಈ ಕಾರ್ಡ್ ಒದಗಿಸುತ್ತವೆ. ದೊಡ್ಡ ಮೊತ್ತದ ಆದಾಯ ಹೊಂದಿದ್ದು, ಖರ್ಚು ಮಾಡಲು ಯಾವುದೇ ಸಮಸ್ಯೆ ಇರದ ವ್ಯಕ್ತಿಗಳಿಗೆ ಮಾತ್ರ ಈ ಕಾರ್ಡ್ ಸೂಕ್ತ ಎಂಬುದು ಗೊತ್ತಿರಲಿ. ಎಚ್‌ಡಿಎಫ್‌ಸಿ ರೇಗಾಲಿಯಾ ಕ್ರೆಡಿಟ್ ಕಾರ್ಡ್ ಮತ್ತು ಸಿಟಿ ಪ್ರೆಸ್ಟೀಜ್ ಕ್ರೆಡಿಟ್ ಕಾರ್ಡ್ ಅತ್ಯುತ್ತಮ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳಾಗಿವೆ.

13. ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್

13. ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್

ಬ್ಯಾಂಕ್‌ನಲ್ಲಿರುವ ಫಿಕ್ಸೆಡ್ ಡಿಪಾಸಿಟ್ ಮೇಲೆ ನೀಡಲಾಗುವ ಕಾರ್ಡ್‌ಗಳನ್ನು ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಎಂದು ಕರೆಯಲಾಗುತ್ತದೆ. ಡಿಪಾಸಿಟ್ ಮೊತ್ತವನ್ನೇ ಕ್ರೆಡಿಟ್ ಲಿಮಿಟ್ ಆಗಿ ನೀಡಲಾಗುತ್ತದೆ. ಯಾವುದೋ ಕಾರಣಕ್ಕೆ ನಿಮ್ಮ ಕ್ರೆಡಿಟ್ ಹಿಸ್ಟರಿ ಹಾಳಾಗಿ ಕಾರ್ಡ್ ಪಡೆಯಲು ಸಮಸ್ಯೆ ಇದ್ದರೆ ಈ ಕಾರ್ಡ್ ಅನ್ನು ಪಡೆಯಬಹುದು. ಒಂದು ವೇಳೆ ಕಾರ್ಡ್‌ನಿಂದ ಖರ್ಚು ಮಾಡಿದ ಬಾಕಿ ಪಾವತಿ ಮಾಡದಿದ್ದಲ್ಲಿ ಬ್ಯಾಂಕ್ ಎಫ್‌ಡಿ ಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ.

14. ಟ್ರಾವೆಲ್ ಕ್ರೆಡಿಟ್ ಕಾರ್ಡ್ಸ್

14. ಟ್ರಾವೆಲ್ ಕ್ರೆಡಿಟ್ ಕಾರ್ಡ್ಸ್

ಆಗಾಗ ಪ್ರವಾಸ ಕೈಗೊಳ್ಳುವವರಿಗೆ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಅತ್ಯಂತ ಸೂಕ್ತವಾಗಿವೆ. ಏರ್ ಮೈಲ್, ಏರ್‌ಪೋರ್ಟ್ ಲಾಂಜ್‌ಗಳಿಗೆ ಉಚಿತ ಪ್ರವೇಶ, ಲಾಜಿಂಗ್ ಡಿಸ್ಕೌಂಟ್, ಪ್ರವಾಸ ವಿಮೆ ಹೀಗೆ ಹಲವಾರು ಸೌಲಭ್ಯಗಳನ್ನು ಈ ಕಾರ್ಡ್‌ಗಳು ಹೊಂದಿವೆ. ಸಿಟಿ ಬ್ಯಾಂಕ್ ಪ್ರಿಮಿಯರ್ ಮೈಲ್ಸ್ ಕ್ರೆಡಿಟ್ ಕಾರ್ಡ್, ಅಮೆರಿಕನ್ ಎಕ್ಸಪ್ರೆಸ್ ಪ್ಲಾಟಿನಂ ಟ್ರಾವೆಲ್ ಹಾಗೂ ಜೆಟ್ ಪ್ರಿವಿಲೇಜ್ ಎಚ್‌ಡಿಎಫ್‌ಸಿ ಬ್ಯಾಂಕ್ ವರ್ಲ್ಡ್ ಕ್ರೆಡಿಟ್ ಕಾರ್ಡ್‌ಗಳು ಪ್ರಮುಖ ಟ್ರಾವೆಲ್ ಕ್ರೆಡಿಟ್ ಕಾರ್ಡ್‌ಗಳಾಗಿವೆ.

English summary

15 Types of Credit Cards in India and Usage

There are several types of credit cards available in India. benefits and rewards they offered on a specific category and spend requirements.
Story first published: Friday, July 27, 2018, 11:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X