For Quick Alerts
ALLOW NOTIFICATIONS  
For Daily Alerts

2018 ರಲ್ಲಿ ಉದ್ಯೋಗ ಹುಡುಕಲು ದೇಶದ ಉತ್ತಮ ನಗರಗಳು ಯಾವುವು ಗೊತ್ತೆ?

By Siddu
|

ಜೀವನದಲ್ಲಿ ಉದ್ಯೋಗ ಎಂಬುವುದು ಎಲ್ಲರಿಗೂ ಅತಿ ಅಗತ್ಯವಾಗಿದೆ. ಜೀವನದ ಬಂಡಿ ಸಾಗಿಸಲು ಅಷ್ಟೇ ಅಲ್ಲದೆ ನೆಮ್ಮದಿಯ ಬದುಕಿಗೆ ಸೂಕ್ತ ಉದ್ಯೋಗ ಬೇಕು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ನಮಗೆ ಹೊಂದುವಂತಹ ಸೂಕ್ತ ನೌಕರಿ ಹುಡುಕುವುದು ಅಂದುಕೊಂಡಷ್ಟು ಸುಲಭವಲ್ಲ.

ಅತೀ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಎಲ್ಲರ ನೆಚ್ಚಿನ 10 ಉದ್ಯಮಗಳು

1. ಬೆಂಗಳೂರು
 

1. ಬೆಂಗಳೂರು

ನೈಸರ್ಗಿಕವಾಗಿ ಸುಂದರವಾಗಿರುವ ಹಾಗೂ ಉದ್ಯಾನಗಳ ನಗರ ಎಂದು ಹೆಸರು ಮಾಡಿರುವ ಬೆಂಗಳೂರು ಮಹಾನಗರದಲ್ಲಿ ಉದ್ಯೋಗ ಮಾಡುತ್ತೇನೆ ಎನ್ನುವವರಿಗೆ ಸಾಕಷ್ಟು ಅವಕಾಶಗಳಿವೆ. ಉದ್ಯೋಗ ವಲಯದ ಹೆಸರಾಂತ ಜಾಲತಾಣ Payscale.com ವರದಿಯ ಪ್ರಕಾರ ಬೆಂಗಳೂರಿನಲ್ಲಿ ಸರಾಸರಿ ಸಂಬಳದ ಪ್ರಮಾಣ 5,85,527 ರೂಪಾಯಿ ಹಾಗೂ ಬೆಳವಣಿಗೆ ದರ ಶೇ. 29ರಷ್ಟಿದೆ. ತನ್ನಲ್ಲಿರುವ ಸಾವಿರಾರು ಐಟಿ ಕಂಪನಿಗಳಿಂದ ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿರುವ ಬೆಂಗಳೂರು, ಶೇ. 25ರಷ್ಟು ಎಂಜಿನೀಯರಿಂಗ್ ಪದವೀಧರರ ಮೊದಲ ಆಯ್ಕೆಯಾಗಿದೆ. ಮಾತೃಶ್ರೀ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ ಹಾಗು ಬೇಕಾಗುವ ದಾಖಲಾತಿಗಳೇನು?

2. ಮುಂಬೈ

ಕನಸುಗಳನ್ನು ಸಾಕಾರಗೊಳಿಸುವ ನಗರವಾಗಿ ಹೆಸರು ಪಡೆದಿರುವ ಮುಂಬೈ ಮಹಾನಗರಿ ವಿಭಿನ್ನ ರೀತಿಯ ಉದ್ಯೋಗವಕಾಶಗಳನ್ನು ಯಾವಾಗಲೂ ಸೃಷ್ಟಿಸುತ್ತ, ಹೊಸಬರಿಗೆ ಆಶಾಕಿರಣವಾಗಿದೆ. ಮುಂಬೈನಲ್ಲಿ ಸರಾಸರಿ ವಾರ್ಷಿಕ ಸಂಬಳ 4,98,475 ರೂಪಾಯಿಗಳಾಗಿದ್ದು, ತಲಾ ಆದಾಯ 1,25,749 ರೂಪಾಯಿಗಳಾಗಿದೆ. ಇಲ್ಲಿ ಮನೆ ಬಾಡಿಗೆ ದರ ದುಬಾರಿ ಆಗಿದ್ದರೂ ಗಳಿಕೆಗೆ ಅಷ್ಟೇ ಹೇರಳ ಅವಕಾಶಗಳೂ ಇವೆ.

3. ದೆಹಲಿ

ಹೊಸದಾಗಿ ಉದ್ಯೋಗ ಆರಂಭಿಸಿ ಜೀವನ ಕಟ್ಟಿಕೊಳ್ಳಬಯಸುವವರಿಗೆ ದೆಹಲಿ ಆಕರ್ಷಕವಾಗಿದ್ದು, ಇಲ್ಲಿ ಸರಾಸರಿ ವಾರ್ಷಿಕ ರೂ. 4,82,307 ಸಂಬಳ ಪಡೆಯುವ ಸಾಧ್ಯತೆಗಳಿವೆ. ಎಎಂಆರ್‌ಸಿ ಅಧ್ಯಯನದ ಪ್ರಕಾರ ಶೇ. 32ರಷ್ಟು ಉದ್ಯೋಗಾಕಾಂಕ್ಷಿಗಳು ದೆಹಲಿ ಮಹಾನಗರ ತಮ್ಮ ಮೊದಲ ಆಯ್ಕೆಯಾಗಿದೆ ಎಂದು ಹೇಳಿದ್ದು ಕಂಡು ಬಂದಿದೆ.

4. ಪುಣೆ
 

4. ಪುಣೆ

ಇನ್ಫರ್ಮೇಶನ್ ಟೆಕ್ನಾಲಜಿ, ಅಟೊಮೊಬೈಲ್ ಹಾಗೂ ಉತ್ಪಾದನಾ ಉದ್ದಿಮೆಗಳ ಸಂಗಮವಾಗಿರುವ ಪುಣೆ ದೇಶದ ಮತ್ತೊಂದು ಬೃಹತ್ ಉದ್ಯೋಗವಕಾಶಗಳ ನಗರವಾಗಿದೆ. ಸರಾಸರಿ ವಾರ್ಷಿಕ 5,30,918 ರೂಪಾಯಿ ಸಂಬಳ ಪಡೆಯುವ ಸಾಧ್ಯತೆ ಇರುವ ಇದು ಹೊಸಬರಿಗೂ ಅವಕಾಶಗಳ ಆಗರವಾಗಿದೆ.

5. ಚೆನ್ನೈ

ಅಟೊಮೊಬೈಲ್ ಉದ್ದಿಮೆಯ ರಾಜಧಾನಿ ಎಂದು ಕರೆಸಿಕೊಳ್ಳುವ ಚೆನ್ನೈ, ಹಲವಾರು ದಕ್ಷಿಣ ಭಾರತದ ಕಂಪನಿಗಳ ಪ್ರಮುಖ ಕೇಂದ್ರವಾಗಿದೆ. ಸಮತೋಲಿತ ಬಜೆಟ್ ನಲ್ಲಿ ಜೀವನ ಸಾಗಿಸಬಹುದಾದ ಉತ್ತಮ ನಗರಗಳಲ್ಲಿ ಚೆನ್ನೈ ಒಂದಾಗಿದೆ. ವಾರ್ಷಿಕವಾಗಿ ಸರಾಸರಿ 4,44,235 ರೂಪಾಯಿಗಳಷ್ಟು ಸಂಬಳ ಪಡೆಯಬಹುದಾದ ಹಾಗೂ ಶೇ. 6ರಷ್ಟು ಉದ್ಯೋಗದಲ್ಲಿ ಬೆಳವಣಿಗೆ ಹೊಂದಿರುವ ನಗರ ಇದಾಗಿದೆ.

6. ಹೈದರಾಬಾದ್

ಮುತ್ತುಗಳ ನಗರಿ ಹೈದರಾಬಾದ್ ತನ್ನಲ್ಲಿನ ವಿಶಿಷ್ಟ ಪುರಾತನ ಸ್ಮಾರಕಗಳಿಂದಲೂ ಹೆಸರಾಗಿದೆ. ಈ ಮಹಾನಗರದಲ್ಲಿ ಜಗತ್ತಿನ ಬೃಹತ್ ಕಂಪನಿಗಳಾದ ಗೂಗಲ್, ಫೇಸ್ ಬುಕ್ ಮತ್ತು ಮೈಕ್ರೊಸಾಫ್ಟ್ ಕಚೇರಿಗಳೂ ಇವೆ ಎಂಬುದನ್ನು ತಿಳಿದರೆ ಆಶ್ಚರ್ಯವಾಗುತ್ತದೆ. ವಾರ್ಷಿಕ ಸರಾಸರಿ 4,89,505 ರೂಪಾಯಿ ಸಂಬಳ ನೀಡುವ ಇದು ದೇಶದ ಶೇ. 30ರಷ್ಟು ಜನರ ಮೆಚ್ಚಿನ ಆಯ್ಕೆಯಾಗಿದೆ.

7. ಚಂಡೀಗಢ

ಸುಂದರ ನಗರವಾಗಿ ಕರೆಸಿಕೊಳ್ಳುವ ಚಂಡೀಗಢ ವಾಸಿಸಲು ಅತ್ಯಂತ ಮಧುರವಾದ ನಗರವಾಗಿದೆ. ಹೊಸದಾಗಿ ನೌಕರಿ ಜೀವನ ಆರಂಭಿಸಲು ಈ ನಗರ ಸೂಕ್ತವಾಗಿದೆ. ಟೆಲಿಕಮ್ಯುನಿಕೇಶನ್ ಕ್ಷೇತ್ರದ ಹಲವಾರು ಕಂಪನಿಗಳನ್ನು ಹೊಂದಿರುವ ಇಲ್ಲಿ ವಾರ್ಷಿಕ ಸರಾಸರಿ 5,52,485 ರೂಪಾಯಿ ಸಂಬಳ ಪಡೆಯುವ ಅವಕಾಶವಿದೆ. ಇಲ್ಲಿನ ಶೇ. 22ರಷ್ಟು ಜನ ವರ್ಷಕ್ಕೆ 10 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಗಳಿಸುವುದು ವಿಶೇಷವಾಗಿದೆ. ಉತ್ತಮ ಜೀವನ ಸೇರಿದಂತೆ ಒಳ್ಳೆಯ ಉದ್ಯೋಗ ಭವಿಷ್ಯವನ್ನು ಚಂಡೀಗಢ ನೀಡುತ್ತದೆ.

8. ಗುರುಗ್ರಾಮ

ಈ ಮುಂಚೆ ಗುರಗಾಂವ್ ಎಂದು ಕರೆಯಲ್ಪಡುತ್ತಿದ್ದ ಹರಿಯಾಣಾ ರಾಜ್ಯದ ಪ್ರಮುಖ ನಗರ ಗುರುಗ್ರಾಮ ಉದ್ಯೋಗಾವಕಾಶಗಳಿಗೆ ಹೆಸರಾಗಿದೆ. ಇಲ್ಲಿ ಶೇ.11ರಷ್ಟು ಉದ್ಯೋಗ ಬೆಳವಣಿಗೆಯ ಅವಕಾಶಗಳಿವೆ. ಇಲ್ಲಿ ಕೆಲಸ ಮಾಡುವ ಶೇ. 59 ರಷ್ಟು ಉದ್ಯೋಗಿಗಳು ವರ್ಷಕ್ಕೆ ೩ ರಿಂದ ೧೦ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದು, ಕೆಲಸದಲ್ಲಿ ಉನ್ನತಿ ಹೊಂದುವ ಅವಕಾಶಗಳು ಹೇರಳವಾಗಿವೆ. ಗುರುಗ್ರಾಮನಲ್ಲಿ ವಾರ್ಷಿಕ ಸರಾಸರಿ ಸಂಬಳ 7,50,000 ರೂಪಾಯಿಗಳಾಗಿದೆ.

ನೀವು ಕೆಲಸದ ಹುಡುಕಾಟದಲ್ಲಿದ್ದರೆ ಮೇಲೆ ತಿಳಿಸಿದ ಪ್ರಮುಖ ನಗರಗಳು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಬಲ್ಲವು.

English summary

Best Indian Cities for Finding Jobs in 2018

The perfect option for you to bag a job would be in a city that provides number of job opportunities, proper work and life balance along with an appropriate amount of salary and growth.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more