For Quick Alerts
ALLOW NOTIFICATIONS  
For Daily Alerts

ಅಂಚೆ ಇಲಾಖೆಯ ಈ ಉಳಿತಾಯ ಯೋಜನೆಗಳಲ್ಲಿ ಶೇ. 8ಕ್ಕಿಂತ ಹೆಚ್ಚು ಬಡ್ಡಿದರ ಸಿಗುತ್ತದೆ..

ಉಳಿತಾಯ ಮಾಡಿದ ಹಣವನ್ನು ಸೂಕ್ತ ಯೋಜನೆಗಳಲ್ಲಿ ತೊಡಗಿಸಿ ಅದಕ್ಕೆ ಹೆಚ್ಚಿನ ಬಡ್ಡಿ ಸಿಗುವಂತೆ ನೋಡಿಕೊಳ್ಳುವುದು ಹಣಕಾಸು ನಿರ್ವಹಣೆಯ ಒಂದು ಭಾಗವಾಗಿದೆ. ಆದರೆ ಉಳಿತಾಯದ ಹಣಕ್ಕೆ ಭದ್ರತೆಯೂ ಅತಿ ಮುಖ್ಯ.

By Siddu
|

ಉಳಿತಾಯ ಮಾಡಿದ ಹಣವನ್ನು ಸೂಕ್ತ ಯೋಜನೆಗಳಲ್ಲಿ ತೊಡಗಿಸಿ ಅದಕ್ಕೆ ಹೆಚ್ಚಿನ ಬಡ್ಡಿ ಸಿಗುವಂತೆ ನೋಡಿಕೊಳ್ಳುವುದು ಹಣಕಾಸು ನಿರ್ವಹಣೆಯ ಒಂದು ಭಾಗವಾಗಿದೆ. ಆದರೆ ಉಳಿತಾಯದ ಹಣಕ್ಕೆ ಭದ್ರತೆಯೂ ಅತಿ ಮುಖ್ಯ. ಪ್ರಸ್ತುತ ದೇಶದಲ್ಲಿ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಹೂಡಿದ ಹಣಕ್ಕೆ ಉತ್ತಮ ಪ್ರತಿಫಲ ನೀಡುವುದರೊಂದಿಗೆ, ಭದ್ರತೆಯನ್ನು ಸಹ ಕಲ್ಪಿಸುತ್ತವೆ. ಅಂಚೆ ಇಲಾಖೆಯ ೯ ರೀತಿಯ ವಿವಿಧ ಉಳಿತಾಯ ಯೋಜನೆಗಳು ಒಳ್ಳೆಯ ಬಡ್ಡಿದರ ನೀಡುತ್ತಿದ್ದು, ಹಣ ಹೂಡಲು ಪ್ರಶಸ್ತವಾಗಿವೆ.

9 ಯೋಜನೆಗಳ ಪೈಕಿ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಕ್ರಮವಾಗಿ ವಾರ್ಷಿಕ ಶೇ.8.3 ಹಾಗೂ ಶೇ. 8.1ರಷ್ಟು ಬಡ್ಡಿದರ ಹೊಂದಿವೆ. ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಲಾಗಿದೆ. ಇನ್ನು 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಹೆಚ್ಚು ಬಡ್ಡಿ ನೀಡುವ ಹಿರಿಯ ನಾಗರಿಕರ ಉಳಿತಾಯ ಯೋಜನೆ ಜಾರಿಯಲ್ಲಿದೆ. ಈ ಎರಡು ಪ್ರಮುಖ ಯೋಜನೆಗಳ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ ಬನ್ನಿ.. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ

1. ಹೆಣ್ಣುಮಕ್ಕಳಿಗಾಗಿ ಈ ಯೋಜನೆ

ವಿಶೇಷವಾಗಿ ಹೆಣ್ಣು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಜನೇವರಿ ೨೦೧೫ ರಲ್ಲಿ ಈ ಯೋಜನೆಯನ್ನು ಆರಂಭಿಸಿತು. ಸರಕಾರಿ ಪ್ರಾಯೋಜಿತ ಈ ಯೋಜನೆಯು ಹೆಣ್ಣುಮಕ್ಕಳ ಭವಿಷ್ಯದಲ್ಲಿ ವಿದ್ಯಾಭ್ಯಾಸ ಹಾಗೂ ವಿವಾಹಕ್ಕಾಗಿ ಹಣ ಹೊಂದಿಸಲು ಸಹಕಾರಿಯಾಗುವಂತೆ ರೂಪಿಸಲಾಗಿದೆ. ಹೆಚ್ಚಿನ ಬಡ್ಡಿದರದೊಂದಿಗೆ ಈ ಯೋಜನೆ ಹೆಣ್ಣು ಮಕ್ಕಳ ಪಾಲಕರಿಗೆ ತೆರಿಗೆ ವಿನಾಯಿತಿ ಸೌಲಭ್ಯವನ್ನು ಸಹ ನೀಡುತ್ತದೆ. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

೨. ಒಂದು ಮಗುವಿಗೆ ಒಂದೇ ಖಾತೆ

೨. ಒಂದು ಮಗುವಿಗೆ ಒಂದೇ ಖಾತೆ

ಹೆಣ್ಣು ಮಕ್ಕಳ ಪಾಲಕರು ಅಥವಾ ಅಧಿಕೃತ ಪೋಷಕರು ಹೆಣ್ಣು ಮಗುವಿನ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಅಕೌಂಟ್ ತೆರೆಯಬಹುದು. ಮಗು ಹುಟ್ಟಿದ ದಿನದಿಂದ ಮಗುವಿಗೆ ೧೦ ವರ್ಷ ಆಗುವವರೆಗಿನ ಅವಧಿಯಲ್ಲಿ ಈ ಖಾತೆ ಆರಂಭಿಸಬಹುದು. ಒಂದು ಮಗುವಿಗೆ ಒಂದೇ ಖಾತೆ ತೆರೆಯಲು ಅವಕಾಶವಿದ್ದು, ಪಾಲಕರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಖಾತೆ ಹೊಂದಬಹುದಾಗಿದೆ.

೩. ಹೂಡಿಕೆ ಪ್ರಮಾಣ
 

೩. ಹೂಡಿಕೆ ಪ್ರಮಾಣ

ಪ್ರತಿ ವರ್ಷ ಕನಿಷ್ಠ 1 ಸಾವಿರ ರೂಪಾಯಿ ಹೂಡಿಕೆ ಮಾಡಬೇಕು ಹಾಗೂ ಗರಿಷ್ಠ ವರ್ಷಕ್ಕೆ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಹಣ ಹೂಡಿಕೆ ಮಾಡಬಹುದು. ಆದರೆ ಕನಿಷ್ಠ ಹಾಗೂ ಗರಿಷ್ಠ ಮಿತಿಯನ್ನು ಪಾಲಿಸುವುದು ಅಗತ್ಯ.

೪. ೧೪ ವರ್ಷಗಳವರೆಗೆ ಹೂಡಿಕೆ

೪. ೧೪ ವರ್ಷಗಳವರೆಗೆ ಹೂಡಿಕೆ

ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಿದ ದಿನದಿಂದ 14 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದ್ದು, ಇದರ ನಂತರ ನಿರ್ದಿಷ್ಟ ಪಡಿಸಿದ ಬಡ್ಡಿ ದರದಂತೆ ಬಡ್ಡಿಯು ಖಾತೆಗೆ ಜಮೆಯಾಗುತ್ತ ಹೋಗುತ್ತದೆ.

೫. ೨೧ ವರ್ಷಗಳ ನಂತರ ಖಾತೆ ಮುಕ್ತಾಯ

೫. ೨೧ ವರ್ಷಗಳ ನಂತರ ಖಾತೆ ಮುಕ್ತಾಯ

ಖಾತೆ ಆರಂಭಿಸಿದ 21 ವರ್ಷಗಳ ನಂತರ ಖಾತೆಯನ್ನು ಮುಕ್ತಾಯಗೊಳಿಸಲಾಗುತ್ತದೆ. ಆದರೆ ೨೧ ವರ್ಷದೊಳಗೆ ಮಗು ಮದುವೆಯಾದರೆ ಅಲ್ಲಿಗೆ ಖಾತೆ ಬಂದ್ ಮಾಡಲಾಗುತ್ತದೆ. ಅಂದರೆ ಮದುವೆಯ ನಂತರ ಸುಕನ್ಯಾ ಸಮೃದ್ಧಿ ಅಕೌಂಟ್ ಮುಂದುವರಿಸಲು ಅವಕಾಶವಿಲ್ಲ.

೬. ತ್ರೈಮಾಸಿಕಕ್ಕನುಗುಣವಾಗಿ ಬಡ್ಡಿ ದರ

೬. ತ್ರೈಮಾಸಿಕಕ್ಕನುಗುಣವಾಗಿ ಬಡ್ಡಿ ದರ

ಪ್ರತಿ ತ್ರೈಮಾಸಿಕ ಯೋಜನೆಯ ಬಡ್ಡಿ ದರಗಳನ್ನು ಸರಕಾರ ಪರಿಷ್ಕರಿಸುತ್ತದೆ. ಹಣಕಾಸು ಸಚಿವಾಲಯ ಪ್ರಕಟಣೆಯ ಮೂಲಕ ಬಡ್ಡಿ ದರ ಪರಿಷ್ಕರಣೆಯನ್ನು ಸಾರ್ವಜನಿಕರಿಗೆ ತಿಳಿಸುತ್ತದೆ.

೭. ಖಾತೆ ನಿಷ್ಕ್ರಿಯ

೭. ಖಾತೆ ನಿಷ್ಕ್ರಿಯ

ಯಾವುದೇ ಒಂದು ವರ್ಷದಲ್ಲಿ ಕನಿಷ್ಠ ೧ ಸಾವಿರ ರೂಪಾಯಿ ವಂತಿಗೆ ತುಂಬದೇ ಹೋದಲ್ಲಿ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೂ ದಂಡ ಭರಿಸುವ ಮೂಲಕ ಮತ್ತೆ ಖಾತೆಯನ್ನು ಚಾಲ್ತಿಗೊಳಿಸಲು ಅವಕಾಶವಿದೆ. ವರ್ಷಕ್ಕೆ ೫೦ ರೂಪಾಯಿ ದಂಡ ಹಾಗೂ ಬಾಕಿ ಇರುವ ವರ್ಷಗಳ ಕನಿಷ್ಠ ಮೊತ್ತವನ್ನು ಪಾವತಿಸಿ ಖಾತೆಯನ್ನು ಪುನಾರಂಭಿಸಬಹುದು.

೮. ಸಾಲ ಸೌಲಭ್ಯವಿಲ್ಲ

೮. ಸಾಲ ಸೌಲಭ್ಯವಿಲ್ಲ

ಸುಕನ್ಯಾ ಸಮೃದ್ಧಿ ಖಾತೆಯ ಮೇಲೆ ಸಾಲ ಪಡೆಯುವಂತಿಲ್ಲ.
ಮಗುವಿಗೆ ೧೮ ವರ್ಷ ತುಂಬಿದ ನಂತರ ಅವಧಿಪೂರ್ವ ಖಾತೆ ಬಂದ್ ಮಾಡಬಹುದಾಗಿದೆ. ಈ ರೀತಿ ಮಾಡುವಾಗ ಕಳೆದ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಜಮೆಯಾಗಿರುವ ಒಟ್ಟು ಮೊತ್ತದ ಶೇ.೫೦ ರಷ್ಟನ್ನು ಮಾತ್ರ ಹಿಂಪಡೆಯಬಹುದು.

೯. ತೆರಿಗೆ ವಿನಾಯಿತಿ

೯. ತೆರಿಗೆ ವಿನಾಯಿತಿ

ವರ್ಷಕ್ಕೆ ಈ ಯೋಜನೆಯಲ್ಲಿ ತೊಡಗಿಸುವ ಗರಿಷ್ಠ ೧.೫ ಲಕ್ಷ ರೂಪಾಯಿಗಳಿಗೆ ಆದಾಯ ತೆರಿಗೆ ಕಾಯ್ದೆ ೧೯೬೧ ರ ಪ್ರಕಾರ ತೆರಿಗೆ ವಿನಾಯಿತಿ ಲಭಿಸುತ್ತದೆ. ಅಲ್ಲದೆ ಕೊನೆಯಲ್ಲಿ ಸಿಗುವ ಪಕ್ವ ಮೊತ್ತ ಸಹ ತೆರಿಗೆಯಿಂದ ಮುಕ್ತವಾಗಿರುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ

60 ಅಥವಾ ಅದಕ್ಕೂ ಮೇಲ್ಪಟ್ಟ ನಾಗರಿಕರು ಹಿರಿಯ ನಾಗರಿಕರ ಉಳಿತಾಯ ಖಾತೆ ಆರಂಭಿಸಬಹುದು. ಸೇವಾ ಅವಧಿ ವಿಸ್ತರಣೆ ಪಡೆದ ಅಥವಾ ವಿಆರ್‌ಎಸ್ ಪಡೆದಿರುವ ೫೫ ರಿಂದ ೬೦ ವರ್ಷದೊಳಗಿನವರು ಸಹ ಈ ಖಾತೆ ತೆರೆಯಲು ಅರ್ಹರಾಗಿರುತ್ತಾರೆ. ನಿವೃತ್ತಿಯ ನಂತರದ ಸೌಲಭ್ಯಗಳನ್ನು ಪಡೆದ ಒಂದು ತಿಂಗಳೊಳಗೆ ಖಾತೆ ಆರಂಭಿಸಬೇಕು ಹಾಗೂ ಖಾತೆಯಲ್ಲಿನ ಮೊತ್ತ ನಿವೃತ್ತಿಯ ನಂತರ ಬಂದ ಮೊತ್ತವನ್ನು ಮೀರಕೂಡದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಅವಧಿ ೫ ವರ್ಷ

ಅವಧಿ ೫ ವರ್ಷ

ಈ ಯೋಜನೆಯ ಅವಧಿ ೫ ವರ್ಷಗಳಾಗಿದ್ದು, ೫ ವರ್ಷಗಳ ನಂತರ ಅರ್ಜಿ ಸಲ್ಲಿಸುವ ಮೂಲಕ ಮತ್ತೆ ೩ ವರ್ಷಗಳವರೆಗೆ ವಿಸ್ತರಿಸಿಕೊಳ್ಳಬಹುದು. ಆದರೆ ಯೋಜನೆ ಪಕ್ವವಾದ ೧ ವರ್ಷದಲ್ಲಿ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು. ಖಾತೆಯನ್ನು ವಿಸ್ತರಿಸಿಕೊಂಡ ಒಂದು ವರ್ಷದ ನಂತರ ಯಾವಾಗ ಬೇಕಾದರೂ ಖಾತೆಯನ್ನು ನಿಲ್ಲಿಸಬಹುದು. ಇದಕ್ಕೆ ಯಾವುದೇ ಹಣ ಕಡಿತ ಮಾಡುವುದಿಲ್ಲ ಎಂದು ಅಂಚೆ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಗರಿಷ್ಠ ಹೂಡಿಕೆ

ಗರಿಷ್ಠ ಹೂಡಿಕೆ

ಹಿರಿಯ ನಾಗರಿಕರ ಉಳಿತಾಯ ಖಾತೆಯಲ್ಲಿ ಗರಿಷ್ಠ ೧೫ ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ.

English summary

Post office savings plans: Earn over 8% interest in these schemes

two schemes- Sukanya Samriddhi and Senior Citizen Savings scheme - offer 8.3 per cent and 8.1 per cent interest per annum respectively.
Story first published: Wednesday, July 4, 2018, 10:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X