For Quick Alerts
ALLOW NOTIFICATIONS  
For Daily Alerts

ಸುಕನ್ಯಾ ಸಮೃದ್ಧಿ ಯೋಜನೆ: ಸಿಹಿಸುದ್ದಿ ವಾರ್ಷಿಕ ಕನಿಷ್ಠ ಠೇವಣಿ ಇಳಿಕೆ

ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಗಳಲ್ಲಿ ಜಮಾ ಮಾಡಬೇಕಿದ್ದ ವಾಷಿಕ ಠೇವಣಿ ಮೊತ್ತವನ್ನು ರೂ. 1000 ದಿಂದ ರೂ. 250ಕ್ಕೆ ಇಳಿಸಲಾಗಿದೆ. ಈ ಬದಲಾವಣೆಯಿಂದ ಸುಕನ್ಯಾ ಸಮೃದ್ದಿ ಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಲಿದೆ.

By Siddu
|

ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚಿನವರ ನೆಚ್ಚಿನ ಯೋಜನೆಯಾಗಿದೆ. ಅತಿಹೆಚ್ಚು ಬಡ್ಡಿದರ ನೀಡುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ದಿ ಖಾತೆ ಮುಂಚೂಣಿಯಲ್ಲಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯ ಕನಿಷ್ಠ ಠೇವಣಿ ಮೊತ್ತವನ್ನು ಇಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

ರೂ. 250ಕ್ಕೆ ಇಳಿಕೆ

ರೂ. 250ಕ್ಕೆ ಇಳಿಕೆ

ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಗಳಲ್ಲಿ ಜಮಾ ಮಾಡಬೇಕಿದ್ದ ವಾಷಿಕ ಠೇವಣಿ ಮೊತ್ತವನ್ನು ರೂ. 1000 ದಿಂದ ರೂ. 250ಕ್ಕೆ ಇಳಿಸಲಾಗಿದೆ. ಈ ಬದಲಾವಣೆಯಿಂದ ಸುಕನ್ಯಾ ಸಮೃದ್ದಿ ಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಲಿದೆ. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ವಾರ್ಷಿಕ ಬಡ್ಡಿದರ

ವಾರ್ಷಿಕ ಬಡ್ಡಿದರ

ಸುಕನ್ಯಾ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿದರವನ್ನು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.8.1 ನಿಗದಿಪಡಿಸಲಾಗಿದೆ. ವಾರ್ಷಿಕ ಆಧಾರದ ಮೇಲೆ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ತ್ರೈಮಾಸಿಕ ಅವಧಿಗೆ ಬಡ್ಡಿದರ ಪರಿಷ್ಕರಿಸಲಾಗುತ್ತದೆ. ಸಣ್ಣ ಉಳಿತಾಯ ಖಾತೆಗಳಿಗೆ ಬಡ್ಡಿದರ ನೀಡುತ್ತಿದ್ದಂತೆ ಸುಕನ್ಯಾ ಸಮೃದ್ದಿ ಖಾತೆಗಳಿಗೂ ಬಡ್ಡಿದರ ನೀಡುತ್ತದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಖಾತೆ ತೆರೆಯುವ ಮಾನದಂಡ

ಖಾತೆ ತೆರೆಯುವ ಮಾನದಂಡ

ಹತ್ತು ವರ್ಷದ ಒಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೆಣ್ಣು ಮಗುವಿಗೆ ೧೮ ವರ್ಷಗಳು ತುಂಬಿದ ನಂತರ ಹಣ ಹಿಂಪಡೆಯಬಹದು.

ಖಾತೆ ಎಲ್ಲಿ ತೆರೆಯಬಹುದು?

ಖಾತೆ ಎಲ್ಲಿ ತೆರೆಯಬಹುದು?

ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳನ್ನು ಯಾವುದೇ ಅಂಚೆ ಕಛೇರಿ ಶಾಖೆಗಳಲ್ಲಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತೆರೆಯಬಹುದು.

ಬ್ಯಾಂಕುಗಳ ಪಟ್ಟಿ

ಬ್ಯಾಂಕುಗಳ ಪಟ್ಟಿ

​​ಸರ್ಕಾರಿ ಅಧಿಸೂಚನೆ ಪ್ರಕಾರ ಈ ಯೋಜನೆಯ ಅಡಿಯಲ್ಲಿ ಖಾತೆಗಳನ್ನು ತೆರೆಯಲು ಅಧಿಕಾರ ಪಡೆದ ಬ್ಯಾಂಕುಗಳೆಂದರೆ:
ಎಸ್ಬಿಐ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ವಿಜಯಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ದೇನಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಬರೋಡಾ, ಆಕ್ಸಿಸ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್

ತೆರಿಗೆ ವಿನಾಯತಿ

ತೆರಿಗೆ ವಿನಾಯತಿ

ಸುಕಾನ್ಯ ಸಮೃದ್ಧಿ ಯೋಜನೆಯ ಶ್ರೇಷ್ಠ ಅನುಕೂಲವೆಂದರೆ ತೆರಿಗೆ ವಿನಾಯತಿ ಇರುವುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಮಾಡಲಾಗುತ್ತದೆ. ಖಾತೆಯ ಜಮೆ ಮಾಡಿದ ಒಟ್ಟು ಹಣ ಮತ್ತು ಪರಿಪಕ್ವ ಮೊತ್ತ ತೆರಿಗೆ ವಿನಾಯತಿ ಹೊಂದಿರುತ್ತದೆ.

ಖಾತೆಯ ವ್ಯಾಲಿಡಿಟಿ

ಖಾತೆಯ ವ್ಯಾಲಿಡಿಟಿ

ಸುಕನ್ಯಾ ಸಮೃದ್ಧಿ ಖಾತೆ ತೆರೆದ ಆರಂಭಿಕ ದಿನಾಂಕದಿಂದ 21 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ತದನಂತರ ಒಟ್ಟು ಮೊತ್ತವನ್ನು ಮಗುವಿಗೆ ಪಾವತಿಸಲಾಗುವುದು. ಹೆಣ್ಣು ಮಗುವಿಗೆ ೧೮ ವರ್ಷಗಳು ತುಂಬಿದ ನಂತರ ಹಣ ಹಿಂಪಡೆಯಬಹದು.

ಖಾತೆ ಮುಚ್ಚಲ್ಪಡುವುದು

ಖಾತೆ ಮುಚ್ಚಲ್ಪಡುವುದು

21 ವರ್ಷದ ಅವಧಿ ಮುಗಿಯುವ ಮುನ್ನ ಹೆಣ್ಣು ಮಗು ಮದುವೆಯಾದರೆ ಸುಕನ್ಯಾ ಸಮೃದ್ಧಿ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.

ಠೇವಣಿ ಅವಧಿ

ಠೇವಣಿ ಅವಧಿ

ಸುಕನ್ಯಾ ಸಮೃದ್ಧಿಯಡಿ ಖಾತೆಯನ್ನು ತೆರೆದ ದಿನಾಂಕದಿಂದ 14 ವರ್ಷಗಳವರೆಗೆ ಠೇವಣಿಗಳನ್ನು ಇಡಬಹುದಾಗಿದೆ. ಈ ಅವಧಿಯ ನಂತರ ಖಾತೆಯು ಅನ್ವಯವಾಗುವ ದರಗಳ ಪ್ರಕಾರ ಬಡ್ಡಿಯನ್ನು ಮಾತ್ರ ಪಡೆಯುತ್ತದೆ.

ಗರಿಷ್ಠ ಠೇವಣಿ

ಗರಿಷ್ಠ ಠೇವಣಿ

ಸುಕನ್ಯಾ ಸಮೃದ್ಧಿ ಅಡಿಯಲ್ಲಿ ವಾರ್ಷಿಕವಾಗಿ ಗರಿಷ್ಠ ಠೇವಣಿ ರೂ. 1,50,000 ಇಡಬಹುದಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸುಕಾನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ, ಪೋಷಕರು ಅಥವಾ ಕಾನೂನುಬದ್ಧ ಪೋಷಕರು 10 ವರ್ಷ ವಯಸ್ಸಿನೊಳಗಿನ ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.

English summary

Sukanya Samriddhi Yojana: Minimum Annual Deposit Slashed To Rs. 250

The minimum deposit for government-backed small savings scheme for the girl child, Sukanya Samriddhi, has been slashed to Rs. 250 from Rs. 1,000.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X