For Quick Alerts
ALLOW NOTIFICATIONS  
For Daily Alerts

ಹಣಕಾಸು ವಿಚಾರದಲ್ಲಿ ಪ್ರತಿಯೊಬ್ಬರೂ ಮಾಡುವ ಸಾಮಾನ್ಯ ತಪ್ಪುಗಳೇನು ಗೊತ್ತೆ?

೨೦ ರ ನಂತರದ ವಯೋಮಾನದಲ್ಲಿ ವೃತ್ತಿ ಆರಂಭಿಸುವ ಬಹುತೇಕ ಯುವಜನರು, ತಮ್ಮ ವೃತ್ತಿಜೀವನ ಇದೀಗ ತಾನೆ ಆರಂಭವಾಗಿದ್ದು ಹಣಕಾಸು ಯೋಜನೆ ತಯಾರಿಸಲು ಅಥವಾ ಅದರ ಬಗ್ಗೆ ವಿಚಾರ ಮಾಡಲು ತಾವಿನ್ನೂ ತುಂಬಾ ಚಿಕ್ಕವರು ಎಂಬ ಭಾವನೆಯನ್ನು ಹೊಂದಿರುತ್ತಾರೆ.

By Siddu
|

ಜೀವನದುದ್ದಕ್ಕೂ ಹಣಕಾಸು ಪರಿಸ್ಥಿತಿ ಉತ್ತಮವಾಗಿರುವಂತೆ ನೋಡಿಕೊಳ್ಳುವುದು ನೆಮ್ಮದಿಯ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಹಣಕಾಸು ಭದ್ರತೆಗೆ ಮೊದಲ ಅಡಿಪಾಯ ಹಾಕಲು ಯೌವನವೇ ಸರಿಯಾದ ಸಮಯವಾಗಿದೆ ಎಂಬುದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ. ಆದರೆ ಬಹುತೇಕ ಯುವಜನತೆ ತಮ್ಮ ಹಣಕಾಸು ನಿರ್ವಹಣೆಯ ಬಗ್ಗೆ ಬೇಕಾದಷ್ಟು ಗಮನ ನೀಡುವುದಿಲ್ಲ ಎಂಬುದು ದುರದೃಷ್ಟಕರವಾಗಿದೆ.

 

20 ರ ನಂತರದ ವಯೋಮಾನದಲ್ಲಿ ವೃತ್ತಿ ಆರಂಭಿಸುವ ಬಹುತೇಕ ಯುವಜನರು, ತಮ್ಮ ವೃತ್ತಿಜೀವನ ಇದೀಗ ತಾನೆ ಆರಂಭವಾಗಿದ್ದು ಹಣಕಾಸು ಯೋಜನೆ ತಯಾರಿಸಲು ಅಥವಾ ಅದರ ಬಗ್ಗೆ ವಿಚಾರ ಮಾಡಲು ತಾವಿನ್ನೂ ತುಂಬಾ ಚಿಕ್ಕವರು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಯುವಕರ ಈ ಭಾವನೆಯಿಂದ ಭವಿಷ್ಯದ ಜೀವನದಲ್ಲಿ ಅವರ ಹಣಕಾಸು ಪರಿಸ್ಥಿತಿ ಏರಿಳಿತದಿಂದ ಕೂಡಿರುವಂತಾಗುತ್ತದೆ. ಕೋಟ್ಯಾಧಿಪತಿಯಾಗುವುದು ಹೇಗೆ? ಇಂಥ ಪ್ರಶ್ನೆ ನಿಮ್ಮಲ್ಲಿದ್ದರೆ ಈ ಹವ್ಯಾಸ ಬಿಟ್ಟುಬಿಡಿ..

ಆದರೆ ಕೆಲ ಸುಲಭ ವಿಧಾನಗಳ ಮೂಲಕ ಯುವ ವೃತ್ತಿಪರರು ಸಂಭವನೀಯ ಹಣಕಾಸು ತಪ್ಪುಗಳನ್ನು ಮಾಡದೆ ಆರೋಗ್ಯಕರ ಆರ್ಥಿಕ ಸ್ಥಿತಿಯನ್ನು ಆನಂದಿಸಬಹುದು. ತಮಗೆ ತಿಳಿಯದೆ ಮಾಡುವ ಹಣಕಾಸು ತಪ್ಪುಗಳನ್ನು ಗುರುತಿಸಿ ಅವುಗಳನ್ನು ಮಾಡದಂತೆ ಎಚ್ಚರಿಕೆ ವಹಿಸುವುದು ಅತಿ ಮುಖ್ಯವಾಗಿದೆ.
ಯುವ ವೃತ್ತಿಪರರು ತಮ್ಮ ಆರಂಭಿಕ ಜೀವನದಲ್ಲಿ ಮಾಡುವ ಕೆಲ ಪ್ರಮುಖ 10 ತಪ್ಪುಗಳನ್ನು ಇಲ್ಲಿ ನೀಡಲಾಗಿದೆ. ಇವುಗಳನ್ನು ಜೀವನದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಿದರೆ ಉತ್ತಮ ಹಣಕಾಸು ಸ್ಥಿತಿಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಟಾಪ್ 10 ಹಣಕಾಸು ಮಿಸ್ಟೇಕ್‌ಗಳನ್ನು ಇಲ್ಲಿ ನೀಡಲಾಗಿದೆ:

ಬಜೆಟ್ ತಯಾರಿಸದಿರುವುದು

ಬಜೆಟ್ ತಯಾರಿಸದಿರುವುದು

ಸಮರ್ಪಕ ವೈಯಕ್ತಿಕ ಹಣಕಾಸು ನಿರ್ವಹಣೆಗೆ ಬಜೆಟ್ ತಯಾರಿಸುವುದು ತೀರಾ ಅಗತ್ಯವಾಗಿದೆ. ಆದರೆ ದುರಾದೃಷ್ಟವೆಂದರೆ ಬಹುತೇಕ ಯುವ ವೃತ್ತಿಪರರು ಬಜೆಟ್ ತಯಾರಿಸಲು ಗಮನವನ್ನೇ ನೀಡುವುದಿಲ್ಲ. ಮಾದರಿ ಬಜೆಟ್‌ನಿಂದ ನಾವು ಹಣವನ್ನು ಯಾವ ರೀತಿ ಖರ್ಚು ಮಾಡಬೇಕು ಎಂಬುದರ ಸ್ಪಷ್ಟ ಕಲ್ಪನೆ ಸಿಗುತ್ತದೆ ಹಾಗೂ ಅನಾವಶ್ಯಕ ಖರ್ಚುಗಳನ್ನು ತಪ್ಪಿಸಬಹುದಾಗಿದೆ. ಅಂದರೆ ತಿಂಗಳ ಆರಂಭದಲ್ಲಿಯೇ ಬಜೆಟ್ ತಯಾರಿಸಿ ಅದನ್ನು ತಿಂಗಳು ಪೂರ್ತಿ ಪಾಲನೆ ಮಾಡಬೇಕು. ಬಜೆಟ್ ಎಂಬುದು ಸಮರ್ಪಕ ಹಣಕಾಸು ನಿರ್ವಹಣೆಯ ಪ್ರಬಲ ಅಸ್ತ್ರವಾಗಿದೆ ಎಂಬುದನ್ನು ಯುವಕರು ತಿಳಿದುಕೊಳ್ಳಬೇಕು.

ಸಾಲದ ಸುಳಿಗೆ ಸಿಲುಕಿ ಒದ್ದಾಡುವುದು

ಸಾಲದ ಸುಳಿಗೆ ಸಿಲುಕಿ ಒದ್ದಾಡುವುದು

ಸಾಲ ಎಂಬುದು ಮನಷ್ಯನಿಗೆ ಆಸೆ ಹುಟ್ಟಿಸುವ ಸಾಧನವಾಗಿದೆ. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ ಸಾಲ ನೀಡುವ ಕಂಪನಿಗಳು ಆಕರ್ಷಕ ಆಫರ್‌ಗಳ ಆಮಿಷ ತೋರಿ ಸಾಲವನ್ನು ಗಿಫ್ಟ್ ಎಂಬಂತೆ ಬಿಂಬಿಸುತ್ತವೆ. ಇಂಥ ಹಣಕಾಸು ಸಂಸ್ಥೆಗಳಿಗೆ ಸುಲಭವಾಗಿ ಸಾಲದ ಬಲೆಗೆ ಬೀಳುವ ಯುವಜನತೆಯೇ ಮೊದಲ ಗುರಿಯಾಗುತ್ತಾರೆ. ವೃತ್ತಿಜೀವನದ ಆರಂಭದಲ್ಲಿಯೇ ಸಾಲದ ಸುಳಿಗೆ ಸಿಲುಕುವುದು ಎಂದರೆ ಮುಂದಿನ ಹಣಕಾಸು ಪರಿಸ್ಥಿತಿ ಉತ್ತಮವಾಗಿರಲಾರದು ಎಂದೇ ಅರ್ಥ. ಅನವಶ್ಯಕವಾದ ಸಾಲ ಪಡೆಯುವುದು ಯುವಜನತೆ ಮಾಡುವ ಸಾಮಾನ್ಯ ಹಣಕಾಸು ಮಿಸ್ಟೇಕ್ ಆಗಿದೆ.

ಬಾಡಿಗೆಯ ರೂಂ ಮಾಡುವುದು
 

ಬಾಡಿಗೆಯ ರೂಂ ಮಾಡುವುದು

ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಮನೆ ಬಾಡಿಗೆ ಪಾವತಿಸುವುದು ಅತಿ ದೊಡ್ಡ ಖರ್ಚಾಗಿರುತ್ತದೆ. ನೀವು ಮಹಾನಗರದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ ನಿಮ್ಮ ಸಹೋದ್ಯೋಗಿಗಳು ಅಥವಾ ಗೆಳೆಯರೊಂದಿಗೆ ಸೇರಿ ಬಾಡಿಗೆ ಮನೆ ಅಥವಾ ರೂಂ ಮಾಡಬಹುದು. ಬಾಡಿಗೆಯನ್ನು ಹಂಚಿಕೊಳ್ಳುವುದರಿಂದ ಖರ್ಚು ಕಡಿಮೆ ಮಾಡಬಹುದು. ಖಾಸಗಿತನದ ನೆಪವೊಡ್ಡಿ ಬಾಡಿಗೆಯ ದೊಡ್ಡ ಫ್ಲ್ಯಾಟ್ ಅಥವಾ ಮನೆಯಲ್ಲಿ ವಾಸಿಸುವುದು ಖಂಡಿತವಾಗಿಯೂ ಹಣಕಾಸಿನ ಹೊರೆಯನ್ನು ಹೆಚ್ಚಾಗಿಸುತ್ತದೆ.

ಸಣ್ಣ ಖರ್ಚುಗಳ ಕಡೆಗೆ ಗಮನಹರಿಸದಿರುವುದು

ಸಣ್ಣ ಖರ್ಚುಗಳ ಕಡೆಗೆ ಗಮನಹರಿಸದಿರುವುದು

ಹಣಕಾಸು ನಿರ್ವಹಣೆಯನ್ನೇ ನಿರ್ಲಕ್ಷಿಸುತ್ತಿರುವ ಯುವ ಜನತೆ ಸಣ್ಣ ಖರ್ಚುಗಳ ಕಡೆಗೆ ಗಮನ ಹರಿಸುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾದೀತು. ಆದರೆ 'ಇದೊಂದು ಸಣ್ಣ ಮೊತ್ತದ ಖರ್ಚು, ಇದರಿಂದ ಅಂಥ ದೊಡ್ಡ ಬದಲಾವಣೆ ಏನೂ ಆಗದು' ಎಂಬ ಭಾವನೆಯಿಂದ ಸಣ್ಣ ಖರ್ಚುಗಳನ್ನು ಮಾಡುತ್ತಲೇ ಹೋಗುವುದು ಯುವ ಜನತೆ ಮಾಡುವ ಅತಿ ದೊಡ್ಡ ತಪ್ಪಾಗಿದೆ. ಕಳೆದ ವಾರ ಮಾಡಿದ ಸಣ್ಣ ಖರ್ಚುಗಳ ಒಂದು ಪಟ್ಟಿ ತಯಾರಿಸಿ ಒಟ್ಟು ಖರ್ಚು ಎಷ್ಟಾಯಿತು ಎಂಬುದನ್ನು ಲೆಕ್ಕ ಹಾಕಿ ನೋಡಿ ಎಂದು ಯಾವುದೇ ಯುವಕರಿಗೆ ಹೇಳಿ ನೋಡಿ. ಲೆಕ್ಕ ಮಾಡಿದಲ್ಲಿ ತಮ್ಮ ಖರ್ಚು ನೋಡಿ ಅವರು ಹೌಹಾರುವುದು ಖಂಡಿತ.

ಹಣಕಾಸು ಗುರಿ ಇಲ್ಲದಿರುವುದು

ಹಣಕಾಸು ಗುರಿ ಇಲ್ಲದಿರುವುದು

ಜೀವನದ ಮೊದಲ ಸಂಬಳ ಪಡೆದಾಕ್ಷಣವೇ ಹಣಕಾಸು ಗುರಿಯನ್ನು ನಿರ್ಧರಿಸುವುದು ಉತ್ತಮ. ಕೆಲ ವರ್ಷಗಳ ನಂತರ ನೀವೇನು ಆಗಬೇಕೆಂದುಕೊಂಡಿರುವಿರಿ ಅಥವಾ ಏನು ಮಾಡಬೇಕೆಂದುಕೊಂಡಿರುವಿರಿ ಎಂಬ ಬಗ್ಗೆ ಸ್ಪಷ್ಟತೆಯೇ ಇಲ್ಲದಿದ್ದರೆ ಎಲ್ಲಿಗೂ ತಲುಪಲು ಸಾಧ್ಯವಿಲ್ಲ. ಇದು ಹಣಕಾಸಿಗೂ ಅನ್ವಯಿಸುತ್ತದೆ. ಇಷ್ಟು ವರ್ಷಗಳ ನಂತರ ನಾನು ಸ್ವಂತ ಮನೆ ಹೊಂದಬೇಕು, ಇಷ್ಟು ಹಣ ನನ್ನ ಖಾತೆಯಲ್ಲಿ ಇರಬೇಕು, ಸಾಲ ಮಾಡದೆ ಕಾರು ಕೊಳ್ಳಬೇಕು, ಪಾಲಕರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಬೇಕು ಹೀಗೆ ಖಚಿತವಾದ ಗುರಿಗಳನ್ನು ನಿರ್ಧರಿಸಬೇಕು. ಈ ಗುರಿಗಳನ್ನು ತಲುಪಲು ಬೇಕಾದ ಹಾಗೆ ಹಣಕಾಸು ಯೋಜನೆ ಹಾಕಿಕೊಳ್ಳಬೇಕು. ಜೀವನದಲ್ಲಿ ಆರ್ಥಿಕ ಗುರಿ ಇಲ್ಲವಾದರೆ ಅದೊಂದು ದೊಡ್ಡ ಮಿಸ್ಟೇಕ್ ಎಂಬುದು ಗೊತ್ತಿರಲಿ.

ಸವಕಳಿಯಾಗುವ ಆಸ್ತಿಗಳಲ್ಲಿ ಹೂಡಿಕೆ

ಸವಕಳಿಯಾಗುವ ಆಸ್ತಿಗಳಲ್ಲಿ ಹೂಡಿಕೆ

ಜಗತ್ತಿನಲ್ಲಿ ಎರಡು ಬಗೆಯ ಆಸ್ತಿಗಳಿವೆ. ಸವಕಳಿಯಾಗುವ ಹಾಗೂ ಏರಿಕೆಯಾಗುವ ಅಸ್ತಿಗಳು. ಆದರೆ ಇಂದಿನ ಯುವಜನತೆ, ಕಾಲ ಕಳೆದಂತೆ ಬೆಲೆ ಕಳೆದುಕೊಳ್ಳುವ ಸವಕಳಿ ಆಸ್ತಿಗಳ ಬಗ್ಗೆಯೇ ಹೆಚ್ಚು ಆಕರ್ಷಣೆ ಹೊಂದಿರುವುದು ಕಂಡು ಬರುತ್ತದೆ. ಕಾರು, ಬೈಕು, ದುಬಾರಿ ಗ್ಯಾಜೆಟ್‌ಗಳು, ಡ್ರೆಸ್‌ಗಳು ಹೀಗೆ ಬೆಲೆ ಕಳೆದುಕೊಳ್ಳುವ ವಸ್ತುಗಳ ಮೇಲೆ ಯುವಕರು ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಈ ವಸ್ತುಗಳ ಆಕರ್ಷಣೆ ಯುವಕರನ್ನು ಸೆಳೆಯುತ್ತದಾದರೂ, ಇವುಗಳ ಮೇಲೆ ಮಾಡಿದ ಖರ್ಚು ಒಂದು ಉತ್ತಮ ಅವಕಾಶವನ್ನು ಕಳೆದುಕೊಂಡಂತೆಯೇ ಸರಿ. ಇದರ ಬದಲಾಗಿ ಜಾಗ, ಚಿನ್ನ, ಬಾಂಡ್‌ಗಳು ಹಾಗೂ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಿದಲ್ಲಿ ನಿಮ್ಮ ಹಣ ಬಡ್ಡಿ ಸಮೇತ ವಾಪಸ್ ಬರುವುದು ಖಚಿತ. ಇದರ ಬಗ್ಗೆ ಯುವಜನತೆ ಚಿಂತಿಸಬೇಕಿದೆ.

ಉಳಿತಾಯ ಹಾಗೂ ಹೂಡಿಕೆ ಮಾಡದಿರುವುದು

ಉಳಿತಾಯ ಹಾಗೂ ಹೂಡಿಕೆ ಮಾಡದಿರುವುದು

ಹಣ ಉಳಿತಾಯ ಮಾಡುವುದು ಅಥವಾ ಅದನ್ನು ಹೂಡಿಕೆ ಮಾಡುವುದರ ಬಗ್ಗೆ ಇಂದಿನ ಯುವಕರಲ್ಲಿ ಆಸಕ್ತಿಯೇ ಕಂಡುಬರುತ್ತಿಲ್ಲ. ಯಾವುದೇ ಜವಾಬ್ದಾರಿಗಳಿಲ್ಲದೆ ಉತ್ತಮ ಸಂಬಳವನ್ನು ಪಡೆಯುತ್ತಿರುವಾಗ ಹೂಡಿಕೆ ಮಾಡುವುದು ಮೊದಲ ಆದ್ಯತೆಯಾಗಿರಬೇಕಾಗುತ್ತದೆ. ಭವಿಷ್ಯದಲ್ಲಿ ಗಳಿಕೆ ಹೆಚ್ಚಾದರೂ ಅದರ ಜೊತೆಗೆ ಜವಾಬ್ದಾರಿಗಳೂ ಹೆಚ್ಚಾಗುತ್ತವೆ. ಹೀಗಾಗಿ ಕಬ್ಬಿಣ ಕಾದಾಗಲೇ ಹೊಡೆದು ರೂಪ ಕೊಡಬೇಕು ಎಂಬ ಗಾದೆ ಮಾತಿನಂತೆ ಸರಿಯಾದ ಸಮಯದಲ್ಲಿ ಉಳಿತಾಯ ಹಾಗೂ ಹೂಡಿಕೆಯನ್ನು ಆರಂಭಿಸಬೇಕು.

ಆದಾಯ ತೆರಿಗೆ ಪಾವತಿಯಲ್ಲಿ ತಪ್ಪು ಮಾಡುವುದು

ಆದಾಯ ತೆರಿಗೆ ಪಾವತಿಯಲ್ಲಿ ತಪ್ಪು ಮಾಡುವುದು

ಆದಾಯ ತೆರಿಗೆ ಪಾವತಿಸುವುದು ಯುವ ಜನತೆಗೆ ಒಂದು ರೀತಿ ಕಷ್ಟಕರವಾಗಿ ಕಾಣಿಸುವುದರಿಂದ ಬಹುತೇಕ ಯುವಕರು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಇದರಿಂದ ಭವಿಷ್ಯದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಆದಾಯ ಅಥವಾ ಹೂಡಿಕೆಗಳನ್ನು ಸರಿಯಾಗಿ ತೋರಿಸದಿದ್ದರೆ ಮುಂದೆ ಇನಕಮ್ ಟ್ಯಾಕ್ಸ್ ಫೈಲ್ ಮಾಡುವಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಯಾವುದೇ ವರ್ಷ ರಿಟರ್ನ್ ಫೈಲ್ ಮಾಡಲಾಗದಿದ್ದಲ್ಲಿ ಮುಂದಿನ ವರ್ಷವೂ ರಿಟರ್ನ್ ಫೈಲ್ ಮಾಡಲಾಗುವುದಿಲ್ಲ. ಆದ್ದರಿಂದ ಆದಾಯ ತೆರಿಗೆ ಪಾವತಿ ವಿಷಯದಲ್ಲಿ ಯುವ ಜನತೆ ತಪ್ಪು ಮಾಡದಂತೆ ಎಚ್ಚರಿಕೆ ವಹಿಸುವುದು ಒಳಿತು.

ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ತಪ್ಪು ತಿಳುವಳಿಕೆ

ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ತಪ್ಪು ತಿಳುವಳಿಕೆ

ಯುವ ವೃತ್ತಿಪರರು ಹಾಗೂ ಕ್ರೆಡಿಟ್ ಕಾರ್ಡ್‌ಗಳಿಗೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ಕಾರ್ಡ್ ನೀಡುವ ಸಂಸ್ಥೆಗಳು ಉತ್ತಮವಾಗಿ ಸಂಪಾದಿಸುವ ಯುವಕರನ್ನು ಹುಡುಕಿ, ಅವರಿಗೆ ಒಂದೇ ಸಮನೆ ಕಾಲ್ ಮಾಡುತ್ತ, ಅನೇಕ ಆಫರ್‌ಗಳ ಆಮಿಷ ಒಡ್ಡುತ್ತ ಕಾರ್ಡ್ ಪಡೆದುಕೊಳ್ಳುವಂತೆ ಪ್ರೇರೇಪಿಸುತ್ತವೆ. ಈ ರೀತಿ ಪಡೆದ ಕಾರ್ಡ್‌ಗಳನ್ನು ಯುವಕರು ಬೇಕಾಬಿಟ್ಟಿಯಾಗಿ ಖರ್ಚು ಮಾಡಲು ಬಳಸಲಾರಂಭಿಸುತ್ತಾರೆ. ಆದರೆ ಇದು ಮುಂದಿನ ದಿನಗಳಲ್ಲಿ ಅತ್ಯಂತ ದುಬಾರಿಯಾಗಿ ಪರಿಣಮಿಸುತ್ತದೆ. ಸರಿಯಾಗಿ ಮಾಸಿಕ ಬಿಲ್ ಪಾವತಿ ಮಾಡದಿದ್ದರೆ ಒಟ್ಟಾರೆ ಕ್ರೆಡಿಟ್ ಸ್ಕೋರ್ ಸಹ ಹಾಳಾಗುತ್ತದೆ. ಕ್ರೆಡಿಟ್ ಕಾರ್ಡ್ ಹೊಂದುವುದು ಕೆಟ್ಟದ್ದಲ್ಲವಾದರೂ, ಅದನ್ನು ಬಳಸುವಾಗ ಮಾತ್ರ ವಿವೇಚನೆ ಇರಲೇಬೇಕು.

ಆದಾಯಕ್ಕಿಂತ ಹೆಚ್ಚು ಖರ್ಚು

ಆದಾಯಕ್ಕಿಂತ ಹೆಚ್ಚು ಖರ್ಚು

ಯುವಜನತೆ ಮಾಡುವ 10 ಸಾಮಾನ್ಯ ಹಣಕಾಸು ತಪ್ಪುಗಳ ಪಟ್ಟಿಯಲ್ಲಿ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಇಂಥ ಖರ್ಚುಗಳಿಂದ ತಿಂಗಳ ಕೊನೆಯಲ್ಲಿ ಸಾಲದ ಹೊರೆಯಿಂದ ಬಳಲುವಂತಾಗುತ್ತದೆ. ತಿಂಗಳ ಬಜೆಟ್ ಏನಿದೆ ಎಂಬುದರ ಸ್ಪಷ್ಟತೆ ಇಲ್ಲದೆಯೇ ಖರ್ಚು ಮಾಡುತ್ತ ಹೋಗುವುದರಿಂದ ತಿಂಗಳಾಂತ್ಯದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಸಹ ಎರಡಂಕಿಗೆ ಬಂದು ನಿಲ್ಲುತ್ತದೆ. ಹೀಗಾಗಿ ಆರ್ಥಿಕ ಶಿಸ್ತು ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಮುಂದಾಗುವುದು ಒಳಿತು.

English summary

Finance Mistakes that Everyone can Make

Most of our young professionals don’t care about the financial affairs which they are going through.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X