For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳಿಗೆ ಹಣಕಾಸು ನಿರ್ವಹಣೆಯ ಬಗ್ಗೆ ತಿಳಿಸುವುದು ಹೇಗೆ?

ಹಣಕಾಸು ನಿರ್ವಹಣೆಯ ಮೊದಲ ಪಾಠಗಳನ್ನು ಚಿಕ್ಕಂದಿನಲ್ಲಿಯೇ ಕಲಿಯಬೇಕಾಗುತ್ತದೆ. ಜೀವನದಲ್ಲಿ ಆರ್ಥಿಕವಾಗಿ ಯಶಸ್ಸು ಗಳಿಸಬೇಕಾದರೆ ಮೊದಲು ಸಂಪತ್ತನ್ನು ಸೃಷ್ಟಿಸಬೇಕಾಗುತ್ತದೆ ಹಾಗೂ ಅದನ್ನು ಸಮರ್ಪಕವಾಗಿ ನಿರ್ವಹಣೆಯನ್ನೂ ಮಾಡಬೇಕಾಗುತ್ತದೆ.

|

ಹಣಕಾಸು ನಿರ್ವಹಣೆಯ ಮೊದಲ ಪಾಠಗಳನ್ನು ಚಿಕ್ಕಂದಿನಲ್ಲಿಯೇ ಕಲಿಯಬೇಕಾಗುತ್ತದೆ. ಜೀವನದಲ್ಲಿ ಆರ್ಥಿಕವಾಗಿ ಯಶಸ್ಸು ಗಳಿಸಬೇಕಾದರೆ ಮೊದಲು ಸಂಪತ್ತನ್ನು ಸೃಷ್ಟಿಸಬೇಕಾಗುತ್ತದೆ ಹಾಗೂ ಅದನ್ನು ಸಮರ್ಪಕವಾಗಿ ನಿರ್ವಹಣೆಯನ್ನೂ ಮಾಡಬೇಕಾಗುತ್ತದೆ. ಹೀಗಾಗಿ ಹಣಕಾಸು ಶಿಸ್ತಿನ ಬಗ್ಗೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ತಿಳಿಸಿಕೊಡುವುದು ಅವಶ್ಯ. ಸಣ್ಣ ಸಣ್ಣ ಉಳಿತಾಯಗಳಿಂದ ದೊಡ್ಡ ಸಂಪತ್ತು ಸೃಷ್ಟಿಸುವ ಹಾಗೂ ಆ ಮೂಲಕ ತಮ್ಮ ಕನಸುಗಳನ್ನು ನನಸಾಗಿರುವ ಮಾರ್ಗೋಪಾಯಗಳನ್ನು ಚಿಕ್ಕ ಮಕ್ಕಳಿಗೆ ಹೇಳಿಕೊಡುವುದು ಪಾಲಕರಾದವರ ಕರ್ತವ್ಯವಾಗಿದೆ.

ಮಗುವಿನ ಮನಸ್ಸು ಈಗ ತಾನೆ ಅರಳುತ್ತಿರುವ ಹೂವಿನಂತೆ ಇರುತ್ತದೆ. ಕನಸು ಹಾಗೂ ನಿರೀಕ್ಷೆಗಳು ಮನಸ್ಸಿನಲ್ಲಿ ಅರಳುತ್ತಿರುತ್ತವೆ. ಈ ಹಂತದಲ್ಲಿ ಹಣಕಾಸು ನಿರ್ವಹಣೆಯ ಪ್ರಥಮ ಪಾಠಗಳನ್ನು ಮಗುವಿಗೆ ಹೇಳಿಕೊಟ್ಟಲ್ಲಿ ಅದು ಮುಂದಿನ ಜೀವನದಲ್ಲಿ ಬಹಳ ಪರಿಣಾಮಕಾರಿಯಾಗಿರುತ್ತದೆ. ಹಣದ ಮಹತ್ವ, ಹಣಕಾಸು ಯೋಜನೆ ಹಾಗೂ ಹೂಡಿಕೆ ಮುಂತಾದ ವಿಷಯಗಳನ್ನು ಮಗು ಚಿಕ್ಕಂದಿನಿಂದಲೇ ಅರಿತುಕೊಳ್ಳಬೇಕು. ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಈ 17 ಕಂಪನಿಗಳು ನೇಮಕಾತಿ ಮಾಡುತ್ತವೆ..

ಭವಿಷ್ಯದಲ್ಲಿ ಉತ್ತಮ ಹಣಕಾಸು ನಿರ್ವಹಣೆಗೆ ನಿಮ್ಮ ಮಗುವಿಗೆ ಹೇಳಿ ಕೊಡಬಹುದಾದ ಪ್ರಮುಖ ಅಂಶಗಳು ಹೀಗಿವೆ:

ಹಣದ ಮಹತ್ವ ತಿಳಿಸಿ

ಹಣದ ಮಹತ್ವ ತಿಳಿಸಿ

ಜಗತ್ತಿನ ಆರ್ಥಿಕ ವ್ಯವಸ್ಥೆಯಲ್ಲಿ ಹಣಕ್ಕಿರುವ ಮಹತ್ವವೇನು ಹಾಗೂ ಅದನ್ನು ಗಳಿಸುವುದು ಹೇಗೆ ಎಂಬುದು ಮಕ್ಕಳಿಗೆ ಮೊದಲು ಗೊತ್ತಾಗಬೇಕು. ಹಣದಿಂದಲೇ ಮತ್ತಷ್ಟು ಹಣ ಸಂಪಾದನೆಯಾಗುವ ಸತ್ಯವನ್ನು ಮಕ್ಕಳಿಗೆ ತಿಳಿಸಬೇಕು. ಅನವಶ್ಯಕ ವಿಷಯಗಳಿಗೆ ಹಣ ಖರ್ಚು ಮಾಡದೆ ಅದನ್ನು ಉಳಿಸಿದರೆ, ಸಣ್ಣ ಉಳಿತಾಯಗಳೇ ಭವಿಷ್ಯದ ಬೃಹತ್ ಸಂಪತ್ತು ಸೃಷ್ಟಿಗೆ ಆಧಾರವಾಗಬಲ್ಲವು ಎಂಬ ವಿಷಯ ಮಕ್ಕಳಿಗೆ ಅರ್ಥವಾಗಬೇಕು. ಈ ವಿಷಯ ಒಮ್ಮೆ ತಿಳಿದರೆ ಆ ಮಕ್ಕಳು ಭವಿಷ್ಯದಲ್ಲಿ ಯಾವ್ಯಾವುದೋ ಆಸೆಗಳ ಪೂರೈಕೆಗೆ ನೀರಿನಂತೆ ಹಣ ಖರ್ಚು ಮಾಡಲಾರರು. ಹಣಕಾಸು ವಿಷಯದಲ್ಲಿ ಅತ್ಯಂತ ವಿವೇಚನೆಯಿಂದ ಇವರು ಹೆಜ್ಜೆ ಇಡುವರು.

ಹೂಡಿಕೆ ವಿಧಾನಗಳ ಮಾಹಿತಿ ನೀಡಿ

ಹೂಡಿಕೆ ವಿಧಾನಗಳ ಮಾಹಿತಿ ನೀಡಿ

ನಿಶ್ಚಿತ ಅವಧಿ ಹೂಡಿಕೆ ಹಾಗೂ ಹಣಕಾಸು ವಲಯದ ಅನಿಶ್ಚಿತತೆಗಳ ಬಗ್ಗೆ ಮಾಹಿತಿ ನೀಡಿ ಉತ್ತಮ ಹೂಡಿಕೆ ಆಯ್ಕೆ ಮಾಡುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಸಣ್ಣ ಹೂಡಿಕೆಗಳ ಮೂಲಕ ಉದ್ದೇಶಿತ ಹಣಕಾಸು ಗುರಿಯನ್ನು ಸಾಧಿಸುವ ಬಗ್ಗೆ ತಿಳಿಸಬೇಕು. ಹೆಚ್ಚಿನ ತಾಂತ್ರಿಕ ವಿಷಯಗಳನ್ನು ಮಕ್ಕಳು ದೊಡ್ಡವರಾದ ನಂತರ ತಿಳಿಸಿಕೊಡಬಹುದು.

ಕಲಿಕಾವಧಿಯಲ್ಲಿ ಆದಾಯ ಗಳಿಸುವ ಮಹತ್ವ ತಿಳಿಸಿಕೊಡಿ
 

ಕಲಿಕಾವಧಿಯಲ್ಲಿ ಆದಾಯ ಗಳಿಸುವ ಮಹತ್ವ ತಿಳಿಸಿಕೊಡಿ

ಹದಿಹರೆಯದವರ ಮನಸ್ಸು ಆಗ ತಾನೆ ಒಂದು ರೂಪು ಪಡೆಯುತ್ತಿರುವುದರಿಂದ ಹಣಕಾಸು ವಿಷಯಗಳ ಬಗ್ಗೆಯೂ ಸರಿಯಾದ ಮಾರ್ಗದಲ್ಲಿ ಅವರನ್ನು ಮುನ್ನಡೆಸಬಹುದು. ಶ್ರಮದಿಂದ ಕೆಲಸ ಮಾಡುವುದು ಹಾಗೂ ಅದರಿಂದ ಸಿಗುವ ಆದಾಯದ ಮಹತ್ವ ಮತ್ತು ಇದರಿಂದ ಮನಸ್ಸಿಗೆ ಸಿಗುವ ನೆಮ್ಮದಿ, ಆತ್ಮವಿಶ್ವಾಸಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಕಲಿಯುತ್ತಿರುವಾಗಲೇ ಚಿಕ್ಕ ಪುಟ್ಟ ಪಾರ್ಟ್ ಟೈಂ ಕೆಲಸ ಮಾಡುತ್ತ ಆದಾಯ ಪಡೆಯುವುದನ್ನು ತಿಳಿಸಬೇಕು. ಇದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ಹಣದ ಮಹತ್ವ ಹಾಗೂ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಬಗ್ಗೆ ಸಾಕಷ್ಟು ಜ್ಞಾನ ಸಿಗುವಂತಾಗುತ್ತದೆ.

ಮಗುವಿಗೆ ಪ್ರೇರಣೆ ನೀಡಿ

ಮಗುವಿಗೆ ಪ್ರೇರಣೆ ನೀಡಿ

ಮಗುವಿನ ಮನಸ್ಸು ಇನ್ನೂ ಅಪ್ರಬುದ್ಧವಾಗಿರುವುದರಿಂದ ಹಣಕಾಸು ವಿಷಯದಲ್ಲಿ ಎಡವದಂತೆ ತಿಳುವಳಿಕೆ ಹೇಳುವುದು ಅಗತ್ಯವಾಗಿದೆ. ಚಿಕ್ಕ ಪುಟ್ಟ ಉಳಿತಾಯ ಮಾಡುವುದು, ಸಣ್ಣ ಮೊತ್ತ ಸಂಗ್ರಹಿಸುವುದು ಮುಂತಾದುವುಗಳನ್ನು ಕಲಿಸಿ ಕೊಡಬೇಕು. ಈ ರೀತಿ ಮಗು ಉಳಿತಾಯ ಮಾಡಿದಾಗ, ಹಣ ಸಂಗ್ರಹಣೆ ಮಾಡಿದಾಗ ಅದನ್ನು ಸಣ್ಣ ಬಹುಮಾನ ನೀಡುವ ಮೂಲಕ ಉತ್ತೇಜಿಸಬೇಕು. ಇದರಿಂದ ಮಗುವಿಗೆ ಉಳಿತಾಯ ಮಾಡಲು, ಹಣ ಕೂಡಿಸಲು ಪ್ರೇರಣೆ ಸಿಗುತ್ತದೆ. ಮುಂದಿನ ಜೀವನದಲ್ಲಿ ದೊಡ್ಡ ಹಣಕಾಸು ಸವಾಲುಗಳನ್ನು ನಿರ್ವಹಿಸಲು ಈ ಚಿಕ್ಕ ವಿಷಯಗಳೇ ನೆರವಾಗುತ್ತವೆ. ಕೋಟ್ಯಾಧಿಪತಿಯಾಗುವುದು ಹೇಗೆ? ಇಂಥ ಪ್ರಶ್ನೆ ನಿಮ್ಮಲ್ಲಿದ್ದರೆ ಈ ಹವ್ಯಾಸ ಬಿಟ್ಟುಬಿಡಿ..

ಹಣ ಗಳಿಸಲು ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ಮಹತ್ವ ಹೇಳಿ ಕೊಡಿ

ಹಣ ಗಳಿಸಲು ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ಮಹತ್ವ ಹೇಳಿ ಕೊಡಿ

ಐಶ್ವರ್ಯ, ಸಂಪತ್ತು ಸೃಷ್ಟಿಸಲು ಪ್ರಾಮಾಣಿಕ ಪ್ರಯತ್ನ ಹಾಗೂ ಕಠಿಣ ಪರಿಶ್ರಮ ಎಷ್ಟು ಅಗತ್ಯ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಿ. ಹಣ ಗಳಿಕೆಯ ಮಾರ್ಗದಲ್ಲಿ ತಪ್ಪು ದಾರಿ ಹಿಡಿಯದಂತೆ ತಿಳಿಸುವುದು ಅತಿ ಅಗತ್ಯ. ಸೂಕ್ತ ಉದಾಹರಣೆ ಹಾಗೂ ಕತೆಗಳ ಮೂಲಕ ಇದನ್ನು ಮನವರಿಕೆ ಮಾಡಿಸಬಹುದು. ಸುಲಭವಾಗಿ ಹಣ ಗಳಿಸುವಿಕೆಯ ಜಾಲದ ಸುಳಿಗೆ ಸಿಲುಕಿ ಮೋಸ ಹೋಗದಂತೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು.

 

ಕೊನೆ ಮಾತು

ಕೊನೆ ಮಾತು

ಸನ್ಮಾರ್ಗದ ಮೂಲಕ ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಸಂಪತ್ತು ಗಳಿಸುವ ನಿಟ್ಟಿನಲ್ಲಿ ಮಕ್ಕಳು ಮುಂದಾಗುವಂತೆ ಅವರಿಗೆ ಪ್ರೇರಣೆ ನೀಡುವುದು ನಮ್ಮೆಲ್ಲರ ಕರ್ತವ್ಯ. ಸಂಪತ್ತು ಗಳಿಸಲು ಯಾವುದೇ ಅಡ್ಡ ಮಾರ್ಗಗಳಿರುವುದಿಲ್ಲ.

English summary

How to teach your kids about finance?

How to teach your kids about finance? Money is important in creating affluence and sustaining resources towards bigger success.
Story first published: Friday, September 21, 2018, 10:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X