For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ Vs ಷೇರು: ಯಾವುದರಲ್ಲಿನ ಹೂಡಿಕೆ ಲಾಭದಾಯಕ?

ನೀವು ಶ್ರೀಮಂತರಾಗಬೇಕು, ಒಳ್ಳೆಯ ರೀತಿಯಲ್ಲಿ ಹಣ ಸಂಪಾದನೆ ಮಾಡಬೇಕು ಎಂದರೆ ನಿಮ್ಮ ಹಣವನ್ನು ಉತ್ತಮ ಜಾಗದಲ್ಲಿ ತೊಡಗಿಸಿಕೊಳ್ಳಬೇಕು. ಹೌದು, ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬೇಕು ಎಂದರೆ ನೀವು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಬೇಕು.

|

ಈಗಿನ ಜಮಾನದಲ್ಲಿ ಕೇವಲ ಸಂಬಳವನ್ನು ಮಾತ್ರ ನಂಬಿಕೊಂಡು ಕುಳಿತರೆ ಜೀವನ ನಡೆಸುವುದಕ್ಕೆ ಹಣ ಸಾಲದೇ ಇರಬಹುದು. ಹಣ ತೊಡಗಿಸುವಿಕೆ ಕೂಡ ಒಂದು ಕಲೆ. ಉಳಿತಾಯ ಮತ್ತು ಹೂಡಿಕೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಅಗತ್ಯವಾಗಿ ಇರಲೇಬೇಕು. ಕೇವಲ ನಿಮ್ಮ ಸಂಬಳವನ್ನು ಮಾತ್ರ ನಂಬಿ ನೀವು ಶ್ರೀಮಂತರಾಗಬೇಕು, ಮನೆ ಕಟ್ಟಬೇಕು, ಆಸ್ತಿ ತೆಗೆದುಕೊಳ್ಳಬೇಕು ಮತ್ತು ಇನ್ನು ಯಾವ್ಯಾವುದೋ ಪ್ರಮುಖ ಗುರಿಯನ್ನು ಸಾಧಿಸಬೇಕು ಎಂದು ಅಂದುಕೊಂಡರೆ ಖಂಡಿತ ಅದು ಸಾಧ್ಯವಿಲ್ಲ.

ನೀವು ಶ್ರೀಮಂತರಾಗಬೇಕು, ಒಳ್ಳೆಯ ರೀತಿಯಲ್ಲಿ ಹಣ ಸಂಪಾದನೆ ಮಾಡಬೇಕು ಎಂದರೆ ನಿಮ್ಮ ಹಣವನ್ನು ಉತ್ತಮ ಜಾಗದಲ್ಲಿ ತೊಡಗಿಸಿಕೊಳ್ಳಬೇಕು. ಹೌದು, ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬೇಕು ಎಂದರೆ ನೀವು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಬೇಕು. ಆದರೆ ಇಲ್ಲಿ! ಸರಿಯಾದ ಜಾಗ ಅಂದರೆ ಯಾವುದು? ಎಲ್ಲಿ ಹೂಡಿಕೆ ಮಾಡಿದರೆ ಲಾಭ ಅಧಿಕವಾಗಿರುತ್ತದೆ ಎಂಬ ಗೊಂದಲವು ಪ್ರತಿಯೊಬ್ಬರನ್ನೂ ಕಾಡುತ್ತದೆ. ಒಬ್ಬ ಹೂಡಿಕೆ ಮಾಡಬೇಕು ಎಂದು ಬಯಸುವ ವ್ಯಕ್ತಿಗೆ ತನ್ನ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದರಷ್ಟು ಕಠಿಣವಾಗಿರುವ ಗೊಂದಲವು ಮತ್ತೊಂದಿರಲಿಕ್ಕಿಲ್ಲ.

ಸದ್ಯದ ಹಣಕಾಸು ಮಾರುಕಟ್ಟೆಯ ಬಗ್ಗೆ ನೀವೇನಾದರೂ ಅಧ್ಯಯನ ಮಾಡುತ್ತಿದ್ದರೆ, ಹೆಚ್ಚಿನ ಬೇಡಿಕೆಯಲ್ಲಿರುವ ಎರಡು ಬಂಡವಾಳ ಹೂಡಿಕೆಯ ಜಾಗವನ್ನು ನಾವು ಗುರುತಿಸಬಹುದು. ಮೊದಲನೆಯದು ಮ್ಯೂಚುವಲ್ ಫಂಡ್ ಮತ್ತು ಎರಡನೆಯದು ಷೇರುಗಳು. ಇನ್ನು ಅತ್ಯುತ್ತಮವಾದ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಯಬೇಕೆಂದರೆ ಮೊದಲು ನಾವು ಇವೆರಡ ಸಾಧಕ-ಬಾಧಕಗಳನ್ನು ತಿಳಿದುಕೊಳ್ಳಬೇಕು. ಇವೆರಡನ್ನು ಹೋಲಿಸಿ ನೋಡುವ ಮುನ್ನ ನಾವು ಇವುಗಳ ಪರಿಚಯವನ್ನು ಮೊದಲು ಮಾಡಿಕೊಳ್ಳೋಣ.

ಮ್ಯೂಚುವಲ್ ಫಂಡ್ ಅಂದರೆ ಏನು?

ಮ್ಯೂಚುವಲ್ ಫಂಡ್ ಅಂದರೆ ಏನು?

ಮ್ಯೂಚುವಲ್ ಫಂಡ್ ಒಂದು ಟ್ರಸ್ಟ್ ಆಗಿದ್ದು, ವೃತ್ತಿಪರರು ಅದನ್ನು ನಿರ್ವಹಿಸುತ್ತಾರೆ ಮತ್ತು ಹೂಡಿಕೆದಾರರ ಹಣವನ್ನು ಅನೇಕ ಹೂಡಿಕೆದಾರರ ಪರವಾಗಿ ಹೂಡಿಕೆ ಮಾಡಲಾಗುತ್ತದೆ. ಮಾರ್ಕೆಟ್ ನ ಅಪಾಯ ಸಾಧ್ಯತೆಗಳನ್ನು ತೆಗೆದುಕೊಂಡು ಹೆಚ್ಚು ಅಧ್ಯಯನ ಮಾಡುವ ಮತ್ತು ಹೆಚ್ಚು ಸಮಯ ಕಳೆಯುವ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ ಕಂಪೆನಿಯ ಅವರ ಹೂಡಿಕೆಯನ್ನು ಅವರ ಪರವಾಗಿ ಹೂಡಿಕೆ ಮಾಡುತ್ತದೆ.

ಮ್ಯೂಚುವಲ್ ಫಂಡ್ ಬೇರೆಬೇರೆ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ ಅದನ್ನು ಹೆಚ್ಚು ಲಾಭ ಬರುವ ಕಡೆಗಳನ್ನು ಅಧ್ಯಯನ ಮಾಡಿ ಅಲ್ಲಿ ಅದೇ ಹಣವನ್ನು ತೊಡಗಿಸಲಾಗುತ್ತದೆ. ಮ್ಯೂಚುವಲ್ ಫಂಡ್ ನಿಂದ ತೊಡಗಿಸ್ಪಟ್ಟ ಹಣವು ಸಂಭಾವ್ಯ ನಷ್ಟವನ್ನು ಸರಿದೂಗಿಸಲು ಸಮರ್ಥವಾಗಿರುತ್ತದೆ. ಮ್ಯೂಚುವಲ್ ಫಂಡ್ ಕಂಪೆನಿಯ ಫಂಡ್ ಮ್ಯಾನೇಜರ್ ಗಳು ಹೂಡಿಕೆಯನ್ನು ವಿವಿಧ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಉದಾರಣೆಗೆ ಷೇರುಗಳು, ಬಂಧಗಳು, ಅಲ್ಪಾವಧಿಯ ಹಣದ ಮಾರುಕಟ್ಟೆ ಉಪಕರಣಗಳು ಮತ್ತು ಬೆಲೆಬಾಳುವ ಲೋಹಗಳಂತಹ ಸರಕುಗಳಲ್ಲಿ ತೊಡಗಿಸಿರುವ ಬಗ್ಗೆ ಖಾತ್ರಿ ಮಾಡುತ್ತವೆ.

ನಿಮ್ಮ ಹಣವನ್ನು ಮ್ಯೂಚುವಲ್ ಫಂಡ್ ನಲ್ಲಿ ತೊಡಗಿಸುವುದರಿಂದಾಗಿ, ನೀವು ಬಂಡವಾಳದ ಮ್ಯಾನೇಜರ್ ಅಥವಾ ಫಂಡ್ ಮ್ಯಾನೇಜರ್ ಗೆ ನಿಮ್ಮ ಪರವಾಗಿ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಅನುಮತಿ ನೀಡಿರುತ್ತೀರಿ. ಬಂಡವಾಳ ಮೆಚ್ಚುಗೆಯಿಂದ ಲಾಭಾಂಶ ಎಷ್ಟೇ ಇದ್ದರೂ, ಅದನ್ನು ಯೂನಿಟ್ ಹೊಂದಿರುವವರು ಅಥವಾ ಹೂಡಿಕೆದಾರರು ಮತ್ತು ಮ್ಯೂಚುವಲ್ ಫಂಡ್ ಟ್ರಸ್ಟ್ ಮೂಲಕ ಹಂಚಲಾಗುತ್ತದೆ.

ಷೇರುಗಳು ಎಂದರೆ ಏನು?

ಷೇರುಗಳು ಎಂದರೆ ಏನು?

ಷೇರುಗಳ ಬಗ್ಗೆ ನಿಮಗೆ ಸರಳವಾಗಿ ವಿವರಿಸುವುದೇ ಆದಲ್ಲಿ, ಇದು ನಿಮ್ಮನ್ನ ಒಂದು ಕಂಪೆನಿಯ ಮಾಲೀಕತ್ವವನ್ನು ಕೊಂಡುಕೊಳ್ಳುವುದಕ್ಕೆ ಅನುಮತಿ ನೀಡುತ್ತದೆ. ಸ್ಟಾಕ್, ಷೇರು ಮತ್ತು ಇಕ್ವಿಟಿ ಈ ಎಲ್ಲಾ ಪದಗಳು ಒಂದೇ ಉದ್ದೇಶವನ್ನು ಹೊಂದಿರುವ ಪದಗಳಾಗಿದೆ. ಒಂದು ದೊಡ್ಡ ಕಂಪೆನಿಯ ಸಣ್ಣ ಮೊತ್ತದ ಪಾಲನ್ನು ಷೇರು ಎಂದು ಕರೆಯಲಾಗುತ್ತದೆ. ಹಾಗಾಗಿ ಯಾವಾಗ ನೀವು ಒಂದು ಕಂಪೆನಿಯ ಷೇರುಗಳನ್ನು ಖರೀದಿಸುತ್ತೀರೋ ಆಗ ಆ ಕಂಪೆನಿಯ ಇತರ ಪಾಲುದಾರರೊಂದಿಗೆ ನೀವು ನಿಮ್ಮ ಮಾಲೀಕತ್ವವನ್ನು ಹಂಚಿಕೊಂಡಿದ್ದೀರಿ ಎಂದರ್ಥ. ಯಾವುದೇ ಕಂಪೆನಿಯು ತನ್ನ ಪಾಲುಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗ ನೀವು ಅದನ್ನು ಖರೀದಿಸಲು ಅವಕಾಶವಿರುತ್ತದೆ. ಇಂತಹ ಪಟ್ಟಿಯಲ್ಲಿರುವ ಯಾವುದೇ ಕಂಪೆನಿಯ ಷೇರುಗಳನ್ನು ನೀವು ಖರೀದಿಸಬಹುದು ಮತ್ತು ಮಾರಾಟವೂ ಮಾಡಬಹುದು( ಇದೊಂದು ರೀತಿಯ ಮಾರುಕಟ್ಟೆಯ ಸ್ಥಳ). ಷೇರುಗಳ ಮೌಲ್ಯವನ್ನು ಬೇಡಿಕೆ ಮತ್ತು ಪೂರೈಕೆಯ ಆಧಾರದಲ್ಲಿ ನಿರ್ಧರಿಸಲಾಗಿರುತ್ತದೆ. ಕಂಪೆನಿಯು ಬೆಳೆಯುತ್ತಿದ್ದಂತೆ ಹೂಡಿಕೆ ಮಾಡಿದ ಪಾಲುದಾರಿಕೆಯ ಮೊತ್ತವು ಅಧಿಕವಾಗುತ್ತದೆ ಮತ್ತು ತದ್ವಿರುದ್ಧವೂ ಆಗಿರಬಹುದು.

ಮ್ಯೂಚುವಲ್ ಫಂಡ್ ಮತ್ತು ಷೇರುಗಳ ನಡುವಿನ ವ್ಯತ್ಯಾಸ

ಮ್ಯೂಚುವಲ್ ಫಂಡ್ ಮತ್ತು ಷೇರುಗಳ ನಡುವಿನ ವ್ಯತ್ಯಾಸ

ಹೂಡಿಕೆಯನ್ನು ಗಮನಿಸಿ ಹೇಳುವುದಾದರೆ ಎರಡರಲ್ಲೂ ಕೆಲವು ಅನುಕೂಲಗಳೂ ಇವೆ ಮತ್ತು ಅನಾನುಕೂಲಗಳೂ ಇದೆ. ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಅನುಕೂಲವಾಗಲು ಇಲ್ಲಿ ಕೆಲವು ಪ್ರಮುಖ ಹೋಲಿಕೆಗಳನ್ನು ನಿಮಗೆ ಹೇಳುತ್ತಿದ್ದೇವೆ.

ಈ ಎರಡರಲ್ಲೂ ಇರುವ ಮೊದಲ ವ್ಯತ್ಯಾಸವೇನೆಂದರೆ, ಷೇರುಗಳು ಒಂದು ಕಂಪೆನಿಯ ಭಾಗಶಃ ಮಾಲೀಕತ್ವವನ್ನು ನೀಡುತ್ತದೆ ಆದರೆ ಷೇರುಗಳು ಹೂಡಿಕೆದಾರರಿಗೆ ಹೂಡಿಕೆಯ ಜಾಗವಾಗಿರುತ್ತದೆ.

ಪ್ರತಿಯೊಂದು ಮ್ಯೂಚುವಲ್ ಫಂಡ್ ಕಂಪೆನಿಯೂ ಕೂಡ ಫಂಡ್ ಮ್ಯಾನೇಜರ್ ಗಳನ್ನು ನೇಮಿಸುತ್ತದೆ ಮತ್ತು ಅವರು ಹೂಡಿಕೆದಾರರ ಪರವಾಗಿ ಎಲ್ಲಾ ಹೂಡಿಕೆಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಎಎಂಸಿಯ ಫಂಡ್ ಮ್ಯಾನೇಜರ್ ಗಳು ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಎಲ್ಲಿ ಹೂಡಿಕೆ ಮಾಡಬೇಕು, ಯಾವಾಗ ಹೂಡಿಕೆ ಮಾಡಬೇಕು ಮತ್ತು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಹಾಗಾಗಿ ಹೊಸದಾಗಿ ಹೂಡಿಕೆ ಕ್ಷೇತ್ರಕ್ಕೆ ಕಾಲಿಡುವವರಿಗೆ ಇದೊಂದು ಆದರ್ಶವಾಗಿರುವ ಕ್ಷೇತ್ರವಾಗುತ್ತದೆ.

ಜ್ಞಾನದ ಅಗತ್ಯ

ಜ್ಞಾನದ ಅಗತ್ಯ

ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದೇ ಆದಲ್ಲಿ ಮಾರುಕಟ್ಟೆಯ ಅಪಾಯ ಸಾಧ್ಯತೆಗಳ ಬಗ್ಗೆ ಅಂದರೆ ಮಾರುಕಟ್ಟೆಯ ಮೌಲ್ಯದ ಏರಿಳಿತದ ಬಗ್ಗೆ ಹೆಚ್ಚು ಅಧ್ಯಯನ ಮತ್ತು ಜ್ಞಾನದ ಅಗತ್ಯತೆ ಇರುತ್ತದೆ. ಹೆಚ್ಚು ಸಮಯ ಮತ್ತು ಸಮರ್ಪಣೆಯನ್ನು ಮಾಡಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದೇ ಆದಲ್ಲಿ ಆತ/ ಅವಳು ಹೆಚ್ಚು ಲಾಭವನ್ನ ಗಳಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಮ್ಯೂಚುವಲ್ ಫಂಡ್ ನಲ್ಲಿ ಪ್ರಾಥಮಿಕ ಹೂಡಿಕೆದಾರರು ಹೆಚ್ಚು ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ ಯಾಕೆಂದರೆ ಅದೊಂದು ನಿಷ್ಕ್ರಿಯ ದಾರಿಯಲ್ಲಿ ಸಾಗುತ್ತಲೇ ಇರುತ್ತದೆ.

ಡಿಮ್ಯಾಟ್ ಖಾತೆ

ಡಿಮ್ಯಾಟ್ ಖಾತೆ

ಷೇರು ಮಾರುಕಟ್ಟೆಯಲ್ಲಿ ನೀವು ಪಾಲುದಾರಿಕೆಯನ್ನು ಪ್ರಾರಂಭಿಸುವುದಾದರೆ, ನಿಮ್ಮದೊಂದು ಡಿಮ್ಯಾಟ್ ಖಾತೆಯ ಅಗತ್ಯತೆ ಇರುತ್ತದೆ. ಆಗ ಮಾತ್ರ ನೀವು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಆದರೆ ಒಂದು ವೇಳೆ ನೀವು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದಾದರೆ ಅಂತಹ ಯಾವುದೇ ಖಾತೆಯ ಅಗತ್ಯತೆ ನಿಮಗೆ ಇರುವುದಿಲ್ಲ.

ಸಿಪ್ ಹೂಡಿಕೆ

ಸಿಪ್ ಹೂಡಿಕೆ

ನೀವು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವಾಗ ಒಂದು ನಿಯಮಬದ್ಧ ರೀತಿಯಲ್ಲಿ ಹೂಡಿಕೆ ಮಾಡಲು ಅವಕಾಶವಿರುತ್ತದೆ ಅದನ್ನು SIP ಎಂದು ಕರೆಯಲಾಗುತ್ತದೆ. ಇಂತಹ ನಿಯಮಬದ್ಧವಾದ ಹೂಡಿಕೆಯು ನಿಮಗೆ ಹಣಕಾಸು ವ್ಯವಹಾರದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಪ್ರತಿ ತಿಂಗಳು ಮಾಡುವ ಹೂಡಿಕೆಯನ್ನು ಫಂಡ್ ಮ್ಯಾನೇಜರ್ ನಿರ್ವಹಣೆ ಮಾಡುತ್ತಾರೆ.

ಆದರೆ ಷೇರುಗಳಲ್ಲಿ ನೀವು ಹಣ ತೊಡಗಿಸುವುದಾದರೆ ನಿಮ್ಮ ವೈಯಕ್ತಿಕ ಕಾಳಜಿಯ ಅಗತ್ಯವಿರುತ್ತದೆ. ಟ್ರೇಡ್ ನಿರ್ಧಾರಗಳ ಬಗ್ಗೆ ಪ್ರತಿ ದಿನ ಅಥವಾ ಪ್ರತಿ ತಿಂಗಳು ಜಾಗೃತಿಯನ್ನು ಸ್ವತಃ ನೀವೇ ತೆಗೆದುಕೊಳ್ಳಬೇಕಾಗುತ್ತದೆ.

ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡುವುದಾದರೆ ನೀವು ಫಂಡ್ ನಿರ್ವಹಣೆಯ ಶುಲ್ಕ, ರಿಡೆಂಪ್ಷನ್ ಶುಲ್ಕಗಳು, ಪ್ರಾರಂಭಿಕ ಖರೀದಿಯ ಮೇಲೆ ಕೊನೆಯಲ್ಲಿ ಹೊರೆ ಇತ್ಯಾದಿಗಳನ್ನು ಭರಿಸಬೇಕಾಗುತ್ತದೆ. ಒಂದು ವೇಳೆ ನೀವು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದಾರರೆ ನೀವು ಪಾವತಿಸಬೇಕಾಗುವುದು ದಲ್ಲಾಳಿಗಳಿಗೆ ಮಾತ್ರ.

ವಿಭಿನ್ನ ಹೂಡಿಕೆಯ ಅಗತ್ಯ

ವಿಭಿನ್ನ ಹೂಡಿಕೆಯ ಅಗತ್ಯ

ಕನಿಷ್ಠ ಹೂಡಿಕೆಯೊಂದಿಗೆ ಗರಿಷ್ಠ ಲಾಭಗಳಿಕೆಗೆ ವಿಭಿನ್ನ ಹೂಡಿಕೆಯ ಅಗತ್ಯವಿದೆ ಎಂಬುದನ್ನು ಪ್ರತಿಯೊಬ್ಬ ಹೂಡಿಕೆದಾರನಿಗೂ ಗೊತ್ತಿರುವ ವಿಚಾರವೇ ಆಗಿದೆ. ಮ್ಯೂಚುವಲ್ ಫಂಡ್ ನಿಂದ ಹೂಡಿಕೆ ಮಾಡಿದರೆ ಒಂದು ವಿಭಿನ್ನ ಬಂಡವಾಳವನ್ನು ಸುಲಭದಲ್ಲಿ ಪಡೆಯಬಹುದು ಎಂಬುದೇನೊ ನಿಜ. ಆದರೆ ನೇರವಾಗಿ ಹೂಡಿಕೆ ಮಾಡಿದಾಗ ಅಂತಹ ದೊಡ್ಡ ಮಟ್ಟದ ಬಂಡವಾಳವನ್ನು ಸೃಷ್ಟಿ ಮಾಡುವುದು ಸ್ವಲ್ಪ ಗೊಂದಲದ ಸನ್ನಿವೇಶವಾಗಿ ಮಾರ್ಪಡುತ್ತದೆ.

ಮತ್ತೊಂದು ಲಾಭವೆಂದರೆ ಮ್ಯೂಚುವಲ್ ಫಂಡ್ ನಲ್ಲಿ ತೊಡಗಿದರೆ ತೆರಿಗೆ ಲಾಭವು ಲಭ್ಯವಾಗುತ್ತದೆ. ಒಂದು ವೇಳೆ ನೀವು ELSS ಯಲ್ಲಿ ತೊಡಗಿಸಿದರೆ ಸೆಕ್ಷನ್ 80ಸಿಸಿಜಿ ಮತ್ತು 80ಸಿ ಅನ್ವಯ ನಿಮ್ಮ ತೆರಿಗೆಯಲ್ಲಿ 1.5 ಲಕ್ಷದವರೆಗೆ ಉಳಿತಾಯವಾಗಬಹುದು. ಆದರೆ ಷೇರುಗಳಲ್ಲಿ ಗಳಿಸಿದ ಲಾಭವು ತೆರಿಗೆ ಆದಾಯವಾಗಿರುತ್ತದೆ.

ಅಪಾಯದ ಸಾಧ್ಯತೆ

ಅಪಾಯದ ಸಾಧ್ಯತೆ

ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರ ಮೂಲಕ ನೀವು ಗಳಿಸುವ ಲಾಭವನ್ನು ಹೂಡಿಕೆದಾರರು ಮತ್ತು AMC ಹಂಚಿಕೊಂಡಿರುತ್ತಾರೆ. ಆದರೆ ಪಾಲು ಮಾರುಕಟ್ಟೆ ಅಂದರೆ ಷೇರುಗಳಲ್ಲಿ ಗಳಿಸುವ ಲಾಭವು ಕೇವಲ ನಿಮ್ಮ ಏಕೈಕ ಆದಾಯವಾಗಿರುತ್ತದೆ ಮತ್ತು ಯಾರೂ ಅದರ ಪಾಲನ್ನು ತೆಗೆದುಕೊಳ್ಳುವುದಿಲ್ಲ.
ಎಲ್ಲಾ ರೀತಿಯ ಹೂಡಿಕೆಗಳಲ್ಲೂ ಕೂಡ ಅಪಾಯ ಸಾಧ್ಯತೆಗಳು ಇದ್ದೇ ಇರುತ್ತದೆ. ಅದು ಮ್ಯೂಚುವಲ್ ಫಂಡೇ ಆಗಿರಲಿ ಅಥವಾ ಷೇರು ಮಾರುಕಟ್ಟೆಯೇ ಆಗಿರಲಿ ಮಾರುಕಟ್ಟೆಯನ್ನೇ ಅವಲಂಬಿಸಿರುತ್ತದೆ.

ಮಿಶ್ರಿತ ಬಂಡವಾಳ

ಮಿಶ್ರಿತ ಬಂಡವಾಳ

ಮ್ಯೂಚುವಲ್ ಫಂಡ್ ನಲ್ಲಿ ಬರುವ ನಕಾರಾತ್ಮಕ ಆದಾಯವನ್ನು ವೈವಿಧ್ಯೀಕರಣಗೊಳಿಸಿ ಮತ್ತೆ ಲಾಭ ರೂಪಕ್ಕೆ ತರುವ ಸಾಧ್ಯತೆಗಳು ನಿಚ್ಛಳವಾಗಿರುತ್ತದೆ. ಯಾಕೆಂದರೆ ಮ್ಯೂಚುವಲ್ ಫಂಡ್ ನಲ್ಲಿನ ಹೂಡಿಕೆ ವಿವಿಧ ಕ್ಷೇತ್ರಗಳನ್ನು ಸ್ಟಾಕ್ಸ್, ಬಾಂಡ್ಸ್, ಮತ್ತು ಭದ್ರತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಮಿಶ್ರಿತ ಬಂಡವಾಳವನ್ನು ಫಂಡ್ ಮ್ಯಾನೇಜರ್ ನಿರ್ಧರಿಸುವುದರಿಂದಾಗಿ ಕಡಿಮೆ ನಷ್ಟ ಮತ್ತು ಹೆಚ್ಚಿನ ಲಾಭದ ಬಗ್ಗೆ ಖಾತ್ರಿ ಇರುತ್ತದೆ.

ಕೊನೆ ಮಾತು

ಕೊನೆ ಮಾತು

ಒಂದೇ ಷೇರುಗಳಲ್ಲಿ ಹೂಡಿಕೆ ಮಾಡಿದರೂ ಕೂಡ ಒಂದೊಮ್ಮೆ ಅತ್ಯಧಿಕ ಲಾಭವನ್ನೂ ಗಳಿಸಬಹುದು ಇಲ್ಲವೇ ಸಂಪೂರ್ಣ ನಷ್ಟವನ್ನೂ ಪಡೆಯಬಹುದು. ಷೇರುಗಳಲ್ಲಿ ಯಾವಾಗಲೂ ಅಪಾಯ ಸಾಧ್ಯತೆಗಳು ಅತ್ಯಧಿಕವಾಗಿರುತ್ತದೆ. ಹೂಡಿಕೆದಾರರಿಗೆ ಸ್ವಯಂ ಜ್ಞಾನದ ಅಗತ್ಯವಿರಬೇಕಾಗುತ್ತದೆ.

English summary

Mutual Fund Vs Shares: Which is Better to Invest?

A mutual fund is a trust which is managed by professionals that invest the money of many investors on behalf of the investors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X