For Quick Alerts
ALLOW NOTIFICATIONS  
For Daily Alerts

ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್

ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವುದು ಇತ್ತೀಚಿನ ಹೊಸ ಟ್ರೆಂಡ್. ಬೃಹತ್ ಮೊತ್ತವನ್ನು ಹೂಡಿಕೆ ಮಾಡದೇ ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಮಾಡಲು ಹಲವಾರು ಮಾರ್ಗಗಳಿವೆ.

|

ಯಾರೇ ಆಗಲಿ ಬಿಜಿನೆಸ್ ಮಾಡಬೇಕು ಅಂತ ಮನಸ್ಸು ಮಾಡಿದರೆ ಕಡಿಮೆ ಬಂಡವಾಳ ಹೂಡಿ ಹೆಚ್ಚು ಆದಾಯ ಪಡೆಯಬೇಕು ಎಂದು ಬಯಸುವುದು ಸಹಜ. ಹೆಚ್ಚು ಬಂಡವಾಳ ಹೂಡಿ ಒಂದು ವೇಳೆ ನಷ್ಟವಾಗಿ ಕೈ ಸುಟ್ಟುಕೊಳ್ಳುವುದಕ್ಕಿಂತ, ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯ ಪಡೆಯುವುದನ್ನು ಎದುರು ನೋಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಸ್ಟಾರ್ಟ್‌ ಅಪ್‌ ಬಿಜಿನೆಸ್ ಗಳು ಹೆಚ್ಚಾಗ್ತಿವೆ. ರೈತರು ಆಧುನಿಕ ಕೃಷಿಯ ಮೂಲಕ ಹೆಚ್ಚು ಆದಾಯವನ್ನು ಪಡೀತಿದ್ದಾರೆ.

 

ಕಡಿಮೆ ಬಂಡವಾಳ ಹೂಡಿ ಹೆಚ್ಚು ಆದಾಯ ಪಡೆಯುವುದು ಒಂದು ರೀತಿಯ ಜಾಣತನ. ಸುಖಾಸುಮ್ಮನೆ ಎಲ್ಲೆಂದರಲ್ಲಿ ಹಣವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲ. ಆದರೆ ಕಡಿಮೆ ಮೊತ್ತದಲ್ಲಿ ಬಿಜಿನೆಸ್ ಮಾಡುವ ಅನೇಕ ಮಾರ್ಗಗಳಿವೆ. ಆ ರೀತಿಯ ಬಿಜಿನೆಸ್ ಯಾವುದು ಎಂದು ಹುಡುಕುವವರಿಗೆ ಇಲ್ಲಿದೆ ಉತ್ತಮ ಸಲಹೆ.

ಅಲೋವೆರಾ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೆ ಇದೆ. ಇದೀಗ ಜಗತ್ತಿನಾದ್ಯಂತ ಆಯುವೇದಿಕ್ ಔಷಧಿಗಳು ಹೆಚ್ಚು ಬೇಡಿಕೆ ಹೊಂದಿವೆ. ಅಲೋವೆರಾವನ್ನು ಕೂಡ ಔಷಧಿಯಾಗಿ ಬಳಸಲಾಗುತ್ತದೆ. ಅಲೋವೆರಾಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಆಯರ್ವೇದ ಕಂಪನಿಯಿಂದ ಹಿಡಿದು ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳವರೆಗೆ ಅಲೋವೆರಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ

ಅಲೋವೆರಾ ಬಿಸಿನೆಸ್ ಹೇಗೆ?

ಅಲೋವೆರಾ ಬಿಸಿನೆಸ್ ಹೇಗೆ?

ಹಾಗಿದ್ದರೆ ಅಲೋವೆರಾದಿಂದ ಹಣ ಗಳಿಕೆ ಹೇಗೆ ಮಾಡಬಹುದು ಎಂಬ ಪ್ರಶ್ನೆ. ಇದನ್ನು ಎರಡು ರೀತಿಯಲ್ಲಿ ಮಾಡಬಹುದಾಗಿದ್ದು, ಒಂದು ಅಲೋವೆರಾ ಬೆಳೆದು ಅದನ್ನು ಮಾರಾಟ ಮಾಡಿ ಸುಮಾರು 5 ರಿಂದ 10 ಲಕ್ಷದವರೆಗೆ ವಾರ್ಷಿಕ ಗಳಿಕೆ ಮಾಡಬಹುದು.
ಇನ್ನೊಂದು ಅಲೋವೆರಾ ಪ್ರೊಸೆಸಿಂಗ್ ಯುನಿಟ್ ಸ್ಥಾಪಿಸಿ ಜ್ಯೂಸ್ ಮಾಡಿ ಮಾರಾಟ ಮಾಡಿ ಗಳಿಕೆ ಮಾಡಬಹುದು. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು

ಮೊದಲ ಹಂತ

ಮೊದಲ ಹಂತ

ಅಲೋವೆರಾ ಬೆಳೆದು ಮಾರಾಟ ಮಾಡಿ ಹಣ ಗಳಿಸುತ್ತೇನೆ ಎನ್ನುವವರಿಗೆ ಆರಂಭದಲ್ಲಿ ರೂ. 50 ಸಾವಿರ ಖರ್ಚು ಬರಬಹುದು. ಒಂದು ಹೆಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆದು ಮೂರು ವರ್ಷಗಳ ಕಾಲ ಫಲ ಪಡೆಯಬಹುದಾಗಿದೆ.

ಸೂಚನೆ: ನಿಮ್ಮ ಭಾಗದ ಕೃಷಿ ಇಲಾಖೆಯನ್ನು ಸಂಪರ್ಕಿಸಿ, ಕೃಷಿ ತಜ್ಞರ ಸಲಹೆ ಪಡೆದು ಅಲೋವೆರಾ ಕೃಷಿಯಲ್ಲಿ ಮುಂದುವರೆಯುವುದು ಉತ್ತಮ.

50 ಸಾವಿರ ಖರ್ಚು
 

50 ಸಾವಿರ ಖರ್ಚು

IC 111271, IC111269 ಮತ್ತು AL-1 ಜಾತಿಯ ಅಲೋವೆರಾವನ್ನು ಎಲ್ಲಿ ಬೇಕಾದ್ರೂ ಬೆಳೆಯಬಹುದಾಗಿದ್ದು, ಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರಿಸರ್ಚ್ ಹೇಳುವಂತೆ ಒಂದು ಹೆಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆ ತೆಗೆಯಲು ರೂ. 27,500 ಖರ್ಚಾಗುತ್ತದೆ. ಗೊಬ್ಬರ, ಕೂಲಿ ಎಲ್ಲ ಸೇರಿ ಇದು ರೂ. 50 ಸಾವಿರದವರೆಗೆ ಆಗಬಹುದು.

40-45 ಟನ್ ಅಲೋವೆರಾ ಬೆಳೆಯಬಹುದು

40-45 ಟನ್ ಅಲೋವೆರಾ ಬೆಳೆಯಬಹುದು

ಒಂದು ವರ್ಷದಲ್ಲಿ ಒಂದು ಹೆಕ್ಟೇರ್ ಜಾಗದಲ್ಲಿ ಸುಮಾರು 40-45 ಟನ್ ಅಲೋವೆರಾ ಎಲೆಗಳನ್ನು ಬೆಳೆಯಬಹುದು. ಬೇರೆ ಬೇರೆ ಕಡೆ ಅಲೋವೆರಾ ಎಲೆಗೆ ಬೇರೆ ಬೇರೆ ದರವಿದೆ. ಸುಮಾರು ಒಂದು ಟನ್ ಎಲೆಗೆ ರೂ. 20000 ರೂಪಾಯಿಯಿದೆ. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

10 ಲಕ್ಷ ಗಳಿಕೆ

10 ಲಕ್ಷ ಗಳಿಕೆ

ಒಂದು ಹೆಕ್ಟೇರ್ ಜಾಗದಲ್ಲಿ ಸುಮಾರು 40-45 ಟನ್ ಅಲೋವೆರಾ ಬೆಳೆಯಲು ಸಾದ್ಯವಿರುವುದರಿಂದ ವರ್ಷಕ್ಕೆ ಸುಮಾರು 10 ಲಕ್ಷ ಗಳಿಕೆ ಮಾಡಬಹುದು. ಇನ್ನು 2-3 ವರ್ಷದಲ್ಲಿ ಬೆಳೆ ಹೆಚ್ಚಿರುತ್ತದೆ. ಆದರೆ ಐದನೇ ವರ್ಷದಲ್ಲಿ ಬೆಳೆ ಪ್ರಮಾಣ ಕಡಿಮೆಯಾಗುತ್ತದೆ.

Read more about: business money finance news
English summary

Aloe Vera Farming Business, Earn upto 10 lakh yearly

Aloe Vera is stem less plant and is an herbal specie found all over the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X