For Quick Alerts
ALLOW NOTIFICATIONS  
For Daily Alerts

  ಮಕ್ಕಳ ಹೆಸರಲ್ಲಿ ಪಿಪಿಎಫ್ ಖಾತೆ ತೆರೆದರೆ 5 ಪ್ರಯೋಜನ ಪಡೆಯಬಹುದು..

  |

  ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಇದು ಅತ್ಯಂತ ಸುರಕ್ಷಿತ ದೀರ್ಘಾವಧಿ ಉಳಿತಾಯ ಯೋಜನೆಯಾಗಿದೆ. ಯಾವುದೇ ವ್ಯಕ್ತಿ ಅಥವಾ ಮಾಸಿಕ ಸಂಬಳ ಪಡೆಯುವವರು ಇದರಲ್ಲಿ ಹೂಡಿಕೆ ಮಾಡಿ ತೆರಿಗೆ ರಹಿತವಾದ ಆದಾಯವನ್ನು ಗಳಿಸಬಹುದು. ಪಿಪಿಎಫ್ ಇದು ದೀರ್ಘಾವಧಿಯ ಅಂದರೆ 15 ವರ್ಷಗಳ ನಂತರ ಮ್ಯಾಚುರಿಟಿ ಆಗುವ ಯೋಜನೆಯಾಗಿದ್ದು, ಇದರಲ್ಲಿನ ಹೂಡಿಕೆಗೆ ವಾರ್ಷಿಕ ಶೇ. 8ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.
  ಇವು ಮಾತ್ರವಲ್ಲದೆ ಇನ್ನೂ ಹಲವಾರು ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿದ್ದು, ಹೂಡಿಕೆ ಮಾಡಬಯಸುವವರು ಆದಷ್ಟು ಬೇಗನೆ ಯೋಜನೆಯ ಲಾಭ ಪಡೆಯುವುದು ಒಳಿತು ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಅದರಲ್ಲೂ ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆದರೆ ಇನ್ನೂ ಉತ್ತಮ ಎಂಬುದು ಅವರ ಅಭಿಪ್ರಾಯವಾಗಿದೆ.

   

  ಪಿಪಿಎಫ್ ಯೋಜನೆಯ ಮಾಹಿತಿ ಹಾಗೂ ಅದರಲ್ಲಿ ಲಭ್ಯವಿರುವ ವಿಶಿಷ್ಟ ಸೌಲಭ್ಯಗಳನ್ನು ಇಲ್ಲಿ ತಿಳಿಸಲಾಗಿದೆ.

  ಅಪ್ರಾಪ್ತರ ಹೆಸರಲ್ಲಿ ಪಿಪಿಎಫ್ ಖಾತೆ ಏಕೆ ಮಾಡಿಸಬೇಕು?

  ಪಿಪಿಎಫ್ ಇದು ೧೫ ವರ್ಷಗಳ ದೀರ್ಘಾವಧಿ ಹೂಡಿಕೆ ಯೋಜನೆಯಾಗಿರುವುದರಿಂದ ಅಪ್ರಾಪ್ತರ ಹೆಸರಿನಲ್ಲಿ ಅವರ ಸಣ್ಣ ವಯಸ್ಸಿನಲ್ಲಿಯೇ ಯೋಜನೆ ಆರಂಭಿಸುವುದು ಸೂಕ್ತ. ಬೇಗನೆ ಖಾತೆ ತೆರೆಯುವುದರಿಂದ ಹೂಡಿಕೆಯ ಮೇಲೆ ದೊಡ್ಡ ಮೊತ್ತದ ಬಡ್ಡಿ ಗಳಿಸಲು ಸಹಾಯಕವಾಗುತ್ತದೆ. ನಿಮ್ಮ ಮಗ ಅಥವಾ ಮಗಳು ೫ ವರ್ಷದವರಿರುವಾಗ ಅವರ ಹೆಸರಿನಲ್ಲಿ ಖಾತೆ ತೆರೆದಲ್ಲಿ, ಭವಿಷ್ಯದಲ್ಲಿ ಅವರ ಉನ್ನತ ಶಿಕ್ಷಣಕ್ಕೆ ದೊಡ್ಡ ಮೊತ್ತದ ಹಣ ಸಿಗುತ್ತದೆ. ಒಂದು ವೇಳೆ ಆಗ ಹಣದ ಅವಶ್ಯಕತೆ ಇರದಿದ್ದರೆ ಖಾತೆಯನ್ನು ಹಾಗೆಯೇ ಮುಂದುವರಿಸಲೂಬಹುದು.
  ಒಟ್ಟಾರೆಯಾಗಿ ವೃತ್ತಿ ಜೀವನದ ಆರಂಭದಲ್ಲಿಯೇ ನಿಮ್ಮ ಮಗ ಅಥವಾ ಮಗಳು ಆರ್ಥಿಕವಾಗಿ ಸಬಲರಾಗಲು ಪಿಪಿಎಫ್ ಸಹಕಾರಿಯಾಗಿದೆ. ಪಿಪಿಎಫ್ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ ೧.೫ ಲಕ್ಷ ರೂ. ಜಮಾ ಮಾಡಬಹುದು. ಈ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ ೮೦ಸಿ ಅನ್ವಯ ತೆರಿಗೆ ವಿನಾಯಿತಿ ಇರುತ್ತದೆ.

  ಮೂರು ಹಂತದ ತೆರಿಗೆ ವಿನಾಯಿತಿ

  ಪಿಪಿಎಫ್ ಯೋಜನೆಯಲ್ಲಿ ಮೂರು ಹಂತದ ತೆರಿಗೆ ವಿನಾಯಿತಿ ಸೌಲಭ್ಯವಿದೆ. ಇದರಲ್ಲಿ ಹೂಡಿಕೆ ಮಾಡುವ ಮೊತ್ತ, ಅದರ ಮೇಲೆ ಸಿಗುವ ಬಡ್ಡಿ ಆದಾಯಗಳಿಗೆ ತೆರಿಗೆ ವಿನಾಯಿತಿ ಇದೆ. ಜೊತೆಗೆ ೧೫ ವರ್ಷಗಳ ಲಾಕ್ ಇನ್ ಅವಧಿ ನಂತರ ಸಿಗುವ ಪಕ್ವತಾ ಮೊತ್ತಕ್ಕೆ ಸಹ ಯಾವುದೇ ತೆರಿಗೆ ಇರುವುದಿಲ್ಲ.

  ಎಷ್ಟು ಬಾರಿಯಾದರೂ ಅವಧಿ ಹೆಚ್ಚಿಸುವ ಅವಕಾಶ

  ನಿಮ್ಮ ಮಗ ಅಥವಾ ಮಗಳು 15 ವರ್ಷಗಳ ಮ್ಯಾಚುರಿಟಿ ಅವಧಿಯ ನಂತರವೂ ಬೇಕಾದರೆ ಪಿಪಿಎಫ್ ಖಾತೆಯನ್ನು ಮುಂದುವರಿಸಬಹುದು. ಖಾತೆ ಮುಂದುವರಿಸುವುದು ಬೇಡವಾದರೆ 15 ವರ್ಷಗಳ ನಂತರ ಅದನ್ನು ಮುಕ್ತಾಯಗೊಳಿಸಬಹುದು. ಆದರೆ ಖಾತೆಯನ್ನು ಮುಂದುವರಿಸಲು ಬಯಸಿದರೆ ಪ್ರತಿ ಬಾರಿ 5 ವರ್ಷಗಳಂತೆ ಎಷ್ಟು ಬಾರಿಯಾದರೂ ಪಿಪಿಎಫ್ ಖಾತೆಯ ಅವಧಿಯನ್ನು ಹೆಚ್ಚಿಸಬಹುದು. ಖಾತೆಯಲ್ಲಿ ಜಮೆಯಾಗಿರುವ ಮೊತ್ತವನ್ನು ಹಿಂಪಡೆಯುವುದು ಅಥವಾ ಅದನ್ನು ಹಾಗೆಯೇ ಬಿಟ್ಟು ಅದಕ್ಕೆ ಬಡ್ಡಿ ಆದಾಯವನ್ನು ಗಳಿಸುವುದು ಎರಡೂ ಅವಕಾಶ ನಿಮ್ಮ ಮಗ ಅಥವಾ ಮಗಳಿಗೆ ಇರುತ್ತದೆ.

  ಉಳಿತಾಯದ ಮಹತ್ವ ತಿಳಿಸುವ ಪಿಪಿಎಫ್

  ಮಕ್ಕಳ ಹೆಸರಿನಲ್ಲಿ ಚಿಕ್ಕಂದಿನಲ್ಲಿಯೇ ಪಿಪಿಎಫ್ ಖಾತೆ ಆರಂಭಿಸುವುದರಿಂದ ಅವರಿಗೆ ಬೇಗನೆ ಹಣ ಉಳಿತಾಯದ ಮಹತ್ವದ ಬಗ್ಗೆ ಅರಿವು ಮೂಡಲಾರಂಭಿಸುತ್ತದೆ. ಅವರ ವೃತ್ತಿ ಜೀವನ ಆರಂಭವಾದ ತಕ್ಷಣ ಹಣ ಉಳಿತಾಯ ಮಾಡುವ ಪ್ರವೃತ್ತಿ ಬೆಳೆಯಲು ಇದು ಸಹಕಾರಿಯಾಗಿದೆ. ೧೫ ವರ್ಷಗಳ ನಂತರ ಕೂಡ ಅವರು ಖಾತೆಗೆ ವಂತಿಗೆ ನೀಡುವುದನ್ನು ಮುಂದುವರಿಸಬಹುದು. ಇದರಿಂದ ಆದಾಯ ತೆರಿಗೆ ಕಾಯ್ದೆ ೮೦ ಸಿ ಪ್ರಕಾರ ತೆರಿಗೆ ವಿನಾಯಿತಿ ಪಡೆಯಲು ಸಹ ಅವರು ಅರ್ಹರಾಗುತ್ತಾರೆ.

   

  ಭಾಗಶಃ ಮೊತ್ತ ಹಿಂಪಡೆಯುವಿಕೆ

  ಸಾಮಾನ್ಯ ಪಿಪಿಎಫ್ ಖಾತೆ ಆರಂಭಿಸಿದ 7ನೇ ವರ್ಷದಿಂದ ಭಾಗಶಃ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಆದರೆ ಮುಂದುವರಿಸಿದ ಪಿಪಿಎಫ್ ಖಾತೆಗೆ ಸಂಬಂಧಿಸಿದಂತೆ ಹಣ ಹಿಂಪಡೆಯುವ ನಿಯಮಗಳು ಭಿನ್ನವಾಗಿವೆ. ಅವಧಿ ಹೆಚ್ಚಳ ಮಾಡಲಾದ ಪಿಪಿಎಫ್ ಖಾತೆಯಲ್ಲಿನ ಭಾಗಶಃ ಮೊತ್ತವನ್ನು ಪ್ರತಿ ಆರ್ಥಿಕ ವರ್ಷದಲ್ಲಿ ಒಮ್ಮೆ ಹಿಂಪಡೆಯುವ ಅವಕಾಶವಿದೆ. ಆದರೆ ವಂತಿಗೆ ಸಹಿತ ಅಥವಾ ವಂತಿಗೆ ರಹಿತವಾಗಿ ಖಾತೆಯ ಅವಧಿ ಹೆಚ್ಚಳ ಮಾಡಿರುವ ಅಂಶದ ಮೇಲೆ ಇದು ನಿರ್ಧರಿಸಲ್ಪಡುತ್ತದೆ. ಒಂದು ವೇಳೆ ವಂತಿಗೆ ರಹಿತವಾಗಿ ಖಾತೆಯ ಅವಧಿ ಹೆಚ್ಚಿಸಿದ್ದಲ್ಲಿ, ಖಾತೆಯಲ್ಲಿನ ಬ್ಯಾಲೆನ್ಸ್ ಆಧರಿಸಿ ಎಷ್ಟು ಬೇಕಾದರೂ ಮೊತ್ತವನ್ನು ಹಿಂಪಡೆಯಬಹುದು. ವಂತಿಗೆ ಸಹಿತವಾಗಿ ಖಾತೆಯ ಅವಧಿ ಹೆಚ್ಚಿಸಿದ್ದಲ್ಲಿ 5 ವರ್ಷಗಳ ಲಾಕ್ ಇನ್ ಅವಧಿಯಲ್ಲಿ ಕೇವಲ ಶೇ.60ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ನಿಮ್ಮ ಮಗ ಅಥವಾ ಮಗಳ ಉನ್ನತ ಶಿಕ್ಷಣದ ಕೊನೆಯ ವರ್ಷಗಳು ಅಥವಾ ವೃತ್ತಿ ಜೀವನದ ಆರಂಭದಲ್ಲಿ ಪಿಪಿಎಫ್‌ನಲ್ಲಿನ ಈ ಮೊತ್ತವು ಸಕಾಲಿಕವಾಗಿ ಸಹಾಯಕ್ಕೆ ಬರುತ್ತದೆ.

  English summary

  What are the advantages of opening PPF account for minors

  Public Provident Fund (PPF) scheme is one of the safest instruments that can be used by individuals or salaried employees who are looking at long-term options for tax-free earnings.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more