For Quick Alerts
ALLOW NOTIFICATIONS  
For Daily Alerts

ಹಣದಿಂದ ಹಣ ದುಪ್ಪಟ್ಟು ಮಾಡುವುದು ಹೇಗೆ?

|

ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಬಹು ಕಾಲದವರೆಗೆ ದೊಡ್ಡ ಮೊತ್ತದ ಹಣವನ್ನಿಟ್ಟು ಸುಮ್ಮನಿದ್ದು ಬಿಡುವುದು ಅಂದರೆ ಹಣವು ಹಣವನ್ನು ದುಡಿಯುವ ಸಾಮರ್ಥ್ಯವನ್ನು ಕಡೆಗಣಿಸಿದಂತೆಯೇ ಸರಿ. ಹೀಗೆ ಮಾಡುವುದು ಮೂರ್ಖತನವೂ ಹೌದು. ಬಹು ದಿನಗಳ ನಂತರ ಬುದ್ಧಿ ಬಂದಾಗ ಪಶ್ಚಾತ್ತಾಪ ಪಡುವುದು ಬಿಟ್ಟು ಇನ್ನೇನು ಮಾಡಲೂ ಸಾಧ್ಯವಿರುವುದಿಲ್ಲ. ಹಣವನ್ನು ನಿಮಗಾಗಿ ಕೆಲಸ ಮಾಡುವಂತೆ ಸೂಕ್ತವಾಗಿ ವಿನಿಯೋಜಿಸುವುದು ಸಹ ಒಂದು ಕಲೆ. ಮಾರುಕಟ್ಟೆಯಲ್ಲಿ ಹಲವಾರು ಹೂಡಿಕೆ ಯೋಜನೆಗಳಿದ್ದರೂ ಹಣದಿಂದ ಹಣ ಗಳಿಸಲು ಕೆಲ ಉತ್ತಮ ಯೋಜನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ.

ಲಿಕ್ವಿಡ್ ಫಂಡ್ಸ್
 

ಲಿಕ್ವಿಡ್ ಫಂಡ್ಸ್

ನಿರೀಕ್ಷಿತ ರಿಟರ್ನ್ಸ್ (ಪ್ರತಿಫಲ): ಶೇ. 6 ರಿಂದ 8

ಲಿಕ್ವಿಡಿಟಿ: ಅದೇ ದಿನ ಅಥವಾ ಮರುದಿನ

ಹೆಸರೇ ಹೇಳುವಂತೆ ಈ ಫಂಡ್‌ಗಳಲ್ಲಿನ ಹೂಡಿಕೆಯನ್ನು ಯಾವಾಗ ಬೇಕಾದರೂ ಶೀಘ್ರ ಹಾಗೂ ಸುಲಭವಾಗಿ ಹಿಂಪಡೆಯಬಹುದು. ಯಾವುದೇ ಲಾಕ್ ಇನ್ ಅವಧಿಯ ನಿರ್ಬಂಧವಿರುವುದಿಲ್ಲ. ಹಾಗೆಯೇ ಪ್ರವೇಶ ಅಥವಾ ನಿರ್ಗಮನ ಶುಲ್ಕಗಳು ಸಹ ಇಲ್ಲ. ಬೇಕೆಂದಾಗ ನಗದು ಪಡೆಯುವ ಇವು ಕಡಿಮೆ ಅಪಾಯದ ಹೂಡಿಕೆ ಫಂಡ್‌ಗಳಾಗಿವೆ. ಆನ್ಲೈನ್ ಮೂಲಕ ಫಂಡ್‌ಗಳನ್ನು ಖರೀದಿಸಬಹುದಾಗಿದ್ದು, ಬೇಕೆಂದಾಗ ಹಣ ಸೇರಿಸಬಹುದು ಅಥವಾ ಹಿಂಪಡೆಯಬಹುದು.

ಫಿಕ್ಸೆಡ್ ಡಿಪಾಸಿಟ್

ಫಿಕ್ಸೆಡ್ ಡಿಪಾಸಿಟ್

ನಿರೀಕ್ಷಿತ ರಿಟರ್ನ್ಸ್: ಶೇ.3 ರಿಂದ 7

ಲಿಕ್ವಿಡಿಟಿ (ನಗದೀಕರಣ): ಅದೇ ದಿನ. ದಂಡ ಶುಲ್ಕಗಳ ಬಗ್ಗೆ ಪರಿಶೀಲನೆ ಅಗತ್ಯ

ಫಿಕ್ಸೆಡ್ ಡಿಪಾಸಿಟ್‌ಗಳು ಸಾಂಪ್ರದಾಯಿಕ ಹಾಗೂ ನಿಧಾನವಾಗಿ ಹಣ ಬೆಳೆಯುವ ಹೂಡಿಕೆ ವಿಧಾನವಾಗಿವೆ. ಇತ್ತೀಚೆಗೆ ಕೆಲ ಬ್ಯಾಂಕುಗಳು ಎಫ್‌ಡಿ ಬಡ್ಡಿದರಗಳನ್ನು ಹೆಚ್ಚಿಸಿದ್ದು, ಅವಧಿಪೂರ್ವ ಎಫ್‌ಡಿ ನಗದೀಕರಣಕ್ಕೆ ಯಾವುದೇ ಶುಲ್ಕಗಳನ್ನು ವಿಧಿಸುತ್ತಿಲ್ಲ. ಭವಿಷ್ಯದಲ್ಲಿ ನಿಖರವಾಗಿ ಹಣ ಯಾವಾಗ ಬೇಕಾಗಲಿದೆ ಎಂಬುದು ತಿಳಿದಾಗ ಹಾಗೂ ಕೈಯಲ್ಲಿ ಹೆಚ್ಚುವರಿ ಮೊತ್ತ ಇರುವಾಗ ಎಫ್‌ಡಿಗಳಲ್ಲಿ ಹೂಡಿಕೆ ಸೂಕ್ತ. ಹೂಡಿಕೆಗೆ ಸಂಪೂರ್ಣ ಸುರಕ್ಷತೆಯನ್ನು ಬಯಸುವವರಿಗೆ ಎಫ್‌ಡಿ ಹೇಳಿ ಮಾಡಿಸಿದಂತಿವೆ.

ಇಕ್ವಿಟಿ

ಇಕ್ವಿಟಿ

ನಿರೀಕ್ಷಿತ ರಿಟರ್ನ್ಸ್: ಹಲವಾರು ಅಂಶಗಳನ್ನು ಆಧರಿಸಿ ಹೆಚ್ಚು ಕಡಿಮೆ ಆಗಬಹುದು

ಲಿಕ್ವಿಡಿಟಿ: ಮರುದಿನ

ಉಳಿತಾಯದ ಹಣದಿಂದ ಸಂಪತ್ತು ಸೃಷ್ಟಿಗೆ ಇಕ್ವಿಟಿಗಳು ಉತ್ತಮ ಯೋಜನೆಗಳಾಗಿವೆ. ಆಗಾಗ ಮಾರ್ಕೆಟ್‌ನ ಏರಿಳಿತಗಳನ್ನು ನೋಡಿ ಆತಂಕ ಪಡುವುದು ಬೇಡವೆಂದಾದಲ್ಲಿ ಪ್ರತಿ ತಿಂಗಳು ಸಿಪ್ (ಯೋಜನಾಬದ್ಧ ಹೂಡಿಕೆ ಯೋಜನೆ) ಮೂಲಕ ಹಣ ಜಮೆ ಮಾಡುತ್ತ ಹೋಗಬಹುದು. ಇಕ್ವಿಟಿಗಳಲ್ಲಿ ದೊಡ್ಡ ಮೊತ್ತದ ಪ್ರತಿಫಲವನ್ನು ಪಡೆಯುವ ಅವಕಾಶಗಳು ಹೇರಳವಾಗಿವೆ. ಅದರ ಜೊತೆಗೆ ರಿಸ್ಕ್ ಸಹ ಅಷ್ಟೇ ಹೆಚ್ಚಾಗಿರುತ್ತದೆ ಎಂಬುದು ಗೊತ್ತಿರಲಿ. ಇತರ ಯೋಜನೆಗಳಿಗೆ ಹೋಲಿಸಿದಲ್ಲಿ ಇಕ್ವಿಟಿಗಳಲ್ಲಿನ ಹೂಡಿಕೆಯ ಗಳಿಕೆಗೆ ಅಲ್ಪ ಪ್ರಮಾಣದ ತೆರಿಗೆಯನ್ನು ವಿಧಿಸಲಾಗುತ್ತದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
 

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ನಿರೀಕ್ಷಿತ ರಿಟರ್ನ್ಸ್: ಶೇ. 7

ಲಿಕ್ವಿಡಿಟಿ: ಹೂಡಿಕೆಯ ಕನಿಷ್ಠ ನಿಗದಿತ ಅವಧಿ (ದೀರ್ಘಾವಧಿ)

ಬಹು ಹಿಂದಿನಿಂದಲೂ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಯಾಗಿರುವ ಪಿಪಿಎಫ್ 80 ರ ದಶಕದ ನಂತರ ಇತ್ತೀಚೆಗೆ ಅತಿ ಕಡಿಮೆ ಪ್ರತಿಫಲ ನೀಡಿದೆ. ಇದರಲ್ಲಿನ ಹೂಡಿಕೆಯ ಬಡ್ಡಿಗೆ ಸರಕಾರದ ಖಾತ್ರಿ ಇರುವುದು ಹಾಗೂ ತೆರಿಗೆ ರಿಯಾಯಿತಿಗಳು ಇದರ ವೈಶಿಷ್ಟ್ಯವಾಗಿವೆ. ಗರಿಷ್ಠ ಹಾಗೂ ಕನಿಷ್ಠ ಹೂಡಿಕೆಯ ಮಿತಿ ಹಾಗೂ ವರ್ಷಕ್ಕೆ ಹಣ ಜಮೆ ಮಾಡುವ ಸಂಖ್ಯೆಗಳ ಮೇಲಿನ ಮಿತಿಗಳಿಂದ ಇದು ಎಲ್ಲರಿಗೂ ಸೂಕ್ತವಾದ ಯೋಜನೆಯಾಗಿಲ್ಲ.

ಪಿ2ಪಿ ಲೆಂಡಿಂಗ್

ಪಿ2ಪಿ ಲೆಂಡಿಂಗ್

ನಿರೀಕ್ಷಿತ ರಿಟರ್ನ್ಸ್: ಶೇ. 18 ರಿಂದ 26

ಲಿಕ್ವಿಡಿಟಿ: ನೀವು ನೀಡುವ ಸಾಲದ ಅವಧಿ ಆಧರಿತ

ಬಹುತೇಕ ಆನ್ಲೈನ್ ಮೂಲಕ ನಿರ್ದಿಷ್ಟ ಪ್ಲಾಟಫಾರ್ಮ ಬಳಸಿ ಹಣದ ಅವಶ್ಯಕತೆ ಇರುವವರಿಗೆ ನಮ್ಮ ದುಡ್ಡನ್ನು ಸಾಲವಾಗಿ ನೀಡುವುದು ಪಿ2ಪಿ ಲೆಂಡಿಂಗ್ ಆಗಿದೆ. ಆರಂಭದಲ್ಲಿ ಚಿಕ್ಕ ಮೊತ್ತದೊಂದಿಗೆ ವ್ಯವಹಾರ ಆರಂಭಿಸಬಹುದು. ಒಂದೇ ದೊಡ್ಡ ಮೊತ್ತದ ಸಾಲದಲ್ಲಿ ಎಲ್ಲ ಹಣ ತೊಡಗಿಸುವುದಕ್ಕಿಂತ ವಿವಿಧ ರೀತಿಯ ಚಿಕ್ಕ ಸಾಲಗಳಲ್ಲಿ ಹಣ ವಿನಿಯೋಜನೆಯಿಂದ ಆದಷ್ಟೂ ರಿಸ್ಕ್ ಕಡಿಮೆ ಮಾಡಿಕೊಳ್ಳಬಹುದು. ಪ್ರತಿ ತಿಂಗಳು ಹೂಡಿಕೆಯ ಕೆಲ ಭಾಗ ಹಾಗು ಬಡ್ಡಿಯು ವಾಪಸ್ ಬರುವಂತೆ ನೋಡಿಕೊಳ್ಳಬೇಕು. ಈ ವ್ಯವಹಾರಕ್ಕೆ ಯಾವುದೇ ವಿಮಾ ಸುರಕ್ಷೆ ಇರುವುದಿಲ್ಲವಾದ್ದರಿಂದ ಯಾವ ರೀತಿಯ ಸಾಲದ ವ್ಯವಹಾರ ನಡೆಸಬೇಕೆಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದು ನಿಮ್ಮದೇ ಜವಾಬ್ದಾರಿಯಾಗಿರುತ್ತದೆ.

English summary

Simple ways to make Double Money?

Leaving money in a bank account idling away is an unforgivable waste of your money’s potential.
Story first published: Monday, December 3, 2018, 9:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more