For Quick Alerts
ALLOW NOTIFICATIONS  
For Daily Alerts

ಇಪಿಎಫ್, ಪಿಪಿಎಫ್ ನಿಯಮ ಮತ್ತು ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

|

ನೆಮ್ಮದಿಯ ನಿವೃತ್ತ ಜೀವನಕ್ಕೆ ಅಡಿಪಾಯ ಹಾಕುವುದು ವೈಯಕ್ತಿಕ ಹಣಕಾಸು ಯೋಜನೆಯ ಅತಿ ಮುಖ್ಯ ಭಾಗವಾಗಿದೆ. ವ್ಯಕ್ತಿಯೊಬ್ಬನ ಜೀವನದಲ್ಲಿನ 'ಚಿನ್ನದ ವರ್ಷಗಳು' ಎನ್ನಲಾಗುವ ಮುಪ್ಪಿನ ಅವಧಿ ಸುಖ ಹಾಗೂ ಸಂತೃಪ್ತಿಯಿಂದ ಕೂಡಿರಬೇಕಾದರೆ ಸಾಕಷ್ಟು ಮೊದಲೇ ಅದಕ್ಕಾಗಿ ತಯಾರಿ ಆರಂಭಿಸಬೇಕಾಗುತ್ತದೆ.

2018 ರಲ್ಲಿ ಪ್ರತಿಷ್ಠಿತ ಎಚ್‌ಎಸ್‌ಬಿಸಿ ಬ್ಯಾಂಕ್ 'ನಿವೃತ್ತ ಜೀವನ ಹಾಗೂ ನಿವೃತ್ತ ಜೀವನದ ಅವಶ್ಯಕತೆಗಳು' ಕುರಿತಾಗಿ ನಡೆಸಿದ ಸಂಶೋಧನೆಯೊಂದರ ಪ್ರಕಾರ ಇಂದಿಗೂ ಶೇ. 68 ರಷ್ಟು ಪಾಲಕರು ಮುಪ್ಪಿನಾವಸ್ಥೆಯಲ್ಲಿ ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳಲಿ ಎಂಬ ಆಸೆಯನ್ನು ಹೊಂದಿದ್ದಾರಂತೆ. ಆದರೆ ಶೇ. 30 ರಷ್ಟು ಮಾತ್ರ ಇಂಥ ಪಾಲಕರು ತಮ್ಮ ಮಕ್ಕಳಿಂದ ಪಾಲನೆ, ಪೋಷಣೆ ಪಡೆಯುತ್ತಿದ್ದಾರಂತೆ.

ಅಂದರೆ ಎಲ್ಲ ಮಕ್ಕಳೂ ಮುಪ್ಪಿನಾವಸ್ಥೆಯಲ್ಲಿ ತಮ್ಮ ತಂದೆ, ತಾಯಿಗಳ ಕಡೆಗೆ ಗಮನ ನೀಡುವುದಿಲ್ಲ ಎಂಬುದು ಸೂರ್ಯ, ಚಂದ್ರನಷ್ಟೆ ಸತ್ಯ. ಪರಿಸ್ಥಿತಿ ಹೀಗಿರುವಾಗ ನಮ್ಮ ಮಕ್ಕಳ ಮೇಲೆ ಅವಲಂಬಿತರಾಗಿರುವುದಕ್ಕಿಂತ ಕೆಲಸಕ್ಕೆ ಸೇರಿದ ತಕ್ಷಣ ನಿವೃತ್ತ ಜೀವನಕ್ಕೆ ನಮ್ಮದೇ ಆದ ಉಳಿತಾಯ ಯೋಜನೆ ಆರಂಭಿಸುವುದು ಜೀವನದ ಅಗತ್ಯತೆಗಳಲ್ಲೊಂದಾಗಿದೆ. ಅದರಲ್ಲೂ ಇತ್ತೀಚಿನ ಆಧುನಿಕ ಜೀವನ ಶೈಲಿ, ಹೆಚ್ಚುತ್ತಿರುವ ಜೀವನ ನಿರ್ವಹಣೆ ಖರ್ಚುಗಳ ಸಮಯದಲ್ಲಿ ನಾವು ಯಾರ ಮೇಲೂ ಅವಲಂಬಿತರಾಗಿರುವುದು ಸಾಧ್ಯವೇ ಇಲ್ಲ.

 

ನೆಮ್ಮದಿಯ ನಿವೃತ್ತ ಜೀವನಕ್ಕಾಗಿ ಹಣಕಾಸು ಯೋಜನೆ ರೂಪಿಸಲು ಎರಡು ಉತ್ತಮ ಹಣಕಾಸು ಯೋಜನೆಗಳು ನಮ್ಮ ಮುಂದಿವೆ. ಅವು ಇಪಿಎಫ್ ಹಾಗೂ ಪಿಪಿಎಫ್. ಇವು ದೀರ್ಘಾವಧಿಯಲ್ಲಿ ನಿಯಮಿತವಾಗಿ ಚಿಕ್ಕ ಚಿಕ್ಕ ಕಂತುಗಳಲ್ಲಿ ಉಳಿತಾಯ ಮಾಡುವ ಮೂಲಕ ದೊಡ್ಡ ಮೊತ್ತವನ್ನು ಸಂಗ್ರಹಿಸುವ ಉತ್ತಮ ಹೂಡಿಕೆ ಯೋಜನೆಗಳಾಗಿವೆ. ಖಾತರಿದಾಯಕ ಆದಾಯ ಹಾಗೂ ಅತ್ಯಂತ ಸುರಕ್ಷಿತ ಹೂಡಿಕೆ ಯೋಜನೆಗಳಾದ ಇಪಿಎಫ್ ಹಾಗೂ ಪಿಪಿಎಫ್ ನಿವೃತ್ತ ಜೀವನಕ್ಕಾಗಿ ಹೇಳಿ ಮಾಡಿಸಿದಂತಿವೆ.

ಈ ಎರಡೂ ಯೋಜನೆಗಳಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಕೂಡ ಇರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಆದಾಗ್ಯೂ ಈ ಎರಡರಲ್ಲಿ ಯಾವುದೇ ಯೋಜನೆಯನ್ನು ಆರಿಸಿಕೊಳ್ಳುವ ಮುಂಚೆ ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅಗತ್ಯ. ಹೀಗಾಗಿ ಎರಡೂ ಯೋಜನೆಗಳ ಮಧ್ಯದ ಪ್ರಮುಖ ವ್ಯತ್ಯಾಸಗಳು ಹಾಗೂ ವೈಶಿಷ್ಟ್ಯಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ.

ಇಪಿಎಫ್ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್) ಹಾಗೂ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಮಧ್ಯದ ಪ್ರಮುಖ ವ್ಯತ್ಯಾಸಗಳು ಹೀಗಿವೆ:

1. ಅರ್ಹತೆ

1. ಅರ್ಹತೆ

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಇದನ್ನು 'ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್' (ಇಪಿಎಫ್‌ಓ) ನಿಭಾಯಿಸುತ್ತದೆ. ಮಾಸಿಕ ಸಂಬಳ ಪಡೆಯುವ ಉದ್ಯೋಗಿಗಳು ಮಾತ್ರ ಈ ಯೋಜನೆಗೆ ಒಳಪಡಬಹುದು. 20ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಕಂಪನಿ ಅಥವಾ ಕನಿಷ್ಠ ನಿಗದಿತ ವೇತನಕ್ಕಿಂತ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳ ಕಂಪನಿಯ ನೌಕರರು ಈ ಯೋಜನೆಗೆ ಒಳಡುವುದು ಕಡ್ಡಾಯವಾಗಿದೆ.

ಆದರೆ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ತುಸು ಭಿನ್ನವಾಗಿದ್ದು, ಇದನ್ನು ಪೋಸ್ಟ್ ಆಫೀಸ್ ಹಾಗೂ ಬ್ಯಾಂಕಗಳು ನಿರ್ವಹಿಸುತ್ತವೆ. ಮಾಸಿಕ ಸಂಬಳ ಇರಲೇಬೇಕೆಂಬ ನಿಯಮ ಇದಕ್ಕೆ ಅನ್ವಯಿಸುವುದಿಲ್ಲ.

2. ವಂತಿಗೆ ನಿಯಮಗಳು
 

2. ವಂತಿಗೆ ನಿಯಮಗಳು

ಇಪಿಎಫ್‌ಓ ನಿಯಮಾವಳಿಗಳ ಪ್ರಕಾರ ಕೆಲಸಕ್ಕೆ ನೇಮಿಸಿಕೊಂಡ ಕಂಪನಿಯು ತನ್ನ ಉದ್ಯೋಗಿಗಳಿಗೆ ಇಪಿಎಫ್ ಮಾಡಿಸುವುದು ಹಾಗೂ ಅದಕ್ಕೆ ತನ್ನ ವಂತಿಗೆ ಪಾವತಿಸುವುದು ಕಡ್ಡಾಯವಾಗಿದೆ. ಉದ್ಯೋಗಿಯ ಮೂಲ ಸಂಬಳ ಹಾಗೂ ತುಟ್ಟಿ ಭತ್ಯೆಯ ಶೇ.12 ರಷ್ಟನ್ನು ಕಡಿತಗೊಳಿಸಿ ಅದನ್ನು ಇಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಇಷ್ಟೇ ಮೊತ್ತದ ವಂತಿಗೆಯನ್ನು ಉದ್ಯೋಗದಾತ ಸಂಸ್ಥೆಯು ಇಪಿಎಫ್ ಖಾತೆಗೆ ಪಾವತಿಸುತ್ತದೆ. ಒಂದು ವೇಳೆ ಉದ್ಯೋಗಿಯು ತನ್ನ ವಂತಿಗೆ ಪ್ರಮಾಣವನ್ನು ಹೆಚ್ಚಿಸಿ ಬೇಗ ನಿವೃತ್ತಿ ಪಡೆಯಲು ಇಚ್ಛಿಸಿದಲ್ಲಿ ವಿಪಿಎಫ್ (ಸ್ವಯಂ ನಿವೃತ್ತಿ ಯೋಜನೆ) ಗೆ ಒಳಪಡಬಹುದು. ಇಪಿಎಫ್ ವಂತಿಗೆ ಹೆಚ್ಚಿಸುವಂತೆ ಮಾಲೀಕರಿಗೆ ಅರ್ಜಿ ಸಲ್ಲಿಸಬಹುದು. ಆದರೆ ನೀವು ನಿಮ್ಮ ವಂತಿಗೆ ಹೆಚ್ಚಿಸಿದ ಮಾತ್ರಕ್ಕೆ ಉದ್ಯೋಗದಾತ ಸಂಸ್ಥೆಯು ತನ್ನ ವಂತಿಗೆ ಹೆಚ್ಚಿಸಬೇಕೆಂಬ ಯಾವುದೇ ಕಾನೂನು ಇಲ್ಲ ಎಂಬುದು ಗೊತ್ತಿರಲಿ.

ಪಿಪಿಎಫ್ ಇದೊಂದು ಸ್ವ ಇಚ್ಛೆಯಿಂದ ಪಡೆದುಕೊಳ್ಳುವ ನಿವೃತ್ತಿ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ 500 ರೂ. ಹಾಗೂ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಏಕಗಂಟಿನಲ್ಲಿ ಅಥವಾ ಕಂತುಗಳಲ್ಲಿ ವಂತಿಗೆ ಪಾವತಿಸಬಹುದು.

3. ಬಡ್ಡಿ ದರ

3. ಬಡ್ಡಿ ದರ

ಪ್ರತಿವರ್ಷ ಇಪಿಎಫ್‌ಓ ಇಪಿಎಫ್ ಬಡ್ಡಿ ದರಗಳನ್ನು ಪ್ರಕಟಿಸುತ್ತದೆ. 2017-18ನೇ ಸಾಲಿಗಾಗಿ ಇದನ್ನು ಶೇ.8.55 ಎಂದು ಘೋಷಿಸಲಾಗಿದೆ.

ಆದರೆ ಪಿಪಿಎಫ್ ಯೋಜನೆಯು ಸರಕಾರದ ಹತ್ತು ವರ್ಷಗಳ ಬಾಂಡ್ ಯೋಜನೆಯ ಆದಾಯವನ್ನು ಆಧರಿಸಿದೆ. ಕೇಂದ್ರ ಸರಕಾರ ಪ್ರತಿ ತ್ರೈಮಾಸಿಕಕ್ಕೊಮ್ಮೆ ಪಿಪಿಎಫ್ ಬಡ್ಡಿ ದರಗಳನ್ನು ಪರಿಷ್ಕರಿಸುತ್ತದೆ. 2018-19 ರ ಕಳೆದ ತ್ರೈಮಾಸಿಕಕ್ಕಾಗಿ ಶೇ.8 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.

4. ತೆರಿಗೆ ವಿನಾಯಿತಿ ಸೌಲಭ್ಯಗಳು

4. ತೆರಿಗೆ ವಿನಾಯಿತಿ ಸೌಲಭ್ಯಗಳು

ಇಪಿಎಫ್ ಖಾತೆಯ ಮ್ಯಾಚುರಿಟಿ ಸಂದರ್ಭದಲ್ಲಿ ಸಿಗುವ ಮ್ಯಾಚುರಿಟಿ ಮೊತ್ತವು ಸಂಪೂರ್ಣ ತೆರಿಗೆ ವಿನಾಯಿತಿಗೆ ಒಳಪಟ್ಟಿದೆ. ಆದರೆ ಮ್ಯಾಚುರಿಟಿಗೂ ಹಿಂದಿನ 5 ವರ್ಷಗಳ ಕಾಲ ಸತತವಾಗಿ ಸೇವಾವಧಿ ಹೊಂದಿದ್ದರೆ ಮಾತ್ರ ಈ ಸೌಲಭ್ಯ ಪಡೆಯಬಹುದು. ಒಂದೊಮ್ಮೆ ಈ ಅವಧಿಯಲ್ಲಿ ನೀವು ಕೆಲಸ ಬದಲಾಯಿಸಿದಲ್ಲಿ ಹೊಸ ಉದ್ಯೋಗದಾತ ಸಂಸ್ಥೆಗೆ ಇಪಿಎಫ್ ಖಾತೆಯನ್ನು ವರ್ಗಾಯಿಸುವ ಮೂಲಕ ತೆರಿಗೆ ಪಾವತಿಸುವುದರಿಂದ ಪಾರಾಗಬಹುದು. ಹಾಗೆಯೇ ಯಾವುದೇ ಅವಧಿಯಲ್ಲಿ ನಿರುದ್ಯೋಗಿಯಾಗಿದ್ದಲ್ಲಿ ಆ ಅವಧಿಗೆ ತೆರಿಗೆ ಪಾವತಿಸುವುದು ಕಡ್ಡಾಯ.

ಆದರೆ ಪಿಪಿಎಫ್‌ನಲ್ಲಿ ಈ ನಿಯಮಗಳು ಬೇರೆಯಾಗಿವೆ. ಪಿಪಿಎಫ್ ಮೂರು ಹಂತದ ತೆರಿಗೆ ವಿನಾಯಿತಿ ಸೌಲಭ್ಯ ಹೊಂದಿದ್ದು, ಹೂಡಿಕೆ ಮಾಡಲಾಗುವ ಎಲ್ಲ ವಂತಿಗೆ, ಹೂಡಿಕೆ ಮೊತ್ತ, ಸಂಗ್ರಹವಾದ ಮೊತ್ತ ಹಾಗೂ ಮ್ಯಾಚುರಿಟಿ ಮೊತ್ತಗಳು ತೆರಿಗೆ ವಿನಾಯಿತಿಗೆ ಒಳಪಟ್ಟಿವೆ.

5. ಲಾಕ್ ಇನ್ ಅವಧಿ

5. ಲಾಕ್ ಇನ್ ಅವಧಿ

ತೆರಿಗೆ ವಿನಾಯಿತಿಯ ಲಾಭ ಪಡೆಯುವಂತಾಗಲು ಇಪಿಎಫ್ ಖಾತೆಗಳಿಗೆ 5 ವರ್ಷಗಳ ಲಾಕ್ ಇನ್ ಅವಧಿ ವಿಧಿಸಲಾಗಿದೆ. ಪ್ರತಿ ಬಾರಿ ಕೆಲಸ ಬದಲಾಯಿಸಿದಾಗ ಅದೇ ಖಾತೆಯನ್ನು ಹೊಸ ಕಂಪನಿಯೊಂದಿಗೆ ಮುಂದುವರಿಸಬಹುದು. 55 ವರ್ಷ ವಯಸ್ಸಿನ ನಂತರ ಅಥವಾ ನಿವೃತ್ತಿಯ ನಂತರ ಇಪಿಎಫ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯಬಹುದು. ಪಿಪಿಎಫ್ ಖಾತೆಯು 15 ವರ್ಷಗಳ ಲಾಕ್ ಇನ್ ಅವಧಿ ಹೊಂದಿದ್ದು, ಖಾತೆ ಆರಂಭಿಸಿದ 15 ವರ್ಷಗಳ ಬಳಿಕವಷ್ಟೆ ಹಣ ಹಿಂಪಡೆಯಬಹುದು.

6. ಅವಧಿಪೂರ್ವ ಹಿಂಪಡೆಯುವಿಕೆ

6. ಅವಧಿಪೂರ್ವ ಹಿಂಪಡೆಯುವಿಕೆ

5 ವರ್ಷಗಳ ಕಾಲ ಸತತವಾಗಿ ಸೇವಾವಧಿಯನ್ನು ಪೂರೈಸಿದ್ದಲ್ಲಿ ನೀವು ತೆರಿಗೆ ಮುಕ್ತವಾಗಿ ಇಪಿಎಫ್‌ನಲ್ಲಿನ ಮೊತ್ತವನ್ನು ಹಿಂಪಡೆಯಬಹುದು. ಒಂದೊಮ್ಮೆ 5 ವರ್ಷಗಳ ಸೇವಾವಧಿ ಪೂರೈಸಿರದಿದ್ದಲ್ಲಿ ಶೇ.30 ರಷ್ಟು ಮೊತ್ತವನ್ನು ಟಿಡಿಎಸ್ (ಪ್ಯಾನ್ ನಂಬರ್ ಇಲ್ಲದಿದ್ದಲ್ಲಿ) ಕಡಿತ ಮಾಡಲಾಗುವುದು. ಹಾಗೆಯೇ ಪ್ಯಾನ್ ನಂಬರ್ ಅನ್ನು ಈಗಾಗಲೇ ಇಪಿಎಫ್‌ಓ ಗೆ ನೀಡಿದ್ದರೆ ಶೇ.10 ರಷ್ಟು ಟಿಡಿಎಸ್ ಪಾವತಿಸಬೇಕಾಗುವುದು. ಮಕ್ಕಳ ಮದುವೆ, ಗೃಹಸಾಲ ಮರುಪಾವತಿ, ಗಂಭೀರ ಕಾಯಿಲೆಯ ಚಿಕಿತ್ಸೆ ಹೀಗೆ ಕೆಲವೇ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಇಪಿಎಫ್ ಮೊತ್ತವನ್ನು ಅವಧಿಪೂರ್ವವಾಗಿ ಹಿಂಪಡೆಯಬಹುದು ಎಂಬುದು ಗಮನದಲ್ಲಿರಲಿ.

ಕೆಲ ನಿರ್ದಿಷ್ಟ ನಿಯಮಗಳನ್ನು ನೋಡುವುದಾದರೆ, ಇಪಿಎಫ್ ಖಾತೆ ಆರಂಭಿಸಿದ 7 ವರ್ಷಗಳ ನಂತರ ಮಾತ್ರ ಮಕ್ಕಳ ಮದುವೆಗಾಗಿ ಅವಧಿಪೂರ್ವ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಹೊಸ ನಿಯಮಾವಳಿಯ ಪ್ರಕಾರ ಕನಿಷ್ಠ ಒಂದು ತಿಂಗಳವರೆಗೆ ನೀವು ನಿರುದ್ಯೋಗಿಯಾಗಿದ್ದಲ್ಲಿ ಇಪಿಎಫ್‌ನ ಶೇ. 75 ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ನೀವು ಮತ್ತೊಂದು ಕೆಲಸಕ್ಕೆ ಸೇರುವವರೆಗೆ ನಿಮ್ಮ ಖಾತೆಯು ಇಪಿಎಫ್‌ಓ ನಲ್ಲಿ ಚಾಲ್ತಿಯಲ್ಲಿರುತ್ತದೆ. ಹಾಗೆಯೇ ಮತ್ತೂ ಎರಡು ತಿಂಗಳವರೆಗೆ ನಿರುದ್ಯೋಗಿಯಾಗಿ ಮುಂದುವರೆದಲ್ಲಿ ಇನ್ನುಳಿದ ಹಣವನ್ನು ಸಹ ಹಿಂಪಡೆಯಬಹುದಾಗಿದೆ.

ಮುಕ್ತಾಯ

ಮುಕ್ತಾಯ

ಅವಧಿ ಪೂರ್ವ ಹಣ ಹಿಂಪಡೆಯಲು ಪಿಪಿಎಫ್‌ನ ನಿಯಮಾವಳಿಗಳು ತುಸು ಭಿನ್ನವಾಗಿವೆ. ನಾಲ್ಕನೇ ವರ್ಷದ ಕೊನೆಯಲ್ಲಿ ಖಾತೆಯಲ್ಲಿರುವ ಶೇ. 50 ರಷ್ಟು ಮೊತ್ತವನ್ನು ಅವಧಿಪೂರ್ವವಾಗಿ ಹಿಂಪಡೆಯಬಹುದು. ವರ್ಷಕ್ಕೊಂದು ಬಾರಿ ಮಾತ್ರ ಹಣ ಹಿಂಪಡೆಯಲು ಅವಕಾಶವಿದೆ. ಹೀಗೆ ಅವಧಿಪೂರ್ವ ಹಿಂಪಡೆಯುವಿಕೆಗೆ ತೆರಿಗೆ ವಿನಾಯಿತಿ ಸೌಲಭ್ಯ ಅನ್ವಯಿಸುತ್ತದೆ ಎಂಬುದು ಮಾತ್ರ ಖುಷಿಯ ಸಂಗತಿಯಾಗಿದೆ.

English summary

EPF vs PPF: 6 key things you should know before investing

EPF and PPF. Here you invest in small portions over a long term and create a lump sum for use during retirement.
Story first published: Thursday, January 10, 2019, 11:38 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more