2019 ರಲ್ಲಿ ಉದ್ಯೋಗ ಹುಡುಕುವಾಗ ಈ ತಪ್ಪುಗಳನ್ನು ಮಾಡಬೇಡಿ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಹೊಸ ವರ್ಷದ ಪರ್ವಕಾಲದಲ್ಲಿ ಹಳೆಯ ಕಹಿಯನ್ನೆಲ್ಲ ಮರೆತು ಹೊಸ ಸಂಗತಿಗಳಿಗೆ ಮನಸ್ಸನ್ನು ತೆರೆದುಕೊಂಡು ಮುನ್ನಡೆಯುವುದಕ್ಕಿಂತ ಉತ್ತಮ ಸಂಗತಿ ಬೇರೊಂದಿಲ್ಲ. ಹೊಸ ವರ್ಷಕ್ಕೆ ಹೊಸದೇನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿರುವವರು ನೀವಾಗಿದ್ದಲ್ಲಿ ಅದನ್ನು ಸಾಧಿಸಲು ಏನು ಮಾಡಬೇಕು ಎಂಬುದನ್ನು ನಾವು ಹೇಳಿ ಕೊಡುತ್ತೇವೆ. ಈ ಅಂಕಣದಲ್ಲಿ ತಿಳಿಸಲಾದ ಕ್ರಮಗಳನ್ನು ಅನುಸರಿಸಿ ಜೀವನದಲ್ಲಿ ಬದಲಾವಣೆ ಕಾಣಲು ನೀವೂ ಯತ್ನಿಸಿ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಿರಾ?

  1. ಪ್ಲೇಸಮೆಂಟ್ ಕನ್ಸಲ್ಟನ್ಸಿಗಳ ಸಾಮರ್ಥ್ಯ

  ಹಲವಾರು ಪ್ಲೇಸಮೆಂಟ್ ಏಜೆನ್ಸಿಗಳಿಗೆ ನಿಮ್ಮ ರೆಸ್ಯೂಮ್ ನೀಡುವುದರಿಂದ ಬೇಗನೆ ಸೂಕ್ತ ನೌಕರಿ ದೊರಕುತ್ತದೆ ಎಂಬುದು ತಪ್ಪು ಕಲ್ಪನೆ. ಏಜೆನ್ಸಿಗಳು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆಧರಿಸಿ ಹಾಗೂ ಹೆಚ್ಚಾಗಿ ಕಂಪನಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತವೆ. ನಿಮಗಾಗಿಯೇ ಯಾವುದೇ ನಿರ್ದಿಷ್ಟ ಕೆಲಸವನ್ನು ಅವರು ಹುಡುಕಲಾರರು ಎಂಬುದು ಗೊತ್ತಿರಲಿ. ಅವರ ಬಳಿ ಈಗಾಗಲೇ ಇರುವ ಸಾವಿರಾರು ರೆಸ್ಯೂಮ್‌ಗಳಲ್ಲಿ ನಿಮ್ಮದೂ ಸೇರಿಕೊಂಡಿರುತ್ತದೆ. ಹೀಗಾಗಿ ಆದಷ್ಟೂ ನಿಮ್ಮ ಸ್ವಸಾಮರ್ಥ್ಯದಿಂದ ಕೆಲಸ ಗಿಟ್ಟಿಸಲು ಯತ್ನಿಸಿ.

  2. ನೂರಾರು ಕಡೆ ಅರ್ಜಿ ಹಾಕುವಿಕೆ

  ಸಿಕ್ಕ ಸಿಕ್ಕ ಕಡೆಗೆಲ್ಲ ರೆಸ್ಯೂಮ್ ಹಾಕಿ ನೌಕರಿಗೆ ಯತ್ನಿಸುವುದು ಜಾಣತನವಲ್ಲ. ಇದರಿಂದ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡಂತಾಗುತ್ತದೆ. ಇದರಿಂದ ನಿಮಗೆ ಸರಿಹೊಂದದ ಕೆಲಸಗಳಿಗಾಗಿ ಸಮಯ ಹಾಗೂ ಶ್ರಮಗಳನ್ನು ವ್ಯರ್ಥ ಮಾಡಿಕೊಳ್ಳುವಂತಾಗುತ್ತದೆ. ಇದರ ಬದಲು ನಿಮಗೆ ಬೇಕಾದ ರೀತಿಯ ಹುದ್ದೆ ಹಾಗೂ ಕಂಪನಿಗಳತ್ತ ದೃಷ್ಟಿ ಇಟ್ಟು ಅದರ ಬಗ್ಗೆ ಪರಿಶ್ರಮ ಪಡುವುದು ಸರಿಯಾದ ಮಾರ್ಗವಾಗಿದೆ.

  3. ಲಕ್ ಹಾಗೂ ಅವಕಾಶಗಳ ನಿರೀಕ್ಷೆ

  ನಾನು ಅದೃಷ್ಟವಂತನಾಗಿದ್ದೇನೆ, ನನಗೆ ಬೇಕಾದ ನೌಕರಿ ಸಿಕ್ಕೇ ಸಿಗುತ್ತದೆ ಎಂಬ ದೃಷ್ಟಿಕೋನದಿಂದ ನೌಕರಿ ಹುಡುಕುವುದು ಸರಿಯಲ್ಲ. ಬರೀ ಲಕ್ ಹಾಗೂ ನಿರೀಕ್ಷೆಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಇದರ ಬದಲು ಸರಿಯಾದ ತಯಾರಿ ನಡೆಸಲು ಶ್ರಮ ಪಟ್ಟರೆ ಉದ್ದೇಶಿತ ಗುರಿಯನ್ನು ಮುಟ್ಟಲು ಸಾಧ್ಯ.

  4. ಮನೆಯಲ್ಲೇ ಕುಳಿತರೆ ಏನೂ ಸಾಧಿಸಲಾಗದು

  ಹೊಲದಲ್ಲಿ ಒಂದು ಬಾರಿ ಬೀಜ ಬಿತ್ತಿ ಇನ್ನೇನು ಸಮೃದ್ಧ ಫಸಲು ಬರುತ್ತದೆ ಎಂದು ಮನೆಯಲ್ಲಿ ಕುಳಿತ ರೈತನಿಗೆ ಏನೂ ಸಿಗಲಾರದು. ಹಾಗೆಯೇ ಕೇವಲ ರೆಸ್ಯೂಮ್ ಕಳುಹಿಸುವುದರಿಂದ ಯಾವುದೇ ಉಪಯೋಗವಿಲ್ಲ. ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡುವುದು, ಕಂಪನಿಗಳಲ್ಲಿ ನಿರ್ಣಾಯಕ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಫಿ ನೆಪದಲ್ಲಿ ಭೇಟಿ ಮಾಡಿ ಅವರೊಂದಿಗೆ ಚರ್ಚಿಸುವುದು ಸಾಕಷ್ಟು ಉತ್ತಮ ಫಲ ನೀಡುತ್ತವೆ.

  5. ನಿಮಗೇನು ಬೇಕು ಎಂಬುದು ಮಾತ್ರ ಮುಖ್ಯವಾಗಲಾರದು

  ನಿಮ್ಮ ಮಹತ್ವಾಕಾಂಕ್ಷೆಗಳು ಎಲ್ಲ ಸಂದರ್ಭಗಳಲ್ಲಿಯೂ ಕೆಲಸ ಮಾಡಲಾರವು. ಹಲವಾರು ಹೊಸಬರು ಹಾಗೂ ಅನುಭವಿಕರು ತಮ್ಮ ಕನಸುಗಳಿಗೆ ತಕ್ಕಂತೆ ಜಗತ್ತು ಸ್ಪಂದಿಸುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಕಂಪನಿಗಳಿಗೆ ಅದಾವುದೂ ಮುಖ್ಯವಲ್ಲ. ಅವರ ಅವಶ್ಯಕತೆಗಳಿಗೆ ತಕ್ಕಂತೆ ನಿಮ್ಮಲ್ಲಿ ಯಾವ ಕೌಶಲಗಳಿವೆ ಹಾಗೂ ಅದಕ್ಕಾಗಿ ಎಷ್ಟು ಸಂಬಳ ನೀಡಬಹುದು ಎಂಬುದು ಮಾತ್ರವೇ ಅವರಿಗೆ ಮುಖ್ಯವಾಗಿರುತ್ತದೆ. ಸಂಬಳದ ಬಗ್ಗೆ ಮಾತನಾಡುವ ಮೊದಲು ಹೊರಗಡೆ ಆ ಕೆಲಸಕ್ಕೆ ಸರಾಸರಿ ಎಷ್ಟು ಸಂಬಳ ಸಿಗುತ್ತಿದೆ ಎಂಬ ಬಗ್ಗೆ ಜ್ಞಾನವಿರುವುದು ಅವಶ್ಯಕ.

  Read more about: jobs employment business money
  English summary

  Here's what won’t work for your job search in 2019

  Have you made a New Year resolution for your career? Else let’s choose one now. You can work towards a promotion or greater responsibilities at your workplace.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more