For Quick Alerts
ALLOW NOTIFICATIONS  
For Daily Alerts

6 ಕೋಟಿ ನೌಕರ ವರ್ಗಕ್ಕೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ?

|

ನವದೆಹಲಿ, ಫೆಬ್ರವರಿ 12: ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ) ಯ ಶಿಫಾರಸ್ಸಿನಂತೆ ಭವಿಷ್ಯ ನಿಧಿ ಬಡ್ಡಿದರ ಶೇ 8.55ರಷ್ಟು ಹೆಚ್ಚಿಸುವ ಸಾಧ್ಯತೆ ಕಂಡು ಬಂದಿದೆ.

ಮುಂಬರುವ ಹಣಕಾಸು ವರ್ಷದಲ್ಲಿ ಬಡ್ಡಿದರ ಹೆಚ್ಚಳವಾಗುವ ಉತ್ತಮ ಸಾಧ್ಯತೆಗಳಿವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯ ನಿಧಿ ವಿಥ್ ಡ್ರಾ ನಿಯಮದಲ್ಲಿ ಏನಿದು ಹೊಸ ಬದಲಾವಣೆ

ಒಂದು ವೇಳೆ ಬಡ್ಡಿದರದಲ್ಲಿ ಏರಿಕೆ ಮಾಡಲು ಸಾಧ್ಯವಾಗದೆ ಇದ್ದರೂ, ಹಣದುಬ್ಬರದಲ್ಲಿ ತೀವ್ರ ಕುಸಿತ ಆದರೂ ಈಗಿರುವ ಬಡ್ಡಿದರವನ್ನು ಉಳಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

6 ಕೋಟಿ ನೌಕರ ವರ್ಗಕ್ಕೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ?

 

ಲೋಕಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಮೋದಿ ಸರ್ಕಾರ, ಮತದಾರರನ್ನು ಸೆಳೆಯಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ರೈತರ ಖಾತೆಗೆ ನೇರವಾಗಿ ಕಂತಿನಲ್ಲಿ ಹಣ, ವೃತ್ತಿಪರ ತೆರಿಗೆದಾರರಿಗೆ ವಿನಾಯಿತಿ ಮುಂತಾದ ಅನೇಕ ಯೋಜನೆಗಳ ಬಳಿಕ ಇದೀಗ ಫೆಬ್ರವರಿ 21 ರಂದು ಸರ್ಕಾರ ದೊಡ್ಡ ಉಡುಗೊರೆ ನೀಡುವ ಸುಳಿವು ಸಿಕ್ಕಿದೆ.

ಫೆಬ್ರವರಿ 21 ರಂದು ಇಪಿಎಫ್ಒ, ಮುಂಬರುವ ಆರ್ಥಿಕ ವರ್ಷಕ್ಕೆ ಪಿಎಫ್ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ. ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಸಿಬಿಟಿ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳಲಿದೆ.

ಸಭೆಯಲ್ಲ ಕೈಗೊಂಡ ನಿರ್ಣಯವನ್ನು ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಮಾದರಿಯಲ್ಲಿ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯ ಒಪ್ಪಿಗೆ ಸಿಕ್ಕರೆ ಸರಿ ಸುಮಾರು 6 ಕೋಟಿ ನೌಕರರಿಗೆ ಇದರಿಂದ ಲಾಭವಾಗಲಿದೆ.

ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ.

2017-2018 ರಲ್ಲಿ ಶೇಕಡಾ 8.55 ರಷ್ಟು ಬಡ್ಡಿ ನೀಡಲಾಗಿತ್ತು. ಐದು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಬಡ್ಡಿ ದರವಾಗಿತ್ತು. 2016-2017 ರಲ್ಲಿ ಬಡ್ಡಿ ದರ ಶೇಕಡಾ 8.65 ರಷ್ಟಿತ್ತು. 2015-2016 ರಲ್ಲಿ ಶೇಕಡಾ 8.8ರಷ್ಟಿತ್ತು.

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ

English summary

EPFO interest rate: Subscribers eyeing hike over and above 8.55 percent in FY19

Retirement fund body Employees' Provident Fund Organisation (EPFO) is under the spotlight as subscribers are expecting a hike. With their money locked-in, subscribers would want that they get maximum benefits from it. As it is, EPFO gives one of the highest interest rates on money invested in the country.
Story first published: Tuesday, February 12, 2019, 14:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more