For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಆರಂಭಿಸಲು 20 ಬೆಸ್ಟ್ ಐಡಿಯಾ

|

ಅತ್ಯಂತ ಕ್ರಿಯಾಶೀಲ ಹಾಗೂ ಅತಿ ವೇಗದ ಬೆಳವಣಿಗೆಯ ಆರ್ಥಿಕ ವಾತಾವರಣ ಹೊಂದಿರುವ ಬೆಂಗಳೂರು ಜಗತ್ತಿನ ಅತಿ ಪ್ರಮುಖ ಹಾಗೂ ಬೃಹತ್ ಉದ್ಯಮ ನಗರ. ಹೊಸದಾಗಿ ವ್ಯಾಪಾರ, ವ್ಯವಹಾರ ಆರಂಭಿಸುವವರಿಗೆ ಈ ಊರು ಸ್ವರ್ಗದ ಬಾಗಿಲು ಇದ್ದಂತೆ! ಬಯಸಿದಷ್ಟೂ ವ್ಯಾಪಾರ ವೃದ್ಧಿಯ ಅವಕಾಶ ಹಾಗೂ ಆರ್ಥಿಕ ಭದ್ರತೆಯ ಕಾರಣದಿಂದ ಒಳ್ಳೆಯ ಬಿಸಿನೆಸ್ ಐಡಿಯಾ ಹೊಂದಿದವರು ಈ ಮಹಾನಗರದಲ್ಲಿ ಅತ್ಯಂತ ಲಾಭದಾಯಕವಾಗಿ ವ್ಯಾಪಾರ, ವಹಿವಾಟು ಆರಂಭಿಸಬಹುದು. ಸಾವಿರಾರು ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುತ್ತಿದೆ.

ಇದಿಷ್ಟೇ ಅಲ್ಲ.. ಅತಿ ಹೆಚ್ಚು ಸಂಖ್ಯೆಯ ಭಾರಿ ಸಿರಿವಂತ ವ್ಯಕ್ತಿಗಳನ್ನು ಹೊಂದಿರುವ ಭಾರತದ ಮೂರನೇ ನಗರ ನಮ್ಮ ಬೆಂಗಳೂರು. ಇಲ್ಲಿ 10 ಸಾವಿರಕ್ಕೂ ಅಧಿಕ ಡಾಲರ್ ಮಿಲಿಯನೇರ್‌ಗಳು ಹಾಗೂ 60 ಸಾವಿರಕ್ಕೂ ಹೆಚ್ಚು ಅತಿ ಸಿರಿವಂತ ವ್ಯಕ್ತಿಗಳಿದ್ದಾರೆ ಎಂದ ಮೇಲೆ ಇಲ್ಲಿನ ಸಂಪತ್ತು, ವ್ಯಾಪಾರ, ವಹಿವಾಟಿನ ಆಳ ಅಗಲಗಳ ಬಗ್ಗೆ ಒಂದು ಸೂಕ್ಷ್ಮ ಕಲ್ಪನೆ ಸಿಗುತ್ತದೆ.

 

ಬೆಂಗಳೂರು ಹೊಂದಿರುವ ಅಗಾಧ ವ್ಯಾಪಾರ ವಹಿವಾಟಿನ ಅವಕಾಶಗಳ ಕಾರಣದಿಂದ ಹೊಸ ಬಿಸಿನೆಸ್ ಆರಂಭಿಸಬೇಕೆನ್ನುವವರು ಇದೇ ಮಹಾನಗರವನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಸಹಜವೇ ಆಗಿದೆ.

ನೀವೂ ಬೆಂಗಳೂರಿನಲ್ಲಿ ಸ್ವಂತದ ಬಿಸಿನೆಸ್ ಆರಂಭಿಸಲು ಬಯಸುವಿರಾದರೆ ಅದಕ್ಕೂ ಮುನ್ನ ಕೆಲ ವಿಷಯಗಳನ್ನು ಅರಿತುಕೊಳ್ಳುವುದು ಸೂಕ್ತ. ಯಾವ ರೀತಿಯ ವ್ಯಾಪಾರ ವಹಿವಾಟುಗಳು ಬೆಂಗಳೂರಿನಲ್ಲಿ ಬೇಗ ಕ್ಲಿಕ್ ಆಗುತ್ತವೆ ಎಂಬುದನ್ನು ತಿಳಿಯಬೇಕು. ಬೆಂಗಳೂರಿನಲ್ಲಿ ಆರಂಭಿಸಬಹುದಾದ ಅತ್ಯಂತ ಜನಪ್ರಿಯ ಹಾಗೂ ಸೂಕ್ತ ಬಿಸಿನೆಸ್ ಐಡಿಯಾಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದು, ತಿಳಿದುಕೊಳ್ಳಿ...

1. ಡೆಲಿವರಿ ಸರ್ವಿಸ್ ಇರುವ ದಿನಸಿ ಅಂಗಡಿ

ಕಿರಾಣಿ ಅಥವಾ ದಿನಸಿ ವಸ್ತುಗಳು ಪ್ರತಿದಿನ ಎಲ್ಲರಿಗೂ ಬೇಕೇ ಬೇಕು. ಇದು ಎಂದೂ ಸಾವಿಲ್ಲದ ವ್ಯಾಪಾರವಾಗಿದೆ. ಆದರೆ ಬೆಂಗಳೂರಿನಂಥ ಅತಿ ವೇಗದ ಜೀವನ ಶೈಲಿಯ ಮಹಾನಗರದಲ್ಲಿ ಅನೇಕರಿಗೆ ದಿನಸಿ ಶಾಪಿಂಗ್ ಮಾಡಲು ಸಹ ಸಮಯವಿಲ್ಲ. ಇಂಥ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡರೆ ಒಳ್ಳೆಯ ಲಾಭ ಗಳಿಸಬಹುದು. ಮನೆ ಬಾಗಿಲಿಗೆ ವಸ್ತು ತಲುಪಿಸುವ ಅಂದರೆ ಡೆಲಿವರಿ ಸರ್ವಿಸ್ ಇರುವ ಚಿಕ್ಕ ದಿನಸಿ ಅಂಗಡಿ ಆರಂಭಿಸುವುದು ಸೂಕ್ತವಾಗಿದೆ. ಒಂದೊಮ್ಮೆ ನಿಮ್ಮ ಬಳಿ ಅಂಗಡಿ ಆರಂಭಿಸುವಷ್ಟು ದೊಡ್ಡ ಮಟ್ಟದ ಬಂಡವಾಳ ಇರದಿದ್ದಲ್ಲಿ ಸ್ಥಳೀಯ ದೊಡ್ಡ ಅಂಗಡಿಯಲ್ಲಿ ಮಾತನಾಡಿ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಂಡು ಸಪ್ಲೈ ಮಾಡಬಹುದು.

2. ಆರೋಗ್ಯಕರ ಫಾಸ್ಟ್ ಫುಡ್

ಕೆಲಸದ ಮಧ್ಯೆ ಬಿಡುವಿಲ್ಲದ ಬೆಂಗಳೂರಿಗರು ಫಾಸ್ಟ್ ಫುಡ್ ಸೇವಿಸಲು ಇಷ್ಟ ಪಡುವುದು ಸಹಜವೇ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾರಂಭಿಸಿದ್ದರಿಂದ ಫಾಸ್ಟ್ ಫುಡ್ ಆದರೂ ಅದು ಆರೋಗ್ಯಕರವಾಗಿರಬೇಕೆಂದು ಬಯಸುತ್ತಾರೆ. ಹೀಗಾಗಿ ಜನನಿಬಿಡ ಪ್ರದೇಶದಲ್ಲಿ ಕಡಿಮೆ ಕೊಬ್ಬಿನ ಅಂಶವಿರುವ ಆರೋಗ್ಯಕರ ತಿಂಡಿಗಳ ಅಂಗಡಿ ಆರಂಭಿಸಿದರೆ ಉತ್ತಮವಾಗಿ ನಡೆಸಬಹುದು. ಇನ್ನು ಮನೆ ಬಾಗಿಲಿಗೆ ಸರ್ವಿಸ್ ಕೊಟ್ಟರೆ ಮತ್ತೂ ಲಾಭದಾಯಕವಾಗಿರುತ್ತದೆ.

3. ಕೆಫೆ (ಕಾಫಿ ಶಾಪ್)
 

3. ಕೆಫೆ (ಕಾಫಿ ಶಾಪ್)

ದಟ್ಟ ಜನಸಾಂದ್ರತೆಯ ಮಾರುಕಟ್ಟೆ ಹಾಗೂ ವಾಸಿಸುವ ಸ್ಥಳಗಳಲ್ಲಿ ಕಾಫಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ನಿಮಗೆ ಉತ್ತಮ ಗುಣಮಟ್ಟದ ಕಾಫಿ ತಯಾರಿಸಲು ಬರುತ್ತಿದ್ದರೆ ಕಾಫಿ ಶಾಪ್ ಟ್ರೈ ಮಾಡಬಹುದು.

4. ಆರ್ಗ್ಯಾನಿಕ್ ಆಹಾರ ಬೆಳೆಯುವುದು ಹಾಗೂ ಪೂರೈಸುವುದು

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಂತರಾಗುತ್ತಿರುವ ಬೆಂಗಳೂರಿನ ಜನ ಇತ್ತೀಚೆಗೆ ಸಾವಯವ ರೀತಿಯಲ್ಲಿ ಬೆಳೆದ ಅಂದರೆ ಆರ್ಗ್ಯಾನಿಕ್ ಆಹಾರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ನಿಮ್ಮದೇ ಸ್ವಂತ ಜಮೀನು ಇದ್ದಲ್ಲಿ ಸಾವಯವ ಆಹಾರ ಪದಾರ್ಥ ಬೆಳೆಯಬಹುದು. ಒಂದು ವೇಳೆ ಸ್ವಂತ ಜಮೀನು ಇಲ್ಲದಿದ್ದರೆ ಬಾಡಿಗೆ ಪಡೆದು ಸಹ ಸಾವಯವ ಕೃಷಿ ಕೈಗೊಳ್ಳಬಹುದು. ಅಲ್ಲಿ ಬೆಳೆದ ರಾಸಾಯನಿಕರಹಿತವಾದ ಆಹಾರ ಪದಾರ್ಥಗಳನ್ನು ಬೆಂಗಳೂರಿನಲ್ಲಿ ಮಾರಬಹುದು ಅಥವಾ ಮನೆ ಬಾಗಿಲಿಗೇ ಪೂರೈಸುವ ಸೌಲಭ್ಯ ನೀಡಬಹುದು.

5. ಚಿಕ್ಕ ಬೇಕರಿ

ಊರು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಬೇಕರಿಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಇದೊಂದು ಎವರಗ್ರೀನ್ ಬಿಸಿನೆಸ್ ಎಂದೇ ಹೇಳಬಹುದು. ಈಗಾಗಲೇ ಬೆಂಗಳೂರಿನಲ್ಲಿ ಅದೆಷ್ಟೋ ಬೇಕರಿಗಳಿವೆ. ಆದರೆ ಹಾಗಂತ ಚಿಂತಿಸಬೇಕಿಲ್ಲ. ಒಂಚೂರು ಡಿಫರೆಂಟ್ ಆಗಿ ಅಂದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕೇಕ್ ತಯಾರಿಸುವುದು, ಶೀಘ್ರ ಡೆಲಿವರಿ ನೀಡುವುದು, ದೊಡ್ಡ ಆರ್ಡರ್ ಹಿಡಿಯುವುದು, ದೊಡ್ಡ ಬೇಕರಿಗಳಿಗೆ ಸಪ್ಲೈ ಮಾಡುವುದು ಹೀಗೆ ವಿಭಿನ್ನವಾಗಿ ಆಲೋಚಿಸಿ ಕೆಲಸ ಮಾಡಿದರೆ ಈ ವ್ಯವಹಾರದಲ್ಲೂ ಲಾಭ ಮಾಡಬಹುದು.

6. ಮನೆಯಲ್ಲಿ ತಯಾರಿಸಿದ ಆಹಾರ ಮನೆ ಬಾಗಿಲಿಗೆ ಪೂರೈಸುವುದು

ಉದ್ಯೋಗಸ್ಥರೆಲ್ಲರೂ ಬೆಳಗ್ಗೆ ಮನೆಯಿಂದ ಹೊರಡುವಾಗ ಮಧ್ಯಾಹ್ನ ಊಟದ ಡಬ್ಬಿ ತೆಗೆದುಕೊಂಡು ಹೋಗಿರುವುದಿಲ್ಲ. ಮಧ್ಯಾಹ್ನ ಹಸಿವಾದಾಗ ಬಿಸಿ ಬಿಸಿಯಾದ ಮನೆ ಊಟ ಇವರಿಗೆ ಬೇಕೆನ್ನಿಸುತ್ತದೆ. ಇಂಥ ಅವಕಾಶಗಳನ್ನು ಬಳಸಿಕೊಂಡು ಮನೆಯಲ್ಲಿಯೇ ಶುದ್ಧ ಹಾಗೂ ರುಚಿಕಟ್ಟಾದ ಊಟ ತಯಾರಿಸಿ ಪಾರ್ಸಲ್ ಮಾಡಿ ಪೂರೈಸಬಹುದು. ಬಹುಶಃ ಇಂಥದೊಂದು ಸರ್ವಿಸ್‌ಗೆ ಅನೇಕ ಬೆಂಗಳೂರಿಗರು ಕಾದಿರಬಹುದು.

7. ಕೇಟರಿಂಗ್ ವ್ಯವಹಾರ

ಕಾರ್ಪೊರೇಟ್ ಮೀಟಿಂಗ್, ಮದುವೆ-ಮುಂಜಿ, ಬರ್ಥಡೆ ಪಾರ್ಟಿ ಹೀಗೆ ಯಾವುದೇ ಸಭೆ ಸಮಾರಂಭಗಳಿಗೆ ಊಟ ತಿಂಡಿಯ ಅವಶ್ಯಕತೆ ಇರುತ್ತದೆ. ಇಂಥವರೆಲ್ಲರೂ ಉತ್ತಮ ಕೇಟರಿಂಗ್ ವ್ಯವಸ್ಥೆ ಇರುವವರಿಗೆ ಆಹಾರದ ಆರ್ಡರ್ ನೀಡುತ್ತಾರೆ. ಇದೊಂದು ಹೆಚ್ಚು ಬಂಡವಾಳ ಬೇಡುವ ಉದ್ಯಮವಾಗಿದೆ ಎಂಬುದು ಗೊತ್ತಿರಲಿ. ಆದರೆ ತೀರಾ ದೊಡ್ಡ ಮಟ್ಟದ ಬಂಡವಾಳ ಬೇಕಿಲ್ಲ.

8. ವಸತಿ ಹಾಗೂ ಊಟದ ವ್ಯವಸ್ಥೆ

ನಿಮ್ಮ ಮನೆ ಸಾಕಷ್ಟು ವಿಶಾಲವಾಗಿದ್ದು ಹೆಚ್ಚುವರಿ ಕೊಠಡಿಗಳಿದ್ದರೆ ಅವನ್ನು ಪರವೂರಿನಿಂದ ಬರುವ ಪ್ರವಾಸಿಗರಿಗೆ ಬಾಡಿಗೆ ನೀಡಬಹುದು. ನೀವು ಬಳಸದೆ ಖಾಲಿ ಬಿಟ್ಟಿರುವ ಸ್ಥಳಾವಕಾಶದಿಂದ ಸಾಕಷ್ಟು ಆದಾಯ ಗಳಿಸಬಹುದು. ಪ್ರಸಿದ್ಧ ಪ್ರವಾಸಿ ಸ್ಥಳ, ವಿಮಾನ ನಿಲ್ದಾಣ ಮುಂತಾದ ಪ್ರಮುಖ ಸ್ಥಳದ ಬಳಿ ನಿಮ್ಮ ಆಸ್ತಿ ಇದ್ದರೆ ಇನ್ನೂ ಅನುಕೂಲ. ಜೊತೆಗೆ ಬಂದವರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಿದರೆ ಮತ್ತಷ್ಟು ಲಾಭ ಗ್ಯಾರಂಟಿ.

9. ಪೇಯಿಂಗ್ ಗೆಸ್ಟ್ ಸರ್ವಿಸ್

ಈಗಾಗಲೇ ಸಾಕಷ್ಟು ಪೇಯಿಂಗ್ ಗೆಸ್ಟ್ ಮನೆಗಳು ಇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಬಹುತೇಕ ಪೇಯಿಂಗ್ ಗೆಸ್ಟ್‌ಗಳಲ್ಲಿ ವ್ಯವಸ್ಥೆ ತೀರಾ ಕಳಪೆಯಾಗಿದೆ. ಇದನ್ನೇ ಒಂದು ಅವಕಾಶವಾಗಿ ಪರಿವರ್ತಿಸಿಕೊಂಡು ಉತ್ತಮ ಗುಣಮಟ್ಟದ ಪೇಯಿಂಗ್ ಗೆಸ್ಟ್ ಆರಂಭಿಸಬಹುದು.

10. ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗಾಗಿ ಹಾಸ್ಟೆಲ್

ದೇಶದ ಎಲ್ಲ ಭಾಗಗಳಿಂದಲೂ ಬೆಂಗಳೂರಿಗೆ ವಿದ್ಯಾರ್ಥಿಗಳು ಹಾಗೂ ಕೆಲಸ ಮಾಡಲು ಜನ ಆಗಮಿಸುತ್ತಲೇ ಇರುತ್ತಾರೆ. ಇವರಿಗೆ ಸೂಕ್ತ ವಸತಿ ವ್ಯವಸ್ಥೆ ಸಿಗದೆ ಪರದಾಡುತ್ತಾರೆ. ಇಂಥವರಿಗಾಗಿ ಹಾಸ್ಟೆಲ್ ಮಾಡಿದರೆ ಉತ್ತಮ ವ್ಯವಹಾರ ನಡೆಸಬಹುದು.

11. ಸ್ಮರಣಿಕೆ ವಸ್ತುಗಳ ಮಾರಾಟ ಮಳಿಗೆ

ಬೆಂಗಳೂರು ಕರ್ನಾಟಕದ ಅತಿ ಪ್ರಮುಖ ಪ್ರವಾಸೋದ್ಯಮ ಸ್ಥಳಗಳಲ್ಲೊಂದಾಗಿದೆ. ಪ್ರವಾಸಕ್ಕೆ ಬಂದವರು ಪ್ರವಾಸಿ ಸ್ಥಳದಿಂದ ಏನಾದರೂ ಒಳ್ಳೆಯ ವಸ್ತುಗಳನ್ನು ಸ್ಮರಣಿಕೆಯಾಗಿ ಒಯ್ಯಲು ಬಯಸುತ್ತಾರೆ. ಹೀಗಾಗಿ ಕರಕುಶಲ ವಸ್ತುಗಳು ಹಾಗೂ ಇನ್ನಿತರ ಗುಡಿ ಕೈಗಾರಿಕೆ ವಸ್ತುಗಳ ಮಳಿಗೆ ಆರಂಭಿಸಿ ವ್ಯಾಪಾರ ಮಾಡಬಹುದು.

12. ಲಕ್ಸುರಿ ಪ್ರವಾಸಿ ಸೇವೆ ಹಾಗೂ ಡಿಸ್ಕೌಂಟ್ಸ್

ಬಿಡುವಿಲ್ಲದ ಹಾಗೂ ಒತ್ತಡದ ಕೆಲಸದಿಂದ ಜನ ಬಸವಳಿದು ಹೋಗಿರುತ್ತಾರೆ. ವೀಕೆಂಡ್‌ಗಳಲ್ಲಿ ಎಲ್ಲಾದರೂ ಹೋಗಿ ನಿರಾಳವಾಗಿರಬೇಕೆಂದು ಇವರು ಬಯಸುತ್ತಿರುತ್ತಾರೆ. ಇಂಥವರಿಗಾಗಿಯೇ ತುಸು ದುಬಾರಿಯಾದ ಲಕ್ಸುರಿ ಪ್ರವಾಸಿ ಸೇವೆ ಆರಂಭಿಸಬಹುದು. ಅವರಿಗೆ ನೆಮ್ಮದಿ ಸಿಗುತ್ತದೆ, ನಿಮಗೆ ದುಡ್ಡು ಬರುತ್ತದೆ.

13. ರಿಯಲ್ ಎಸ್ಟೇಟ್ ಬ್ರೋಕಿಂಗ್

ಮನೆ ಬದಲಾಯಿಸಲು ಬಯಸುವವರು, ಹೊಸದಾಗಿ ಊರಿಗೆ ಬಂದು ಮನೆ ಬಾಡಿಗೆ ಹಿಡಿಯಲು ಅಥವಾ ಕೊಳ್ಳಲು ಬಯಸುವವರು ಅಥವಾ ಕಮರ್ಶಿಯಲ್ ಬಿಲ್ಡಿಂಗ್ ಹುಡುಕಾಟದಲ್ಲಿರುವವರು ಯಾವಾಗಲೂ ಇದ್ದೇ ಇರುತ್ತಾರೆ. ಇದಕ್ಕಾಗಿ ರಿಯಲ್ ಎಸ್ಟೇಟ್ ಏಜೆನ್ಸಿಗಳ ಸಹಾಯ ಬೇಕಾಗುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ ಹಲವಾರು ರಿಯಲ್ ಎಸ್ಟೇಟ್ ಏಜೆನ್ಸಿಗಳಿದ್ದರೂ ಒಂದಿಷ್ಟು ವಿಭಿನ್ನವಾಗಿ ಬಿಸಿನೆಸ್ ಮಾಡಿದಲ್ಲಿ ಇದು ಲಾಭದಾಯಕವಾಗಿದೆ.

14. ಆಸ್ತಿ ನಿರ್ವಹಣಾ ಕಂಪನಿ

ಬೆಂಗಳೂರಿನಲ್ಲಿ ಲಕ್ಷಾಂತರ ಜನ ಶ್ರೀಮಂತರಿದ್ದಾರೆ. ಇವರ ಬಳಿ ಸಾಕಷ್ಟು ಆಸ್ತಿ ಪಾಸ್ತಿಯೂ ಇರುತ್ತದೆ. ಆದರೆ ತಮ್ಮ ಆಸ್ತಿಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಮಾತ್ರ ಇವರ ಬಳಿ ಸಮಯವಿರುವುದಿಲ್ಲ. ನಿಮಗೆ ಆಸ್ತಿ ನಿರ್ವಹಣೆ ಅಂದರೆ ಪ್ರಾಪರ್ಟಿ ಮ್ಯಾನೇಜಮೆಂಟಿನಲ್ಲಿ ಜ್ಞಾನವಿದ್ದರೆ ಇದಕ್ಕಾಗಿ ಕಂಪನಿ ಆರಂಭಿಸಿ ಶ್ರೀಮಂತರಿಗೆ ಆಸ್ತಿ ನಿರ್ವಹಣಾ ಸೇವೆ ಒದಗಿಸಬಹುದು.

15. ಚಿಕ್ಕ ಮಕ್ಕಳಿಗಾಗಿ ಡೇ ಕೇರ್ ಸೇವೆ

ತಾವು ಕೆಲಸಕ್ಕೆ ಹೋದಾಗ ತಮ್ಮ ಪುಟ್ಟ ಮಕ್ಕಳ ಆರೈಕೆ ಹಾಗೂ ಅವರ ಸುರಕ್ಷತೆಯು ಬಹಳಷ್ಟು ಉದ್ಯೋಗಿಗಳ ಚಿಂತೆಯ ವಿಷಯವಾಗಿರುತ್ತದೆ. ಅವರು ತಮ್ಮ ಮಕ್ಕಳನ್ನು ಡೇ ಕೇರ್ ಸೆಂಟರ್‌ಗಳಲ್ಲಿ ಬಿಟ್ಟು ಹೋಗುವುದು ಅನಿವಾರ್ಯ. ಹೀಗಾಗಿ ಡೇ ಕೇರ್ ಬಿಸಿನೆಸ್ ತುಂಬಾ ಬೇಡಿಕೆಯ ಸೇವೆಯಾಗಿದೆ. ಚಿಕ್ಕ ಮಕ್ಕಳನ್ನು ಜತನದಿಂದ ನೋಡಿಕೊಳ್ಳುವುದು ಹಾಗೂ ಅವರಿಗೆ ಏನಾದರೂ ಕಲಿಸುತ್ತ ಮನರಂಜನೆ ನೀಡುವುದು ಉತ್ತಮ ಸೇವೆಯಾಗಿದೆ. ಇಂಥ ಅಗತ್ಯ ಸೇವೆಗೆ ಹಣ ನೀಡಲು ಯಾವುದೇ ಪಾಲಕರು ಹಿಂದೇಟು ಹಾಕುವುದಿಲ್ಲ. ನಿಮ್ಮ ಮನೆ ವಿಶಾಲವಾಗಿದ್ದರೆ ಅದರಲ್ಲಿಯೇ ಒಂದು ಭಾಗದಲ್ಲಿ ಡೇ ಕೇರ್ ಆರಂಭಿಸಬಹುದು. ಇಲ್ಲವಾದರೆ ಒಳ್ಳೆಯ ಕಟ್ಟಡ ಬಾಡಿಗೆ ಪಡೆದು ಬಿಸಿನೆಸ್ ಶುರು ಮಾಡಬಹುದು.

16. ಸ್ವಚ್ಛತಾ ಸೇವೆಗಳು

ಸ್ವಚ್ಛತಾ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಕೇವಲ ಕಮರ್ಶಿಯಲ್ ಕಂಪನಿಗಳು ಮಾತ್ರವಲ್ಲದೆ ಈಗೀಗ ಮನೆಗಳಲ್ಲಿ ಸ್ವಚ್ಛತೆ ಮಾಡಲು ಸಹ ಜನ ಬೇಕಾಗಿದ್ದಾರೆ. ಕೆಲಸ ಮಾಡಲಕ್ಕೇ ಸಮಯ ಸಾಲದ ಇಂದಿನ ಜನರಿಗೆ ಮನೆ ಕ್ಲೀನ್ ಮಾಡುವಷ್ಟು ಪುರುಸೊತ್ತು ಹಾಗೂ ತಾಳ್ಮೆ ಎರಡೂ ಇಲ್ಲ. ಯಾರಾದರೂ ಬಂದು ಮನೆ, ಬಾತ್ ರೂಂ ಕ್ಲೀನ್ ಮಾಡಿದರೆ ಸಾಕು ಎನ್ನುತ್ತಾರೆ. ಇಂಥದಕ್ಕಾಗಿಯೇ ಕಂಪನಿಯೊಂದನ್ನು ಆರಂಭಿಸಿ ಜನರನ್ನು ಕೆಲಸಕ್ಕಿಟ್ಟುಕೊಳ್ಳಬಹುದು. ಅವಶ್ಯಕತೆ ಇರುವವರಿಗೆ ಕ್ಲೀನಿಂಗ್ ಸರ್ವಿಸ್ ನೀಡಿ ದುಡ್ಡು ಸಂಪಾದಿಸಬಹುದು.

17. ಸಹಾಯ ಮಾಡುವ ಕೆಲಸ

ಯಾವುದೋ ಮನೆಯ ಕೆಲಸ ಮಾಡಲು ಅಥವಾ ಆಫೀಸಿನ ಕೆಲಸ ಮಾಡಲು ತುರ್ತಾಗಿ ಜನ ಬೇಕಾಗುತ್ತಾರೆ. ಯಾವುದೋ ಸಾಮಾನು ತರುವುದು, ಬಿಲ್ ಕಟ್ಟುವುದು ಹೀಗೆ ಏನೇನೋ ಕೆಲಸಗಳಿರುತ್ತವೆ. ಇಂಥವರಿಗೆ ಜನರ ಸೇವೆ ನೀಡಿ ಶುಲ್ಕ ಪಡೆಯಬಹುದು. ದಟ್ಟ ಜನಸಾಂದ್ರತೆಯ ಪ್ರದೇಶಗಳಲ್ಲಿ ಇಂಥದೊಂದು ಬಿಸಿನೆಸ್ ಐಡಿಯಾ ಕ್ಲಿಕ್ ಆಗಬಹುದು.

18. ಹೂ, ಬೊಕ್ಕೆ ಪೂರೈಸುವುದು

ಹಬ್ಬ ಹರಿದಿನ ಅಥವಾ ಸಮಾರಂಭಗಳಲ್ಲಿ ಮಾತ್ರ ಹೂ ಬಳಸುತ್ತಾರೆನ್ನುವುದು ತಪ್ಪು ಕಲ್ಪನೆಯಾಗಿದೆ. ಬಹುತೇಕ ಭಾರತೀಯರಿಗೆ ಪ್ರತಿದಿನ ದೇವರ ಪೂಜೆಗೆ ಅಥವಾ ಇನ್ನಾವುದಕ್ಕೋ ಸಾಕಷ್ಟು ಪ್ರಮಾಣದ ಹೂ ಬೇಕೇ ಬೇಕು. ಹೀಗಾಗಿ ಪ್ರತಿದಿನ ಮನೆಗೇ ಹೂ ಡೆಲಿವರಿ ಮಾಡುವ ಸರ್ವಿಸ್ ಆರಂಭಿಸಿದರೆ ಉತ್ತಮ ವ್ಯಾಪಾರ ನಡೆಸಬಹುದಾಗಿದೆ. ಅದರಲ್ಲೂ ಹೂ ಆರ್ಡರ್ ಮಾಡಲು ಆನ್ಲೈನ್ ವ್ಯವಸ್ಥೆ ಅಥವಾ ಒಂದು ಕಾಲ್ ಮಾಡಿ ಆರ್ಡರ್ ಮಾಡುವ ವ್ಯವಸ್ಥೆ ಮಾಡಿಕೊಂಡರೆ ಬೆಸ್ಟ್.

19. ಎಲ್ಲ ವಸ್ತು ನೂರು ರೂಪಾಯಿಗೆ ಅಂಗಡಿ

ಹುಟ್ಟು ಹಬ್ಬ ಅಥವಾ ಇನ್ನಿತರ ಸಮಾರಂಭಗಳ ನೆಪದಲ್ಲಿ ಉಡುಗೊರೆ ಕೊಡುವುದು ಹಾಗೂ ಪಡೆಯುವುದು ಎಲ್ಲರಿಗೂ ಇಷ್ಟದ ವಿಷಯವೇ ಆಗಿದೆ. ಆದರೆ ಉಡುಗೊರೆಯ ವಸ್ತುಗಳು ದುಬಾರಿಯಾಗಿರುವುದರಿಂದ ಕೆಲವೊಮ್ಮೆ ಉಡುಗೊರೆಗಳ ಸಹವಾಸ ಬೇಡವೆನಿಸುತ್ತದೆ. ಕಡಿಮೆ ಬಜೆಟ್ಟಿನ ಉಡುಗೊರೆಗಳ ಅಂಗಡಿ ಆರಂಭಿಸಿದರೆ ಗ್ರಾಹಕರನ್ನು ಸೆಳೆಯಬಹುದು. ಎಲ್ಲ ವಸ್ತುಗಳು ನೂರು ರೂಪಾಯಿ ಅಥವಾ ಇನ್ನೂರು ರೂಪಾಯಿ ಒಳಗಡೆ ಇರುವಂತೆ ವಿಶಿಷ್ಟ ಐಡಿಯಾ ಮೂಲಕ ವ್ಯವಹಾರ ಮಾಡಬಹುದು. ಇದರ ಬಗ್ಗೆ ಯೋಚಿಸಿ.

20. ಡ್ರೈ ಕ್ಲೀನಿಂಗ್ ಸರ್ವಿಸ್

ಅಡುಗೆ ಹಾಗೂ ಸ್ವಚ್ಛತೆಯ ಕೆಲಸಗಳಂತೆ ಬಟ್ಟೆ ಒಗೆಯುವುದು ಸಹ ಅತಿ ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ. ಇವತ್ತು ಬಟ್ಟೆ ಒಗೆಯುತ್ತ ಮನೆಯಲ್ಲಿ ಕೂರಲು ಯಾರಿಗೆ ಸಮಯವಿದೆ ಹೇಳಿ. ಆದಷ್ಟೂ ಜನ ಬಟ್ಟೆ ಒಗೆಯಲು ಲಾಂಡ್ರಿಗೆ ಕೊಡುತ್ತಾರೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ಒಳ್ಳೆಯ ಏರಿಯಾದಲ್ಲಿ ಡ್ರೈ ಕ್ಲೀನಿಂಗ್ ಶಾಪ್ ಆರಂಭಿಸಬಹುದು. ಇದಕ್ಕೆ ಬಹಳಷ್ಟು ಬೇಡಿಕೆ ಇದೆ.

English summary

20 Low Cost Small Business Ideas for Bangalore

The facts above are good enough to motivate anyone in Bangalore to start their own business, however it is also important to know what works best here. S
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more