For Quick Alerts
ALLOW NOTIFICATIONS  
For Daily Alerts

  ಏಪ್ರಿಲ್ 1 ರಿಂದ ಪ್ರಮುಖ 6 ಬದಲಾವಣೆಗಳು ಆಗಲಿವೆ, ಸಿದ್ದರಾಗಿ...

  |

  ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಇದರೊಂದಿಗೆ ಹಲವಾರು ನೂತನ ಬದಲಾವಣೆಗಳು, ಹೊಸ ನಿಯಮ/ಕಾಯಿದೆಗಳು ಜಾರಿಯಾಗುವುದು ಸಾಮಾನ್ಯ. ಅದರಂತೆ ಈ ಬಾರಿ ಮುಖ್ಯವಾಗಿ ಆದಾಯ ತೆರಿಗೆ ಕಾಯಿದೆ ಪ್ರಕಾರ ನಾಲ್ಕು ಬದಲಾವಣೆಗಳಾಗಲಿವೆ. ಆಧಾರ್-ಪ್ಯಾನ್ ಕಾರ್ಡ್, ಟ್ರಾಯ್ ಗೆ ಸಂಬಂಧಿತ ಬದಲಾವಣೆಗಳು ಆಗಲಿವೆ.
  ಇನಕಮ್ ಟ್ಯಾಕ್ಸ್ ರಿಟರ್ನ್ ಲಿಂಕ್ಡ್ ಹೂಡಿಕೆ ಯೋಜನೆಗಳ ಅವಧಿ ಇನ್ನೊಂದೇ ವಾರ ಬಾಕಿ ಇದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ, 80ಡಿ ಮುಂತಾದುವುಗಳ ಅಡಿಯಲ್ಲಿ ತಮ್ಮ ಸಂಬಳವನ್ನು ಆದಾಯ ತೆರಿಗೆ ಮಿತಿಯೊಳಗೆ ತಂದು ತೆರಿಗೆ ಉಳಿಸಲು ಸಂಬಳ ಪಡೆಯುವ ಉದ್ಯೋಗಿಗಳಿಗೆ ಇದು ಕೊನೆಯ ಅವಕಾಶವಾಗಿದೆ. ಇನ್ನು ನಿಗದಿತ ದಿನಾಂಕದೊಳಗೆ ಐಟಿ ರಿಟರ್ನ್ ಫೈಲ್ ಮಾಡದಿದ್ದರೆ ದಂಡವನ್ನಂತೂ ಕಟ್ಟಲೇಬೇಕು.

   

  ಹಾಗಾದರೆ ಏಪ್ರಿಲ್ 1 ರಿಂದ ಆದಾಯ ತೆರಿಗೆ ನಿಯಮ ಹಾಗು ಬೇರೆ ಕ್ಷೇತ್ರಗಳಲ್ಲಿ ಯಾವೆಲ್ಲ ಪ್ರಮುಖ ಬದಲಾವಣೆಗಳಾಗಲಿವೆ ಎಂಬುದನ್ನು ನೋಡೋಣ ಬನ್ನಿ..

  1. ತೆರಿಗೆ ವಿನಾಯಿತಿ

  ಈ ವರ್ಷ ಹಣಕಾಸು ಮಂತ್ರಿ ಪಿಯೂಷ್ ಗೋಯಲ್ ಅವರು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ, 5 ಲಕ್ಷ ರೂ. ವರೆಗೆ ತೆರಿಗೆಗೆ ಒಳಪಟ್ಟ ವಾರ್ಷಿಕ ಆದಾಯ ಹೊಂದಿರುವ ಉದ್ಯೋಗಿಗಳು ತೆರಿಗೆ ವಿನಾಯಿತಿ ಪಡೆಯಬಹುದು ಎಂದು ಘೋಷಿಸಿದ್ದಾರೆ. ಅಂದರೆ ವೈಯಕ್ತಿಕ ತೆರಿಗೆದಾರರು ರೂ. 5 ಲಕ್ಷ ಆದಾಯಕ್ಕೆ ರೂ. 12,500 ತೆರಿಗೆ ವಿನಾಯಿತಿ ಪಡೆಯಬಹುದು. ಈ ಬದಲಾವಣೆ ಏಪ್ರಿಲ್ 1 ರಿಂದಲೇ ಜಾರಿಗೆ ಬರಲಿದೆ.

  2. ಸ್ಟ್ಯಾಂಡರ್ಡ್ ಡಿಡಕ್ಷನ್

  ಮಧ್ಯಂತರ ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ರೂ. 50 ಸಾವಿರಗಳಿಗೆ ಏರಿಕೆ ಮಾಡಲಾಗಿದೆ. ಅಂದರೆ ಈ ಹಿಂದೆ ಇದ್ದ ರೂ. 40 ಸಾವಿರದಿಂದ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಇನ್ನು ಮುಂದೆ ರೂ. 50 ಸಾವಿರಗಳಾಗಲಿದೆ.

  3. ಆಸ್ತಿಯ ಮೇಲೆ ಬಾಡಿಗೆ ಆದಾಯ

  ಹೂಡಿಕೆಯ ಮೇಲೆ ಸಿಗುವ ಬಡ್ಡಿಯ (ಸೆಕ್ಯೂರಿಟೀಸ್ ಮೇಲಿನ ಬಡ್ಡಿ ಹೊರತುಪಡಿಸಿ) ಮೇಲೆ ತೆರಿಗೆ ವಿನಾಯಿತಿ ಮಿತಿಯನ್ನು ಈ ಮೊದಲಿನ ರೂ. 10 ಸಾವಿರಗಳಿಂದ 40 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ ಆಸ್ತಿಯ ಮೇಲೆ ಬಾಡಿಗೆ ಆದಾಯಕ್ಕೆ ಈ ಮೊದಲಿದ್ದ ತೆರಿಗೆ ವಿನಾಯಿತಿ ಆದಾಯ ಮಿತಿಯನ್ನು ರೂ. 1,80,000 ಗಳಿಂದ ರೂ. 2,40,000 ರೂ.ಗಳಿಗೆ ಹೆಚ್ಚಿಸಲಾಗಿದೆ.

  4. ಎರಡು ಆಸ್ತಿಗಳ ಘೋಷಣೆ

  ವೈಯಕ್ತಿಕವಾಗಿ ಎರಡು ಆಸ್ತಿಗಳನ್ನು ತಮ್ಮ ಸ್ವಂತದ ಬಳಕೆಗೆ ಉಪಯೋಗಿಸುತ್ತಿರುವುದಾಗಿ ಘೋಷಿಸಬಹುದು. ಈ ಮೊದಲು ಎರಡನೇ ಆಸ್ತಿಯನ್ನು ಬಾಡಿಗೆಗೆ ನೀಡಲಾಗಿದೆ ಎಂದೇ ಪರಿಗಣಿಸಲಾಗುತ್ತಿತ್ತು. ಈ ಬದಲಾವಣೆ ಹೊಸ ಆರ್ಥಿಕ ವರ್ಷದಿಂದ ಜಾರಿಯಾಗಲಿದೆ.

  ಹೊಸ ಪ್ಯಾನ್ ಕಾರ್ಡ್ ನಿಯಮ

  ಮಾರ್ಚ್ 31, 2019 ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೊನೆ ದಿನವಾಗಿದೆ. ಒಂದು ವೇಳೆ ನೀವು ಆಧಾರ್-ಪ್ಯಾನ್ ಜೋಡಣೆ ಮಾಡಲು ವಿಫಲರಾದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಬಹುದು. ತದನಂತರದಲ್ಲಿ ತೆರಿಗೆ ಪಾವತಿ ಹಾಗೂ ಮರುಪಾವತಿ ಸಾಧ್ಯವಾಗುವುದಿಲ್ಲ. ಐಟಿ ರಿಟರ್ನ್ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್ ಪಡೆಯುವಾಗ ಆಧಾರ್ ಕಡ್ಡಾಯವಾಗಿರುತ್ತದೆ.
  ಹೊಸ ಪ್ಯಾನ್ ಕಾರ್ಡ್ ವಿನ್ಯಾಸ
  ಇನ್ಮುಂದೆ ಜಾರಿಗೆ ಬರುವ ಪ್ಯಾನ್ ಕಾರ್ಡ್ ಗಳಲ್ಲಿ ಅರ್ಜಿದಾರರ ಹೆಸರು, ತಂದೆ ಅಥವಾ ತಾಯಿ ಹೆಸರು, ಜನ್ಮ ದಿನಾಂಕ, ಪ್ಯಾನ್ ನಂಬರ್ ಜೊತೆ ಕ್ಯೂಆರ್ ಕೋಡ್ ಇರಲಿದೆ. ಕ್ಯೂಆರ್ ಕೋಡ್ ನಲ್ಲಿ ಅರ್ಜಿದಾರನ ಫೋಟೋ ಹಾಗೂ ಸಹಿ ಇರಲಿದೆ. ಮುಂದಿನ ವರ್ಷ ಮಾರ್ಚ್ 31ರೊಳಗೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ಹೊಸ ನಿಯಮದ ಪ್ರಕಾರ ಪ್ಯಾನ್ ಕಾರ್ಡ್ ಅರ್ಜಿದಾರರ ತಂದೆ ಇರದೆ ಹೋದಲ್ಲಿ ತಂದೆ ಹೆಸರು ನಮೂದಿಸಬೇಕಾಗಿಲ್ಲ. ತಾಯಿ ಹೆಸರನ್ನು ಅರ್ಜಿಯಲ್ಲಿ ಭರ್ತಿ ಮಾಡುವ ಅವಕಾಶವನ್ನು ಇಲಾಖೆ ನೀಡಲಿದೆ. ಹೊಸ ಡಿಜಿಟಲ್ ಪ್ಯಾನ್ ಕಾರ್ಡ್ ನೊಂದಿಗೆ ಹಳೆ ಪ್ಯಾನ್ ಕಾರ್ಡ್ ಗಳು ಚಾಲ್ತಿಯಲ್ಲಿರಲಿವೆ. ಹೊಸ ವಿನ್ಯಾಸದ ಪ್ಯಾನ್ ಕಾರ್ಡ್ https://www.tin-nsdl.com/ ನಲ್ಲಿ ಲಭ್ಯವಿದೆ. ಪಾಪ್ ಆಫ್ ಮೇಲೆ ಕ್ಲಿಕ್ ಮಾಡಿ ನಂತರ ವೆಬ್ಸೈಟ್ ಹೊಸ ವಿನ್ಯಾಸ ಪ್ಯಾನ್ ಕಾರ್ಡ್ ನ ಎಲ್ಲಾ ವಿವರಗಳನ್ನು ಪಡೆಯಬಹುದು.

  ಟ್ರಾಯ್ ಹೊಸ ನಿಯಮ

  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನ ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ತರುತ್ತಿದೆ. ಟ್ರಾಯ್ ಹೊಸ ನಿಯಮ ಕೇಬಲ್ ಹಾಗೂ ಡಿಟಿಹೆಚ್ ಮೇಲೆ ಪ್ರಭಾವ ಬೀರಲಿದ್ದು, ಇನ್ನುಮುಂದೆ ಕೇಬಲ್ ಟಿವಿ ಮತ್ತು ಡಿಟಿಎಚ್ ಅಪರೇಟರ್ಗಳು ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ. ಗ್ರಾಹಕರು ತಾವು ಇಷ್ಟಪಡುವ ಚಾನೆಲ್ ಗಳನ್ನು ನೋಡಬಹುದು ಹಾಗು ಅವುಗಳಿಗೆ ಮಾತ್ರ ಶುಲ್ಕ ಕಟ್ಟಬಹುದು. ಟ್ರಾಯ್ ಹೊಸ ನಿಯಮದ ಪ್ರಕಾರ ಮಾರ್ಚ್ ೩೧ರೊಳಗೆ ಗ್ರಾಹಕರು ತಮ್ಮ ಇಷ್ಟದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಹಕರಿಗೆ 100 ಏರ್ ಚಾನೆಲ್ ಗಳಿಗೆ ಉಚಿತವಾಗಿ ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡಲಾಗುತ್ತದೆ. 100 ರ ನಂತರ, ಗ್ರಾಹಕರು ಆಯ್ಕೆ ಮಾಡುವ ಚಾನಲ್ ಆಧರಿಸಿ ಪಾವತಿಸಬೇಕಾಗುತ್ತದೆ.

  ಸರಸ್ವತಿ ಕಸ್ತೂರಿ ರಂಗನ್ ಸಲಹೆ?

  ಡೆಲಾಯ್ಟ್ ಇಂಡಿಯಾ ಪಾಲುದಾರ ಸರಸ್ವತಿ ಕಸ್ತೂರಿ ರಂಗನ್ ಹೇಳುವ ಪ್ರಕಾರ, ಹೂಡಿಕೆ ಮಾಡಲು ತಡ ಮಾಡಿದಲ್ಲಿ ಅದನ್ನು ತಮ್ಮ ಉದ್ಯೋಗದಾತ ಕಂಪನಿಗಳಿಗೆ ತಿಳಿಸಲು ಸಾಧ್ಯವಾಗದು ಎನ್ನುತ್ತಾರೆ. ಹೂಡಿಕೆ ಮಾಡಲು ತಡ ಮಾಡಿದಷ್ಟೂ ಅದನ್ನು ಘೋಷಿಸಲು ಸಮಯ ತೆಗೆದುಕೊಳ್ಳುತ್ತದೆ. ಕೊನೆಯ ಕ್ಷಣದಲ್ಲಿ ಇದರ ಪ್ರಕ್ರಿಯೆ ನಡೆಸಲು ಸಾಧ್ಯವಾಗದು ಎಂದು ಅವರು ಅಭಿಪ್ರಾಯ ಪಡುತ್ತಾರೆ.
  ಆದಾಗ್ಯೂ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವಾಗ ಹೂಡಿಕೆಗಳ ಬಗ್ಗೆ ಘೋಷಿಸಿ ತೆರಿಗೆ ರಿಫಂಡ್ ಪಡೆಯಬಹುದು ಎನ್ನುತ್ತಾರೆ ಕಸ್ತೂರಿರಂಗನ್. ಆದಾಯ ತೆರಿಗೆ ಪಾವತಿದಾರರು ತಮ್ಮ ಎಲ್ಲ ವ್ಯವಹಾರಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಕಾಯ್ದಿಟ್ಟುಕೊಂಡಿರಬೇಕು. ಆದಾಯ ತೆರಿಗೆ ಇಲಾಖೆ ಕೇಳಿದಾಗ ಅವನ್ನು ತೋರಿಸಲು ಸಿದ್ಧವಾಗಿರಬೇಕು. ಆದರೆ ಇಷ್ಟಕ್ಕೆ ನಿಮ್ಮ ಕೆಲಸ ಮುಗಿಯದು. ಬರಲಿರುವ ಹೊಸ ಆರ್ಥಿಕ ವರ್ಷಾರಂಭದಿಂದ ಕೆಲ ಹೊಸ ನಿಯಮಗಳು ಜಾರಿಗೆ ಬರಲಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸುತ್ತಾರೆ ಅವರು.

  ಕೊನೆಯ ಮಾತು

  ಈ ಎಲ್ಲ ಹೊಸ ನಿಯಮಗಳನ್ನು ಮೀರಿ ಇನ್ನು ಮುಂದೆ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆಯ ತಡೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅಂದರೆ ತೆರಿಗೆ ವಂಚನೆ ತಡೆಗೆ ಬಿಗ್ ಡೇಟಾ ಬಳಸಲಿದ್ದಾರೆ. ಈಗಾಗಲೇ ವಿಶ್ವದಲ್ಲಿ ತೆರಿಗೆ ವಂಚನೆ ತಡೆಗೆ ಬಿಗ್ ಡೇಟಾ ಸೂತ್ರ ಬಳಸುತ್ತಿರುವ ಬೆಲ್ಜಿಯಂ, ಕೆನಡಾ ಹಾಗೂ ಆಸ್ಟ್ರೇಲಿಯಾ ದೇಶಗಳ ಸಾಲಿಗೆ ಭಾರತವೂ ಸೇರಲಿದೆ. ಸುಮಾರು 100 ಮಿಲಿಯನ್ ಪೌಂಡ್ ಹಣ ವ್ಯಯಿಸಿ ಇಂಥದೊಂದು ವ್ಯವಸ್ಥೆ ಮಾಡಿಕೊಂಡಿರುವ ಬ್ರಿಟನ್ ದೇಶದ ಕನೆಕ್ಟ್ ಎಂಬ ಮಾದರಿಯಲ್ಲಿಯೇ ಭಾರತವೂ ತನ್ನದೇ ಮಾದರಿ ಹೊಂದಲಿದೆ. ಬ್ರಿಟನ್ ತನ್ನ ಕನೆಕ್ಟ್ ಮಾದರಿಯಿಂದ 5.4 ಬಿಲಿಯನ್ ಡಾಲರ್ ಆದಾಯ ತೆರಿಗೆ ಖೋತಾ ತಪ್ಪಿಸಿದೆ ಎಂದು ಮಾಹಿತಿ ಇದೆ.

  Read more about: income tax itr pan card trai money
  English summary

  Major 6 changes from APRIL 1: Must know these things..

  The new financial year would take India in a new direction with a number of new changes coming into affect.
  Story first published: Thursday, March 28, 2019, 10:27 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more