For Quick Alerts
ALLOW NOTIFICATIONS  
For Daily Alerts

ನೀವು ಎಸ್ಬಿಐ ಖಾತೆ ಹೊಂದಿದ್ದಿರಾ? ಹಾಗಿದ್ದರೆ ಈ ನಿಯಮ/ಶುಲ್ಕಗಳನ್ನೊಮ್ಮೆ ನೋಡಿ..

|

ದೇಶದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ 24,000 ಶಾಖೆಗಳು ಮತ್ತು 59,000 ಎಟಿಎಂಗಳನ್ನು ಹೊಂದಿದೆ.

36 ರಾಷ್ಟ್ರಗಳಲ್ಲಿ 195 ವಿದೇಶಿ ಕಚೇರಿಗಳೊಂದಿಗೆ ಅಂತಾರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿದೆ. ಎಸ್ಬಿಐ ಉಳಿತಾಯ ಖಾತೆ, ಸ್ಥಿರ ಠೇವಣಿ, ಮರುಕಳಿಸುವ ಠೇವಣಿ, ಸಾಲಗಳು ಮತ್ತು ಹೆಚ್ಚಿನ ರೀತಿಯ ಸೇವೆಗಳನ್ನು ಒದಗಿಸುತ್ತದೆ.

ಗುಡ್ ನ್ಯೂಸ್! ಸರ್ಕಾರಿ ನೌಕರರಿಗೆ ಎಸ್ಬಿಐನಿಂದ ಬಂಪರ್ ಕೊಡುಗೆ

ನೀವು ಎಸ್ಬಿಐ ಖಾತೆದಾರರಾಗಿದ್ದರೆ, ಬ್ಯಾಂಕ್ ವಿಧಿಸುವ ಈ 5 ಶುಲ್ಕಗಳನ್ನು ತಿಳಿದಿರಲೇಬೇಕು.

ಎಟಿಎಂ ಶುಲ್ಕಗಳು
 

ಎಟಿಎಂ ಶುಲ್ಕಗಳು

ತಿಂಗಳಿಗೆ ಐದು ಉಚಿತ ಎಸ್ಬಿಐ ಎಟಿಎಂ ವಹಿವಾಟಿನ ಮಿತಿ ಮೀರಿದ ನಂತರ ಪ್ರತಿ ಬ್ಯಾಂಕ್ ಹಣಕಾಸು ವಹಿವಾಟಿನ ಮೇಲೆ ರೂ. 10, ನಾನ್ ಫೈನಾನ್ಸಿಯಲ್ ವ್ಯವಹಾರಕ್ಕೆ ರೂ. 5 ವಿಧಿಸುತ್ತದೆ. ಹಿಂದಿನ ತಿಂಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ರೂ. 25,000 ಹೊಂದಿರುವ ಜನರಿಗೆ ಈ ಶುಲ್ಕಗಳು ಅನ್ವಯವಾಗುತ್ತದೆ. ಆದರೆ, ಮಾಸಿಕ ಸರಾಸರಿ ಬ್ಯಾಲೆನ್ಸ್ ರೂ 25,000 ಕ್ಕಿಂತಲೂ ಹೆಚ್ಚಿದ್ದರೆ ಎಸ್ಬಿಐ ಎಟಿಎಂಗಳ ಮೂಲಕ ನಡೆಸುವ ವ್ಯವಹಾರಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಇತರ ಬ್ಯಾಂಕಿನ ಎಟಿಎಂ ಮೂಲಕ ನಡೆಸುವ ಪ್ರತಿ ವ್ಯವಹಾರಕ್ಕೆ ರೂ. 20 ಹಾಗು ನಾನ್ ಫೈನಾನ್ಸಿಯಲ್ ವ್ಯವಹಾರಕ್ಕೆ ರೂ. 8 ವಿಧಿಸಲಾಗುತ್ತದೆ. ಇದು ಮೆಟ್ರೊ ನಗರಗಳಲ್ಲಿ ತಿಂಗಳಿಗೆ 3 ಉಚಿತ ವಹಿವಾಟುಗಳು ಮತ್ತು ನಾನ್ ಮೆಟ್ರೋ ಕೇಂದ್ರಗಳಲ್ಲಿ 5 ಉಚಿತ ವಹಿವಾಟುಗಳ ನಂತರದ ವ್ಯವಹಾರಕ್ಕೆ ಅನ್ವಯವಾಗುತ್ತದೆ.

ಚೆಕ್ಬುಕ್ ವಿತರಣೆ

ಚೆಕ್ಬುಕ್ ವಿತರಣೆ

ರೂ. 1 ಲಕ್ಷದವರೆಗಿನ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ (ಕ್ಯೂಬಿಎಬ್) ಹೊಂದಿರುವ ಖಾತೆದಾರರಿಗೆ, ಮೊದಲ 25 ಚೆಕ್ ಪುಟಗಳನ್ನು ಉಚಿತವಾಗಿ ನೀಡಲಾಗುತ್ತದೆ. 10 ಪುಟಗಳ, 25 ಪುಟಗಳ ಮತ್ತು 50 ಪುಟಗಳ ಚೆಕ್ ಪುಸ್ತಕಗಳಿಗೆ ಕ್ರಮವಾಗಿ ರೂ. 30, ರೂ. 75 ಮತ್ತು ರೂ. 150 (ಜಿಎಸ್ಟಿ ಹೊರತುಪಡಿಸಿ) ವಿಧಿಸಲಾಗುತ್ತದೆ. ರೂ. 1 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ (ಕ್ಯೂಬಿಎಬ್) ಖಾತೆದಾರರು ಮತ್ತು ಹಿರಿಯ ನಾಗರಿಕರಿಗೆ, ಚೆಕ್ ಪುಸ್ತಕಗಳನ್ನು ನೀಡಲು ಯಾವುದೇ ಮೊತ್ತವನ್ನು ವಿಧಿಸಲಾಗುವುದಿಲ್ಲ. ಆದಾಗ್ಯೂ, ಹತ್ತು ಪುಟಗಳಿರುವ ಕರೆಂಟ್ ಮತ್ತು ಉಳಿತಾಯ ಬ್ಯಾಂಕ್ ಖಾತೆದಾರರಿಗೆ ತುರ್ತು ಚೆಕ್ ಪುಸ್ತಕ ವಿತರಣೆಗೆ ರೂ. 50 ವಿಧಿಸಲಾಗುತ್ತದೆ.

ಕನಿಷ್ಠ ಖಾತೆ ಬ್ಯಾಲೆನ್ಸ್ (MAB)ಇಲ್ಲದಿದ್ದರೆ?

ಕನಿಷ್ಠ ಖಾತೆ ಬ್ಯಾಲೆನ್ಸ್ (MAB)ಇಲ್ಲದಿದ್ದರೆ?

ಮೆಟ್ರೋ ನಗರಗಳಲ್ಲಿ ರೂ. 5,000 ಕನಿಷ್ಠ ಖಾತೆಯ ಬ್ಯಾಲೆನ್ಸ್ (ಎಂಎಬಿ) ನಿರ್ವಹಿಸದಿದ್ದರೆ ತಿಂಗಳಿಗೆ ರೂ. 50 (ಜಿಎಸ್ಟಿ ಹೊರತುಪಡಿಸಿ) ವಿಧಿಸಲಾಗುತ್ತದೆ.

ಮೆಟ್ರೋ ರಹಿತ ನಗರಗಳಲ್ಲಿ ರೂ. ೩೦೦೦ ಕನಿಷ್ಠ ಖಾತೆಯ ಬ್ಯಾಲೆನ್ಸ್ ಕಾಪಾಡಿಕೊಳ್ಳದಿದ್ದರೆ ರೂ. 40 ವಿಧಿಸಲ್ಪಡುತ್ತದೆ.

ಹಿಂದಿರುಗಿದ ಚೆಕ್
 

ಹಿಂದಿರುಗಿದ ಚೆಕ್

ಚೆಕ್ ಮೊತ್ತವನ್ನು ಲೆಕ್ಕಿಸದೆಯೇ ಎಸ್ಬಿಐನಲ್ಲಿ ಚೆಕ್ ರಿಟರ್ನ್ ಶುಲ್ಕಗಳು 500 ರೂ. (ಜಿಎಸ್ಟಿ ಹೊರತುಪಡಿಸಿ).

ತಾಂತ್ರಿಕ ಕಾರಣಗಳಿಂದ ಚೆಕ್ ಹಿಂದಿರುಗಿದರೆ ರೂ. 150 (ಜಿಎಸ್ಟಿ ಹೊರತುಪಡಿಸಿ) ಶುಲ್ಕ ವಿಧಿಸಲಾಗುತ್ತದೆ.

ಆರ್ಬಿಐ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಗ್ರಾಹಕರ ತಪ್ಪಿರದಿದ್ದರೆ ತಾಂತ್ರಿಕ ಕಾರಣಗಳಿಗಾಗಿ ಯಾವುದೇ ಶುಲ್ಕವಿರುವುದಿಲ್ಲ.

NEFT / RTGS ಶುಲ್ಕಗಳು

NEFT / RTGS ಶುಲ್ಕಗಳು

ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ NEFT ವಹಿವಾಟುಗಳಿಗೆ, ರೂ. 1,000 ವರೆಗಿನ ವಹಿವಾಟುಗಳಿಗೆ ರೂ. 1, ರೂ. 10,000ದಿಂದ ವರೆಗಿನ 1 ಲಕ್ಷ ನಡುವಿನ ವಹಿವಾಟುಗಳಿಗೆ ರೂ. 2 ಮತ್ತು 1 ಲಕ್ಷದಿಂದ 2 ಲಕ್ಷ ನಡುವೆ ವ್ಯವಹಾರಗಳಿಗೆ ರೂ. 3 ಮತ್ತು 2 ಲಕ್ಷಕ್ಕಿಂತಲೂ ಮೇಲ್ಪಟ್ಟ ವಹಿವಾಟುಗಳಿಗೆ ರೂ. 5 ವಿಧಿಸಲ್ಪಡುತ್ತದೆ.

ನೆಟ್ ಬ್ಯಾಂಕಿಂಗ್ ಮೂಲಕ ನಡೆಸುವ ರೂ. 2 ಲಕ್ಷ ಮತ್ತು ರೂ. 5 ಲಕ್ಷ ನಡುವಿನ ಆರ್ಟಿಜಿಎಸ್ ವಹಿವಾಟುಗಳಿಗಾಗಿ ರೂ. 5 ಮತ್ತು 5 ಲಕ್ಷಕ್ಕೂ ಹೆಚ್ಚಿನ ವಹಿವಾಟಿನ ಮೇಲೆ ರೂ. 10 ವಿಧಿಸಲಾಗುತ್ತದೆ. ಏನಿದು ಇಎಂಐ ಮುಕ್ತ ಸಾಲ (EMI free loan)? ಅರ್ಹತೆ, ಲಾಭಗಳ ಸಂಪೂರ್ಣ ಮಾಹಿತಿ ಇಲ್ಲಿದೆ ..

English summary

Have an SBI account? You should be aware of these 5 charges/Laws

SBI account holders can enjoy various services at the tip of their fingertips from the comfort of their house with bank's net banking and mobile banking service.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more