For Quick Alerts
ALLOW NOTIFICATIONS  
For Daily Alerts

ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮುನ್ನ ಇಲ್ಲೊಮ್ಮೆ ನೋಡಿ..

|

ಒಂದೆರಡು ತಿಂಗಳಲ್ಲಿ ಶೈಕ್ಷಣಿಕ ವರ್ಷದ ತಯಾರಿಗಳು, ಅಡ್ಮಿಷನ್ ಪ್ರಕ್ರಿಯೆಗಳು ಆರಂಭವಾಗಲಿವೆ. ಪ್ರತಿಷ್ಠಿತ ಕಾಲೇಜುಗಳಲ್ಲಿ, ವಿದೇಶಗಳಲ್ಲಿ ಶಿಕ್ಷಣ ಪಡೆಯುವುದು ಬಹು ಜನರ ಕನಸಾಗಿರುತ್ತದೆ. ಅದಕ್ಕಾಗಿ ಸಾಲ ಪಡೆಯುವ ಅಗತ್ಯತೆ ಕೂಡ ಇರುತ್ತದೆ.

"ಶಿಕ್ಷಣವು ಯಶಸ್ವೀ ಜೀವನಕ್ಕೆ ಕೀಲಿಕೈ ಇದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ" ಅಂತಾರೆ. ಆದರೆ ಅತ್ಯಂತ ದುಬಾರಿಯಾಗಿರುವ ಇಂತಹ ಶಿಕ್ಷಣವು ವಿದ್ಯಾಕಾಂಕ್ಷಿಗಳಿಗೆ ಕೈಗೆಟುಕುವುದು ಬಹಳ ಕಷ್ಟವಾಗಿದೆ. ಅದನ್ನು ಎಟುಕಿಸಿಕೊಳ್ಳುಲು ಶಿಕ್ಷಣ ಸಾಲವು ಬಹು ಸಹಕಾರಿಯಾಗಿದೆ. ಆದರೆ ಸಾಲ ತೆಗೆದುಕೊಳ್ಳುವುದರಿಂದ ಹಿಡಿದು ಮರುಪಾವತಿ ಮಾಡುವ ತನಕ ಎಲ್ಲೂ ಏನೂ ಅಡ್ಡಿ ಆತಂಕಗಳು ಬರದಂತೆ ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಇಂದಿನ ಹೆಜ್ಜೆ ಸರಿಯಾಗಿ ಇಟ್ಟವರ ನಾಳೆಯು ಸುಗಮವಾಗಿರುತ್ತದೆ. ಈ ನಿಟ್ಟಿನಲ್ಲಿ,ನಿಮಗಾಗಿ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ ನೋಡಿ.

ಗಮನವಿರಲಿ..
 

ಗಮನವಿರಲಿ..

ಶಿಕ್ಷಣದ ವ್ಯವಹಾರವು ದಶಕದ ಹಿಂದೆ ಇದ್ದಂತೆ ಈಗಿಲ್ಲ. ಅದರಲ್ಲೂ ಉನ್ನತ ಶಿಕ್ಷಣವಂತೂ ಬಹಳ ದುಬಾರಿಯಾಗಿದೆ. ಭಾರತದ ಕೆಲವು ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಹೊಂದಲು ಎಂಟರಿಂದ ಹತ್ತು ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಇದೇ ಹೀಗಾದಲ್ಲಿ, ಇನ್ನು ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವುದಂತೂ ಕಷ್ಟಸಾಧ್ಯವಾಗಿದೆ. ವಿದೇಶದ ವಿದ್ಯಾಭ್ಯಾಸ ವಂತೂ ಬಹಳ ತುಟ್ಟಿಯಾಗಿದೆ. ಹೀಗಾಗಿ ಎಷ್ಟೋ ಜನ ವಿದ್ಯಾಪೇಕ್ಷಿಗಳ ಪಾಲಿಗೆ ಶಿಕ್ಷಣವು ಮರೀಚಿಕೆಯಾಗುತ್ತಿದೆ. ಅದೇನೇ ಇರಲಿ, ಶಿಕ್ಷಣವನ್ನು ಹೊಂದಲೇಬೇಕೆಂಬ ಹಂಬಲವಿರುವವರಿಗೆ ಶಿಕ್ಷಣ ಸಾಲಗಳು ಒಂದು ಉತ್ತಮ ಮಾರ್ಗವೇ ಸರಿ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಯಕೆಯನ್ನು ಪೂರೈಸುವಲ್ಲಿ ಬ್ಯಾಂಕುಗಳು ನೆರವಿಗೆ ಬರುತ್ತಿದೆ. ಆದರೆ ಒಂದು ಬ್ಯಾಂಕಿನ ಬಡ್ಡಿದರ ಗಳಿಗೂ, ಇನ್ನೊಂದು ಬ್ಯಾಂಕಿನ ಬಡ್ಡಿದರ ಗಳಿಗೂ ವ್ಯತ್ಯಾಸಗಳಿರುತ್ತವೆ. ಹೀಗಾಗಿ, ಕೆಲವೊಮ್ಮೆ ಉತ್ತಮವಾದ ಆಯ್ಕೆಯನ್ನು ಗುರುತಿಸುವಲ್ಲಿ ಗೊಂದಲ ಮತ್ತು ಕಷ್ಟಗಳು ತಲೆದೋರುತ್ತವೆ. ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಉದಾಹರಣೆಗೆ ಎಚ್. ಆರ್. ಡಿ ಸಚಿವಾಲಯವು ಒದಗಿಸಿರುವ ಕೇಂದ್ರಸರ್ಕಾರದ ಬಡ್ಡಿ ಸಬ್ಸಿಡಿ ಯೋಜನೆಯು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗಾಗಿ ಅನುದಾನಿತ ದರದಲ್ಲಿ ಶಿಕ್ಷಣ ಸಾಲವನ್ನು ಪಡೆಯುವಲ್ಲಿ ಸಹಾಯ ಮಾಡಿ ಕೊಡುತ್ತಿದೆ. ಭಾರತದಲ್ಲಿ ಗುರುತಿಸಲ್ಪಟ್ಟ ವೃತ್ತಿಪರ ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಮತ್ತು ಕೋರ್ಸ್ ಅನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಈ ಸಬ್ಸಿಡಿ ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ನಾನಾರೀತಿಯ ಕೋರ್ಸ್ ಗಳಿಗೆ ವಿಭಿನ್ನ ಬ್ಯಾಂಕುಗಳಿಂದ ಶಿಕ್ಷಣ ಸಾಲಗಳನ್ನು ಪಡೆಯಬಹುದಾಗಿದೆ.

ಯಾವ ಶಿಕ್ಷಣ ಸಾಲ ಉತ್ತಮ ಎನ್ನುವುದಕ್ಕಿಂತ ನಮಗೆ ಮತ್ತು ನಮ್ಮ ಕೋರ್ಸ್ ಗಳಿಗೆ ಅನುಗುಣವಾದ ಶಿಕ್ಷಣ ಸಾಲ ಯಾವುದು ಎಂದು ತಿಳಿದುಕೊಂಡು ಮುಂದಕ್ಕೆ ಹೆಜ್ಜೆ ಹಾಕುವುದೇ ಸಮಂಜಸವಾಗಿದೆ. ಶಿಕ್ಷಣ ಸಾಲವನ್ನು ಪಡೆದು ಕೊಳ್ಳುವ ಮೊದಲು ನಿಮಗೆ ಸಹಾಯವಾಗುವಂತಹ ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ...

ನಿಮ್ಮ ಕೋರ್ಸ್ ಗೆ ಸಾಲ ಲಭ್ಯವಿದೆಯೇ?

ನಿಮ್ಮ ಕೋರ್ಸ್ ಗೆ ಸಾಲ ಲಭ್ಯವಿದೆಯೇ?

ನೀವು ಕೋರ್ಸ್ ಮತ್ತು ಕಾಲೇಜ್ ನಿರ್ಧರಿಸುವುದಕಿಂತ ಮೊದಲು ಅದಕ್ಕೆ ಶಿಕ್ಷಣ ಸಾಲ ದೊರೆಯುವುದೇ ಎಂದು ಮೊದಲು ಖಚಿತಪಡಿಸಿಕೊಳ್ಳಿ. ನಿಮಗೆ ಆ ಸಾಲ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಖಾತ್ರಿಯಾದ ನಂತರ ಮಾತ್ರ ಮುಂದುವರೆಯಿರಿ. ಅದಕ್ಕೆ ಬೇಕಾದ ಕಾಗದಪತ್ರಗಳನ್ನು ಸಿದ್ಧಪಡಿಸಿಕೊಳ್ಳಿ, ಆಗ ಕಾರ್ಯವಿಧಾನಗಳಲ್ಲಿ ನಿಮಗೆ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ. ಅಷ್ಟೇ ಅಲ್ಲದೆ, ಕಾರ್ಯ ಗತಿಯು ಶೀಘ್ರ ಮತ್ತು ಸಲೀಸಾಗಿರುತ್ತದೆ. ದಾಖಲೆಗಳು ಸಂಪೂರ್ಣ ಮತ್ತು ಸೂಕ್ತವಾಗಿದ್ದಲ್ಲಿ ಸಾಲಗಾರನ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆ ಹಾಗೂ ಸಾಲವು ಬಹುಬೇಗ ಅಂಗೀಕೃತವಾಗುತ್ತದೆ.

ಅರೆ ಸಂದಾಯ / ಡೌನ್ ಪೇಮೆಂಟ್

ಅರೆ ಸಂದಾಯ / ಡೌನ್ ಪೇಮೆಂಟ್

ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮುನ್ನ ನಿಮಗೆ ಡೌನ್ ಪೇಮೆಂಟ್ ಮಾಡಲು ಸಾಕಷ್ಟು ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು 4 ಲಕ್ಷದೊಳಗೆ ಸಾಲವನ್ನು ತೆಗೆದುಕೊಂಡರೆ ಡೌನ್ ಪೇಮೆಂಟ್ ಮಾಡುವ ಅವಶ್ಯಕತೆಯಿಲ್ಲ ನೀವೇನಾದರೂ 4 ಲಕ್ಷಕ್ಕೂ ಮೇಲ್ಪಟ್ಟು ಸಾಲವನ್ನು ತೆಗೆದುಕೊಳ್ಳುತ್ತಿರುವ ಪಕ್ಷದಲ್ಲಿ ಆ ಮೊತ್ತದ 5 % ಹಣವನ್ನು ಮುಂಗಡವಾಗಿಯೇ ಕಟ್ಟಬೇಕಾಗುತ್ತದೆ. ಅದೇನಾದರೂ ಅಂತರಾಷ್ಟ್ರೀಯ ಅಧ್ಯಯನದ ಸಾಲವಾದಲ್ಲಿ ಡೌನ್ ಪೇಮೆಂಟ್ 15% ಮಾಡಬೇಕಾಗುತ್ತದೆ. ಕೆಲವು ಬ್ಯಾಂಕುಗಳು ಡೌನ್ ಪೇಮೆಂಟ್ ಅನ್ನು ಕಂತುಗಳಲ್ಲಿ ಪಾವತಿಸಲು ಕೂಡ ಅವಕಾಶ ನೀಡಿದೆ. ಆದುದರಿಂದ ನಿಮಗೆ ಸೂಕ್ತವಾದದ್ದು ಏನು ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಮಿತಿಗಳನ್ನು ಅರಿಯಿರಿ
 

ನಿಮ್ಮ ಮಿತಿಗಳನ್ನು ಅರಿಯಿರಿ

ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವಾಗ ನೀವು ಗರಿಷ್ಠ ಮಿತಿಯ ಸಾಲವನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ಅಧ್ಯಯನವು ಕಡಿಮೆ ಮೊತ್ತದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಗಳಿದ್ದರೆ, ಯಾವಾಗಲೂ ಕನಿಷ್ಠ ಮೊತ್ತ ಎಷ್ಟು ಬೇಕೋ ಅಷ್ಟು ಮಾತ್ರ ಸಾಲ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಸಾಲವನ್ನು ನೀವು ಬೇಗ ಮರುಪಾವತಿಸಲು ಸಹಾಯವಾಗುತ್ತದೆ. ಅದಷ್ಟೇ ಅಲ್ಲದೆ ಭವಿಷ್ಯದಲ್ಲಿ ನೀವು ಸಂಪಾದಿಸುವ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಲೂ ನಿಮಗಿದು ಸಹಕರಿಸುತ್ತದೆ.

ಸಂಪೂರ್ಣ - ಸಮಗ್ರ ಸಂಶೋಧನೆ

ಸಂಪೂರ್ಣ - ಸಮಗ್ರ ಸಂಶೋಧನೆ

ಕಣ್ಣುಮುಚ್ಚಿಕೊಂಡು, ಅಲಕ್ಷ್ಯದಿಂದ ಯಾವುದೋ ಒಂದು ಶಿಕ್ಷಣ ಸಾಲ ಎಂದು ಅವಸರ ಮಾಡಿಕೊಳ್ಳದೇ ಶಿಕ್ಷಣ ಸಾಲಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳಿ. ನಿಬಂಧನೆಗಳಾಗಲಿ, ಷರತ್ತುಗಳಾಗಲಿ, ಎಲ್ಲಾ ಮೂಲೆಗಳನ್ನು ಪರಿಶೀಲಿಸಿ ನೋಡಿ ಬ್ಯಾಂಕುಗಳು ನೀಡುತ್ತಿರುವ ದರಗಳನ್ನು ಹೋಲಿಸಿ ಕೊಳ್ಳಿ. ಶಿಕ್ಷಣ ಸಾಲದ ಹಮ್ಮುಗೆ( policy) ಗಳೆಲ್ಲವೂ ನಿಮ್ಮ ಅರಿವಿಗೆ ಬಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದೊಂದು ಬ್ಯಾಂಕು ಒಂದೊಂದು ರೀತಿಯ ವಿಭಿನ್ನ ಶಿಕ್ಷಣ ಸಾಲಗಳನ್ನು ನೀಡುತ್ತದೆ. ಕೆಲವೊಂದು ನಮ್ಮನ್ನು ಬಹಳ ಬೇಗ ಸೆಳೆಯುವಂತೆ ಇರುತ್ತದೆ. ಹಾಗಾಗಿ ನೀವು ಇದಕ್ಕೆ ಮರುಳು ಹೋಗದೆ ಸಾಲವನ್ನು ತೆಗೆದುಕೊಳ್ಳುವ ಮುನ್ನವೇ ಬಹಳ ಎಚ್ಚರಿಕೆಯಿಂದ ಎಲ್ಲವನ್ನೂ ಸರಿಯಾಗಿ ಮೌಲ್ಯಮಾಪನ ಮಾಡಿ ವಿವಿಧ ಬ್ಯಾಂಕುಗಳ ಬಡ್ಡಿ ದರಗಳನ್ನು ಹೋಲಿಸಿ ಮತ್ತು ನಿಮಗೆ ಸೂಕ್ತವಾದ ಆಯ್ಕೆಯನ್ನು ನಿರ್ಧರಿಸಿಕೊಳ್ಳಿ.

ಭಾರತೀಯ ಮತ್ತು ಅಂತರಾಷ್ಟ್ರೀಯ ಶಿಕ್ಷಣದ ನಡುವಿನ ವ್ಯತ್ಯಾಸವನ್ನು ಅರಿಯಿರಿ

ಭಾರತೀಯ ಮತ್ತು ಅಂತರಾಷ್ಟ್ರೀಯ ಶಿಕ್ಷಣದ ನಡುವಿನ ವ್ಯತ್ಯಾಸವನ್ನು ಅರಿಯಿರಿ

ಭಾರತೀಯ ಮತ್ತು ಅಂತರಾಷ್ಟ್ರೀಯ ಅಧ್ಯಯನವೆರಡಕ್ಕೂ ಬ್ಯಾಂಕುಗಳು ಶಿಕ್ಷಣ ಸಾಲವನ್ನು ನೀಡುತ್ತವೆ. ಭಾರತದಲ್ಲಿ ಮಾಡುವ ಅಧ್ಯಯನಗಳಿಗೆ 10 ಲಕ್ಷ ರೂಪಾಯಿಗಳ ಗರಿಷ್ಠ ಸಾಲ ಮತ್ತು ಅಂತರರಾಷ್ಟ್ರೀಯ ಅಧ್ಯಯನಗಳಿಗೆ 20 ಲಕ್ಷ ರೂಪಾಯಿಗಳ ಗರಿಷ್ಠ ಸಾಲ ದೊರೆಯುತ್ತಿದೆ.

ನೀವು ಆಯ್ಕೆಮಾಡಿಕೊಂಡಿರುವ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯು ಯಾವುದಾದರೂ ಬ್ಯಾಂಕುಗಳೊಂದಿಗೆ ಸೇರಿಕೊಂಡು ಸಂಬಂಧ ಹೊಂದಾಣಿಕೆ (ಟೈ ಅಪ್)ಮಾಡಿಕೊಂಡಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಹಾಗಿದ್ದಲ್ಲಿ ಇದು ನಿಮ್ಮ ಕೆಲಸವನ್ನು ಸರಾಗವಾಗಿಸುತ್ತದೆ.

ಸಾಲವನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ?

ಸಾಲವನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ?

ಒಂದು ವೇಳೆ, ನೀವು ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ಅದರ ಪರಿಣಾಮಗಳು, ಆಗುಹೋಗುಗಳು ಏನೆಂದು ತಿಳಿದುಕೊಳ್ಳಿ. ಕೆಲವೊಮ್ಮೆ ನಿಮಗೆ ಸಾಲವನ್ನು ಮರುಪಾವತಿಸಲು

ಸಾಧ್ಯವಾಗದಿದ್ದಲ್ಲಿ ನೀವು ನಿಮ್ಮ ಪರಿಸ್ಥಿತಿ ಬಗ್ಗೆ ಸಾಲಗಾರನಿಗೆ ತಿಳಿಸಿ ಹೇಳಿದರೆ ಅವರು ನಿಮಗೆ ಮರುಪಾವತಿಸಲು ಇನ್ನೂ ಹೆಚ್ಚಿನ ಸಮಯವನ್ನು ನೀಡುವ ಸಾಧ್ಯತೆಗಳಿರುತ್ತದೆ. ಎಲ್ಲಾ ಸಮಯದಲ್ಲೂ ಇದು ಹೀಗೇ ನಡೆಯುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಖಾತರಿದಾರರು (ಗ್ಯಾರೆಂಟಿ ರ್) ಇದ್ದರೆ ಅವರು ನಿಮ್ಮ ಪರವಾಗಿ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಅಂಶವೆಂದರೆ ಸಾಲವನ್ನು ಮರುಪಾವತಿ ಸುವಲ್ಲಿ ನೀವೇನಾದರೂ ಅಸಮರ್ಥರಾದರೆ, ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಭವಿಷ್ಯದಲ್ಲಿ ಯಾವುದೇ ರೀತಿಯ ಸಾಲ ತೆಗೆದುಕೊಳ್ಳಬೇಕಾಗಿ ಬಂದಲ್ಲಿ ಇದು ಅಡ್ಡಿಮಾಡುತ್ತದೆ. ಇದರಿಂದಾಗಿ ನೀವು ದಾಪುಗಾಲು ಹಾಕುವುದು ಕಷ್ಟವಾಗುತ್ತದೆ.

ಮರುಪಾವತಿ

ಮರುಪಾವತಿ

ಶಿಕ್ಷಣ ಸಾಲದ ಪ್ರಮುಖ ಲಾಭವೆಂದರೆ ಮರುಪಾವತಿಯ ಸೂಚನೆ ಅವಧಿ. ನಿಮ್ಮ ಕೋರ್ಸ್ ಮುಗಿದು ಆರು ತಿಂಗಳು ಅಥವಾ ಒಂದು ವರ್ಷವಾದರೂ ನೀವು ಬ್ಯಾಂಕ್ ಗೆ ಮರುಪಾವತಿಸುವ ಅವಶ್ಯಕತೆಯಾಗಲೀ, ತರಾತುರಿಯಾಗಲಿ, ಚಿಂತೆಯಾಗಲಿ ಇಲ್ಲ. ಇದರಿಂದ ನಿಮಗೆ ಒಂದು ಒಳ್ಳೆಯ ಯೋಗ್ಯವಾದ ಕೆಲಸವನ್ನು ಹುಡುಕಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಶಿಷ್ಟ ವೇತನ ನಿಮಗೆ ದೊರಕಲು ಶುರುವಾದ ನಂತರ ಸಾಲವನ್ನು ಮರುಪಾವತಿಸಬಹುದು. ಅಲ್ಲದೆ, ಮರುಪಾವತಿಯ ಅವಧಿಯು ಐದರಿಂದ ಏಳು ವರ್ಷಗಳ ವರೆಗೆ ಇದ್ದು ನಿಮಗೆ ಸಂಪೂರ್ಣ ಮರುಪಾವತಿ ಮಾಡಲು ಸಾಕಷ್ಟು ಸಮಯ ಸಿಗುತ್ತದೆ. ಆದರೆ ನಿಮ್ಮ ಕೋರ್ಸ್ ನಿಮಗೆ ಉತ್ತಮ ಕೆಲಸವನ್ನು ದೊರಕುವಲ್ಲಿ ಸಹಕಾರಿಯಾ? ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇಲ್ಲದಿದ್ದಲ್ಲಿ,ನೀವು ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ.

ಕೊನೆಮಾತು

ಕೊನೆಮಾತು

ಆದರೆ, ನಾವಿಲ್ಲಿ ಹೇಳಿರುವ ಪ್ರತಿಯೊಂದು ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಂಡು ಹೆಜ್ಜೆಯಿಟ್ಟರೆ ಯಶಸ್ವಿಯಾಗಿ ಮುನ್ನಡೆಯುತ್ತೀರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.ಈ ಮಾಹಿತಿಗಳಿಂದ ನೀವು ಸುಲಭವಾಗಿ ಸಮರ್ಪಕವಾದ ಸಾಲದ ಆಯ್ಕೆಯನ್ನು ಮಾಡಿ ಸರಾಗವಾಗಿ ಅದನ್ನು ಮರುಪಾವತಿ ಮಾಡುವಲ್ಲಿ ಯಶಸ್ಸು ಕಾಣುತ್ತೀರಿ ಎಂದು ಆಶಿಸುತ್ತೇವೆ.

Read more about: education loan loan money savings
English summary

Must know these things before you take an education loan

Before you decide on a course and college, always make sure to find out whether you can get an education loan for the same.
Story first published: Saturday, April 6, 2019, 10:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more