For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಮುನ್ನ ಈ 5 ಸಂಗತಿ ತಪ್ಪದೇ ಓದಿ..

|

ನಮ್ಮ ದೇಶದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಸ್ಥಾನಮಾನವಿದೆ. ಹೆಚ್ಚಿನ ಭಾರತೀಯರು ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಎದುರು ನೋಡುತ್ತಿರುತ್ತಾರೆ. ಏಕೆಂದರೆ ಈ ದಿನದಂದು ಚಿನ್ನ ಖರೀದಿಸುವುದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

ಅಕ್ಷಯ ತೃತೀಯದ ಮಹತ್ವವೇನು?

ಪರಿಶುದ್ಧತೆ
 

ಪರಿಶುದ್ಧತೆ

ಚಿನ್ನವನ್ನು ಖರೀದಿಸುವಾಗ ಅತ್ಯಂತ ಮುಖ್ಯವಾದ ಸಂಗತಿಯೆಂದರೆ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವುದು. 24 ಕ್ಯಾರೆಟ್ (KT)ಎನ್ನುವುದು ಚಿನ್ನದ ಶುದ್ಧವಾದ ರೂಪವಾಗಿದೆ. ಹೆಚ್ಚಿನ ಚಿನ್ನಾಭರಣಗಳ ಮಳಿಗೆಗಳಲ್ಲಿ ಪರಿಶುದ್ಧತೆ ಪರೀಕ್ಷಿಸಲು ಯಂತ್ರಗಳನ್ನು ಅಳವಡಿಸಿಕೊಂಡಿರುತ್ತಾರೆ ಚಿನ್ನದ ಖರೀದಿಯ ಮೊದಲು ಪರೀಕ್ಷಿಸಿ ತುರುವುದು ಸೂಕ್ತ.

ಹಾಲ್ ಮಾರ್ಕ್

ಹಾಲ್ ಮಾರ್ಕ್

ಒಂದು ಚಿನ್ನದ ನಾಣ್ಯವನ್ನು ಖರೀದಿಸುವಾಗ, ಅದರ ಹಾಲ್ಮಾರ್ಕ್ ನ್ನು ಪರೀಕ್ಷಿಸಬೇಕು. ಬಿಐಎಸ್ ಕಾಯಿದೆ ಪ್ರಕಾರ, ಲೋಹದ ವಿಷಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಶುದ್ಧತೆಗೆ ಅನುಗುಣವಾಗಿ ದೃಢೀಕರಿಸಲು ಆಭರಣಕಾರರು ಚಿನ್ನಾಭರಣಗಳ ಪ್ರತಿಯೊಂದು ತುಣುಕುಗಳನ್ನು ಹಾಲ್ಮಾರ್ಕಿಂಗ್ ಸಂಸ್ಥೆ ಮೌಲ್ಯಮಾಪನ ಮಾಡುತ್ತದೆ. ಆದಾಗ್ಯೂ, ಬಿಐಎಸ್ ಮಾರ್ಕ್ ಹೊಂದಿರುವ ಆಭರಣಗಳ 22 ಕ್ಯಾರೆಟ್ ಎಂದರ್ಥವಲ್ಲ. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ತಯಾರಿಕಾ ಶುಲ್ಕ

ತಯಾರಿಕಾ ಶುಲ್ಕ

ಆಭರಣ ಖರೀದಿಗೆ ಹೋಲಿಸಿದರೆ ಚಿನ್ನದ ನಾಣ್ಯವನ್ನು ಖರೀದಿಸುವುದು ಸುಲಭವಾಗಿದೆ. ಕಿವಿಯೋಲೆಗಳು, ಉಂಗುರಗಳು, ಇನ್ನಿತರ ಆಭರಣಗಳಿಗೆ ಹೋಲಿಸಿದರೆ ನಾಣ್ಯಗಳು ಕಡಿಮೆ ತಯಾರಿಕೆ ಶುಲ್ಕಗಳನ್ನು ಹೊಂದಿರುತ್ತದೆ.

ಮಾರಾಟ ಸುಲಭ

ಮಾರಾಟ ಸುಲಭ

ನೀವು ಬ್ಯಾಂಕಿನಿಂದ ಚಿನ್ನದ ನಾಣ್ಯಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ದೇಶನದ ಪ್ರಕಾರ ಆ ನಾಣ್ಯಗಳನ್ನು ಬ್ಯಾಂಕು ಮತ್ತೆ ಖರೀದಿಸುವುದಿಲ್ಲ ಎಂಬುದು ಗಮನಿಸುವುದು ಮುಖ್ಯ.

ಕೊನೆ ಮಾತು
 

ಕೊನೆ ಮಾತು

ಇದು ಕೊನೆಯ ಮಾತು ಆದರೆ ಕಟ್ಟಕಡೆಯ ಮಾತಲ್ಲ. ನೀವು ಖರೀದಿಸುವ ಆಭರಣಕ್ಕಾಗಿ ಪ್ರತಿ ಶುಲ್ಕದ ವಿವರಗಳನ್ನು ಹೊಂದಿರುವ ಮಾನ್ಯವಾದ ನಗದು ಜ್ಞಾಪಕ ಅಥವಾ ಬಿಲ್ ಕೇಳಲು ಮರೆಯಬೇಡಿ. ನೆನಪಿನಲ್ಲಿಡಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ, ಮಾನ್ಯ ಬಿಲ್ ಅಗತ್ಯವಾಗಿರುತ್ತದೆ. ಆ ಬಿಲ್ ಪವತಿ ಇಲ್ಲದೇ ಹೋದರೆ ಅಧಿಕಾರಿಗಳು ನಿಮ್ಮ ದೂರನ್ನು ಪರಿಗಣಿಸುವುದಿಲ್ಲ.

English summary

Read these 5 things before buying Gold on Akshaya Tritiya

Akshaya Tritiya is always seen as a festival to buy physical gold because it is considered an auspicious occasion to buy the precious metal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more