For Quick Alerts
ALLOW NOTIFICATIONS  
For Daily Alerts

ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಈ ಬಿಸಿನೆಸ್ ಆರಂಭಿಸಿ ವರ್ಷಕ್ಕೆ 97 ಲಕ್ಷ ಗಳಿಸಿ

|

ದಿನದಿಂದ ದಿನಕ್ಕೆ ಬದಲಾದ ಸಮಯಕ್ಕೆ ಜನರ ಜೀವನ ಶೈಲಿ, ಬೇಕು ಬೇಡಿಕೆ ಹಾಗು ಅಭಿರುಚಿಗಳು ಬದಲಾಗುತ್ತಾ ಹೋಗುತ್ತವೆ. ಜೀವನ ಶೈಲಿಯ ಬದಲಾವಣೆಯೊಂದಿಗೆ ವಸ್ತುಗಳ ಮೇಲಿನ ಬೇಡಿಕೆಯಲ್ಲಿ ಕೂಡ ಬದಲಾವಣೆಯಾಗುತ್ತಾ ಹೋಗುತ್ತದೆ. ಅದೇ ರೀತಿ ಜನರ ಅಭಿರುಚಿ ಹಾಗು ಅನುಕೂಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಹೊಸ ಹೊಸ ವಸ್ತುಗಳು ಬರುತ್ತವೆ. ಬದಲಾದ ಜೀವನಶೈಲಿಯ ಪರಿಣಾಮ ನ್ಯಾಪ್ಕಿನ್, ಟಿಶ್ಯೂ ಪೇಪರ್ ಬೇಡಿಕೆ ಕೂಡ ಹೆಚ್ಚುತ್ತಿದೆ.

ಹೊಟೇಲ್, ಮನೆ, ರೆಸ್ಟೋರೆಂಟ್, ರಿಟೇಲ್ ಮಳಿಗೆ, ಗೂಡಂಗಡಿ ಸೇರಿದಂತೆ ಈಗ ಟಿಶ್ಯೂ ಪೇಪರ್ ಗೆ ಬೇಡಿಕೆ ಹೆಚ್ಚಾಗಿದೆ. ಟಿಶ್ಯೂ ಪೇಪರ್ ಬಿಸಿನೆಸ್ ಆರಂಭಿಸಿ ಕೈತುಂಬ ಹಣ ಗಳಿಸಬಹುದು.

ಲಕ್ಷಾಂತರ ರೂಪಾಯಿ ಗಳಿಸುವಿರಿ
 

ಲಕ್ಷಾಂತರ ರೂಪಾಯಿ ಗಳಿಸುವಿರಿ

ಟಿಶ್ಯೂ ಪೇಪರ್ ಬೇಡಿಕೆಯಿಂದಾಗಿ ಅದರ ವ್ಯವಹಾರದಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿದೆ. ಇಂದು ಟಿಶ್ಯೂ ಪೇಪರ್ ವ್ಯವಹಾರವು ಮಾರುಕಟ್ಟೆಯಲ್ಲಿ ಭದ್ರ ಸ್ಥಾನವನ್ನು ಅಲಂಕರಿಸಿದೆ. ನೀವು ವ್ಯಾಪಾರ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಟಿಶ್ಯೂ ಪೇಪರ್ ವ್ಯವಹಾರವು ಉತ್ತಮ ಆಯ್ಕೆ. ಈ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ತಿಂಗಳಿಗೆ ಉತ್ತಮ ಸಂಪಾದನೆ ಮಾಡಬಹುದು. ಇದಲ್ಲದೆ, ಬಿಸಿನೆಸ್ ಪ್ರಾರಂಭಿಸಲು ಸರ್ಕಾರದಿಂದ ಸಹಾಯ ಪಡೆಯಬಹುದು.

ಎಷ್ಟು ಹೂಡಿಕೆ ಮಾಡಬೇಕಾಗಿದೆ?

ಎಷ್ಟು ಹೂಡಿಕೆ ಮಾಡಬೇಕಾಗಿದೆ?

ಈ ವ್ಯವಹಾರವನ್ನು ಆರಂಭಿಸಲು ರೂ. 3.50 ಲಕ್ಷ ಹೂಡಿಕೆ ಮಾಡಬೇಕು. ನೀವು ರೂ. 3.50 ಲಕ್ಷ ಹೂಡಿಕೆ ಮಾಡಿದರೆ ಈ ವ್ಯವಹಾರವನ್ನು ಸುಲಭವಾಗಿ ಪ್ರಾರಂಭಿಸಬಹುದು.ಇಷ್ಟೊಂದು ಬಂಡವಾಳ ನಿಮ್ಮ ಬಳಿ ಇ್ಲದೇ ಹೋದರೆ ಬ್ಯಾಂಕುಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಟರ್ಮ್ ಲೋನ್ ಆಧಾರದ ಮೇಲೆ ಸುಮಾರು 3.10 ಲಕ್ಷ ಮತ್ತು 5.30 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯುತ್ತೀರಿ. ಈ ಬಿಸಿನೆಸ್ ಆರಂಭಿಸಿ ಪ್ರತಿದಿನ 4 ಸಾವಿರ, ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ

97.50 ಲಕ್ಷದವರೆಗೆ ಮಾರಾಟ

97.50 ಲಕ್ಷದವರೆಗೆ ಮಾರಾಟ

ಈ ವ್ಯವಹಾರದಲ್ಲಿ ಒಂದು ವರ್ಷದಲ್ಲಿ 1.50 ಲಕ್ಷ ಕೆಜಿ ಪೇಪರ್ ನಾಪ್ಕಿನ್ ಗಳನ್ನು ಉತ್ಪಾದಿಸಬಹುದು. ಟಿಶ್ಯೂ ಪೇಪರ್ ಉತ್ಪಾದನೆಯ ನಂತರ ಮಾರುಕಟ್ಟೆಯಲ್ಲಿ ಕೆಜಿಗೆ ರೂ. 65 ದರದಲ್ಲಿ ಮಾರಾಟ ಮಾಡಬಹುದು. ನೀವು ಒಂದು ವರ್ಷದಲ್ಲಿ 1.50 ಲಕ್ಷ ಕೆ.ಜಿ ಪೇಪರ್ ಅನ್ನು ಉತ್ಪಾದಿಸಿದರೆ ನಿಮ್ಮ ವಹಿವಾಟು ಸುಮಾರು ರೂ. 97.50 ಲಕ್ಷ ಆಗುತ್ತದೆ. ನಿಮ್ಮ ಎಲ್ಲಾ ಖರ್ಚುವೆಚ್ಚಗಳನ್ನು ತೆಗೆದರೆ, ಒಂದು ವರ್ಷದಲ್ಲಿ ನಿಮಗೆ 10-12 ಲಕ್ಷ ರೂಪಾಯಿಗಳನ್ನು ಉಳಿಸಬಹುದು.

11 ಲಕ್ಷ ಬಂಡವಾಳ
 

11 ಲಕ್ಷ ಬಂಡವಾಳ

ಟಿಶ್ಯೂ ಪೇಪರ್ ಬಿಸಿನೆಸ್ ಶುರು ಮಾಡಲು ರೂ. 11-10 ಲಕ್ಷ ರೂಪಾಯಿ ಬಂಡವಾಳ ಬೇಕಾಗುತ್ತದೆ. ನಿಮ್ಮ ಹತ್ತಿರ ರೂ. 3.50 ಲಕ್ಷ ಇದ್ದಲ್ಲಿ ಸುಲಭವಾಗಿ ಟಿಶ್ಯೂ ಬಿಸಿನೆಸ್ ಗೆ ಚಾಲನೆ ನೀಡಬಹುದು. ಒಂದು ಬಾರಿ ಯಂತ್ರಗಳನ್ನು ಅಳವಡಿಸಲು 4.40 ಲಕ್ಷ ಬೇಕಾಗುತ್ತದೆ. ಕಚ್ಚಾ ಸರಕುಗಳಿಗಾಗಿ ಹೆಚ್ಚುಕಡಿಮೆ 7 ಲಕ್ಷ ಖರ್ಚಾಗಬಹುದು. ನೀವು ಇತರ ವೆಚ್ಚಗಳ ಬಗ್ಗೆ ಮಾತನಾಡಿದರೆ, ಸಾರಿಗೆ ಸಂಪರ್ಕ, ದೂರವಾಣಿ, ಸ್ಟೇಷನರಿ, ನಿರ್ವಹಣೆ, ವಿದ್ಯುತ್ ಮುಂತಾದವುಗಳನ್ನು ಸೇರಿಸಿದರೆ ಒಟ್ಟಾರೆ ರೂ. 10-11 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು.

ಮುದ್ರಾ ಯೋಜನೆಯಡಿ ಸಾಲ

ಮುದ್ರಾ ಯೋಜನೆಯಡಿ ಸಾಲ

ಬಿಸಿನೆಸ್ ಆರಂಭಿಸಲು ಬಯಸುವ ವ್ಯಕ್ತಿಗಳು ಮುದ್ರಾ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಲ್ಲಿ ನಿಮಗೆ ಸುಮಾರು 7.30 ಲಕ್ಷದವರೆಗೆ ಸಾಲ ಸಿಗುತ್ತದೆ. ಇಲ್ಲದಿದ್ದರೆ ಬೇರೆ ಬೇರೆ ಬ್ಯಾಂಕುಗಳಲ್ಲಿ ಬಿಸಿನೆಸ್ ಲೋನ್ ಗೆ ಅರ್ಜಿ ಸಲ್ಲಿಸಬಹುದು. 10-20 ಸಾವಿರ ಬಂಡವಾಳದಲ್ಲಿ ಬಿಸಿನೆಸ್ ಆರಂಭಿಸಿ ಸಾಕಷ್ಟು ಹಣ ಗಳಿಸಿ.

ಟಿಶ್ಯೂ ಪೇಪರ್ ಮಾರಾಟ

ಟಿಶ್ಯೂ ಪೇಪರ್ ಮಾರಾಟ

ನಿಮ್ಮ ಭಾಗದ ಹೊಟೇಲ್, ಮನೆ, ರೆಸ್ಟೋರೆಂಟ್, ರಿಟೇಲ್ ಮಳಿಗೆ, ಗೂಡಂಗಡಿ ಸೇರಿದಂತೆ ಎಲ್ಲ ಕಡೆಗಳಲ್ಲಿ ಟಿಶ್ಯೂ ಪೇಪರ್ ಗೆ ಬೇಡಿಕೆ ಹೆಚ್ಚಿದ್ದು, ಅವರನ್ನು ಸಂಪರ್ಕಿಸಿ ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ದೊಡ್ಡ ದೊಡ್ಡ ಹೋಟೆಲ್/ರೆಸ್ಟೋರೆಂಟ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ಬೃಹತ್ ಪ್ರಮಾಣದಲ್ಲಿ ಪೂರೈಕೆ ಮಾಡಬಹುದು.

ಸಗಣಿಯಿಂದ ಪೇಪರ್ ತಯಾರಿಸಿ ತಿಂಗಳಿಗೆ 1-2 ಲಕ್ಷ ಆದಾಯ ಗಳಿಸಿ

English summary

Start Tissue Paper Business Earn 97 lakh rupee in a year

This is one of the new business opportunity to Start Tissue Paper Business Earn 97 lakh rupee in a year.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more