For Quick Alerts
ALLOW NOTIFICATIONS  
For Daily Alerts

ಬಂಡವಾಳವಿಲ್ಲದೇ ಈ ಬಿಸಿನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಿ..

|

ಬಂಡವಾಳವಿಲ್ಲದೇ, ಅತೀ ಕಡಿಮೆ ಬಂಡವಾಳ ಹಾಗು ದೊಡ್ಡ ಮೊತ್ತ ಬಂಡವಾಳ ಹೂಡಿಕೆಯೊಂದಿಗೆ ಆರಂಭಿಸಬಹುದಾದ ಸಾವಿರಾರು ಬಿಸಿನೆಸ್ ಐಡಿಯಾಗಳು ಜಗತ್ತಿನಲ್ಲಿವೆ. ಅದರಲ್ಲೂ ಡಿಜಿಟಲ್ ಯುಗದಲ್ಲಿ ಎಲ್ಲ ರೀತಿಯ ಮಾಹಿತಿಗಳೂ ಲಭ್ಯವಾಗುತ್ತವೆ. ವ್ಯಾಪಾರ ವಹಿವಾಟು ಆರಂಭಿಸುವಾಗ ಅಂತರ್ಜಾಲದ ಮೊರೆಹೋಗಬಹುದು. ಇಂಟರ್ನೆಟ್, ಟೆಕ್ನಾಲಜಿ ಯುಗ ಹೆಚ್ಚೆಚ್ಚು ಬಿಸಿನೆಸ್ ಆರಂಭಕ್ಕೆ ಅವಕಾಶ ಕಲ್ಪಿಸಿದೆ. ಇವುಗಳ ಮೂಲಕ ಯಾವ ಬಿಸಿನೆಸ್ ಉತ್ತಮ, ಯಾವುದರಲ್ಲಿ ಹೆಚ್ಚು ಲಾಭ, ಕಡಿಮೆ ಬಂಡವಾಳದ ಉದ್ಯಮಗಳಾವುವು ಹೀಗೆ ಹಲವುದರ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದೆ. ಇಂಟರ್ನೆಟ್ ಸಹಾಯದಿಂದ ಕೈತುಂಬ ಹಣ ಸಂಪಾದಿಸಲು ಸಾಕಷ್ಟು ಅವಕಾಶಗಳಿದ್ದು, ಹೂಡಿಕೆಯಿಲ್ಲದೆ, ಮನೆಯಲ್ಲೇ ಕುಳಿತು ಆರಂಭಿಸಬಹುದು. ಇಲ್ಲಿ ಕೆಲ ಐಡಿಯಾಗಳನ್ನು ನೀಡಲಾಗಿದೆ.

ಕಂಟೆಂಟ್ ರೈಟಿಂಗ್
 

ಕಂಟೆಂಟ್ ರೈಟಿಂಗ್

ಡಿಜಿಟಲ್ ಮೀಡಿಯಾ ಹೆಚ್ಚು ಮುನ್ನೆಲೆಗೆ ಬರುತ್ತಿದ್ದು, ಇದಕ್ಕೆ ಕಂಟೆಟ್ ಗಳ ಅಗತ್ಯ ತುಂಬಾ ಇದೆ. ಕಂಟೆಂಟ್ ಬರಹವನ್ನು ಯಾವದೇ ಬಂಡವಾಳವಿಲ್ಲದೇ ಆರಂಭಿಸಬಹುದು. ಹೂಡಿಕೆಯಿಲ್ಲದೇ ಬಿಸಿನೆಸ್ ಪ್ರಾರಂಭಿಸುವವರಿಗೆ ಕಂಟೆಂಟ್ ರೈಟಿಂಗ್ ಬೆಸ್ಟ್ ಐಡಿಯಾ. ನಿರ್ದಿಷ್ಟ ಕ್ಷೇತ್ರದ ವಿಷಯದ ಬಗ್ಗೆ ಲೇಖನಗಳನ್ನು ಬರೆಯುವುದನ್ನು ಕಂಟೆಂಟ್ ರೈಟಿಂಗ್ ಎನ್ನುತ್ತಾರೆ. ಇಂತಹ ಕೆಲಸಗಳಿಗಾಗಿ ಹಲವಾರು ವೆಬ್ಸೈಟ್ ಗಳು ಉತ್ತಮ ಬರಹಗಾರರನ್ನು ಹುಡುಕುತ್ತಿರುತ್ತದೆ. ನೀವು ಒಬ್ಬರೇ ಇದನ್ನು ಆರಂಭಿಸಬಹುದಾಗಿದ್ದು, ಆನ್ಲೈನ್ ಅಥವಾ ಆಫ್ಲೈನ್ ಎರಡರಲ್ಲೂ ಈ ಕೆಲಸ ಮಾಡಬಹುದು. ಈಗಾಗಲೇ ನಿಮ್ಮ ಬಳಿ ಇರುವ ಲ್ಯಾಪ್ ಟಾಪ್ ಮತ್ತು ಇಂಟರ್ನೆಟ್ ಸಂಪರ್ಕದ ಮೂಲಕ ನಡೆಸಬಹುದು.

ಕೌನ್ಸಿಲಿಂಗ್

ಕೌನ್ಸಿಲಿಂಗ್

ಕೌನ್ಸಿಲಿಂಗ್ ಬಿಸಿನೆಸ್ ನಲ್ಲಿ ಹೆಚ್ಚು ಆದಾಯ ಗಳಿಕೆಯ ವೇದಿಕೆಯಾಗಿದೆ. ಜನರು ಹಲವಾರು ಸಂಗತಿಗಳ ಬಗ್ಗೆ ಮಾರ್ಗದರ್ಶನ ಬಯಸುತ್ತಾರೆ. ನಿಮಗೆ ಉತ್ತಮ ಮಾರ್ಗದರ್ಶನ ನೀಡುವಂತ ಸಾಮರ್ಥ್ಯವಿದ್ದರೆ ನೀವು ಕೌನ್ಸಿಲಿಂಗ್ ಶುರು ಮಾಡಬಹುದು. ಕಾನೂನು ಸಲಹೆ, ಆಸ್ತಿ ವಿವಾದಗಳು, ಮದುವೆ, ವ್ಯವಹಾರ, ವೈಯಕ್ತಿಕ ಸಮಸ್ಯೆ, ಹೂಡಿಕೆಯಂತಹ ಸಮಸ್ಯೆಗಳ ಬಗ್ಗೆ ನೀವು ಕೌನ್ಸಿಲಿಂಗ್ ನಡೆಸಬಹುದು. ಇದಕ್ಕಾಗಿ ವೆಬ್ಸೈಟ್ ತಯಾರಿಸಿಯೂ ಬಿಸಿನೆಸ್ ಶುರು ಮಾಡಬಹುದು.

ಆನ್ಲೈನ್ ಕೋಚಿಂಗ್

ಆನ್ಲೈನ್ ಕೋಚಿಂಗ್

ಆನ್ಲೈನ್ ಕೋಚಿಂಗ್ ಹೆಚ್ಚು ಪ್ರಸಿದ್ದಿ ಪಡೆಯುತ್ತಿದ್ದು, ಬೈಜುಸ್ ಸಾಕಷ್ಟು ಯಶಸ್ಸು ಕಂಡಿದೆ. ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುವವರಿಗೆ ಇದೊಂದು ಒಳ್ಳೆ ಅವಕಾಶ. ಭಾಷೆ ಕಲಿಸುವುದರಿಂದ, ಜಿಮ್, ಯೋಗದವರೆಗೆ ಆನ್ಲೈನ್ ನಲ್ಲಿ ಕೋಚಿಂಗ್ ಪಡೆಯುವವರ ಸಂಖ್ಯೆ ಹೆಚ್ಚಿದೆ. ನಿಮಗೆ ಯಾವ ಕಲೆಯಿದೆ ಅದನ್ನು ನೀವು ಬಳಸಿಕೊಂಡು ಈ ಬಿಸಿನೆಸ್ ಆರಂಭಿಸಹುದು. ಆನ್ಲೈನ್ ನಲ್ಲಿ ಕೋಚಿಂಗ್ ಕೊಡುವುದು ಹೇಗೆ ಎಂಬುದರ ಬಗ್ಗೆ ಆನ್ಲೈನ್ ನಲ್ಲಿಯೇ ಕೋರ್ಸ್ ಗಳು ಲಭ್ಯವಿದೆ. ಇದನ್ನು ತಿಳಿದುಕೊಂಡ ಆನ್ಲೈನ್ ಕೋಚಿಂಗ್ ಆರಂಭಿಸಿ.

ಬ್ಲಾಗಿಂಗ್
 

ಬ್ಲಾಗಿಂಗ್

ಪ್ರತಿಯೊಬ್ಬರಲ್ಲೂ ಲೇಖಕನಿರುತ್ತಾನೆ. ಆದರೆ ನಮ್ಮಲ್ಲಿ ಹೆಚ್ಚಿನವರು ಆ ಲೇಖಕನಿಗೆ ಕೆಲಸ ಕೊಡುವುದೇ ಇಲ್ಲ. ಒಂದು ವೇಳೆ ನಿಮ್ಮಲ್ಲಿಯೂ ನಿಮ್ಮ ಭಾವನೆ, ಅನುಭವ ಅಥವಾ ಪಯಣ ಕಥನವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕೆಂದಿದ್ದರೆ ಹಾಗೂ ಇದನ್ನು ಹೇಗೆ ಮಾಡಬೇಕೆಂದು ಗೊತ್ತಿಲ್ಲದೇ ಇದ್ದರೆ ನಿಮ್ಮದೇ ಸ್ವಂತ ಬ್ಲಾಗ್ ಒಂದನ್ನು ಹೊಂದಬಹುದು. ಇದನ್ನು ಪ್ರಾರಂಭಿಸಲು ಹೆಚ್ಚಿನ ಕೌಶಲ್ಯವಾಗಲೀ ಹಣವಾಗಲೀ ಬೇಕಾಗಿಲ್ಲ. ಆದರೆ ನೀವು ಯಾವ ವಿಷಯದಲ್ಲಿ ಬರೆಯುವವರಿದ್ದೀರೋ, ಅದನ್ನು ಓದಬಯಸುವವರ ಸಂಖ್ಯೆ ತುಂಬಾ ಹೆಚ್ಚಿರುವಂತೆ ನೋಡಿಕೊಳ್ಳಬೇಕಿವುದು ಅಗತ್ಯ. ಇದರಿಂದ ನಿಮ್ಮ ಬ್ಲಾಗ್ ಬರಹಗಳನ್ನು ಹೆಚ್ಚು ಓದುಗರು ಸಿಗುತ್ತಾರೆ. ನಿಮ್ಮ ತಾಣಕ್ಕೆ ಎಷ್ಟು ಹೆಚ್ಚು ಜನರು ಭೇಟಿ ನೀಡುತ್ತಾರೋ, ಅದನ್ನು ಪರಿಗಣಿಸಿ ಜಾಹೀರಾತು, ಸಂಭಾವನೆ ಇರುವ ಲೇಖನ ಬರೆಯುವ ಅವಕಾಶ, ಇತರ ವ್ಯಕ್ತಿಗಳ ಉತ್ಪನ್ನಗಳ ಬಗ್ಗೆ ವಿವರಿಸಿ ಸಂಪಾದಿಸುವ ಅವಕಾಶವೂ ದೊರಕುತ್ತದೆ.

ಇಬೇ ಬಿಸಿನೆಸ್ (eBay store owner)

ಇಬೇ ಬಿಸಿನೆಸ್ (eBay store owner)

ಇಬೇ ತಾಣದ ಮೂಲಕ ಮಾರಾಟವಾಗುವ ವಸ್ತುಗಳಿಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಲಾಭ ಪಡೆಯಲು ಸಾಧ್ಯ. ಇದರ ಮೂಲ ಮಂತ್ರವೆಂದರೆ "ಅತಿ ಕಡಿಮೆ ಬೆಲೆಗೆ ಖರೀದಿಸಿ, ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ" ಎನ್ನುವುದು. ಈ ಉದ್ಯಮಕ್ಕೆ ಕೊಂಚ ಬಂಡವಾಳ ಬೇಕು, ಆದರೆ ಇದೇನೂ ದೊಡ್ಡ ಮೊತ್ತವಲ್ಲ. ಈ ಉದ್ಯೋಗಕ್ಕೆ ಇಡಿಯ ದಿನ ಮನೆಯಲ್ಲಿ ಕುಳಿತಿರಬೇಕೆಂದೂ ಇಲ್ಲ. ಬದಲಿಗೆ ನಿತ್ಯದ ಒಂಭತ್ತರಿಂದ ಐದರವರೆಗಿನ ಕೆಲಸ ಮುಗಿಸಿದ ಬಳಿಕ ಈ ತಾಣವನ್ನು ಸಂದರ್ಶಿಸಿ ನಿಮ್ಮಲ್ಲಿರುವ ವಸ್ತುಗಳನ್ನು ಖರೀದಿಸಬಯಸಿದವರ ವಿವರಗಳನ್ನು ಪಡೆದು ಇವುಗಳನ್ನು ವಿಲೇವಾರಿ ಮಾಡಿದರೆ ಸಾಕು. ಸಾಮಾನ್ಯವಾಗಿ ಈ ವಸ್ತುಗಳು ವಾರಾಂತ್ಯದಲ್ಲಿಯೇ ಹೆಚ್ಚು ಮಾರಾಟವಾಗುವ ಕಾರಣ ವಾರಾಂತ್ಯಕ್ಕೆ ಹೆಚ್ಚು ಸಮಯ ನೀಡಿ ಹೆಚ್ಚು ಗಳಿಸಬಹುದು.

ಸೋಷಿಯಲ್ ಮೀಡಿಯಾ (Social-media influencer)

ಸೋಷಿಯಲ್ ಮೀಡಿಯಾ (Social-media influencer)

ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ? ಇಲ್ಲಿವೆ 12 ಮಾರ್ಗ

Read more about: business money investments
English summary

Start work from home Jobs without investment

There are thousands of business ideas that can be launched with Without capital, very little capital and large sums of investment.
Story first published: Friday, May 17, 2019, 12:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more