For Quick Alerts
ALLOW NOTIFICATIONS  
For Daily Alerts

ದುಡಿಯುವ ಮಹಿಳೆಯರಿಗಾಗಿ ಟಿಪ್ಸ್

|

'ಮಹಿಳೆ ಅಬಲೆಯಲ್ಲ ಸಬಲೆ' ಎನ್ನುವುದು ಸಾಬಿತಾಗಿರುವ ಸತ್ಯ ಮಾತು. ಹೆಣ್ಣು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತಾನು ಸಮರ್ಥವಾಗಿ ತೊಡಗಿಸಿಕೊಂಡಿದ್ದು, ಪುರುಷರಿಗಿಂತ ತಾನೇನೂ ಕಡಿಮೆ ಇಲ್ಲ ಎಂಬುದನ್ನು ಸಾರಿದ್ದಾಳೆ. ವೃತ್ತಿಯ ಜೊತೆಜೊತೆಗೆ ಸಂಸಾರದ ನೌಕೆಯನ್ನು ಸುಲಲಿತವಾಗಿ ನಿಭಾಯಿಸುವ ಕಲೆ ಆಕೆಗೆ ಕರಗತವಾಗಿದೆ.

ಎಲ್ಲಾ ಕ್ಷೇತ್ರಗಳಲ್ಲೂ ಗಟ್ಟಿಯಾಗಿ, ವೃತ್ತಿಪರಳಾಗಿ ಬೆಳೆಯುತ್ತಿರುವ ಹೆಣ್ಣಿಗೆ ಹಣಕಾಸು ಸ್ವಾತಂತ್ರ್ಯ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಸಂಸಾರ ನಿಭಾಯಿಸುವ ಕಲೆ ಗೊತ್ತಿರುವ ಆಕೆಗೆ ಹಣ ಕೂಡಿಡುವುದು ಹೇಗೆ ಎಂದು ತಿಳಿದಿರುತ್ತದೆ ಎಂದರೆ ತಪ್ಪಾಗಲಾರದು. ಆದರೆ ವೃತ್ತಿಪರಳಾಗಿ ಬೆಳೆಯುತ್ತಿದ್ದಂತೆ ಕೈಗೆ ಸೇರುವ ಸಂಬಳ, ಬರುವ ಆದಾಯವೂ ಹೆಚ್ಚಾಗುತ್ತದೆ. ಹೀಗಾಗಿ ಇದಕ್ಕೆ ಪೂರಕವಾಗಿ ಹಣದ ಉಳಿತಾಯ ಕೂಡಾ ಮಾಡಬೇಕಾದ್ದು ಅತ್ಯವಶ್ಯಕ ಎಂಬುದನ್ನು ಮರೆಯಬಾರದು.

ಮೊದಲ ಮಾತು
 

ಮೊದಲ ಮಾತು

ಸಂಸಾರ ಮತ್ತು ವೃತ್ತಿಯ ನಿರಂತರ ದುಡಿಮೆಯ ನಡುವೆ ಬಂಡವಾಳ ಹೂಡಿಕೆ, ಉಳಿತಾಯ, ವಿಮೆ ಬಗ್ಗೆ ಮಹಿಳೆಯರು ಯೋಚಿಸುವುದು ತುಸು ಕಷ್ಟ! ಹೀಗಾಗಿ ದುಡಿಯುವ ಮಹಿಳೆಯರಿಗಾಗಿ ಹಣ ಉಳಿತಾಯ ಮಾಡುವ ಸಲುವಾಗಿ ಕೆಲ ಸುಲಭ ವಿಧಾನಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ. ಸುರಕಷ್ಇತ ಮತ್ತು ಸುಲಭ ಹೂಡಿಕೆ ವಿಧಾನಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಹೂಡಿಕೆ ಮಾಡುವುದರಿಂದ ಕಷ್ಟ ಕಾಲದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಬಹುದು.

ಪ್ರಸ್ತುತ ಡಿಜಿಟಲ್ ಯುಗದಲ್ಲಿ ಉದ್ಯೋಗದ ಮೇಲೆ ಅನಿಶ್ಚಿತತೆಯ ತೂಗುಗತ್ತಿ ಯಾವಾಗಲೂ ಇರುತ್ತದೆ ಎಂಬುದನನ್ಉ ಮರೆಯಬಾರದು. ಆರೋಗ್ಯ ಯಾವಾಗ ಕೈಕೊಡುತ್ತದೆ ಹೇಳಲಾಗದು. ಆಕಸ್ಮಿಕ ಘಟನೆಗಳು ಯಾವಾಗ ಸಂಭವಿಸಬಹುದು ತಿಳಿಯದು. ಇಂತಹ ಸಂದರ್ಭಗಳಲ್ಲಿ ದುಡ್ಡಿಲ್ಲದಿದ್ದರೆ ಬದುಕು ಅತಂತ್ರವಾಗಿ ಸಿಡಿಲು ಬಡಿದಂತಾಗುತ್ತದೆ. ಇದರಿಂದ ಪಾರಾಗುವುದಕ್ಕಾಗಿ ವಿಶೇಷವಾಗಿ ದುಡಿಯೋ ಮಹಿಳೆಯರನ್ನು ಕೇಂದ್ರಿತವಾಗಿಟ್ಟುಕೊಂಡು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಚಿನ್ನದ ಮೇಲೆ ಹೂಡಿಕೆ

ಚಿನ್ನ ಅಂದರೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ವ್ಯಾಮೋಹ! ಚಿನ್ನದ ಮೇಲೆ ಹಣ ಹೂಡಿಕೆ ಸಾಂಪ್ರದಾಯಿಕ ವಿಧಾನವಾಗಿದ್ದು, ನಷ್ಟವಂತೂ ಆಗುವುದಿಲ್ಲ. ಆಭರಣಗಳ ಖರೀದಿ, ಚಿನ್ನದ ನಾಣ್ಯ ಹಾಗೂ ಬಾರ್ ಮೇಲೆ ಹೂಡಿಕೆ ಮಾಡಬಹುದು. ಅಲ್ಲದೇ ಷೇರುಗಳನ್ನು ಖರೀದಿಸುವಂತೆ ಇ-ಗೋಲ್ಡ್, ಆನ್ಲೈನ್ ಬಂಡವಾಳ ಹೂಡಿಕೆ, ETF ಎಂಬ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡಬಹುದು. ನಿಮಗೆ ಅನುಭವ ಬಂದ ಮೇಲೆ ಗೋಲ್ಡ್ ಫ್ಯೂಚರ್ಸ್ ಟ್ರೇಡಿಂಗ್ ನಲ್ಲಿ ಒಂದು ಕೈ ನೋಡಬಹುದು.

ಪಿಪಿಎಫ್

ಹೆಚ್ಚು ಜನರ ನೆಚ್ಚಿನ ಮತ್ತು ಸುರಕಷ್ಇತ ವಿಧಾನವೆಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್). ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದ ಹಣ ನಿವೃತ್ತಿ ನಂತರದ ದಿನಗಳಲ್ಲಿ ನಿಮ್ಮ ಖರ್ಚುವೆಚ್ಚ ತೂಗಿಸಲು ತುಂಬಾ ಸಹಕಾರಿ. ಪಿಪಿಎಫ್ ಮೇಲೆ ಸಿಗು ರಿಟರ್ನ್ಸ್ ಕೂಡಾ ತೆರಿಗೆ ರಹಿತವಾಗಿದ್ದು, ಸುರಕ್ಷಿತ ಹಾಗೂ ಸರಳ ವಿಧಾನದ ಹೂಡಿಕೆಯಾಗಿದೆ.

ಜೀವ ವಿಮೆ
 

ಜೀವ ವಿಮೆ

ಪ್ರತಿಯೊಬ್ಬರೂ ಜೀವವಿಮೆಗಳನ್ನು ಮಾಡಿಸಿಕೊಳ್ಳಬೇಕು. ಕಷ್ಟಕಾಲದಲ್ಲಿ ವಿಮೆ ನೆರವಿಗೆ ಬರುತ್ತದೆ ಎಂಬುದನ್ನು ಮರಿಬೇಡಿ. ನೀವು ಆರೋಗ್ಯ ವಿಮೆ ಹೊಂದಿದ್ದರೆ ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಸಹಾಯಕ. ಕಂಪನಿ ನೀಡುವ ವಿಮೆ ಜೊತೆಗೆ ಖಾಸಗಿ ವಿಮೆಯತ್ತ ಗಮನ ಹರಿಸಬಹುದು. ಆದರೆ, ಪ್ರೀಮಿಯಂ ಹಣ ಹಾಗೂ ಕ್ಲೇಮಿಂಗ್ ಹಣದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.

ಸ್ಟಾಕ್ ಮಾರುಕಟ್ಟೆ

ಷೇರುಪೇಟೆ ಬಗ್ಗೆ ಅರಿವು ಮೂಡಿಸಿಕೊಂಡರೆ ಹಣ ಹೂಡಿಕೆ ಮತ್ತು ಗಳಿಕೆ ಸುಲಭವಾಗುತ್ತದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಆರಂಭದಲ್ಲಿ ಹೂಡಿಕೆ ತಜ್ಞರ ಸಲಹೆ ಪಡೆಯಿರಿ. ಹೆಚ್ಚಿನ ಆದಾಯ ನಿರೀಕ್ಷೆ ಇಲ್ಲದಿದ್ದರೂ ಹೂಡಿಕೆ ಸುರಕ್ಷಿತವಾಗಿರುವುದರ ಬಗ್ಗೆ ಗಮನ ಹರಿಸಿ. ಇಲ್ಲಿ ದೀರ್ಘಕಾಲಿನ ಹೂಡಿಕೆಯಲ್ಲಿ ತೊಡಗಿಕೊಳ್ಳುವುದು ಉತ್ತಮ.

ಬ್ಯಾಂಕ್ ಎಫ್ಡಿ

ಸಂಬಳದಾರರು ಹಾಗು ಸಣ್ಣಪುಟ್ಟ ಉದ್ಯಮದಾರರು ಹೂಡಿಕೆ ಮಾಡುವ ಅತ್ಯಂತ ಜನಪ್ರಿಯ ಮಾರ್ಗ ಫಿಕ್ಸೆಡ್ ಡಿಪಾಸಿಟ್. ಮಹಿಳೆಯರಿಗಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕುಗಳು ವಿಶೇಷ ಯೋಜನೆಗಳನ್ನು ಪರಿಚಯಿಸುತ್ತಿರುತ್ತವೆ. ನಿಮ್ಮ ಕುಟುಂಬ ವರ್ಗದೊಡನೆ ಚರ್ಚಿಸಿ ಹೂಡಿಕೆ ಮಾಡುವುದು ಬೆಸ್ಟ್. ತೆರಿಗೆ ಉಳಿಸುವ ಎಫ್ಡಿ ಠೇವಣಿಯೂ ಲಭ್ಯವಿದೆ. ಐಟಿ ಕಾಯ್ದೆ 80ಸಿ ಪ್ರಕಾರ ತೆರಿಗೆ ವಿನಾಯತಿ ಕೂಡಾ ಸಿಗಲಿದೆ.

ಮ್ಯೂಚುವಲ್ ಫಂಡ್ SIP

ಪಿಪಿಎಫ್, ಬ್ಯಾಂಕ್ ಎಫ್ಡಿಗಿಂತ ಅಧಿಕ ಮೊತ್ತದ ರಿಟರ್ನ್ಸ್ ಬೇಕಾದಲ್ಲಿ ಮ್ಯೂಚುವಲ್ ಫಂಡ್, ಇಕ್ವಿಟಿ ಮಾರುಕಟ್ಟೆಗೆ ಪ್ರವೇಶಿಸಿ. ಮಾರುಕಟ್ಟೆ ಏರಿಳಿತದ ಮೇಲೆ ಆದಾಯ ಆಧಾರವಾಗಿರುವುದರಿಂದ ಕೊಂಚ ರಿಸ್ಕ್ ಇದ್ದೇ ಇರುತ್ತದೆ.

ಯಾವುದೇ ರೀತಿಯ ಹೂಡಿಕೆಗೂ ಮುನ್ನ ಬಂಡವಾಳ ಹೂಡಿಕೆ ವಿಧಾನ ಹಾಗೂ ಹೂಡಿಕೆ ಕಾಲಾವಧಿ (ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ) ಬಗ್ಗೆ ಪೂರ್ವ ಮಾಹಿತಿ ಪಡೆಯಿರಿ. ಸಣ್ಣ ಮೊತ್ತದಿಂದಲೇ ಹಣ ಉಳಿತಾಯ ಮಾಡಲು ಆರಂಭಿಸಿ.

2 ಲಕ್ಷದಲ್ಲಿ ಈ ಬಿಸಿನೆಸ್ ಆರಂಭಿಸಿ, ಪ್ರತಿ ತಿಂಗಳು 25 ಸಾವಿರ ಗಳಿಸಿ..

Read more about: money savings investment
English summary

Investment Tips For Working Women

They manage their career as well as raise their family or even may run a business. But they often forget to plan their investment and thus depend on their spouse or father to decide it for them.
Story first published: Friday, June 14, 2019, 9:54 [IST]
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more