For Quick Alerts
ALLOW NOTIFICATIONS  
For Daily Alerts

ಪಾರ್ಟ್ ಟೈಮ್ (Part-time Jobs) ಕೆಲಸದ ಮೂಲಕ ಹೆಚ್ಚು ಹಣ ಗಳಿಸಬೇಕೆ?

|

ಬಿಡುವಿನ ಸಮಯದಲ್ಲಿ ಹೆಚ್ಚಿನ ಹಣ ಗಳಿಸಲು ಅವಕಾಶವಿರುವ ಪಾರ್ಟ್-ಟೈಮ್ ಉದ್ಯೋಗಗಳ ಬಗ್ಗೆ ಕುತೂಹಲವಿರುತ್ತದೆ. ಫುಲ್ ಟೈಂ ಕೆಲಸ ಮಾಡಲು ಹಲವು ಕಟ್ಟುಪಾಡುಗಳಿರುತ್ತವೆ. ಪಾರ್ಟ್ ಟೈಂ ಕೆಲಸ ಹೊಂದಿರುವವರು ಇಂದಿನ ಸ್ಪರ್ಧಾತ್ಮಕ ಉದ್ಯೋಗದ ವಾತಾವರಣದಲ್ಲಿ ಹೆಚ್ಚು ಆದಾಯವನ್ನು ಪಡೆಯಲು ಸಾದ್ಯವಾಗುತ್ತದೆ.

ತಮ್ಮ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ವ್ಯಕ್ತಿಗಳು ತಮ್ಮ ಅನುಕೂಲಕ್ಕಾಗಿ ಜೊತೆಗೆ ಹೆಚ್ಚಿನ ವೇತನಕ್ಕಾಗಿ ಕೆಲಸ ಮಾಡಲು 6 ಅರೆಕಾಲಿಕ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಗ್ರಾಫಿಕ್ ಡಿಸೈನರ್
 

ಗ್ರಾಫಿಕ್ ಡಿಸೈನರ್

ಹಲವು ಸಂಸ್ಥೆಗಳು ಗ್ರಾಫಿಕ್ ವಿನ್ಯಾಸಕಾರರನ್ನು (ಡಿಸೈನರ್ಸ್) ಸ್ವತಂತ್ರ ಆಧಾರದ ಪಾಲಿಸಿಯ ಮೇಲೆ ನೇಮಿಸಿಕೊಳ್ಳುತ್ತಾರೆ. ಇವರನ್ನು ನೇಮಿಸುವ ಉದ್ದೇಶವೇನೆಂದರೆ ತಮ್ಮ ಬ್ರಾಂಡ್ ಗಳ ನಿರ್ವಹಣೆಯನ್ನು, ಪ್ಯಾಕೇಜ್ ವಿನ್ಯಾಸವನ್ನು ಅಥವಾ ವೆಬ್ಸೈಟ್ ವಿನ್ಯಾಸದಂತಹ ನಿರ್ವಹಣೆಗೆ ಬಳಸಿಕೊಳ್ಳಲು. ಆ ಮೂಲಕ, ತಮ್ಮ ಪ್ರೊಡಕ್ಟುಗಳನ್ನು ಸುಧಾರಿಸಲು ಹೊಸ ಹೊಸ ಕಂಪನಿಗಳಿಂದ ಇಂತರ ಆಫರ್ ಗಳು ಗ್ರಾಫಿಕ್ ಡಿಸೈನರ್ ಗಳಿಗೆ ಬರುತ್ತಲೇ ಇರುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಉಪಸ್ಥಿತಿಯನ್ನು ಹೊಂದಿರುವವರು ಜೊತೆಗೆ ಡಿಜಿಟಲ್ ಕೌಶಲಗಳನ್ನು ಹೊಂದಿರುವ ಚಿತ್ರಕಾರರು ಮತ್ತು ಕಲಾವಿದರು ಒಂದೇ ಸಮಯದಲ್ಲಿ ಹಲವಾರು ಪ್ರಾಜೆಕ್ಟುಗಳನ್ನು ಪಡೆಯುತ್ತಾರೆ. ಇಂತಹ ಪ್ರಾಜೆಕ್ಟುಗಳು ನಿರ್ದಿಷ್ಟ ಸಮಯದಲ್ಲಿ ಮುಗಿಸಲೇಬೇಕಾದ ಗಡುವನ್ನು ಹೊಂದಿರುತ್ತವೆ.

ಸಾಫ್ಟವೇರ್ ಡೆವಲಪರ್

ಒಂದು ಸಾಫ್ಟ್ವೇರ್ ಡೆವಲಪರ್ ಸ್ವತಂತ್ರ ಆಧಾರದ ಮೇಲೆ ಅಂತರಾಷ್ಟ್ರೀಯ ಮತ್ತು ಸ್ಥಳೀಯ ಗ್ರಾಹಕರೊಂದಿಗೆ ಕೆಲಸ ಮಾಡಬಹುದು. ಹಾಲೀ ವೆಬ್ಸೈಟ್ ಗಳನ್ನು ನವೀಕರಿಸುವುದು ಮತ್ತು ಹೊಸ ಟೆಂಪ್ಲೆಟ್ ಗಳನ್ನು ರಚಿಸುವುದು ಅಥವಾ ಹೊಸ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಅಭಿವೃದ್ಧಿಪಡಿಸುವಂತಹ ಕೆಲಸಗಳಿಗೆ, ಅರೆಕಾಲಿಕ ಕೆಲಸಗಳನ್ನು ಮಾಡಬಹುದಾಗಿದೆ. ಇಂತಹ ಕೆಲಸಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ ಮತ್ತು ಅವರವರ ಅನುಕೂಲಕ್ಕೆ ತಕ್ಕಂತೆ ಯಾವುದೇ ಕೆಲಸ ಮಾಡುವ ಸ್ವಾತಂತ್ರ್ಯವನ್ನೂ ನೀಡುತ್ತದೆ.

ಪಠ್ಯಕ್ರಮ ಬರಹಗಾರ

ಪಠ್ಯಕ್ರಮದ (ಸಿಲೆಬಸ್) ತಯಾರಿಸುವಲ್ಲಿ ವಿಶೇಷ ಅನುಭವ ಹೊಂದಿರುವ ಪ್ರಾಧ್ಯಾಪಕರುಗಳಿಗೆ ಶೈಕ್ಷಣಿಕ ವೆಬ್ಸೈಟ್ ಗಳಲ್ಲಿ ಅರೆಕಾಲಿಕ ಉದ್ಯೋಗ ಹುಡುಕಿಕೊಂಡು ಬರುತ್ತವೆ. ಜೊತೆಗೆ, ಪುಸ್ತಕಗಳ ತಾಂತ್ರಿಕ ವಿಷಯಗಳ ಬರವಣಿಗೆಯಲ್ಲಿ ಕೌಶಲತೆ ಇದ್ದವರು, ವಿವಿಧ ರೀತಿಯ ಉದ್ಯೋಗವನ್ನು ಹೊಂದುವ ಅವಕಾಶವನ್ನು ಹೊಂದಿರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ತರಬೇತಿ ಕ್ಲಾಸಿಗಳಿಗೂ ಸಹ ಸಂಶೋಧಕರು ಮತ್ತು ವಿಷಯಗಳ ಅಭಿವೃದ್ಧಿಯ ನೈಪುಣ್ಯತೆಯನ್ನು ಹೊಂದಿರುವ ಬರಹಗಾರರ ಅವಶ್ಯಕತೆ ಇರುತ್ತದೆ ಮತ್ತು ಅಂತವರನ್ನು ಅರೆಕಾಲಿಕ ಸೇವೆಗೆ ತೆಗೆದುಕೊಳ್ಳುತ್ತಿರುತ್ತಾರೆ.

ವ್ಯವಹಾರ / ಹಣಕಾಸು ಸಲಹೆಗಾರ
 

ವ್ಯವಹಾರ / ಹಣಕಾಸು ಸಲಹೆಗಾರ

ವಿವಿಧ ಉದ್ಯಮಗಳನ್ನು ನಡೆಸುವವರು ತಮ್ಮ ಉದ್ಯಮಕ್ಕೆ ಸಂಬಂಧಪಟ್ಟ ಕೆಲಸ ಮತ್ತು ಪ್ರಕ್ರಿಯೆಗಳನ್ನು ನೋಡಿಕೊಳ್ಳಲು, ಪರಿಶೀಲಿಸಲು ಜೊತೆಗೆ ತಮ್ಮ ಸಲಹೆಗಳ ಮೂಲಕ ಸಂಸ್ಥೆಯನ್ನು ಬೆಳೆಸಲು ವೃತ್ತಿಪರ ಸಲಹೆಗಾರರನ್ನು ಇಂತಿಷ್ಟು ಅವಧಿಗೆ ನೇಮಿಸಿಕೊಳ್ಳುತ್ತಾರೆ. ಈ ಕೆಲಸಕ್ಕಾಗಿ ನೇಮಕಗೊಳ್ಳುವ ತಜ್ಞರಿಗೆ, ಉತ್ತಮ ಅನುಭವ ಮತ್ತು ನಿರ್ವಹಣೆಯ ಶಕ್ತಿಯ ಅಗತ್ಯವಿರುತ್ತದೆ.

ಕಾನೂನು ಸಹಾಯಕ

ವಿವಿಧ ದೇಶಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ, ಜೊತೆಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪರಿಣತಿ ಹೊಂದಿರುವ ಮತ್ತು ಕೆಲವು ನಿರ್ದಿಷ್ಟ ದೇಶ/ಪ್ರದೇಶಗಳಲ್ಲಿ ಕೆಲಸ ಮಾಡಿ ಅನುಭವಹೊಂದಿರುವ ಅಭ್ಯರ್ಥಿಗಳ ಅವಶ್ಯಕತೆ ಹೆಚ್ಚಿನ ಸಂಸ್ಥೆಗಳಿಗೆ ಇರುತ್ತದೆ. ಉದಾಹರಣೆಗೆ, ಒಂದು ಬ್ರಿಟಿಷ್ ಮೂಲದ ಕಂಪನಿ ಜರ್ಮನಿಯಲ್ಲಿನ ತನ್ನ ಗ್ರಾಹಕರೊಂದಿಗೆ ಮಾತುಕತೆ ನಡೆಸುವ ಅವಶ್ಯಕತೆ ಬಿದ್ದಲ್ಲಿ, ಅಥವಾ ಕಾನೂನು ಪ್ರಕಾರ ಅಲ್ಲಿನ ದಾಖಲೆಗಳನ್ನು ಸಿದ್ಧಪಡಿಸಲು ಜರ್ಮನ್ ಭಾಷೆಯಲ್ಲಿನ ತಾಂತ್ರಿಕ ಶಬ್ದಕೋಶವನ್ನು ಅನುವಾದಿಸುವ ಹಾಗೂ ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಲು ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತಿರುವ ಅಭ್ಯರ್ಥಿಗಳ ಅವಶ್ಯಕತೆಯಲ್ಲಿ ಇರುತ್ತದೆ.

Read more about: jobs money employment finance news
English summary

These are Highly Paid Part-time Jobs

Having a part-time job that pays well can help you earn an extra income in a competing job environment. Here are 6 part-time jobs that individuals with expertise in their field opt for to work at their own convenience for a high pay.
Story first published: Wednesday, June 26, 2019, 16:11 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more