For Quick Alerts
ALLOW NOTIFICATIONS  
For Daily Alerts

ಈ ಮ್ಯೂಚುವಲ್ ಫಂಡ್‌ಗಳಲ್ಲಿ ಇನ್ವೆಸ್ಟ್ ಮಾಡಿ 20 ವರ್ಷಗಳಲ್ಲಿ 5 ಕೋಟಿ ಸಂಪಾದನೆ ಹೇಗೆ?

|

ದೀರ್ಘಾವಧಿಯಲ್ಲಿ ನಿಯಮಿತವಾಗಿ ಹಣ ಹೂಡಿಕೆ ಮಾಡಿ ಕೊನೆಯಲ್ಲಿ ದೊಡ್ಡ ಮೊತ್ತದ ಹಣ ಕೂಡಿಸಲು ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆಗಳಾಗಿವೆ. ತುಂಬಾ ಜನ ಹೂಡಿಕೆದಾರರು ಕೋಟ್ಯಾದಿಪತಿಗಳಾಗುವ ಗುರಿಯೊಂದಿಗೆ ಉತ್ತಮ ರಿಟರ್ನ್ ನಿಡಬಲ್ಲ ವಿಧಾನಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ನೀವೂ ಸಹ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿ ನಿಮ್ಮ ಹಣ ದುಡಿದು ದೊಡ್ಡದಾಗಿ ಬೆಳೆಯುವಂತೆ ಮಾಡಲು ಬಯಸಿದಲ್ಲಿ ಈ ಅಂಕಣ ನಿಮಗಾಗಿಯೇ ಇದೆ.

 

ತಜ್ಞರ ಸಲಹೆ

ತಜ್ಞರ ಸಲಹೆ

ಮ್ಯೂಚುವಲ್ ಫಂಡ್‌ಗಳಲ್ಲಿ 20 ವರ್ಷಗಳ ಕಾಲ ನಿಯಮಿತವಾಗಿ ಹೂಡಿಕೆ ಮಾಡಿ 5 ಕೋಟಿ ಸಂಪಾದಿಸುವುದು ಹೇಗೆಂಬುದನ್ನು ಹಂತ ಹಂತವಾಗಿ ಇಲ್ಲಿ ವಿವರಿಸಲಾಗಿದ್ದು ನೀವೂ ತಿಳಿದುಕೊಳ್ಳಿ. ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ಹಾಗೂ ಅದರಿಂದ ಆದಾಯ ಪಡೆಯುವ ಬಗೆಗಿನ ಪ್ರಮುಖ ಪ್ರಶ್ನೆಗಳಿಗೆ ನುರಿತ ಮಾರುಕಟ್ಟೆ ತಜ್ಞರು ಸಲಹೆಗಳನ್ನು ನೀಡಿದ್ದಾರೆ.

ಹೂಡಿಕೆ ಮಾಡಲು ಕೆಲ ಪ್ರಮುಖ ಮ್ಯೂಚುವಲ್ ಫಂಡ್‌ಗಳು:

ಹೂಡಿಕೆ ಮಾಡಲು ಕೆಲ ಪ್ರಮುಖ ಮ್ಯೂಚುವಲ್ ಫಂಡ್‌ಗಳು:

ಈ ಕೆಳಗಿನ ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳು ರೂ. 5000 ಗಳಂತೆ ಹೂಡಿಕೆ ಮಾಡುತ್ತ ಬಂದರೆ 20 ವರ್ಷಗಳಲ್ಲಿ ಎಷ್ಟು ಮೊತ್ತ ಸಂಗ್ರಹವಾಗಬಹುದು?

- ಎಸ್‌ಬಿಐ ಬ್ಲ್ಯೂ ಚಿಪ್ ಫಂಡ್

- ಆಕ್ಸಿಸ್ ಲಾಂಗ್ ಟರ್ಮ್ ಇಕ್ವಿಟಿ ಫಂಡ್

- ಕೆನರಾ ರೊಬೆಕೊ ಎಮರ್ಜಿಂಗ್ ಇಕ್ವಿಟೀಸ್ ಫಂಡ್

- ಕೋಟಕ್ ಎಮರ್ಜಿಂಗ್ ಇಕ್ವಿಟಿ ಸ್ಕೀಂ

- ಕೋಟಕ್ ಸ್ಟ್ಯಾಂಡರ್ಡ್ ಮಲ್ಟಿಕ್ಯಾಪ್ ಫಂಡ್

- ಪರಾಗ ಪಾರೀಖ ಲಾಂಗ್ ಟರ್ಮ್ ಇಕ್ವಿಟಿ ಫಂಡ್

- ಎಸ್‌ಬಿಐ ಸ್ಮಾಲ್ ಕ್ಯಾಪ್ ಫಂಡ್

- ಟಾಟಾ ಇಕ್ವಿಟಿ ಪಿಇ ಫಂಡ್

ಗುರಿ ಸಾಧನೆ ಹೇಗೆ?
 

ಗುರಿ ಸಾಧನೆ ಹೇಗೆ?

ಈ ಮೇಲಿನ ಉಲ್ಲೇಖಿಸಲ್ಪಟ್ಟ ಹೂಡಿಕೆಗಳ ಮೂಲಕ 20 ವರ್ಷಗಳಲ್ಲಿ 5 ಕೋಟಿ ರೂಪಾಯಿ ಸಂಪಾದಿಸುವುದು ನಿಮ್ಮ ಗುರಿಯಾಗಿದ್ದಲ್ಲಿ ಅದು ಸಾಧ್ಯವಾಗುವಂಥದ್ದಾಗಿದೆಯೇ?

ನೀವು ಉತ್ತಮ ಫಂಡ್‌ಗಳನ್ನೇ ಆಯ್ಕೆ ಮಾಡಿಕೊಂಡಿರುವಿರಿ. ಆದಾಗ್ಯೂ ನಿಮ್ಮ ಮಧ್ಯಮ ಹಾಗೂ ಸ್ಮಾಲ್ ಕ್ಯಾಪ್‌ಗಳ ಆಯ್ಕೆಯು ಹೆಚ್ಚಿನ ಅಪಾಯದ ಕಡೆಗೆ ವಾಲಿಕೊಂಡಿದೆ. ಹೀಗಾಗಿ ಒಟ್ಟಾರೆ ಹೂಡಿಕೆಯ ಶೇ. 20 ಕ್ಕಿಂತ ಹೆಚ್ಚು ಈ ಫಂಡ್‌ಗಳಲ್ಲಿ ಹೂಡಿಕೆ ಮಾಡದಂತೆ ನೋಡಿಕೊಳ್ಳಿ. ಎಸ್‌ಬಿಐ ಸ್ಮಾಲ್ ಕ್ಯಾಪ್ ಫಂಡ್ ಹಾಗೂ ಕೋಟಕ್ ಎಮರ್ಜಿಂಗ್ ಸಿಪ್ (ಎಸ್‌ಐಪಿ) ಫಂಡ್‌ಗಳಲ್ಲಿನ ಮಾಸಿಕ ಹೂಡಿಕೆಯನ್ನು 2 ಸಾವಿರ ರೂ.ಗಳಷ್ಟು ಕಡಿಮೆಗೊಳಿಸಿ ಮತ್ತು ಕೋಟಕ್ ಸ್ಟ್ಯಾಂಡರ್ಡ್ ಮಲ್ಟಿಕ್ಯಾಪ್ ಫಂಡ್ ಹಾಗೂ ಪರಾಗ್ ಪಾರೀಖ ಲಾಂಗ್ ಟರ್ಮ್ ಇಕ್ವಿಟಿ ಸಿಪ್ ಫಂಡ್‌ಗಳಲ್ಲಿ ಅಷ್ಟೇ ಮೊತ್ತದ ಹೂಡಿಕೆಯನ್ನು ಹೆಚ್ಚಿಸಿ.

5 ಕೋಟಿ ಲೆಕ್ಕಾಚಾರ

5 ಕೋಟಿ ಲೆಕ್ಕಾಚಾರ

ಮುಂದಿನ 20 ವರ್ಷಗಳವರೆಗೆ ಮಾಸಿಕವಾಗಿ 40 ಸಾವಿರ ರೂ.ಗಳಂತೆ ಹೂಡಿಕೆ ಮಾಡುತ್ತ ಸಾಗಿದಲ್ಲಿ (ಹೂಡಿಕೆ ಮೊತ್ತವನ್ನು ಮಧ್ಯದಲ್ಲಿ ಹಿಂಪಡೆಯದಿದ್ದಲ್ಲಿ) ಹಾಗೂ ಶೇ. 13.71 ರ ದರದಲ್ಲಿ ನೀವು ಪ್ರತಿಫಲ ಪಡೆಯುವಿರಿ ಎಂದಿಟ್ಟುಕೊಂಡಲ್ಲಿ ನೀವು 5 ಕೋಟಿ ರೂಪಾಯಿ ಗಳಿಸಬಹುದು. ಆದರೂ ಮತ್ತಷ್ಟು ವಾಸ್ತವಿಕವಾಗಿ ನೋಡಿದಲ್ಲಿ ಶೇ. 12 ರ ದರದಲ್ಲಿ ಪ್ರತಿಫಲ ನಿರೀಕ್ಷೆ ಮಾಡುವುದು ಸೂಕ್ತವಾಗಿದೆ. ಶೇ. 12 ರ ದರದಲ್ಲಿ ನಿಮ್ಮ ಹಣ ಬೆಳವಣಿಗೆ ಹೊಂದಿದಲ್ಲಿ 20 ವರ್ಷಗಳಲ್ಲಿ ನೀವು ರೂ. 3.95 ಕೋಟಿ ಮೊತ್ತವನ್ನು ಸಂಗ್ರಹಿಸಲು ಸಾಧ್ಯ.

ಸೂಚನೆ

ಸೂಚನೆ

ಈ ಅಂಕಣದಲ್ಲಿ ತಿಳಿಸಲಾದ ಸಲಹೆಗಳನ್ನು ಪ್ರಸ್ತುತ ಮಾರುಕಟ್ಟೆಯ ಆಧಾರದ ಮೇಲೆ ವಿವರಿಸಲಾಗಿದೆ. ಹೂಡಿಕೆದಾರರು ಸರಿಯಾದ ಮಾಹಿತಿ ಹಾಗು ಷೇರುಪೇಟೆಯ ಜ್ಞಾನದೊಂದಿಗೆ ಮುನ್ನಡೆಯಿರಿ. ನೀವು ಎದುರಿಸುವ ನಷ್ಟಕ್ಕೆ kannada.goodreturns.in ಜವಾಬ್ದಾರವಲ್ಲ.

ಹೂಡಿಕೆ ಪವಾಡ! ತಿಂಗಳಿಗೆ ಕೇವಲ 1000 ತೊಡಗಿಸಿ ರೂ. 1.5 ಕೋಟಿ ಪಡೆದುಕೊಳ್ಳಿ..

English summary

These mutual funds will help to achieve Rs 5 crore in 20 years?

I have been investing Rs 5,000 per month each in the following mutual funds. These mutual funds will help to achieve Rs 5 crore in 20 years.
Story first published: Wednesday, July 24, 2019, 9:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X