For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಗ್ರಾಹಕರಿಗೆ ಸಿಹಿಸುದ್ದಿ! ಸಿಗಲಿದೆ ವಿಶೇಷ ಭರಪೂರ ಕೊಡುಗೆ

|

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬರುವ ಹಬ್ಬದ ಸೀಸನ್ ಭರ್ಜರಿ ಉಡುಗೊರೆ ನೀಡುವ ತಯಾರಿಯಲ್ಲಿದೆ! ವಿಶೇಷ ಆಫರ್ ಗಳನ್ನು ನೀಡಲಿರುವ ಎಸ್ಬಿಐ, ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲಿದೆ. ಬ್ಯಾಂಕ್ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಹಲವಾರು ವಿಧದ ಸಾಲಗಳ ಮೇಲೆ ಅನೇಕ ಪ್ರಯೋಜನಗಳನ್ನು ಒದಗಿಸುವ ಬಗ್ಗೆ ಮುನ್ಸೂಚನೆ ನೀಡಿದೆ.

ಗೃಹ ಸಾಲ
 

ಗೃಹ ಸಾಲ

ಆರ್ಬಿಐ ರೆಪೊ ದರ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಎಸ್‌ಬಿಐ ತನ್ನ ಗೃಹ ಸಾಲ ಪಡೆಯುವ ಗ್ರಾಹಕರಿಗೆ ದರ ಕಡಿತದ ಲಾಭವನ್ನು ವರ್ಗಾಯಿಸಲಿದೆ. ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಗೃಹ ಸಾಲಗಳು ಸೆಪ್ಟೆಂಬರ್ 1 ರಿಂದ ಶೇ. 8.05ರಷ್ಟು ಕಡಿಮೆ ಬಡ್ಡಿದರದಲ್ಲಿ ಲಭ್ಯವಿರುತ್ತವೆ ಎಂದು ಬ್ಯಾಂಕ್ ತಿಳಿಸಿದೆ. ಬ್ಯಾಂಕಿನ ನೀತಿಯ ಪ್ರಕಾರ, ರೆಪೊ ಲಿಂಕ್ಡ್ ಲೆಂಡಿಂಗ್ ದರದ ಚಲನೆಗೆ ಅನುಗುಣವಾಗಿ ಬಡ್ಡಿದರವು ಹೆಚ್ಚು ಕಡಿಮೆಯಾಗಲಿದೆ ಎಂದು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

ವಾಹನ ಸಾಲ

ವಾಹನ ಸಾಲ

ಹಬ್ಬದ ಸೀಸನ್ ನಲ್ಲಿ ಕಾರು ಸಾಲಕ್ಕಾಗಿ ವಿಧಿಸಲ್ಪಡುವ ಪ್ರಕ್ರಿಯಾ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬಡ್ಡಿದರಗಳು ಶೇ. 8.70 ರಿಂದ ಬಡ್ಡಿ ಹೆಚ್ಚಳವಿಲ್ಲದೆ ಪ್ರಾರಂಭವಾಗಲಿವೆ. ಎಸ್‌ಬಿಐನ ವೆಬ್‌ಸೈಟ್ ಅಥವಾ ಯೋನೊ ಆ್ಯಪ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಗ್ರಾಹಕರು ಬಡ್ಡಿದರದ ಮೇಲೆ 25 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿಯನ್ನು ಪಡೆಯಬಹುದು.

ವೈಯಕ್ತಿಕ ಸಾಲ

ಗ್ರಾಹಕರು ವೈಯಕ್ತಿಕ ಸಾಲವನ್ನು ಶೇ. 10.75 ರಿಂದ ಪ್ರಾರಂಭವಾಗುವ ಬಡ್ಡಿದರದೊಂದಿಗೆ ರೂ. 20 ಲಕ್ಷಗಳವರೆಗೆ ಪಡೆಯಬಹುದು. ಎಸ್‌ಬಿಐನಲ್ಲಿ ಸಂಬಳ ಖಾತೆ ಹೊಂದಿರುವವರು ಯೋನೊ ಆ್ಯಪ್ ಮೂಲಕ ಅನುಮೋದಿತ ಡಿಜಿಟಲ್ ಸಾಲವನ್ನು ರೂ. 5 ಲಕ್ಷದವರೆಗೆ ಪಡೆಯಬಹುದು. ಅರ್ಜಿದಾರರ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಸಾಲದ ಮಿತಿಯನ್ನು ಬ್ಯಾಂಕ್ ನಿರ್ಧರಿಸುತ್ತದೆ.

ಹಳೆ ಗ್ರಾಹಕರಿಗೂ ಲಾಭ!
 

ಹಳೆ ಗ್ರಾಹಕರಿಗೂ ಲಾಭ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರವೇ ತನ್ನ ಹಳೆ ಗ್ರಾಹಕರಿಗೆ ರೆಪೋ ದರದಲ್ಲಿ ಗೃಹ ಸಾಲ ನೀಡುವ ಸಾಧ್ಯತೆಯಿದೆ.

ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಹಳೆ ಗ್ರಾಹಕರಿಗೂ ರೆಪೋ ದರದ ಆಧಾರದ ಮೇಲೆ ಲಾಭ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಇಲ್ಲಿಯವರೆಗೆ ಹೊಸ ಗ್ರಾಹಕರಿಗೆ ಮಾತ್ರ ಇದರ ಲಾಭ ಸಿಗುತ್ತಿತ್ತು.

ಕನ್ನಡದ ಟಾಪ್ 10 ಶ್ರೀಮಂತ ನಟರು, ನಂಬರ್ ಒನ್ ಯಾರು ಗೊತ್ತೆ?

English summary

SBI To Give Special Offers to This Festive Season

The State Bank Of India (SBI) will be providing some special offers on retail loans to its customers including lower interest rates for the upcoming festive season.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more