For Quick Alerts
ALLOW NOTIFICATIONS  
For Daily Alerts

ಸವರನ್ ಗೋಲ್ಡ್ ಬಾಂಡ್ ಪಡೆಯುವುದು ಹೇಗೆ? ಯಾವಾಗ ಕೊನೆ ದಿನ?

|

ಚಿನ್ನದ ಬಾಂಡ್ ಖರೀದಿದಾರರಿಗೆ, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇಲ್ಲಿದೆ ಸದವಕಾಶ ಒದಗಿಸಲು ಹಾಗೂ ಚಿನ್ನದ ನಗದೀಕರಣಕ್ಕಾಗಿ ಕೇಂದ್ರ ಸರ್ಕಾರವು ಸವರನ್ ಗೋಲ್ಡ್ ಬಾಂಡ್ ಯೋಜನೆ ಕಾರ್ಯಗತಗೊಳಿಸಿದೆ.

ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?

ಚಿನ್ನದ ಠೇವಣಿ ಮತ್ತು ಚಿನ್ನ ಸಾಲ ಯೋಜನೆ ಜೊತೆಗೆ ಚಿನ್ನ ನಗದೀಕರಣ, ಸವರನ್ ಗೋಲ್ಡ್ ಬಾಂಡ್ ಹಾಗೂ ಇಂಡಿಯನ್ ಗೋಲ್ಡ್ ಕಾಯಿನ್ ಮೂರು ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇಂಧನದ ನಂತರ ಚಿನ್ನವನ್ನು ಭಾರತ ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಈ ಪ್ರಮಾಣವನ್ನು ತಗ್ಗಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಚಿನ್ನವನ್ನು ಬ್ಯಾಂಕ್​ನಲ್ಲಿಡುವಂತೆ ಮಾಡಿ ಬಡ್ಡಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಸವರನ್ ಗೋಲ್ಡ್ ಯೋಜನೆಯ ಮೊದಲ ಹಂತದಲ್ಲಿ ಸುಮಾರು 50 ಟನ್ ಗಳಷ್ಟು ಮೌಲ್ಯಕ್ಕೆ ಸಮಾನವಾದ 13,500 ಕೋಟಿ ರು ಬೆಲೆ ಬಾಳುವ ಬಾಂಡ್ ಗಳನ್ನು ಸರ್ಕಾರ ವಿತರಿಸಲಿದೆ.

 ಚಿನ್ನದ ನಗದೀಕರಣ ಮಾಡುವ ಪ್ರಮುಖ ಯೋಜನೆ
 

ಚಿನ್ನದ ನಗದೀಕರಣ ಮಾಡುವ ಪ್ರಮುಖ ಯೋಜನೆ

ಚಿನ್ನದ ನಗದೀಕರಣ ಮಾಡುವ ಪ್ರಮುಖ ಯೋಜನೆಗಳಲ್ಲಿ ಸವರನ್ ಗೋಲ್ಡ್ ಬಾಂಡ್(SGB) ಕೂಡಾ ಒಂದು, ಈ ಯೋಜನೆಯಡಿಯಲ್ಲಿ ಚಿನ್ನದ ಬಾಂಡ್ ಗಳು ಅಕ್ಟೋಬರ್ 7ರಿಂದ ಅಕ್ಟೋಬರ್ 11ರವರೆಗೆ ಖರೀದಿಗೆ ಲಭ್ಯವಿರಲಿದೆ. ಈ ಯೋಜನೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 3,788 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಕನಿಷ್ಠ 1 ಗ್ರಾಂನಿಂದ ಗರಿಷ್ಠ 500 ಗ್ರಾಂ ವರೆಗೆ ಹೂಡಿಕೆ ಮಾಡಬಹುದಾಗಿದ್ದು, ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ 4ಕೆಜಿ ಆಗಿದೆ. ಟ್ರಸ್ಟ್ ಗಳಿಂದ 20 ಕೆಜಿ ವರೆಗೆ ಖರೀದಿ ಮಿತಿ ನಿಗದಿಯಾಗಿದೆ.

 2015-16ರ ಕೇಂದ್ರ ಬಜೆಟ್ ನಲ್ಲಿ ಘೋಷಿತ ಯೋಜನೆ

2015-16ರ ಕೇಂದ್ರ ಬಜೆಟ್ ನಲ್ಲಿ ಘೋಷಿತ ಯೋಜನೆ

2015-16ರ ಕೇಂದ್ರ ಬಜೆಟ್ ನಲ್ಲಿ ಘೋಷಿತ ಯೋಜನೆಯಂತೆ ಈ ಚಿನ್ನದ ಬಾಂಡ್ ನಲ್ಲಿ ಗ್ರಾಹಕರು ವಾರ್ಷಿಕವಾಗಿ 500 ಗ್ರಾಂ ತನಕ ಹೂಡಿಕೆ ಮಾಡಬಹುದು. 2.5% ತನಕ ಬಡ್ಡಿ ಸಿಗಲಿದೆ. 2, 5, 10 ಗ್ರಾಂಗಳ ಬಾಂಡ್​ಗಳು ಲಭ್ಯವಾಗಲಿದೆ. ಚಿನ್ನದ ಗಟ್ಟಿ ಬದಲು ಬಾಂಡ್ ಖರೀದಿಗೆ ಅವಕಾಶ ನೀಡಲಾಗುತ್ತದೆ. ವಾರ್ಷಿಕ 500 ಗ್ರಾಂ ಗರಿಷ್ಠ ಹೂಡಿಕೆ ಮಿತಿ ನಿಗದಿ ಮಾಡಲಾಗಿದ್ದು, 5-7 ವರ್ಷಗಳ ಅವಧಿಗೆ ಬಾಂಡ್ ವಿತರಣೆ ಮಾಡಲಾಗುತ್ತದೆ.

 ಎಲ್ಲಿ ಲಭ್ಯ? ಏನು ಪ್ರಯೋಜನ?

ಎಲ್ಲಿ ಲಭ್ಯ? ಏನು ಪ್ರಯೋಜನ?

ಎಲ್ಲಿ ಲಭ್ಯ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು, ಎನ್ ಬಿಎಫ್ ಸಿ ಹಾಗೂ ಅಂಚೆ ಕಚೇರಿ ಗಳಲ್ಲಿ ಸಿಗುತ್ತದೆ.

ಏನು ಪ್ರಯೋಜನ?: ಇತರೆ ಚಿನ್ನದ ಯೋಜನೆ ಮೇಲಿನ ಹೂಡಿಕೆಗೆ ಅನ್ವಯವಾಗುವ ತೆರಿಗೆ ಈ ಯೋಜನೆಗೂ ಅನ್ವಯವಾಗುತ್ತದೆ. ಹೂಡಿಕೆ ಮೇಲೆ ಬ್ಯಾಂಕಿನಿಂದ ಸಾಲ ಪಡೆಯಬಹುದಾಗಿದೆ. ಈ ಯೋಜನೆ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದೆ. ಹೂಡಿಕೆ ಮಾಡುವ ಚಿನ್ನದ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಆನ್ ಲೈನ್ ನಲ್ಲಿ ಬಾಂಡ್ ಖರೀದಿಸುವ ಮತ್ತು ಬಾಂಡ್ ಖರೀದಿಗೆ ಡಿಜಿಟಲ್ ರೂಪದಲ್ಲಿ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ಐವತ್ತು ರೂಪಾಯಿ ರಿಯಾಯಿತಿ ನೀಡಲಾಗುತ್ತದೆ.

ಹೂಡಿಕೆ ಮೇಲೆ ಸಾಲ, ಆದಾಯ ತೆರಿಗೆ ವಿನಾಯತಿ, ಆನ್ ಲೈನ್ ಪಾವತಿಗೆ ರಿಯಾಯಿತಿ ಎಲ್ಲವೂ ಲಭ್ಯ.

 ಸವರನ್ ಗೋಲ್ಡ್ ಬಾಂಡ್ ಬಗ್ಗೆ ಇನ್ನಷ್ಟು ವಿವರ
 

ಸವರನ್ ಗೋಲ್ಡ್ ಬಾಂಡ್ ಬಗ್ಗೆ ಇನ್ನಷ್ಟು ವಿವರ

* 20 ಸಾವಿರ ರು ತನಕ ನಗದು ರೂಪದಲ್ಲಿ ಪೇಮೆಂಟ್ ಮಾಡಬಹುದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಅಥವಾ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಸೌಲಭ್ಯ ಬಳಸಬಹುದು.

* ಬಾಂಡ್ ಗಳ ಮೇಲೆ ವಿತರಣೆ ದಿನದಿಂದ ವಾರ್ಷಿಕ 2.50 % ಬಡ್ಡಿ ಸಿಗಲಿದೆ. ಅರ್ಧ ವಾರ್ಷಿಕವಾಗಿ ಬಡ್ಡಿ ಸೇರಿಸಲಾಗುವುದು. ಬಾಂಡ್ ಅವಧಿ ಮುಕ್ತಾಯವಾದಾಗ ಕೊನೆ ಬಡ್ಡಿ ಸೇರಿಸಿ ನೀಡಲಾಗುವುದು.

* ಆರ್ ಆರ್ ಬಿ, ಸಣ್ಣ ಆರ್ಥಿಕ ಸಂಸ್ಥೆ, ಪೇಮೆಂಟ್ ಬ್ಯಾಂಕ್ ಗಳನ್ನು ಹೊರತುಪಡಿಸಿ, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಅಂಚೆ ಕಚೇರಿ, ಷೇರುಪೇಟೆಗಳಿಂದಲೂ ಬಾಂಡ್ ಖರೀದಿಸಬಹುದು.

English summary

How to apply for Sovereign Gold Bond Scheme 2019-20

The Sovereign Gold Bond Scheme 2019-20 -subscription is opened at issue price of ₹3,788 per gram. The issue closes on 11 October while issuance date of the bonds will be 15 October.How to apply for Sovereign Gold Bond Scheme 2019-20
Story first published: Tuesday, October 8, 2019, 14:41 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more