For Quick Alerts
ALLOW NOTIFICATIONS  
For Daily Alerts

ಶ್ರೀಮಂತಿಕೆ ಅನ್ನೋದು ಸುಮ್ಮನೆ ಬರೋದಿಲ್ಲ, ಅದಕ್ಕಾಗಿ ಏನು ಮಾಡಬೇಕು?

|

ಶ್ರೀಮಂತರಾಗಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತದೆ. ಯಾವುದೋ ಕಾರಣಕ್ಕೆ ಪ್ರತಿನಿತ್ಯ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವುದು ಅತ್ಯಂತ ಸುಲಭ. ಆದರೆ ಪ್ರತಿ ತಿಂಗಳು 500/1000 ರೂಪಾಯಿಗಳನ್ನು ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಊಹಿಸಲಾರದ ಶ್ರೀಮಂತಿಕೆಯನ್ನು ಪಡೆಯಬಹುದು ಎಂಬುದು ಸಹ ಸತ್ಯವಾಗಿದೆ. ಖರ್ಚು ಮಾಡುವುದೇ ಒಂದು ಖಯಾಲಿ ಆಗಿರುವಾಗ ಪ್ರತಿ ತಿಂಗಳು 500 ರೂಪಾಯಿಗಳಷ್ಟು ಸಣ್ಣ ಮೊತ್ತವನ್ನು ನಿಯಮಿತವಾಗಿ ಉಳಿಸಿ ಹೂಡಿಕೆ ಮಾಡುವುದು ಸಹ ಒಂದು ಸವಾಲಿನ ಸಂಗತಿಯಾಗಿದೆ ಎಂದರೆ ಉತ್ಪ್ರೇಕ್ಷೆ ಆಗದು. ತಿಂಗಳಿಗೆ 500 ರೂಪಾಯಿ ಉಳಿಕೆ ವರ್ಷಕ್ಕೆ ೧೨೦೦ ರೂಪಾಯಿ ಹಾಗೂ 20 ವರ್ಷಕ್ಕೆ 1.20 ಲಕ್ಷ ರೂಪಾಯಿಗಳಾಗುತ್ತದೆ ಎಂಬುದನ್ನು ಬಹುತೇಕ ಜನ ಅರ್ಥ ಮಾಡಿಕೊಳ್ಳುತ್ತಿಲ್ಲ. ಇಷ್ಟು ಚಿಕ್ಕ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡಿದರೂ ಸಾಕು ದೀರ್ಘಾವಧಿಯಲ್ಲಿ ದೊಡ್ಡ ಮೊತ್ತ ನಿಮ್ಮದಾಗುವುದರಲ್ಲಿ ಯಾವುದೇ ಸಂದೇಹ ಬೇಡ. ವಿವಿಧ ರೀತಿಯ ಹೂಡಿಕೆಗಳಲ್ಲಿರುವ ರಿಸ್ಕ್‌ಗಳು, ಪ್ರತಿಫಲ ಹಾಗೂ ಹೂಡಿಕೆ ವಿಧಾನಗಳು ಭಿನ್ನವಾಗಿರುವುದರಿಂದ ಉತ್ತಮವಾದ ಹೂಡಿಕೆ ಯೋಜನೆಯನ್ನು ಆಯ್ದುಕೊಳ್ಳುವುದು ಅಗತ್ಯವಾಗಿದೆ. ಕಡಿಮೆ ಹೂಡಿಕೆಯನ್ನು ಆರಂಭಿಸಿ ಉತ್ತಮ ಪ್ರತಿಫಲ ಪಡೆಯಬಹುದಾದ ಪ್ರಮುಖ ಹೂಡಿಕೆ ವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ..

 

ಮ್ಯೂಚ್ಯುವಲ್ ಫಂಡ್ಸ್ - ಸಿಪ್

ಮ್ಯೂಚ್ಯುವಲ್ ಫಂಡ್ಸ್ - ಸಿಪ್

ಸಿಪ್ ಎಂದು ಕರೆಯಲಾಗುವ (Systematic Investment Plan) ಯೋಜನಾಬದ್ಧ ಹೂಡಿಕೆ ವಿಧಾನವು ಮ್ಯೂಚುವಲ್ ಫಂಡ್‌ನ ವೈಶಿಷ್ಟ್ಯವಾಗಿದೆ. ಅತ್ಯಂತ ಜನಪ್ರಿಯವಾಗಿರುವ ಈ ಯೋಜನೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದ್ದು, ತಿಂಗಳಿಗೆ ಕನಿಷ್ಠ 100 ರಿಂದ 500 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು. ಇವುಗಳಲ್ಲಿ ಲಭ್ಯವಿರುವ ಇಕ್ವಿಟಿ ಫಂಡ್, ಡೆಬ್ಟ್ ಫಂಡ್, ಹೈಬ್ರಿಡ್ ಫಂಡ್ ಅಥವಾ ಗೋಲ್ಡ ಸ್ಕೀಂ ಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡಬಹುದು. ಹೂಡಿಕೆ ಮಾಡಿದ ಸ್ವತ್ತುಗಳ ಬೆಲೆಗಳ ಆಧಾರದಲ್ಲಿ ನಿಮಗೆ ಪ್ರತಿಫಲ ಸಿಗುತ್ತದೆ. ವರ್ಷಕ್ಕೆ ಶೇ. 10 ರ ದರದಲ್ಲಿ ಆದಾಯ ಬರುವ ಯೋಜನೆಯಲ್ಲಿ 20 ವರ್ಷಗಳವರೆಗೆ ಪ್ರತಿ ತಿಂಗಳು 500 ರೂ. ಹೂಡಿಕೆ ಮಾಡಿದಲ್ಲಿ ಯೋಜನೆ ಅಂತ್ಯವಾದಾಗ ರೂ. 3.8 ಲಕ್ಷ ನೀವು ಪಡೆಯಬಹುದಾಗಿದೆ.

ಅಟಲ್ ಪಿಂಚಣಿ ಯೋಜನೆ
 

ಅಟಲ್ ಪಿಂಚಣಿ ಯೋಜನೆ

ಎಪಿವೈ ಇದು ಸಾರ್ವತ್ರಿಕ ಸಾಮಾಜಿಕ ಭದ್ರತೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು ತಮಗೆ 60 ವರ್ಷಗಳಾದ ನಂತರ ಹೂಡಿಕೆಯ ಮೊತ್ತವನ್ನು ಆಧರಿಸಿ ತಿಂಗಳಿಗೆ ಸಾವಿರ, 2 ಸಾವಿರ, 3 ಸಾವಿರ, 4 ಸಾವಿರ ಅಥವಾ 5 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಯೋಜನೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಹೂಡಿಕೆದಾರನ ವಯಸ್ಸಿನ ಆಧಾರದಲ್ಲಿ ಹೂಡಿಕೆ ಮೊತ್ತ ಹಾಗೂ ಪಿಂಚಣಿಗಳು ಬದಲಾಗುತ್ತವೆ. ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಅವಕಾಶ ಈ ಯೋಜನೆಯಲ್ಲಿದೆ. ಉದಾಹರಣೆಗೆ ನೋಡುವುದಾದರೆ- 25 ರಿಂದ 30 ವಯೋಮಾನದ ವ್ಯಕ್ತಿಯು ತಿಂಗಳಿಗೆ 300 ರಿಂದ 500 ರೂಪಾಯಿ ಹೂಡಿಕೆ ಮಾಡಿದಲ್ಲಿ 60 ನೇ ವಯಸ್ಸಿನಿಂದ ತಿಂಗಳಿಗೆ 5 ಸಾವಿರ ರೂ. ಪಿಂಚಣಿ ಪಡೆಯಲು ಸಾಧ್ಯವಿದೆ. ಇದೊಂದು ಖಾತರಿದಾಯಕವಾದ ಯೋಜನೆಯಾಗಿದೆ. ಒಂದು ವೇಳೆ ಹೂಡಿಕೆದಾರ ಮೃತಪಟ್ಟಲ್ಲಿ ಆತನ ಸಂಗಾತಿಗೆ ಪಿಂಚಣಿ ಸಿಗುತ್ತದೆ. ಒಂದೊಮ್ಮೆ ಹೂಡಿಕೆದಾರ ಹಾಗೂ ಆತನ ಸಂಗಾತಿ ಇಬ್ಬರೂ ಮೃತರಾದಲ್ಲಿ ಯೋಜನೆಯಲ್ಲಿ ಸಂಗ್ರಹವಾದ ಮೊತ್ತವನ್ನು ಅವರ ನಾಮಿನಿದಾರರಿಗೆ ಪಾವತಿಸಲಾಗುತ್ತದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ಪಿಪಿಎಫ್ ಯೋಜನೆಯಲ್ಲಿ ಸಿಗುವ ಮೊತ್ತವು ಖಾತರಿದಾಯಕವಾಗಿದ್ದು, ಕಾಲ ಕಾಲಕ್ಕೆ ಪರಿಷ್ಕೃತವಾಗುವ ಸರಕಾರದ ನಿಯಮಗಳನ್ವಯ ಮೊತ್ತದಲ್ಲಿ ಬದಲಾವಣೆಯಾಗುತ್ತದೆ. ಪಿಪಿಎಫ್ ಇದು ಕೇಂದ್ರ ಸರಕಾರದ ಖಾತರಿ ಹೊಂದಿದ ಜನಪ್ರಿಯ ದೀರ್ಘಾವಧಿ ಹೂಡಿಕೆ ಯೋಜನೆಯಾಗಿದೆ. ಹೂಡಿದ ಮೊತ್ತಕ್ಕೆ ಸಂಪೂರ್ಣ ಸುರಕ್ಷತೆ ಇದ್ದು ಆಕರ್ಷಕ ಬಡ್ಡಿ ದರವನ್ನು ನೀಡಲಾಗುತ್ತದೆ. ಬರುವ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇರುವುದು ಇದರ ಪ್ಲಸ್ ಪಾಯಿಂಟ್ ಆಗಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ಕನಿಷ್ಠ 500 ರೂ. ಹೂಡಿಕೆ ಮಾಡುತ್ತ ಸಾಲ ಸೌಲಭ್ಯ, ಹಣ ಹಿಂಪಡೆಯುವಿಕೆ ಹಾಗೂ ಖಾತೆಯ ಮುಂದುವರಿಕೆ ಮುಂತಾದ ಸೌಲಭ್ಯಗಳನ್ನು ಪಡೆಯಬಹುದು. ಪ್ರತಿ ತಿಂಗಳು 500 ರೂ. ಅಂದರೆ ವರ್ಷಕ್ಕೆ 6 ಸಾವಿರ ರೂಪಾಯಿಗಳಂತೆ 15 ವರ್ಷ ಹೂಡಿಕೆ ಮಾಡಿದಲ್ಲಿ 1.7 ಲಕ್ಷ ರೂಪಾಯಿಗಳನ್ನು ಮ್ಯಾಚುರಿಟಿ ಮೊತ್ತವಾಗಿ ಪಡೆಯಬಹುದು.

ಫಿಕ್ಸೆಡ್ (FD) ಹಾಗೂ ರೆಕರಿಂಗ್ ಡೆಪಾಸಿಟ್(RD)

ಫಿಕ್ಸೆಡ್ (FD) ಹಾಗೂ ರೆಕರಿಂಗ್ ಡೆಪಾಸಿಟ್(RD)

ಫಿಕ್ಸೆಡ್ ಡೆಪಾಸಿಟ್ (Fixed Deposit) ಹಾಗೂ ರೆಕರಿಂಗ್ ಡೆಪಾಸಿಟ್ (Recurring Deposit) ಇವು ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಾಗಿವೆ. ಬಹುತೇಕ ಬ್ಯಾಂಕ್‌ಗಳಲ್ಲಿ ಕನಿಷ್ಠ ೧೦೦ ರಿಂದ ೫೦೦ ರೂ. ಎಫ್‌ಡಿ ಮಾಡಬಹುದು. ಪ್ರಸ್ತುತ ಬಹುತೇಕ ಬ್ಯಾಂಕ್‌ಗಳು ಎಫ್‌ಡಿಗೆ ಶೇ.೬.೫ ರಿಂದ ಶೇ.೭.೨೫ ರಷ್ಟು ಬಡ್ಡಿದರವನ್ನು ನೀಡುತ್ತಿವೆ. ಪ್ರತಿ ತಿಂಗಳು ನಿಯಮಿತವಾಗಿ ಹಣ ಹೂಡಿಕೆ ಮಾಡುವುದು ರೆಕರಿಂಗ್ ಡೆಪಾಸಿಟ್ ಯೋಜನೆಯಾಗಿದೆ. ತಿಂಗಳಿಗೆ ಕನಿಷ್ಠ ೫೦೦ ರೂ. ಹಾಗೂ ಅದರ ನಂತರ ೧೦೦ ರೂಪಾಯಿಯ ಗುಣಕಗಳಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಅವಶ್ಯ ಬಿದ್ದರೆ ಆರ್‌ಡಿ ಖಾತೆಯ ಮೇಲೆ ಸಾಲವನ್ನು ಸಹ ಪಡೆಯಬಹುದು. ಎಫ್‌ಡಿಗೆ ನೀಡಲಾಗುವ ಬಡ್ಡಿ ದರಗಳೇ ಆರ್‌ಡಿಗೂ ಅನ್ವಯಿಸುತ್ತವೆ.

ಪೋಸ್ಟ್ ಆಫೀಸ್ ಯೋಜನೆಗಳು

ಪೋಸ್ಟ್ ಆಫೀಸ್ ಯೋಜನೆಗಳು

ಚಿಕ್ಕ ಮೊತ್ತದಿಂದ ಹೂಡಿಕೆ ಆರಂಭಿಸಬಹುದಾದ ಹಲವಾರು ವಿಶಿಷ್ಟ ಯೋಜನೆಗಳು ಅಂಚೆ ಕಚೇರಿಗಳಲ್ಲಿ ಲಭ್ಯವಿವೆ. ಕೇವಲ 20 ರೂಪಾಯಿಗಳಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ (ವರ್ಷಕ್ಕೆ ಶೇ. 4 ರ ಬಡ್ಡಿದರದಲ್ಲಿ) ತೆರೆಯಬಹುದು. ಚೆಕ್ ಬುಕ್ ಸೌಲಭ್ಯ ಬೇಡವಾದಲ್ಲಿ ಕೇವಲ 50ರೂಪಾಯಿ ಮಿನಿಮಮ್ ಬ್ಯಾಲೆನ್ಸ್‌ನಲ್ಲಿ ಈ ಖಾತೆಯನ್ನು ನಿರ್ವಹಿಸಬಹುದು. ಇನ್ನು ಕೇವಲ 10ರೂ. ಆರಂಭಿಕ ಠೇವಣಿಯೊಂದಿಗೆ ಅಂಚೆ ಕಚೇರಿ ಆರ್‌ಡಿ ಖಾತೆ ತೆರೆಯಬಹುದು. ಕನಿಷ್ಠ 200ರೂ. ಹಾಗೂ ಅದರ ಗುಣಕಗಳಲ್ಲಿ ನಿಶ್ಚಿತ ಅವಧಿ ಠೇವಣಿ ಖಾತೆ ಸೌಲಭ್ಯವೂ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಕನಿಷ್ಠ 100ರೂ. ಹಾಗೂ ಅದರ ಗುಣಕಗಳಲ್ಲಿ ರಾಷ್ಟ್ರೀಯ ಸೇವಿಂಗ್ಸ್ ಸ್ಕೀಂ ಪತ್ರಗಳಲ್ಲಿ ಸಹ ಹೂಡಿಕೆ ಮಾಡಬಹುದಾಗಿದೆ. ಬಹುತೇಕ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರಕಾರ ಆಗಾಗ ಪರಿಷ್ಕರಿಸುತ್ತದೆ.

English summary

How to become rich: You can start investing with just Rs 500 a month

Spending Rs 500 a month is a much easier decision for most people. So, congratulations to you for deciding to save the money and invest it.
Story first published: Friday, October 25, 2019, 11:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X