ಹಣದುಬ್ಬರ: ಹಿರಿಯ ನಾಗರಿಕರಿಗೆ ಎಫ್ಡಿ ಮೇಲೆ ಶೇ.7 ಬಡ್ಡಿದರ ನೀಡುತ್ತೆ ಈ ಬ್ಯಾಂಕುಗಳು
ಭಾರತದಲ್ಲಿ ಹಣದುಬ್ಬರವು ಏರಿಕೆ ಆಗಿದೆ. ಪ್ರಸ್ತುತ ಹಣದುಬ್ಬರ ದರವು 6.95 ಪ್ರತಿಶತದಷ್ಟಿದೆ. ಅಕ್ಟೋಬರ್ 2020ರ ಬಳಿಕ ಮೊದಲ ಬಾರಿಗೆ ಭಾರತದಲ್ಲಿ ಹಣದುಬ್ಬರ ತೀವ್ರಮಟ್ಟಕ್ಕೆ ಏರಿಕೆ ಕಂಡಿದೆ. ಈ ಹಣದುಬ್ಬರ ಏರಿಕೆ ಹಿನ್ನೆಲೆ ಆರ್ಬಿಐ ರೆಪೋ ದರವನ್ನು ಏರಿಕೆ ಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಅನಿರೀಕ್ಷಿತ ರೆಪೋ ದರ ಶೇಕಡ 4.4ಕ್ಕೆ ಹೆಚ್ಚಳ ಮಾಡಿದೆ. ಈ ರೆಪೋ ದರ ಏರಿಕೆಯು ಹಲವಾರು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್ಗಳು ಸಾಲದ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಿದೆ. ಈ ನಡುವೆ ಈ ರೆಪೋ ದರ ಏರಿಕೆಯು ಬ್ಯಾಂಕ್ಗಳ ಎಫ್ಡಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಎಫ್ಡಿ ಬಡ್ಡಿದರವು ಏರಿಕೆ ಕಾಣಲಿದೆ. ಈ ಏರಿಕೆಗೂ ಮುನ್ನವೇ ಕೆಲವು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಎಫ್ಡಿ ಮೇಲೆ ಗರಿಷ್ಠ ಬಡ್ಡಿದರವನ್ನು ನೀಡುತ್ತಿದೆ.
ರೆಪೋ ದರ ಏರಿಕೆಯಿಂದ ಎಫ್ಡಿ ರಿಟರ್ನ್ ಹೆಚ್ಚಳ ಸಾಧ್ಯತೆ: ಹೂಡಿಕೆಗೆ ಸುಸಮಯ
ಈ ಹಣದುಬ್ಬರವನ್ನು ನಾವು ಗಮನಿಸಿದಾಗ ಹಿರಿಯ ನಾಗರಿಕರು ಯಾವುದೇ ನಿಜವಾದ ಆದಾಯವನ್ನು ಗಳಿಸುವುದು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಕೈ ಹಿಡಿಯುವುದು ಎಫ್ಡಿಗಳು. ಆದ್ದರಿಂದ ಈ ಹಣದುಬ್ಬರದ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಅಧಿಕ ಎಫ್ಡಿ ನೀಡುವ ಬ್ಯಾಂಕುಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ, ಮುಂದೆ ಓದಿ...

ಬಂಧನ್ ಬ್ಯಾಂಕ್ನಲ್ಲಿ ಎಷ್ಟಿದೆ ಎಫ್ಡಿ ಬಡ್ಡಿದರ?
ಬಂಧನ್ ಬ್ಯಾಂಕ್ ತನ್ನ ನಿಶ್ಚಿತ ಠೇವಣಿ ಅಥವಾ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಮೇ 4, 2022 ರಂದು ಪರಿಷ್ಕರಿಸಿದೆ. ಈಗ ಹಿರಿಯ ನಾಗರಿಕರಿಗೆ 2 ವರ್ಷಗಳಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಮತ್ತು 3 ವರ್ಷಗಳಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಗರಿಷ್ಠ ಶೇಕಡಾ 7.00 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.
- 7 ದಿನದಿಂದ 14 ದಿನ: 3.75 ಶೇಕಡ ಬಡ್ಡಿದರ
- 15 ದಿನದಿಂದ 30 ದಿನ: 3.75 ಶೇಕಡ ಬಡ್ಡಿದರ
- 31 ದಿನದಿಂದ 2 ತಿಂಗಳಿಗಿಂತ ಕಡಿಮೆ: 4.25 ಶೇಕಡ ಬಡ್ಡಿದರ
- 2 ತಿಂಗಳಿಂದ 3 ತಿಂಗಳಿಗಿಂತ ಕಡಿಮೆ: 4.25 ಶೇಕಡ ಬಡ್ಡಿದರ
- 3 ತಿಂಗಳಿಂದ 6 ತಿಂಗಳಿಗಿಂತ ಕಡಿಮೆ: 4.25 ಶೇಕಡ ಬಡ್ಡಿದರ
- 6 ತಿಂಗಳಿಂದ 1 ವರ್ಷಕ್ಕಿಂತ ಕಡಿಮೆ: 5.25 ಶೇಕಡ ಬಡ್ಡಿದರ
- 1 ವರ್ಷದಿಂದ 18 ತಿಂಗಳು: 6.50 ಶೇಕಡ ಬಡ್ಡಿದರ
- 18 ತಿಂಗಳಿಗಿಂತ ಅಧಿಕ 2 ವರ್ಷಕ್ಕಿಂತ ಕಡಿಮೆ: 6.50 ಶೇಕಡ ಬಡ್ಡಿದರ
- 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: 7.00 ಶೇಕಡ ಬಡ್ಡಿದರ
- 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ: 7.00 ಶೇಕಡ ಬಡ್ಡಿದರ
- 5 ವರ್ಷದಿಂದ 10 ವರ್ಷದವರೆಗೆ: 6.35 ಶೇಕಡ ಬಡ್ಡಿದರ

ಇಂಡಸ್ಇಂಡ್ ಬ್ಯಾಂಕ್ನಲ್ಲಿ ಬಡ್ಡಿದರ ಎಷ್ಟಿದೆ?
ಇಂಡಸ್ಇಂಡ್ ಬ್ಯಾಂಕ್ ತನ್ನ ಟರ್ಮ್ ಡೆಪಾಸಿಟ್ ಬಡ್ಡಿ ದರಗಳನ್ನು ಫೆಬ್ರವರಿ 16, 2022 ರಂದು ಪರಿಷ್ಕರಿಸಿದೆ. ಬ್ಯಾಂಕ್ ಈಗ ಹಿರಿಯ ನಾಗರಿಕರಿಗೆ ಶೇಕಡ 7ರಷ್ಟು ಗರಿಷ್ಠ ಬಡ್ಡಿ ದರವನ್ನು ನೀಡುತ್ತದೆ. ಎರಡು ವರ್ಷಗಳಿಂದ 61 ತಿಂಗಳವರೆಗಿನ ಎಫ್ಡಿ ಮೇಲೆ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ.
- 7 ದಿನದಿಂದ 14 ದಿನ: 3.25 ಶೇಕಡ ಬಡ್ಡಿದರ
- 15 ದಿನದಿಂದ 30 ದಿನ: 3.5 ಶೇಕಡ ಬಡ್ಡಿದರ
- 31 ದಿನದಿಂದ 45 ದಿನ: 3.75 ಶೇಕಡ ಬಡ್ಡಿದರ
- 46 ದಿನದಿಂದ 60 ದಿನ: 4 ಶೇಕಡ ಬಡ್ಡಿದರ
- 61 ದಿನದಿಂದ 90 ದಿನ: 4.25 ಶೇಕಡ ಬಡ್ಡಿದರ
- 91 ದಿನದಿಂದ 120 ದಿನ: 4.25 ಶೇಕಡ ಬಡ್ಡಿದರ
- 121 ದಿನದಿಂದ 180 ದಿನ: 5 ಶೇಕಡ ಬಡ್ಡಿದರ
- 181 ದಿನದಿಂದ 210 ದಿನ: 5.1 ಶೇಕಡ ಬಡ್ಡಿದರ
- 211 ದಿನದಿಂದ 269 ದಿನ: 5.25 ಶೇಕಡ ಬಡ್ಡಿದರ
- 270 ದಿನದಿಂದ 354 ದಿನ: 6 ಶೇಕಡ ಬಡ್ಡಿದರ
- 355 ದಿನದಿಂದ 364 ದಿನ: 6 ಶೇಕಡ ಬಡ್ಡಿದರ
- 1 ವರ್ಷದಿಂದ 1 ವರ್ಷ 6 ತಿಂಗಳಿಗಿಂತ ಕಡಿಮೆ: 6.5 ಶೇಕಡ ಬಡ್ಡಿದರ
- 1 ವರ್ಷ 6 ತಿಂಗಳಿನಿಂದ 1 ವರ್ಷ 7 ತಿಂಗಳು: 6.5 ಶೇಕಡ ಬಡ್ಡಿದರ
- 1 ವರ್ಷ 7 ತಿಂಗಳಿನಿಂದ 2 ವರ್ಷಕ್ಕಿಂತ ಕಡಿಮೆ: 6.5 ಶೇಕಡ ಬಡ್ಡಿದರ
- 2 ವರ್ಷ 2 ವರ್ಷ 6 ತಿಂಗಳಿಗಿಂತ ಕಡಿಮೆ: 7 ಶೇಕಡ ಬಡ್ಡಿದರ
- 2 ವರ್ಷ 6 ತಿಂಗಳಿನಿಂದ 2 ವರ್ಷ 9 ತಿಂಗಳಿಗಿಂತ ಕಡಿಮೆ: 7 ಶೇಕಡ ಬಡ್ಡಿದರ
- 2 ವರ್ಷ ತಿಂಗಳಿಂದ 3 ವರ್ಷ 7 ತಿಂಗಳು: 7 ಶೇಕಡ ಬಡ್ಡಿದರ
- 3 ವರ್ಷದಿಂದ 61 ತಿಂಗಳಿಗಿಂತ ಕಡಿಮೆ: 7 ಶೇಕಡ ಬಡ್ಡಿದರ
- 61 ತಿಂಗಳಿಗಿಂತ ಅಧಿಕ: 6.5 ಶೇಕಡ ಬಡ್ಡಿದರ
- ಇಂಡಕ್ಸ್ ತೆರಿಗೆ ಉಳಿತಾಯ ಯೋಜನೆ: (5 years) 7 ಶೇಕಡ ಬಡ್ಡಿದರ

ಆರ್ಬಿಎಲ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಎಫ್ಡಿ ಬಡ್ಡಿದರ
ಆರ್ಬಿಎಲ್ ಬ್ಯಾಂಕ್ ತನ್ನ ಎಫ್ಡಿ ಬಡ್ಡಿದರಗಳನ್ನು ಫೆಬ್ರವರಿ 3, 2022 ರಂದು ನವೀಕರಿಸಿದೆ. ಬದಲಾವಣೆಯ ಪರಿಣಾಮವಾಗಿ ಹಿರಿಯ ನಾಗರಿಕರು ಈಗ 24 ತಿಂಗಳುಗಳಿಂದ 36 ತಿಂಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಗರಿಷ್ಠ ಶೇಕಡ 7 ಬಡ್ಡಿದರವನ್ನು ಪಡೆಯುತ್ತಾರೆ.
- 7 ದಿನದಿಂದ 14 ದಿನ: 3.75 ಶೇಕಡ ಬಡ್ಡಿದರ
- 15 ದಿನದಿಂದ 45 ದಿನ: 4.25 ಶೇಕಡ ಬಡ್ಡಿದರ
- 46 ದಿನದಿಂದ 90 ದಿನ: 4.50 ಶೇಕಡ ಬಡ್ಡಿದರ
- 91 ದಿನದಿಂದ 180 ದಿನ: 5 ಶೇಕಡ ಬಡ್ಡಿದರ
- 181 ದಿನದಿಂದ 240 ದಿನ: 5.50 ಶೇಕಡ ಬಡ್ಡಿದರ
- 241 ದಿನದಿಂದ 364 ದಿನ: 5.75 ಶೇಕಡ ಬಡ್ಡಿದರ
- 12 ತಿಂಗಳು 24 ತಿಂಗಳಿಗಿಂತ ಕಡಿಮೆ: 6.75 ಶೇಕಡ ಬಡ್ಡಿದರ
- 24 ತಿಂಗಳು 36 ತಿಂಗಳಿಗಿಂತ ಕಡಿಮೆ: 7.00 ಶೇಕಡ ಬಡ್ಡಿದರ
- 36 ತಿಂಗಳು 60 ತಿಂಗಳು ಒಂದು ದಿನಕ್ಕಿಂತ ಕಡಿಮೆ: 6.80 ಶೇಕಡ ಬಡ್ಡಿದರ
- 60 ತಿಂಗಳು 2 ದಿನದಿಂದ 120 ತಿಂಗಳಿಗಿಂದ ಕಡಿಮೆ: 6.25 ಶೇಕಡ ಬಡ್ಡಿದರ
- 120 ತಿಂಗಳು 240 ತಿಂಗಳು: 6.25 ಶೇಕಡ ಬಡ್ಡಿದರ
- ತೆರಿಗೆ ಉಳಿತಾಯ ಫಿಕ್ಸಿಡ್ ಡೆಪಾಸಿಟ್ (60 months) 6.80 ಶೇಕಡ ಬಡ್ಡಿದರ

ಯೆಸ್ ಬ್ಯಾಂಕ್ನಲ್ಲಿದೆ ಶೇಕಡ 7ರಷ್ಟು ಬಡ್ಡಿದರ
ಯೆಸ್ ಬ್ಯಾಂಕ್ನ ಸ್ಥಿರ ಠೇವಣಿ ದರಗಳನ್ನು ಜನವರಿ 4, 2022 ರಂದು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಹಿರಿಯ ನಾಗರಿಕರಿಗೆ ಬ್ಯಾಂಕ್ನಲ್ಲಿ 3 ರಿಂದ 10 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಗರಿಷ್ಠ ಶೇಕಡ 7ರಷ್ಟು ಬಡ್ಡಿದರ ನೀಡಲಾಗುತ್ತದೆ.
- 7 ರಿಂದ 14 ದಿನಗಳು: 3.75 ಶೇಕಡ ಬಡ್ಡಿದರ
- 15 ರಿಂದ 45 ದಿನಗಳು: 4.00 ಶೇಕಡ ಬಡ್ಡಿದರ
- 46 ರಿಂದ 90 ದಿನಗಳು: 4.50 ಶೇಕಡ ಬಡ್ಡಿದರ
- 3 ತಿಂಗಳಿಂದ 6 ತಿಂಗಳಿಗಿಂತ ಕಡಿಮೆ: 5.00 ಶೇಕಡ ಬಡ್ಡಿದರ
- 6 ತಿಂಗಳಿಂದ 9 ತಿಂಗಳಿಗಿಂತ ಕಡಿಮೆ: 5.25 ಶೇಕಡ ಬಡ್ಡಿದರ
- 9 ತಿಂಗಳಿಂದ 1 ವರ್ಷಕ್ಕಿಂತ ಕಡಿಮೆ: 5.50 ಶೇಕಡ ಬಡ್ಡಿದರ
- 1 ವರ್ಷ 18 ತಿಂಗಳಿಗಿಂತ ಕಡಿಮೆ: 6.25 ಶೇಕಡ ಬಡ್ಡಿದರ
- 18 ತಿಂಗಳಿಂದ 3 ವರ್ಷಗಳಿಗಿಂತ ಕಡಿಮೆ: 6.50 ಶೇಕಡ ಬಡ್ಡಿದರ
- 3 ವರ್ಷದಿಂದ ಕಡಿಮೆ ಅಥವಾ 10 ವರ್ಷ: 7.00 ಶೇಕಡ ಬಡ್ಡಿದರ