ಸೆಪ್ಟೆಂಬರ್ 30 ಡೆಡ್ಲೈನ್: ಈ ಕೆಲಸಗಳನ್ನು ಮಾಡಿ ಬಿಡಿ
ಸೆಪ್ಟೆಂಬರ್ ತಿಂಗಳು ವೈಯಕ್ತಿಕ ಹಣಕಾಸು ವಿಚಾರದಲ್ಲಿ ಅತೀ ಮುಖ್ಯವಾದ ತಿಂಗಳು ಆಗಿದೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಜನರು ಪ್ರಮುಖವಾಗಿ ಐದು ವೈಯಕ್ತಿಕ ಹಣಕಾಸು ಕಾರ್ಯವನ್ನು ಸಂಪೂರ್ಣ ಮಾಡಬೇಕಾಗಿದೆ. ಈ ಮೂಲಕ ತಮ್ಮ ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಯಾವುದೇ ಅಡೆ ತಡೆ ಉಂಟಾಗದಂತೆ ಈಗಲೇ ಜನರು ಎಚ್ಚೆತ್ತು ಕೊಳ್ಳಬೇಕಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ 2019-20 ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ತೆರಿಗೆದಾರರಿಗೆ ಸೆ. 30, 2021ರವರೆಗೆ ಅವಕಾಶ ಸಿಕ್ಕಂತಾಗಿದೆ. ಆದರೆ ಇದು ಸೆಪ್ಟೆಂಬರ್ ತಿಂಗಳ ಆರಂಭ ಎಂಬುದನ್ನು ಕೂಡಾ ಜನರು ಮರೆಯುವಂತಿಲ್ಲ. ಈಗಲೇ ತಮ್ಮ ಈ ಬಾಕಿ ಉಳಿದ ಕೆಲಸವನ್ನು ಸಂಪೂರ್ಣ ಮಾಡಬೇಕು.
ಸೆಪ್ಟೆಂಬರ್ನಲ್ಲಿ ಆಗಲಿದೆ ವೈಯಕ್ತಿಕ ಹಣಕಾಸಿನಲ್ಲಿ ಈ ಪ್ರಮುಖ ಬದಲಾವಣೆ
ಇನ್ನು ಈ ಒಂದು ವಿಚಾರ ಮಾತ್ರವಲ್ಲದೇ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಮುಖವಾಗಿ ಐದು ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಕಾರ್ಯಗಳನ್ನು ಸಂಪೂರ್ಣ ಮಾಡಬೇಕಾಗಿದೆ. ಮಾಡದಿದ್ದರೆ ತಮ್ಮ ಹಣಕಾಸು ನಿರ್ವಹಣೆಯಲ್ಲಿ ಅಡೆ ತಡೆ ಉಂಟಾಗುವ ಸಾಧ್ಯತೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಜನರು ಈ ಐದು ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಕಾರ್ಯಗಳನ್ನು ಸಂಪೂರ್ಣ ಮಾಡಬೇಕು. ಯಾವುದು ಎಂದು ತಿಳಿಯಲು ಮುಂದೆ ಓದಿ.

ಮೊದಲು ಇಪಿಎಫ್ಗೆ ಆಧಾರ್ ಲಿಂಕ್ ಮಾಡಿ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಉದ್ಯೋಗಿಗಳು ತಮ್ಮ ಇಪಿಎಫ್ಗೆ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡುವಂತೆ ಅಥವಾ ತಮ್ಮ ಇಪಿಎಫ್ನ ಯುಎಎನ್ ನಂಬರ್ಗೆ ಆಧಾರ್ ಲಿಂಕ್ ಮಾಡುವಂತೆ ತಿಳಿಸಿದೆ. ಭದ್ರತೆ ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಸಂಬಳ ಪಡೆಯುತ್ತಿರುವ ಉದ್ಯೋಗಿಗಳ ಇಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡಲು ಇಪಿಎಫ್ಒ ತಿಳಿಸಿದೆ. ಇನ್ನು ಮುಂದೆ ಉದ್ಯೋಗಿಗಳ ಇಪಿಎಫ್ ಖಾತೆಗೆ ಆಧಾರ್ ಲಿಂಕ್ ಆಗಿದ್ದರೆ ಅಥವಾ ಯುಎಎನ್ ಸಂಖ್ಯೆ ಲಿಂಕ್ ಆಗಿದ್ದರೆ ಹಾಗೂ ಪರಿಶೀಲಿಸಲಾಗಿದ್ದರೆ ಮಾತ್ರ ಪಿಎಫ್ ಹಣವನ್ನು ಉದ್ಯೋಗಿಗಳ ಪಿಎಫ್ ಖಾತೆಗೆ ಜಮೆ ಮಾಡಲು ಅವಕಾಶ ನೀಡಲಾಗುತ್ತದೆ. ಆಧಾರ್ ಲಿಂಕ್ ಮಾಡದಿದ್ದರೆ ಉದ್ಯೋಗಿಗಳ ಪಿಎಫ್ ಖಾತೆಗೆ ಜಮೆ ಮಾಡಲು ಸಾಧ್ಯವಾಗುವುದಿಲ್ಲ. ಈ ಲಿಂಕ್ ಮಾಡುವ ಕಾರ್ಯಕ್ಕೆ ಡೆಡ್ಲೈನ್ ಸೆಪ್ಟೆಂಬರ್ 1 ಆಗಿದೆ. ಅಂದರೆ ಇಂದೇ ಕೊನೆಯ ದಿನಾಂಕವಾಗಿದೆ. "ನೀವು ಈ ಕೂಡಲೇ ಯುಎಎನ್ ಸಂಖ್ಯೆಗೆ ಅಥವಾ ಇಪಿಎಫ್ಗೆ ಆಧಾರ್ ಲಿಂಕ್ ಮಾಡಬೇಕು. ಇಲ್ಲದಿದ್ದರೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ. ಆಧಾರ್ ಲಿಂಕ್ ಆಗದಿದ್ದರೆ ಇಪಿಎಫ್ ಖಾತೆಗೆ ಹಣ ಜಮೆ ಮಾಡಲು ಅವಕಾಶ ನೀಡಲಾಗುವುದಿಲ್ಲ ಹಾಗೂ ಜಮೆ ಮಾಡುವುದನ್ನು ವಿಳಂಬ ಮಾಡಲಾಗುತ್ತದೆ. ಇದರಿಂದಾಗಿ ಉದ್ಯೋಗಿಗಳಿಗೆ ಬಡ್ಡಿಯ ನಷ್ಟ ಉಂಟಾಗುತ್ತದೆ," ಎಂದು ಡೆಲಾಯಿಟ್ ಇಂಡಿಯಾದೊಂದಿಗೆ ಪಾಲುದಾರರಾಗಿರುವ ಹೋಮಿ ಮಿಸ್ಟ್ರೀ ಹೇಳಿದೆ.

ತಿಂಗಳೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿ
ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ 2019-20 ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ತೆರಿಗೆದಾರರಿಗೆ ಸೆ. 30, 2021 ರವರೆಗೆ ಅವಕಾಶ ದೊರೆತಂತೆ ಆಗಿದೆ. ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ದೇಶದ ಅನೇಕ ರಾಜ್ಯಗಳಲ್ಲಿ ನಿರ್ಬಂಧಗಳು ಈಗಲೂ ಜಾರಿಯಲ್ಲಿದೆ. ಈ ಹಿನ್ನೆಲೆ ತೆರಿಗೆದಾರರಿಗೆ ಪರಿಹಾರ ನೀಡಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ, 2020-21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ದಿನಾಂಕ ಬದಲಾಗಿಲ್ಲ. ಈ ಐಟಿಆರ್ ಅನ್ನು ಸೆ. 30, 2021 ಸಲ್ಲಿಸಬೇಕು. ಈ ದಿನಾಂಕದ ವೇಳೆಗೆ, ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇನ್ನು ಕೆಲವೊಂದು ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಈ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ದಿನಾಂಕವನ್ನು ಮತ್ತೆ ಡಿಸೆಂಬರ್ವರೆಗೂ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಅಷ್ಟರವರೆಗೆ ನೀವು ಕಾದು ಕೂತು ಕೊನೆಗೆ ಗಡುವು ವಿಸ್ತರಣೆ ಆಗದಿದ್ದರೆ ಮತ್ತೆ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಸೆಪ್ಟೆಂಬರ್ 30, 2021 ರ ಒಳಗೆ ನಿಮ್ಮ ಐಟಿಆರ್ ಪಾವತಿ ಮಾಡಿ ಬಿಡಿ. ಗಡುವಿನ ಮುನ್ನ ಪಾವತಿ ಮಾಡದಿದ್ದರೆ ಬಳಿಕ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ವೈಯಕ್ತಿಕ ಹಣಕಾಸಿನ ಮೇಲೆ ಕೋವಿಡ್ ಪರಿಣಾಮ: ಖರ್ಚು ಹೆಚ್ಚಾಯಿತಾ?

ಪ್ಯಾನ್ ಕಾರ್ಡ್ಗೂ ಆಧಾರ್ ಲಿಂಕ್ ಮಾಡಿಕೊಳ್ಳಿ
ಆಧಾರ್ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕವು ಕೂಡಾ ಸೆಪ್ಟೆಂಬರ್ 30 ಆಗಿದೆ. ಆಧಾರ್ ಲಿಂಕ್ ಆಗದ ಎಲ್ಲಾ ಪ್ಯಾನ್ ಕಾರ್ಡ್ಗಳು ನಿಷ್ಕ್ರೀಯವಾಗಲಿದೆ. ಆಧಾರ್ಗೆ ನಿಮ್ಮ ಪ್ಯಾನ್ ಸಂಖ್ಯೆ ಲಿಂಕ್ ಆಗದಿದ್ದರೆ, ನಿಮಗೆ ಯಾವುದೇ ಆರ್ಥಿಕ ವರ್ಗಾವಣೆ ಮಾಡಲು ಸಾಧ್ಯವಾಗದೆ ಇರಬಹುದು. ಇನ್ನು ಬ್ಯಾಂಕ್ ಖಾತೆಯನ್ನು ತೆರೆಯಲು ಪ್ಯಾನ್ ಕಾರ್ಡ್ ಅಗತ್ಯವಾಗಿದೆ. ಹಾಗೆಯೇ ಮ್ಯೂಚುವಲ್ ಫಂಡ್, ಷೇರುಗಳನ್ನು ಖರೀದಿ ಮಾಡಲು ಕೂಡಾ ಪ್ಯಾನ್ ಅತ್ಯಗತ್ಯವಾಗಿದೆ. ಹಾಗೆಯೇ ಐವತ್ತು ಸಾವಿರಕ್ಕಿಂತ ಅಧಿಕ ಹಣ ವರ್ಗಾವಣೆ ಮಾಡುವುದಾದರೂ ಪಾನ್ ಕಾರ್ಡ್ ಮುಖ್ಯವಾಗಿದೆ. ಹಣಕಾಸು ಸಂಸ್ಥೆಗಳು ಕೆವೈಸಿಯನ್ನು ನಡೆಸುವ ಸಲುವಾಗಿ ತಮ್ಮ ಗ್ರಾಹಕರಿಂದ ಪಾನ್ ಅನ್ನು ಕೇಳುತ್ತವೆ. ಪ್ಯಾನ್ ಕಾರ್ಡ್ ಸಕ್ರಿಯವಾಗಿ ಇಲ್ಲದಿದ್ದರೆ, ನಮ್ಮ ಬ್ಯಾಂಕ್ ಖಾತೆಗಳ ಮೇಲೆ ಪರಿಣಾಮ ಉಂಟಾಗಲಿದೆ. ನೀವು ಕೊನೆಯ ದಿನಾಂಕಕ್ಕೂ ಮುನ್ನ ಆಧಾರ್ಗೆ ಪ್ಯಾನ್ ಅನ್ನು ಲಿಂಕ್ ಮಾಡಿದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುವುದು ಮಾತ್ರವಲ್ಲದೇ ನಿಮಗೆ ಸುಮಾರು ಹತ್ತು ಸಾವಿರದಷ್ಟು ದಂಡ ಬೀಳುತ್ತದೆ. ನೀವು ನಿಮ್ಮ ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಲು e-filing ವೆಬ್ಸೈಟ್ಗೆ ಭೇಟಿ ನೀಡಬಹುದು ಅಥವಾ ಹಾಗೆಯೇ UIDPAN ಎಂದು ಟೈಪ್ ಮಾಡಿ 67678 ಅಥವಾ 56161 ಗೆ ಎಸ್ಎಮ್ಎಸ್ ಮಾಡಬಹುದು ಅಥವಾ ಪ್ಯಾನ್ ಸರ್ವಿಸ್ ಕೇಂದ್ರಗಳ ಮೂಲಕ ಮಾಡಿಸಿಕೊಳ್ಳಬಹುದು

ಡಿಮ್ಯಾಟ್ ಖಾತೆಯಲ್ಲಿ ನಿಮ್ಮ ಕೆವೈಸಿ ಅಪ್ಡೇಟ್ ಮಾಡಿ
ಭಾರತದ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ (ಸೆಬಿ) ಸೆಪ್ಟೆಂಬರ್ 30, 2021 ಅನ್ನು ಕೆವೈಸಿ ವಿವರಗಳನ್ನು ಹೂಡಿಕೆದಾರರ ಡಿಮ್ಯಾಟ್ ಖಾತೆಗಳಲ್ಲಿ ನವೀಕರಿಸಲು ಕೊನೆಯ ದಿನಾಂಕವೆಂದು ಘೋಷಿಸಿದೆ. ಕೆವೈಸಿ ಅನ್ನು ನವೀಕರಿಸುವ ದಿನಾಂಕವನ್ನು ಜುಲೈ 31, 2021 ರಿಂದ ಸೆಪ್ಟೆಂಬರ್ 30, 2021 ಕ್ಕೆ ಸೆಬಿ ವಿಸ್ತರಿಸಿದೆ. ಡಿಮ್ಯಾಟ್ ಖಾತೆಯಲ್ಲಿ ಹೂಡಿಕೆದಾರರು ತಮ್ಮ ಹೆಸರು, ವಿಳಾಸ, ಆದಾಯ, ಮೊಬೈಲ್ ಸಂಖ್ಯೆ, ಇಮೇಲ್ ಸಂಖ್ಯೆ, ಪಾನ್ ಸಂಖ್ಯೆಯನ್ನು ಮತ್ತೆ ಅಪ್ಡೇಟ್ ಮಾಡಬೇಕಾಗಿದೆ. ನೀವು ಒಂದು ವೇಳೆ ಈ ಮಾಹಿತಿಗಳನ್ನು ಡಿಮ್ಯಾಟ್ ಖಾತೆ ಅಥವಾ ವ್ಯವಹಾರ ಖಾತೆಯಲ್ಲಿ ಅಪ್ಡೇಟ್ ಮಾಡದಿದ್ದರೆ, ನಿಮ್ಮ ಖಾತೆಯು ನಿಷ್ಕ್ರೀಯವಾಗಲಿದೆ. ನಿಮ್ಮ ಕೆವೈಸಿಯನ್ನು ನೀವು ಅಪ್ಡೇಟ್ ಮಾಡಿದ ನಂತರವೇ ಡಿಮ್ಯಾಟ್ ಖಾತೆ ಮತ್ತೆ ಸಕ್ರಿಯವಾಗಲಿದೆ.
ಇದ್ದಕ್ಕಿದ್ದಂತೆ ನಿಮ್ಮ ಪ್ರೀತಿ ಪಾತ್ರರು ಕೋವಿಡ್ಗೆ ಬಲಿಯಾದರೆ, ಮೊದಲು ಇದನ್ನು ಮಾಡಿ..

ಬ್ಯಾಂಕ್ ಖಾತೆಯಲ್ಲಿರುವ ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಕೊಳ್ಳಿ
ನಿಮ್ಮ ಎಟಿಎಂ ಕಾರ್ಡ್ನ ಮೂಲಕ ಮಾಡಲಾಗುವ ವ್ಯವಹಾರವನ್ನು ಸುರಕ್ಷಿತವಾಗಿರಿಸಲು ಹಾಗೂ ಈ ಹಣಕಾಸು ವ್ಯವಹಾರಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 30 ರ ನಂತರ ಆರ್ಬಿಐ ದೃಢೀಕರಣದವನ್ನು ಕಡ್ಡಾಯಗೊಳಿಸಿದೆ. ಅಕ್ಟೋಬರ್ 1 ರಿಂದ, ತೃತೀಯ ವ್ಯಾಪಾರಿ ಅಂದರೆ ವೆಬ್ಸೈಟ್ ಮೂಲಕ ಪುನರಾವರ್ತಿತ ಪಾವತಿ ಮಾಡಬೇಕಾದರೆ ಬ್ಯಾಂಕ್ ನಿಮಗೆ ಐದು ದಿನಗಳ ಮುಂಚಿತವಾಗಿ ಮಾಹಿತಿ ನೀಡಬೇಕು ಮತ್ತು ಅಥವಾ ಕನಿಷ್ಠ ಇಪ್ಪತ್ನಾಲ್ಕು ಗಂಟೆಗೂ ಮುನ್ನ ಮಾಹಿತಿ ನೀಡಬೇಕು. ನಿಮಗೆ ಈ ಬಗ್ಗೆ ಮೊಬೈಲ್ಗೆ ಮಾಹಿತಿ ಬರಲಿದೆ. ಈ ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ಮುಂಬರುವ ಯಾವ ದಿನದಲ್ಲಿ ಹಣ ಕಡಿತವಾಗಲಿದೆ ಎಂಬುವುದು ನಿಮಗೆ ತಿಳಿಯಲಿದೆ. ಇದು ನಿಮಗೆ ಬೇಕಾದಷ್ಟು ಹಣ ಖಾತೆಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಬ್ಯಾಂಕ್ನಲ್ಲಿ ನಿಮ್ಮ ಸರಿಯಾದ ಮೊಬೈಲ್ ಸಂಖ್ಯೆ ಇಲ್ಲದಿದ್ದರೆ, ನಿಮ್ಮ ಈ ಆಟೋ ಡೆಬಿಟ್ ಪ್ರಕ್ರಿಯೆಯು ಸ್ಥಗಿತವಾಗಲಿದೆ. ನಿಮ್ಮ ಖಾತೆಯಿಂದ ಹಣ ಕಡಿತವಾಗುವುದಿಲ್ಲ.
ಸಾಲದ ಇಎಂಐ ಕಂತು ಪಾವತಿಗೆ, ಮೊಬೈಲ್ ಫೋನ್ ಬಿಲ್ಗಳು, ಬ್ರಾಡ್ಬ್ಯಾಂಡ್, ವಿದ್ಯುತ್, ವಿಮಾ ಪ್ರೀಮಿಯಂ, ಮ್ಯೂಚುವಲ್ ಫಂಡ್ ಎಸ್ಐಪಿಗಳು, ಒಟಿಟಿ ಚಂದಾದಾರಿಕೆಗಳು ಮತ್ತು ಇತರ ಬಿಲ್ಗಳಿಗಾಗಿ ಆಟೋ-ಡೆಬಿಟ್ ಆಯ್ಕೆಯನ್ನು ನೀಡಲಾಗುತ್ತದೆ. ಸೆಪ್ಟೆಂಬರ್ 30 ರ ಒಳಗೆ ನೀವು ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕ್ಗೆ ಅಪ್ಡೇಟ್ ಮಾಡದಿದ್ದರೆ, ನಿಮ್ಮ ಈ ವ್ಯವಹಾರಗಳಿಗೆ ತೊಂದರೆ ಉಂಟಾಗಲಿದೆ. ನಿಮ್ಮ ಕಡಿತ ಹಣವು ಐದು ಸಾವಿರಕ್ಕಿಂತ ಅಧಿಕವಾಗಿದ್ದರೆ, ಆಟೋ ಡೆಬಿಟ್ ಆಗಲಾರದು. ಇನ್ನು ನಿಮ್ಮ ಖಾತೆಯಿಂದ ಆಟೋ ಡೆಬಿಟ್ ಸಂದರ್ಭದಲ್ಲಿ ಯಾವುದಾದರೂ ತೊಂದರೆ ಉಂಟಾದರೆ ನಿಮ್ಮ ಖಾತೆಯಿಂದ ಬ್ಯಾಂಕ್ ದಂಡ ಕಡಿತ ಮಾಡಲಿದೆ.